ಹಿಂದು ಮುಂದಾದರೂ ಒಂದಾಗಬೇಕು



ಇದೀಗ ಬಂದ ಸುದ್ದಿಯಲ್ಲಿ ಕಾಶ್ಮೀರದಲ್ಲಿ... ಹಿಂದುಗಳನ್ನೇ ಗುರುತಿಸಿ ಕೊಲ್ಲುವಾಗ.... ಉಗ್ರರು ಯಾವ ಜಾತಿಯೆಂದು ಯಾರನ್ನೂ ಕೇಳಲಿಲ್ಲ...  ಹಿಂದುಗಳೆಂದು ಮಾತ್ರ ಗುರುತಿಸಿ ಗುಂಡಿಕ್ಕಿದ್ದು .  

ಅಲ್ಲಿಗೆ ಜಾತಿ ಜಾತಿ ಎಂದು ನಮ್ಮಲ್ಲೇ ನಾವು ಕಚ್ಚಾಡುತ್ತಿರುವ... ಅದನ್ನೇ ದಾಳವಾಗಿ ಉಪಯೋಗಿಸಿಕೊಂಡು ತಮ್ಮ ಕುರ್ಚಿಯನ್ನು ಭದ್ರ ಮಾಡಿಕೊಳ್ಳುವ ದುರುಳ ರಾಜಕಾರಣಿಗಳ ಹುನ್ನಾರದಿಂದ ಹೊರಬರಲು ಇನ್ನಾದರೂ ನಿರ್ಧಾರ ಮಾಡಬೇಕು. ಈಗಲಾದರೂ ನಾವು ಜಾತಿ ಪಂಗಡಗಳಿಂದ ಹೊರಬಂದು ನಾವೆಲ್ಲಾ ಹಿಂದುಗಳು ಎಂಬ ಭಾವನೆಯಿಂದ ಒಂದುಗೂಡಿದರೆ ಮಾತ್ರ, ನಾವೆಲ್ಲರೂ ಹಾಗೂ ನಮ್ಮ ಮುಂದಿನ ಪೀಳಿಗೆಯವರು ಸುರಕ್ಷತೆಯಿಂದ ಇರಬಹುದು. 

ಕೋಟ್ಯಾಂತರ ರೂಪಾಯಿಗಳನ್ನು ಗಳಿಸಿ ಆಸ್ತಿ ಮಾಡಿ ಅದನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋದರೆ, ನಾವಂದುಕೊಂಡಂತೆ ಅವರು ಅದನ್ನು ಅನುಭವಿಸಿಕೊಂಡು ಸುಖವಾಗಿರಲಾರರು. ಅದನ್ನು ದುರುಳ ಉಗ್ರವಾದಿಗಳು ಕಿತ್ತುಕೊಂಡು, ಮತಾಂತರ ಮಾಡಿ, ಒಪ್ಪದಿದ್ದರೆ ಕೊಂದು, ಹೆಣ್ಣು ಮಕ್ಕಳನ್ನು ಅವಮಾನಿಸಿ, ಹಿಂಸಿಸಿ ಅವರನ್ನು ಹೊತ್ತೊಯ್ಯುತ್ತಾರೆ. ಇದನ್ನು ತಪ್ಪಿಸಬೇಕೆಂದರೆ, ನಾವೆಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಹೋರಾಡಿ ಆ ದುರುಳ ಸಂತತಿಯನ್ನು ಎದುರಿಸಿ, ಅವರ ಶಕ್ತಿಯನ್ನು ನಿರ್ನಾಮ ಮಾಡುವುದೊಂದೇ ದಾರಿ. 

ಈಗಿನ ದಿನಗಳಲ್ಲಿ ಯಾವುದೇ ಮಾಧ್ಯಮದಲ್ಲಿ ನೋಡಿದರೂ ದೇಶದಲ್ಲಿ ನಡೆಯುತ್ತಿರುವ ಗಲಭೆಗಳ ಬಗ್ಗೆಯೇ ಕಾಣುತ್ತೇವೆ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿನ ಮುಸ್ಲಿಮರ ಆಟಾಟೋಪ ಕಂಡು ಮನಸ್ಸಿಗೆ ಹಿಂಸೆಯಾಗುತ್ತಿದೆ, ಕೋಪ ಬರುತ್ತಿದೆ, ಅಸಹಾಯಕತೆಯನ್ನು ಅನುಭವಿಸುತ್ತಿದ್ದೇನೆ. ಈ ಅಸಹಾಯಕತೆಯ ಭಾವವೇ ಬಹು ಪಾಲು ಹಿಂದುಗಳ ಕ್ಷಾತ್ರವನ್ನು ಅಳಿಸಿ ಹಾಕಿದೆಯೇನೋ ಅನಿಸುತ್ತಿದೆ. ನಾನು ಚೆನ್ನಾಗಿದ್ದರೆ ಸಾಕು ಅನ್ನುವ ಸೀಮಿತ ಭಾವ, ಬೇರೆಲ್ಲರ ನೋವು/ ಕಷ್ಟಗಳಿಗೆ ಸ್ಪಂದಿಸುವ ಮನೋಭಾವವೂ ಕಡಿಮೆಯಾಗುತ್ತಿದೆ. ಮುಂದೊಂದು ದಿನ ಆ ಕಷ್ಟವೂ ನನ್ನ ಮನೆಯ ಬಾಗಿಲಿಗೆ ಬಂದು ನಿಲ್ಲಬಹುದು ಎಂಬ ವಿವೇಚನೆಯೇ ಇಲ್ಲವೇ? ಆಗ ನಮ್ಮನ್ನು ರಕ್ಷಿಸುವವರು ಯಾರು ಎಂಬ ಯೋಚನೆಯೂ ಇಲ್ಲವೇ?

