"ಮಳೆ ಬಂತು ಮಳೆ ಕೊಡೆ ಹಿಡಿದು ನಡೆ"
"ಮಳೆ ಬಂತು ಮಳೆ ಕೊಡೆ ಹಿಡಿದು ನಡೆ" ಅಂತ ಮನಸ್ಸಿನಲ್ಲೇ ಹೇಳಿಕೊಂಡೆ.
ಇವತ್ತು ಬೆಳಿಗ್ಗೆಯಿಂದ ಮಳೆ ಬರ್ತಾನೆ ಇದೆ. ಎಲ್ಲೂ ಆಚೆ ಹೋಗಲು ಬಿಡ್ತಾ ಇಲ್ಲ. ಸುಮ್ಮನೆ ಮಳೆ ಸುರಿಯುವುದನ್ನು ನೋಡ್ತಾ ಕುಳಿತೆ. ಮನಸ್ಸು ನನ್ನ ಹತೋಟಿ ಮೀರಿತು. ಗತಕಾಲಕ್ಕೆ ಜಾರಿತು.
ಹಳ್ಳಿಯ ನಮ್ಮ ಮನೆ ಮಣ್ಣಿನ ಮಾಡಿನದು. ಹಾಗಾಗಿ ಜೋರು ಮಳೆ ಬಂದರೆ ಸೋರುತ್ತಿತ್ತು. ಮಳೆಗೆ ಮುಂಚಿನ ದಿನಗಳಲ್ಲಿ ಮಾಡು ಸರಿ ಮಾಡದಿದ್ದರೆ ಸೋರುವಿಕೆ ಇನ್ನೂ ಸ್ವಲ್ಪ ಜಾಸ್ತಿ. ಆ ಸಂಧರ್ಭಗಳಲ್ಲಿ ನೀರು ಸೋರುವಲ್ಲಿ ಒಂದು ಪಾತ್ರೆ ಇಟ್ಟು, ಅದು ತುಂಬಿದಾಗ ನೀರನ್ನು ಹೊರ ಚೆಲ್ಲುವುದು ಒಂದು ಉಪಾಯ. ಅಂದು ರಾತ್ರಿ ಜೋರು ಮಳೆ, ಸೋರಾಟ ಶುರು. ನಿದ್ದೆಯಿಂದ ಎಚ್ಚೆತ್ತ ನನಗೆ ಅಮ್ಮ ಪಡುತ್ತಿದ್ದ ಪಾಡು ನೋಡಿ ಸಹಾಯ ಮಾಡಲು ನಾನೂ ಪಾತ್ರೆ ತಂದು ಇಡಲು ಶುರು ಮಾಡಿದೆ. ಅದರಲ್ಲೂ ಆಟವಾಡುವ ಮೋಜು ನನಗೆ, ಪಾಪ ಅಮ್ಮನ ಒದ್ದಾಟ ಪೇಚಾಟ ಅಮ್ಮನಿಗೆ.
ಮಳೆಗಾಲದ ಸಂಜೆ ಬಿಸಿ ಬಿಸಿ "ಬೆರಕೆ ಸೊಪ್ಪಿನ ಪಕೋಡ" - ಹಳ್ಳಿಯಲ್ಲಿ ಸಿಗುತ್ತಿದ್ದ ಬೇರೆ ಬೇರೆ ಸೊಪ್ಪುಗಳ ಮಿಶ್ರಣ - ಸೇರಿಸಿ ಮಾಡುತ್ತಿದ್ದದ್ದು, ತಿನ್ನುವ ಮಜ..ಬಾಯಲ್ಲಿ ಈಗಲೂ ನೀರೂರತ್ತೆ.
