ಇನ್ನೊಂದು ಕೊಂಡಿ ಕಳಚಿತು...
![]() |
ಡಿ.ಸಿ.ಚಂದ್ರಚೂಡ ರಾವ್ |
ಹುಟ್ಟಿದವರು ಸಾಯಲೇಬೇಕು ಎನ್ನುವ ಮಾತು ಸಹಜವಾದರೂ ಕ್ಲೀಷೆ ಏನೋ ಅನಿಸುತ್ತೆ. ನಮ್ಮ ಆತ್ಮೀಯರ ಸಾವು ಹಾಗೂ ಆ ಸಂದರ್ಭದಲ್ಲಿ ಸಾಮಾನ್ಯವಾಗಿ ಎಲ್ಲರೂ ಆಡುವ ಸಾಂತ್ವನದ ಮಾತು, ನೆನ್ನೆ ನನ್ನ ದೊಡ್ಡಣ್ಣ- ಚೂಡಣ್ಣ ನಮ್ಮನ್ನಗಲಿದ ದಿನವೂ ಕೇಳಿ ಬಂತು.
ನಾವು ಏಳು ಜನ ಅಣ್ಣ ತಮ್ಮಂದಿರು ಅಕ್ಕತಂಗಿಯರ ಗುಂಪಿನಿಂದ ನನ್ನಕ್ಕ ಸತ್ಯಲಕ್ಷಮ್ಮ ಈಗಾಗಲೇ ನಮ್ಮಿಂದ ದೂರವಾಗಿದ್ದಳು . ಈಗ ನನ್ನಣ್ಣನ ಸಾವಿನಿಂದ ನಮ್ಮ ಏಳು ಜನದ ಕೊಂಡಿಯಲ್ಲಿ ಮತ್ತೊಂದು ಕೊಂಡಿ ಕಳಚಿದಂತಾಯಿತು.
ಚೂಡಣ್ಣ ನನ್ನ ಚಿಕ್ಕಂದಿನಿಂದಲೂ ಒಂದು ಬಗೆಯ ಮಾರ್ಗದರ್ಶಿ. ನನ್ನ ಹೆಸರನ್ನು ಇಂಗ್ಲಿಷ್ ನಲ್ಲಿ ಬರೆಯಲು ಹೇಳಿಕೊಟ್ಟವನು. ನಾನು ಹೈ ಸ್ಕೂಲ್ ಸೇರಲು ಬೆಂಗಳೂರಿಗೆ ಬಂದಾಗ ನನ್ನನ್ನು ರಾಷ್ಟ್ರೀಯ ವಿದ್ಯಾಲಯಕ್ಕೆ ಕರೆದುಕೊಂಡು ಹೋಗಿ ಸೇರಿಸಿದವನು. ಲಾಲ್ ಬಾಗ್ ತೋರಿಸಿದವನು.
ನಮ್ಮೂರು ದೊಡ್ಡಜಾಲಕ್ಕೆ ಸೈಕಲ್ ನಲ್ಲಿ ಹೋಗಲು ಸಮ್ಮತಿಸಿ ಹೋಗುವ ದಾರಿಯನ್ನು ಬರೆದುಕೊಟ್ಟು ಪ್ರೋತ್ಸಾಹಿಸಿದವನು.
ಹಳ್ಳಿಯಲ್ಲಿದ್ದಾಗ ದೀಪಾವಳಿಗೆ ಪಟಾಕಿ ತಂದುಕೊಟ್ಟವನು. ಹೈಸ್ಕೂಲ್ ಹುಡುಗನಿದ್ದಾಗಿನಿಂದಲೂ ಯಾವುದೇ ಫಾರಂ ತುಂಬಿಸುವಾಗ ನನಗೇ ತುಂಬಲು ಹೇಳಿ ಪ್ರೋತ್ಸಾಹಿಸಿದವನು. ನಾನು ನೋಡಿದ ಮೊದಲ ಹಿಂದಿ ಚಿತ್ರ ಕಾಲಾಬಜಾರ್.. ಅಲಂಕಾರ್ ಸಿನಿಮಾ ಥಿಯೇಟರ್ ನಲ್ಲಿ ತೋರಿಸಿದವನು , ಹೀಗೇ ಇನ್ನೂ ಅನೇಕ ರೀತಿಯಲ್ಲಿ ಹುರಿದುಂಬಿಸಿದವನು...
