Posts

ಪುಸ್ತಕದ ಲೋಕಾರ್ಪಣೆ... ನನ್ನದೊಂದು ಚಿಂತನೆ

Image
  ನನಗೆ ಪುಸ್ತಕಗಳೆಂದರೆ ಇಷ್ಟ-- ಅದರಲ್ಲೂ ಎಸ್ ಎಲ್ ಭೈರಪ್ಪನವರು ಹಾಗೂ ಬೀchi ನನ್ನ ಪ್ರಿಯ ಲೇಖಕರು. ಪುಸ್ತಕ ಬಿಡುಗಡೆ/ ಲೋಕಾರ್ಪಣೆ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.. ನಾನು ಕೆಲ ಕಾರ್ಯಕ್ರಮಗಳಿಗೆ ಹೋಗಿದ್ದುಂಟು.. ಲೇಖಕರ ಬಗೆಗಿನ ಪ್ರೀತಿಗಾಗಿ, ಅಭಿಮಾನಿಯಾಗಿ, ಪ್ರೇಕ್ಷಕನಾಗಿ... ಆದರೆ ಪುಸ್ತಕವನ್ನು ಲೋಕಾರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡುವ ಒಂದು ಅವಕಾಶ ನೆನ್ನೆ ಭಾನುವಾರ ನನಗೆ ದೊರೆಯಿತು. ಅಶಕ್ತ ಪೋಷಕ ಸಭಾ ಬಳಗದ ಸಕ್ರಿಯ ಸದಸ್ಯೆ ಶ್ರೀಮತಿ ಸುಮಾ Y V ಅವರು ಬರೆದ ಪುಸ್ತಕ ” ಮಕ್ಕಳ ಮಾನಸ ಲೋಕ" ದ ಬಿಡುಗಡೆ ಕಾರ್ಯಕ್ರಮಕ್ಕೆ ಅವರ ಆಹ್ವಾನವನ್ನು ಕೊಂಚ ಮುಜುಗರದಿಂದಲೇ ಒಪ್ಪಿದೆ ( ಈ ಕೆಲಸಕ್ಕೆ ನನಗಿರುವ ಅರ್ಹತೆಯಾದರೂ ಏನು ಎಂಬ ಅನುಮಾನ ನನ್ನನ್ನು ಕಾಡಿದ್ದರಿಂದ). ಸಮಾಧಾನ ಆಪ್ತ ಸಲಹಾ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮವು ಡಾಕ್ಟರ್ C R ಚಂದ್ರ ಶೇಖರ್ ಅವರ ನೇತೃತ್ವದಲ್ಲಿ ನಡೆಯಿತು. ವಯಸ್ಸಿನಲ್ಲಿ ನಾನು ಅವರಿಗಿಂತ ಕೆಲ ದಿನಗಳು ದೊಡ್ಡವನಾದರೂ ಅವರ ಪಕ್ಕದಲ್ಲಿ ನಾನು ಕುಬ್ಜನೇ... ಆದರೂ ಅವರೊಂದಿಗೆ ಒಂದಷ್ಟು ಸಲಿಗೆ ಇದೆ. ಅವರ ಜೊತೆ ವೇದಿಕೆಯಲ್ಲಿ ಕುಳಿತಾಗಲೆಲ್ಲ ಒಂದು ತರಹದ ಹೆಮ್ಮೆಯನ್ನು ಪಟ್ಟದ್ದಿದೆ. ಕಾರ್ಯಕ್ರಮ ಚೆನ್ನಾಗಿ ನಡೆಯಿತು.. ನನಗೆ ವಹಿಸಿದ ಹೊಣೆಯನ್ನು  ನಿಭಾಯಿಸಿದೆ ಅಂತ ನನ್ನ ಅನಿಸಿಕೆ. ಕಾರ್ಯಕ್ರಮದ ನಂತರ ಊಟವನ್ನಂತೂ ಸರಿಯಾಗಿ ಮಾಡಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಇನ್...

ಮಕ್ಕಳ ಪ್ರತಿಭಾ ಪ್ರದರ್ಶನ - ಪೋಷಕರಿಗೆ ಸಂಭ್ರಮದ ಕ್ಷಣ

Image
  ಇದು ನೆನ್ನೆಯ ದಿನದ ಸಂಜೆಯ ನನ್ನ ಅನುಭವ, ಬನ್ನೇರುಘಟ್ಟ ರಸ್ತೆಯಲ್ಲಿರುವ ಸುದರ್ಶನ್ ವಿದ್ಯಾ ಮಂದಿರದ ಶಾಲೆಯ ಆವರಣವನ್ನು ಹೊಕ್ಕಾಗ ಆದದ್ದು. ಕಣ್ಣಳತೆಯಲ್ಲೆಲ್ಲ ಚಿಕ್ಕವಯಸ್ಸಿನ ಅಪ್ಪ ಅಮ್ಮಂದಿರು ಜೊತೆಗೆ ನಾವುಗಳು ಅಜ್ಜಿ ತಾತಂದಿರು. ಕೆಲ ಚಿಕ್ಕ ಮಕ್ಕಳು ಸಹ. ಕಾರಣ LKG, UKG ಮಕ್ಕಳ ವಾರ್ಷಿಕ ಪ್ರತಿಭಾ ಪ್ರದರ್ಶನ. ಎಲ್ಲರ ಸಡಗರ ಸಂಭ್ರಮ.  ನಾವು ಹೋದಾಗ ಮಕ್ಕಳನ್ನು  ಕರೆದು ತಂದು ವೇದಿಕೆಯ ಹತ್ತಿರ ಕೂಡಿಸುತ್ತಿದ್ದರು. ಮಕ್ಕಳ ಉತ್ಸಾಹ ಅದೆಷ್ಟೋ.... ಶಿಕ್ಷಕರ ಪರಿಶ್ರಮ ಮೆಚ್ಚುವಂಥದ್ದು. ನನ್ನ ಮೊಮ್ಮಗಳು ವಿಸ್ಮಯ ಸಹ ಒಂದು ನೃತ್ಯದಲ್ಲಿ ಭಾಗಿ ಹಾಗಾಗಿ ನಾವು ಸಹ ಅಲ್ಲಿ ಕಾತುರದಿಂದ ಇದ್ದ ಪ್ರೇಕ್ಷಕರು. ಯಾವ ಪೂರ್ವಾಗ್ರಹವು ಇಲ್ಲದ ಮುಗ್ಧ ಮನಸ್ಸಿನ ಮಕ್ಕಳು ವಿವಿಧ ವೇಷಭೂಷಣಗಳೊಂದಿಗೆ ವೇದಿಕೆಯ ಮೇಲೆ ಬಂದು ಅವರಿಗೆ ಕಲಿಸಿದಂತಹ ಭಾಗವನ್ನು ಅವರದೇ ರೀತಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದು ನೋಡಲು ಚಂದ. ಮಕ್ಕಳು ಹೇಗೆ ಹಾಡಿದರೂ ಕುಣಿದರೂ ಚಂದ.. ಅದರಲ್ಲೂ ನಮ್ಮ ಮಕ್ಕಳು ಕುಣಿದರಂತೂ ಇನ್ನೂ ಚೆಂದ.....ಪ್ರೇಕ್ಷಕರ ಚಪ್ಪಾಳೆ.. ಮಕ್ಕಳ  ಈ ಪ್ರದರ್ಶನಕ್ಕೆ ಶಿಕ್ಷಕರ ಪ್ರಯತ್ನ ಹೇಳಲಾಗದು. ಅವರವರ ಮಕ್ಕಳು  ವೇದಿಕೆಯ ಮೇಲೆ ಬಂದಾಗ ಅವರ ಅಪ್ಪ ಅಮ್ಮ ಅಜ್ಜಿ ತಾತಂದಿರ ಸಂಭ್ರಮ ಹೇಳತೀರದು. ಈಗಿನ ಮೊಬೈಲ್ ಫೋನ್ ಯುಗದಲ್ಲಿ ಎಲ್ಲರೂ ಫೋಟೋ ತೆಗೆಯುವವರೆ ವಿಡಿಯೋ ಮಾಡುವವರೇ.. (ಮಾಡಬಾರದೆಂಬ ಸೂಚನೆ ಮತ್ತು ವಿ...

ಎಂದರೋ ಮಹಾನು ಭಾವುಲು... ಮೊದಲಕ್ಷರ ಕಲಿಸಿದ ನಂಜುಂಡಯ್ಯ ಮೇಷ್ಟ್ರು.

ಎಂದರೋ ಮಹಾನು ಭಾವುಲು... ಅಂದರಿಕಿ ವಂದನಮುಲು... ಇದು ನಾನು ಹೈಸ್ಕೂಲಿನಲ್ಲಿ ಓದುತಿದ್ದಾಗಿನಿಂದ ಕೇಳಿದ ಹಾಡು. ಆಗ ನನಗದು ತ್ಯಾಗರಾಜರ ಪಂಚರತ್ನ ಕೃತಿ ಎಂದಾಗಲಿ ಅದರ ಅರ್ಥವಾಗಲಿ ತಿಳಿಯದು. ಆದರೆ ಹಾಡು ಮಾತ್ರ ನನಗೆ ತುಂಬ ಪ್ರಿಯ. ಮಾವಳ್ಳಿಯಲ್ಲಿ ಚಂದ್ರ ಕಲಾವಿದರು (ನನ್ನಣ್ಣಂದಿರು ಚೂಡಣ್ಣ, ಕಿಟ್ಟಣ್ಣ ಅದರ ಸಕ್ರಿಯ ಸದಸ್ಯರು) ನಡೆಸುತ್ತಿದ್ದ ತ್ಯಾಗರಾಜ ಆರಾಧನೆಯ ಸಮಯದಲ್ಲಿ ಕೇಳಿದ್ದು. ಈಗ ನನ್ನ ಸಂಗೀತದ ಭಾಗವಾಗಿ ಈ ಹಾಡು ಮತ್ತಷ್ಟು ಹೃದಯಕ್ಕೆ ಹತ್ತಿರವಾಗಿದೆ.. ಹಾಗೂ ನನ್ನ ಜೀವನದ ಹಾದಿಯಲ್ಲಿ ಪ್ರಭಾವ ಬೀರಿದ ಮಹಾನುಭಾವರುಗಳನ್ನು ನೆನಪಿಸಿಕೊಳ್ಳಲು ಸ್ಪೂರ್ತಿ ನೀಡಿದೆ. ನನ್ನ ಈಗಿನ ವ್ಯಕ್ತಿ ಚಿತ್ರವನ್ನು ರೂಪಿಸಲು ಬಹಳಷ್ಟು ಮಹಾನುಭಾವರುಗಳು ಗೆರೆಗಳನ್ನು ಎಳೆದು ಬಣ್ಣಗಳನ್ನು ತುಂಬಿದ್ದಾರೆ. "ಕಲಿಸಿದಾತಂ ವರ್ಣಮಾತ್ರಂ ಗುರು" ಈ ಲೋಕೋಕ್ತಿಯಂತೆ ನನಗೆ ಮೊದಲ ಅಕ್ಷರಗಳನ್ನು ಕಲಿಸಿದ ಗುರುಗಳಿಗೆ ನನ್ನ ಭಕ್ತಿಪೂರ್ವಕ ನಮನ. ಹೀಗಿದೆ  ನನಗೆ ಅ ಆ ಇ ಈ ಕಲಿಸಿದ ನಂಜುಂಡಯ್ಯ ಮೇಷ್ಟರ ನೆನಪು. ನಂಜುಂಡಯ್ಯ ಮೇಷ್ಟ್ರು ಅಂದರೆ ಬಿಳಿಯ ಕಚ್ಚೆ ಪಂಚೆ, ಬಿಳಿಯ ಶರ್ಟು ಕಂದು ಬಣ್ಣದ ಕೋಟು ಕರಿಯ ಟೋಪಿ ಕಾಲಿಗೆ ಚಪ್ಪಲಿ ಇದು ಮನದಲ್ಲಿ ಅಚ್ಚು ಮೂಡಿದ ಚಿತ್ರಣ. ಮುಖದ ನೆನಪು ಮಾತ್ರ ಇಲ್ಲ.  ಹಳ್ಳಿಯಲ್ಲಿ ಮಕ್ಕಳು ಮನೆಯಲ್ಲಿ ತುಂಬಾ ಚೇಷ್ಟೆ ಮಾಡುತ್ತಾರೆ ಅಂದರೆ ಅವರನ್ನು ಶಾಲೆಗೆ ಕಳಿಸುವುದು ಒಂದು ಸಂಪ್ರದಾಯವೇ ಆಗಿತ್ತು. ನನ್ನನ್ನು...

ಇನ್ನೊಂದು ಕೊಂಡಿ ಕಳಚಿತು...