ನಮ್ಮಲ್ಲೊಂದು ನೆಲಭಾವಿ - ಅಂದರೆ ಸುತ್ತಲೂ ಕಟ್ಟೆಯಿಲ್ಲ- ಮಳೆಗಾಲದಲ್ಲಿ ಹತ್ತಿರದಲ್ಲಿದ್ದ ಕೆರೆಯ ಪ್ರಭಾವದಿಂದ ತುಂಬಿ ತುಳುಕುತ್ತಿತ್ತು. ನೀರನ್ನು ನಾನೇ ಬಗ್ಗಿ ತುಂಬಿಕೊಳ್ಳುವಷ್ಟು ಮೇಲೆ. ಆದರೆ ಅದಕ್ಕೆ ಯಾವಾಗಲೂ ಅಡ್ಡಿ. ಎಲ್ಲಿ ಭಾವಿಯಲ್ಲಿ ಮಗು ಮುಗುಚಿಕೊಳ್ಳುತ್ತಾನೊ ಎನ್ನುವ ಭಯ ಮನೆಯವರಿಗೆ. ನನಗೆ ನಿರಾಸೆ.
ಗೌರಿ, ಗಣೇಶನ ಹಬ್ಬಕ್ಕೆ ಊರಿನವರೆಲ್ಲಾ ಓಲಗ, ವಾದ್ಯ ಸಮೇತ ಕೆರೆಗೆ ಹೋಗಿ ಪೂಜೆ ಮಾಡಿದ ಮಣ್ಣನ್ನು ತಂದು ಹಬ್ಬ ಆಚರಿಸುವುದು ಸಂಪ್ರದಾಯ. ನನ್ನ ನೆನಪಿನಲ್ಲಿರುವಂತೆ ಆಗೆಲ್ಲಾ ತುಂತುರು ಮಳೆ ಬರುತ್ತಿತ್ತು. ಅದರಲ್ಲಿ ನೆನೆದು ಬರುವುದೇ ಒಂದು ಖುಷಿ. "ಮಳೆಯಲ್ಲಿ ನೆನೆಯಬೇಡ" ಎನ್ನುವ ಎಚ್ಚರಿಕೆಯ/ ಬೈಸಿಕೊಳ್ಳುವ ಭಯವಿಲ್ಲ.
ಇನ್ನು ಜೋರಾಗಿ ಮಳೆ ಬಂದರೆ ಶಾಲೆಗೆ ರಜೆ. ಹಾಗಾಗಿ ಮಳೆಗಾಗಿ ಪ್ರಾರ್ಥನೆ ಮಾಡಿರುವುದೂ ಉಂಟು. ಕೆಲವು ಸಲ ಮಳೆಯ ಮೇಲೆ ಕೋಪ ಸಹ ಬರುತ್ತಿತ್ತು. ಶಾಲೆಗೆ ಹೋಗುವಾಗ ಬರದ ಮಳೆ
ಮನೆಗೆ ಬರುವಾಗ ಬಂದು ನಮಗೆ ತೊಂದರೆ ಕೊಟ್ಟಾಗ.
"ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲಾ...ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ" ಇದು ನಾವುಗಳು ಮಳೆಬರದಿದ್ದಾಗ ಹೇಳುತ್ತಿದ್ದ ಹಾಡು. ಊರಿನಲ್ಲಿ ಒಬ್ಬ ವ್ಯಕ್ತಿ ( ಬಹುಷಃ ಊರಿನ ದನ ಕರುಗಳನ್ನು ಮೇಯಿಸಲು ಹತ್ತಿರದ ಕಾಡಿನಂಥ ತಾಣಕ್ಕೆ ಕರೆದೊಯ್ಯುತ್ತಿದ್ದ ಮಲ್ಲಪ್ಪ ಇರಬಹುದು) ತಲೆಯ ಮೇಲೆ ಒಂದು ತಟ್ಟೆಯಲ್ಲಿ ದೆವರನ್ನು ಇಟ್ಟುಕೊಂಡು ಊರಿನ ಮನೆಗಳ ಹತ್ತಿರ ಹೋದಾಗ ಮನೆಯವರು ಒಂದು ಗಡಿಗೆ ನೀರನ್ನು ಆತನ ತಲೆಯ ಮೇಲೆ"ಹುಯ್ಯುತ್ತಿದ್ದರು". ನಾವು ಹುಡುಗರು ಒಕ್ಕೊರಲಿನಿ೦ದ ಕೂಗುತ್ತಿದ್ದೆವು "ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಲ್ಲಾ...ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ". ಆಗ ಮಳೆಬರುತ್ತಿತ್ತೆಂದು ನಂಬಿಕೆ.