ಒಡೆದಾಳುವ ಬ್ರಿಟಿಷರ ನೀತಿಯನ್ನು, ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಇನ್ನೂ ಅನುಸರಿಸುತ್ತಿರುವ, ಆತ್ಮಸಾಕ್ಷಿಯೇ ಇಲ್ಲದ ರಾಜಕಾರಣಿಗಳ ದಂಡು ದಿನೇ ದಿನೇ ಜಾಸ್ತಿಯಾಗುತ್ತಿದೆಯೇನೋ  ಎನ್ನುವ ಅನುಮಾನ ಕಾಡುತ್ತಿದೆ.



ಜಾತಿ ಗಣತಿಯ ಪರಿಯನ್ನೇ ನೋಡಿದರೆ... ಹಿಂದೂಗಳನ್ನು ನೂರಾರು ಜಾತಿ ಉಪಜಾತಿಗಳಾಗಿ ವಿಂಗಡಿಸಿ ಸಣ್ಣ ಸಣ್ಣ ಗುಂಪುಗಳನ್ನಾಗಿ ಮಾಡಿ, ಅವರಿಗೆ ವಿವಿಧ ಕೊಡುಗೆಗಳನ್ನು ನೀಡುವ ಆಶ್ವಾಸನೆಗಳನ್ನು ಕೊಟ್ಟು...( ಅದಕ್ಕೆ ಬಾಯಿ ಬಿಡುವ ನಮ್ಮ ಜನಗಳನ್ನು... ಭಿಕ್ಷುಕರನ್ನಾಗಿ ಮಾಡುತ್ತಿದ್ದಾರೆ ಎಂದೇ ನನ್ನ ನಂಬಿಕೆ.  ಅವರೊಡ್ಡುವ ಸಣ್ಣಪುಟ್ಟ ಆಮಿಷಗಳಿಗೆ ಬಲಿಯಾಗಿ ನಾವುಗಳು ನಮ್ಮ ಸ್ವಂತ ದುಡಿಮೆಯನ್ನು ಬಿಟ್ಟು, ಅವರು ಹಾಕುವ ಮೂರು ಕಾಸು ಭಿಕ್ಷೆ ಗಾಗಿ ಬಕಪಕ್ಷಿಗಳಂತೆ ಕಾದು, ಕೈಯೊಡ್ಡುವ ಹಂತಕ್ಕೆ ನಮ್ಮನ್ನು ದೂಡಿದ್ದಾರೆ... ಹಾಗೆ ನಾವೂ ಯಾವ ಪ್ರತಿರೋಧವನ್ನು ಒಡ್ಡದೆ ದೂಡಿಸಿಕೊಂಡಿದ್ದೇವೆ)

ನಮ್ಮ ಆತ್ಮ ಗೌರವಗಳನ್ನೇ ಅಳಿಸಿ ಹಾಕಿದ್ದಾರೆ. ಹರುಷದ ಕೂಳಿನ ಆಸೆಗಾಗಿ ವರುಷದ ಕೂಳು ಕಳೆದುಕೊಂಡಂತೆ ಆಗಿದೆ ನಮ್ಮ ಸ್ಥಿತಿ.

ಮೇಲ್ನೋಟಕ್ಕೆ ಎಲ್ಲರ ಒಳಿತನ್ನೇ ಬಯಸುವ ಸಂಗತಿಯಾಗಿ ಕಂಡರೂ, ಅದರ ಉದ್ದೇಶ ಮಾತ್ರ ಬೇರೆಯೇ ಆಗಿರುತ್ತದೆ. ಈ ಜನಗಣತಿಯ ಅಂಕಿ ಅಂಶಗಳನ್ನು ನೋಡಿದಾಗ, ಮುಸ್ಲಿಮರ ಸಂಖ್ಯೆ ಜಾಸ್ತಿ ಕಂಡು, ಹಿಂದುಗಳ ಸಂಖ್ಯೆಯು.... ಜಾತಿ ಜಾತಿಗಳಲ್ಲಿ ವಿಭಜನೆಗೊಂಡು ಕಡಿಮೆ ಎಂದು ತೋರಿಸಿದೆ. ಹಾಗಾಗಿ ಮುಸ್ಲಿಮರಿಗೆ ದೊರಕುವ ಸೌಲಭ್ಯಗಳು ತಾನೇ ತಾನಾಗಿ ಹೆಚ್ಚಾಗುವ ಸಂಭವವಿದೆ. ಅತಿ ಹೆಚ್ಚಾಗಿರುವ ಜನಸಂಖ್ಯೆಯ ಆಧಾರದಿಂದ ಅವರು ಅಲ್ಪಸಂಖ್ಯಾತರಲ್ಲ ಬಹು ಸಂಖ್ಯಾತರು, ಅಲ್ಪ ಸಂಖ್ಯಾತರಾಗಿ ಅವರಿಗೆ ಕೊಡ ಮಾಡುತ್ತಿರುವ ಸವಲತ್ತುಗಳನ್ನು ನಿಲ್ಲಿಸಲು ಸಹ ನಮ್ಮ ಸರ್ಕಾರಗಳು ಪ್ರಯತ್ನ ಮಾಡುತ್ತಿಲ್ಲ.

ಸಣ್ಣಪುಟ್ಟ ವಿಚಾರಗಳಲ್ಲೂ ನಮ್ಮ ದಾರಿಯನ್ನು/ ದಿಕ್ಕನ್ನು ತಪ್ಪಿಸುವ ವಿಷಯಗಳೇ ನಮ್ಮ ಮುಂದೆ ಮತ್ತೆ ಮತ್ತೆ ಬಂದು ಅದೇ ಸತ್ಯವೇನೋ ಎಂದು ನಂಬುವಷ್ಟರ ಮಟ್ಟಿಗೆ ನಮ್ಮ ಮನಸ್ಥಿತಿಗಳು ರೂಪುಗೊಂಡಿವೆ. 

