Posts

ಹಣ್ಣುಗಳ ರಾಜ - ಮಾವು

Image
 ಹಣ್ಣುಗಳ ರಾಜ - ಮಾವು ಇದು ಮಾವಿನ ಹಣ್ಣಿನ ಕಾಲ... ಎಲ್ಲಿ ನೋಡಿದರೂ ರಾಶಿ ರಾಶಿ ವಿಧವಿಧವಾದ ಮಾವಿನ ಹಣ್ಣುಗಳು. ನೋಡಲು ಚೆನ್ನ ತಿನ್ನಲ್ಲಂತೂ ಬಹು ಚೆನ್ನ. ಮಾವಿನ ಹಣ್ಣನ್ನ ಹಣ್ಣುಗಳ ರಾಜ ಅಂತ ಹೇಳ್ತಾರೆ. ಎಲ್ಲ ಹಣ್ಣುಗಳು ತಿನ್ನಲು ಅದರದೇ ಆದ ವಿಶೇಷ ರುಚಿಯನ್ನು ಹೊಂದಿದ್ದರೂ, ನನಗೆ ಅನ್ನಿಸಿದ ಹಾಗೆ ಮಾವಿನ ಕಾಯಿ ಹಾಗೂ ಮಾವಿನ ಹಣ್ಣುಗಳಲ್ಲಿ ಮಾಡುವ ವೈವಿಧ್ಯ ತಿನಿಸುಗಳು ಮಾವಿನ ಹಣ್ಣಿನ ಸ್ಥಾನಕ್ಕೆ ಒಂದು ಮೆಟ್ಟಿಲು ಮೇಲೆ ಕೊಟ್ಟಿರಬಹುದು. ಈ ವೈವಿಧ್ಯ ಹೇಳಲು ಒಂದು ಆರು ಸಾಲಿನ ಪದ್ಯ ನನಗೆ ತೋಚಿದ್ದು... ಗೀಚಿದ್ದು.. (ಬೀchiಯವರ ಮಾತಿನಂತೆ ತೋಚಿದ್ದು ಬೀಚಿದ್ದು) ನಿಮಗಾಗಿ.. ಚಿತ್ರಾನ್ನದ ಜೊತೆ ಹಣ್ಣಿನ ಪಾಯಸ,  ರುಚಿ ರುಚಿ ಹಣ್ಣು ಅದರದ್ದೇ ರಸ ಅಪ್ಪೆಸಾರು ಉಪ್ಪಿನಕಾಯಿ ಕೋಸಂಬರಿಗೆ ಮಾವಿನಕಾಯಿ  ಚಟ್ಣೀ ಗೊಜ್ಜು ಸಿಕರಣೆ ದೇವರೇ ನಿನಗೆ ಆರೋಗಣೆ ನಾನು ಹಳ್ಳಿಯಲ್ಲಿ ತಿಂದಂಥ ಒಂದೆರಡು ವಿಧವಾದ ಮಾವಿನ ಹಣ್ಣು ಹೊರತುಪಡಿಸಿದರೆ, ಈಗಿರುವ ವೈವಿಧ್ಯ ಮಾವಿನ ಹಣ್ಣಿನ ತಳಿಗಳು ನಿಜವಾಗಲೂ ಗೊತ್ತಾದದ್ದು ಬಹಳ ತಡವಾಗಿ, ಕೆಲವಂತೂ ಈಚೀಚೆಗೆ.... ಯಾವುದರ ರುಚಿ ಹೇಗೆ ಎನ್ನುವ ಸಂಪೂರ್ಣ ಅರಿವಿಲ್ಲ.  ಬೇಸಿಗೆಯ ರಜ, ನಮಗೆಲ್ಲ ಈಜುವ, ಆಟವಾಡುವ ಹಾಗೂ ಸಿಕ್ಕಸಿಕ್ಕ ಹಣ್ಣುಗಳನ್ನು( ಕಾಯಿ, ಪಿಂದೆ, ದೊರೆಗಾಯಿ, ಹಣ್ಣು ಎಲ್ಲವೂ ಸೇರಿ) ತಿನ್ನುವುದೇ ಒಂದು ಮೋಜು. ಯಾವಾಗಲೂ ನಮ್ಮ ಚಡ್ಡಿಯ ಜೇಬಿನಲ್ಲಿ ಉಪ್ಪು ಮೆಣಸಿನ ಪುಡಿ...

