ಶಿಕ್ಷಕರ ದಿನಾಚರಣೆ:
ಶಿಕ್ಷಕರ ದಿನಾಚರಣೆ:
ಇಂದು 05.09.2017 ಶಿಕ್ಷಕರ ದಿನಾಚರಣೆ:
ಸುಂಕೇನಹಳ್ಳಿ ಶಾಲೆಯ ಏಳನೆಯ ತರಗತಿಯ ಮಕ್ಕಳು ಇಂದು ನನ್ನನ್ನು ಆದರಿಸಿದ ಪರಿ - ಅಬ್ಬಾ ಹೃದಯ ತುಂಬಿ ಬಂತು. ನಾನು ಅವರೊಡನೆ ಒಡನಾಡುವುದು ವಾರಕ್ಕೊಮ್ಮೆ ಮಂಗಳವಾರ ಮಾತ್ರ. ಅದೂ ಕೇವಲ 45 ನಿಮಿಷಗಳ ಕಾಲ. ಆದರೆ ಅವರ ಪ್ರೀತಿಯ ಕೊಡುಗೆ ವರ್ಷ ಪೂರ್ತಿಗೆ ಸಾಕಾಗುವಷ್ಟು. ಇನ್ನು ಯಾವಾಗಲೂ ಅವರೊಡನೆ ಕಾಲ ಕಳೆಯುವ ಶಿಕ್ಷಕರ ಖುಶಿ ಅಪರಿಮಿತ. ಉಪಾಧ್ಯಾಯ ವೃತ್ತಿ - ಅದರಲ್ಲೂ ಪ್ರೌಡಶಾಲೆಯ ವರೆಗೆ- ಬಹಳ ಭಾವನಾತ್ಮಕವಾದದ್ದು. ಅಲ್ಲಿನ ಮಕ್ಕಳಲ್ಲಿ ಇನ್ನೂ ಮುಗ್ಢತೆಯಿರುತ್ತದೆ, ಮತ್ತು ಅವರದು ನಿಷ್ಕಲ್ಮಷ ಪ್ರೀತಿ.
ನನ್ನ ನೆನಪು ನನ್ನ ಬಾಲ್ಯಕ್ಕೆ ಓಡುತ್ತಿದೆ. ನನ್ನ ಹಳ್ಳಿಯ ಶಾಲೆಯಲ್ಲಿ ನನ್ನ ಮೇಲೆ ಪ್ರಭಾವ ಬೀರಿದ ಮೇಷ್ಟ್ರುಗಳು : ಮೊಟ್ಟ ಮೊದಲಿಗೆ ನನಗೆ ಅ ಆ ಹೇಳಿಕೊಟ್ಟ (ಶ್ರೀನಿವಾಸಯ್ಯ ?) ಮೇಷ್ಟ್ರು. ನನಗಾಗ 5 ವರ್ಷಕ್ಕೂ ಕಡಿಮೆ. ಅಪ್ಪ ಶಾಲೆಗೆ ಬಿಟ್ಟಿದ್ದು ನೆನಪು. ನನಗೆ ಭಯ. ಗೋಡೆಯ ಪಕ್ಕದಲ್ಲಿ ಕೂಡಿಸಿ ಹುಣಿಸೆ ಬೀಜಗಳನ್ನು ಕೊಟ್ಟು ನೆಲದಮೇಲೆ ಅ ಮತ್ತು ಆ ಅಕ್ಷರಗಳನ್ನು ಬರೆದು ಅದರಮೇಲೆ ಹುಣಿಸೆ ಬೀಜಗಳನ್ನು ಜೋಡಿಸಲು ಹೇಳಿದ್ದು. ನನಗೆ ಈಗಲೂ ಕಣ್ಣಿಗೆ ಕಟ್ಟಿದಂತಿರುವುದು ಅವರ ವೇಷ ಭೂಷ. ಬಿಳಿಯ ಕಚ್ಚೆ ಪಂಚೆ, ಕಪ್ಪು ಬಣ್ಣದ ಕೋಟು ಮತ್ತು ಟೋಪಿ, ಮತ್ತು ನನ್ನೆದುರಿಗೆ ಬಗ್ಗಿ ನನಗೆ ಸರಿ ಕಾಣುವ ಹಾಗೆ ಅಕ್ಷರಗಳನ್ನು ಬರೆದದ್ದು.
