ಪುಸ್ತಕದ ಲೋಕಾರ್ಪಣೆ... ನನ್ನದೊಂದು ಚಿಂತನೆ
ನನಗೆ ಪುಸ್ತಕಗಳೆಂದರೆ ಇಷ್ಟ-- ಅದರಲ್ಲೂ ಎಸ್ ಎಲ್ ಭೈರಪ್ಪನವರು ಹಾಗೂ ಬೀchi ನನ್ನ ಪ್ರಿಯ ಲೇಖಕರು. ಪುಸ್ತಕ ಬಿಡುಗಡೆ/ ಲೋಕಾರ್ಪಣೆ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.. ನಾನು ಕೆಲ ಕಾರ್ಯಕ್ರಮಗಳಿಗೆ ಹೋಗಿದ್ದುಂಟು.. ಲೇಖಕರ ಬಗೆಗಿನ ಪ್ರೀತಿಗಾಗಿ, ಅಭಿಮಾನಿಯಾಗಿ, ಪ್ರೇಕ್ಷಕನಾಗಿ... ಆದರೆ ಪುಸ್ತಕವನ್ನು ಲೋಕಾರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡುವ ಒಂದು ಅವಕಾಶ ನೆನ್ನೆ ಭಾನುವಾರ ನನಗೆ ದೊರೆಯಿತು.
ಅಶಕ್ತ ಪೋಷಕ ಸಭಾ ಬಳಗದ ಸಕ್ರಿಯ ಸದಸ್ಯೆ ಶ್ರೀಮತಿ ಸುಮಾ Y V ಅವರು ಬರೆದ ಪುಸ್ತಕ ” ಮಕ್ಕಳ ಮಾನಸ ಲೋಕ" ದ ಬಿಡುಗಡೆ ಕಾರ್ಯಕ್ರಮಕ್ಕೆ ಅವರ ಆಹ್ವಾನವನ್ನು ಕೊಂಚ ಮುಜುಗರದಿಂದಲೇ ಒಪ್ಪಿದೆ ( ಈ ಕೆಲಸಕ್ಕೆ ನನಗಿರುವ ಅರ್ಹತೆಯಾದರೂ ಏನು ಎಂಬ ಅನುಮಾನ ನನ್ನನ್ನು ಕಾಡಿದ್ದರಿಂದ).
ಸಮಾಧಾನ ಆಪ್ತ ಸಲಹಾ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮವು ಡಾಕ್ಟರ್ C R ಚಂದ್ರ ಶೇಖರ್ ಅವರ ನೇತೃತ್ವದಲ್ಲಿ ನಡೆಯಿತು. ವಯಸ್ಸಿನಲ್ಲಿ ನಾನು ಅವರಿಗಿಂತ ಕೆಲ ದಿನಗಳು ದೊಡ್ಡವನಾದರೂ ಅವರ ಪಕ್ಕದಲ್ಲಿ ನಾನು ಕುಬ್ಜನೇ... ಆದರೂ ಅವರೊಂದಿಗೆ ಒಂದಷ್ಟು ಸಲಿಗೆ ಇದೆ. ಅವರ ಜೊತೆ ವೇದಿಕೆಯಲ್ಲಿ ಕುಳಿತಾಗಲೆಲ್ಲ ಒಂದು ತರಹದ ಹೆಮ್ಮೆಯನ್ನು ಪಟ್ಟದ್ದಿದೆ.
ಕಾರ್ಯಕ್ರಮ ಚೆನ್ನಾಗಿ ನಡೆಯಿತು.. ನನಗೆ ವಹಿಸಿದ ಹೊಣೆಯನ್ನು ನಿಭಾಯಿಸಿದೆ ಅಂತ ನನ್ನ ಅನಿಸಿಕೆ. ಕಾರ್ಯಕ್ರಮದ ನಂತರ ಊಟವನ್ನಂತೂ ಸರಿಯಾಗಿ ಮಾಡಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ಇನ್ನು ಸುಮಾ ಬಗ್ಗೆ ಒಂದೆರಡು ಮಾತು... ಸುಮಾ ಬಹುಮುಖ ಪ್ರತಿಭೆ. ಸಿಕ್ಕ ಅವಕಾಶವನ್ನೆಲ್ಲಾ ಬಳಸಿಕೊಳ್ಳುವ ಹಂಬಲ, ಹೊಸತನ್ನು ಕಲಿಯುವ ಅಭಿಲಾಷೆ, ಉತ್ಸಾಹ ಮತ್ತು ಅದಕ್ಕೆ ಬೇಕಾದ ಪರಿಶ್ರಮ. ಹಾಗಾಗಿ ಅವರು ಈಗ ಗೌರವ ಡಾಕ್ಟರೇಟ್ ಪಡೆದು ಡಾ. ಸುಮಾ ಆಗಿದ್ದಾರೆ.
ಅವರ ಈ ಬರವಣಿಗೆ ಸರಾಗವಾಗಿ ಮುಂದುವರೆಯಲಿ ಎಂದು ನನ್ನ ಹಾರೈಕೆ.
ಇಂಥ ಸುಮಾ ( ಡಾ. ಸುಮ Y V ಎನ್ನಲೇ?) ನನ್ನನ್ನು ಏಕೆ ಈ ಕೆಲಸಕ್ಕೆ ಆಯ್ಕೆ ಮಾಡಿದರೋ ಆಕೆಗೇ ಗೊತ್ತು. ಅಂತೂ ಇಂತಹ ಸದಾವಕಾಶವನ್ನು ಕಲ್ಪಿಸಿಕೊಟ್ಟ ಸುಮಾಗೆ ಏನು ಹೇಳಲಿ...
ಧನ್ಯವಾದ ಸುಮಾ...Thank you... ನಿಮ್ಮ ವಿಶ್ವಾಸಕ್ಕೆ ನಾನು ಋಣಿ
ಕಂಗಳು ವಂದನೆ ಹೇಳಿದೆ
ReplyDeleteಹೃದಯವು ತುಂಬಿ ಹಾಡಿದೆ
ಆಡದೆ, ಉಳಿದಿಹ, ಮಾತು ನೂರಿದೆ
☺️🙏
ReplyDelete👍🙏 Prasad Byradandra
ReplyDelete