Posts

Showing posts from July, 2026

ಏಕಾಂಗಿ ಸಂಚಾರ

Image
ಎಲ್ಲಿ ಹೋಗಲೂ ನನಗೆ ಜೊತೆ ಬೇಕು. ಜೊತೆ ಇಲ್ಲದಾದಾಗ ಎಷ್ಟೋ ಸಲ ಹೋಗದೇ ಇದ್ದ ಸಂದರ್ಭಗಳು ಇವೆ. ಹಾಗೆ ಅನಿವಾರ್ಯವಾಗಿ ಹೋದ ಸಂದರ್ಭಗಳೂ ಇದೆ. ನಾನೇ ಇಷ್ಟ ಪಟ್ಟು ಒಂಟಿಯಾಗಿ ಹೋದದ್ದು ಲೇಪಾಕ್ಷಿಗೆ. ಆ ಅನುಭವ ಖುಷಿ ಕೊಟ್ಟಿತ್ತು.  ಈಚೆಗೆ ಏಕಾಂಗಿಯಾಗಿ ಹೋಗಿದ್ದ ಮುಳುಬಾಗಿಲಿನ ಪ್ರವಾಸದ ಅನುಭವ.... ಜೊತೆಯಲ್ಲಿ ಯಾರು ಇರದಿದ್ದರೂ, ಅಪರಿಚಿತರ ಜೊತೆ ಒಂದೆರಡು ಮಾತು ಬಿಟ್ಟು, ಮೌನವೇ ಆವರಿಸಿದ್ದರೂ, ಅಲ್ಲೊಂದು ಸಂತಸವಿತ್ತು, ಅಂತರ್ಮುಖಿಯಾಗಲು ಅವಕಾಶವಿತ್ತು... ಹಾಗಾಗಿ ಅದೊಂದು ಬೇರೆಯೇ ದಾರಿ ಎನಿಸಿತು.  ಈಗ ಒಬ್ಬಂಟಿಯಾಗಿ ಹೋಗುವ ಪ್ರವಾಸದ ಅವಕಾಶಕ್ಕಾಗಿ ಎದುರು ನೋಡುತ್ತೇನೆ. ಹೋದ ಶುಕ್ರವಾರ ಏಕಾಂಗಿಯಾಗಿ ಹೋದದ್ದು, ಕನಕಪುರ ರಸ್ತೆಯ ರವಿಶಂಕರ್ ಗುರೂಜಿಯವರ ಆಶ್ರಮಕ್ಕೆ.  ನಾನು ಅಲ್ಲಿ ತಲುಪುವಾಗ 12 ಗಂಟೆ ಸಮೀಪಿಸಿತ್ತು.  ಒಳಗೆ ಹೋಗಲು  ಅನುಮತಿಗೆ, ಬೇಕಾದ ವಿವರಗಳನ್ನು  online ಮೂಲಕ ತುಂಬಿ,ಪಡೆದು, ಅವರ ಸಲಹೆಯಂತೆ ಮುಂದೆ ನಡೆದೆ. ಪಾದಚಾರಿಗಳಿಗಾಗಿ ಹಾಸುಗಲ್ಲುಗಳ  ಮಾರ್ಗ... ಎಡಬಲಗಳಲ್ಲಿ ಹಸಿರು, ಅಲ್ಲಲ್ಲಿ ಮಾರ್ಗದರ್ಶಕ ಬರವಣಿಗೆಗಳು... ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ. ನನಗ್ಯಾವ ಗೊತ್ತು ಗುರಿಗಳು ಇರದಿದ್ದರಿಂದ ಹಾಗೆ ಮುನ್ನಡೆದೆ, ಅಲ್ಲೊಂದು ಧ್ಯಾನ ಮಂದಿರ ಎಂದು ಬರೆದ ಬಾಗಿಲನ್ನು ತೆರೆಯಲು ಪ್ರಯತ್ನ ಪಡುತ್ತಿದ್ದೆ, ಆಗ ಬಂದ ಒಬ್ಬ ಹೆಣ್ಣು ಮಗಳು,   ಹತ್...

ಅಂತ್ಯೇಷ್ಟಿ/ ಶ್ರಾದ್ಧಕ್ಕೆ ಮಗನೇ ಏಕೆ ?