ಮುನಿಶಾಮಯ್ಯ ಮೇಷ್ಟ್ರು ಅಂದ್ರೆ ಭಯ ಮಾತ್ರ ಗೊತ್ತು. ಸಂಜೆ ಆಟವಾಡುವಾಗ ಕಂಡರೂ ಓಡುವಷ್ಟು ಭಯ. ಗಂಗಹನುಮಯ್ಯ ಮೇಷ್ಟ್ರು ಹೇಳಿಕೊಡುತ್ತಿದ್ದ ಕೋಲಾಟ ಪ್ರೈಮರಿ ಶಾಲೆಯ ಅವಿಸ್ಮರಣೀಯ ಕ್ಷಣಗಳು.
ಇನ್ನು ಸುಶೀಲ ಪುಷ್ಪವತಿ ಮೇಡಮ್ ಅಂದರೆ ನಮಗೆ ಎನೋ ಸಂಕೋಚ. ಯಾಕೆಂದರೆ ಅಟೆಂಡೆನ್ಸ್ ಸಮಯದಲ್ಲಿ ಹೆಸರು ಕರೆದಾಗ ನಮಗೆ ಗೊತ್ತಿದ್ದದ್ದು "ಪ್ರೆಸೆಂಟ್ ಸರ್" ಎಂದು ಹೇಳುವುದು ಮಾತ್ರ . ಸುಶೀಲ ಪುಷ್ಪವತಿ ಮೇಡಮ್ ಹೆಸರು ಕರೆದಾಗ ನಾವುಗಳು "ಪ್ರೆಸೆಂಟ್ ಸರ್" ಅಂತ ಹೇಳಿದಾಗ ,ಅವರು ನಕ್ಕ ಪರಿ ಇಂದಿಗೂ ಹಸಿರಾಗಿದೆ.
ಐದನೆಯ ತರಗತಿಗೆ ಬಂದ ಹನುಮಂತಯ್ಯ ಮೇಷ್ಟ್ರು ಅಂದ್ರೆ ನಮಗೆಲ್ಲಾ ಅಚ್ಚುಮೆಚ್ಚು. ಇದ್ದಿದ್ದು ಕೆಲವೇ ದಿನವಾದರೂ ಅವರು ಹೇಳಿಕೊಟ್ಟ "ಶ್ರೀ ಗುರುವಿಗೆ ಶರಣು...ಶಿವಯೋಗಿಗಳಿಗೆ ಶರಣು.." ಹಾಡು ನಮ್ಮ ಮೇಲೆ ಬಹಳ ಪ್ರಭಾವ ಬೀರಿತ್ತು. ಆವರು ತುಮಕೂರಿನ ಸಿದ್ದಗಂಗಾ ಆಶ್ರಮದಲ್ಲಿ ಬೆಳೆದವರೆಂದು ಹೇಳಿದ ನೆನಪಿದೆ. ಅವರು ವರ್ಗವಾಗಿ ಹೋದಾಗ ನಾವೆಲ್ಲಾ ಅತ್ತೂ ಅತ್ತೂ ಬೀಳ್ಕೊಟ್ಟಿದ್ದು, ಅವರು ಹೇಳಿದ "ನನಗಿಂತಲೂ ಈಗ ಬರುವ ಮೇಷ್ಟ್ರು ಒಳ್ಳೆಯವರು" ಅನ್ನುವ ಮಾತನ್ನು ನಾವು ಒಪ್ಪಲು ತಯಾರಾಗಿರಲಿಲ್ಲ.
ನಂತರ ಬಂದ ಶಂಕರನಾರಾಯಣ ರಾವ್ ಮೇಷ್ಟ್ರು - ನಮ್ಮ ವಿಧ್ಯಾರ್ಥಿ ಜೀವನಕ್ಕೆ ತಿರುವುಕೊಟ್ಟವರು. ಕೈಯ್ಯಲ್ಲಿ ಪ್ರಶ್ನ ಪತ್ರಿಕೆಗಳನ್ನು ಬರೆದು, ನಮಗೆ ಬರವಣಿಗೆಯ ಪರೀಕ್ಷೆಯ ಅನುಭವ ಕೊಟ್ಟವರು. ನನ್ನ ಪಾಲಿಗಂತೂ ದಯಾಮಯಿ (ಸಾಕಷ್ಟು ಬೈಸಿಕೊಂಡಿದ್ದರೂ ಸಹ). ಅವರೇ ತಯಾರಿಸಿದ್ದ(?) ಎಲ್ಲೆಲ್ಲೂ ವೈರುಗಳು ತುಂಬಿದ್ದ ರೇಡಿಯೊದಲ್ಲಿ ಬಿತ್ತರವಾಗುವ ಆಕಾಶವಾಣಿ, ಬೆಂಗಳೂರು ಕಾರ್ಯಕ್ರಮಗಳು ಕೊಟ್ಟ ಮಜ ...ಒಹ್...ಹೇಗೆ ... ಬಣ್ಣಿಸಲಿ. ಅವರ ಮುಖದಮೇಲಿನ ಹುಸಿನಗೆ ಈ ಕ್ಷಣಕ್ಕೂ ನನ್ನ ಕಣ್ಣ ಮುಂದಿದೆ.
