ಸಮಯಕ್ಕೊಂದು ಸಹಾಯ ಹಸ್ತ


 "ಕರುಣಾಳು ಬಾ ಬೆಳಕೆ ಮುಸುಕೀದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು...." ಇದು ಪ್ರಾಯಶಃ ಇಂದಿನ ತಲೆಮಾರಿನ ಬಹು ಹಿರಿಯ ನಾಗರೀಕರ ಅಳಲು.

ಯಾಕೋ ಈಚೀಚೆಗಂತೂ ಹಿರಿಯರ ಮೇಲಿನ ದೌರ್ಜನ್ಯ ಜಾಸ್ತಿಯಾಗುತ್ತಿದೆ. .. ಯುವ ಜನಾಂಗದ ದುರಾಸೆಯೋ... ಸ್ವಾರ್ಥವೋ...ಅಥವಾ ಸುಲಭವಾಗಿ ಹಣ / ಆಸ್ತಿ ದಕ್ಕಿಸಿಕೊಳ್ಳುವ ಅಭಿಲಾಷೆಯೋ...ತಿಳಿಯದಾಗಿದೆ.


ಜೂನ್ ೧೫ "ಹಿರಿಯ ನಾಗರೀಕರ ಮೇಲಿನ ದೌರ್ಜನ್ಯದ ಬಗ್ಗೆ ಅರಿವು ಮೂಡಿಸುವ ದಿನ" (world eleder abuse awareness day) ಆಗಿ ಆಚರಿಸಲಾಗುತ್ತಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ ಒಂದು ಅಭಿಯಾನ. ಹಾಗಾಗಿ ಇದನ್ನು ನಾವೂ ಸಹ ಕೆಲ ಮಟ್ಟಿಗೆ ಆಚರಿಸಿದೆವು - ವಯೋಮಾನಸ ಸಂಜೀವಿನಿ - ಯ ಮೂಲಕ. "ವಯೋಮಾನಸ ಸಂಜೀವಿನಿ" - ಇದು Geriatric services and clinic, NIMHANS, Bengaluru ಇದರ ಒಂದು ಉಪಕ್ರಮ.


ನೆನ್ನೆ ಸಂಜೆ (28.06.2021) "ವಯೋಮಾನಸ ಸಂಜೀವಿನಿ" ಒಂದು WEBINAR ಆಯೋಜಿಸಿತ್ತು. ವಿಷಯ: ಹಿರಿಯ ನಾಗರೀಕರ ಮೇಲಿನ ದೌರ್ಜನ್ಯದ ಬಗ್ಗೆ ಅರಿವು ಹಾಗೂ "Maintenace and welfare of Parents and Senior citizens Act 2007" ಇದರ ಸಾಧಕ ಭಾದಕಗಳು.


ಈ ಕಾರ್ಯಕ್ರಮದಲ್ಲಿ ಶ್ರೀ. ಶಶಿಧರ್ ಶೆಟ್ಟಿ (District Judge (OOD), Member Secretary, Karnataka State Legal Services Authority.), ಡಾ. ರವೀಂದ್ರನಾಥ್ ಶ್ಯಾನುಭೋಗ್, ( President of Human Rights Protection Foundation, Udupi), ಶ್ರೀ. ವಿಘ್ನೇಶ್ ಕುಮಾರ್ (  Senior Civil Judge (OOD), Public Relation Officer, Karnataka State Legal Services Authority.) ಹಾಗೂ ಡಾ. ಪಿ.ಟಿ.ಶಿವಕುಮಾರ್ (proffessor of psychiatry, ge riatric clinic and services, NIMHANS, Bengaluru) ಭಾಗವಸಿದ್ದರು. ನಾನೂ ಕಾರ್ಯಕ್ರಮದ ಭಾಗವಾಗಿದ್ದೆ. ವಿಷಯದ ಮೇಲೆ ಬಹಳಷ್ಟು ಬೆಳಕು ಚೆಲ್ಲಿದ್ದಾಯ್ತು. ಸಾಕಷ್ಟು ಹಿರಿಯರು ಕೆಲ ಕಿರಿಯರೂ ಭಾಗವಹಿಸಿ ಪ್ರಶ್ನೆಗಳನ್ನು ಕೇಳಿ ತಮ್ಮ ಅನುಮಾನವನ್ನು ಬಗೆ ಹರಿಸಿಕೊಂಡರು.