ಈ ವಿಚಾರದಲ್ಲಿ ಹಿಟ್ಲರನ ಅನುಯಾಯಿ ಗೊಬ್ಬೆಲ್ಸ್ ನ ಪ್ರಚಾರ ವೈಖರಿಯನ್ನು ಅಳವಡಿಸಿಕೊಂಡಿದ್ದಾರೆ. ಮತ್ತೆ ಮತ್ತೆ ಹೇಳಿದ ಅಸತ್ಯ.. ಸತ್ಯವೆಂದೇ ನಂಬುವ ಮಟ್ಟಕ್ಕೆ ಅಮಾಯಕ ಜನರನ್ನು ತರುತ್ತದೆ...

ಇದಕ್ಕೆ ಕೊಡಬಹುದಾದ ದೊಡ್ಡ ಉದಾಹರಣೆ ಗಾಂಧಿ ಪ್ರಣೀತ ರಾಮ ನಾಮಭಜನೆ.

ರಘುಪತಿ ರಾಘವ ರಾಜಾರಾಮ್

ಪತಿತ ಪಾವನ ಸೀತಾರಾಮ್

ಸುಂದರ ವಿಗ್ರಹ ಮೇಘ ಶಾಮ್

ಗಂಗಾ ತುಳಸಿ ಸಾಲಿಗ್ರಾಮ್

ಎಂದಿದ್ದ ಸಾಲುಗಳನ್ನು....

ರಘುಪತಿ ರಾಘವ ರಾಜಾರಾಮ್

ಪತಿತ ಪಾವನ ಸೀತಾರಾಮ್

ಈಶ್ವರ ಅಲ್ಲಾ ತೆರೋ ನಾಮ್

ಸಬಕೋ ಸನ್ಮತಿ ದೇ ಭಗವಾನ್

ಎಂದು ಬದಲಿಸಿ, ಮತ್ತೆ ಮತ್ತೆ ಅದನ್ನೇ ಸತ್ಯವೆಂದು ಬಿಂಬಿಸಿದ್ದು.  ಇದನ್ನೇ ಸತ್ಯವೆಂದು ದಶಕಗಳ ಕಾಲ ನಂಬಿದ್ದ  ನನ್ನಂತಹವರಿಗೆ  ನಿಜವಾದ ಸಾಲುಗಳನ್ನು ತಿಳಿದಾಗ ಆದ ಆಘಾತ ಅವರ್ಣನೀಯ. 

ಮೇಲ್ನೋಟಕ್ಕೆ ಹಿಂದೂ ಧರ್ಮದ ನಂಬಿಕೆಯಾದ.. ಎಲ್ಲ ದೃಷ್ಟಿಕೋನಗಳನ್ನು ಗೌರವಿಸುವ ಭಾವನೆಯನ್ನು ಈಶ್ವರ ಮತ್ತು ಅಲ್ಲಾ ಇಬ್ಬರೂ ಒಂದೇ ಎಂದು ಹೇಳಿ...ಅಲ್ಲಾ ನನ್ನು ಗೌರವಿಸುವ ಪಾಠವನ್ನು ನಮಗೆ ಹೇಳಿ... ಅಲ್ಲಾ ಬಿಟ್ಟರೆ ಬೇರೆ ದೇವರೇ ಇಲ್ಲ... ಅಲ್ಲಾನನ್ನು  ನಂಬದವರು ಕಾಫೀರರು ಬದುಕಲು ಅನರ್ಹರು ಎನ್ನುವ ಮುಸ್ಲಿಮರ ಭಾವನೆಯನ್ನು ಸ್ಥಿರೀಕರಿಸಿದವರು. ಅದರ ಫಲವೇ  ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂದುಗಳ ಮೇಲಿನ ದೌರ್ಜನ್ಯ. ಗಮನಿಸಿ ಪ್ರಪಂಚದ ಯಾವುದೇ ಭಾಗದಲ್ಲಿ ಮುಸ್ಲಿಮರ ಬಾಹುಳ್ಯ ಇರುತ್ತದೆಯೋ, ಅಲ್ಲೆಲ್ಲ ಹಿಂದೂಗಳ/ ಮುಸ್ಲಿಮರಲ್ಲದವರ ಮೇಲಿನ ಕಿಡಿಗೇಡಿತನ ಜಾಸ್ತಿಯಾಗುತ್ತದೆ. ಇದು ಗಲ್ಲಿಯಿಂದ ಮೊದಲುಗೊಂಡು ಹಳ್ಳಿ, ತಾಲೂಕು, ಜಿಲ್ಲೆಯವರೆಗೆ ಪಸರಿಸಿದೆ. ಪೂರ ರಾಜ್ಯಕ್ಕೆ ಇನ್ನೂ ಪಸರಿಸಿಲ್ಲ ಎನ್ನುವುದೇ ಸಮಾಧಾನದ ಸಂಗತಿ. ಇದೇ ರೀತಿ ತುಷ್ಟೀಕರಣ ಮುಂದುವರಿದರೆ ಆ ದಿನವೂ ದೂರವಿಲ್ಲ.. ಹಾಗೆ ಇದು ಇಡೀ ಭಾರತಕ್ಕೆ ಆವರಿಸಿದರೆ ಹೆಚ್ಚೇನು ಅಲ್ಲ. 2047 ಕ್ಕೆ ಈ ಗುರಿಯನ್ನಿಟ್ಟು ಮುನ್ನುಗ್ಗುತ್ತಿದ್ದಾರೆ ಎನ್ನುವ ವಿಷಯ ಗುಟ್ಟಾಗಿ ಉಳಿದಿಲ್ಲ. 

ಇದಕ್ಕೆ ಮುಖ್ಯ ಕಾರಣ ರಾಜಕಾರಣಿಗಳ ಹುನ್ನಾರ... ಮತಗಳಿಕೆಗಾಗಿ, ಹಾಗೂ ನಮ್ಮ ಹಿಂದೂಗಳಲ್ಲಿನ ಒಗ್ಗಟ್ಟಿನ ಕೊರತೆಯಿಂದಾಗಿ. 

