Posts

Showing posts from May, 2026

ಕುರುಡು ಪ್ರೀತಿ ತಂದ ಫಜೀತಿ

Image
ಬುಧವಾರ ಸಂಜೆ ಆಪ್ತಸಮಾಲೋಚನೆಯ ಸಮಯ. ಪ್ರಸನ್ನ ಆಪ್ತ ಸಲಹಾ ಕೇಂದ್ರಕ್ಕೆ ಹೊರಡಲು ತಯಾರಿ ಮಾಡಿಕೊಳ್ಳುತ್ತಿದ್ದೆ... ಆಗ ಬಂದದ್ದು ದೂರವಾಣಿ ಕರೆ... ಅತ್ತ ಕಡೆಯಿಂದ ನಮಸ್ಕಾರದ ನಂತರ ಕೇಳಿದ್ದು ಎಷ್ಟು ಹೊತ್ತಿಗೆ ಬರುತ್ತೀರಾ? ಮಾತಿನಿಂದ ಅರ್ಥವಾಯಿತು ಇದು ಆಪ್ತ ಸಲಹೆ ವಿಚಾರಕ್ಕಾಗಿ ಎಂದು. ಇನ್ನೇನು  ಹೊರಟಿದ್ದೇನೆ, 20 ನಿಮಿಷದಲ್ಲಿ ಅಲ್ಲಿರುತ್ತೇನೆ, ಎಂದು ಹೇಳಿ ಮಾತು ಮುಗಿಸಿದೆ. ಪ್ರಸನ್ನ ಆಪ್ತ  ಸಲಹಾ ಕೇಂದ್ರದ ಬಾಗಿಲು ಹೊಕ್ಕಂತೆಯೇ ಎದುರಾದದ್ದು ಮಧ್ಯ ವಯಸ್ಸಿನ ಇಬ್ಬರು ಗಂಡಸರು, ನನಗಾಗಿ ಕಾಯುತ್ತಿದ್ದವರು. ಪರಿಚಯದ ನಂತರ ಮಾತು ಪ್ರಾರಂಭ ಮಾಡುವ ಸಮಯ " ಮೀರು ಚಪ್ಪಂಡ ಸರ್..." ಎಂಬ ಮಾತು ಹೇಳಿದ್ದು ನಂತರ ತಿಳಿದಂತೆ ಹುಡುಗಿಯ ಅಪ್ಪ. ಅವರೊಂದಿಗಿನ ಮಾತಿನ ಸಾರಾಂಶ: ಇಬ್ಬರು ಬೀಗರುಗಳು. ಮಕ್ಕಳ ಮದುವೆಯಾಗಿ ಇನ್ನೂ ವರ್ಷ ಕಳೆದಿಲ್ಲ. ಚಿಕ್ಕವಯಸ್ಸಿನ  ಮಕ್ಕಳಿಗೆ ತಮ್ಮ ಇಚ್ಛೆಗೆ ವಿರುದ್ಧ, ಆದರೆ   ಅನಿವಾರ್ಯವಾಗಿ ಮದುವೆ  ಮಾಡಿ ಮುಗಿಸಿದ್ದಾರೆ. ಎರಡು ಕುಟುಂಬಗಳ ಹಣಕಾಸಿನ ಪರಿಸ್ಥಿತಿ ಹೊಂದಾಣಿಕೆಯಾಗದಿರುವುದೇ ದೊಡ್ಡ ವಿಚಾರ. ಹುಡುಗಿಯ ಮನೆಯವರು ಉಳ್ಳವರು, ಹುಡುಗನ ಮನೆಯವರು ಮಧ್ಯಮ ವರ್ಗದ ಕುಟುಂಬ. ಸದ್ಯದ ಪರಿಸ್ಥಿತಿಯಲ್ಲಿ, ಮಗಳು ತವರು ಮನೆಗೆ ಬಂದಿದ್ದಾಳೆ.. ಗಂಡನ ಮನೆಗೆ ಹೋಗಲು ಮನಸ್ಸಿಲ್ಲ. ಯಾವ ವಿಷಯವನ್ನು ಮಾತನಾಡುತ್ತಿಲ್ಲ.  ಈ ಕಡೆ ಮಗನ ಮನೆಯಲ್ಲೂ ಬಿಗು ವಾತಾವರಣ, ಹುಡುಗನ...

