Posts

Showing posts from March, 2026

ಪ್ರಶ್ನೋತ್ತರ - ಪ್ರಶ್ನಾತೀತ

Image
   ನಿಮ್ಮ ಜೀವನದಲ್ಲಿ ಅತಿ ಹೆಚ್ಚು ಬಾರಿ ಉತ್ತರಿಸಿದ ಒಂದು ಪ್ರಶ್ನೆ ಯಾವುದು? ಎಂಬ ಪ್ರಶ್ನೆಯನ್ನು ನನಗೆ ಕೇಳಿದರೆ, ನನ್ನ ಉತ್ತರ .... ನಿನ್ನ ಹೆಸರೇನು? ವಯಸ್ಸಿನ ಬೇರೆ ಬೇರೆ ಹಂತದಲ್ಲಿ ಪ್ರಶ್ನೆಯ ರೂಪ ಬೇರೆ ಬೇರೆಯಾದರೂ ಭಾವ ಮಾತ್ರ ಒಂದೇ, ಅದು ಹೆಸರನ್ನು ತಿಳಿಯುವುದು. ಎಷ್ಟೋ ಬಾರಿ ಈ ಪ್ರಶ್ನೆಯು ಇಲ್ಲದೆ ನನ್ನ ಹೆಸರನ್ನು ಹೇಳಿ ನಾನೇ  ಪರಿಚಯಿಸಿಕೊಂಡದ್ದು.   ಯಾವುದೇ ಮಾತುಕತೆ ಪ್ರಾರಂಭವಾಗುವುದು ಪ್ರಶ್ನೆಯಿಂದಲೇ ಅಥವಾ ಪ್ರಶ್ನಾರ್ಥಕ ರೂಪದ ವಾಕ್ಯದಿಂದಲೇ. ಉದಾಹರಣೆಗೆ ಸೆಖೆ ಶುರುವಾಗಿಹೋಯಿತು ಅಲ್ವಾ... .ಮುಂದುವರಿಯುವುದೂ ಪ್ರಶ್ನೋತ್ತರಗಳಿಂದಲೇ... ಕೇಳುವುದು ಹೇಳುವುದು. ಸಾಮಾನ್ಯವಾಗಿ ಎದುರಾಗುವ ಪ್ರಶ್ನೆಗಳು.. ಕಾಫಿ ಆಯ್ತಾ? ಆರಾಮನಾ? How are you ? ಹೇಗಿದ್ದೀರಾ? ಹೀಗೆ .  ಕಾಫಿ ಆಯ್ತಾ ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ.  ಆಯ್ತು ಎಂಬ ಉತ್ತರ ಹಸಿ ಸುಳ್ಳು..  ಯಾಕೆಂದರೆ ನಾನು ಕಾಫಿ ಕುಡಿಯುವವನಲ್ಲ.   ಇದು ಎಂದಾದರೊಮ್ಮೆ ಭೇಟಿಯಾಗುವ ವ್ಯಕ್ತಿಗಳಿಗೆ ಸಂಕೋಚವಿಲ್ಲದೆ ಕೊಡುವ ಉತ್ತರ.  ಆಗಿಲ್ಲ ಎಂಬ ಉತ್ತರಕ್ಕೆ ಮತ್ತೊಂದು ಪ್ರಶ್ನೆ, ಹಾಗಾಗಿ ಉತ್ತರದ ಬದಲು ಒಂದು ಒಣ ನಗೆ. ಸಾಕಷ್ಟು ಪರಿಚಿತ ವ್ಯಕ್ತಿಗಳು, ಈ ಪ್ರಶ್ನೆಯನ್ನು ಕೇಳಿ, ನಂತರ ಅವರೇ ನೀವು ಕುಡಿಯೋದೇ ಇಲ್ವಲ್ಲ ಅನ್ನುವ ಉತ್ತರವನ್ನು ಕೊಡುವುದುಂಟು. How are you?  ಎಂಬ ಪ್...

