Posts

Showing posts from April, 2026

ಕಸದ ರಾಶಿ ಕರಗುವುದಿಲ್ಲ ಏಕೆ?

Image
ಬೆಂಗಳೂರಿನ ಕೆಲವು ನಾಗರೀಕರಿಗೆ ಹಾಗೂ ನಗರ ಪಾಲಿಕೆಯ ಆಡಳಿತ ನಡೆಸುವವರ ಮುಂದೆ ಧುತ್ತೆಂದು ನಿಲ್ಲುವ ಪ್ರಶ್ನೆ. ಈ ಪ್ರಶ್ನೆ ನನ್ನನ್ನೂ ಸತತವಾಗಿ ಕಾಡಿದೆ.. ಕಾಡುತ್ತಿದೆ. ನನ್ನದೇ ಆದ ರೀತಿಯಲ್ಲಿ ಇದಕ್ಕೆ ಕಾರಣ ಹುಡುಕುವಾಗ ನನ್ನ ಗಮನಕ್ಕೆ ಬಂದ ಅಂಶಗಳು... ಸಾಧ್ಯವಾಗ ಬಹುದಾದ ಪರಿಹಾರದ ದಾರಿಗಳ ಒಂದು ಅವಲೋಕನ ಈ ಲೇಖನದ ಉದ್ದೇಶ. ಈ ಹುಡುಕಾಟದಲ್ಲಿ ನಾನು ಮಾತನಾಡಿದ್ದು...  1. ಲಿಂಗ ಭೇದವಿಲ್ಲದೆ   ಕಸ ಎಸೆಯಲು ಬಂದ ಚಿಕ್ಕ ಮಕ್ಕಳಿಂದ  ಮೊದಲಗೊಂಡು ಹಿರಿಯ ನಾಗರಿಕರ ತನಕ. 2. ಮನೆ ಕೆಲಸ ಮಾಡುವ ಹೆಂಗಸರು. 3. ಗಂಡ ಹೆಂಡತಿ ಇಬ್ಬರೇ ಇರುವ   / ಒಬ್ಬರೇ ಇರುವ ಹಿರಿಯ ನಾಗರಿಕರು. 4. ಕಷ್ಟವಾದರೂ, ಹೇಗೋ ಕಸವನ್ನು ಗಾಡಿಗೆ ಮುಟ್ಟಿಸುವ ಶಿಸ್ತು ಬದ್ಧ ನಾಗರಿಕರು. 5. ಒಂದಷ್ಟು ಹಣ ಕೊಟ್ಟು (ಲಂಚ ಎನ್ನಲೇ ಅಥವಾ TIPS - To Improve Personalised Service ಎನ್ನಲೇ)  ಕೆಲಸ ಸುಗಮ ಮಾಡಿಕೊಳ್ಳುವ ಮನಸ್ಸುಳ್ಳವರು. 6. ಹಣ ಕೊಡಲಾಗದೆ / ಮನಸ್ಸಿಲ್ಲದೆ ಹೇಗೋ ಕಸವನ್ನು ಮನೆಯಿಂದ ಆಚೆಗೆ ತಳ್ಳುವವರು. 7. ಪೌರಕಾರ್ಮಿಕರು, ಅದರಲ್ಲೂ ವಿಶೇಷವಾಗಿ ಕಸದ ಗಾಡಿಯವರು 8. ಕಸದ ರಾಶಿಯನ್ನು ತಡೆಯಲು ನಿಯೋಜಿಸಲಾದ ಮಾರ್ಷಲ್ ಗಳು 9. ಎಲ್ಲಾ ಸಮಸ್ಯೆಗಳ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಾ, ವಿಧವಿಧವಾದ ಸಲಹೆಗಳನ್ನು ಕೊಡುವ ವಿಶೇಷ ಜನರು 10. ಯಾವ ವಿಭಾಗದಲ್ಲೂ ಗುರುತಿಸಿಕೊಳ್ಳದ, ಆದರೆ ಸಮಸ್ಯೆಯ ಬಿಸಿ ತಟ್ಟಿದವ...