ಹಣದ ಆಸೆಗೆ ಬಿದ್ದು, ಯಾವ ಮೂಲದಿಂದಾದರೂ ಸರಿ, ಹಣ ಸಂಪಾದಿಸುವ ಗುರಿ ಇದ್ದಾಗ, ಅದನ್ನು ಸಾಧಿಸಲು ಯಾವ ಮಾರ್ಗ ಬೇಕಾದರೂ ಹಿಡಿಯುವ ಮನಸ್ಥಿತಿ. ನಮ್ಮಲ್ಲಿನ ಹಿರಿಯ ರಾಜಕಾರಣಿಗಳು, ಹಾಗೂ ಪ್ರಸಿದ್ಧಿ ಪಡೆದ ವಕೀಲರುಗಳು, ದೇಶದ್ರೋಹಿಗಳ, ಭಯೋತ್ಪಾದಕರ ಪರವಾಗಿ ನಿಲ್ಲುವುದನ್ನುಹಾಗೂ ನ್ಯಾಯಾಲಯದಲ್ಲಿ  ಅವರಪರವಾಗಿ ವಾದಿಸುವುದನ್ನು ನೋಡಿದಾಗ, ನಮ್ಮ ನೈತಿಕ ಮಟ್ಟ ಎಷ್ಟು ಕೆಳಗಿಳಿದಿದೆ ಎಂದು ಊಹಿಸಿ. ಇದರ ಹಿಂದೆ ಇರುವುದೇ ದೇಶಕ್ಕೆ ಪ್ರಾಮುಖ್ಯತೆ ಕೊಡದೆ ಸ್ವಾರ್ಥಕ್ಕಾಗಿ ರಾಜಕಾರಣದಲ್ಲಿರುವ ಕಿಡಿಗೇಡಿ ರಾಜಕಾರಣಿಗಳಿಂದ. 

ಈಗಿನ ವಿಪರ್ಯಾಸವೆಂದರೆ ಹಿಂದೂ ಧರ್ಮಕ್ಕೆ ಹಾನಿಯಾಗುತ್ತಿರುವುದು ಬೇರೆಯವರಿಗಿಂತ ಸ್ವತಃ ಹಿಂದೂಗಳಿಂದಲೇ..ಧರ್ಮ ನಿಷ್ಠೆಯ ಕೊರತೆಯಿಂದ. 

ಹಿಂದೂ ಧರ್ಮಕ್ಕೆ ಸಂಬಂಧಪಟ್ಟ ಯಾವುದೇ ಖಟ್ಲೆಯನ್ನು ಗಮನಿಸಿದರೂ,  ಮುಸ್ಲಿಮರ ಪರ ವಾದಿಸುವುದು ಹಿಂದೂ ವಕೀಲರೇ. ಖೊಟ್ಟಿ ಸಮಾಜವಾದದ (pseudo secularism ) ಹೆಸರಿನಲ್ಲಿ  ಹಿಂದೂ ಸಂಪ್ರದಾಯಗಳನ್ನು ಅವಹೇಳನ ಮಾಡುವುದು, ಹಿಂದೂ ದೇವರುಗಳ ಬಗ್ಗೆ ನಿಂದನೀಯವಾಗಿ ಮಾತನಾಡುವುದು, ಸಿಕ್ಕೆಲ್ಲ ಅವಕಾಶಗಳಲ್ಲಿ ನಮ್ಮ ಧರ್ಮದ ಬಗ್ಗೆ ಅಪಪ್ರಚಾರ ಮಾಡುವುದು ಇವರ ದೊಡ್ಡ ಹವ್ಯಾಸ. ಆದರೆ ಇದೇ ಸೆಕ್ಯುಲರ್ ಬುದ್ಧಿಜೀವಿಗಳು, ಮುಸ್ಲಿಮರ ಬಗ್ಗೆ ಚಕಾರ ಎತ್ತಲು ಧೈರ್ಯ ತೋರುವುದಿಲ್ಲ. ಇಂತಹ ಕೀಳು ಮನೋಭಾವದ ವ್ಯಕ್ತಿಗಳಿಂದ ನಾವುಗಳು ಬಲಶಾಲಿಯಾಗಲು ಕಷ್ಟ ಸಾಧ್ಯ. 

ಈ ಧರ್ಮವಿರೋಧಿ ದುಷ್ಟ ಶಕ್ತಿಗಳನ್ನು ದಮನ ಮಾಡಲು ಇರುವ ಏಕೈಕ ದಾರಿ ಎಂದರೆ... ಎಲ್ಲ ಸಂದರ್ಭಗಳಲ್ಲೂ ಯಾವ ಪ್ರಚೋದನೆಗೂ, ಯಾವ ಆಮಿಷಕ್ಕೂ ಬಲಿಯಾಗದೆ ಜನಾಂಗವೆಲ್ಲ ಒಟ್ಟುಗೂಡಿ ಒಂದು ಕೈಯಾಗಿ ಧರ್ಮ ಯುದ್ಧವನ್ನು ಮಾಡಿದರೆ ಮಾತ್ರ. ಇದಕ್ಕೆ ಕೆಲ ಅವಕಾಶವಾದಿ ರಾಜಕಾರಣಿಗಳು ಅಡ್ಡಿ ಮಾಡುವುದು ಸಹಜ. "United we stand- divided we fall ...ಒಗ್ಗಟ್ಟಿನಲ್ಲಿ ಬಲವಿದೆ” ಎಂಬ ನುಡಿಯಂತೆ ನಾವೆಲ್ಲರೂ ನಿಂತರೆ, ಎಂತಹ ಸವಾಲುಗಳನ್ನೂ ಎದುರಿಸಿ ಜಯಶೀಲರಾಗ ಬಲ್ಲೆವು.