ರಥೋತ್ಸವ - ಮತ್ತೊಮ್ಮೆ

Image
ಶಿವರಾತ್ರಿ ಕಳೆದರೆ, ಛಳಿ ಶಿವ-ಶಿವಾ ಅಂತ ಓಡಿ ಹೋಗುತ್ತೆ ಅನ್ನುವುದು ಒಂದು ಮಾತು. ಬೇಸಿಗೆಯ ಕಾಲ ಪ್ರಾರಂಭವಾದಂತೆ, ಕೃಷಿಯೇ ಪ್ರಧಾನ ಕಸುಬಾಗಿದ್ದ ಕಾಲದಲ್ಲಿ, ಸುಗ್ಗಿಯ ಕಾಲ ಮುಗಿದು, ಅಳಿದುಳಿದ ಕೆಲಸಗಳನ್ನು ಮುಗಿಸಿದ ರೈತನಿಗೆ ಇದು ಸ್ವಲ್ಪ ಬಿಡುವಿನ ಸಮಯ ಆದಕಾರಣ, ಮನಸ್ಸು ಬೇರೆಯ ಕಡೆಗೆ ಹೊರಳುತ್ತದೆ. ಮಳೆ ಗಾಳಿ ಇಲ್ಲದ ಕಾಲವಾದ್ದರಿಂದ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಸೂಕ್ತವಾದ ಕಾಲ.  ಹಾಗಾಗಿ ಈ ತೇರು, ಜಾತ್ರೆ, ರಥೋತ್ಸವ,ಪರಿಷೆ ಎಲ್ಲವೂ ನಡೆಯುವುದು ಬೇಸಿಗೆಯ ಕಾಲದಲ್ಲಿ.  ಹೋದ ಭಾನುವಾರ (22.02.2026), ಹೂವಿನಕಟ್ಟೆಯ ಗುಡ್ಡದ ರಂಗನಾಥ ಸ್ವಾಮಿಯ ರಥೋತ್ಸವದಲ್ಲಿ ಭಾಗಿಯಾಗಿದ್ದೆ. 1979 ರಲ್ಲಿ ಮೊದಲಾದಂದಿನಿಂದ ನಾನು ಅತಿ ಹೆಚ್ಚು ಬಾರಿ ಭಾಗಿಯಾದ ಜಾತ್ರೆ.  ಅಂದು ಇದ್ದ ದೇವಸ್ಥಾನ, ಅದರ ಪರಿಸರಕ್ಕೂ ಇಂದಿನದಕ್ಕೂ ಅಜಗಜಾಂತರ. ಆಗಿನದು ಮುಗ್ಧ ಭಕ್ತಿಯ ಸಂಕೇತ...ಈಗಿನದು ಭಕ್ತಿಯ ಜೊತೆಗೆ ಆಡಂಬರ ಹಾಗೂ ಆಧುನೀಕತೆಯ ಮಿಶ್ರಣ. ದೇವಸ್ಥಾನ ಹತ್ತಿರವಾಗುತ್ತಿದ್ದಂತೆ ಕಣ್ಣಿಗೆ ಬಿದ್ದದ್ದು  ಬಣ್ಣ ಬಣ್ಣದ ಬಟ್ಟೆಗಳಿಂದ,  ಹೂವಿನ ಹಾರಗಳಿಂದ ಅಲಂಕೃತವಾದ ತೇರು.  ದೇವಸ್ಥಾನದ ಹೊರಗೂ ಒಳಗೂ ವಿಶೇಷ ಹೂವಿನ ಅಲಂಕಾರ ಈ ಬಾರಿಯ ಆಕರ್ಷಣೆಯಾಗಿತ್ತು. ದಾರಿ ಯುದ್ಧಕ್ಕೂ ಅಂಗಡಿಗಳ ಸಾಲು. ಕಡಲೆಪುರಿ, ಅದಕ್ಕೆ ಬೆರೆಸಲು ಹುರಿಗಡಲೆ, ಬೆಲ್ಲ, ಕಾರ ಸೇವು, ಜೊತೆಗೆ ಬತ್ತಾಸು, ಕಲ್ಯಾಣ ಸೇವೆ ಆಗ ತಾನೇ ರೆಡಿಯಾಗುತ್...