Posts

Showing posts from February, 2026

ಕಾಲ - ಕೆಟ್ಟಿತಾ? - ಬದಲಾಯಿತಾ?

Image
  ಕಾಲ ಕೆಟ್ಟೋಯ್ತು... ನಮ್ ಕಾಲದಲ್ಲಿ ಹೀಗಿರಲಿಲ್ಲ ... ಇದು ನಾನು ಬಹಳ ಸಲ ಕೇಳಿದ ಹಿರಿಯರ ಮಾತುಗಳು.. ಆ ಹಿರಿಯರಲ್ಲಿ ನಮ್ಮಪ್ಪನೂ ಒಬ್ಬರು. ಕಾಲ ಕೆಡುವುದು ಅನ್ನುವ ಚಿಂತನೆಯೇ ನನ್ನ ಮನಸ್ಸಿಗೆ ಒಗ್ಗದು. ಕಾಲ ಏನು ಮಾಡಿಟ್ಟ ಅಡಿಗೆಯೇ.. ಕೆಡಲು / ಹಳಸಲು. ಕಾಲ ನವನವೀನ.. ಕ್ಷಣ ಕ್ಷಣಕ್ಕೂ ಹೊಸತಾಗುವ ಕಾಲ ಕೆಡಲು ಸಾಧ್ಯವೇ? ಕಾಲ ಬದಲಾಗುತ್ತದೆ... ಖಂಡಿತ ಹೌದು. ಅದರ ಗುಣವೇ ಬದಲಾಗುವುದು. ಕ್ಷಣ ಕ್ಷಣಕ್ಕೂ ಹೊಸದಾಗಿ ಬದಲಾಗುವುದು.  ಕಾಲಕ್ಕೆ ತಕ್ಕಂತೆ ಬದಲಾಗು , ತಾಳಕ್ಕೆ ತಕ್ಕಂತೆ ಕುಣಿದಾಡು ಎನ್ನುವುದು ಗಾದೆಯ ಮಾತು. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎನ್ನುವ ಮಾತನ್ನು ನಂಬಿ ಯೋಚಿಸಿದರೆ, ಕಾಲಕ್ಕೆ ತಕ್ಕಂತೆ ಬದಲಾಗು ಎಂಬ ನಿರ್ದೇಶನ ಇರುವುದು ಮನುಷ್ಯರಿಗೆ ಅಲ್ಲವೇ? ಹಾಗಾದರೆ ಬದಲಾಗುತ್ತಿರುವುದು ಕಾಲವೋ ? ಮನುಷ್ಯನೋ ?.... ಅಂದಮೇಲೆ ಕೆಟ್ಟಿರೋದು/ ಬದಲಾಗಿರೋದು ಮನುಷ್ಯನೇ ಹೊರತು ಕಾಲ ಅಲ್ಲ.. ಅಹುದಾದರಹುದೆನ್ನಿ. ಬದಲಾಗಿರುವುದು ಮನುಷ್ಯನ ಚಿಂತನೆ ಹಾಗೂ ವರ್ತನೆ.  ತನ್ನ ತಪ್ಪನ್ನು ಮುಚ್ಚಿಟ್ಟುಕೊಂಡು ಬೇರೆಯವರನ್ನು ದೂಷಿಸುವ ಮನುಷ್ಯನ ಸಹಜ ಸ್ವಭಾವದಂತೆ, ಆರೋಪವನ್ನು ಕಾಲದ ಮೇಲೆ ಹೊರಿಸುವುದು ಅಷ್ಟೇ. ನಮ್ಮ ಕಾಲದಲ್ಲಿ ಒಂದು ರೂಪಾಯಿಗೆ ಹತ್ತು ಸೇರು ಅಕ್ಕಿ ಸಿಗುತ್ತಿತ್ತು, ಜೊತೆಗೆ ಜೇಬಲ್ಲಿ ದುಡ್ಡು ತಗೊಂಡು ಹೋಗಿ ಮೂಟೆಯಲ್ಲಿ ಸಾಮಾನು ತರಬಹುದಿತ್ತು ಅನ್ನುವ ಮಾತು... ಅದು ಸತ್ಯ ಇರಬಹುದು.. ಆದರೆ...

