Posts

Showing posts from August, 2026

ಶ್ರಾವಣ - ನಿರಾಶೆಗೆ ಕಾರಣ

Image
 ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ, ಬಂತು  ಬೀಡಿಗೆ... ಬಂತು ಶ್ರಾವಣ...  ಬೇಂದ್ರೆಯವರ ಈ ಹಾಡು ಕೇಳಲು ಪುಳಕ... ಅದರಲ್ಲೂ ಸಿ ಅಶ್ವತ್ ಅವರು ರಾಗ ಸಂಯೋಜಿಸಿ ಹಾಡಿದ್ದನ್ನು ಕೇಳುವಾಗ ಅರಿವಿಲ್ಲದಂತೆ ಕಾಲು ಹೆಜ್ಜೆ ಹಾಕುತ್ತದೆ ಕೈ ಜೊತೆಗೂಡಿಸುತ್ತದೆ.      ಶ್ರವಣ ನಕ್ಷತ್ರದ ಪ್ರಾಧಾನ್ಯತೆಯ ಕಾರಣ ಶ್ರಾವಣ ಮಾಸ ಎಂಬ ಹೆಸರು ಬಂದಿರಬಹುದೇ? ಪ್ರಶ್ನೆ  ಪಕ್ಕಕ್ಕೆ ಇಟ್ಟು ಗಮನಿಸಿದರೆ, ಶ್ರಾವಣಮಾಸ, ಶುರುವಾಯಿತೆಂದರೆ, ಹಬ್ಬಗಳ ಸಾಲು ಶುರುವಾದಂತೆ. ನಾವು ಚಿಕ್ಕವರಿದ್ದಾಗ ಹಬ್ಬ ಎಂದ ಕೂಡಲೇ.. ಆಯಾ ಹಬ್ಬಗಳ ವಿಶೇಷ ಸಿಹಿ ತಿನಿಸುಗಳ ತಿನ್ನುವ ಸಂಭ್ರಮ.  ಭೀಮನ ಅಮಾವಾಸ್ಯೆಯ ದಿನ, ಹೊಸ್ತಿಲ ಮೇಲಿಟ್ಟ ಭಂಡಾರವನ್ನು, ಮೊಣ ಕೈಯಿಂದ ಗುದ್ದಿ, ಒಳಗಿಟ್ಟಿರುವ ಕಾಸನ್ನು ತೆಗೆದುಕೊಂಡು, ಸಿಹಿಯನ್ನು ತಿನ್ನುವುದು. ನಾಗರ ಪಂಚಮಿಯಂದು ಅಕ್ಕಂದಿರ ಮನೆಗೆ ಹೋಗಿ, ಬೆನ್ನು ತೊಳಿಸಿಕೊಂಡು, ನುಚ್ಚಿನುಂಡೆ, ಹೊಯ್ಗಡುಬು ತಿನ್ನುವ ಕಾರ್ಯಕ್ರಮ. ವರಮಹಾಲಕ್ಷ್ಮಿಯ ಹಬ್ಬಕ್ಕಂತು ಒಬ್ಬಟ್ಟಿನ ಸಮಾರಾಧನೆ. ಇದೆಲ್ಲದರ ಮಧ್ಯೆ ಶ್ರಾವಣ ಶನಿವಾರದಂದು ಮಾಡಲೇಬೇಕಾದ ಪಡಿ ಬೀರುವ ಕಾಯಕ. ಶನಿವಾರ morning class. ಅಂದರೆ ಬೆಳಿಗ್ಗೆ  ಬೇಗ ಪ್ರಾರಂಭ. ಸುಮಾರು 8 ಘಂಟೆ ಇರಬಹುದಾ ನೆನಪಿಲ್ಲ. ( ಬೇರೆ ದಿವಸ 10 ಗಂಟೆಗೆ ಪ್ರಾರಂಭ  ಆದರೂ ಅದು ಮಾರ್ನಿಂಗ್ ಅಲ್ಲ ...ಯಾಕೋ ). ಅಷ್ಟರಲ್ಲಿ ಸ್ನಾನ ಮಾಡಿ, ಅಕ್ಕ...