ಯಾವುದೇ ಜಾತಿಯನ್ನು, ಅದು ಬ್ರಾಹ್ಮಣರಿರಲಿ, ಒಕ್ಕಲಿಗರಿರಲಿ, ಲಿಂಗಾಯಿತರಿರಲಿ, ಕುರುಬರಿರಲಿ... ಅದರಲ್ಲಿರುವ ಜಾತಿ ಉಪಜಾತಿಗಳನ್ನು ನೋಡಿದಾಗ...  ಕೊಂಬೆಗಳು ಕವಲುಗಳು.... ಎಣಿಸಲಾರದಷ್ಟು ಇವೆಯೇನೋ ಅನ್ನಿಸುತ್ತದೆ... ಹಾಗಾಗಿ ನಾವುಗಳು ಈ ಜಾತಿ ವಿಭಜನೆಯಲ್ಲಿ ಪರಸ್ಪರ ಸಂಬಂಧವನ್ನು ಕಳೆದುಕೊಂಡು.. ದೂರವಾಗುತ್ತಿದ್ದೇವೆ. ಹಾಗೆ ನಮ್ಮದೇ ಗುರುತನ್ನು ಸ್ಥಾಪಿಸಿಕೊಳ್ಳಲು, ಮಠ ಗುರು ಪೀಠಗಳನ್ನು ಮಾಡಿಕೊಂಡು ಹೆಣಗಾಡುತ್ತಿದ್ದೇವೆ, ಪರಸ್ಪರ ಹೊಡೆದಾಡುತ್ತಿದ್ದೇವೆ. ಸಿಗುವ ಯಾವುದೋ ಸಣ್ಣ ಆಮಿಷಕ್ಕಾಗಿ ಈ ಹೊಡೆದಾಟ, ಇದರ ಹಿಂದಿರುವವರು ಯಥಾಪ್ರಕಾರ ಸ್ವಾರ್ಥ ರಾಜಕಾರಣಿಗಳು, ಅವರ ಸ್ಥಾನ ಮಾನವನ್ನು ಕಾಪಾಡಿ ಕೊಳ್ಳಲು. 

ಈ ನಿಟ್ಟಿನಲ್ಲಿ ಗುರಿ ಮುಟ್ಟಲು ಮೊದಲ ಹೆಜ್ಜೆ ಇಡಬೇಕಾದವರು... ಜಾತಿ ಉಪಜಾತಿಗಳ ಮಠಮಾನ್ಯಗಳ ಗುರು ಪೀಠದಲ್ಲಿ ಕೂತಿರುವಂತಹ ಗುರುವರ್ಯರುಗಳು. ಇದು ಸಾಧ್ಯವಾಗಬೇಕಾದರೆ... ಆ ಮಠಗಳ ಅಭಿಮಾನಿಗಳು ಹಾಗೂ ಹಿಂಬಾಲಕರು ದೃಢ ನಿರ್ಧಾರ ಮಾಡಿ, ತಮ್ಮ ಮಠದ ಗುರಿಯೂ ಅಂತಿಮವಾಗಿ ಹಿಂದೂಗಳ ಒಗ್ಗೂಡಿಕೆಗೆ ಎಂದು ಸಾಬೀತು ಮಾಡುವುದು.

ಹಿಂದಿನ ಕಾಲದಲ್ಲಿ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದವರು ಬ್ರಾಹ್ಮಣ ಸಮುದಾಯದವರು. ಕಾರಣಾಂತರಗಳಿಂದ ಆ ಸ್ಥಾನಮಾನಗಳಿಂದ ಕುಸಿದಿದ್ದರೂ, ಸರ್ವೇ ಜನಾಃ ಸುಖಿನೋ ಭವಂತು... ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಶಿಸುತ್ತಾ ಇದ್ದ ಆ ಮನೋಭಾವದ ಕಿಡಿಯು ಬಹುಜನರಲ್ಲಿ ಇನ್ನೂ ಸುಪ್ತವಾಗಿ, ಜಾಗೃತವಾಗಿರುವುದರಲ್ಲಿ ಸಂಶಯವೇ ಇಲ್ಲ. 

ಈ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯದ ಮೇಲೆ ಅತಿ ದೊಡ್ಡ ಜವಾಬ್ದಾರಿ ಇದೆ. ಎಲ್ಲ ಸಮುದಾಯಕ್ಕೂ ಮಾದರಿಯಾಗ ಬೇಕಾದ ಅನಿವಾರ್ಯತೆ ಇದೆ ಎಂದು ನನ್ನ ಪ್ರಾಮಾಣಿಕ ನಂಬಿಕೆ. ಬೇರೊಬ್ಬರಿಗೆ ಹೇಳುವ ಮುನ್ನ, ನಾವು ಮಾಡಿ ತೋರಿಸಿ ಮುಂದೆ ಸಾಗಿದರೆ, ಬೇರೆಲ್ಲ ಸಮುದಾಯದವರೂ ಅದನ್ನು ಅಳವಡಿಸಿಕೊಳ್ಳುವ ಸಂಭವವಾದರೂ ಉಂಟು. 