Image
  ಡಿ.ಸಿ.ಚಂದ್ರಚೂಡ ರಾವ್ ಹುಟ್ಟಿದವರು ಸಾಯಲೇಬೇಕು ಎನ್ನುವ ಮಾತು ಸಹಜವಾದರೂ ಕ್ಲೀಷೆ ಏನೋ ಅನಿಸುತ್ತೆ. ನಮ್ಮ ಆತ್ಮೀಯರ ಸಾವು ಹಾಗೂ ಆ ಸಂದರ್ಭದಲ್ಲಿ ಸಾಮಾನ್ಯವಾಗಿ ಎಲ್ಲರೂ ಆಡುವ ಸಾಂತ್ವನದ ಮಾತು, ನೆನ್ನೆ ನನ್ನ ದೊಡ್ಡಣ್ಣ- ಚೂಡಣ್ಣ ನಮ್ಮನ್ನಗಲಿದ ದಿನವೂ ಕೇಳಿ ಬಂತು. ನಾವು ಏಳು ಜನ ಅಣ್ಣ ತಮ್ಮಂದಿರು ಅಕ್ಕತಂಗಿಯರ ಗುಂಪಿನಿಂದ ನನ್ನಕ್ಕ ಸತ್ಯಲಕ್ಷಮ್ಮ ಈಗಾಗಲೇ ನಮ್ಮಿಂದ ದೂರವಾಗಿದ್ದಳು . ಈಗ ನನ್ನಣ್ಣನ ಸಾವಿನಿಂದ ನಮ್ಮ ಏಳು ಜನದ ಕೊಂಡಿಯಲ್ಲಿ ಮತ್ತೊಂದು ಕೊಂಡಿ ಕಳಚಿದಂತಾಯಿತು. ಚೂಡಣ್ಣ ನನ್ನ ಚಿಕ್ಕಂದಿನಿಂದಲೂ ಒಂದು ಬಗೆಯ ಮಾರ್ಗದರ್ಶಿ. ನನ್ನ ಹೆಸರನ್ನು ಇಂಗ್ಲಿಷ್ ನಲ್ಲಿ ಬರೆಯಲು ಹೇಳಿಕೊಟ್ಟವನು. ನಾನು ಹೈ ಸ್ಕೂಲ್ ಸೇರಲು ಬೆಂಗಳೂರಿಗೆ ಬಂದಾಗ ನನ್ನನ್ನು ರಾಷ್ಟ್ರೀಯ ವಿದ್ಯಾಲಯಕ್ಕೆ ಕರೆದುಕೊಂಡು ಹೋಗಿ ಸೇರಿಸಿದವನು. ಲಾಲ್ ಬಾಗ್ ತೋರಿಸಿದವನು. ನಮ್ಮೂರು ದೊಡ್ಡಜಾಲಕ್ಕೆ ಸೈಕಲ್ ನಲ್ಲಿ ಹೋಗಲು ಸಮ್ಮತಿಸಿ ಹೋಗುವ ದಾರಿಯನ್ನು ಬರೆದುಕೊಟ್ಟು ಪ್ರೋತ್ಸಾಹಿಸಿದವನು.  ಹಳ್ಳಿಯಲ್ಲಿದ್ದಾಗ ದೀಪಾವಳಿಗೆ ಪಟಾಕಿ ತಂದುಕೊಟ್ಟವನು. ಹೈಸ್ಕೂಲ್ ಹುಡುಗನಿದ್ದಾಗಿನಿಂದಲೂ ಯಾವುದೇ ಫಾರಂ ತುಂಬಿಸುವಾಗ ನನಗೇ ತುಂಬಲು ಹೇಳಿ ಪ್ರೋತ್ಸಾಹಿಸಿದವನು. ನಾನು ನೋಡಿದ ಮೊದಲ ಹಿಂದಿ ಚಿತ್ರ ಕಾಲಾಬಜಾರ್.. ಅಲಂಕಾರ್ ಸಿನಿಮಾ ಥಿಯೇಟರ್ ನಲ್ಲಿ ತೋರಿಸಿದವನು , ಹೀಗೇ ಇನ್ನೂ ಅನೇಕ ರೀತಿಯಲ್ಲಿ ಹುರಿದುಂಬಿಸಿದವನು... ಏಳು ಗಂಟೆಗೆಲ್ಲ ಮಲಗುತ್ತೇನೆಂ...

ಕನ್ನಡಿ ಸುಳ್ಳು ಹೇಳಿತೇ?

" ತಾತ ಒಂದು, ಮೂರು ಆಡೋಣ ಬಾ" ಅಂತ ನನ್ನ ಮೊಮ್ಮಗಳು ಕಣ್ಣಾ ಮುಚ್ಚಾಲೆ ಆಟಕ್ಕೆ ಕರೆದಾಗ  ಬೇಡ ಅನ್ನುವ ಪ್ರಮೇಯವೇ ಇಲ್ಲ. ಆ ಉತ್ಸಾಹದ ಚಿಲುಮೆಯ ಜೊತೆ ಕಾಲ ಕಳೆಯುವುದು ನನಗಿಷ್ಟ. ಅವಳ ಜೊತೆ ಎಲ್ಲಾ ಆಟಗಳನ್ನು ಆಡಿದರೂ... ಕೆಲಸ ಸಮಯ ಅವಳ ಕುಣಿತಕ್ಕೆ , ಓಟಕ್ಕೆ, ಆಟಕ್ಕೆ ಸರಿಸಮನಾಗಿ ನಿಲ್ಲುವುದು ಕಷ್ಟ. ಆಗ ಮೆತ್ತಗೆ ಜಾರಿಕೊಂಡದ್ದು ಇದೆ. ನಮ್ಮ ದೊಡ್ಡ ಕುಟುಂಬದ ಮಕ್ಕಳು ಮೊಮ್ಮಕ್ಕಳು ಹಾಗೂ ಸೊಸೆಯಂದಿರ ಜೊತೆ ಕಾಲ ಕಳೆಯುವ ಸಮಯ ತುಂಬ ಸೊಗಸು. ಹಾಗೆಯೇ ಅವರುಗಳೂ ಸಹ ನನ್ನ ಜೊತೆ ಗೌರವಪೂರ್ವಕ ಸಲುಗೆಯಿಂದ ನಮ್ಮನ್ನು ಕೀಟಲೇ ಮಾಡುವುದೂ ಸಹ ಮುದ ಕೊಡುವ ವಿಚಾರ. ಇದು ನಮ್ಮ ಹತ್ತಿರದ ನೆಂಟರಿಷ್ಟರ ಮಕ್ಕಳಿಗೂ ಅನ್ವಯಿಸುತ್ತದೆ. ಅವರುಗಳು ನನ್ನ ಜೊತೆ ಸಮಯ ಕಳೆಯಲು ಇಷ್ಟಪಡುತ್ತಾರೆ ಎನ್ನುವುದು ನನಗೆ ಹೆಮ್ಮೆಯೇ... ಇಂಥ ಸಮಯಗಳಲ್ಲಿ ನನ್ನ ಹೆಂಡತಿ ನನಗೆ ಹೇಳುವ ಮಾತು " ನಿಮಗೆ ವಯಸ್ಸಾಗಿದೆ ಅಷ್ಟೇ..." ಬುದ್ಧಿ ಬಂದಿಲ್ಲ ಅನ್ನುವ ಮಾತನ್ನು ಇಲ್ಲಿಯತನಕ ಹೇಳಿಲ್ಲ ಅಷ್ಟೇ. ಇದು ಕೆಲಸಲ ಆರೋಪ, ಮೂದಲಿಕೆ ಅನಿಸಿದರೆ ಕೆಲಸಲ ಮೆಚ್ಚುಗೆಯೂ ಇರಬಹುದೇನೋ ಅನಿಸಿದೆ. ಇನ್ನೊಂದು ಮುಖ... ನಿಮ್ಹಾನ್ಸ್ ನ ಒಂದು ಅಂಗವಾದ "ವಯೋಮಾನಸ ಸಂಜೀವಿನಿ"  ಹಿರಿಯ ನಾಗರಿಕರಿಗಾಗಿ ಕೆಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಒಂದು ಸಂಘಟನೆ. ಇದರಲ್ಲಿ ನಾನು ಸಹ ಕೆಲ ಚಟುವಟಿಕೆಗಳಲ್ಲಿ ಭಾಗವಹಿಸುತ್ತೇನೆ. ಅಲ್ಲಿ ಮೂಡಿ ಬರುವ ಅ...

ಯೋಗಾ ಯೋಗ - Narrow gauge train ಇಂದ ವಿಮಾನಯಾನದ ವರೆಗೆ

Image
30 Dec 2022  2022ರ ಕೊನೆಯ ವಾರ ಒಂದು ವಿಶಿಷ್ಟ ಅನುಭವ. 33 ಜನರೊಡನೆ... ಅದರಲ್ಲೂ ಅಕ್ಕತಂಗಿಯರು ಅಣ್ಣ ತಮ್ಮಂದಿರು ಮತ್ತು ಅವರ ಮಕ್ಕಳು ಮೊಮ್ಮಕ್ಕಳೊಡನೆ ವಿಮಾನಯಾನ. ಸಂದರ್ಭ ನಮ್ಮಪ್ಪನ ಹಿರಿಯ ಮೊಮ್ಮಗ ರವಿ ಹಾಗೂ ವಿನುತಾ ದಂಪತಿಯ ಮೊದಲ ಮಗಳ ಮದುವೆಯ ನಿಶ್ಚಿತಾರ್ಥ ದೂರದ ಕಲ್ಬುರ್ಗಿಯಲ್ಲಿ. ಮೈಸೂರಿನ ಹುಡುಗಿ... ಕಲ್ಬುರ್ಗಿಯ ಹುಡುಗ.. ಇದೇ ಅಲ್ಲವೇ ಋಣಾನುಬಂಧ. ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತ ಣಿಂದೆತ್ತ ಸಂಬಂಧವಯ್ಯಾ.. ಎಷ್ಟು ಸತ್ಯ ಅಲ್ಲವಾ? ಮೂರು ದಿನದ ನಮ್ಮ ಕಾರ್ಯಕ್ರಮ ವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದವರು ರವಿ ವಿನುತಾ ದಂಪತಿ.... ಅತ್ತ ಕಲ್ಬುರ್ಗಿಯ ಶ್ರೀಮತಿ ಆರತಿ ಹಾಗೂ ಡಾಕ್ಟರ್ ಅರುಣ್ ಕುಮಾರ್ ಕುಲಕರ್ಣಿ ದಂಪತಿಗಳ ಆದರ ಆತಿಥ್ಯವು ಕಲ್ಬುರ್ಗಿಯ ಬಿಸಿಲಿನ ನಡುವೆಯೂ ನಮ್ಮನ್ನು ತಂಪಾಗಿರಿಸಿತ್ತು. ಇಷ್ಟು ದೊಡ್ಡ ನಮ್ಮವರ ಗುಂಪಿನಲ್ಲಿ ಪ್ರಯಾಣ ಮಾಡಿದ ಅನುಭವ ಬಹು ವರ್ಷಗಳ ನಂತರ ಸಿಕ್ಕಿತ್ತು. ಕಾರ್ಯಕ್ರಮ ಮುಗಿದು ನೆನ್ನೆ ಬೆಂಗಳೂರಿಗೆ ಬಂದೆವು... ವಿಮಾನ ನಿಲ್ದಾಣದಿಂದ ನಾನು ಮತ್ತು ನನ್ನಾಕೆ ವಿಜಯ, ನಮ್ಮ ಮನೆಗೆ ಬರುವ ಹಾದಿಯಲ್ಲಿ ಮತ್ತೆ ಸಿಕ್ಕಿದ್ದು ನನ್ನೂರು, ನಾ ಹುಟ್ಟಿದ ಊರು ದೊಡ್ಡ ಜಾಲ. ಈ ಸಲ ಸಮಯ ನನ್ನ ಪರವಾಗಿತ್ತು.. ಜೊತೆಯಲ್ಲಿದ್ದ taxi driver ಸಹ ನನ್ನ ಪರವಾಗಿದ್ದ,  ಹಾಗಾಗಿ ನನ್ನೂರಿನಲ್ಲಿ ಸಮಯ ಕಳೆಯುವ ಒಂದು ಅವಕಾಶ ಸಿಕ್ಕಿತ್ತು.  ಕೆಲ ಬೀದಿಗಳಲ್ಲಿ ಓಡಾಡಿ ಹಳೆಯ ...

ಪ್ರಕೃತಿಯ ಕೋಪ - ಮನುಷ್ಯನಿಗೆ ಶಾಪ

 ಪ್ರಕೃತಿಯ ಕೋಪ - ಮನುಷ್ಯನಿಗೆ ಶಾಪ ಈ ಕೆಳಗಿರುವ ವಿಡಿಯೋ ಲಿಂಕ್ ಅನ್ನು ಓಪನ್ ಮಾಡಿ ನೋಡಿ. ಇದು ವಾಟ್ಸಪ್ ಮೂಲಕ ಬಂದ ಒಂದು ವಿಡಿಯೋ ತುಣುಕು. https://drive.google.com/file/d/19oncxtl8jndBDDrjkXBbzYss06nW-kxD/view?usp=drivesdk     ಇದು ಇಂಡೋನೇಷ್ಯಾದಲ್ಲಿ ಆದ ಭೂಕಂಪವನ್ನು ಸ್ಯಾಟಿಲೈಟ್ ಮೂಲಕ ತೆಗೆದ ಚಿತ್ರಣ. ಇದರಲ್ಲಿ ಸಾಲು ಸಾಲು ಮನೆಗಳು ಕೊಚ್ಚಿಕೊಂಡು ಹೋಗುವ ದೃಶ್ಯ ಮನ ಕಲಕುವಂತಿದೆ. ವಿಡಿಯೋ ಚಿತ್ರಣ ತುಂಬಾ ಸ್ಪಷ್ಟವಾಗಿ ಕಾಣುತ್ತದೆ. ಇಲ್ಲಿ ನನಗೆ ಕಂಡದ್ದು ಪ್ರಕೃತಿಯ ಕೋಪದ ಒಂದು ಮುಖ ಹಾಗೂ ಮನುಷ್ಯನು ಸಾಧಿಸಿರುವ ಟೆಕ್ನಾಲಜಿಯ ಆವಿಷ್ಕಾರದ ಇನ್ನೊಂದು ಮುಖ. ವಿಪರ್ಯಾಸ ಎಂದರೆ ಈ ಪ್ರಕೃತಿಯ ಕೋಪಕ್ಕೆ ಕಾರಣ ಬಹುತೇಕ ಮನುಷ್ಯನ ದುರಾಸೆ... ಹಾಗೂ ಅವನು ಪ್ರಕೃತಿಯ ಮೇಲೆ ಮಾಡುತ್ತಿರುವ ಹಲ್ಲೆ.. ಹಾಗೆ ಮನುಷ್ಯನು ತನ್ನ ಜ್ಞಾನ/ ವಿಜ್ಞಾನ ಬೆಳವಣಿಗೆಯ ಸಹಾಯದಿಂದ ತನ್ನಿಂದಾದ ಅನಾಹುತವನ್ನು ತಾನೇ ಚಿತ್ರಣ ಮಾಡಿ ಜಗತ್ತಿಗೆ ತೋರಿಸುತ್ತಿರುವ ಪರಿ. ಮನುಷ್ಯನ ಜೀವನವು ಒಂದಲ್ಲ ಒಂದು ರೀತಿಯಲ್ಲಿ ಪ್ರಕೃತಿಯ ಜೊತೆಗೆ ಬೆಸೆದುಕೊಂಡಿದೆ. ನೀರು, ಗಾಳಿ, ಕಾಡುಗಳು, ಭೂಗರ್ಭದಲ್ಲಿರುವ ಖನಿಜಗಳು, ಇವೆಲ್ಲವೂ ಮನುಷ್ಯನ ಬೆಳವಣಿಗೆಗೆ ಪೂರಕವಾಗಿವೆ. ಮನುಷ್ಯ ಇದನ್ನು ಅತಿಯಾಗಿ ಬಳಸಿ ಸಮತೋಲನವನ್ನು ಹಾಳು ಮಾಡಿ ತನ್ನ ನಾಶಕ್ಕೆ ತಾನೇ ಕಾರಣನಾಗುತ್ತಿದ್ದಾನೆ. ಕಾಡನ್ನು ಕಡಿದು ನಾಡನ್ನು ಮಾಡುವ ಕೆಲಸ ಇಂದು ನೆನ...

