ಮರೆತು ಮನ್ನಿಸು/ ಕ್ಷಮಿಸು
ಮರೆತು ಬಿಡು, ಕ್ಷಮಿಸಿ ಬಿಡು ಅಂತ ನೀವೇನೋ ಹೇಳ್ತೀರಾ.... ಯಾವುದನ್ನು ಮರೆಯಲಿ ಹೇಗೆ ಮರೆಯಲಿ... ಬೆಳಿಗ್ಗೆ ಎದ್ದು ಮುಖ ತೊಳೆದು ಹಣೆಗೆ ಬೊಟ್ಟು ಇಡುವಾಗ ಇದು (ಹಣೆಯ ಮೇಲಿನ ಗಾಯಕ್ಕೆ ಹಾಕಿದ ಹೊಲಿಗೆಯ ಗುರುತನ್ನು ತೋರಿಸುತ್ತಾ) ನೆನಪಿಸುತ್ತೆ, ಆ ಮನುಷ್ಯ ನನ್ನ ಜುಟ್ಟು ಹಿಡಿದು ತಲೆಯನ್ನು ಕಂಬಕ್ಕೆ ಘಟ್ಟಿಸಿದ ದೃಶ್ಯ. ನುಗ್ಗು ಬಿದ್ದ ಪಾತ್ರೆಗಳನ್ನು ಮುಟ್ಟಿದಾಗ, ನನಗಿಟ್ಟ ಗುರಿ ತಪ್ಪಿ, ಕೆಳಗೆ ಬಿದ್ದ ಘಟನೆಯನ್ನು ಮರೆಯಲೇ, ಮೊದಲ ಬಾರಿ ನಮ್ಮಪ್ಪನ ಮನೆಗೆ ಹೋದಾಗ, ಯಾವುದೋ ಸಣ್ಣ ಕಾರಣಕ್ಕೆ ಜಗಳ ಶುರು ಮಾಡಿ, ಕೆಟ್ಟದಾಗಿ ಮಾತನಾಡಿದ್ದನ್ನು ಮರೆಯಲೇ, ನಂತರ ನಮ್ಮಪ್ಪ ನಮ್ಮ ಮನೆಗೆ ಬಂದೇ ಇಲ್ಲ ಎನ್ನುವ ನೋವನ್ನು ಮರೆಯಲೇ, ಮಳೆ ಹನಿ ಬಿದ್ದಾಗ... ಪುಟ್ಟ ಮಗಳ ಸಮೇತ ಜೋರು ಮಳೆಯಲ್ಲಿ ನನ್ನನ್ನು ಮನೆಯಿಂದ ಹೊರಗಟ್ಟಿದ್ದನ್ನು ಮರೆಯಲೇ, ತವರು ಮನೆಯಲ್ಲಿ ಕೊಟ್ಟಿದ್ದ ಅಷ್ಟಿಷ್ಟು ಚಿನ್ನವನ್ನು, ಯಾಮಾರಿಸಿ, ಮಾರಿಬಂದ ಹಣವನ್ನು ಹಾಳು ಮಾಡಿದ್ದನ್ನು ಮರೆಯಲೇ, ಕುಡಿದು ಬೀದಿಯಲ್ಲಿ ಬಿದ್ದು ನಮ್ಮಗಳ ಮಾನ ಹರಾಜು ಹಾಕಿದ್ದನ್ನು ಮರೆಯಲೇ, ಮೊದಲ ರಾತ್ರಿಯ ಕ್ರೌರ್ಯವನ್ನು ಮರೆಯಲೇ, ದಿನದಿನವೂ ಕೊಟ್ಟ ಮಾನಸಿಕ ಹಿಂಸೆಯನ್ನು ಮರೆಯಲೇ... ಮರೆಯೋದು ಆಗದ ಮಾತು... ಇನ್ನು ಕ್ಷಮಿಸೋದು.. ಆ ಮನುಷ್ಯ ಕ್ಷಮೆಗೆ ಅರ್ಹನೇ ಅಲ್ಲ... ಮಾಡಿದ ಕರ್ಮ ಕಾಲಿಗ್ ಸುತ್ಕೊಂಡು ನರಳ್ತಾ ಇದ್ದಾನೆ... ನಂಗೂ ವಿಧಿ ಇಲ್ಲ... ಮನಸ್ಸಿಲ...