Image
ಸಾಮಾನ್ಯವಾಗಿ ಯಾರನ್ನಾದರೂ ಭೇಟಿಯಾದಾಗ ನಮಸ್ಕಾರ ಹೇಳಿ, ಆರಾಮಾನಾ / ಚೆನ್ನಾಗಿದ್ದೀರಾ ಎಂದು ಕೇಳುವುದು ವಾಡಿಕೆ. ಅದರಲ್ಲೂ ಬೆಳಗಿನ ವಾಕಿಂಗ್ ಸಮಯದಲ್ಲಿ ಮುಂದುವರಿದು ಈಗ ಬಂದ್ರಾ / ಎಷ್ಟು ಸುತ್ತು ಆಯಿತು ಎಂದು ಕೇಳಿ... ಅವರ ಹಾಜರಾತಿಯ ವಿಷಯಕ್ಕೆ ಬಂದು... ಏನು ಎರಡು ದಿವಸದಿಂದ ಕಾಣಲಿಲ್ಲ ಎಂಬ ಪ್ರಶ್ನೆ ತಾನಾಗಿ ಬರುತ್ತದೆ. ಇಂಥ ಒಂದು ಪ್ರಶ್ನೆಯನ್ನು ಮೊನ್ನೆ ನಾನು ಲಕ್ಷ್ಮೀನಾರಾಯಣ ಹಾಗೂ ಜಯಶ್ರೀ ದಂಪತಿಯನ್ನು ಕೇಳಿದೆ. ಅದಕ್ಕೆ  ನಮ್ಮತ್ತೆಯ ಶ್ರಾದ್ದ ಇತ್ತು ಎಂದು ಹೇಳಿದವರು ಲಕ್ಷ್ಮಿ ನಾರಾಯಣ ಅವರು. ತಮ್ಮ ಬಂದಿದ್ನಾ ಎಂದು ಜಯಶ್ರೀ ಅವರನ್ನು ಕೇಳಿದಾಗ, ಅವನೆಲ್ಲಿ ಬರ್ತಾನೆ ಅಷ್ಟು ದೂರದಿಂದ... ನಾನೇ ಮಾಡ್ತೀನಿ ಎಂದು ಹೇಳಿದ್ದು ಕೇಳಿ, ಒಂದು ತರಹ ಖುಷಿ / ಆಶ್ಚರ್ಯ/ ಕುತೂಹಲದ ಭಾವ ಮನಸ್ಸಿನಲ್ಲಿ ಮೂಡಿತು. ಮುಂದುವರಿದು ಅವರು ಹೇಳಿದ್ದು, ನಾನೇ ಅಡಿಗೆ ಮಾಡುತ್ತೇನೆ.. ಪಿಂಡಪ್ರದಾನ ಮಾಡುವುದನ್ನು ಬಿಟ್ಟು, ತರ್ಪಣ ಬಿಡುವವರೆಗೆ ಎಲ್ಲವನ್ನು ನಾನೇ ಮಾಡುತ್ತೇನೆ. ಇವರು ಬಡಿಸುವುದಕ್ಕೆ ಸಹಾಯ ಮಾಡುತ್ತಾರೆ.   ಇಂದಿನ ದಿನಮಾನದ ಹೆಂಗಸರ ಮನಸ್ಥಿತಿಯನ್ನು ನೆನೆದಾಗ ಮೇಲಿನ ಎರಡು ಕೆಲಸಗಳು ವಿಶೇಷ ಎನ್ನಿಸಿದವು. ಅವರ ಅಮ್ಮ ಸತ್ತಾಗ, ತಮ್ಮ,  ತುಂಬಾ ಚಿಕ್ಕವನಲ್ಲದಿದ್ದರೂ... ಅವನ ಭಯವನ್ನು/ ಹಿಂಜರಿಕೆಯನ್ನು ಗಮನಿಸಿ, ಅವನೋಡನೆ ಸರಿಸಮನಾಗಿ ನಿಂತು, ಅಂತ್ಯ ಸಂಸ್ಕಾರದ ಎಲ್ಲ ವಿಧಿಗಳನ್ನು ಪೂರೈಸಿ ಚಿತೆಗೆ ಅಗ...

