Posts

Showing posts from September, 2026

ಹ~ರ್ ಹ~ರ್ ಮಹಾದೇವ್

Image
ವಾರಣಾಸಿಯ ಬೆಳಗು ಆಹ್ಲಾದಕರವಾಗಿತ್ತು. ಬೆಳಿಗ್ಗೆ 6 ರಿಂದ 7 ರ ವರೆಗೆ ನಿಗದಿಪಡಿಸಿದ್ದ ನಮ್ಮ ಸುಗಮ ದರ್ಶನದ ಸಮಯವನ್ನು ಸಾಧಿಸಬೇಕಾಗಿತ್ತು. ಎಲ್ಲರಲ್ಲೂ ಉತ್ಸಾಹ ತುಂಬಿ ತುಳುಕುತ್ತಿತ್ತು.  ನಮಗೆ ನಿಗದಿಪಡಿಸಿದ್ದ ಗೇಟ್ ನಂಬರ್ 4 ತಲುಪಲು ಮೂರು ರಿಕ್ಷಾದಲ್ಲಿ ಹೊರಟು, ಒಂದಷ್ಟು  ದೂರ ನಡೆಯ ಬೇಕಾಯಿತು. ಮಧ್ಯವರ್ತಿಗಳ ಹಾವಳಿ ಅಷ್ಟಿಷ್ಟಲ್ಲ.. ದರ್ಶನಕ್ಕೆ ವಿಧವಿಧವಾದ ಆಮಿಷವನ್ನು ಒಡ್ಡುವವರು, ನಮ್ಮ ವಸ್ತುಗಳನ್ನು ಇಡಲು ಲಾಕರ್, ಹಾಗೂ ಚಪ್ಪಲಿ ಬಿಡಲು ಜಾಗವನ್ನು ಉಚಿತವಾಗಿ ಕೊಡುತ್ತೇನೆ ಎನ್ನುವವರು, ಇದರ ಮಧ್ಯೆ ಕಾಡುವ ಭಿಕ್ಷುಕರು, ಎಲ್ಲರಿಗೂ ಅವರದೇ ಆದ ಗುರಿ. ನಾವು ಒಂದು ಅಂಗಡಿಯನ್ನು ಆಯ್ಕೆ ಮಾಡಿ, ಲಾಕರ್ ನಲ್ಲಿ ವಸ್ತುಗಳು, ಅದರಲ್ಲೂ ಫೋನ್ ಗಳನ್ನು ಕಡ್ಡಾಯವಾಗಿ ಇಟ್ಟು, ಅಲ್ಲಿಂದಲೇ ಪೂಜಾ ಸಾಮಗ್ರಿಯನ್ನು ಕೊಂಡುಕೊಳ್ಳಬೇಕಾದ ಷರತ್ತನ್ನು ಅನಿವಾರ್ಯವಾಗಿ ಒಪ್ಪಿದ್ದಾಯಿತು.  ದೇವಸ್ಥಾನದ ಪ್ರಾಕಾರದೊಳಗೆ ಕಾಲಿಡುತ್ತಿದ್ದಂತೆ ಕೇಳಿಸಿದ್ದು ಅಲೆಯಲೆಯಾಗಿ ತೇಲಿ ಬಂದ.. ಹ~ರ್ ಹ~ರ್ ಮಹಾ.....ದೇವ್  ಎಂಬ ಘೋಷ. ಇದು  ಆಗಾಗ ತೇಲಿ ಬರುತ್ತಿತ್ತು.. ನಾನೂ ಅದಕ್ಕೆ ದನಿಗೂಡಿಸುತ್ತಿದ್ದೆ. ಕೈಯಲ್ಲಿ ಪೂಜಾ ಸಾಮಗ್ರಿಯನ್ನು ಹಿಡಿದ, ಬಟ್ಟಲಲ್ಲಿ ಹಾಲನ್ನು / ನೀರನ್ನು ಹಿಡಿದ ಜನರ ಮುಖದಲ್ಲಿ ಭಕ್ತಿಯ ಭಾವ ಎದ್ದು ಕಾಣುತ್ತಿತ್ತು.  ಕಾಶಿ ವಿಶ್ವೇಶ್ವರನ ಲಿಂಗದ ಹತ್ತಿರಕ್ಕೆ ಬರುವಷ್ಟರಲ್ಲಿ ಈ ಘೋಷ ತಾರಕಕ್...

