Posts

Showing posts from June, 2026

ಗೆಳೆತನ ಅಂದ್ರೆ. ...

Image
 ವಿದ್ಯಾರ್ಥಿ ಜೀವನದ ಪ್ರಸಂಗಗಳು ಲೇಖನಕ್ಕೆ ಬಂದ ಒಂದು ಪ್ರತಿಕ್ರಿಯೆ ಇದು. ಓದಿದ ಕೂಡಲೇ ಖುಷಿಯಾಯಿತು, ಇದನ್ನು ಬರೆದಿರುವುದು ಪ್ರೇಮನೇ (ಭದ್ರಾವತಿಯ ಪ್ರೇಮ್ ಕುಮಾರ್... ಪ್ರೇಮ್) ಎಂದು ಖಚಿತವಾಯಿತು. ತಕ್ಷಣ ಅವನಿಗೆ ಫೋನ್ ಮಾಡಿದೆ... ಸಂತೋಷದ ತರಂಗಗಳು ನಮ್ಮಿಬ್ಬರ ಮಧ್ಯೆ ಹರಿದಾಡಿದವು. ಸುಮಾರು 10 ನಿಮಿಷಗಳ ಕಾಲದಲ್ಲಿ ಏನೆಲ್ಲ ಮಾತಾಡಿ, ಹಳೆಯದನ್ನು ನೆನಪಿಸಿಕೊಂಡು, ಭೇಟಿ ಮಾಡುವ ನಿರ್ಧಾರ ಮಾಡಿದ್ದಾಯ್ತು.  ಈ ಪ್ರೇಮ ವಿಶಿಷ್ಟ ವ್ಯಕ್ತಿ. ಅವನನ್ನು ಪ್ರೇಮ್... ಅಂದರೆ ಗಂಡಸು ಎಂದು ಕರೆಸಿಕೊಳ್ಳುವ ಇಚ್ಛೆ.... ಆದರೆ ಮೋತಿ ಕರೆಯುತ್ತಿದ್ದದ್ದು ಪ್ರೇಮ ಎಂದು, ಸಹಜವಾಗಿ ನಾನೂ ಅದನ್ನೆ ಉಪಯೋಗಿಸಿದೆ. ನನ್ನ ನೆನಪಿನಲ್ಲಿರುವಂತೆ,  ಇದುವರೆಗೆ 4 ಸಲ ಭೇಟಿ ಮಾಡಿರಬಹುದೇನೋ.. ಅದರಲ್ಲಿ ಒಂದು ಬಾರಿ ಮಾತ್ರ ಒಂದು ವಾರಕ್ಕೂ ಹೆಚ್ಚು, ಜೊತೆ ಜೊತೆಯಲ್ಲೇ ಕಳೆದದ್ದು. ಇಷ್ಟು ಕಡಿಮೆ ಒಡನಾಟದಲ್ಲಿ, ಅದೆಷ್ಟು ಬಾಂಧವ್ಯ ಬೆಳೆದಿದೆ ಎಂದರೆ.. ಆ ಆತ್ಮೀಯತೆ ಅನುಭವಿಸಿಯೇ ತೀರಬೇಕು. ಆ ವಯಸ್ಸಿನ ಪ್ರಭಾವವೋ, ಗೆಳೆತನಕ್ಕೆ ಬಿದ್ದ ಭದ್ರ ಬುನಾದಿಯೋ.. ಇಂದಿಗೂ ಚೆನ್ನಾಗಿದೆ.    ಅವನು ನೆನಪಿಸಿದ ಬಿದರಗೂಡಿನ ಪ್ರವಾಸ ಈ ಲೇಖನದ ತಿರುಳು. ಅದು 1968 - 69 ರ ಸಮಯ . ಓದು ಮುಗಿಸಿ, ಸರಿಯಾದ, ಪೂರ್ಣ ಪ್ರಮಾಣದ  ಕೆಲಸವಿಲ್ಲದ ದಿನಗಳು. ಸುಮಾರು 12 ರ ತನಕ Bangalore Institute of Engineering ನಲ್ಲಿ ಪಾಠ ಮಾಡಿ ...