ಪದವಿ - ಜ್ಞಾನ - ಸ್ಥಾನಮಾನ

Image
  ಹಳ್ಳಿಯಿಂದ ಬೆಂಗಳೂರಿಗೆ ಹೈಸ್ಕೂಲ್ ಸೇರಲು ಬಂದ ಸಮಯ. ಹಳ್ಳಿಯಲ್ಲಿ ಓದಿದ್ದು ಕನ್ನಡ ಮೀಡಿಯಂ... ಇಲ್ಲಿ ಬಂದು ಸೇರಿದ್ದು ಇಂಗ್ಲಿಷ್ ಮೀಡಿಯಂ. ಉಪಾಧ್ಯಾಯರುಗಳೆಲ್ಲ ಕನ್ನಡದಲ್ಲಿ ಮಾತನಾಡುತ್ತಿದ್ದರೂ... ಪುಸ್ತಕಗಳು, ಅವರು ಕೊಡುತ್ತಿದ್ದ ನೋಟ್ಸ್, ಹಾಗೂ ವಿಷಯ ಇಂಗ್ಲೀಷಿನಲ್ಲಿ ಇರುತ್ತಿತ್ತು.  ಇದರ ಜೊತೆಗೆ ನಾನು ಹಾಕುತ್ತಿದ್ದ ಲಾಡಿಯಿಂದ ಕಟ್ಟುವ ಚಡ್ಡಿ, ಹಳ್ಳಿಯಲ್ಲಿ ಹೊಲಿದ ಶರಟು ಬಟ್ಟೆಗಳು,  ನನ್ನ ಸಹಪಾಠಿಗಳೊಂದಿಗೆ ಹೋಲಿಸಿ ನೋಡಿದಾಗ ನನ್ನಲ್ಲಿದ್ದ ಹಿಂಜರಿಕೆ ಜಾಸ್ತಿಯಾಗಿ ಒಂದು ವಿಧವಾದ ಕೀಳರಿಮೆ ಬಂದಿದ್ದು ಸತ್ಯ. ಕಾಲಕ್ರಮೇಣ ಇದನ್ನು ಹೋಗಲಾಡಿಸಿಕೊಂಡೆನಾದರೂ, ಗಣಿತದ ಫಾರ್ಮುಲಾಗಳು, ಪೈಥಾಗರಸ್ ಥಿಯರಂ, ಆರ್ಕಿಮಿಡಿಸ್ ಪ್ರಿನ್ಸಿಪಲ್, ನ್ಯೂಟನ್ ಲಾಸ್ ಆಫ್ ಮೋಶನ್ ಎಲ್ಲವನ್ನು ಅರ್ಥೈಸಿಕೊಳ್ಳುವುದು ಕಷ್ಟವೆನಿಸುತ್ತಿತ್ತು.  ಇದೆಲ್ಲಾ ಕಲಿತು ಆಗಬೇಕಾದುದೇನು ಎಂದು ಅನಿಸಿದ್ದೂ ಉಂಟು. ಆ ಸಮಯದಲ್ಲೇ ಯಾರೋ ಹೇಳಿದ..... ನ್ಯೂಟನ್ ಮೇಲಿನ ವ್ಯಂಗ್ಯ ಚಿತ್ರಣ.  ಕೆಲಸವಿಲ್ಲದ ಸೋಮಾರಿಯೊಬ್ಬ ಸೇಬು ಹಣ್ಣಿನ ಮರದ ಕೆಳಗೆ, ಏನೋ ಯೋಚಿಸುತ್ತಾ ಮಲಗಿದ್ದಾಗ, ಆತನ ಮೇಲೆ ಬಿದ್ದ ಸೇಬು ಹಣ್ಣಿನಿಂದ, ಆತನಿಗೆ ಹೊಳೆದದ್ದು ಭೂಮಿಯ ಗುರುತ್ವಾಕರ್ಷಣೆ ಶಕ್ತಿಯ ( gravitational force ) ಬಗ್ಗೆ. ಈ ವಿಷಯ ಈಗ ನಮ್ಮ ತಲೆಯನ್ನು ವೃಥಾ ತಿನ್ನುತ್ತಿದೆ... ಅನ್ನುವ ಕಥೆ ಸತ್ಯಕ್ಕೆ ಹತ್ತಿರವೇನೋ ಎನಿಸುತ್ತಿತ್ತು....