ಬ್ರಾಹ್ಮಣರು ತಮ್ಮ ಗುಂಪು / ಪಂಗಡವೇ ಶ್ರೇಷ್ಠ, ನಮ್ಮ ಆಚರಣೆಗಳೆ ಉತ್ತಮ ಎನ್ನುವ ದ್ವೀಪ ಮನೋಭಾವದಿಂದ ಹೊರಬಂದು, ಪರಸ್ಪರ ಕೆಸರೆರಚಾಟ, ತಮ್ಮ ಅಹಮಿಕೆಯನ್ನು ತಣಿಸಲು....ಅನ್ಯ ಗುಂಪುಗಳ/ ಪಂಗಡಗಳನ್ನು ಹೀನಾಯವಾಗಿ ಕಾಣುವುದು, ಕ್ಷುಲ್ಲಕ ಕಾರಣಗಳಿಗಾಗಿ, ತಕರಾರು ಮಾಡಿಕೊಂಡು, ದಾಯಾದಿಗಳಂತೆ ನ್ಯಾಯಾಲಯಗಳಲ್ಲಿ ಬಡಿದಾಡಿಕೊಂಡು ಸಮಯ, ಹಣ ಹಾಗೂ ಬುದ್ಧಿ ಶಕ್ತಿಯನ್ನು ವ್ಯಯಮಾಡುವುದನ್ನು   ಬಿಟ್ಟು ವಿಶಾಲ ಮನೋಭಾವದಿಂದ ಒಂದಾಗಿ, ಈ ಸಂಪನ್ಮೂಲವನ್ನು, ನಮ್ಮ ಧರ್ಮದ ಏಳಿಗೆಗಾಗಿ ಹಾಗೂ ನಮ್ಮ ಧರ್ಮವನ್ನು ಅವಹೇಳನ ಮಾಡುವವರ ದಮನಕ್ಕಾಗಿ ಉಪಯೋಗಿಸಲು ಪ್ರಾರಂಭ ಮಾಡಿದರೆ.. ಅದು ಒಂದು ದೊಡ್ಡ ಸಾಧನೆಯ ಮೊದಲ ಮೆಟ್ಟಿಲು.

ಹಿಂದೂ ಧರ್ಮವು ಸನಾತನ ಧರ್ಮ.. ಅನಾದಿಕಾಲದಿಂದಲೂ ಇದೆ ಎನ್ನುವುದು ಸತ್ಯ ಮತ್ತು ಇರುತ್ತದೆ ಎನ್ನುವುದು ನಮ್ಮೆಲ್ಲರ ನಂಬಿಕೆ. ಆದರೆ ಗಮನಿಸಬೇಕಾದ ಅಂಶ... ಉಚ್ಛ್ರಾಯ ಸ್ಥಿತಿಯಲ್ಲಿದ್ದ ಧರ್ಮಾಚರಣೆ, ಪಾಶ್ಚಿಮಾತ್ಯರ ಅನುಕರಣೆಯಿಂದ ಕ್ರಮೇಣ ಪ್ರಭಾವವನ್ನು ಕುಗ್ಗಿಸಿಕೊಂಡಿರುವುದು ನೋಡಿದಾಗ... ಧರ್ಮೋ ರಕ್ಷತಿ ರಕ್ಷಿತಃ, ವಾಕ್ಯದ ಅರ್ಥವನ್ನು ಅಕ್ಷರಶಃ ಪಾಲಿಸಬೇಕಾದ ಹೊಣೆ ನಮ್ಮ ಮೇಲಿದೆ.



ಕರ್ನಾಟಕಕ್ಕೆ ಸೀಮಿತವಾದರೂ, ಜಾತಿಗಣತಿಯ ವಿರುದ್ಧವಾಗಿ ಹೋರಾಟ ಮಾಡಲು ಒಕ್ಕಲಿಗ ಲಿಂಗಾಯಿತ ಸಮುದಾಯದವರು ಕೈಜೋಡಿಸಲು ನಿರ್ಧಾರ ಮಾಡಿರುವುದು ಸಮಾಧಾನಕರ ಸಂಗತಿ. ಇದೇ ಮನಸ್ಥಿತಿಯನ್ನು ಮುಂದುವರಿಸಿದ್ದೇ ಆದರೆ, ಹಿಂದುಗಳು ಒಂದಾಗುವ ಕನಸು ನನಸಾಗುವ ಸಾಧ್ಯತೆಗಳು ಕಂಡುಬರುತ್ತದೆ. ನಾವೆಲ್ಲರೂ ಹೆಮ್ಮೆಯಿಂದ ಹಿಂದುಗಳು ಎಂದು ಹೇಳಿಕೊಂಡು, ನಮ್ಮ ಆಚರಣೆಗಳನ್ನು ಉಳಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ನಮ್ಮ ಮೇಲಿದೆ.  

ನಮ್ಮ ಪೂರ್ವಜರು ಮಾಡಿದ ಸಾಧನೆಗಳನ್ನು, ಪಾಲಿಸಿಕೊಂಡು ಬಂದ ಕೆಲ ಆಚರಣೆಗಳನ್ನು... ಮೂಢನಂಬಿಕೆ ಎಂದು ಮೂದಲಿಸುವ ಪರಿಪಾಠ ನಮ್ಮ ಬುದ್ಧಿಜೀವಿಗಳದ್ದು. ಈ ಚಿಂತನೆಯನ್ನು  ಅವರು ಬಲವಾಗಿ ಪ್ರತಿಪಾದಿಸುತ್ತಾರೆ ಮತ್ತು ಪಸರಿಸುತ್ತಾರೆ. ಈ ಮಿಥ್ಯವನ್ನು ಕೊನೆಗಾಣಿಸಲು, ನಮ್ಮ ಪೂರ್ವಜರ ಚಿಂತನೆಗಳು ಎಷ್ಟು ವೈಜ್ಞಾನಿಕವಾಗಿದೆ ಎಂದು ಪ್ರಚುರಪಡಿಸುವ ಬರಹಗಳು, ಮಾತಿನ ತುಣುಕುಗಳು ಹಾಗೂ ವಿಡಿಯೋ ತುಣುಕುಗಳ ಅವಶ್ಯಕತೆ ಇದೆ.. ಅಂತಹ ಒಂದು ಪುಸ್ತಕವೇ  Pride of India.   

