Posts

Showing posts from November, 2026

ಸಾವಿಲ್ಲದ ಮನೆಯ ಸಾಸಿವೆ

Image
  ಕಿಸಾ ಗೌತಮಿ ತನ್ನ  ರೋಗಪೀಡಿತ ಮಗುವನ್ನು, ತನ್ನ ತೋಳ್ತೆಕ್ಕೆಯಲ್ಲಿ ಅಪ್ಪಿಕೊಂಡು ವೈದ್ಯರ ಬಳಿ ಬರುತ್ತಾಳೆ. ವೈದ್ಯರು ಮಗುವನ್ನು ಪರೀಕ್ಷಿಸಿ, ಅದರ ಪ್ರಾಣ ಪಕ್ಷಿ ಹಾರಿಹೋಗಿದೆಯೆಂದು ತಿಳಿಸುತ್ತಾರೆ. ಇದನ್ನು ಒಪ್ಪಲಾಗದ ಕಿಸಾಗೌತಮಿ, ರೋದಿಸುತ್ತಾ, ತನ್ನ ಮಗುವನ್ನು ಬದುಕಿಸಿಕೊಡಿರೆಂದು ಎದುರಿಗೆ ಸಿಕ್ಕಿದ ಎಲ್ಲರನ್ನೂ ಬೇಡಿಕೊಳ್ಳುತ್ತಾಳೆ. ಆಗ ಒಬ್ಬ ಹಿರಿಯರು ಗೌತಮ ಬುದ್ಧನ ಬಳಿ ಹೋಗಬೇಕೆಂದು ಸಲಹೆ ಕೊಡುತ್ತಾರೆ.  ಬುದ್ಧನ ಬಳಿ ಬಂದ ಕಿಸಾಗೌತಮಿ, ಮಗುವನ್ನು ಬದುಕಿಸಿಕೊಡೆಂದು ಅಂಗಲಾಚುತ್ತಾಳೆ. ಮಗುವನ್ನು ಮುಂದಿದ್ದ ಮಣೆಯ ಮೇಲೆ ಮಲಗಿಸಲು ಹೇಳಿದಾಗ ಕಿಸಾಗೌತಮಿಗೆ ಅನುಮಾನ. ಹಿಂದೆ ಮುಂದೆ ನೋಡುತ್ತಾಳೆ.  ಮಗುವನ್ನು ಪರೀಕ್ಷೆ ಮಾಡಲು ಇದು ಸಹಾಯವಾಗುತ್ತದೆ ಎಂದು ಹೇಳಿದ ಗೌತಮ ಬುದ್ಧನ ಮಾತಿಗೆ ತಲೆಬಾಗಿ, ಮಗುವನ್ನು ಮಣೆಯ ಮೇಲೆ ಮಲಗಿಸುತ್ತಾಳೆ. ಮಗುವಿನ ಮೈ ಮುಟ್ಟಿ ತಣ್ಣಗಿದೆ ಎಂದು ತಿಳಿದು, ಮೂಗಿನ ಬಳಿ ಕೈಯಿಟ್ಟು ಉಸಿರಾಟವನ್ನು ಪರೀಕ್ಷಿಸಿ, ಮಗು ಸತ್ತಿದೆ ಎಂದು ಖಾತ್ರಿಪಡಿಸಿಕೊಂಡ ಗೌತಮ ಬುದ್ಧರು, ತಾಯಿಯ ಆಕ್ರಂದನವನ್ನು ಗಮನಿಸಿ, ಸತ್ಯವನ್ನು ಹೇಳಿದರೆ ಒಪ್ಪಲಾಗದ ಮನಸ್ಥಿತಿಯನ್ನು ಮನಗಂಡು, ಒಂದು ನಿಮಿಷ ಯೋಚಿಸಿ, ಕಿಸಾಗೌತಮಿಗೆ ಹೇಳುತ್ತಾರೆ... ಇದಕ್ಕೊಂದು ದಾರಿ ಇದೆ... ಒಂದಷ್ಟು ಸಾಸಿವೆ ಕಾಳು ಬೇಕು ಅಷ್ಟೇ... ಗೌತಮಿ ತಕ್ಷಣವೇ ಮಗುವನ್ನು ಎತ್ತಿಕೊಂಡು ಹೊರಡಲು ತಯಾರಾಗುತ್ತಾಳೆ.  ಎಲ್ಲಿಗ...