ಅಪ್ಪಂದಿರ ದಿನ

Image
 ಒಂದು ಕಾರ್ಯಕ್ರಮದ ನಿಮಿತ್ತ ನನ್ನ ಹೆಂಡತಿ ಬೆಳಿಗ್ಗೆ 9:00 ಗಂಟೆಗೆ ಮನೆಯಿಂದ ಹೊರಟಳು. ಒಂಟಿಯಾಗಿದ್ದೆ... ಏನು ತೋಚದೆ.. ಹಾಗೆ ಮಲಗಿದೆ... ಯಾವಾಗಿನಂತೆ ಸುಖ ನಿದ್ರೆಗೆ ಜಾರಿದೆ. ಟೆಲಿಫೋನ್  ಕರೆಯ ಶಬ್ದ ಎಲ್ಲೋ ಕೇಳಿಸಿದಂತಾಗಿ, ಅರೆ ನಿದ್ರೆಯಲ್ಲಿಯೇ ಕಿವಿಯ ಬಳಿ ಇಟ್ಟೆ... " ಏನ್ ಮಾಡ್ತಾ ಇದ್ದೀಯಾ?" ಆ ಕಡೆಯಿಂದ ಧ್ವನಿ... ಇಷ್ಟು ಗತ್ತಿನಿಂದ ಕೇಳುವ ಒಂದೇ ವ್ಯಕ್ತಿ ಅದು ನನ್ನ ಮಗಳು ಚೈತ್ರ " ನಿದ್ದೆ..." " ಸೋಮಾರಿ ಕಟ್ಟೆ" ನನ್ನ ಬೈಗುಳವೇ ನನಗೆ ತಿರುಗುಬಾಣವಾಯಿತು "thank you..." " ತಿಂಡಿ ಏನ್ ತಿಂದೆ" " ಇನ್ನೂ ಸ್ನಾನನೂ ಮಾಡಿಲ್ಲ, ಯೋಚನೇನು ಮಾಡಿಲ್ಲ" " ಇಲ್ ಕೇಳಿಸ್ಕೋ... ನೀನು ಏನೂ ಮಾಡಕ್ಕೆ ಹೋಗ್ಬೇಡ, ನಾನು, ನೀನು, ವಿಸ್ಮಯ ಊಟಕ್ಕೆ ಹೋಗೋಣ... ಬಾಳೆ ಎಲೆ ಊಟ... ನಾನ್ ಬುಕ್ ಮಾಡ್ತೀನಿ..ಹನ್ನೆರಡೂವರೇಗೆ ಬರ್ತೀನಿ.. ನೀನ್ ರೆಡಿಯಾಗಿರು.. ನನ್ ಗಾಡಿಲ್ಲೇ ಕರ್ಕೊಂಡು ಹೋಗ್ತೀನಿ" " ಅಯ್ಯೋ.. ಬೇಡ ಕಣೆ ಆಟೋದಲ್ಲಿ ಹೋಗೋಣ" " ಸುಮ್ನೆ ಆಟೋ ಯಾಕೆ..." " ಹಾಗಾದ್ರೆ ನನ್ ಗಾಡಿಯಲ್ಲಿ ನಾನು.. ನಿನ್ ಗಾಡೀಲಿ ನೀನು ನಿನ್ ಮಗಳು ಹೋಗೋಣ" " ಎರಡೆರಡು ಗಾಡಿ ಯಾಕೆ.. ಒಂದೇ ಸಾಕು..." " ಹಾಗಾದ್ರೆ ನನ್ ಗಾಡಿಲಿ ಹೋಗೋಣ..."  " ಆಯ್ತು... ಬೇಗ ರೆಡಿಯಾಗು..." ಫ...