ಮುಂದೆ ಮಿಡ್ಲ್ ಸ್ಕೂಲ್ ತನಕ ಮೆಚ್ಚಿದ ಮೇಷ್ಟ್ರುಗಳು ಸುಬ್ಬರಾವ್ SH, ಇಂಗ್ಲೀಷ್ ಗ್ರಾಮರ್ ಹೇಳಿಕೊಟ್ಟ ಹೆಡ್ ಮಾಸ್ಟರ್ ಶ್ರೀನಿವಾಸರಾಯರು, ಪುಟ್ಟರಾಜು ಮೇಷ್ಟ್ರು, ಜಾನಪದ ಗೀತೆ ಕಲಿಸಿದ ಕಾವೇರಿಯಪ್ಪ ಮೇಷ್ಟ್ರು, ಹುಲಿವೇಷ ಹಾಕುತ್ತಿದ್ದ ಮತ್ತು ನಮ್ಮನ್ನೆಲ್ಲಾ ನಾಟಕದಲ್ಲಿ ಸೇರಿಸಿಕೊಂಡು ಪ್ರೊತ್ಸಾಹಿಸುತ್ತಿದ್ದ ಚಿಕ್ಕಜಾಲದ ಸೀನಿವಾಸ್ (ನಾವು ಕರೆಯುತ್ತಿದ್ದದ್ದು) ಮೇಷ್ಟ್ರು.
ಹೈಸ್ಕೂಲಿಗೆ ಬೆಂಗಳೂರಿಗೆ ಬಂದಾಗ ನೀರಿನಿಂದ ಹೊರಗೆ ಬಿದ್ದ ಮೀನಿನಂತಾದದ್ದು ನಿಜವಾದರೂ, ಅಲ್ಲಿನ ಕನ್ನಡ ಮೇಷ್ಟ್ರು RG ಗುಂಡೂರಾಮಯ್ಯನವರು, ಸಂಸ್ಕೃತದ ವೆಂಕಟದಾಸ ಶರ್ಮ ಅವರು, mathematics ಹೇಳಿಕೊಟ್ಟ SV ಮೇಷ್ಟ್ರು, ಇಂಗ್ಲೀಷ್ ತುಂಬಾ ಚೆನ್ನಾಗಿ ಹೇಳಿಕೊಟ್ಟ SRS ಮೇಷ್ಟ್ರು ಇನ್ನೂಅನೇಕರು, ತೋರಿಸಿದ ಪ್ರೀತಿ, ಮಾರ್ಗದರ್ಶನ ಚಿರಸ್ಮರಣೀಯ.
ಎಲ್ಲ ಗುರುಗಳಿಗೂ ಇದೋ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು.
ಸೂಚನೆ: ಎಲ್ಲ ಬರೆದ ಮೇಲೆ, ಮತ್ತೊಂದು ಸಲ ಓದಿದಾಗ ನನಗೆ ತಿಳಿದ ವಿಷಯವೆಂದರೆ- ನನ್ನ ಬರವಣಿಗೆಯ ಭಾಷೆಯಲ್ಲಿ ನಾನು ಕಂಡ ವ್ಯತ್ಯಾಸ. ನನ್ನ ಚಿಕ್ಕ ವಯಸ್ಸಿನ ಮೇಷ್ಟ್ರುಗಳ ವಿಷಯಹೇಳುವಾಗ ಅಲ್ಲಿ ಕಂಡದ್ದು ಬರೀ ಅಭಿಮಾನ ಮತ್ತು ಮುಗ್ಧ ಪ್ರೀತಿ. ಅಲ್ಲಿ ಗೌರವಸೂಚಕ ಪದಗಳು ನುಸುಳಿಲ್ಲ. ಆದರೆ ಹೈಸ್ಕೂಲಿನ ಮೇಷ್ಟ್ರುಗಳ ವಿಷಯಹೇಳುವಾಗ ಬಹುವಚನದ ರೂಪಗಳು ಬಂದಿವೆ. ಮುಗ್ಧತೆ ಮಾಸಿದೆ
ಇಂದು 05.09.2017 ಶಿಕ್ಷಕರ ದಿನಾಚರಣೆ:
ಸುಂಕೇನಹಳ್ಳಿ ಶಾಲೆಯ ಏಳನೆಯ ತರಗತಿಯ ಮಕ್ಕಳು ಇಂದು ನನ್ನನ್ನು ಆದರಿಸಿದ ಪರಿ - ಅಬ್ಬಾ ಹೃದಯ ತುಂಬಿ ಬಂತು. ನಾನು ಅವರೊಡನೆ ಒಡನಾಡುವುದು ವಾರಕ್ಕೊಮ್ಮೆ ಮಂಗಳವಾರ ಮಾತ್ರ. ಅದೂ ಕೇವಲ 45 ನಿಮಿಷಗಳ ಕಾಲ. ಆದರೆ ಅವರ ಪ್ರೀತಿಯ ಕೊಡುಗೆ ವರ್ಷ ಪೂರ್ತಿಗೆ ಸಾಕಾಗುವಷ್ಟು. ಇನ್ನು ಯಾವಾಗಲೂ ಅವರೊಡನೆ ಕಾಲ ಕಳೆಯುವ ಶಿಕ್ಷಕರ ಖುಶಿ ಅಪರಿಮಿತ. ಉಪಾಧ್ಯಾಯ ವೃತ್ತಿ - ಅದರಲ್ಲೂ ಪ್ರೌಡಶಾಲೆಯ ವರೆಗೆ- ಬಹಳ ಭಾವನಾತ್ಮಕವಾದದ್ದು. ಅಲ್ಲಿನ ಮಕ್ಕಳಲ್ಲಿ ಇನ್ನೂ ಮುಗ್ಢತೆಯಿರುತ್ತದೆ, ಮತ್ತು ಅವರದು ನಿಷ್ಕಲ್ಮಷ ಪ್ರೀತಿ.
ನನ್ನ ನೆನಪು ನನ್ನ ಬಾಲ್ಯಕ್ಕೆ ಓಡುತ್ತಿದೆ. ನನ್ನ ಹಳ್ಳಿಯ ಶಾಲೆಯಲ್ಲಿ ನನ್ನ ಮೇಲೆ ಪ್ರಭಾವ ಬೀರಿದ ಮೇಷ್ಟ್ರುಗಳು : ಮೊಟ್ಟ ಮೊದಲಿಗೆ ನನಗೆ ಅ ಆ ಹೇಳಿಕೊಟ್ಟ (ಶ್ರೀನಿವಾಸಯ್ಯ ?) ಮೇಷ್ಟ್ರು. ನನಗಾಗ 5 ವರ್ಷಕ್ಕೂ ಕಡಿಮೆ. ಅಪ್ಪ ಶಾಲೆಗೆ ಬಿಟ್ಟಿದ್ದು ನೆನಪು. ನನಗೆ ಭಯ. ಗೋಡೆಯ ಪಕ್ಕದಲ್ಲಿ ಕೂಡಿಸಿ ಹುಣಿಸೆ ಬೀಜಗಳನ್ನು ಕೊಟ್ಟು ನೆಲದಮೇಲೆ ಅ ಮತ್ತು ಆ ಅಕ್ಷರಗಳನ್ನು ಬರೆದು ಅದರಮೇಲೆ ಹುಣಿಸೆ ಬೀಜಗಳನ್ನು ಜೋಡಿಸಲು ಹೇಳಿದ್ದು. ನನಗೆ ಈಗಲೂ ಕಣ್ಣಿಗೆ ಕಟ್ಟಿದಂತಿರುವುದು ಅವರ ವೇಷ ಭೂಷ. ಬಿಳಿಯ ಕಚ್ಚೆ ಪಂಚೆ, ಕಪ್ಪು ಬಣ್ಣದ ಕೋಟು ಮತ್ತು ಟೋಪಿ, ಮತ್ತು ನನ್ನೆದುರಿಗೆ ಬಗ್ಗಿ ನನಗೆ ಸರಿ ಕಾಣುವ ಹಾಗೆ ಅಕ್ಷರಗಳನ್ನು ಬರೆದದ್ದು.
ಮುನಿಶಾಮಯ್ಯ ಮೇಷ್ಟ್ರು ಅಂದ್ರೆ ಭಯ ಮಾತ್ರ ಗೊತ್ತು. ಸಂಜೆ ಆಟವಾಡುವಾಗ ಕಂಡರೂ ಓಡುವಷ್ಟು ಭಯ. ಗಂಗಹನುಮಯ್ಯ ಮೇಷ್ಟ್ರು ಹೇಳಿಕೊಡುತ್ತಿದ್ದ ಕೋಲಾಟ ಪ್ರೈಮರಿ ಶಾಲೆಯ ಅವಿಸ್ಮರಣೀಯ ಕ್ಷಣಗಳು.