ಒಂದು ಸಾವಿನ ಸುತ್ತ..

 ಒಂದು ಸಾವಿನ ಸುತ್ತ.. ಯಾವಾಗಿನಂತೆ ನನ್ನ ಸರದಿ ಯಾದ ಸೋಮವಾರದಂದು ಅಶಕ್ತ ಪೋಷಕ ಸಭಾಗೆ ಹೋದೆ. ಪ್ರವೇಶ ದ್ವಾರದಿಂದಲೇ ವಾತಾವರಣ ಗಂಭೀರವಾಗಿದ್ದು... ಅಲ್ಲೊಂದು ಆಂಬುಲೆನ್ಸ್ ಬಂದು ನಿಂತಿತ್ತು.  ಯಾರಿಗೋ ಆರೋಗ್ಯ ತಪ್ಪಿರಬಹುದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ವಾಹನ ಬಂದಿರಬಹುದು ಅಂದುಕೊಂಡು ಹತ್ತಿರ ಹೋಗಿ ನೋಡಿದಾಗ ಅದು ಶವವನ್ನು ಸಾಗಿಸುವ ವಾಹನವಾಗಿತ್ತು. ವಿಚಾರಿಸಿದಾಗ ಒಬ್ಬ ಹೆಣ್ಣು ಮಗಳು ಸಾವನ್ನಪ್ಪಿದ್ದಾರೆಂದು ತಿಳಿಯಿತು. ಹೆಸರು ನಾಗರತ್ನಮ್ಮ ಒಂದು ಕ್ಷಣ ನನಗೆ ಮುಖದ ನೆನಪು ಬರಲಿಲ್ಲ. ಒಂದೆರಡು ಮಾತುಗಳ ನಂತರ ನನಗೆ ಹೊಳೆಯಿತು ಅದು ಬಿ ಆರ್ ನಾಗರತ್ನಮ್ಮ ಅಂತ. ಸಾಕಷ್ಟು ಬಾರಿ ಮಾತನಾಡಿದ ನೆನಪಾಯಿತು. ಇಚೀಚೆಗೆ ನೋಡಿರಲಿಲ್ಲ. ಇಂಥ ಸಮಯದಲ್ಲಿ ಲೋಕಾಭಿರಾಮವಾಗಿ ಮಾತನಾಡುವುದು ಸರಿ ಅನ್ನಿಸಿ ನಿವಾಸಿಗಳೊಡನೆ ಅವರ ಭಾವನೆಗಳನ್ನು ತಿಳಿಯಲು ಪ್ರಯತ್ನಿಸಿದೆ. ಕೆಲ ಅಭಿಪ್ರಾಯಗಳು ಹೀಗಿತ್ತು: " ತುಂಬಾ ಸಕ್ಕರೆ ಕಾಯಿಲೆ ಇತ್ತು.. ಆದರೆ ಹೇಳಿದ ಮಾತು ಕೇಳುತ್ತಿರಲಿಲ್ಲ... ತಿನ್ನುವುದರ ಮೇಲೆ ಹತೋಟಿ ಇರಲಿಲ್ಲ" " ಓಡಾಡಕ್ಕೆ ಆಗ್ತಿರಲಿಲ್ಲ ತುಂಬಾ ಕಷ್ಟಪಡುತ್ತಿದ್ದರು" " ಹೋಗ್ಲಿ ಬಿಡಿ ತುಂಬಾ ನರಳಲಿಲ್ಲ.. ಗೆದ್ದಳು" " ನೆನೆಸಿಕೊಂಡರೆ ಭಯ ಆಗುತ್ತೆ ನಮಗೇನು ಕಾದಿದಿಯೋ ಅಂತ" " ಒಂದಲ್ಲ ಒಂದು ದಿವಸ ಸಾಯಬೇಕಲ್ವಾ?" "ಎಲ್ಲರೂ ಹೋಗೋದೇ.. ಅವರು ಇವತ್ತು ...

ಇಬ್ಬರ ಜಗಳ ಮೂರನೆಯವನಿಗೆ ಲಾಭ

Image
ಕೋತಿ ಕಜ್ಜಾಯಕ್ಕಾಗಿ ಜಗಳವಾಡುತ್ತಿದ್ದ ಎರಡು ಬೆಕ್ಕುಗಳಿಗೆ ನ್ಯಾಯ ಕೊಡುವ ಸೋಗಿನಲ್ಲಿ ಕಜ್ಜಾಯವನ್ನು ತಾನೇ ತಿಂದ ಕಥೆ ನಾನು ಚಿಕ್ಕಂದಿನಲ್ಲಿದ್ದಾಗ ಓದಿದ್ದೆ. ಬಹುತೇಕ ನೀವೆಲ್ಲರೂ ಓದಿದ್ದೀರಿ ಅಥವಾ ಕೇಳಿದ್ದೀರಿ.  ನೆನ್ನೆ ಭಾನುವಾರ ನನಗೊಂದು ವಿಶಿಷ್ಟ ಅನುಭವವಾಯಿತು ಅದಕ್ಕಾಗಿ ಈ ಕಥೆ ಹಾಗೂ ನುಡಿಗಟ್ಟು ನೆನಪಿಗೆ ಬಂತು.  ಬಹು ಅಪರೂಪವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಬೇಕಾದ ಪ್ರಸಂಗ ನಡೆಯಿತು. ಮೂಲ ಕಾರಣ ನನ್ನ ಕಾರಿನ ಚಕ್ರದ ಗಾಳಿಯನ್ನು ನಾನು ನಿಲ್ಲಿಸಿದ್ದ ಜಾಗದಲ್ಲಿ ಯಾರೋ ತೆಗೆದಿದ್ದು.. ಅದೂ ನಾನು ಹೋದ ನಮ್ಮ ಇಷ್ಟರ ಮನೆಯ ಬಳಿ. ನನ್ನ ಕಾರಿನ ಜೊತೆಗೆ ಮತ್ತೆರಡು ಕಾರುಗಳ ಗಾಳಿಯನ್ನು ತೆಗೆಯಲಾಗಿತ್ತು. ಈ ವಿಚಾರವಾಗಿ ನನ್ನ ಇಷ್ಟರ ಮನೆಯ ಮಕ್ಕಳು ಹಾಗೂ ಅವರ ನೆರೆಯವರು (ನೆರೆ ಹೊರೆ ಎನ್ನಲೇ?) ಮತ್ತು   ಇತರ ಕಾರಿನವರ ಮಧ್ಯೆ ವಾದ ವಿವಾದಗಳಾಯ್ತು.. ಅದು ನಮ್ಮನ್ನು ಪೊಲೀಸ್ ಠಾಣೆಯವರೆಗೂ ಕರೆದು ಕೊಂಡು ಹೋಯಿತು. ಜಗಳ ಎಂದ ಮೇಲೆ ಎಲ್ಲರೂ ಅವರವರನ್ನು ಸಮರ್ಥಿಸಿಕೊಳ್ಳುವುದು ಸಹಜ.. ಇಲ್ಲೂ ಅದೇ ನಡೆಯಿತು.. ಪೊಲೀಸ್ ಠಾಣೆಯಲ್ಲೂ ಮುಂದುವರೆಯಿತು. ಠಾಣೆಗೆ ಹೋದ ಎರಡು ಬಣಗಳು ಯಾವುದಕ್ಕೂ ಜಗ್ಗದೆ ತಮ್ಮದೇ ವಾದಗಳನ್ನು ಮುಂದಿಟ್ಟು ಮಾತನಾಡಿದ್ದಾಯ್ತು. ನಾನು ಅರ್ಧಪ್ರೇಕ್ಷಕ ಮತ್ತು ಅರ್ಧ ಭಾಗಿದಾರ. ಆ ಸಂದರ್ಭದಲ್ಲಿ ಬಾಯೊಣಗಿ ಮಾತಾಡಲಾಗದ ಪರಿಸ್ಥಿತಿ.. ಸ್ವಲ್ಪ ನೀರು ಕುಡಿದು ಚೇತರಿಸಿಕೊಂಡೆ. ಠಾಣಾಧಿಕಾರಿಯ ನ...

ಉತ್ಥಾನ ದ್ವಾದಶಿ ಟ್ರಿಪ್.

 ಉತ್ಥಾನ ದ್ವಾದಶಿ ಟ್ರಿಪ್. ಹೆಸರಲ್ಲೇ ಏನೋ ವಿಶೇಷ ಕಾಣಿಸ್ತಾ... ಹೌದು ಕಾರಣ ಇದೆ. ದೊಡ್ಡಪ್ಪ (ನನ್ನ ಮಾವನವರ ಅಣ್ಣ)... ನಮಗೆಲ್ಲ ತುಂಬಾ ಪ್ರೀತಿ ಪಾತ್ರರಾಗಿದ್ದವರು... ಅವರು ಶಿವನಪಾದ ಸೇರಿ ಒಂದು ವರ್ಷ  ಕಳೆದು ಶ್ರಾದ್ಧ ಕಾರ್ಯಕ್ರಮಗಳು ನಡೆದಾಗ ಎಲ್ಲಾ ಕುಟುಂಬದ ಸದಸ್ಯರು ಒಟ್ಟಿಗೆ ಸೇರಿದ್ದೆವು. ಆಗಿನ ಮಾತುಕತೆಯ ವೇಳೆ ಆದ ನಿರ್ಧಾರ ...ಎಲ್ಲರೂ ಒಟ್ಟಿಗೆ ಹೋಗಿ ವರ್ಷಗಳೇ ಕಳೆದಿವೆ, ಏನಾದರೂ ಮಾಡಬೇಕು ಅನ್ನುವ ಒಂದು ಅಭಿಪ್ರಾಯ ಹೊಮ್ಮಿತು. ತಕ್ಷಣವೇ ಕಿರಿಯರ ಒಂದು ಗುಂಪು ಕಾರ್ಯಪ್ರವೃತ್ತವಾಯಿತು ಮತ್ತು ನವಂಬರ್ ಐದು ಮತ್ತು ಆರನೇ ತಾರೀಕು ಹೋಗಲು ನಿಶ್ಚಯಿಸಿತು. ಹಿರಿಯ ತಲೆಗಳು ಒಂದೆರಡು ಯೋಚಿಸಿ ಅದು ಉತ್ಥಾನ ದ್ವಾದಶಿ ದಿನವಾದ್ದರಿಂದ ತುಳಸಿ ಪೂಜೆ ಮಾಡಬೇಕು.. ಹಾಗಾಗಿ ಕಷ್ಟ ಎಂಬ ಸಬೂಬು  ಬಂತು. ತಕ್ಷಣವೇ ತುಳಸಿಯ ಗಿಡವನ್ನು ತೆಗೆದುಕೊಂಡು ಹೋಗಿ ಅಲ್ಲಿಯೇ ಪೂಜೆ ಮಾಡುವುದೆಂದು ತರಲೆ ಸೂಚನೆಯೊಂದು ಬಂತು. ಹೇಗೋ ಎಲ್ಲರೂ ಒಪ್ಪಿದ್ದಾಯಿತು ತಕ್ಷಣವೇ ಕೊಟ್ಟ ಹೆಸರು  "ಉತ್ಥಾನ ದ್ವಾದಶಿ ಟ್ರಿಪ್"... ಆಗಲೇ ವಾಟ್ಸಪ್ ಗ್ರೂಪೊಂದು ಶುರುವಾಯಿತು.. ಏನೆಲ್ಲ ಮಾತುಕತೆಗಳು... ತರಲೆಗಳು ಸೇರಿ... ಸಂವಾದ ಗಳು ನಡೆದು ಕೊನೆಗೂ ಸಂಭವಿಸಿದ್ದೇ "ಉತ್ಥಾನ ದ್ವಾದಶಿ ಟ್ರಿಪ್." ನವಂಬರ್ ಐದನೆಯ ತಾರೀಕು ಬೆಳಿಗ್ಗೆ 9:30 ಗಂಟೆಗೆ  PES  ಹತ್ತಿರ ನೈಸ್ ರಸ್ತೆಯ ಟೋಲ್ ಎದುರು ಎಲ್ಲರೂ ಸೇರಬೇಕೆಂದು  ನಿರ...