ಕಗ್ಗದ ಭಟ್ಟರು

Image
  ಮೊನ್ನೆ ಶನಿವಾರ, ಅಶಕ್ತ ಪೋಷಕ ಸಭಾದಲ್ಲಿ ನಡೆದ, ವಾರದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಂದಿದ್ದವರು ' ಕಗ್ಗದ ಭಟ್ಟ ' ಎಂದೆ ಖ್ಯಾತರಾದ ಪ್ರೊ. ಎಚ್ ಎಸ್ ಲಕ್ಷ್ಮೀನಾರಾಯಣ ಭಟ್ಟರು.  ಸಾಹಿತ್ಯದಲ್ಲಿ ಹಾಸ್ಯ ಎಂಬ ವಿಷಯವನ್ನು ಇಟ್ಟುಕೊಂಡು, ಸುಮಾರು ಒಂದು ಗಂಟೆಗೂ ಮಿಕ್ಕಿ ಮಾತನಾಡಿದ / ಹಾಡಿದ / ಹಾಡಿಸಿದ ಭಟ್ಟರು, ಹಿರಿಯ ನಾಗರಿಕರ ಪಾಲ್ಗೊಳ್ಳುವಿಕೆಯನ್ನು, ಪ್ರೋತ್ಸಾಹಿಸಿದರು, ಸಫಲರಾದರು ಸಹ. 80 ವರ್ಷದ ಲಕ್ಷ್ಮೀನಾರಾಯಣ ಭಟ್ಟರು ಹಾಡುಗಳನ್ನು ಹಾಡುವಾಗ, ಸ್ವರ ಮೇಲೆತ್ತಲು ಸ್ವಲ್ಪ ಕಷ್ಟ ಪಟ್ಟರೂ ಸಹ, ಉತ್ಸಾಹ ಮಾತ್ರ ಉತ್ತುಂಗದಲ್ಲಿತ್ತು. ಪ್ರತಿ ಹಂತದಲ್ಲೂ ಒಂದಲ್ಲ ಒಂದು ಗಾಯನ ಇದ್ದೇ ಇತ್ತು.  ಇಂಗ್ಲೀಷ್ ಮಿಶ್ರಿತ ಹಾಸ್ಯರೂಪದ ಗಣಪತಿಯ ಸ್ತೋತ್ರ, ಬೆಂಗಳೂರಾಯಿತು ಬೊಂಬಾಯಿ ಎಂದು ಶುರು ಮಾಡಿ, ಬೆಂಗಳೂರಿನ ಕೆಲವು ಅಪಸವ್ಯಗಳನ್ನು ಹಾಸ್ಯ ಭರಿತವಾಗಿ ಪ್ರಸ್ತುತ ಪಡಿಸಿದರು. ಈಶ್ವರನ ತೊಡೆಯ ಮೇಲೆ ಕೂತ ಗೌರಿ ಹಾಗೂ ತಲೆಯ ಮೇಲೆ ಕೂತ ಗಂಗೆ ಇವರಿಬ್ಬರನ್ನು ಸಂಭಾಳಿಸುವ ಪ್ರಸಂಗವನ್ನು ವಿವರಿಸಿ, ಎಲ್ಲರೂ ಶಿವನಿಗೆ ಅಯ್ಯೋ ಪಾಪ ಅಯ್ಯೋ ಪಾಪ ಎಂದು ಹೇಳುವಂತೆ ಮಾಡಿದ್ದು ವಿಶಿಷ್ಟವಾಗಿತ್ತು. ಆಚೆ ಮನೆ ಸುಬ್ಬಮ್ಮನ ಏಕಾದಶಿ ಉಪವಾಸದ ವರ್ಣನೆ, ಸಾಕಷ್ಟು  ಸಲ ಕೇಳಿದ್ದ ನಿವಾಸಿಗಳಿಗೂ, ನಗೆಯುಕ್ಕಿಸಲು ಸಾಧ್ಯವಾಯಿತು. ಕಗ್ಗದ ಭಟ್ಟರಾಗಿ, ಕಗ್ಗವನ್ನು ಬಿಡಲಾದೀತೆ ? ನಗುವೊಂದು ರಸಪಾಕ  ಅಳುವೊಂದು ರಸಪಾಕ, ನಗುವು ಸ...