ಇನ್ನು ಸುಶೀಲ ಪುಷ್ಪವತಿ ಮೇಡಮ್ ಅಂದರೆ ನಮಗೆ ಎನೋ ಸಂಕೋಚ. ಯಾಕೆಂದರೆ ಅಟೆಂಡೆನ್ಸ್ ಸಮಯದಲ್ಲಿ ಹೆಸರು ಕರೆದಾಗ ನಮಗೆ ಗೊತ್ತಿದ್ದದ್ದು "ಪ್ರೆಸೆಂಟ್ ಸರ್" ಎಂದು ಹೇಳುವುದು ಮಾತ್ರ . ಸುಶೀಲ ಪುಷ್ಪವತಿ ಮೇಡಮ್ ಹೆಸರು ಕರೆದಾಗ ನಾವುಗಳು "ಪ್ರೆಸೆಂಟ್ ಸರ್" ಅಂತ ಹೇಳಿದಾಗ ,ಅವರು ನಕ್ಕ ಪರಿ ಇಂದಿಗೂ ಹಸಿರಾಗಿದೆ.
ಐದನೆಯ ತರಗತಿಗೆ ಬಂದ ಹನುಮಂತಯ್ಯ ಮೇಷ್ಟ್ರು ಅಂದ್ರೆ ನಮಗೆಲ್ಲಾ ಅಚ್ಚುಮೆಚ್ಚು. ಇದ್ದಿದ್ದು ಕೆಲವೇ ದಿನವಾದರೂ ಅವರು ಹೇಳಿಕೊಟ್ಟ "ಶ್ರೀ ಗುರುವಿಗೆ ಶರಣು...ಶಿವಯೋಗಿಗಳಿಗೆ ಶರಣು.." ಹಾಡು ನಮ್ಮ ಮೇಲೆ ಬಹಳ ಪ್ರಭಾವ ಬೀರಿತ್ತು. ಆವರು ತುಮಕೂರಿನ ಸಿದ್ದಗಂಗಾ ಆಶ್ರಮದಲ್ಲಿ ಬೆಳೆದವರೆಂದು ಹೇಳಿದ ನೆನಪಿದೆ. ಅವರು ವರ್ಗವಾಗಿ ಹೋದಾಗ ನಾವೆಲ್ಲಾ ಅತ್ತೂ ಅತ್ತೂ ಬೀಳ್ಕೊಟ್ಟಿದ್ದು, ಅವರು ಹೇಳಿದ "ನನಗಿಂತಲೂ ಈಗ ಬರುವ ಮೇಷ್ಟ್ರು ಒಳ್ಳೆಯವರು" ಅನ್ನುವ ಮಾತನ್ನು ನಾವು ಒಪ್ಪಲು ತಯಾರಾಗಿರಲಿಲ್ಲ.
ನಂತರ ಬಂದ ಶಂಕರನಾರಾಯಣ ರಾವ್ ಮೇಷ್ಟ್ರು - ನಮ್ಮ ವಿಧ್ಯಾರ್ಥಿ ಜೀವನಕ್ಕೆ ತಿರುವುಕೊಟ್ಟವರು. ಕೈಯ್ಯಲ್ಲಿ ಪ್ರಶ್ನ ಪತ್ರಿಕೆಗಳನ್ನು ಬರೆದು, ನಮಗೆ ಬರವಣಿಗೆಯ ಪರೀಕ್ಷೆಯ ಅನುಭವ ಕೊಟ್ಟವರು. ನನ್ನ ಪಾಲಿಗಂತೂ ದಯಾಮಯಿ (ಸಾಕಷ್ಟು ಬೈಸಿಕೊಂಡಿದ್ದರೂ ಸಹ). ಅವರೇ ತಯಾರಿಸಿದ್ದ(?) ಎಲ್ಲೆಲ್ಲೂ ವೈರುಗಳು ತುಂಬಿದ್ದ ರೇಡಿಯೊದಲ್ಲಿ ಬಿತ್ತರವಾಗುವ ಆಕಾಶವಾಣಿ, ಬೆಂಗಳೂರು ಕಾರ್ಯಕ್ರಮಗಳು ಕೊಟ್ಟ ಮಜ ...ಒಹ್...ಹೇಗೆ ... ಬಣ್ಣಿಸಲಿ. ಅವರ ಮುಖದಮೇಲಿನ ಹುಸಿನಗೆ ಈ ಕ್ಷಣಕ್ಕೂ ನನ್ನ ಕಣ್ಣ ಮುಂದಿದೆ.
ಎಲ್ಲ ಗುರುಗಳಿಗೂ ಇದೋ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು.
Comments
Post a Comment