ಮಳೆ ಬಾರದಿದ್ದಾಗ ನಮ್ಮ ಹಳ್ಳಿಯಲ್ಲಿ "ಶಿವ ಸಪ್ತಾಹ" ವನ್ನು ಆಚರಿಸುತ್ತಿದ್ದರು. ಹಗಲು ರಾತ್ರಿ ಎಡೆಬಿಡದೆ ನಮ್ಮೂರ ಬಸವಣ್ಣನ ಗುಡಿಯಲ್ಲಿ ಭಜನೆ. ಎರಡು ಕಂಬದ ಮಧ್ಯೆ ದೇವರ ಫೋಟೋ ಸಾಲಾಗಿ ಕಟ್ಟಿ, ಹಾಡು ಭಜನೆಯೊಂದಿಗೆ ಸುತ್ತು ಬರುವುದು. ಊರಿನ ಎಲ್ಲರೂ ಸಮಯವಾದಾಗ ಬಂದು ತಮ್ಮ ಸೇವೆ ಸಲ್ಲಿಸುತ್ತಿದ್ದರು. ನಾವೆಲ್ಲಾ ಬಹಳ ಶ್ರಧ್ಧೆಯಿಂದ ಪಾಲ್ಗೊಳ್ಳುತ್ತಿದ್ದೆವು. ಅಲ್ಲಿ ಆಗಾಗ ಕೊಡುವ "ಚರ್ಪು" ತಿನ್ನುವ ಅಕರ್ಷಣೆ.
ಎಲ್ಲ ಆ ವಯಸ್ಸಿನ ಮಕ್ಕಳಂತೆ ಮಳೆಯ ನೀರನ್ನು ಎರಡೂ ಕೈಯ್ಯಲ್ಲಿ ಹಿಡಿಯುವುದು, ಆನೆಕಲ್ಲು (ಆಲಿಕಲ್ಲು) ಆರಿಸುವುದು, ಹರಿಯುವ ನೀರಲ್ಲಿ ಕಾಲಾಡಿಸಿಕೊಂಡು ಓಡಾಡುವುದು, ಕಾಗದದ ದೋಣಿಯನ್ನು ಬಿಡುವುದು, ಇದೆಲ್ಲ ಅನುಭವಿಸಿದ್ದು.
ಕೊನೆಯದಾಗಿ ನಮ್ಮೂರ ಕೆರೆಯ ಕೋಡಿ....ದೊಡ್ದಜಾಲದ ಕೆರೆ ಅಂದರೆ ಏಳೂರಿಗೆ ನೀರುಣಿಸುವ ಮೂಲ. ಕೆರೆ ಕೋಡಿ ಬಿದ್ದಿದೆ ಎಂದರೆ ಎಲ್ಲರಿಗೂ ಸಂಭ್ರಮ. ಪೂಜೆ ಮಾಡುವುದು ಸಹ ಸಂಪ್ರದಾಯ. ಕೋಡಿಕಟ್ಟೆಯ ಮೇಲೆ ಭೋರ್ಗರೆಯುತ್ತಾ ಹರಿಯುವ ನೀರನ್ನು ನೋಡುವುದು ಒಂದು ಭಯಪೂರಿತ ಅನುಭವ. ಹರಿಯುವ ನೀರನ್ನು ಗಮನಿಸಿ ನೋಡಿದಾಗ ನಾವೇ ಓಲಾಡಿದ ಅನುಭವ....ಕುತೂಹಲ ಮತ್ತು ಭಯ ಮಿಶ್ರಿತ ಸಂಭ್ರಮ. ನಾನು 7ನೆ ತರಗತಿಗೆ ಹತ್ತಿರದ ವಿದ್ಯಾನಗರಕ್ಕೆ ನಡೆದು ಹೋಗಬೇಕಿತ್ತು. ಅದು ಕೆರೆ ಕೋಡಿಯನ್ನು ದಾಟಿ ಹೋಗಬೇಕು. ಒಂದು ದಿನ ಶಾಲೆ ಮುಗಿಸಿ ಬರುವಾಗ ಕೆರೆ ಕೋಡಿ ಬಿದ್ದಿದ್ದು, ನಮಗೆಲ್ಲಾ ಅದನ್ನು ದಾಟಿ ಬರಲು ಭಯ. ಇನ್ನೇನು ಅಳು ಬರುವ ಹಾಗಿತ್ತು. ಯಾರೋ ಹಿರಿಯರು ಬಂದು ನಮ್ಮ ಕೈ ಹಿಡಿದು (ಒಬ್ಬೊಬ್ಬರು ಪರಸ್ಪರ ಕೈ ಹಿಡಿದು ಕೊಂಡು) ಕೋಡಿಯನ್ನು ದಾಟಿದ ಆ ಅನುಭವ ಮೈ ನವಿರೇಳಿಸುವಂತಹದು....