ತೋಚಿದ್ದು - ಗೀ(ಬೀ)ಚಿದ್ದು

Image
  ನಾಲ್ಕಾರು ವಾರಗಳಿಂದ ಯಾವ ಲೇಖನವನ್ನೂ ಬರೆಯದೆ ಇದ್ದದ್ದು, ಸೋಮಾರಿತನದ ಭಾಗವೋ, ಸ್ಫೂರ್ತಿಯ ಒರತೆಯ ಕೊರತೆಯೋ ತಿಳಿಯದು. ವಿಷಯದ ಕೊರತೆಯಂತೂ ಅಲ್ಲ. ಕಾರ್ಯರೂಪಕ್ಕಂತೂ ಇಳಿಸಲಿಲ್ಲ. ಆತ್ಮೀಯ ಸ್ನೇಹಿತ ಕೃಪನ ಅಗಲಿಕೆ, ಎಲ್ಲ ಅಡ್ಡಿಯನ್ನು ತೊಡೆದು ಹಾಕಿ, ಜಡತ್ವವನ್ನು ಮೀರಿ,  ಬರೆಯುವ ಸ್ಫೂರ್ತಿ ಎಲ್ಲಿಂದ ಬಂತೋ, ಆ ದೇವರೇ ಬಲ್ಲ. ಅದಕ್ಕಾಗಿ ಕೃಪನಿಗೆ ಧನ್ಯವಾದಗಳನ್ನು ಸಲ್ಲಿಸುವುದು ಸಮಂಜಸ. ಆಗ ನೆನಪಿಗೆ ಬಂದದ್ದೇ ನಾನು ಬಹುವಾಗಿ ಮೆಚ್ಚಿದ ಸಾಹಿತಿ ಬೀಚಿಯವರ ಪದಪುಂಜ ತೋಚಿದ್ದು - ಗೀಚಿದ್ದು .  ಸುಧಾ ವಾರಪತ್ರಿಕೆಯಲ್ಲಿ ಬರುತ್ತಿದ್ದ ನೀವು ಕೇಳಿದಿರಿ ವಿಭಾಗದ ಪ್ರಶ್ನೋತ್ತರ, ಬೀಚಿಯವರ ಸಮಯೋಚಿತ, ಸಾಂದರ್ಭಿಕ, ಹಾಸ್ಯಭರಿತ ಉತ್ತರಗಳು, ಇಂದಿಗೂ ತನ್ನ ಸೊಗಡನ್ನು ಉಳಿಸಿಕೊಂಡಿವೆ. ಅದರ ಸಂಕಲನ ಉತ್ತರಭೂಪ ಪುಸ್ತಕವನ್ನು ಆಗಾಗ್ಗೆ ತಿರುವಿ ಹಾಕುವ ಚಪಲ ನನ್ನದು. S J Plytechnic ನಲ್ಲಿ ಓದುತ್ತಿದ್ದ ಸಮಯ. ಒಂದು ಕಾರ್ಯಕ್ರಮಕ್ಕೆ ಬೀchi ಯವರು ಮುಖ್ಯ ಅತಿಥಿ. ಕಾರ್ಯಕ್ರಮದ ಪ್ರಾರಂಭಕ್ಕೆ ಮೊದಲು ಅವರೊಡನೆ ಕೆಲ ನಿಮಿಷ ಮಾತನಾಡುವ ಅವಕಾಶ ದೊರೆತಿತ್ತು. ಅಲ್ಪ ಸಮಯದಲ್ಲೇ ಅವರ ಹಾಸ್ಯ ಚಟಾಕಿಗಳನ್ನು ಕೇಳುವ ಸೌಭಾಗ್ಯ ನನ್ನದಾಗಿತ್ತು. ಅವರ ಬರವಣಿಗೆಗೆ ಸ್ಫೂರ್ತಿಯೇನು ಎಂಬ ಪ್ರಶ್ನೆಗೆ ತೋಚಿದ್ದನ್ನು ಗೀಚುವುದು ಅಷ್ಟೇ ಎಂಬ ಚುಟುಕಾದ ಉತ್ತರ.  ತೋಚಿದ್ದನ್ನು ಗೀಚಿದ್ದು ಬೀಚಿ ಹಾಗಾಗಿ ಆ ಗೀಚುಗಳು ಬೀಚಿದು ಅಪ್ರತಿಮ ...