ಸಮಯಾ ಸಮಯ - ಕಾಲಾನುಕಾಲ

Image
1988 ರ ಸಮಯ, ಭಾನುವಾರ ಬೆಳಿಗ್ಗೆ  10 ಘಂಟೆಗೆ, ದೂರದರ್ಶನದಲ್ಲಿ BR Chopra ಅವರು ತಯಾರಿಸಿದ ಮಹಾಭಾರತ ಧಾರಾವಾಹಿ  ಪ್ರಸಾರವಾಗುತ್ತಿತ್ತು. ಭಾರತದ ಬಹು ಮನೆಗಳಲ್ಲಿ ಟಿವಿಗೆ ಪೂಜೆಮಾಡಿ, ಮನೆಮಂದಿಯೆಲ್ಲಾ ಕುಳಿತು ನೋಡುತ್ತಿದ್ದ ಸಮಯ.  ಮೈ ಸಮಯ್ ಹೂ ಎಂದು ಪ್ರಾರಂಭವಾದ ಮೊದಲ ಸಂಚಿಕೆ... ಕಥೆಯ ಸೂತ್ರಧಾರ  ಸಮಯ. ಸಂಚಿಕೆಯ ಪ್ರಾರಂಭದಲ್ಲಿ ಕಥೆಯ ಕೊಂಡಿಯನ್ನು ಜೋಡಿಸುತ್ತಿದ್ದದ್ದು. ಸಮಯ ಎಲ್ಲ ಆಗುಹೋಗುಗಳಿಗೆ ಸಾಕ್ಷಿಯಾಗಿದ್ದಂತೆ ಅದನ್ನು ನಿರೂಪಿಸಿದ್ದು. ಸಂಚಿಕೆಗಳಲ್ಲಿ ಎಷ್ಟು ಲೀನವಾಗಿರುತ್ತಿದ್ದೆವೆಂದರೆ, ಸಮಯ ಕಳೆದದ್ದು ಗೊತ್ತಾಗುತ್ತಿರಲಿಲ್ಲ. ಹಾಗೇ ಅಲ್ಲವೇ..ಸಂತೋಷದಲ್ಲಿದ್ದಾಗ ಸಮಯದ ಪರಿವೆಯೇ ಇಲ್ಲ. ಅದೇ ದುಃಖ, ಆತಂಕ ಹಾಗೂ ಕಾಯುವ ಸಮಯದಲ್ಲಿ , ಗಡಿಯಾರ ಮುಂದಕ್ಕೇ ಹೋಗುವುದಿಲ್ಲವೇನೋ ಎನಿಸುತ್ತದೆ.  ಈ ವಿಚಾರದಲ್ಲಿ ನಂದೊಂದು  ಅನುಭವ. ಕರೆಂಟೇ ಇಲ್ಲದ,    ಗಡಿಯಾರವೂ ಇಲ್ಲದ  ದೊಡ್ಡಜಾಲದ ಮನೆಯಲ್ಲಿ ಬೆಳೆದ ನಾನು, ಸೂರ್ಯ ಮುಳುಗಿ, ಕತ್ತಲಾದ ನಂತರ, ಸ್ವಲ್ಪ ಹೊತ್ತು ದೀಪದ ಬೆಳಕಿನಲ್ಲಿ ಓದಿದಂತೆ ಮಾಡಿ (ಅದು ಅಪ್ಪನ ಭಯದಿಂದ)  ಊಟ , ನಿದ್ದೆ ... ದಿನ ಮುಗಿದಂತೆ. ಬೆಂಗಳೂರಿಗೆ ಬಂದ ಹೊಸತು, ಹೈಸ್ಕೂಲು, ಹಾಗಾಗಿ ಓದು ಜಾಸ್ತಿ ಇರಬೇಕು ಎಂಬುದು ಮನೆಯವರ ಅನಿಸಿಕೆ. ನನ್ನ ಅಭ್ಯಾಸದಂತೆ, ಕತ್ತಲಾಗಿ ಸ್ವಲ್ಪ ಹೊತ್ತು ಓದಿದರೆ, ಸಮಯ 7 ಘಂಟೆಯೂ ಆಗುತ್ತಿರಲಿಲ್ಲ. ನನ...