ನಮ್ಮೆಲ್ಲ ಪೂರ್ವಜರ ಚಿಂತನೆಗಳು, ಹಾಗೂ ನಾವು ಆಚರಿಸುತ್ತಿರುವ ನಡಾವಳಿಗಳು, ಹೇಗೆ ವೈಜ್ಞಾನಿಕವಾಗಿ ಪ್ರಸ್ತುತವಾಗಿದೆ ಎಂದು ಹೇಳುವ ಇಂತಹ ಪುಸ್ತಕಗಳ ಅವಶ್ಯಕತೆ.. ಅದರಲ್ಲೂ  ಮಾತೃ ಭಾಷೆಯಲ್ಲಿ ಸಿಗುವುದಾದರೆ, ಸಾಮಾನ್ಯ ಜನರ ಪ್ರಶ್ನೆಗಳಿಗೆ ಉತ್ತರ ಸಿಗಬಹುದು. ಆಚರಣೆಗಳ ಹಿಂದಿನ ಉದ್ದೇಶಗಳು ಸ್ಪಷ್ಟವಾದಾಗ... ನಂಬಲು ಸುಲಭವಾಗುತ್ತದೆ.... ಪಾಲಿಸಲು ಇಷ್ಟವಾಗುತ್ತದೆ.... ಮೂಡನಂಬಿಕೆ ಎಂದು ಬಿಂಬಿಸುವ ಜನರ ಬಾಯಿಯನ್ನು ಮುಚ್ಚಿಸುತ್ತದೆ. ಈ ಕಾರ್ಯವನ್ನು ಹಿಂದೂ ಧರ್ಮವೆಂಬ ವಿಶಾಲ ಮರದ ಅಡಿಯಲ್ಲಿ ಮಾಡಬಹುದಾದರೆ... ನಮ್ಮಲ್ಲಿನ ಪ್ರತ್ಯೇಕತಾಭಾವವು ಕಡಿಮೆಯಾಗುವುದೆಂಬ ಆಶಯ ನನ್ನದು.

ಈಗಿನ ವಿಷಮ ಪರಿಸ್ಥಿತಿಯಿಂದ ಹೊರಬರಲು ಹಿಂದುಗಳು ಇನ್ನು ಮುಂದಾದರೂ, ಒಂದಾಗಲೇಬೇಕು, ಈ ಗುರಿಯನ್ನು ಮುಟ್ಟಲು ಎಲ್ಲರೂ ಕೈ ಜೋಡಿಸಬೇಕೆಂದು ಕಳಕಳಿಯ ಬಿನ್ನಹ ವಿನಂತಿ, ಕೋರಿಕೆ,  ಬೇಡಿಕೆ, ನಿವೇದನೆ...ಏನೆಲ್ಲ ಪದಗಳಿವೆಯೋ ಆದೆಲ್ಲವೂ....

ಇದು ಸಾಮೂಹಿಕ ಯಜ್ಞವೇ ಆಗಬೇಕಾದದ್ದು ಅತ್ಯವಶ್ಯಕ... ಯಾವುದೇ ಒಬ್ಬರ ನಾಯಕತ್ವ ಅರಾಜಕತೆಗೆ ಕೊಂಡೊಯ್ಯುವ ಸಾಧ್ಯತೆಯೇ ಹೆಚ್ಚು.... ಇದಕ್ಕೆ ಸಾಮೂಹಿಕ ನಾಯಕತ್ವ.... ಅಂದರೆ ಅದು ಆಂದೋಳನದ ರೂಪದಲ್ಲಿ ಮೂಡಿ ಬಂದರೆ .... ಒಬ್ಬೊಬ್ಬ ವ್ಯಕ್ತಿಯೂ ತಾನು ಹಿಂದೂ ಎಂದು ಬಲವಾಗಿ ನಂಬಿ, ಆಚರಣೆಯಲ್ಲಿ ತೊಡಗಿಸಿಕೊಂಡುದೇ ಆದರೆ, ತನ್ನ ಕೊಡುಗೆಯನ್ನು ನಿಸ್ಪೃಹತೆಯಿಂದ ಕೊಡಬಲ್ಲ... ಬದಲಾವಣೆಯ ದೀಪ ಮತ್ತೊಂದು ದೀಪವನ್ನು ಬೆಳಗುವ ಕೆಲಸವು ಸುಸೂತ್ರವಾಗಿ ಮುನ್ನಡೆಯುತ್ತದೆ ಎಂಬ ಅಭಿಪ್ರಾಯ ನನ್ನದು.  

ಭಿನ್ನ ಅಭಿಪ್ರಾಯಗಳು ಇರಬಹುದು... ಆದರೆ ನಮ್ಮ ಗುರಿ ಹಿಂದೂಗಳ ಐಕ್ಯತೆ ಎಂದು ಸ್ಪಷ್ಟವಾಗಿದ್ದಾಗ... ಬಹುಶಃ ಎಲ್ಲ ದಾರಿಗಳು ಗುರಿಯನ್ನೇ ಮುಟ್ಟುವ ದಾರಿಗಳಾಗಿ ಮಾರ್ಪಡುತ್ತವೆ. ನದೀನಾಂ ಸಾಗರೋ ಗತಿಃ ಎಂಬಂತೆ.

ಬನ್ನಿ, ಎಲ್ಲರೂ ಕೈ ಜೋಡಿಸೋಣ, ಬೇರೆಯವರನ್ನು ಪ್ರೇರೇಪಿಸೋಣ, ಹಿಂದೂ ಧರ್ಮದ ಸೊಗಡನ್ನು ಎಲ್ಲೆಡೆ ಪಸರಿಸೋಣ.... ನಮ್ಮ ಮುಂದಿನ ಪೀಳಿಗೆಯು ಯಾವ ಆತಂಕವೂ, ಅಡ್ಡಿಯೂ ಇಲ್ಲದಂತೆ ನಮ್ಮ ಧರ್ಮವನ್ನು ಪಾಲಿಸಿಕೊಂಡು ಹೋಗುವಂತಹ ಪರಿಸರವನ್ನು ಕಟ್ಟಿ ಕೊಡೋಣ.