ಓ ಮಳೆಯೇ, ಓ ನೆನಪೇ... ಎಂತಹ ಬಿಸಿ ಹಸಿ ಕಚಗುಳಿ ಕೊಡುವ ನೆನಪು.
ಮಳೆ ಕಡಿಮೆಯಾಗಿದೆ..."ಮಳೆ ಬಂತು ಮಳೆ ಕೊಡೆ ಹಿಡಿದು ನಡೆ"....ಮುಂದೆ ಸಾಗೋದೇ ಜೀವನ
ಹಳ್ಳಿಯ ನಮ್ಮ ಮನೆ ಮಣ್ಣಿನ ಮಾಡಿನದು. ಹಾಗಾಗಿ ಜೋರು ಮಳೆ ಬಂದರೆ ಸೋರುತ್ತಿತ್ತು. ಮಳೆಗೆ ಮುಂಚಿನ ದಿನಗಳಲ್ಲಿ ಮಾಡು ಸರಿ ಮಾಡದಿದ್ದರೆ ಸೋರುವಿಕೆ ಇನ್ನೂ ಸ್ವಲ್ಪ ಜಾಸ್ತಿ. ಆ ಸಂಧರ್ಭಗಳಲ್ಲಿ ನೀರು ಸೋರುವಲ್ಲಿ ಒಂದು ಪಾತ್ರೆ ಇಟ್ಟು, ಅದು ತುಂಬಿದಾಗ ನೀರನ್ನು ಹೊರ ಚೆಲ್ಲುವುದು ಒಂದು ಉಪಾಯ. ಅಂದು ರಾತ್ರಿ ಜೋರು ಮಳೆ, ಸೋರಾಟ ಶುರು. ನಿದ್ದೆಯಿಂದ ಎಚ್ಚೆತ್ತ ನನಗೆ ಅಮ್ಮ ಪಡುತ್ತಿದ್ದ ಪಾಡು ನೋಡಿ ಸಹಾಯ ಮಾಡಲು ನಾನೂ ಪಾತ್ರೆ ತಂದು ಇಡಲು ಶುರು ಮಾಡಿದೆ. ಅದರಲ್ಲೂ ಆಟವಾಡುವ ಮೋಜು ನನಗೆ, ಪಾಪ ಅಮ್ಮನ ಒದ್ದಾಟ ಪೇಚಾಟ ಅಮ್ಮನಿಗೆ.
ಮಳೆಗಾಲದ ಸಂಜೆ ಬಿಸಿ ಬಿಸಿ "ಬೆರಕೆ ಸೊಪ್ಪಿನ ಪಕೋಡ" - ಹಳ್ಳಿಯಲ್ಲಿ ಸಿಗುತ್ತಿದ್ದ ಬೇರೆ ಬೇರೆ ಸೊಪ್ಪುಗಳ ಮಿಶ್ರಣ - ಸೇರಿಸಿ ಮಾಡುತ್ತಿದ್ದದ್ದು, ತಿನ್ನುವ ಮಜ..ಬಾಯಲ್ಲಿ ಈಗಲೂ ನೀರೂರತ್ತೆ.
