Posts

Showing posts from October, 2026

ಮಾತು- ಅರ್ಥ- ಅರ್ಥೈಸು

Image
" ನೀನು ಯಾರ್ ಮಾತೂ ಕೇಳಬೇಡ... ಸುಮ್ನೆ ಅದನ್ನು ಮಾರಿ ಕೈ ತೊಳ್ಕೊ..." ವಾಕಿಂಗ್ ಮಾಡುತ್ತಿದ್ದಾಗ ಕಿವಿಗೆ ಬಿದ್ದ ಮಾತು. ಮಧ್ಯ ವಯಸ್ಕ ಗಂಡಸು ತನ್ನ ಸ್ನೇಹಿತನಿಗೆ ಹೇಳುತ್ತಿದ್ದ ಮಾತು.  ನನ್ನ ತಲೆಗೆ ತಕ್ಷಣ ಹೊಳೆದದ್ದು.. ಯಾರ ಮಾತೂ ಕೇಳಬೇಡ .... ಅಂದಾಗ ಈತ ಹೇಳಿದ ಮಾತಿಗೂ ಅನ್ವಯ ಆಗುತ್ತದಲ್ಲವೇ?  ಇಲ್ಲಿ ಯಾರ ಮಾತು ಕೇಳಬೇಡ ಎಂದಾಗ.. ನಾನು ಹೇಳುವುದನ್ನು ಕೇಳು, ನನ್ನ ಮಾತು ಕೇಳು ಎಂಬುವುದು ಅರ್ಥಮಾಡಿಕೊಳ್ಳಬೇಕಾದ್ದು. ಆಡೋ ಮಾತಿಗೆ  ಒಂದು ಅರ್ಥ ಬೇಡ್ವೇನಯ್ಯ? ಎನ್ನುವುದು ಒಂದು ಚಿತ್ರದಲ್ಲಿನ (ಹೆಸರು ನೆನಪಿಲ್ಲ) ನನಗೆ ಇಷ್ಟವಾದ ಸಂಭಾಷಣೆ. ಸಾಮಾನ್ಯವಾಗಿ ಆಡುವ ಮಾತುಗಳು, ಅವುಗಳ ನೇರ ಭಾವ ಹಾಗೂ ಅರ್ಥವನ್ನು ಧ್ವನಿಸುತ್ತವೆ. ಕೆಲವು ಸಲ ಆಡುವ ಮಾತುಗಳಿಗೆ, ಇರುವ ಅರ್ಥ, ಭಾವ ಅದನ್ನು ಅರ್ಥೈಸುವವರ ( ವಿವರಿಸುವವರ) ದೃಷ್ಟಿಯ ನೇರಕ್ಕೆ ಇರುತ್ತದೆ. ಬರೀ ಪದಗಳ ಅರ್ಥವನ್ನು ಜೋಡಿಸಿದರೆ ಅದು ಅಪಾರ್ಥವಾಗುವ / ಅನರ್ಥವಾಗುವ ಸಂಭವವೇ ಹೆಚ್ಚು. ಪ್ರಾಯಶಃ ಮೊದಲ ದುಭಾಷಿ, ಮಾತುಗಳನ್ನು   ಅರ್ಥೈಸಿದವಳು ಅಮ್ಮ...ತನ್ನ ಮಗುವಿನ ತೊದಲು ಮಾತುಗಳ ಅರ್ಥವನ್ನು ಬೇರೆಯವರಿಗೆ ತಿಳಿ ಹೇಳುವಾಗ. ಇಬ್ಬರು ಬೇರೆ ಬೇರೆ ಭಾಷೆ ಮಾತನಾಡುವವರ, ಮಾತುಗಳನ್ನು  ಆಗಿಂದಾಗಲೇ ಭಾಷಾಂತರ ಮಾಡಿ ತಿಳಿಸುವವರನ್ನು ದುಭಾಷಿಗಳು / interpretors ಎಂದು ಕರೆಯುತ್ತಾರೆ. ವಿಶ್ವದ ಪ್ರಮುಖ ರಾಜಕಾರಣಿಗಳು ಮಾತನಾಡುವಾಗ ಇಂಥ ದುಭಾ...