ಸೂರ್ಯಗ್ರಹಣ - ಅದರದ್ದೊಂದು ಚಿಕ್ಕ ಪುರಾಣ:

ಗ್ರಹಣ ಅಂದಾಗ ನನ್ನ ಮನಸ್ಸಿಗೆ ಬರೋದು ರಾಹುಕೇತುಗಳು ಸೂರ್ಯ ಅಥವಾ ಚಂದ್ರನನ್ನು ನುಂಗು ಹಾಕುತ್ತಾರೆ. ಆಗ ಸೂರ್ಯ ಚಂದ್ರರು ನಮಗೆ ಕಾಣುವುದಿಲ್ಲ. ಇದು ನಮಗೆ ಸಾಮಾನ್ಯವಾಗಿ ತಿಳಿದಿದ್ದ ವಿಷಯ. ನಿಧಾನವಾಗಿ ಸೂರ್ಯ ಚಂದ್ರರು ಕಾಣೆಯಾಗುತ್ತಿದ್ದರಿಂದ... ನನಗೂ ಹಾಗೆ ಅನ್ನಿಸುತ್ತಿತ್ತು. ಯಾಕೆಂದರೆ ನಾನು ಹಾವು ಕಪ್ಪೆಯನ್ನು ನುಂಗುವುದನ್ನು ನೋಡಿದ್ದೆ. ಇದನ್ನು ಮೂಢನಂಬಿಕೆಯೆಂದು ಮೂಗು ಮುರಿಯುವವರು ಇದ್ದಾರೆ. ಅದು ಸರಿಯೇ ಇರಬಹುದು. ಆದರೆ ನಮ್ಮ ಪೂರ್ವಜರು ಗ್ರಹಣ ಸಂಭವಿಸುವುದನ್ನು ಕರಾರುವಾಕ್ಕಾಗಿ ಲೆಕ್ಕಾಚಾರ ಮಾಡಿ ಪಂಚಾಂಗದಲ್ಲಿ ಕೊಡುವುದನ್ನು ಗಮನಿಸಿದಾಗ, ಅದು ಈಗಲೂ ಅನೂಚಾನವಾಗಿ ಮುಂದುವರೆದು ಬರುತ್ತಿರುವುದರಿಂದ  ನಮ್ಮ ಪೂರ್ವಜರ ಜ್ಞಾನ- ಆಕಾಶಕಾಯಗಳ ಚಲನೆಯ ವಿಚಾರವಾಗಿ - ಎಷ್ಟು ಉನ್ನತ ಮಟ್ಟದಲ್ಲಿ ಇತ್ತೆಂಬುದು ವಿಶದವಾಗುತ್ತದೆ. ಇರಲಿ, ನನ್ನ ಪುರಾಣಕ್ಕೆ ಬರುತ್ತೇನೆ.... ಬಹುಶಃ ನಾನು ನಮ್ಮ ಹಳ್ಳಿಯಲ್ಲಿ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದೆ. ಕಾರಣ  ಗೊತ್ತಿಲ್ಲ ಅಂದು ಮನೆಯಲ್ಲಿದ್ದವರು ನಾನು ಮತ್ತು ನಮ್ಮಪ್ಪ ಶಾಮಣ್ಣ( ನಮ್ಮಪ್ಪನನ್ನು ನಾವು ಕರೆಯುತ್ತಿದ್ದುದು ಶಾಮಣ್ಣ ಎಂದೆ). ಸೂರ್ಯಗ್ರಹಣ ಅಂದು ತುಂಬಾ ಹೊತ್ತು ಇರುತ್ತದೆಂದು, ಬೆಳಿಗ್ಗೆ ಬೇಗ ಊಟ ಮಾಡಿ ನಂತರ ಸೂರ್ಯಗ್ರಹಣ ಬಿಟ್ಟ ಮೇಲೆ ಸ್ನಾನ ಮಾಡಿ ಊಟ ಮಾಡಬೇಕು ಮಧ್ಯೆ ತಿನ್ನಲು ಏನು ಕೇಳಬಾರದೆಂದು ನಮ್ಮಪ್ಪನ ಅಜ್ಞೆ ,(?) ಮನೆಯಲ್ಲಿದ್ದ ಹಾಲು ಮೊಸರು ಮು...

ಠುಸ್ ...ಪಟಾಕಿ...

 ಅಪ್ಪನ ಜೇಬಿನ ದುಡ್ಡುಗಳೆಲ್ಲ ಚಟಪಟ ಗುಟ್ಟುತ ಸಿಡಿಯುವುವು... ಒಪ್ಪದ ನೀತಿಯ ಮಾತುಗಳೆಲ್ಲ ಥಟ್ಟನೆ ಹಾದಿಯ ಹಿಡಿಯುವುವು... ಇದು ನಾನು ಚಿಕ್ಕವನಾಗಿದ್ದಾಗ ಹೇಳಿಕೊಳ್ಳುತ್ತಿದ್ದ ಪದ್ಯದ ಸಾಲು.   ಆದರೆ ನಿಜ ಜೀವನದಲ್ಲಿ ದೀಪಾವಳಿಯ ಸಂದರ್ಭದಲ್ಲಿ ನನ್ನಪ್ಪನ ಜೇಬಿನ ದುಡ್ಡು ಹೊರಕ್ಕೆ ಬರುತ್ತಲೇ ಇರಲಿಲ್ಲ. ಪಟಾಕಿ ಸಿಡಿಸುವ ಸಂಭ್ರಮ ಅಷ್ಟು ಸುಲಭವಾಗಿ ನಮ್ಮ ಕೈಗೆ ಎಟುಕುತ್ತಿರಲಿಲ್ಲ. ಊರಿನ ಉಳ್ಳವರ ಮಕ್ಕಳು ಹಬ್ಬಕ್ಕೆ ಬಹಳ ಮುಂಚೆಯೇ ಪಟಾಕಿಗಳನ್ನು , ಸುರ್ಸುರ್ ಬಾಣಗಳನ್ನು ಸಿಡಿಸುತ್ತಿದ್ದರೆ, ಅದನ್ನು ಆಸೆ ಕಂಗಳಿಂದ ನೋಡಿ ನೋಡಿ ಸಂತೋಷಪಡುತ್ತಿದ್ದದ್ದೂ ಉಂಟು. ನನ್ನ ದೊಡ್ಡಣ್ಣ... ಚೂಡಣ್ಣ ತರುತ್ತಿದ್ದ ಪಟಾಕಿಗಾಗಿ ಹಬ್ಬದ ದಿನದವರೆಗೂ ಎದುರು ನೋಡುತ್ತಿದ್ದೆವು ನಮ್ಮ ಭಾಗದ ಪಟಾಕಿಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವುದೇ ಒಂದು ಸಂಭ್ರಮ. ಕಡಿಮೆ ಇರುತ್ತಿದ್ದರಿಂದ ಯಾವುದನ್ನು ಯಾವಾಗ ಹೊಡೆಯಬೇಕು ಎನ್ನುವ ಜಿಜ್ಞಾಸೆ - ಅದಲ್ಲದೆ ಉತ್ಥಾನ ದ್ವಾದಶಿ ದಿನಕ್ಕೆ ತುಳಸಿ ಹಬ್ಬಕ್ಕೆ ಒಂದಷ್ಟು ಇಡಬೇಕೆಂಬ ಅಮ್ಮನ ತಾಕಿತು ಬೇರೆ ನನ್ನನ್ನು ಗೊಂದಲಕ್ಕೀಡು ಮಾಡುತ್ತಿತ್ತು. ನರಕ ಚತುರ್ದಶಿಯ ದಿನ ಬೆಳಗ್ಗೆ ಬೇಗ ಎದ್ದು ತಲೆಗೆ ಮೈಕೈಗೆ ಅಮ್ಮನ ಆಶೀರ್ವಾದಪೂರ್ವಕ ಎಣ್ಣೆ ಒತ್ತುವಿಕೆ ಮುಗಿಯಲು ಕಾಯುತ್ತಿದ್ದ ನಾವು ಪಟಾಕಿ ಹೊಡೆಯಲು ಸಂಪೂರ್ಣ ತಯಾರು. ಹೀಗೊಂದು ದೀಪಾವಳಿಯ ದಿನ ತುಂಬಾ ಮಳೆಯಿದ್ದ ಕಾರಣ ಬಹಳಷ್ಟು ಪಟಾಕಿಗಳು ಠುಸ್ ಎಂದ...

ಅತಿಥಿ

 ಅತಿಥಿ ದೇವೋಭವ, ಇದು ಒಂದು ಪ್ರಮುಖವಾದ ನಾಣ್ಣುಡಿ. ಮನೆಗೆ ಬಂದ ಅತಿಥಿ ದೇವರ ಸ್ವರೂಪ ಎಂದು ನಂಬುವುದು ನಮ್ಮ ಹಿಂದಿನ ಕಾಲದಿಂದಲೂ ಬಂದ ಒಂದು ಸಂಪ್ರದಾಯ.  ಅತಿಥಿಸತ್ಕಾರ ನಮ್ಮ ಸಂಸ್ಕೃತಿಯ ಒಂದು ಭಾಗ. ನಾವುಗಳೂ ಸಹ ಭೂಮಿಗೆ ಬಂದ ಅತಿಥಿಗಳು ಎಂದು ನಂಬುವರು. ಅದರ ಅರ್ಥ ನಾವು ಇಲ್ಲಿ ಕೆಲಕಾಲ ಮಾತ್ರ ಇರುವವರು ಎಂದು. ಸಾಮಾನ್ಯವಾಗಿ ನಾವು ಬೇರೆಯವರ ಮನೆಗೆ ಅತಿಥಿಗಳಾಗಿ ಹೋದಾಗ ಅಲ್ಲಿನ ಪರಿಸರಕ್ಕೆ ತಕ್ಕಾಗಿ ಹೊಂದಿಕೊಂಡು ಹೋಗುವುದು ನಮ್ಮ ಸ್ವಭಾವ. ಅಲ್ಲಿ ನಮ್ಮ ಬೇಕು ಬೇಡಗಳಿಗೆ ಕೊನೆಯ ಸ್ಥಾನ.  ನಮಗೆ ಅವರು ನೀಡುವ ಆದರ ಗೌರವಗಳನ್ನು ಸ್ವಲ್ಪ ಸಂಕೋಚದಿಂದಲೇ ಸ್ವೀಕರಿಸುತ್ತೇವೆ.  ಅತಿಥಿಗಳಾಗಿ ನಾವು ನಮ್ಮ ಪರಿಮಿತಿಯಲ್ಲಿದ್ದಾಗ, ನಮ್ಮ ಅತಿಥೇಯರು ಸಹ ಅನುಕೂಲಕರವಾಗಿ, ಪ್ರೀತಿಯಿಂದ ನಡೆಸಿಕೊಳ್ಳುತ್ತಾರೆ.  ಹಾಗಾಗಿಯೇ " ಹಾಕ್ಮಣೆ, ತೋರ್ಮಣೆ, ನೂಕ್ಮಣೆ" ಎಂಬ ಮಾತು ಹುಟ್ಟಿರಬಹುದು. ಅತಿಥಿಗಳಾಗಿ ನಾವು ಅನುಕೂಲಕರವಾಗಿದ್ದರೆ - ಇನ್ನೂ ಸ್ಪಷ್ಟವಾಗಿ ಅವರ ಜೀವನಶೈಲಿಯಲ್ಲಿ ಪ್ರವೇಶಿಸದಿದ್ದರೆ ಮಣೆಯನ್ನು ಹಾಕಿ ಆದರಿಸುತ್ತಾರೆ. ಸ್ವಲ್ಪ ವ್ಯತ್ಯಾಸವಾದರೆ ಮಣೆಯನ್ನು ತೋರಿಸಿ ಕೂಡಲು ಹೇಳುತ್ತಾರೆ, ಅತಿಥಿಗಳಾಗಿ ಹೋದವರು ತಮ್ಮ ಮಿತಿಯನ್ನು ಮೀರಿದರೆ ಮಣೆಯನ್ನು ನೂಕಿ ನಮಗೆ ಜಾಗವನ್ನು ತೋರಿಸುತ್ತಾರೆ. ಅದು ತಿರಸ್ಕಾರದ ಒಂದು ಮುಖ. ಹಾಗಾಗಿ ಅತಿಥಿಗಳಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದು ನಮಗೆ ಚೆನ್ನಾಗಿ ಗೊ...

ದಸರಾ ಸಂಭ್ರಮ

ದಸರಾ ಹಬ್ಬ ಎಂದರೆ ನನಗೆ  ಜ್ಞಾಪಕ ಬರುವುದು  ರಜಾ ಮತ್ತು ಅದರೊಂದಿಗಿನ ಮಜಾ. ಚಿಕ್ಕಂದಿನಲ್ಲಿ ನಾವು ಮಕ್ಕಳು ರಜಕ್ಕಾಗಿ ಹಾತೊರೆಯುವುದು ಸಾಮಾನ್ಯವಾಗಿತ್ತು ಹಾಗಾಗಿ ದಸರಾ ಹಬ್ಬ ನಮಗೆ ಯಾವಾಗಲೂ ಆಸೆಯಿಂದ ಕಾಯುವ ಹಬ್ಬ ವಾಗಿರುತ್ತಿತ್ತು. ಇನ್ನೂ ಒಂದು ಮುಖ್ಯಕಾರಣವೆಂದರೆ ದಸರಾ ಹಬ್ಬದಲ್ಲಿ ನಾವೆಲ್ಲ ಒಟ್ಟಾಗಿ ಎಲ್ಲರ ಮನೆಗಳಿಗೂ ಹೋಗಿ ಗೊಂಬೆ ಕೂಡಿಸಿದ್ದಾರಾ ನೋಡಿ ಅಲ್ಲಿ ಹಾಡು-ನೃತ್ಯ ಹೀಗೆ ನಮಗೆ ಬಂದ ಎಲ್ಲಾ ವಿದ್ಯೆಗಳನ್ನು ಪ್ರದರ್ಶಿಸಿ ಅವರು ಕೊಡುವ ಬೊಂಬೆ ಬಾಗಿನಕ್ಕೆ ಕಾಯುವುದು ನಮಗೆ ಎಲ್ಲಿಲ್ಲದ ಖುಷಿ. ಬೊಂಬೆ ಬಾಗಿನಕ್ಕಾಗಿ ಕೊಡುತ್ತಿದ್ದುದು ಮೂರು ಅಥವಾ ನಾಲಕ್ಕು ಚಿಕ್ಕ ಚಿಕ್ಕ ಕೋಡುಬಳೆ, ಚಕ್ಕುಲಿ, ಬಿಸ್ಕತ್ತು ಹೀಗೆ ನಾನಾ ವ್ಯಂಜನಗಳು. ಅದನ್ನು ಸವಿಯಲು ನಮಗೆ ಎಲ್ಲಿಲ್ಲದ ಸಂತೋಷ. ರಜದ ಶುರುವಿನಲ್ಲೇ ಬೊಂಬೆಯ ಪೆಟ್ಟಿಗೆಯನ್ನು ತೆಗೆದು ಅದರಲ್ಲಿರುವ ಬೊಂಬೆಗಳನ್ನು ಒಂದೊಂದಾಗಿ ನೋಡಿ ತೆಗೆದಿರಿಸಿ ಅದರ ಅಂದವನ್ನು ಹೆಚ್ಚಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೆವು. ಈ ಸಮಯದಲ್ಲಿ ನಮ್ಮ ಅತಿ ಉತ್ಸಾಹದಿಂದ ಕೆಲ ಎಡವಟ್ಟುಗಳನ್ನು ಮಾಡಿ ಬೈಸಿಕೊಂಡದ್ದೂ  ಇದೆ. ಬೊಂಬೆಗಳಲ್ಲಿ ಪ್ರಾಮುಖ್ಯವಾದದ್ದು ಪಟ್ಟದ ಬೊಂಬೆಗಳು. ಇದಕ್ಕೆ ವಿಶೇಷ ಅಲಂಕಾರಗಳು ಹಾಗೂ ವಿಶೇಷ ಸ್ಥಾನಮಾನ. ನಾವುಗಳು ಆ  ಗೊಂಬೆಗಳನ್ನು ಚೆನ್ನಗೀರಪ್ಪ ಹಾಗೂ ಚೆನ್ನಗೀರಮ್ಮ ಎಂದು ಕರೆಯುತ್ತಿದ್ದೆವು. ಕಾರಣ ಮಾತ್ರ ಇಂದಿಗೂ ಗೊತ್ತಿಲ್ಲ. ಇನ್ನ...