ನಮ್ಮಲ್ಲೊಂದು ನೆಲಭಾವಿ - ಅಂದರೆ ಸುತ್ತಲೂ ಕಟ್ಟೆಯಿಲ್ಲ- ಮಳೆಗಾಲದಲ್ಲಿ ಹತ್ತಿರದಲ್ಲಿದ್ದ ಕೆರೆಯ ಪ್ರಭಾವದಿಂದ ತುಂಬಿ ತುಳುಕುತ್ತಿತ್ತು. ನೀರನ್ನು ನಾನೇ ಬಗ್ಗಿ ತುಂಬಿಕೊಳ್ಳುವಷ್ಟು ಮೇಲೆ. ಆದರೆ ಅದಕ್ಕೆ ಯಾವಾಗಲೂ ಅಡ್ಡಿ. ಎಲ್ಲಿ ಭಾವಿಯಲ್ಲಿ ಮಗು ಮುಗುಚಿಕೊಳ್ಳುತ್ತಾನೊ ಎನ್ನುವ ಭಯ ಮನೆಯವರಿಗೆ. ನನಗೆ ನಿರಾಸೆ.
ಗೌರಿ, ಗಣೇಶನ ಹಬ್ಬಕ್ಕೆ ಊರಿನವರೆಲ್ಲಾ ಓಲಗ, ವಾದ್ಯ ಸಮೇತ ಕೆರೆಗೆ ಹೋಗಿ ಪೂಜೆ ಮಾಡಿದ ಮಣ್ಣನ್ನು ತಂದು ಹಬ್ಬ ಆಚರಿಸುವುದು ಸಂಪ್ರದಾಯ. ನನ್ನ ನೆನಪಿನಲ್ಲಿರುವಂತೆ ಆಗೆಲ್ಲಾ ತುಂತುರು ಮಳೆ ಬರುತ್ತಿತ್ತು. ಅದರಲ್ಲಿ ನೆನೆದು ಬರುವುದೇ ಒಂದು ಖುಷಿ. "ಮಳೆಯಲ್ಲಿ ನೆನೆಯಬೇಡ" ಎನ್ನುವ ಎಚ್ಚರಿಕೆಯ/ ಬೈಸಿಕೊಳ್ಳುವ ಭಯವಿಲ್ಲ.
ಮನೆಗೆ ಬರುವಾಗ ಬಂದು ನಮಗೆ ತೊಂದರೆ ಕೊಟ್ಟಾಗ.
"ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲಾ...ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ" ಇದು ನಾವುಗಳು ಮಳೆಬರದಿದ್ದಾಗ ಹೇಳುತ್ತಿದ್ದ ಹಾಡು. ಊರಿನಲ್ಲಿ ಒಬ್ಬ ವ್ಯಕ್ತಿ ( ಬಹುಷಃ ಊರಿನ ದನ ಕರುಗಳನ್ನು ಮೇಯಿಸಲು ಹತ್ತಿರದ ಕಾಡಿನಂಥ ತಾಣಕ್ಕೆ ಕರೆದೊಯ್ಯುತ್ತಿದ್ದ ಮಲ್ಲಪ್ಪ ಇರಬಹುದು) ತಲೆಯ ಮೇಲೆ ಒಂದು ತಟ್ಟೆಯಲ್ಲಿ ದೆವರನ್ನು ಇಟ್ಟುಕೊಂಡು ಊರಿನ ಮನೆಗಳ ಹತ್ತಿರ ಹೋದಾಗ ಮನೆಯವರು ಒಂದು ಗಡಿಗೆ ನೀರನ್ನು ಆತನ ತಲೆಯ ಮೇಲೆ"ಹುಯ್ಯುತ್ತಿದ್ದರು". ನಾವು ಹುಡುಗರು ಒಕ್ಕೊರಲಿನಿ೦ದ ಕೂಗುತ್ತಿದ್ದೆವು "ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಲ್ಲಾ...ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ". ಆಗ ಮಳೆಬರುತ್ತಿತ್ತೆಂದು ನಂಬಿಕೆ.
ಓ ಮಳೆಯೇ, ಓ ನೆನಪೇ... ಎಂತಹ ಬಿಸಿ ಹಸಿ ಕಚಗುಳಿ ಕೊಡುವ ನೆನಪು.
Comments
Post a Comment