ಗೋವಿಂದಾ... ಗೋ....ವಿಂದ

Image
ಬೆಳಗಿನ ವಾಕಿಂಗ್ ಸಮಯ.. ಇದ್ದಕ್ಕಿದ್ದಂತೆ ಒಂದು ಮೂಲೆಯಿಂದ ಕೇಳುತ್ತಿದ್ದ ಗೋವಿಂದಾ ಎಂಬ ಕೂಗು... ಅದಕ್ಕೆ ಇನ್ನೊಂದು ಕಡೆಯಿಂದ ಬರುತ್ತಿದ್ದ ಪ್ರತಿಕ್ರಿಯೆ ಗೋ...ವಿಂದ, ಮತ್ತೊಮ್ಮೆ ಇನ್ನೊಂದು ಗೋವಿಂದ ಮತ್ತದಕ್ಕೆ ಪ್ರತಿಕ್ರಿಯೆ. ಹೀಗೆ ಸಾಕಷ್ಟು ಜನರ ಬಾಯಲ್ಲಿನ ಗೋವಿಂದನಾಮ, ಅದಕ್ಕೆ ಪ್ರತಿಕ್ರಿಯಿಸುತ್ತಿದ್ದವರು ಒಬ್ಬರೇ ಎಂದು ತಿಳಿಯಿತು. ಅವರ ಧ್ವನಿ ಪರಿಚಿತವಾಗಿದ್ದರೂ, ಮುಖತಃ ನೋಡಿರಲಿಲ್ಲ. ಈಚೆಗೆ ಅವರ ದರ್ಶನವಾಯಿತು. ನಮಸ್ಕರಿಸಿದೆ.  ಹಣೆಯಲ್ಲಿ ದುಂಡು ಕುಂಕುಮವಿದ್ದ, ಸಾತ್ವಿಕ ವರ್ಚಸ್ಸಿನ ಹಿರಿಯರು. ಇನ್ನೂ ನನಗೆ ಪರಿಚಯವಾಗಿಲ್ಲ. ಗೋವಿಂದ ನಾಮದ ಮೂಲಕವೇ ಎಲ್ಲರೂ ಅವರನ್ನು ನಮಸ್ಕರಿಸುತ್ತಿದ್ದದ್ದು. ಅದು ಅವರ ವೈಶಿಷ್ಟ್ಯತೆ. ಗೋವಿಂದ ಪದವನ್ನು ಕೇಳಿದಾಗ ಮನಸ್ಸಿಗೆ ಬರುವುದೇ ತಿರುಪತಿ, ಜೊತೆ ಜೊತೆಗೆ ಬಿಳಿ ಕೆಂಪಿನ ದೊಡ್ಡ ನಾಮ. ಅದು ತಿರುಪತಿಯ ಹೆಗ್ಗುರುತು. ತಿರುಪತಿಯ ಬೆಟ್ಟವನ್ನು ಹತ್ತುವಾಗ, ಇಳಿಯುವಾಗ ಸತತವಾಗಿ ಕೇಳುವುದೇ ಗೋವಿಂದಾ... ಗೋ...ವಿಂದ ಎನ್ನುವ ನಾಮಸ್ಮರಣೆ. ಬೆಟ್ಟದ ಮೇಲೆ ಕಣ್ಣಿಗೆ ಕಾಣುವುದು, ಲಿಂಗ ಭೇದವಿಲ್ಲದ, ವಯಸ್ಸಿನ ಅಂತರ ಲೆಕ್ಕಕ್ಕೆ ಇಲ್ಲದ ಬೋಡು ಗುಂಡುಗಳು, ಹಣೆಯ ಮೇಲಿನ ನಾಮಗಳು.  ಗೋವಿಂದ ಪದದ ಹುಟ್ಟಿನ ಹಿಂದೆ ಒಂದು ಕುತೂಹಲಕಾರಿ ಕಥೆ ಇದೆ. ಭೂಮಿಯಲ್ಲಿ ವಾಸ ಮಾಡಲು ಬಂದ ವಿಷ್ಣು, ಸನ್ಯಾಸಿಯ ರೂಪದಲ್ಲಿ ಅಗಸ್ತ್ಯ ಋಷಿಗಳ ಆಶ್ರಮಕ್ಕೆ ಬಂದು ತನ್ನ ಉಪಯೋಗಕ್ಕಾಗಿ ಒಂದು ಹಸುವನ್ನು...