ಬದಲಾವಣೆ ಜಗದ ನಿಯಮ

  ಬದಲಾವಣೆ ಜಗದ ನಿಯಮ ನಾವು ಒಂಭತ್ತು ಜನರ ಒಂದು ತಂಡ "ಅಶಕ್ತ ಪೋಷಕ ಸಭಾ" ಎಂಬ ವೃದ್ಧಾಶ್ರಮದಲ್ಲಿ ಅಲ್ಲಿರುವ ನಿವಾಸಿಗಳೊಡನೆ ಒಂದಷ್ಟು ಒಡನಾಟವನ್ನು ಇಟ್ಟುಕೊಂಡಿದ್ದೇವೆ. ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸುಮಾರು 100 ನಿಮಿಷಗಳ ಕಾಲ ಅವರೊಂದಿಗಿರುತ್ತೇವೆ- ವಿವಿಧ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸುತ್ತಾ. ನಮ್ಮ ಮೂಲ ಉದ್ದೇಶ ಅಲ್ಲಿರುವ ಜನಗಳ ಏಕತಾನತೆಯನ್ನು ಕಳೆದು ಅವರು ಒಂದಷ್ಟು ಚಟುವಟಿಕೆಯಲ್ಲಿ ತೊಡಗಿಸುವುದು. ಸತತ ಪ್ರಯತ್ನದಿಂದ ಒಂದಷ್ಟು ಬದಲಾವಣೆ ಬಂದಿದೆ. ಸುಮಾರು ಜನ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಇನ್ನು ಕೆಲವರು ಹಿಂದಿದ್ದಾರೆ. ಅವರಿಗೂ ಪ್ರೇರೇಪಿಸುವುದು ನಮ್ಮ ಗುರಿ. (ಕರೋನ ಕಾರಣದಿಂದ ಈಗ ಸಧ್ಯ ನಿಂತಿದೆ) ಸಾಮಾನ್ಯವಾಗಿ ದಿನದ ಕಾರ್ಯಕ್ರಮ ಶುರುವಾಗುವುದು ಪ್ರಾರ್ಥನೆಯೊಂದಿಗೆ- ಅದೂ ನಿವಾಸಿಗಳಿಂದ. ಎಲ್ಲರೂ ಹಾಡಬೇಕೆಂದು ನಾವುಗಳು ಆಗ್ರಹ ಪೂರ್ವಕವಾಗಿ ಹೇಳುತ್ತಿರುತ್ತೇವೆ. ಅದೊಂದು ದಿನ (12.01.2020) ಒಂದು ಖುಷಿ ಕೊಡುವ ಸಂಗತಿ ನಡೆಯಿತು. ಅಂದಿನ ವಿಶೇಷ - ಪ್ರಾರ್ಥನೆ ಮಾಡಿದ್ದು ನಾಗರತ್ನ (ನಾಗು). ನಾಗು ಬಗ್ಗೆ ಎರಡು ಮಾತು. ಸುಮಾರು ಎಪ್ಪತ್ತರ ವಯಸ್ಸು. ಯಾವಾಗಲೂ ನಗುಮುಖ. ಮಾತು ತುಂಬಾ ಕಡಿಮೆ, ಆಡಿದ್ದೂ ಸ್ಪಷ್ಟವಿಲ್ಲ. ಹಾಗಾಗಿ ಮಾತೇ ಕೇಳಿಲ್ಲ. ಸ್ವಾಗತ ಮತ್ತು ಬೀಳ್ಕೊಡುಗೆ ಸಹ ಮುಗಿದ ಕೈ ಮತ್ತು ನಗುವಿನೊಂದಿಗೆ. ಈ ನಾಗು ಮಾಡಿದ ಪ್ರಾರ್ಥನೆ ನಾ ಕಂಡ ಒಂದು ದೊ...

ಸಮಯಕ್ಕೊಂದು ಸಹಾಯ ಹಸ್ತ

Image
  "ಕರುಣಾಳು ಬಾ ಬೆಳಕೆ ಮುಸುಕೀದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು...." ಇದು ಪ್ರಾಯಶಃ ಇಂದಿನ ತಲೆಮಾರಿನ ಬಹು ಹಿರಿಯ ನಾಗರೀಕರ ಅಳಲು. ಯಾಕೋ ಈಚೀಚೆಗಂತೂ ಹಿರಿಯರ ಮೇಲಿನ ದೌರ್ಜನ್ಯ ಜಾಸ್ತಿಯಾಗುತ್ತಿದೆ. .. ಯುವ ಜನಾಂಗದ ದುರಾಸೆಯೋ... ಸ್ವಾರ್ಥವೋ...ಅಥವಾ ಸುಲಭವಾಗಿ ಹಣ / ಆಸ್ತಿ ದಕ್ಕಿಸಿಕೊಳ್ಳುವ ಅಭಿಲಾಷೆಯೋ...ತಿಳಿಯದಾಗಿದೆ. ಜೂನ್ ೧೫ "ಹಿರಿಯ ನಾಗರೀಕರ ಮೇಲಿನ ದೌರ್ಜನ್ಯದ ಬಗ್ಗೆ ಅರಿವು ಮೂಡಿಸುವ ದಿನ" (world eleder abuse awareness day) ಆಗಿ ಆಚರಿಸಲಾಗುತ್ತಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ ಒಂದು ಅಭಿಯಾನ. ಹಾಗಾಗಿ ಇದನ್ನು ನಾವೂ ಸಹ ಕೆಲ ಮಟ್ಟಿಗೆ ಆಚರಿಸಿದೆವು - ವಯೋಮಾನಸ ಸಂಜೀವಿನಿ - ಯ ಮೂಲಕ. "ವಯೋಮಾನಸ ಸಂಜೀವಿನಿ" - ಇದು Geriatric services and clinic, NIMHANS, Bengaluru ಇದರ ಒಂದು ಉಪಕ್ರಮ. ನೆನ್ನೆ ಸಂಜೆ (28.06.2021) "ವಯೋಮಾನಸ ಸಂಜೀವಿನಿ" ಒಂದು WEBINAR ಆಯೋಜಿಸಿತ್ತು. ವಿಷಯ: ಹಿರಿಯ ನಾಗರೀಕರ ಮೇಲಿನ ದೌರ್ಜನ್ಯದ ಬಗ್ಗೆ ಅರಿವು ಹಾಗೂ "Maintenace and welfare of Parents and Senior citizens Act 2007" ಇದರ ಸಾಧಕ ಭಾದಕಗಳು. ಈ ಕಾರ್ಯಕ್ರಮದಲ್ಲಿ ಶ್ರೀ. ಶಶಿಧರ್ ಶೆಟ್ಟಿ ( District Judge (OOD), Member Secretary, Karnataka State Legal Services Authority.), ಡಾ. ರವೀಂದ್ರನ...

ನನ್ನ ಶಾಲೆ, ನಮ್ಮೂರ ಆಂಜನೇಯ

Image
ಕೆಲದಿನಗಳ ಹಿಂದೆ airport ಗೆ ಹೋ ಗುತ್ತಿದ್ದಾಗ, ದಾರಿಯಲ್ಲಿ ತುಂಬ ವಾಹನ ಸಂಚಾರವಿದ್ದು ತಡ ಆಗುತ್ತಿತ್ತು. ನಮ್ಮ ಕಾತುರ ಗಮನಿಸಿ taxi driver ಬೇರೊಂದು ದಾರಿಯಲ್ಲಿ ಕರೆದುಕೊಂಡು ಹೋಗುವುದಾಗಿ ಹೊರಟ. ಅಚಾನಕ್ಕಾಗಿ ನನಗೆ "ದೊಡ್ಡಜಾಲ" ರೈಲ್ವೇ ನಿಲ್ದಾಣ ಕಣ್ಣಿಗೆ ಬಿತ್ತು. ಮನಸ್ಸು ಗರಿಗೆದರಿತು. ದೊಡ್ಡಜಾಲ ನಾನು ಹುಟ್ಟಿ 8ನೇ ತರಗತಿವರೆಗೂ ಓದಿದ ಹಳ್ಳಿ. ಕೆಲ ನಿಮಿಷಗಳಲ್ಲಿ ನಮ್ಮ ಕಾರ್ ದೊಡ್ಡಜಾಲ ಊರ ಮುಂದೆ ಬಂತು. ನಾನು ಓದಿದ ಶಾಲೆ ಕಂಡಾಗ ನನ್ನ ಖುಷಿಗೆ ಮೇರೆಯೇ ಇರಲಿಲ್ಲ. 4-5 ನಿಮಿಷಗಳ ಕಾಲ ಅಲ್ಲಿ ಕಳೆಯಲು taxi driver ಮನ ಒಲಿಸಿದೆ. ಶಾಲೆ, ಆಂಜನೇಯ ದೇವಸ್ಠಾನ, ಅಶ್ವತ್ಥಕಟ್ಟೆ, ವೀರಭದ್ರ ದೇವಸ್ಠಾನ ಎಲ್ಲಾ ಸುತ್ತಿದೆ. ಸಮಯದ ಅಭಾವ, ಬೇಗ ಹೊರಡ ಬೇಕಾಯಿತು. ಪ್ರಯಾಣ ಮುಂದುವರಿಯಿತು, ಮನಸ್ಸು ನೆನಪಿನ ಲೋಕಕ್ಕೆ ಜಾರಿತು: ಆ ದಿನಗಳಲ್ಲಿ ಶಾಲೆಯಲ್ಲಿ ಕೂತಾಗ ತರಗತಿಯ ಕಿಟಕಿ ಬಾಗಿಲಿನಿಂದ ಕಾಣುತ್ತಿದ್ದದ್ದು ಆಂಜನೇಯ ದೇವಸ್ಥಾನ. ನಮಗೆ ಬಾಯಾರಿದಾಗಲೆಲ್ಲ ಅಥವಾ ನೀರು ಕುಡಿಯಬೇಕೆನಿಸಿದಾಗಲೆಲ್ಲ (ಇದು ಬಹಳ ಸಲ ಆಚೆ ಹೋಗಲು ಒಂದು ಕಾರಣ) ಆಂಜನೇಯ ದೇವಸ್ಠಾನದ ಭಾವಿಯೇ ನಮಗೆ ನೀರಿನ ತಾಣ. ತೀರ ಚಿಕ್ಕವರಿದ್ದಾಗ ಅಲ್ಲಿನ ನೀರಿನ ಕೊಡದಲ್ಲಿ ಕುಡಿಯುವುದು, ಹಾಗೂ ಸ್ವಲ್ಪ ದೊಡ್ದವರಾದಾಗ - ಅಂದರೆ ಈಜು ಕಲಿತಮೇಲೆ- ಭಾವಿಯಲ್ಲಿ ಇಳಿದು ನೀರು ಕುಡಿಯುವುದು. ಹೀಗೆ ಆಂಜನೇಯನ ಹೆಸರು ದಿನಕ್ಕೆಷ್ಟು ಬಾರಿ ಬರುತ್ತಿತ್ತೊ ಆ ಆಂಜ...

ಅನೂಗೆ ಕೃಷ್ಣನ ಚಿಂತೆ - ನಂದೊಂದು ಕವಿತೆ

Image
  ಇವತ್ತು ನನ್ನ whatsup ಗೆ ಬಂದಿದ್ದ ಒಂದು  ಫೋಟೋ ನೋಡಿದೆ. ತಕ್ಷಣ ಅದು ಏನೆಂದು ಹೊಳೆಯಲಿಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ಕಾಗದದ ತುಣುಕಿನ ಮೇಲೆ ಬರೆದಿರುವುದು ಕಂಡಿತು. ಏನೂ ಸರಿಯಾಗಿ ಕಾಣಿಸುತ್ತಿರಲಿಲ್ಲ. ಮೊದಲು ಕಂಡದ್ದು "7th july,2004, wednesday 10.45" ಮತ್ತೆ ಗಮನಿಸಿದಾಗ "ರಂಗನಾಥ್ ಸರ್" ಕಾಣಿಸಿತು. ಮಿಕ್ಕಿದ್ದೆಲ್ಲಾ ಕನ್ನಡ ಬರಹ, ಆದರೆ ಸ್ಪಷ್ಟವಾಗಿ ಕಾಣದು. ಇದನ್ನು ಕಳಿಸಿದ್ದು ನನ್ನ ಪರಿಚಯದ ಅನು (ಅನುರಾಧ). ಕುತೂಹಲದಿಂದ ಕಷ್ಟಪಟ್ಟು ಓದಿದೆ. ಅದು ನನ್ನದೇ ಕೈಬರಹ. ಅದರ ಪೂರ್ಣಪಾಠ ಹೀಗಿದೆ: ಗೋಕುಲದ ಗೋಪಿಯರು ಕೃಷ್ಣನನು ದೂರುವರು ಅವನು ಬಲು ದುಷ್ಟನೆಂದು ಯಾವ ಮಾತಿಗೂ ಕಿವಿಗೊಡದೆ ಮನದೆ ನೊಂದರೂ ಯಶೋದೆ ರಮಿಸಿದಳು ತನ್ನ ಮಗನನಂದು ಆಗಲಿಲ್ಲವೆ ಕೃಷ್ಣ ಮುಂದೆ ಜಗದೊಡೆಯ ಎಲ್ಲರ ಒಳಿತನ್ನು ಬಯಸುವ ಸಹೃದಯ ಯಶೋದೆ ನಿರಾಶೆಗೊಂಡಿದ್ದರೆ ಅಂದು ಕೃಷ್ಣಚರಿತೆಯೆ ಬೇರೆ ಇರುತಿತ್ತು ಇಂದು ಮನಸ್ಸು ಹಿಂದಕ್ಕೋಡಿತು: ಅಂದು ಅನು ತನ್ನ ಮಗನ ಬಗ್ಗೆ ನೊಂದಿದ್ದಳು. ಮುಂದೆ ಎನಿದೆಯೊ ಎಂದು ಆತಂಕ ಗೊಂಡಿದ್ದಳು ( ಕಾರಣಗಳು ನೆನಪಿಲ್ಲ). ಮಕ್ಕಳು ಚೆನ್ನಾಗಿರಬೇಕು, ಚೆನ್ನಾಗಾಗಬೇಕು ಅನ್ನುವ ಆಸೆ ಎಲ್ಲ ಅಮ್ಮಂದಿರದು, ಅನು ಸಹ ಅದಕ್ಕೆ ಹೊರತಾಗಿರಲಿಲ್ಲ. ಮಗ ಕೃಷ್ಣನ ಬಗ್ಗೆ ತುಂಬಾ ಚಿಂತೆಯಲ್ಲಿದ್ದಳು.ಪ್ರಾಯಶಃ ಆಗ ಕೃಷ್ಣ 1 ಅಥವಾ 2 ನೇ ತರಗತಿಯಿದ್ದಿರಬಹುದು. ನಾನೊಬ್ಬ ಆಪ್ತಸಲಹ...