ಮಳೆ ಬಂತು ಮಳೆ

Image
  ಬಿಸಿಲ ಬೇಗೆಯಿಂದ ಬಳಲುತ್ತಿದ್ದ, ಜಾತಕ ಪಕ್ಷಿಯಂತೆ ಮಳೆಗಾಗಿ ಕಾಯುತ್ತಿದ್ದ ಬೆಂಗಳೂರಿಗರಿಗೆ 29 ನೇ ತಾರೀಕಿನ ಸಂಜೆಯ ಮಳೆ ಒಂದಷ್ಟು ನೆಮ್ಮದಿಯನ್ನು ತಂದಿತು. ಸೆಕೆ, ಬಿಸಿಲ ಬೇಗೆ, ಏರಿದ ಉಷ್ಣಾಂಶದ ಬಗ್ಗೆಯೇ ಸುತ್ತುತ್ತಿದ್ದ ಮಾತುಕತೆ, ಸಂಪೂರ್ಣ ಬದಲಾವಣೆಯಾಗಿ ಮಳೆ ತಂದ ತಂಪು, ಆಲಿಕಲ್ಲು ಬಿದ್ದದ್ದು, ಮರಗಳು ಉರುಳಿದ್ದು, ಕೆಳ ಸೇತುವೆಗಳಲ್ಲಿ ನೀರು ತುಂಬಿದ್ದರ ಬಗ್ಗೆ ಹೊರಳಿತು. ಪ್ರಕೃತಿಯ ಬದಲಾವಣೆಯೊಂದಿಗೆ ಹೊಂದಿಕೊಂಡು ಹೋಗಬೇಕಾದದ್ದು ಅನಿವಾರ್ಯ. ಸಾಮಾನ್ಯವಾಗಿ 32 ಡಿಗ್ರಿ ಮುಟ್ಟಿದಾಗ, ಬೆಂಗಳೂರಿಗೆ ಮಳೆ ಖಾತ್ರಿ ಎಂಬ ನಂಬಿಕೆಯು ಈ ಬಾರಿ ಹುಸಿಯಾಯಿತು. 36 ಡಿಗ್ರಿ ಮುಟ್ಟಿದರೂ ಮಳೆಯ ಲಕ್ಷಣವೇ ಕಾಣದೆ ಪರದಾಡಿದ್ದಾಯ್ತು.  ಇದಕ್ಕೆ   EL NINO  (ಎಲ್ ನೀನೋ) ... ದೂರದ ಪೆಸಿಫಿಕ್ ಸಾಗರದಲ್ಲಿ ಆಗುವ ಬಿಸಿ ಏರಿಕೆ, ಕಾರಣ ಎಂದು, ತಜ್ಞರ ಹೇಳಿಕೆ.   ಅದಕ್ಕೆ ಕಾರಣ, ಮಾನವ ಕುಲ ಪ್ರಕೃತಿಯ ಮೇಲೆ ನಡೆಸಿದ ಅತ್ಯಾಚಾರ. ತನ್ನ ಸ್ವಾರ್ಥಕ್ಕಾಗಿ, ದುರಾಸೆಗಾಗಿ, ಪ್ರಕೃತಿಯಲ್ಲಿನ ಸಂಪನ್ಮೂಲವನ್ನು ದುರ್ಬಳಕೆ ಮಾಡಿದ್ದು. (EL)ಎಲ್ ನೀನೇನೋ ಮಾಡಿದೆ ಅದಕ್ಕೆ (EL)ಇಲ್ ನಾನು ಕಷ್ಟಪಡಬೇಕು ಅನ್ನುವುದು, (EL)ಎಲ್ ಎಲ್ಲೂ ಇರುವ ಜನಾಂಗಕ್ಕೆ ಅರಿವಾಗಬೇಕು. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ 29ರ ಮಳೆ..  ಬಂದೇ ಬಂತು... ಮಳೆ ಬಂತು ಮಳೆ, ತೊಳೆಯಿತು ಜಗದ ಕೊಳೆ    ತಂಪಾಯಿತು ಇಳೆ...