ಜೈ ಜೈ ಶ್ರೀ ರಾಮ್

Image
ಜೈ    ಶ್ರೀ ರಾಮ್....  ಜೈ  ಜೈ   ಶ್ರೀ ರಾಮ್ ಎಂದು ನಾನು ಉತ್ಸಾಹದಿಂದ ಏರು ಧ್ವನಿಯಲ್ಲಿ ಹೇಳುತ್ತಿದ್ದೆ....    ಅದು ದೇವಸ್ಥಾನದ ಬೇರೆ ಬೇರೆ ದಿಕ್ಕುಗಳಿಂದ, ಒಂದಷ್ಟು ಜನರ ಬಾಯಲ್ಲಿ  ಪ್ರತಿಧ್ವನಿಸುತ್ತಿತ್ತು. ಮನಸ್ಸಿನಲ್ಲಿ ವರ್ಣಿಸಲಾಗದ ಸಂತೋಷ, ಮೈ ಪುಳಕ ರೋಮಾಂಚನ. ಪ್ರಾಯಶಃ ಗಾಲಿಕುರ್ಚಿಯಲ್ಲಿ ಕುಳಿತಿರದಿದ್ದರೆ ಒಂದೆರಡು ಸಲವಾದರೂ ಹನುಮಂತನಂತೆ ಮೇಲಕ್ಕೆ ಎಗರುತ್ತಿದ್ದೆನೇನೋ...  ಗಾಬರಿ ಬೇಡ... ನನ್ನ ಕೈಕಾಲುಗಳೆಲ್ಲ ಸರಿಯಾಗಿವೆ. ಅಯೋಧ್ಯೆಯ ಶ್ರೀ ರಾಮನ ದರ್ಶನಕ್ಕೆ ಸಮಯವಾಗುತ್ತಿದ್ದರಿಂದ.. ಹಿರಿಯ ನಾಗರಿಕರಿಗಾಗಿ ಇರುವ ಖಾಲಿ ಕುರ್ಚಿಯ ಅನುಕೂಲವನ್ನು ಉಪಯೋಗಿಸಿಕೊಂಡು ಶೀಘ್ರ ದರ್ಶನ ಪಡೆಯುವ ಸಲುವಾಗಿ, ನನ್ನ ಇಚ್ಛೆಗೆ ವಿರುದ್ಧ ಗಾಲಿ ಕುರ್ಚಿಯಲ್ಲಿ ಹೋಗಬೇಕಾಗಿ ಬಂದಿದ್ದು.   ಸುಮಾರು ಎಂಟು ವರ್ಷಗಳ ಹಿಂದೆ ಅಯೋಧ್ಯೆಗೆ ಬಂದಾಗ, ರಾಮಲಲ್ಲ ಇನ್ನೂ ತಾತ್ಕಾಲಿಕ ವ್ಯವಸ್ಥೆಯಾದ ಒಂದು ಗುಡಾರದಲ್ಲಿ ಇದ್ದಿದ್ದು... ಇಂದು ಭವ್ಯ ಮಂದಿರ. ದೇವಸ್ಥಾನದ ಒಳಗಡೆ ಗರ್ಭಗುಡಿಯನ್ನು ಸಮೀಪಿಸುತ್ತಿದ್ದಂತೆ, ತಲೆ ಎತ್ತಿ ನೋಡಿದಾಗ, ಕಂಡದ್ದೊಂದು ದಿವ್ಯ ವೈಭವಯುತ, ದೀಪಗಳ ಬೆಳಕಿನಿಂದ ಝಗಮಗಿಸುತ್ತಿದ್ದ ದೃಶ್ಯ.... ವರ್ಣಿಸಲಸದಳ.  ಗಾಲಿ ಕುರ್ಚಿಯನ್ನು ತಳ್ಳುತ್ತಿದ್ದ ಆ ವ್ಯಕ್ತಿ, ನಿಜಕ್ಕೂ ಕರುಣಾಮಯಿ. ತನಗೆ ತಿಳಿದಿದ್ದೆಲ್ಲ ಹೇಳುತ್ತಾ, ತೋರಿಸುತ್ತಾ.. ಆ ...

