ಸುಂಕೇನಹಳ್ಳಿ ಸರ್ಕಾರಿ ಶಾಲೆಯ ವಾರ್ಷಿಕೋತ್ಸವ:
ಸುಂಕೇನಹಳ್ಳಿ ಸರ್ಕಾರಿ ಶಾಲೆಯ ವಾರ್ಷಿಕೋತ್ಸವ:
ಕೆಲಕ್ಷಣಗಳು ನನ್ನ ಮನಸ್ಸು ಗತಕಾಲದಲ್ಲಿ ಸಿಲುಕಿತ್ತು. ನನ್ನ ಪ್ರಾಥಮಿಕ ಶಾಲಾ ದಿನಗಳಲ್ಲಿ ಭಾಗವಹಿಸಿದ ನೆನಪುಗಳು. ರೋಮಾಂಚಕ, ಮಧುರ ನೆನಪುಗಳು.( ಕೆ.ಹೆಚ್. ಕಲಾಸೌಧದ ಬಗ್ಗೆ ನನ್ನ ಲೇಖನದ ಲಿಂಕ್.....https://www.blogger.com/blogger.g?blogID=169266169028192815#editor/target=post;postID=503227361699777314;onPublishedMenu=allposts;onClosedMenu=allposts;postNum=8;src=postname.
ಅಲ್ಲಿದ್ದ ಸುಂದರ ವಾತಾವರಣ, ಮಕ್ಕಳ ವೇಷಭೂಷಣ, ಒಂದು ನಿಯೋಜಿತ ಗುಂಪು ಎಲ್ಲರನ್ನು ಸ್ವಾಗತಿಸುತ್ತಿದ್ದ ಪರಿ, ಉತ್ಸಾಹ ಎಲ್ಲ ನೋಡಿದಾಗ, ಇದು ಯಾವ ತರಹದ ಖಾಸಗಿ ಶಾಲೆಗೂ ಕಡಿಮೆಯೆನಿಸಲಿಲ್ಲ.
ಇನ್ನು ಕಾರ್ಯಕ್ರಮ ಶುರು - ಚಂದನ್ ಮತ್ತು ಮೋನಿಕಾ - ನಿರೂಪಕರಾಗಿ ನಿರ್ವಹಿಸಿದ ರೀತಿ,ಅಧ್ಭುತವಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲೋಕಸಭಾ ಸದಸ್ಯ ಶ್ರೀ.ತೇಜಸ್ವಿ ಸೂರ್ಯ ಅವರು, ಸ್ವಯಂಪ್ರೇರಿತರಾಗಿ ಮೆಚ್ಚುಗೆ ಸೂಚಿಸಿ ಬಹುಮಾನವಿತ್ತರು. ಇವರು ಈ ಶಾಲೆಯಲ್ಲಿ ಓದಿದ ಮಕ್ಕಳು. ಇದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಪೋಷಿಸುವ ಕೆಲಸ ನಡೆಯುತ್ತಿದೆ, ಎಂಬುದನ್ನು ಪುಷ್ಟೀಕರಿಸುತ್ತದೆ.
"ಸರ್ಕಾರಿ ಶಾಲೆ ಉಳಿಸಿ ಆಂದೋಲನ ಸಮಿತಿ" ಅಧ್ಯಕ್ಷ ಶ್ರೀ. ಅನಿಲ್ ಶೆಟ್ಟಿ ಅವರ ಮಾತು, ಸರ್ಕಾರಿ ಶಾಲೆಗಳ ಬಗ್ಗೆ ಸ್ವಲ್ಪ ಅಭಿಮಾನ ಇರುವವರಿಗೆ, ಸ್ಪೂರ್ತಿ ತುಂಬುವಂತಿತ್ತು.
ಆಸಕ್ತರು ಮನಸ್ಸು ಮಾಡಿದರೆ ಸರ್ಕಾರಿ ಶಾಲೆಗಳ ಬಗ್ಗೆ ಇರುವ ಒಂದು ಋಣಾತ್ಮಕ ಅಭಿಪ್ರಾಯವನ್ನು ಬದಲಿಸಬಹುದು ಎನ್ನುವುದು ಈ ಕಾರ್ಯಕ್ರಮದಲ್ಲಿ ಸಾಬೀತಾಯಿತು.
ಈ ಸಂಧರ್ಭದಲ್ಲಿ ನನಗೆ ನೆನಪಾಗುತ್ತಿದೆ ಸಂಚಿ ಹೊನ್ನಮ್ಮ ವಿರಚಿತ "ಹದಿಬದೆಯ ಧರ್ಮ" ದ ಒಂದು ಪದ್ಯ. ಆ ಕಾಲಕ್ಕೆ ಅದು ಬಹಳ ಸೂಕ್ತವಾಗಿತ್ತು. " ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು"...... ಈಗಿನ ಸಂಧರ್ಬದಲ್ಲಿ ಅದು " ಸರ್ಕಾರಿ ಶಾಲೆಯೆಂದೇತಕೆ ಬೀಳುಗಳೆವರು..........ಅಭಿಮಾನ ಶೂನ್ಯರು" ಆದರೆ ಸರಿಯೇನೊ?
ಸರ್ಕಾರಿ ಕನ್ನಡ ಶಾಲೆಯಲ್ಲಿ ಓದಿದ ಎಷ್ಟೊಂದು ಮಹನೀಯರುಗಳಿದ್ದಾರೆ. ಅವರ ಸಾಧನೆಗಳು ನಮ್ಮ ಮಕ್ಕಳಿಗೆ- ಅದರಲ್ಲೂ ಮಕ್ಕಳ ತಂದೆ ತಾಯಂದಿರಿಗೆ ಸ್ಪೂರ್ತಿಯಾಗಬೇಕು.
ಈ ನಿಟ್ಟಿನಲ್ಲಿ ಎಲ್ಲರೂ ತಮ್ಮ ಕೈಲಾದ ಕೊಡುಗೆಯನ್ನು ನೀಡಬೇಕು.
ಈಚೆಗೆ ಬಿಡುಗಡೆಯಾದ ಎರಡು ಕನ್ನಡ ಚಿತ್ರಗಳು - ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಮತ್ತು ಕಾಳಿದಾಸ ಕನ್ನಡ ಮೇಷ್ಟ್ರು - ಸರ್ಕಾರಿ ಕನ್ನಡ ಶಾಲೆಗಳ ಬಗ್ಗೆ ಒಂದಷ್ಟು ಬೆಳಕು ಚೆಲ್ಲುತ್ತವೆ...ಅದರಿಂದ ಸಹ ಸ್ಪೂರ್ತಿ ಪಡೆಯ ಬಹುದು.
Comments
Post a Comment