ಸ್ವಾತಂತ್ಯ ದಿನೋತ್ಸವ:
ಸ್ವಾತಂತ್ಯ ದಿನೋತ್ಸವ:
ಸ್ವಾತಂತ್ಯ ದಿನೋತ್ಸವ ಅಂದ ಕೂಡಲೇ ನೆನಪಿಗೆ ಬರುವುದು ದಲಿತಕವಿ ಎಂದೇ ಖ್ಯಾತರಾದ ಶ್ರೀ ಸಿದ್ದಲಿಂಗಯ್ಯನವರು. ನಾಟಕದ ಹೆಸರು ಜ್ಞಾಪಕವಿಲ್ಲ. ಆದರೆ ಅಂದು ಅವರು ಕಲಾಕ್ಷೇತ್ರದ ಬಾಲ್ಕನಿಯಿಂದ ತಮಟೆ ಬಾರಿಸಿಕೊಂಡು ದೊಡ್ಡ ಧ್ವನಿಯಲ್ಲಿ " ಯಾರಿಗೆ ಸಿಕ್ಕಿದೆ ಎಲ್ಲಿ ಸಿಕ್ಕಿದೆ ನಲವತ್ತೇಳರ ಸ್ವಾತಂತ್ಯ" ಎಂದು ಹೇಳಿಕೊಂಡು ರಂಗಕ್ಕೆ ಪ್ರವೇಶಮಾಡಿದ್ದು ನೆನಪಲ್ಲಿ ಹಸಿರಾಗಿದೆ.
ದೆಹಲಿಯ ಕೆಂಪು ಕೋಟೆ ಮತ್ತು ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ಮೂಡಿಬರುವ ಕಾರ್ಯಕ್ರಮಗಳನ್ನು ದೂರದರ್ಶನದಲ್ಲಿ ನೋಡಿದ್ದಿದೆ.
ಬಾಲ್ಯದ ಸ್ವಾತಂತ್ಯ ದಿನೋತ್ಸವದಲ್ಲಿ ನಾವು ಶಾಲೆಯ ಮಕ್ಕಳೆಲ್ಲಾ ಗಾಂಧೀಜಿ ಫೋಟೋ ಮತ್ತು ಬಾವುಟ ಎತ್ತಿಕೊಂಡು ನಮ್ಮೂರ ಬೀದಿಗಳಲ್ಲಿ ಮೆರವಣಿಗೆ ಮಾಡುವುದು. ಮೆರವಣಿಗೆ ನಮ್ಮ ಮನೆಯ ಹತ್ತಿರ ಬಂದಾಗ ನಾನು ಬಾವುಟವನ್ನು ಎತ್ತಿಕೊಂಡಿರುವುದನ್ನು ನಮ್ಮಮ್ಮ ಹೆಮ್ಮೆಯಿಂದ ನೋಡಿ ಸಂತೋಷ ಪಡೋಳು. ಮೆರವಣಿಗೆ ಮುಗಿದಮೇಲೆ ಯಾರೋ ದೊಡ್ಡವರು ಭಾಷಣ ಮಾಡೋರು. ನಮಗೆಲ್ಲ ಅದು ಏನೂ ಅರ್ಥ ಆಗ್ತಿರಲಿಲ್ಲ. ನಮ್ಮೆಲ್ಲರ ಗಮನ ಅವತ್ತು ಕೊಡುವ ಸಿಹಿಯ ಮೇಲೆ. ಜನಗಣಮನ ಹೇಳಿದ್ದು ಕೊನೆಯಲ್ಲಿ ಸಿಹಿ ಬೂಂದಿ ತಿಂದಿದ್ದು ಮಾತ್ರ ನೆನಪಿನಲ್ಲಿದೆ.