ಮುಳ್ಳಿಗೆ ಮುಳ್ಳಿಂದಲೇ ಮದ್ದೇ.. ?

Image
  78 ರ ಇಳಿ ವಯಸ್ಸಿನಲ್ಲೂ, ಪಾಠಮಾಡುವ ಕಾಯಕವನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಹಿರಿಯರ ಮನಸ್ಸಿನ ಮಾತುಗಳನ್ನ,  ಅದರಲ್ಲೂ never stop giving back ಎನ್ನುವ ಮಾತುಗಳು ಹಾಗೂ ಅದಕ್ಕೆ ಪ್ರತಿಕ್ರಯಿಸುತ್ತಾ, ಅವರ ಸ್ನೇಹಿತರು ಬರೆದ ಹೊಗಳಿಕೆಯ ಮಾತುಗಳನ್ನು face book ನಲ್ಲಿ  ಓದಿದಾಗ ಹೆಮ್ಮೆ ಎನಿಸಿತು. ನಿಜಕ್ಕೂ ಇದು ಅನುಕರಣೆ ಮಾಡಬೇಕಾದ ವಿಷಯ ಎನಿಸಿತು. ಜೊತೆ ಜೊತೆಗೆ ಮನಸ್ಸು ಹಿಂದಕ್ಕೋಡಿತು.... ನನ್ನ  ವೃತ್ತಿ ಜೀವನದಲ್ಲಿ, ಸುಮಾರು 1 ವರ್ಷ   ಅನುಭವಿಸಿದ ಕಹಿ ಘಟನೆಗಳ ಚಿತ್ರಗಳು ಮನಃಪಟಲದ ಮೇಲೆ ಮೂಡಿತು. ನನ್ನ ಸಣ್ಣ ಕೈಗಾರಿಕೆಯಲ್ಲಿ ಕೆಲಸಗಳು ಸುಗಮವಾಗಿ ನಡೆಯುತ್ತಿದ್ದವು. ಹೊಸ ಹೊಸ development ಕೆಲಸಗಳನ್ನು  ಮಾಡುವ ಅವಕಾಶಗಳು ದೊರೆಯುತ್ತಿದ್ದವು. ಅಂತಹ ಒಂದು test equipment ಮಾಡುವ ಪ್ರಸ್ತಾವನೆ ನನಗೆ ಬಂತು, ಸಹಜವಾಗಿ ಸಂತೋಷವಾಯಿತು. ಅದರ ಬಗ್ಗೆ ವಿಷಯ ಸಂಗ್ರಹಣೆ ಮೊದಲ ಹಂತ. ಸದರಿ ಅಧಿಕಾರಿ, ಈ ವಿಷಯದ ಬಗ್ಗೆ ಅರಿವಿರುವ ಒಬ್ಬ ವ್ಯಕ್ತಿಯ ಜೊತೆ ಟೆಲಿಫೋನ್ ಮೂಲಕ ಮಾತನಾಡಿದರು. ಅತ್ತ ಕಡೆಯಿಂದ  ಸರಿಯಾದ, ಸಮಾಧಾನಕರವಾದ ಉತ್ತರ ಬರಲಿಲ್ಲವೆಂದು, ಸ್ವಲ್ಪ ಬೇಸರಪಟ್ಟರು.  ವಿದೇಶದಿಂದ ಬಹಳ ಹಿಂದೆ ಬಂದಿದ್ದ ಇಂತಹದೇ equipment ನೋಡಿ, ಅದರಿಂದ ಸ್ಪೂರ್ತಿ ಪಡೆದು, ಮಾಡುವ ವಿಶ್ವಾಸವಿದ್ದರೆ ಮುಂದುವರಿಯಬಹುದು ಎಂಬ ಸಲಹೆ ಇತ್ತರು. ಅವರ ಸಲಹೆಯಂತೆ, ಅದರಿಂದ ...