ಅಂಕಿ - ಸಂಖ್ಯೆ - ಲೆಕ್ಕ

Image
  ಅಂಕಿ ಸಂಖ್ಯೆಗಳು ಜೀವನದ ಅವಿಭಾಜ್ಯ ಅಂಗ. ಅದರ ಒಡನಾಟವಿಲ್ಲದ ದಿನಗಳೇ ಇಲ್ಲವೇನೋ. ನನ್ನ ಜೀವಿತದಲ್ಲಿ, ಅಂಕಿಯೊಂದಿಗೆ ಗೆಳೆತನ ಬೆಸೆದದ್ದು, ಬಾಯಿ ಪಾಠದ ಪ್ರಾರಂಭದಿಂದ... ನನಗೆ ಸುಮಾರು 3-4 ವರ್ಷ ಇರಬಹುದು. ಬಾಲ ಭಾಷೆಯಲ್ಲಿ ಹೇಳುತ್ತಿದ್ದ ಬಾಯಿ ಪಾಠ...  ಶುಕ್ಲಾಂಭರದರಂ ವಿಷ್ಣುಂ...  ಗುರು ಬ್ರಹ್ಮ ಗುರು ವಿಷ್ಣು..  ಸರಸ್ವತಿ ನಮಸ್ತುಭ್ಯಂ... ಇಂದ ಪ್ರಾರಂಭಗೊಂಡು.. ಸೋಮವಾರ ಮಂಗಳವಾರ,... ಪಾಡ್ಯ, ಬಿದಿಗೆ, ತದಿಗೆ,    ಚೈತ್ರ ವೈಶಾಖ... ವಸಂತ ಋತು, ಗ್ರೀಷ್ಮ ಋತು ಮುಗಿಸಿ  ಒಂದು ಎರಡು 3 4 ಐದು ಆರು 7 8 ಒಂಭತ್ತು ಹತ್ತು ಹೇಳಿ ಮುಗಿಸುತ್ತಿದ್ದದ್ದು. ಅದನ್ನು ಮೊದಲು ಅಳವಡಿಸಿಕೊಂಡಿದ್ದು.. ಶಾಲೆಯಲ್ಲಿ ಉಪಾಧ್ಯಾಯರಿಗೆ ಕಿರುಬೆರಳು ತೋರಿಸಿ (ಒಂದಕ್ಕೆ)  ತೋರು ಬೆರಳು ಮಧ್ಯಬೆರಳು ತೋರಿಸಿ ( ಎರಡಕ್ಕೆ) ಆಚೆ ಹೋಗವುದು. ಕೂಡಿ ಕಳೆಯುವಾಗ ಕೈಬೆರಳುಗಳ ಸಹಾಯದಿಂದ ಎಣಿಸುತ್ತಿದ್ದದ್ದು.  ಎಲ್ಲಾ ಆಟಗಳಲ್ಲೂ ಒಂದಲ್ಲ ಒಂದು ತರಹ ಎಣಿಕೆ -  ಲೆಕ್ಕ ಇದ್ದದ್ದೆ.  ಈಜಾಟದ ಸಮಯದಲ್ಲಿ, ಯಾರು ಹೆಚ್ಚು ಸಮಯ ನೀರಲ್ಲಿ ಮುಳುಗಿರುತ್ತಾರೆ ಎನ್ನುವುದು ಎಣಿಕೆಯ ರೂಪದಲ್ಲಿ ಇರುತ್ತಿತ್ತು. ನಾವು ಯಾರನ್ನು ಗೆಲ್ಲಿಸಬೇಕೋ, ಅವರು ಮುಳುಗಿದಾಗ ಒಂದು, ಎರಡು, ಮೂರು, ನಾಲ್ಕು... ಇದು ಎಣಿಕೆಯ ಓಟ, ಬೇರೆಯವರು ಮುಳುಗಿದಾಗ, ಒಂದು......... ಎರಡು........ ಮೂರು....... ನಾಲ್ಕು.....