ಈಗ್ಗೆ ಸುಮಾರು 12 ವರ್ಷಗಳಿಂದ ನನ್ನ ಸ್ವಾತಂತ್ಯ ದಿನಾಚರಣೆಯ ನಂಟು ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ , ಹುಂಗೇನಹಳ್ಳಿ, ಸರ್ಕಾರಿ ಪ್ರಾಥಮಿಕ ಶಾಲೆಯೊಂದಿಗೆ ಬೆಸೆದಿದೆ. ಹುಂಗೇನಹಳ್ಳಿಗೆ ಒಂದು ಗರಿಮೆ ಇದೆ. ಅದು ನಮ್ಮ ಕನ್ನಡದ ಆಸ್ತಿ ಮಾಸ್ತಿಯವರ ಅಜ್ಜಿ ತಾತನ ಊರು. ಹಾಗಾಗಿ ಅದು ಮಾಸ್ತಿಯವರು ಓಡಾಡಿದ ಜಾಗ ಅನ್ನುವ ಹೆಮ್ಮೆ. ಆ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನ್ನ ಆತ್ಮೀಯರು ಶ್ರೀ ಸತ್ಯನಾರಾಯಣ ರಾಯರು. ಆವರಿಗೆ ತಾವು ಓದಿದ ಶಾಲೆಯ ಮೇಲೆ ತುಂಬಾ ಅಭಿಮಾನ. ಶಾಲೆಯ ಕೆಲ ಕೆಲಸಗಳಲ್ಲಿ ನನ್ನನ್ನು ತೊಡಗಿಸಿಕೊಂಡರು. ಹಾಗೆ ಶುರುವಾದ ಶಾಲೆಯೊಡನೆ ಒಡನಾಟ ಇಂದಿಗೂ ಮುಂದುವರಿದಿದೆ.
ಊರಿನ ಕೆಲ ಜನಕ್ಕೆ ಹಾಗೂ ಶಾಲೆಯ ಸಿಬ್ಬಂದಿಗೂ ನನ್ನ ಮೇಲೆ ಅಭಿಮಾನ. ಆತ್ಮೀಯವಾಗಿ ಶಾಲೆಯ ಸ್ವಾತಂತ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ಪ್ರತಿ ವರ್ಷವೂ ತಪ್ಪದೆ ಬರುತ್ತದೆ. ಅದರಲ್ಲಿ ಸಂಭ್ರಮದಿಂದ ಬೆರೆಯುತ್ತೇನೆ. ಮಕ್ಕಳ ಉತ್ಸಾಹ, ಸಂಭ್ರಮ ನೋಡಲು, ಅನುಭವಿಸಲು ನನಗೆ ಪುಳಕ. ಅವರ ಹಾಡು, ಕುಣಿತ, ನಾಟಕಗಳು ನನ್ನನ್ನು ನನ್ನ ಬಾಲ್ಯಕ್ಕೆ ಎಳೆದುಕೊಂಡು ಹೋಗುತ್ತವೆ. ಇಲ್ಲೂ ಸಹ ಮಕ್ಕಳಿಗೆ ಹಿರಿಯರ ಭಾಷಣ ಕೇಳಲು ಉತ್ಸಾಹವಿಲ್ಲ. ಗುಸು ಗುಸು ಶುರು. ಪಾಪ ಉಪಾಧ್ಯಾಯರು ಶಿಸ್ತು ಕಾಪಾಡುವಲ್ಲಿ (ಭಾಷಣಕಾರರಿಗೆ ಗೌರವ) ಹೆಣಗಾಡುತ್ತಾರೆ. ಮಕ್ಕಳ ಮನಸ್ಸು ತಿಳಿಯದ ಹಿರಿಯರು ತಮ್ಮ ಭಾಷಣದ ಭೀಕರತೆಯಿಂದ ಹಿಂಸಿಸುತ್ತಾರೆ.
ಎಷ್ಟಾದರೂ ಮಕ್ಕಳಿಗೆ ಕೊನೆಯಲ್ಲಿ ಸಿಗುವ ಸಿಹಿಯ ಸವಿಯೇ ಎಲ್ಲಕ್ಕಿಂತ ಮುಖ್ಯ.
ಅಂದು ತಿಂದ ಸಿಹಿಯ ಸವಿ ನೆನಪು ಇಂದಿಗೂ ನನ್ನ ಬಾಯಲ್ಲಿ.
ಭಾರತ್ ಮಾತಾಕಿ ಜೈ.

Comments
Post a Comment