ವಿದ್ಯಾರ್ಥಿ ಜೀವನದ ಪ್ರಸಂಗಗಳು

Image
ಲಾರೆಲ್ ಅಂಡ್ ಹಾರ್ಡಿ: ಡಿಪ್ಲೋಮಾ ಓದುವ ಕಾಲ. ಸಿನಿಮಾ ನೋಡುವ ಹುಚ್ಚು. ನನ್ನ ಸ್ನೇಹಿತ ಶಂಕರನ ತಂದೆ ಸಂಯುಕ್ತ ಕರ್ನಾಟಕ ಪತ್ರಿಕೆಯ ಅಡ್ವರ್ಟೈಸ್ಮೆಂಟ್ ಮ್ಯಾನೇಜರ್. ಅವರಿಗೆ ಸಿನಿಮಾ ಗೆ ಫ್ರೀ ಪಾಸ್ ಸಿಗುತ್ತಿತ್ತು... ಅದನ್ನು ನಾವುಗಳು ಉಪಯೋಗಿಸುತ್ತಿದ್ದೆವು. ಜೊತೆಗೆ ವಿಜಯಲಕ್ಷ್ಮಿ ಟಾಕೀಸ್ ನಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ. ಅಲ್ಲಿ ಬರುತ್ತಿದ್ದದ್ದು ಬರೀ ಇಂಗ್ಲಿಷ್ ಚಿತ್ರಗಳು.  ಲಾರೆಲ್ ಅಂಡ್ ಹಾರ್ಡಿ ಚಿತ್ರಗಳು ನಮಗೆ ಬಲು ಪ್ರಿಯ. ಅರ್ಥವಾಗದ ಮಾತು.. ಆದರೆ ನಟನೆ ಮಾತ್ರ ನಗೆ ಹೆಚ್ಚಿಸುತ್ತಿತ್ತು. ಹೀಗೊಂದು ದಿನ ಲಾರೆಲ್ ಅಂಡ್ ಹಾರ್ಡಿ ಯ ಚಿತ್ರವನ್ನು ನೋಡಿ ನಾನು ಮತ್ತು ನನ್ನ ಸ್ನೇಹಿತ ಶಿವ ( ಕೆ ಎನ್ ಶಿವಶಂಕರ್) ನಮ್ಮ ಮನೆಗೆ ಬಂದೆವು.  ನಮ್ಮ ಮನೆಯಲ್ಲೊಂದು ಆರಾಮ ಕುರ್ಚಿ ಇತ್ತು. ಕೂರಲು ಬಟ್ಟೆಯ ಆಸನ. ಬಟ್ಟೆಯ ಮೇಲೆ ಏನೋ ಕಸ ಇದ್ದು, ಅದನ್ನು ತೆಗೆಯಲು, ಬಟ್ಟೆಯನ್ನು ಒದರಿದೆ. ಪಕ್ಕದ ಕುರ್ಚಿಯ ಮೇಲೆ ಕೂತಿದ್ದ ಶಿವನ ಬಟ್ಟೆಯ ಮೇಲೆ ಬಿದ್ದಿರಬಹುದು.. ನಾನು ಕೂರುವ ತನಕ ಕಾದಿದ್ದ ಶಿವ ಎದ್ದು ನಿಂತು, ಒಂದು ಮಾತಿಲ್ಲದೆ, ತನ್ನ ಶರಟನ್ನು ನನ್ನ ಮೇಲೆ ನಿಧಾನವಾಗಿ ಒದರಿ, ತನ್ನ ಕುರ್ಚಿಯ ಮೇಲೆ ಕೂತ. ಇಬ್ಬರು ಜೋರಾಗಿ ನಕ್ಕೆವು... ಇದು ಲಾರೆಲ್ ಅಂಡ್ ಹಾರ್ಡಿ ಚಿತ್ರದ ಪ್ರಭಾವ. ಆ ಕ್ಷಣದ ಶಿವನ ನಟನೆ ಇಂದಿಗೂ ನೆನಪಿದೆ. ಹೆಸರು ಹನುಮಂತರಾಯ: ಅದೇ ಕಾಲಘಟ್ಟದಲ್ಲಿ ಓದುತ್ತಿದ್ದದ್ದು ಶ್ರೀ ಜಯ ಚಾಮರಾಜೇಂ...