ಸುಂಕೇನಹಳ್ಳಿ ಸರ್ಕಾರಿ ಶಾಲೆಯ ವಾರ್ಷಿಕೋತ್ಸವ:

Image
ಸುಂ ಕೇನಹಳ್ಳಿ ಸರ್ಕಾರಿ ಶಾಲೆಯ ವಾರ್ಷಿಕೋತ್ಸವ:    ಕೆಲಕ್ಷಣಗಳು ನನ್ನ ಮನಸ್ಸು ಗತಕಾಲದಲ್ಲಿ ಸಿಲುಕಿತ್ತು. ನನ್ನ ಪ್ರಾಥಮಿಕ ಶಾಲಾ ದಿನಗಳಲ್ಲಿ ಭಾಗವಹಿಸಿದ ನೆನಪುಗಳು. ರೋಮಾಂಚಕ, ಮಧುರ ನೆನಪುಗಳು. ಇದಕ್ಕೆ ಕಾರಣ, ಇಂದು (23.12.2019)  ನಾನು ಭಾಗವಹಿಸಿದ ಸುಂಕೇನಹಳ್ಳಿ ಸರ್ಕಾರಿ ಶಾಲೆಯ ವಾರ್ಷಿಕೋತ್ಸವ ಸಮಾರಂಭ. ಕಾರ್ಯಕ್ರಮವನ್ನು ಶಾಲೆಯ ಪಕ್ಕದಲ್ಲಿರುವ ಕೆ.ಹೆಚ್. ಕಲಾಸೌಧದಲ್ಲಿ ಏರ್ಪಡಿಸಿದ್ದರು ( ಕೆ.ಹೆಚ್. ಕಲಾಸೌಧದ ಬಗ್ಗೆ ನನ್ನ ಲೇಖನದ ಲಿಂಕ್.....https://www.blogger.com/blogger.g?blogID=169266169028192815#editor/target=post;postID=503227361699777314;onPublishedMenu=allposts;onClosedMenu=allposts;postNum=8;src=postname. ಅಲ್ಲಿದ್ದ ಸುಂದರ ವಾತಾವರಣ, ಮಕ್ಕಳ ವೇಷಭೂಷಣ, ಒಂದು ನಿಯೋಜಿತ ಗುಂಪು ಎಲ್ಲರನ್ನು ಸ್ವಾಗತಿಸುತ್ತಿದ್ದ ಪರಿ, ಉತ್ಸಾಹ ಎಲ್ಲ ನೋಡಿದಾಗ, ಇದು ಯಾವ ತರಹದ ಖಾಸಗಿ ಶಾಲೆಗೂ ಕಡಿಮೆಯೆನಿಸಲಿಲ್ಲ. ಇನ್ನು ಕಾರ್ಯಕ್ರಮ ಶುರು - ಚಂದನ್ ಮತ್ತು ಮೋನಿಕಾ - ನಿರೂಪಕರಾಗಿ ನಿರ್ವಹಿಸಿದ ರೀತಿ,ಅಧ್ಭುತವಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲೋಕಸಭಾ ಸದಸ್ಯ ಶ್ರೀ.ತೇಜಸ್ವಿ ಸೂರ್ಯ ಅವರು, ಸ್ವಯಂಪ್ರೇರಿತರಾಗಿ ಮೆಚ್ಚುಗೆ ಸೂಚಿಸಿ ಬಹುಮಾನವಿತ್ತರು. ಇವರು ಈ ಶಾಲೆಯಲ್ಲಿ ಓದಿದ ಮಕ್ಕಳು. ಇದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಲ್ಲಿರು...

ಶಾಲಾ ಮಕ್ಕಳ ಸಂಸತ್ತು ವತಿಯಿಂದ " ಶಿಕ್ಷಕರ ದಿನಾಚರಣೆ"

Image
ಶಾಲಾ ಮಕ್ಕಳ ಸಂಸತ್ತು ವತಿಯಿಂದ " ಶಿಕ್ಷಕರ ದಿನಾಚರಣೆ" ಇಂದು (28.09.2017) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಂಕೇನಹಳ್ಳಿ, ಬೆಂಗಳೂರು - 19, ಇಲ್ಲಿಯ ಮಕ್ಕಳು, ತಮ್ಮ ಶಾಲಾ ಮಕ್ಕಳ ಸಂಸತ್ತು ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು. ನನ್ನ ಸೌಭಾಗ್ಯ, ಇದರಲ್ಲಿ ಭಾಗವಹಿಸಲು ನನ್ನನ್ನೂ ಆಹ್ವಾನಿಸಿದ್ದರು. ಕಾರ್ಯಕ್ರಮವನ್ನು ಎಲ್ಲ ಮಕ್ಕಳೇ ನಿರ್ವಹಿಸಿದ ರೀತಿ ಹೆಮ್ಮೆಯೆನಿಸುತ್ತಿತ್ತು. ಅವರ ವಯಸ್ಸಿಗೂ ಮೀರಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ನಿರೂಪಕಿಯರು ಕಾರ್ಯಕ್ರಮವನ್ನು ನಡೆಸಿಕೊಟ್ಟ ಶೈಲಿ (ಪರಸ್ಪರ ಮಾತನಡುತ್ತಾ - ಕಾರ್ಯಕ್ರಮಕ್ಕೆ ಹೊಂದಿಸುತ್ತಾ) ವೃತ್ತಿಪರ ನಿರೂಪಕಿಯರಿಗೂ ಸರಿಸಮನಾಗಿತ್ತು. ಮಾಮೂಲಿನಂತೆ ಪ್ರಾರ್ಥನೆ, ಸ್ವಾಗತದ ನಂತರ, ಒಬ್ಬೊಬ್ಬ ವಿದ್ಯಾರ್ಥಿ ಒಬ್ಬ ಉಪಾಧ್ಯಾಯರ ಬಗ್ಗೆ ಮಾತನಾಡಿದರು. ಅವರದೇ ಆದ ನಿಷ್ಕಲ್ಮಷವಾದ, ಮುಗ್ಧ ಅಭಿಪ್ರಾಯಗಳು, ಸರಳ ಸುಂದರವಾಗಿದ್ದವು. ಎಲ್ಲ ಉಪಧ್ಯಾಯರುಗಳಿಗೆ ಉಡುಗೊರೆಗಳನ್ನೂ ಸಹ ಕೊಟ್ಟರು. ಆದರೆ ಇದನ್ನೆಲ್ಲಾ ಮಾಡಿದ ರೀತಿ ಮೆಚ್ಚುಗೆ ಸೂಸುವಂತಿತ್ತು. ನನ್ನ ಜೀವನದ ಮೊದಲ ಅನುಭವ - ಉಪಾಧ್ಯಾಯನಾಗಿ ಈ ಗೌರವ ಪಡೆದದ್ದು. ಆ ಕ್ಷಣ ನನ್ನೆಲ್ಲಾ ಗುರುಗಳಿಗೆ ಈ ಗೌರವವನ್ನು ಮನಸ್ಸಲ್ಲೇ ಸಮರ್ಪಿಸಿದೆ. ಇಂದಿನ ವಿಶೇಷ ಮತ್ತು ನನಗೂ ಇದು ಇಂದೇ ತಿಳಿದ ವಿಷಯ - ಭಾರತಾಂಬೆಯ ಮೊದಲ ಶಿಕ್ಷಕಿಯೆಂಬ ಗೌರವಕ್ಕೆ ಪಾತ್ರರಾದ ಶ್ರೀಮತಿ.ಸಾವಿತ್ರಿಬ...

"ಮಳೆ ಬಂತು ಮಳೆ ಕೊಡೆ ಹಿಡಿದು ನಡೆ"

"ಮಳೆ ಬಂತು ಮಳೆ ಕೊಡೆ ಹಿಡಿದು ನಡೆ" ಅಂತ ಮನಸ್ಸಿನಲ್ಲೇ ಹೇಳಿಕೊಂಡೆ. ಇವತ್ತು ಬೆಳಿಗ್ಗೆಯಿಂದ ಮಳೆ ಬರ್ತಾನೆ ಇದೆ. ಎಲ್ಲೂ ಆಚೆ ಹೋಗಲು ಬಿಡ್ತಾ ಇಲ್ಲ. ಸುಮ್ಮನೆ ಮಳೆ ಸುರಿಯುವುದನ್ನು ನೋಡ್ತಾ ಕುಳಿತೆ. ಮನಸ್ಸು ನನ್ನ ಹತೋಟಿ ಮೀರಿತು. ಗತಕಾಲಕ್ಕೆ ಜಾರಿತು. ಹಳ್ಳಿಯ ನಮ್ಮ ಮನೆ ಮಣ್ಣಿನ ಮಾಡಿನದು. ಹಾಗಾಗಿ ಜೋರು ಮಳೆ ಬಂದರೆ ಸೋರುತ್ತಿತ್ತು. ಮಳೆಗೆ ಮುಂಚಿನ ದಿನಗಳಲ್ಲಿ ಮಾಡು ಸರಿ ಮಾಡದಿದ್ದರೆ ಸೋರುವಿಕೆ ಇನ್ನೂ ಸ್ವಲ್ಪ ಜಾಸ್ತಿ. ಆ ಸಂಧರ್ಭಗಳಲ್ಲಿ ನೀರು ಸೋರುವಲ್ಲಿ ಒಂದು ಪಾತ್ರೆ ಇಟ್ಟು, ಅದು ತುಂಬಿದಾಗ ನೀರನ್ನು ಹೊರ ಚೆಲ್ಲುವುದು ಒಂದು ಉಪಾಯ. ಅಂದು ರಾತ್ರಿ ಜೋರು ಮಳೆ, ಸೋರಾಟ ಶುರು. ನಿದ್ದೆಯಿಂದ ಎಚ್ಚೆತ್ತ ನನಗೆ ಅಮ್ಮ ಪಡುತ್ತಿದ್ದ ಪಾಡು ನೋಡಿ ಸಹಾಯ ಮಾಡಲು ನಾನೂ ಪಾತ್ರೆ ತಂದು ಇಡಲು ಶುರು ಮಾಡಿದೆ. ಅದರಲ್ಲೂ ಆಟವಾಡುವ ಮೋಜು ನನಗೆ, ಪಾಪ ಅಮ್ಮನ ಒದ್ದಾಟ ಪೇಚಾಟ ಅಮ್ಮನಿಗೆ. ಮಳೆಗಾಲದ ಸಂಜೆ ಬಿಸಿ ಬಿಸಿ "ಬೆರಕೆ ಸೊಪ್ಪಿನ ಪಕೋಡ" - ಹಳ್ಳಿಯಲ್ಲಿ ಸಿಗುತ್ತಿದ್ದ ಬೇರೆ ಬೇರೆ ಸೊಪ್ಪುಗಳ ಮಿಶ್ರಣ - ಸೇರಿಸಿ ಮಾಡುತ್ತಿದ್ದದ್ದು, ತಿನ್ನುವ ಮಜ..ಬಾಯಲ್ಲಿ ಈಗಲೂ ನೀರೂರತ್ತೆ. ನಮ್ಮಲ್ಲೊಂದು ನೆಲಭಾವಿ - ಅಂದರೆ ಸುತ್ತಲೂ ಕಟ್ಟೆಯಿಲ್ಲ- ಮಳೆಗಾಲದಲ್ಲಿ ಹತ್ತಿರದಲ್ಲಿದ್ದ ಕೆರೆಯ ಪ್ರಭಾವದಿಂದ ತುಂಬಿ ತುಳುಕುತ್ತಿತ್ತು. ನೀರನ್ನು ನಾನೇ ಬಗ್ಗಿ ತುಂಬಿಕೊಳ್ಳುವಷ್ಟು ಮೇಲೆ. ಆದರೆ ಅದಕ್ಕೆ ಯಾವಾಗಲೂ ...