ಕಣ್ಮರೆಯಾದ ಕೃಪ

Image
  ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವು ನನ್ನ ನಾಲಿಗೆಗೆ ಬರಲಿ... ಕಷ್ಟದಲ್ಲಿರಲಿ... ಉತ್ಕೃಷ್ಟದಲ್ಲಿರಲಿ... ... ... ಎಂತೋ ಶ್ರೀ ಪುರಂದರ ವಿಠಲನ ನಾಮವ ಅಂತ್ಯಕಾಲದಲ್ಲಿ ಚಿಂತಿಸೋ ಹಾಗೆ.... ಹೋಗಿ ಬಾ... ಕೃಪಾ... ಹೋಗಿ ಬಾ.. . ಎಂದು ಹಾಡಿ, ನಾದಾಕ್ಷತೆಯನ್ನು ಕೊಟ್ಟು ವಿದಾಯ ಹೇಳಿದವರು ಸಂಗೀತ ವಿದ್ವಾನ್ ಆರ್ ಕೆ ಪದ್ಮನಾಭ ಅವರು, ತಮ್ಮ ಪ್ರೀತಿಯ ಗೆಳೆಯ /  ನೆಂಟ ಕೃಪಾ ಅವರ ಪಾರ್ಥಿವ ಶರೀರದ ಮುಂದೆ ನಿಂತು. ಈ ಸಮಯದಲ್ಲಿ ನೆರೆದಿದ್ದ ಬಹು ಜನರ ಕಣ್ಣಲ್ಲಿ ನೀರು ತುಂಬಿದ್ದನ್ನು ಗಮನಿಸಿದೆ, ಅದರಲ್ಲೂ ಕೃಪಾ ಅವರ ಮಗನ ದುಃಖದ ಕಣ್ಣೀರು ಮನಸ್ಸು ಕಲಕುವಂತಿತ್ತು. ಅಲ್ಲಿಂದ ಹೊರಟ ಪಾರ್ಥಿವ ಶರೀರ ಬನಶಂಕರಿಯ ವಿದ್ಯುತ್ ಚಿತಾಗಾರವನ್ನು ಮುಟ್ಟಿದ ನಂತರ, ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆಯ ವಿಧಿ ವಿಧಾನಗಳನ್ನು ಮುಗಿಸಿ  ಚಿತಾಗಾರದೊಳಗೆ ದೇಹವನ್ನು ಕಳಿಸಿದಾಗ.... ಧಗ್ಗನೆ ಬೆಂಕಿ ಹತ್ತಿ ದೇಹವನ್ನು ಆವರಿಸಿದಾಗ.. ಮನಸ್ಸು ಮೂಕವಾಗಿ ರೋದಿಸಿತು. ಆತ್ಮೀಯ ಗೆಳೆಯ ಕೃಪ ಅಗ್ನಿಯಲ್ಲಿ ಲೀನವಾಗಿ ಹೋದರು. ಕಣ್ಣಿಂದ ಮರೆಯಾದರೂ ಬಹುಕಾಲ ಮನಸ್ಸಿನಲ್ಲಿ ಇರುವ ವ್ಯಕ್ತಿತ್ವ ಕೃಪಾ. ಏನಾದರೂ ಜೀವನ ನಿಲ್ಲದು. ಬಂದು ಸ್ನಾನ ಮಾಡಿ, ಊಟ ಮಾಡಿ, ಸಣ್ಣ ನಿದ್ದೆ ಮಾಡಿ ಎದ್ದು, ನೆನಪುಗಳನ್ನು ಮೆಲುಕು ಹಾಕುತ್ತಾ ಕೂತಾಗ... ಬಹಳ ದಿನಗಳಿಂದ ಬರೆಯದೆ ಇದ್ದದ್ದನ್ನು ಮನಗಂಡು, ಕೃಪ ಅವರಿಗೆ ಅಕ್ಷರದ ಮೂಲಕ ಅಶ್ರುತರ್ಪಣ ಕೊಡುವ ಪ್ರಯತ್ನವೇ...