Mission ಮುಳಬಾಗಿಲು

Image
Mission ಮುಳಬಾಗಿಲುವಿನ ಗುರಿ: 1. Mission ನ ದಿನಾಂಕ: 09 ಜೂನ್ 2026 2. ಮುಳಬಾಗಿಲು ಆಂಜನೇಯನ ದರ್ಶನ 3. ಮುಳಬಾಗಿಲು ದೋಸೆ ತಿನ್ನುವುದು 4. ಸಾರ್ವಜನಿಕ ಸಾರಿಗೆ ಮಾತ್ರ ಉಪಯೋಗಿಸುವುದು ಈ ಮಿಷನ್ ನ ರೂಪುರೇಷೆ  ತರಾತುರಿಯಲ್ಲಿ ನಿರ್ಧಾರವಾಗಿದ್ದು, ಜೂನ್ ಎಂಟರ ರಾತ್ರಿ ಸುಮಾರು 10 ಗಂಟೆಗೆ.  9ರ ದಿನಾಂಕ ನಿರ್ಧಾರವಾಗಲು ಬಹು ಗಂಭೀರ ಕಾರಣ ಇತ್ತು.. ಅಂದು ನನ್ನ ಹೆಂಡತಿ ವಿಜಯಳ ಸ್ನೇಹಿತೆಯರ ಗುಂಪು, ಅಧಿಕ ಮಾಸದ ಕಾರ್ಯಕ್ರಮಕ್ಕಾಗಿ ನಮ್ಮ ಮನೆಯಲ್ಲಿ ಸೇರುವುದಿತ್ತು. ಅಧಿಕಾಧಿಕ ವಿಶೇಷ ಕಾರ್ಯಕ್ರಮಗಳು ಸಂಜೆಯವರೆಗೂ ರೂಪಿಸಿದ್ದ ಕಾರಣ, ನಾನು ಮನೆಯಲ್ಲಿರುವುದು ಅಷ್ಟು ಸಮಂಜಸವೆನಿಸಲಿಲ್ಲ. ಮನೆಯ ಕೋಣೆಯಲ್ಲಿ ಬಂದಿಯಾಗಿರುವ ಬದಲು, ಹೊರಹೋಗುವ ನಿರ್ಧಾರಮಾಡಿದೆ. ಮುಂದಿನ ಪ್ರಶ್ನೆ ಮುಳಬಾಗಿಲೇ ಏಕೆ? ಹಿಂದೆ ಒಂದು ಬಾರಿ ಮುಳಬಾಗಿಲಿಗೆ ಹೋಗಿದ್ದಾಗ, ಸಮಯಕ್ಕೆ ಸರಿಯಾಗಿ ಹೋಗಲಿಲ್ಲವೆಂದು ಮುನಿಸಿಕೊಂಡು ಮುನಿಆಂಜನೇಯನಾದ ಕಾರಣ ನಮಗೆ ದರುಶನವನ್ನೇ ನೀಡಿರಲಿಲ್ಲ. ಹಾಗಾಗಿ ಆತನ ದರುಶನ ಭಾಗ್ಯ ಪಡೆಯೋಣವೆಂದು ಅಲ್ಲಿಗೆ ಹೋಗಲು ನಿರ್ಧರಿಸಿದ್ದು. 9ರ ಬೆಳಿಗ್ಗೆ, ಉತ್ಸಾಹದಿಂದ ತಯಾರಾಗಿ, ಬಿಸಿ ಬಿಸಿ ಉಪ್ಪಿಟ್ಟನ್ನು ತಿಂದು, ಮನೆಯ ಹತ್ತಿರದ ಬಸ್ ಸ್ಟಾಪ್ ಹತ್ತಿರ ಬರುತ್ತಿದ್ದಂತೆ ಕಂಡದ್ದು ಮೇಜೆಸ್ಟಿಕ್ ಗೆ ಹೋಗುವ ಬಸ್.  ವಾಹ್... ಎಂಥ ಪ್ರಾರಂಭ.  ಬಸ್ ಹತ್ತಿ, ಕೂಡಲು ಜಾಗವೂ ಸಿಕ್ಕಿದಾಗ ನನ್ನ ಸಂತೋಷ ಮೇರೆ ಮೀರಿತ್ತು...