ಧರ್ಮವೇ ಜಯವೆಂಬ ದಿವ್ಯ ಮಂತ್ರ ಎಂಬ ದಾಸರ ವಾಣಿಯನ್ನು ನೆನೆದು ಧರ್ಮಕ್ಕೆ ಜೈಕಾರ ಹಾಕುತ್ತಾ, ಭಾರತ ಮಾತೆಗೆ ಜೈ ಎನ್ನುತ್ತಾ  ಮುನ್ನಡೆಯೋಣ.


ಕೊನೆಯ ಬಿನ್ನಹ:

ಸಾಧ್ಯವಾದಷ್ಟು ನಿಮ್ಮ ಪರಿಚಯದವರಿಗೆ ಹಾಗೂ ಗುಂಪುಗಳಿಗೆ ತಲುಪಿಸಿ.  ಸಣ್ಣ ಸಣ್ಣ ಬದಲಾವಣೆಗಳೂ ದೊಡ್ಡದಾದ ಬದಲಾವಣೆಗೆ ಕಾರಣವಾಗ ಬಹುದಾದ್ದರಿಂದ... ನಿಮ್ಮ ಈ ಸಣ್ಣ ಕಾಣಿಕೆಯು ಅಗಾಧ ಪರಿಣಾಮವನ್ನು ಬೀರಬಹುದು. 

ಧನ್ಯವಾದಗಳೊಂದಿಗೆ...


ನಮಸ್ಕಾರ.


D C Ranganatha Rao

9741128413


    

Comments

  1. ನನಗೆ ನಮ್ಮ ರಾಜಕಾರಣಿಗಳಿಗಿಂತ ನಮ್ಮ ದೇವರುಗಳ ಮೇಲೆ ಕೋಪ ಬರುತ್ತಿದೆ... ನಮ್ಮ ಸಿನಿಮಾ ಹಾಗೂ ಕ್ರಿಕೆಟ್ ನವರನ್ನು ವೈಭವಿಕರಿಸಿದಂತೆ ದೇವರನ್ನು ತುಂಬಾ

    ReplyDelete
  2. ನಾಗೇಂದ್ರ ಬಾಬು25 April 2025 at 19:25

    ನನಗೆ ನಮ್ಮ ರಾಜಕಾರಣಿಗಳಿಗಿಂತ ನಮ್ಮ ದೇವರುಗಳ ಮೇಲೆ ಕೋಪ ಬರುತ್ತಿದೆ... ನಮ್ಮ ಸಿನಿಮಾ ಹಾಗೂ ಕ್ರಿಕೆಟ್ ನವರನ್ನು ವೈಭವಿಕರಿಸಿದಂತೆ ದೇವರನ್ನು ತುಂಬಾ
    ವೈಭವಿಕರಿಸಿದ್ದೇವೆ...ಸಿನಿಮಾಗಳಲ್ಲಿ ಭಕ್ತರ ಕಾಪಾಡುವ ದೇವ ನಿಜ ಜೀವನದಲ್ಲಿ ಯಾಕೋ ಸಹಾಯ ಮಾಡುತ್ತಿಲ್ಲ...ದೇವರ ಸನ್ನಿಧಿಗೆ ಹೋಗಿ ಬರುವಾಗ ಅಪಘಾತ ಗಳಲ್ಲಿ ಸಾವಿರಾರು ಜನ ತಮ್ಮ ಜೀವ ಕಳೆದುಕೊಂಡ ಘಟನೆ ನಡೆಯುತ್ತದೆ ಇದೆ
    ಏಕೆ ನಮ್ಮ ವಾಯು ದೇವ ವಿಷನಿಲ ಬಿಟ್ಟು,
    ಅಗ್ನಿದೇವ ಬೆಂಕಿಯಿಂದ ಸುಟ್ಟು, ವರುಣ ದೇವ ಪ್ರಳಯ ಮಾಡಿ ಅಥವಾ ರಾಮ ಬಾಣ ಗಳ ಸುರಿಸುತ್ತಾ...ಇಂತಹ ಪಾಪಿ ಗಳನ್ನು ನಿರ್ನಾಮ ಮಾಡುತ್ತಿಲ್ಲ....ಅಥಾವ ಅಂತಹ ಶಕ್ತಿಯನ್ನು ಹಿಂದೂಗಳಿಗೆ ಏಕೆ ಕೊಡುತ್ತಿಲ್ಲ
    ಅಂದರೆ ನಮ್ಮ ಕೋಟಿ ದೇವರು ಗಳಿಗಿಂತ ಅಲ್ಲಾನೇ ಬಲಶಾಲಿ ನಾ?
    ಕುಂಭ ಮೇಳದ ಸಾಧುಗಳಿಗೆ ಶಾಪ ಕೊಡುವ ಶಕ್ತಿ ಇಲ್ಲವಾ? ಹಿಂದೆ ಕೇಳಿದ್ದ pide pipper ಕಥೆಯಂತೆ ನನಗೇ ಆ ಶಕ್ತಿ ಬಂದು ಪಾಪಿ ಗಳನ್ನು ಸಮುದ್ರದ ಮಧ್ಯೆ ಬಿಡುವಂತೆ ಸಾಧ್ಯವಾದರೆ...? ಅಯ್ಯೋ ಇದೆಲ್ಲಾ ಕನಸು
    I ನಮ್ಮ ಮುಂದಿನ ಎರಡು ಪೀಳಿಗೆ ಬಹಳಷ್ಟು
    ತೊಂದರೆ ಪಡಬಹುದು
    ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಈಗಲೂ
    ತಿಳಿದಿದ್ದರೆ ಹಿಂದೂಗಳು ವಿನಾಶದತ್ತ ಸಾಗುವುದರಲ್ಲಿ ಸಂಶಯ ಇಲ್ಲಾ
    ಬಾಬು

    ReplyDelete
  3. Darmo rakshathi rakshithaha.nice talk.. 👏👏💐

    ReplyDelete

Post a Comment

Popular posts from this blog

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