ಜೀವನೋತ್ಸಾಹ

Image
ಕಿಟ್ಟಿಮೇಷ್ಟ್ರು ಅವರು ತೆಗೆದ ಫೋಟೋ ಜೀವನೋತ್ಸಾಹ ಬಹಳಷ್ಟು ದಿನಗಳಿಂದ ನನ್ನ ಬೆಳಗಿನ ವಾಯುವಿಹಾರಕ್ಕೆ ಹೋಗುವುದು "ತಿಮ್ಮೇಶ ಪ್ರಭು ಉದ್ಯಾನವನ". ಇದು ಇತಿಹಾಸ ಪ್ರಸಿದ್ಢ ಗವಿ ಗಂಗಾಧರೇಶ್ವರ ದೇವಸ್ಥಾನದ ಬದಿಯಲ್ಲಿದೆ. ಇಲ್ಲಿ ನಮ್ಮದೇ ಆದ ಸ್ನೇಹಿತರ ಗುಂಪು ಇದ್ದರೂ ನಮ್ಮ ಮಾತು ಕಥೆ ಬಹಳಷ್ಟು ಮಂದಿಯ ಜೊತೆ ಇರುತ್ತದೆ. ನಾವುಗಳು ಜೊತೆಯಲ್ಲಿ ಕಳೆಯುವ ಹೊತ್ತು ನಿಜಕ್ಕೂ ಚೇತೋಹಾರಿ. ಮಾತನಾಡುವ ವಿಷಯಗಳಿಗೆ ಯಾವುದೇ ಕಟ್ಟುಪಾಡುಗಳಿಲ್ಲ. ಜಗತ್ತಿನ ಯಾವುದೇ ವಿಷಯವಾದರೂ ಸರಿ ಅದು ಬಹು ವಿಧ ನೋಟಗಳಿಂದ ವಿಶ್ಲೇಸಿಲ್ಪಡುತ್ತದೆ. (ಕೆಲವು ಸಲ ಅದು ಕಾಡು ಹರಟೆಯಲ್ಲಿ / ತಲೆಹರಟೆ ಯಲ್ಲಿ ಕೊನೆಗೊಳ್ಳಬಹುದು). ಇದು ಒಂದು ಮುಖವಾದರೆ, ಅಲ್ಲಿನ ವಾಯುವಿಹಾರಿಗಳು "ಸ್ನೇಹರಂಗ" ದ ಹೆಸರಿನಲ್ಲಿ ಒಗ್ಗೂಡಿ ಪ್ರತಿ ಸೋಮವಾರ ಭಜನೆ, ತಿಂಗಳಿಗೊಮ್ಮೆ, ಎರಡನೆಯ ಮಂಗಳವಾರ "ಕಾಫಿ ಡೇ" ಯಲ್ಲಿ ಇಲ್ಲಿರುವ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಚರಿಸುತ್ತೇವೆ. ವರ್ಷಕ್ಕೊಮ್ಮೆ "ಪ್ರತಿಭಾ ಪುರಸ್ಕಾರ" ದಲ್ಲಿ 10 ನೇ ತರಗತಿ ಮತ್ತು ಪಿ.ಯು. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿಧ್ಯಾರ್ಥಿಗಳಿಗೆ ಸನ್ಮಾನ, ಮತ್ತು "ಕನ್ನಡ ರಾಜ್ಯೋತ್ಸವವನ್ನು ಆಟೊಟಗಳೊಂದಿಗೆ ಸಂಭ್ರಮದಿಂದ ಆಚರಿಸುತ್ತೇವೆ. ಈ ಎಲ್ಲ ಕಾರ್ಯಕ್ರಮಗಳೂ ಹಿರಿಯರಾದ ನಮ್ಮ ಪ್ರೀತಿಯ "ಕಿಟ್ಟಿ ಮೇಷ್ಟ್ರ" ಮುಂದಾಳ...

ಕಾಯುವ ದೈವ ಯಾವ ರೂಪದಲ್ಲಿ ಬಂದ?

Image
ಕಾಯುವ ದೈವ ಯಾವ ರೂಪದಲ್ಲಿ ಬಂದ? ನೆನ್ನೆ ಮಳೆಯ ಆರ್ಭಟ ಎಷ್ಟಿತ್ತೆಂದರೆ - ನನ್ನ ನೆನಪಿನಲ್ಲಿರುವಂತೆ ಇಷ್ಟು ಭಯಾನಕ ಪರಿಸ್ಥಿತಿಯನ್ನು ನಾನು ಕಣ್ಣಾರೆ ಕಂಡಿರಲಿಲ್ಲ. ಕಿವಿಯಿಂದ ಕೇಳಿದ್ದೆ ಮತ್ತು ವಾರ್ತೆಗಳ ಮೂಲಕ ತಿಳಿದಿದ್ದೆ. ಸಂಜೆ ಸುಮಾರು 7.30 ರ ಸಮಯ. ಮನೆಯಕಡೆ ಬರುತ್ತಿದ್ದೆ. ಜೊತೆಯಲ್ಲಿದ್ದಳು ನನ್ನ ಮಡದಿ. ಮಳೆಯ ಹನಿ ಶುರುವಾಯಿತು. ಕೆಲವೇ ಕ್ಷಣಗಳಲ್ಲಿ ಮಳೆಯ ಆರ್ಭಟ ಎಷ್ಟು ಹೆಚ್ಚಾಯಿತೆಂದರೆ ನನಗೆ ಮುಂದಿನ ರಸ್ತೆ ಕಾಣದಷ್ಟು. ನನಗೆ ಕಾರನ್ನು ಓಡಿಸಲು ಸಾಧ್ಯವಾಗಲಿಲ್ಲ. ಹೇಗೋ ಕಷ್ಟಪಟ್ಟು ಮನೆಯ ಹತ್ತಿರ ಬಂದು ಕಾರನ್ನು ನಿಲ್ಲಿಸಿ ಹೊರಗೆ ಬರಲಾರದೆ ಯೋಚಿಸುತ್ತಿದ್ದೆವು. ಸುತ್ತಲೂ ಕಾರ್ಗತ್ತಲು. ಗುಡುಗು ಮಿಂಚಿನ ಆರ್ಭಟ. ಜೊತೆಯಲ್ಲಿ ನಮ್ಮ ಹಿಂದೆ ಏನೋ ಬಿದ್ದ ಸದ್ದು. ಹೇಗಾದರಾಗಲಿ ಮನೆ ಒಳಗೆ ಹೋಗೋಣವೆಂದು ನಿರ್ಧರಿಸಿ, ಓಡಿ ಮನೆಯೊಳಗೆ ಸೇರಿ ದೀಪ ಬೆಳಗಿಸಿ ರಸ್ತೆಯ ಕಡೆ ನೋಡಿದಾಗ ನಮಗೆ ಒಂದು ತರಹ ಆಘಾತ. ನಮ್ಮ ಕಾರಿನ ಸ್ವಲ್ಪ ಹಿಂದೆ ಪಕ್ಕದ ಮರದ ಒಂದು ದೊಡ್ಡ ಕೊಂಬೆ ಮುರಿದು ಬಿದ್ದಿದೆ. ಒಂದು ಕೊನೆ ರಸ್ತೆಯಮೇಲೆ ಇನ್ನೊಂದು ಕೊನೆ ಎಲೆಕ್ಟ್ರಿಕ್ ತಂತಿಯ ಮೇಲೆ. ಆ ಕೊಂಬೆ ತಂತಿಯ ಮೇಲೆ ಬೀಳದಿದ್ದರೆ, ನಮ್ಮ ಕಾರು ಕೊಂಬೆಯ ಕೆಳಗೆ ಸಿಕ್ಕಿಹಾಕಿಕೊಳ್ಳುತ್ತಿತ್ತು. ನಮ್ಮ ಪರಿಸ್ಥಿತಿ ಏನಾಗುತ್ತಿತ್ತೋ ಊಹೆಗೂ ನಿಲುಕದು. ಕಾಯುವ ದೈವ ಯಾವ ರೂಪದಲ್ಲಿ ಬರುತ್ತದೋ ಬಲ್ಲವರಾರು. ನೆನ್ನೆ ನಮ್ಮನ್ನು ಕಾಯ್ದ ದೈವ ಎಲೆಕ್ಟ್ರಿಕ್ ತಂತಿ...

ಶಿಕ್ಷಕರ ದಿನಾಚರಣೆ:

ಶಿಕ್ಷಕರ ದಿನಾಚರಣೆ: ಇಂದು 05.09.2017 ಶಿಕ್ಷಕರ ದಿನಾಚರಣೆ: ಸುಂಕೇನಹಳ್ಳಿ ಶಾಲೆಯ ಏಳನೆಯ ತರಗತಿಯ ಮಕ್ಕಳು ಇಂದು ನನ್ನನ್ನು ಆದರಿಸಿದ ಪರಿ - ಅಬ್ಬಾ ಹೃದಯ ತುಂಬಿ ಬಂತು. ನಾನು ಅವರೊಡನೆ ಒಡನಾಡುವುದು ವಾರಕ್ಕೊಮ್ಮೆ ಮಂಗಳವಾರ ಮಾತ್ರ. ಅದೂ ಕೇವಲ 45 ನಿಮಿಷಗಳ ಕಾಲ. ಆದರೆ ಅವರ ಪ್ರೀತಿಯ ಕೊಡುಗೆ ವರ್ಷ ಪೂರ್ತಿಗೆ ಸಾಕಾಗುವಷ್ಟು. ಇನ್ನು ಯಾವಾಗಲೂ ಅವರೊಡನೆ ಕಾಲ ಕಳೆಯುವ ಶಿಕ್ಷಕರ ಖುಶಿ ಅಪರಿಮಿತ. ಉಪಾಧ್ಯಾಯ ವೃತ್ತಿ - ಅದರಲ್ಲೂ ಪ್ರೌಡಶಾಲೆಯ ವರೆಗೆ- ಬಹಳ ಭಾವನಾತ್ಮಕವಾದದ್ದು. ಅಲ್ಲಿನ ಮಕ್ಕಳಲ್ಲಿ ಇನ್ನೂ ಮುಗ್ಢತೆಯಿರುತ್ತದೆ, ಮತ್ತು ಅವರದು ನಿಷ್ಕಲ್ಮಷ ಪ್ರೀತಿ. ನನ್ನ ನೆನಪು ನನ್ನ ಬಾಲ್ಯಕ್ಕೆ ಓಡುತ್ತಿದೆ. ನನ್ನ ಹಳ್ಳಿಯ ಶಾಲೆಯಲ್ಲಿ ನನ್ನ ಮೇಲೆ ಪ್ರಭಾವ ಬೀರಿದ ಮೇಷ್ಟ್ರುಗಳು : ಮೊಟ್ಟ ಮೊದಲಿಗೆ ನನಗೆ ಅ ಆ ಹೇಳಿಕೊಟ್ಟ (ಶ್ರೀನಿವಾಸಯ್ಯ ?) ಮೇಷ್ಟ್ರು. ನನಗಾಗ 5 ವರ್ಷಕ್ಕೂ ಕಡಿಮೆ. ಅಪ್ಪ ಶಾಲೆಗೆ ಬಿಟ್ಟಿದ್ದು ನೆನಪು. ನನಗೆ ಭಯ. ಗೋಡೆಯ ಪಕ್ಕದಲ್ಲಿ ಕೂಡಿಸಿ ಹುಣಿಸೆ ಬೀಜಗಳನ್ನು ಕೊಟ್ಟು ನೆಲದಮೇಲೆ ಅ ಮತ್ತು ಆ ಅಕ್ಷರಗಳನ್ನು ಬರೆದು ಅದರಮೇಲೆ ಹುಣಿಸೆ ಬೀಜಗಳನ್ನು ಜೋಡಿಸಲು ಹೇಳಿದ್ದು. ನನಗೆ ಈಗಲೂ ಕಣ್ಣಿಗೆ ಕಟ್ಟಿದಂತಿರುವುದು ಅವರ ವೇಷ ಭೂಷ. ಬಿಳಿಯ ಕಚ್ಚೆ ಪಂಚೆ, ಕಪ್ಪು ಬಣ್ಣದ ಕೋಟು ಮತ್ತು ಟೋಪಿ, ಮತ್ತು ನನ್ನೆದುರಿಗೆ ಬಗ್ಗಿ ನನಗೆ ಸರಿ ಕಾಣುವ ಹಾಗೆ ಅಕ್ಷರಗಳನ್ನು ಬರೆದದ್ದು. ಮುನಿಶಾಮಯ್ಯ ಮೇಷ್ಟ್ರು ಅಂದ್ರ...

ಪರಿಸರ - ಗಣಪ:

  ಪರಿಸರ - ಗಣಪ: ನಮ್ಮ ಸುತ್ತಲಿನ ಪರಿಸರದ ಬಗೆಗಿನ ಕಾಳಜಿ ಈಗ ಬಹಳ ಬೇಕಿದೆ. ಯಾಂತ್ರೀಕರಣಕ್ಕೂ, ಪರಿಸರಕ್ಕೂ ಉತ್ತರ ಧೃವ, ದಕ್ಷಿಣ ಧೃವ ಸಂಭಂಧ. ಹಾಗೇ ಮನುಷ್ಯನ ದುರಾಸೆಗೂ ವಿಲೋಮ ಸಂಭಂಧ. ಪುರಾತನ ಕಾಲದಿಂದಲೂ ನಮ್ಮ ಹಿರಿಯರ ಜೀವನಶೈಲಿ ಪರಿಸರಕ್ಕೆ ಹೊಂದಿಕೊಂಡು ಅದಕ್ಕೆ ಪೂರಕವಾಗಿರುತ್ತಿತ್ತು. ತನ್ನೆಲ್ಲ ಬೇಕುಗಳಿಗೆ ಮನುಷ್ಯ ಪರಿಸರದಮೇಲೆ ಅವಲಂಬಿಸಿದ್ದರೂ, ತನ್ನ ಬೇಕುಗಳನ್ನು ಮಿತಿಯಲ್ಲಿಟ್ಟಿರುತ್ತಿದ್ದ. ಪ್ರಕೃತಿ ತನ್ನದೆಲ್ಲವನ್ನೂ ಜೀವ ಸಂಕುಲಕ್ಕೆ ಧಾರೆಯೆರೆದಿದೆ. ಮೂಕ ಪ್ರಾಣಿಗಳು ಸಹ ತಮ್ಮ ಜೀವನವನ್ನು ಪ್ರಕೃತಿಯಮೇಲೆ ಅವಲಂಬಿಸಿಕೊಂಡಿವೆ. ಆದರೆ ಅವುಗಳು ತಮ್ಮ ಹೊಟ್ಟೆ ತುಂಬಿದನಂತರ ಅವುಗಳ ಬೇಕುಗಳಿಗೆ (brake) ಕಡಿವಾಣ ಹಾಕುತ್ತವೆ. ಮನುಷ್ಯ ಪ್ರಾಣಿ ಮಾತ್ರ ಇದಕ್ಕೆ ಹೊರತು. ಅವನ ಆಸೆಗೆ (ದುರಾಸೆಗೆ) ಮಿತಿಯೇ ಇಲ್ಲ. ಹಾಗಾಗಿ ನೆಲ, ಜಲ, ಗಾಳಿ, ಮರಗಿಡಗಳು, ಖನಿಜಸಂಪತ್ತು ಎಲ್ಲದರ ಮೇಲೂ ತನ್ನ ದುರಾಸೆಯ ಹಸ್ತವನ್ನು ಚಾಚಿದ್ದಾನೆ. ಹಾಗಾಗಿ ಇಂದು ಪರಿಸರ ವಿನಾಶದ ಅಂಚಿಗೆ ಬಂದು ನಿಂತಿದೆ. ಇದು ಎಲ್ಲರಿಗೂ ತಿಳಿದ ವಿಷಯ. ಗಣೇಶನ ಹಬ್ಬ ಬಂದಿದೆ. ಇದು ನಮ್ಮೆಲ್ಲರಿಗೂ ಸಡಗರ ನಿಜ. ಈ ಸಡಗರದ ಜೊತೆ ಜೊತೆಗೆ ನಮ್ಮ ಪರಿಸರದ ಬಗ್ಗೆ ಯೋಚಿಸಬೇಕಾದ್ದು ನಮ್ಮ ಕರ್ತವ್ಯ. ಈ ವಿಷಯ ಚರ್ವಿತ ಚರ್ವಣವಾದರೂ ಸಹ ಮತ್ತೊಮ್ಮೆ ನೆನಸಿಕೊಳ್ಳುವುದು ಸಮಂಜಸ ಎಂದು ನನ್ನ ನಂಬಿಕೆ. ಮೊದಲು ಮನೆ. ಮನೆಗೆ ತರುವ ಗಣಪ ಮತ್ತು ಗೌರ...