ಮನಸು ಗೊಂದಲದ ಗೂಡು

Image
ನಯನ ಫೋನ್ ಮಾಡಿ " ಸರ್ ನಿಮ್ಮತ್ರ ಮಾತಾಡಬೇಕು ಯಾವಾಗ ಸಿಕ್ತೀರಾ" ಕೇಳಿದಾಗ ವಿಶೇಷ ಎನಿಸಲಿಲ್ಲ. ಇದು ಆಗಾಗ್ಗೆ ನಡೆಯುವ ಸಂಭಾಷಣೆ. ಹೊಂಗಿರಣ ಆಪ್ತ ಸಲಹಾ ಕೇಂದ್ರಕ್ಕೆ ಬಂದ ನಯನ ತನ್ನ ಹೊಸ ಕೆಲಸದ ಬಗ್ಗೆ ವಿವರಗಳನ್ನು ಹೇಳುವಾಗ, ತನ್ನ ಇಂಜಿನಿಯರಿಂಗ್ ಪದವಿಯ ಶ್ರೇಯಸ್ಸು ಬಹುಭಾಗ ನನಗೆ ಸಿಗಬೇಕೆಂದು ಹೇಳಿದಾಗ ಜೋರಾಗಿ ನಕ್ಕೆ. ಕಷ್ಟಪಟ್ಟು ಓದಿದ್ದು ನೀನು, ಪರೀಕ್ಷೆ ಬರೆದದ್ದು ನೀನು, ನನ್ನ ಪಾತ್ರವೇನು ಎಂದಾಗ " ಸರ್ ನನ್ನ ಹಿಂದೆ ನಿಂತು ಪ್ರೋತ್ಸಾಹಿಸಿ, ಧೈರ್ಯ ಕೊಟ್ಟು, ಫಲಿತಾಂಶ ಏನೇ ಇರಲಿ, ಪರೀಕ್ಷೆ ಬರೆಯಲೇ ಬೇಕೆಂದು ಒತ್ತಾಯಿಸಿದವರು ನೀವು.. ಇಲ್ಲದಿದ್ದರೆ ನಾನು ಪರೀಕ್ಷೆಗೆ ಹೋಗುತ್ತಿರಲಿಲ್ಲ" ಎಂದಾಗ ಸಂತೋಷವಾಗಿದ್ದು ನಿಜ. ನಯನಳ ಮೊದಲ ಭೇಟಿ, ಪ್ರಸನ್ನ ಆಪ್ತ ಸಲಹಾ ಕೇಂದ್ರದಲ್ಲಿ. ಆಗಿನ್ನು ಹೈಸ್ಕೂಲ್ ಮುಗಿಸಿ ಕಾಲೇಜಿನಲ್ಲಿ ಓದುತ್ತಿದ್ದವಳು. ಸಮಸ್ಯೆ .... ಓದಿನ ಮೇಲೆ ಗಮನಹರಿಸಲು ಆಗುತ್ತಿಲ್ಲ... ನಯನ ಅಪ್ಪ ಅಮ್ಮನಿಗೆ ಒಬ್ಬಳೇ ಮಗಳು. ಅಪ್ಪ ಅಮ್ಮ ಇಬ್ಬರು ಕೆಲಸಕ್ಕೆ ಹೋಗುವ ಕಾರಣ, ಶಾಲೆಯಿಂದ ಬಂದ ನಂತರ ಒಂಟಿಯಾಗಿ ಇರುವುದು ಅನಿವಾರ್ಯ. ನೆರೆಯ ಒಂದು ಮನೆಯಲ್ಲಿ ಮಾತ್ರ ಸ್ವಲ್ಪ ಸಲಿಗೆ ಇದೆ, ಬೇರೆ ಯಾರ ಮನೆಗೂ ಹೋಗುವುದಿಲ್ಲ. ಹೆಚ್ಚು ಮಾತಾಡದ ನಯನಳ ಕಣ್ಣಲ್ಲಿ ನೀರು ತುಂಬುವುದು ಬೇಗ, ಆದರೆ ಅಳಲೊಳ್ಳಲು. ಒಂದಷ್ಟು ಸಮಾಧಾನದ ಮಾತುಗಳನ್ನು ಆಡಿ, ಓದುವ ಬಗ್ಗೆ, ಹವ್ಯಾಸ ಬೆಳೆಸಿಕೊಳ್ಳುವುದು, ಸ್ನ...