ಮುಂದಿನ ಪರಿಣಾಮಗಳು / ಆಗುಹೋಗುಗಳನ್ನು ಈಗಲೇ ಹೇಳಲಾರೆ. ಬದಲಾವಣೆಯ ದಿಕ್ಕಿನಲ್ಲಿ ಒಂದಷ್ಟು ಹೆಜ್ಜೆಗಳನ್ನಿಟ್ಟರೆ ಅದೇ ನಮ್ಮ ಸಾಧನೆ. ಎಲ್ಲ ಹಿರಿಯ ನಾಗರೀಕರಿಗೆ ಒಳ್ಳೆಯದಾಗಲಿ. ಕಿರಿಯರಿಗೆ "ಮುಂದೊಂದು ದಿನ ನಾವೂ ಹಿರಿಯರಾಗುತ್ತೇವೆಂಬ" ಜ್ಞಾನೋದಯವಾಗಲಿ ಅಂತ ನನ್ನ ಅಭಿಲಾಷೆ.


ಕಷ್ಟದಲ್ಲಿರುವವರಿಗೆ ಸಹಾಯ ಮಾಡು ಅನ್ನೋದು ನಮಗೆ ಚಿಕ್ಕಂದಿನಿಂದಲೂ ಕಲಿಸಿದ ಪಾಠ. ಆ ದೇವರೂ ಅದನ್ನೇ ಮಾಡ್ತಾನಂತೆ. ಕನಕದಾಸರು ಹೇಳಿದಂಗೆ "ಯಮ ಸುತನ ರಾಣಿಗೆ ಅಕ್ಷಯ ವಸನವಿತ್ತೆ... ಸಮಯದಲಿ ಅಜಮಿಳನ ಪೊರೆದೇ" ಸಮಯಕ್ಕೆ ಬಂದು ಒದಗುವುದೇ ಆ ದೇವರ ಕೆಲಸ - ನಂಬಿದವರಿಗೆ.

ಈ ಥರ ಸಮಯದಲ್ಲಿ ಸಹಾಯ ಮಾಡ್ಕೊಂಡು - ಸುಮಾರು 40 ವರ್ಷಗಳಿಂದ - ಬಂದಿರುವವರ ಜೊತೆ ಒಂದಷ್ಟು ಮಾತು, ಅವರ ಅನುಭವ ಕೇಳುವ ಅವಕಾಶ ಸಿಕ್ತು. ಅವರೇ ಡಾ. ರವೀಂದ್ರನಾಥ್ ಶ್ಯಾನುಭೋಗ್, ಮೂಲತಃ ಉಡುಪಿಯವರು. ಇವರು Human Rights Protection Foundation, Udupi ಯ ಸಂಸ್ಥಾಪಕರು. ಅವರ 40 ವರ್ಷಗಳ ಈ ಸೇವೆಯ ಜೀವನದಲ್ಲಿ 36000 ಕ್ಕೂ ಮಿಕ್ಕಿ ಜನರ ಪರವಾಗಿ ಹೋರಾಡಿ ಅವರ ಸಮಸ್ಯೆಗಳಿಗೆ ಪರಿಹಾರ ಕೊಡಿಸಿದ್ದಾರೆ. 700 ಕ್ಕೂ ಹೆಚ್ಚು ಹಿರಿಯ ನಾಗರೀಕರಿಗೆ ಸಹಾಯ ಹಸ್ತ ಚಾಚಿ ಅವರಿಗೆ ನ್ಯಾಯ ದೊರಕಿಸಿದ್ದಾರೆ. ಇವರದು ಬಹು ಮುಖ ಪ್ರತಿಭೆ ಮತ್ತು ಬಹು ವಿಧದ ಕಾರ್ಯಚಟುವಟಿಕೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:   https://hrpfudupi.org

ಇಂಥ ಸಹಾಯ ಹಸ್ತ ಕೊಡುವ ವ್ಯಕ್ತಿಗಳು ನಮಗೆ ಸ್ಪೂರ್ತಿಯಾಗಲಿ... ನಾವೂ ಒಂದಷ್ಟು ಸಮಾಜಮುಖಿಯಾಗಿ ಸೇವೆ ಮಾಡುವ ಮನಸ್ಸು ಬರಲಿ.


ಇಂಥ ಸಮಯಕ್ಕೊದಗುವವರ ಸಂತತಿ ಬೆಳೆಯಲಿ. ನೋವು ಅನುಭವಿಸುತ್ತಿರುವವರಿಗೆ ದಾರಿದೀಪವಾಗಲಿ.

Helping Hands are better than praying Lips - ಪ್ರಾರ್ಥಿಸುವ ತುಟಿಗಳಿಗಿಂತಾ ಸಹಾಯ ಚಾಚುವ ಕೈ ಉತ್ತಮ


ಸರ್ವೇ ಜನಾಃ ಸುಖಿನೋಭವಂತು


Comments

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