ಹುಡುಕಾಟ

Image
ಮೊನ್ನಿನ ಒಂದು ಕಾರ್ಯಕ್ರಮಕ್ಕೆ, ನನ್ನ ಸ್ನೇಹಿತ ಬರಲು ಬಹಳ ತಡವಾಯಿತು. ಅವನಿಗಾಗಿ ಕಾಯುತ್ತಾ ಕುಳಿತ ನಮಗೆಲ್ಲ ಸ್ವಲ್ಪ ಅಸಮಾಧಾನ. ಅವನು ಕೊಟ್ಟ ಕಾರಣ “ನನ್ನ ಮಗಳು ಗಾಡಿ ತಗೊಂಡು ಹೋಗಿದ್ದೋಳು ಬೀಗದ ಕೈ ಎಲ್ಲೋ ಇಟ್ಟು ಮರೆತಿದ್ದಾಳೆ. ಅದನ್ನು ಹುಡುಕಿ ಹುಡುಕಿ, ಸಿಗದೇ ಕೋಪ ಬಂದು ಅವಳಿಗೆ ಬೈದು, ಅವಳು ಅತ್ತು , ಕಡೆಗೆ ಅದು ಸಿಕ್ಕಿದ್ದು ಫ್ರಿಜ್ಜಿನಲ್ಲಿ.. ಅಂತೂ ಬಂದೆ" ತಕ್ಷಣ ನೆನಪಿಗೆ ಬಂದದ್ದು " ಈ ಹುಡುಗ್ರು ಸೂಳಾಮಕ್ಕಳು ಇಟ್ಟ ಸಾಮಾನು ಇಟ್ಟ ಕಡೆ ಇಡಲ್ಲ.. ಬೇಕಂದ್ರೆ ಹುಡುಕಿ ಸಾಯ್ಬೇಕು" ಎಂಬ ನನ್ನ ಪರಿಚಯದವರ ಮಾತು. ಹುಡುಕಾಟ ಜೀವಸಂಕುಲದ ಚರಿತ್ರೆಯಲ್ಲೇ ಮೊದಲ ಯೋಜಿತ ಕ್ರಿಯೆ ಎಂದು ನನ್ನ ಅನಿಸಿಕೆ. ಎಲ್ಲಾ ಪ್ರಾಣಿ ಪಕ್ಷಿಗಳೂ.. ಮನುಷ್ಯನನ್ನೂ ಸೇರಿ, ಮೊದಲು ಮಾಡಿದ ಕೆಲಸ ಆಹಾರವನ್ನು ಹುಡುಕುವುದೇ ಅಲ್ಲವೇ? ಗಿಡ ಮರಗಳೂ, ನೀರು ಹಾಗೂ ಪೋಷಕಾಂಶಗಳನ್ನು ಹುಡುಕುವುದು ತಮ್ಮ ಬೇರನ್ನು ಬೆಳೆಸುವ ಮೂಲಕ. ಮನುಷ್ಯ ಒಂದೆಡೆ ನೆಲೆ ನಿಂತು ಆಹಾರವನ್ನು ತಾನೇ ಬೆಳೆಯಲು ಪ್ರಾರಂಭ ಮಾಡಿದ ನಂತರ, ಅವನ ಹುಡುಕಾಟದ ದಿಕ್ಕು ಬದಲಾಯಿತೇ ಹೊರತು ಹುಡುಕಾಟ ನಿಲ್ಲಲಿಲ್ಲ. ನದಿ ಮೂಲ ಋಷಿಮೂಲವನ್ನು ಹುಡುಕಬಾರದು ಎಂಬ ನಾಣ್ಣುಡಿಯಿದೆ. ಎರಡೂ ಹಿಂದಕ್ಕೆ ಚಲನೆಯಾದ್ದರಿಂದ ಹಾಗೆ ಹೇಳಿರಬಹುದೇ? ನದಿ ಸಾಗಿ ಬಂದ ಕೊರಕಲುಗಳು, ಪ್ರಪಾತಗಳು ಇವೆಲ್ಲವನ್ನು ದಾಟುವುದು ಕಷ್ಟ. ಹಾಗೆ ಋಷಿ ಮೂಲವನ್ನು ಹುಡುಕುತ್ತಾ ಹೋದಾಗ, ಮನಸ್ಸಿಗೆ ಹಿತವಲ್...