ಏಳು ಗಂಟೆಗೆಲ್ಲ ಮಲಗುತ್ತೇನೆಂದು ಅಪ್ಪನಿಗೆ ಹೇಳಿ ಬೈಸಿದವನು... ಕೈಯಲ್ಲಿ ಪುಸ್ತಕವನ್ನು ಇಟ್ಟುಕೊಂಡು ನಿದ್ದೆ ಮಾಡುತ್ತಿದ್ದಾಗ ಪುಸ್ತಕವನ್ನು ಎತ್ತಿಕೊಂಡು ಬಚ್ಚಿಟ್ಟವನು...ನೆನಪುಗಳ ಮೆರವಣಿಗೆಯ ಓಟ ನನ್ನ ಮನಸ್ಸಿನಲ್ಲಿ...
ಇಷ್ಟೆಲ್ಲ ಇದ್ದರೂ ನನಗೆ ಒಂದು ಭಯ ಮಾತ್ರ ಇಟ್ಟವನು..
ಇನ್ನು ನನ್ನದೇ ಜೀವನ ಪ್ರಾರಂಭಿಸಿದಾಗಲೂ ಸಹ ಕೆಲ ಸಂದರ್ಭಗಳಲ್ಲಿ ಪಾತ್ರವಹಿಸಿದವನು. ನಾನು ನನ್ನ ಮಡದಿ ವಿಜಯ.. ನಮ್ಮ ಮನೆಯ ಎಲ್ಲ ಕಾರ್ಯಗಳಲ್ಲೂ ಚೂಡಣ್ಣ ಮತ್ತು ಅತ್ತಿಗೆಯನ್ನು ಮುಂದಿಟ್ಟುಕೊಂಡು ಅವರ ಹಿಂದೆ ಸಾಗಿದವರು. ನನ್ನ ಮಗಳ ಮದುವೆಯ ಸಮಯದಲ್ಲಿ ನಮಗೆ ಬೆನ್ನೆಲುಬಾಗಿ ನಿಂತವನು... ಹೀಗೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದ್ದವನು....
ಚಾಮುಂಡಿ ಬೆಟ್ಟದ ತಪ್ಪಲಿನ ಸ್ಮಶಾನದಲ್ಲಿ... ನನ್ನಪ್ಪನನ್ನು ಚಿತೆಗೇರಿಸಿದ ಪಕ್ಕದಲ್ಲಿ ಚೂಡಣ್ಣನನ್ನೂ ಅಗ್ನಿ ಗರ್ಪಿಸಿ ಬಂದಾಗ ನನ್ನಪ್ಪನನ್ನು ಕಳೆದುಕೊಂಡಷ್ಟೇ ನೋವಾಯಿತು.
ಮತ್ತದೇ ಕ್ಲೀಷೆಯ ಸಾಲುಗಳು... ಅಗಲಿಕೆ ಅನಿವಾರ್ಯ.... ಇದೇ ಜೀವನ ಅಲ್ಲವೇ?
ಚೂಡಣ್ಣ ಇಗೋ ಇದು ನಿನಗೆ ಅಶ್ರು ತರ್ಪಣ...
Sorry. ಯಾವತ್ತು ಗೊತ್ತಾಗಲಿಲ್ಲ. ಅವರ ಆತ್ಮ ಕ್ಕೆ ಶಾಂತಿ ಸಿಗಲಿ ಎಂದು ಕೇಳಿಕೊಳ್ಳುತ್ತೇನೆ.
ReplyDeleteOm shaanthi
ReplyDeleteಚೂಡಿ ಮಾವ!
ReplyDeleteKannu tumbi banthu..
ReplyDeleteOm shanthi
ReplyDeleteಓಂ ಶಾಂತಿ
ReplyDelete🙏🙏🙏
ReplyDeleteಚೆನ್ನಾಗಿ ಬರೆದಿದ್ದೀರಾ, ಆದರೆ ವಿಷಯ ಕಹಿಯಾಗಿದೆ, ನನಗೂ ಸಹ ಗೊತ್ತಾಗಲಿಲ್ಲ, ಚೂಡಣ್ಣ ಅವರ ಆತ್ಮ ದೇವರ ಪಾದ ಸೇರಿ, ಚಿರಶಾಂತಿ ಪಡೆಯಲಿ
ReplyDeleteNimma nenapina bhutti baravanigeyalli chennagi moodi bandide.plz continue many more own experiences by writing sir.
ReplyDeleteನೆನಪುಗಳೊಂದಿಗೇ ಉಕ್ಕುವ ನೋವಿನ ಆಳ ಮನ ಕಲಕುವಂತಿದೆ. ಅವರ ಆತ್ಮಕ್ಕೆ ಶಾಂತಿಯನ್ನೂ, ನಿಮಗೆ ಮನಸ್ಥೈರ್ಯವನ್ನೂ ನೀಡೆಂದು ದೇವರಲ್ಲಿ ನನ್ನ ಪ್ರಾರ್ಥನೆ.
ReplyDelete