Toilet ನ ಸುತ್ತ

Image
ಹೋದ ಶನಿವಾರ ಬೆಳಿಗ್ಗೆಯಿಂದ ಸೋಮವಾರ ಮಧ್ಯಾಹ್ನದ ತನಕ, ಮನೆಯ ಮುಂದೆ ಹರಿಯುತ್ತಿದ್ದ ಕೊಳಚೆಯ ನೀರು ಮೂಗು ಮುಚ್ಚಿಕೊಂಡು ಹೋಗುವಂತೆ ಮಾಡಿತ್ತು. ಸರಿ ಹೋಯಿತು ಎಂದು ಸಂತೋಷಪಟ್ಟು ರಾತ್ರಿ ನಿದ್ದೆ ಮಾಡಿ ಬೆಳಿಗ್ಗೆ ಏಳುವಷ್ಟರಲ್ಲಿ ಮತ್ತೆ ಕೊಳಚೆನೀರಿನ ಹರಿವು ಪ್ರಾರಂಭವಾಗಿತ್ತು. ಅಂತೂ BWSSB ಯವರು ಮಧ್ಯಾಹ್ನದ ಹೊತ್ತಿಗೆ ಸರಿ ಮಾಡಿದ್ದಾರೆ... ಅದಕ್ಕೆ ಇರಬೇಕು ಕಕ್ಕಸು ಎಂದಾಕ್ಷಣ, ಗಲೀಜು, ಕೊಳಕು ಎಂದು ಮೂಗು ಮುಚ್ಚಿಕೊಳ್ಳುವುದು / ಮೂಗು ಮುರಿಯುವುದು ಸಾಮಾನ್ಯ.  ಮಕ್ಕಳ ಒಂದು ಸಾಮಾನ್ಯ ಚಟುವಟಿಕೆಯನ್ನು ಗಮನಿಸಿ.. ಅವರು ಮಾಡಿದ ಕಕ್ಕದೊಡನೆ ಆಟವಾಡುವಾಗ ಅವರಿಗೆ ಏನೋ ಸಂತೋಷ. ಅದಕ್ಕೆ ಆ ವಯಸ್ಸಿನಲ್ಲಿ ಕಕ್ಕ.. ಗಲೀಜು ಎಂದು ತಲೆಯಲ್ಲಿ ತುಂಬಿದ ಕಾರಣವೋ ಏನೋ, ಈ ಭಾವ ಎಲ್ಲಾ ಮನುಷ್ಯರಲ್ಲೂ ಕಂಡುಬರುತ್ತದೆ ಯಾಕೋ ವಿಷಯ ವಾಸನಾಯುಕ್ತವಾಗಿದೆ ಎಂದನಿಸುತ್ತದೆಯೇ?  ವಾಸನೆ ಎಂಬ ಪದಕ್ಕೆ ಹಿಂದಿನ ನೆನಪುಗಳು, ಜನ್ಮಾಂತರದ ಘಟನೆಗಳ ನೆನಪುಗಳು ಎಂಬ ಅರ್ಥವೂ ಉಂಟು. ಹಾಗಾಗಿ ಇದು ನೀವಂದುಕೊಂಡಂಥ ಬರೀ ವಾಸನೆಯ ವಿಷಯವಲ್ಲ.. ಹಳೆಯ ನೆನಪುಗಳ ಜೊತೆ ಥಳುಕು ಹಾಕಿಕೊಂಡ ಹೊಸ ವಿಷಯಗಳೂ ಉಂಟು.   ನನ್ನ ನೆನಪಿನಲ್ಲಿರುವಂತೆ, ನಮ್ಮ ಹಳ್ಳಿ ಮನೆಯ  ಹಿತ್ತಿಲ  ಬಯಲು ಮೊದಲ ಕಕ್ಕಸು.   ಮನೆಯಲ್ಲಿ ಅದಕ್ಕಾಗಿ ಜಾಗವಿದ್ದರೂ, ಆ ಗುಂಡಿಯಲ್ಲಿ ಬೀಳುವ ಭಯದಿಂದ ಅಲ್ಲಿಗೆ ಹೋಗುತ್ತಿರಲಿಲ್ಲ. ಆದರೆ ವರ್ಷಕ್ಕೊಮ್ಮೆ, ...