ಅಳುಕು ಮನಸ್ಸು

Image
  good evening sir ಎಂದು ಹೇಳುತ್ತಾ ಒಳ ಬಂದ ಆ ಹೆಣ್ಣು ಮಗಳು, sir i  Know  little kannada, but can't express well,  i can speak in telugu or english. ( ಆಕೆ ಇಂಗ್ಲೀಷಿನಲ್ಲಿ ಹೇಳಿದ ಮಾತುಗಳ ಭಾವಾನುವಾದ, ಈ ಲೇಖನ) ಮೊದಲ ಪರಿಚಯದ ನಂತರ, ಮಾತಿಗಾರಂಭಿಸಿದ ಪಲ್ಲವಿ, "ಮನಸ್ಸು  ಗಲಿಬಿಲಿಯಿಂದ ತುಂಬಿದೆ, ಏನೂ ಮಾಡಲಾಗದ ಅಸಹಾಯಕತೆ ಕಾಡುತ್ತಿದೆ.. ಭವಿಷ್ಯದಲ್ಲಿ ಬರಿ ಕತ್ತಲೆನೋ ಅನಿಸುತ್ತಿದೆ, ಏನು ಮಾಡಲಿ ಹೇಳಿ...ಎಂದು ಪ್ರಾರಂಭಿಸಿ.. ಪಲ್ಲವಿ ಒಂದು ಖಾಸಗಿ ಸಂಸ್ಥೆಯಲ್ಲಿ ಸಾಫ್ಟ್ವೇರ್ ಇಂಜಿನಿಯರ್. ಆಂಧ್ರಪ್ರದೇಶ ಮೂಲದವಳು. PG ಯಲ್ಲಿ ಇದ್ದುಕೊಂಡು ಸುಮಾರು ಎರಡು ವರ್ಷದಿಂದ ಕೆಲಸ ಮಾಡುತ್ತಿರುವವಳು. ಅಲ್ಲಿ ಪರಿಚಯವಾದದ್ದು ಪುರು (ಪುರುಷೋತ್ತಮ). ಕೆಲಸದ ವಿಚಾರವಾಗಿ ಆಗಾಗ ವಿಚಾರ ವಿನಿಮಯ ಮಾಡಿಕೊಳ್ಳುತ್ತಾ, ಇಬ್ಬರಲ್ಲೂ ಸ್ನೇಹ ಬೆಳೆದಿದೆ. ಸ್ನೇಹ ಆತ್ಮೀಯತೆಗೆ... ಹಾಗಾಗಿ ತಮ್ಮ ಅಂತರ್ಯದ ವೈಯುಕ್ತಿಕ ವಿಚಾರಗಳನ್ನು ಪರಸ್ಪರ ಹಂಚಿಕೊಂಡಿದ್ದಾರೆ. ಪುರುಷೋತ್ತಮ ಅಪ್ಪ ಅಮ್ಮನಿಗೆ ಎರಡನೆಯ ಮಗ. ಓದಿನಲ್ಲಿ ತುಂಬಾ ಜಾಣನೇನಲ್ಲ. ಪದವಿಯ ನಂತರ ತನ್ನ ಅಣ್ಣನ ಸ್ನೇಹಿತನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಪಲ್ಲವಿಗೆ ಒಬ್ಬ ಅಣ್ಣ ಒಬ್ಬ ತಂಗಿ. ಅಣ್ಣ ಮದುವೆಯಾಗಿ ಅಮೆರಿಕದಲ್ಲಿ ಇದ್ದಾನೆ. ತಂಗಿಗೆ ಇನ್ನೂ ಮದುವೆಯಾಗಿಲ್ಲ. ಪಲ್ಲವಿಗೆ ಸಂಬಂಧದಲ್ಲೇ ಮದುವೆಯಾಗಿ ವರ್ಷದೊಳಗೇ ವಿಚ್ಛೇದನವಾ...