ಕೆಂಗಲ್ ಹನುಮಂತಯ್ಯ ಕಲಾಸೌಧ

ಕೆಂಗಲ್ ಹನುಮಂತಯ್ಯ ಕಲಾಸೌಧ ಹೆಸರು ಹೊಸದೋ? ಅಥವಾ ಎಲ್ಲೋ ಕೇಳಿದ ನೆನಪೇ? ಇದೇ ನಮ್ಮ ಕನ್ನಡಿಗರ ದೌರ್ಭಾಗ್ಯ. ಈಗ ಹೇಳಿ "ಕೆ.ಹೆಚ್. ಕಲಾಸೌಧ" ಗೊತ್ತಾ? ಹೌದು ನಿಮ್ಮ ಯೋಚನೆ ಸರಿಯಾಗಿದೆ. ಇದು ಹನುಮಂತನಗರದ ರಾಮಾಂಜನೇಯ ಗುಡ್ಡದ ಒಂದು ಭಾಗದಲ್ಲಿದೆ. "ಕೆಂಗಲ್ ಹನುಮಂತಯ್ಯ ಕಲಾಸೌಧ" ಅಂತ ಸುಂದರವಾದ ಕನ್ನಡದ ಹೆಸರನ್ನ ಕುಲಗೆಡಿಸಿ "ಕೆ.ಹೆಚ್. ಕಲಾಸೌಧ" ಮಾಡಿಬಿಟ್ಟರು. ಇದು ಮಾಡಿದ್ದು ಯಾರು ಗೊತ್ತೇ... ಕನ್ನಡದ ಕಂದಮ್ಮಗಳೆಂದು ಹೊಗಳಿಕೊಳ್ಳುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು (ಅದೇ ರೀ.. ಬಿ.ಬಿ.ಎಮ್.ಪಿ). ಇದು ನಡೆದಿರೊದು ನಮ್ಮ ಕನ್ನಡದ ಆಗು ಹೋಗು ನೊಡಿಕೊಳ್ಳುವ ಸರ್ಕಾರಿ ಕೃಪಾಪೋಷಿತ ಕನ್ನಡ ಕಾವಲು ಸಮಿತಿಯ ಮೂಗಿನ ಕೆಳಗೆ. ಇದಲ್ಲದೇ ಕನ್ನಡಕ್ಕಾಗಿ ಪ್ರಾಣವನ್ನು ಕೊಡಲು ತಯಾರಿರುವ ಕಟ್ಟಾಳುಗಳ ಕನ್ನಡ ಕೋಟೆಯಲ್ಲೇ. ಇದು ಹೆಸರಿನ ಕಥೆ ಮತ್ತು ವ್ಯಥೆ. ಇದು ಇಲ್ಲಿಗೆ ಮುಗಿಯದ ಕಥೆ (ವ್ಯಥೆ ಕೂಡ). ಸದಾ ಚಟುವಟಿಕೆ ಇಂದ ಇರುತ್ತಿದ್ದ ಈ ಜಾಗ ಈಗ ಬಿಕೋ ಎನ್ನುತ್ತಿದೆ. ಈ ಭಾಗದ ಕಲಾರಸಿಕರ ತಾಣವಾಗಿದ್ದ ಈ ಜಾಗವನ್ನು ಕೊಂಪೆಯಾಗಿ ಮಾಡುವ ಕಾರ್ಯಕ್ರಮವೇ ಸಿಧ್ಧಗೊಂಡಿದೆಯೇನೋ ಎನ್ನುವಂತೆ ಇದನ್ನು ಮುಚ್ಚಲಾಗಿದೆ. ಕನ್ನಡದ ಬೆಳವಣಿಗೆಗೆ ಚಿಂತನೆ ಮಾಡುವ ಎಲ್ಲರೂ ಯೋಚಿಸಬೇಕಾದ ವಿಷಯ. ಇದನ್ನು ಹೀಗೇ ಮುಚ್ಚಲು ಬಿಡಬೇಕೆ? ಯಾವುದೇ ವಸ್ತು ಉಪಯೋಗಿಸದೆ ಬಿಟ್ಟಾಗ ಅದು ಬಹಳ ಬೇಗ ಹಾಳಾಗುತ್ತದೆ. ...

ಸ್ವಾತಂತ್ಯ ದಿನೋತ್ಸವ:

ಸ್ವಾತಂತ್ಯ ದಿನೋತ್ಸವ: ಸ್ವಾತಂತ್ಯ ದಿನೋತ್ಸವ ಅಂದ ಕೂಡಲೇ ನೆನಪಿಗೆ ಬರುವುದು ದಲಿತಕವಿ ಎಂದೇ ಖ್ಯಾತರಾದ ಶ್ರೀ ಸಿದ್ದಲಿಂಗಯ್ಯನವರು. ನಾಟಕದ ಹೆಸರು ಜ್ಞಾಪಕವಿಲ್ಲ. ಆದರೆ ಅಂದು ಅವರು ಕಲಾಕ್ಷೇತ್ರದ ಬಾಲ್ಕನಿಯಿಂದ ತಮಟೆ ಬಾರಿಸಿಕೊಂಡು ದೊಡ್ಡ ಧ್ವನಿಯಲ್ಲಿ " ಯಾರಿಗೆ ಸಿಕ್ಕಿದೆ ಎಲ್ಲಿ ಸಿಕ್ಕಿದೆ ನಲವತ್ತೇಳರ ಸ್ವಾತಂತ್ಯ" ಎಂದು ಹೇಳಿಕೊಂಡು ರಂಗಕ್ಕೆ ಪ್ರವೇಶಮಾಡಿದ್ದು ನೆನಪಲ್ಲಿ ಹಸಿರಾಗಿದೆ. ದೆಹಲಿಯ ಕೆಂಪು ಕೋಟೆ ಮತ್ತು ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ಮೂಡಿಬರುವ ಕಾರ್ಯಕ್ರಮಗಳನ್ನು ದೂರದರ್ಶನದಲ್ಲಿ ನೋಡಿದ್ದಿದೆ. ಬಾಲ್ಯದ ಸ್ವಾತಂತ್ಯ ದಿನೋತ್ಸವದಲ್ಲಿ ನಾವು ಶಾಲೆಯ ಮಕ್ಕಳೆಲ್ಲಾ ಗಾಂಧೀಜಿ ಫೋಟೋ ಮತ್ತು ಬಾವುಟ ಎತ್ತಿಕೊಂಡು ನಮ್ಮೂರ ಬೀದಿಗಳಲ್ಲಿ ಮೆರವಣಿಗೆ ಮಾಡುವುದು. ಮೆರವಣಿಗೆ ನಮ್ಮ ಮನೆಯ ಹತ್ತಿರ ಬಂದಾಗ ನಾನು ಬಾವುಟವನ್ನು ಎತ್ತಿಕೊಂಡಿರುವುದನ್ನು ನಮ್ಮಮ್ಮ ಹೆಮ್ಮೆಯಿಂದ ನೋಡಿ ಸಂತೋಷ ಪಡೋಳು. ಮೆರವಣಿಗೆ ಮುಗಿದಮೇಲೆ ಯಾರೋ ದೊಡ್ಡವರು ಭಾಷಣ ಮಾಡೋರು. ನಮಗೆಲ್ಲ ಅದು ಏನೂ ಅರ್ಥ ಆಗ್ತಿರಲಿಲ್ಲ. ನಮ್ಮೆಲ್ಲರ ಗಮನ ಅವತ್ತು ಕೊಡುವ ಸಿಹಿಯ ಮೇಲೆ. ಜನಗಣಮನ ಹೇಳಿದ್ದು ಕೊನೆಯಲ್ಲಿ ಸಿಹಿ ಬೂಂದಿ ತಿಂದಿದ್ದು ಮಾತ್ರ ನೆನಪಿನಲ್ಲಿದೆ. ಈಗ್ಗೆ ಸುಮಾರು 12 ವರ್ಷಗಳಿಂದ ನನ್ನ ಸ್ವಾತಂತ್ಯ ದಿನಾಚರಣೆಯ ನಂಟು ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ , ಹುಂಗೇನಹಳ್ಳಿ, ಸರ್ಕಾರಿ ಪ್ರಾಥಮಿಕ ಶಾಲೆಯೊಂದಿಗೆ ಬ...

ಕೃಷ್ಣ ಜನ್ಮಾಷ್ಟಮಿ

ಕೃಷ್ಣ ಜನ್ಮಾಷ್ಟಮಿ.... ಬಹಳಷ್ಟು ಸಂಭ್ರಮ ಒಬ್ಬೊಬ್ಬರ ಆಚರಣೆ ಒಂದೊಂದು ತರಹ. ಕೆಲವರಿಗೆ ಸಂತೋಷ ಸಂಭ್ರಮಕ್ಕೆ ಬೇರೆಲ್ಲರಿಗೂ ಸಿಹಿ ಹಂಚಿ ತಾವೂ ತಿನ್ನುವ ಮನಸ್ಸು. ಇನ್ನು ಕೆಲವರು ಸಂತೋಷದ ಭರದಲ್ಲಿ ತಿನ್ನುವುದನ್ನೇ ಮರೆತಿದ್ದಾರೆ. ಇವರು ಉಪವಾಸ ಹಾಗಾಗಿ ಇವರನ್ನು ನಂಬಿದವರಿಗೆಲ್ಲ ಉಪವಾಸ. ನಾವು ಯಾವುದನ್ನು ಬೇಕಾದರೂ ಆರಿಸಿಕೊಳ್ಳಬಹುದು. ನಾನು ವೈಯುಕ್ತಿಕವಾಗಿ ಮೊದಲ ಗುಂಪಿನಲ್ಲಿ ಗುರುತಿಸಿಕೊಳ್ಳುವವನು. ಕೃಷ್ಣನನ್ನು ಬಹುರೂಪಿ ಎನ್ನುತ್ತಾರೆ. ವಸ್ತುಸ್ಥಿತಿ ಏನೇ ಇರಲಿ ರಾಧೆ, ರುಕ್ಮಿಣಿ, ಸತ್ಯಭಾಮೆ, ಮೀರಾ, ಗೋಪಿಕೆಯರು, ಇನ್ನು ಬಾಲ್ಯದ ಗೆಳೆಯ ಸುಧಾಮ, ದ್ರೌಪದಿ ಹೀಗೆ ಎಲ್ಲರೂ ಕೃಷ್ಣನನ್ನು ಅವರವರ ದೃಷ್ಟಿಯಲ್ಲಿ ಕಂಡವರೇ. ನನ್ನ ತಿಳುವಳಿಕೆಯ ಮಟ್ಟದಲ್ಲಿ ಎಲ್ಲರೂ ಕೃಷ್ಣನಿಂದ ಪಡೆಯಲು ಬಯಸಿದವರೆ (ಏನಾದರಿರಲಿ). ಇವರಲ್ಲಿ ಸುಧಾಮ ಮಾತ್ರ ವಿಶಿಷ್ಟ ರೀತಿಯಲ್ಲಿ ಕಾಣುತ್ತಾನೆ. ತನ್ನ ಹೆಂಡತಿಯ ಆಗ್ರಹದ ಮೇರೆಗೆ ಕೃಷ್ಣನನ್ನು ಭೇಟಿ ಮಾಡಲು ಬರುವುದು ಕೇಳುವುದಕ್ಕಾಗಿಯೆ, ಆದರೆ ಅವನು ಬರುವಾಗ ತಾನು ಕೃಷ್ಣನಿಗೆ ಏನು ಕೊಡಬೇಕು ಎಂದು ಯೋಚಿಸುತ್ತಾನೆ. ಕಡೆಗೆ ಬಡತನದ ತನ್ನ ಮನೆಯಲ್ಲಿದ್ದ ಒಂದು ಹಿಡಿ ಅವಲಕ್ಕಿಯನ್ನು ಗಂಟು ಮಾಡಿ ಕೃಷ್ಣನಿಗಾಗಿ ಪ್ರೀತಿಯಿಂದ ತರುತ್ತಾನೆ. ಈ ಭಾವ ನನಗೆ ತುಂಬಾ ಪ್ರಿಯವಾಗಿದ್ದು. ಹಾಗಾಗಿ ನನಗೆ ಸುಧಾಮನ ಬಗ್ಗೆ ವಿಶೇಷ ಅಭಿಮಾನ. ಹೀಗೆ ತಮ್ಮಲ್ಲಿಲ್ಲದಿದ್ದರೂ ಬೇರೆಯವರಿಗೆ ಕೊಡುವ ಮಹಾನುಭಾವರು...