ರೂಪಾಂತರ - metamorphasis

Image
  ಬೆಳಗಿನ ವಾಕಿಂಗ್ ಸಮಯದಲ್ಲಿ ಪರಿಚಯವಾಗಿ, ಭೇಟಿಯಾಗುವ ಹಿರಿಯರು, ರಾಮಣ್ಣನವರು. ಅವರು ಯಾವಾಗಲೂ ಶುಭ್ರವಾದ ಬಿಳಿಯ ಪ್ಯಾಂಟ್ ಮತ್ತು ಅರ್ಧ ತೋಳಿನ ಬಿಳಿಯ ಶರ್ಟ್ ನಲ್ಲಿ ಕಾಣಿಸುತ್ತಿದ್ದವರು. ಬೆಳ್ಳಿಯ ಕೂದಲಿನ, ಬಿಳಿ ಬಣ್ಣದ,    ಬಿಳಿಯ ಉಡುಗೆ ತೊಡುಗೆಯ ರಾಮಣ್ಣನವರನ್ನು ಬಣ್ಣ ಬಣ್ಣದ ಪ್ಯಾಂಟ್ ಮತ್ತು ಟೀ ಶರ್ಟ್ ನಲ್ಲಿ ಕಂಡಾಗ ಆಶ್ಚರ್ಯ ಹಾಗೂ ಸಂತೋಷ ಒಟ್ಟಿಗೆ ಆಯ್ತು. smart young man ತರ ಕಾಣ್ತೀರ ಅಂತ ಮೆಚ್ಚುಗೆಯನ್ನು ಸೂಚಿಸಿದೆ. ಈಚೆಗೆ ಜಪಾನ್ ಗೆ ಹೋಗಿ ಬಂದ ರಾಮಣ್ಣನವರಿಗೆ, ಅಲ್ಲಿ ಉಪಯೋಗಿಸಲು, ಮಗಳು ತಂದುಕೊಟ್ಟ ಐದಾರು ಜೊತೆ ಬಣ್ಣ ಬಣ್ಣದ ಬಟ್ಟೆಗಳನ್ನು, ಸವೆಸುವ/ ಅನುಭವಿಸುವ ಅವಕಾಶ. ಹೆಣ್ಣು ಮಕ್ಕಳ ಈ ಪ್ರೀತಿಯನ್ನು ಅನುಭವಿಸುವುದೇ ಒಂದು ಆನಂದ.  ಈ ಸಮಯದಲ್ಲಿ ಜ್ಞಾಪಕಕ್ಕೆ ಬಂದದ್ದೇ metamorphasis ಪದ. ಚಿಟ್ಟೆಯ ಜೀವನಚಕ್ರ ಪಾಠದಲ್ಲಿ,   ಹೈಸ್ಕೂಲಿನಲ್ಲಿ ಓದಿದ್ದು. ಕಂಬಳಿ ಹುಳುವಿನಿಂದ ಚಿಟ್ಟೆಯಾಗಿ ರೂಪಾಂತರಗೊಂಡು.. ಮೊಟ್ಟೆ ಇಟ್ಟು ಮತ್ತೆ ಕಂಬಳಿ ಹುಳು ಆಗುವ ಜೀವನಚಕ್ರ. ಹಳ್ಳಿಯಲ್ಲಿ ದಿನ ದಿನವೂ ಕಣ್ಣಿಗೆ ಬೀಳುತ್ತಿದ್ದ ಮುಟ್ಟಿದರೆ ಚುಚ್ಚಿ ಕೈ ನವೆ ಆಗುತ್ತಿದ್ದ ಕಂಬಳಿ ಹುಳ ಹಾಗೂ ಕೈಯಲ್ಲಿ ಹಿಡಿಯಲು ಇಷ್ಟಪಟ್ಟು, ಪ್ರಯತ್ನಿಸುತ್ತಿದ್ದ ಬಣ್ಣ ಬಣ್ಣದ ಚಿಟ್ಟೆಗಳ ಮಧ್ಯೆ ಇಂಥ ಒಂದು ಸಂಕೀರ್ಣ ಸಂಬಂಧ ಇದೆ ಎಂದು ತಿಳಿದಾಗ ಆಶ್ಚರ್ಯವಾದದ್ದು ಸಹಜವೇ ಅಲ್ಲವೇ? ಶರ್ವ ( ನನ್ನ ನ...