ಒಡಪು - ವೈಯಾರ- ಹೆಸರು

Image
ಇದೇನಿದು ಶೀರ್ಷಿಕೆಯೇ ಒಂದಕ್ಕೊಂದು ಸಂಬಂಧವಿಲ್ಲದಂಗೆ ಇದೆಯೆಂದು ಯೋಚಿಸುತ್ತಿದ್ದೀರಾ? ಬನ್ನಿ ನೋಡೋಣ.  ಒಡಪು ಎಂದರೆ ಒಗಟು ಸಹ, ಸಮಸ್ಯೆ ಎಂಬ ಅರ್ಥವೂ ಇದೆ. ಇನ್ನು ವೈಯಾರಕ್ಕೆ ಬಂದರೆ.. ಹಾವ ಭಾವಗಳು, ನಡೆ ನುಡಿ, ಮಾತಿನ ಶೈಲಿ ಎಲ್ಲವೂ ಮಿಳಿತವಾದ ಹೆಣ್ಣಿನ ಸೌಂದರ್ಯವನ್ನು ವರ್ಣಿಸುವಾಗ ಉಪಯೋಗಿಸುವ ಪದ ವಯ್ಯಾರ.. ಹಾಗಾಗಿ ವೈಯಾರಗಿತ್ತಿ / ಬಿನ್ನಾಣಗಿತ್ತಿ ಎಂದು ಹೇಳುವ ವಾಡಿಕೆ. ಇನ್ನು ಹೆಸರಿನ ಬಗ್ಗೆ ನಾನು ಹೇಳುವುದು ಏನೂ ಇಲ್ಲ... ನಿಮಗೆಲ್ಲ ತಿಳಿದಿರುವಂತೆ ಗುರುತಿಸಲು ಉಪಯೋಗಿಸುವ ಒಂದು ಪದ, ನಾಮಪದ. ಬಹು ಪಾಲು ಉತ್ತರ ಕರ್ನಾಟಕದ ಹೆಂಗಸರು ಸಂತೋಷ ಸಮಾರಂಭಗಳಲ್ಲಿ ಅದರಲ್ಲೂ ಮದುವೆಯಂತಹ ಕಾರ್ಯಕ್ರಮಗಳಲ್ಲಿ,  ಗಂಡನ ಹೆಸರು ಹೇಳುವಾಗ ಪದ ವಯ್ಯಾರದಿಂದ, ಪ್ರಾಸ ಬದ್ಧವಾಗಿ, ಪ್ರಾಸಂಗಿಕವಾಗಿ, ಹಾಸ್ಯ ರೂಪದಲ್ಲಿ, ಬಹು ಪಾಲು ಸೂಚ್ಯವಾಗಿ ಹೇಳುವ ವಿಧಾನವನ್ನು ವಡಪು ಎಂದು ಹೇಳುತ್ತಾರೆ. ಪದಗಳ ಉಪಯೋಗ ಅವರೋಹಣ ಕ್ರಮದಲ್ಲಿ ಇದೆ ಬಿಟ್ಟರೆ ಎಲ್ಲವನ್ನು ಹೇಳಿದ್ದೇನೆ ಎನ್ನುವ ನಂಬಿಕೆ ನನ್ನದು. ಹಾಯ್.. ದಿಸ್ ಇಸ್ ಮುಳ್ (ಮುಳ್ಳು?) ಎಂದುತನ್ನ  ಭಾವೀ ಪತಿ ಮುರಳಿಧರನನ್ನು ಪರಿಚಯಿಸುವ ಅತ್ಯಾಧುನಿಕ ಹುಡುಗಿಯೂ ಸಹ ಮದುವೆ ಮನೆಯಲ್ಲಿ ನಾಚಿಕೊಂಡು ಹೀಗೆ ಹೇಳಬಹುದೇನೋ... ಹೆಸರಾಗೇನದೇ ಬರೀ ಐದಕ್ಷರ ಕೂಗಿದ ಕೂಡಲೇ ಓ ಅಂತಾರಾ ಕಡೆಗಣ್ಣಲ್ಲೇ ಹುಡುಗೀರ್ನ ನೋಡ್ತಾರ ನನ್ನವ ಕೃಷ್ಣನ ಅಪರಾವತಾರ ಕಲ್ಪನೆಗೆ, ಕ್ರಿಯಾಶೀಲತ್ವಕ್ಕೆ, ಪ...

ಕಾರ್.ಕಾರ್..ಕಾರ್ ಪುರಾಣ

Image
" ಏ....ತಾತ ಸುಮ್ನೆ ಮನೇಲಿ ಇರೋಕೆ ಆಗಲ್ವಾ.... ಎಲ್ಲಾ ಬೀದಿಗಿಳೀತಾರೆ... ಕಾರ್ ಓಡಿಸಿಕೊಂಡು..." ಇದು ಇತ್ತೀಚೆಗೆ ಒಬ್ಬ angry young man ನನಗೆ ಕೊಟ್ಟ ಉಡುಗೊರೆ.... ಸಿಗ್ನಲ್ ನಲ್ಲಿ ಹಸಿರು ದೀಪ ಬರುವ ಕೆಲ ಕ್ಷಣಗಳ ಮುಂಚೆ ಹಾರ್ನ್ ಮಾಡಿ.. ಅದಕ್ಕೆ ನಾನು ಸ್ಪಂದಿಸದೆ ಇದ್ದಾಗ ದೊರೆತದ್ದು. ಇನ್ನು ಕೆಲವರು ಕೆಲ ಸಮಯದಲ್ಲಿ ನನ್ನ ಮುಖವನ್ನು ತಾತ್ಸಾರದಿಂದ ನೋಡಿರಬಹುದು ಎನ್ನುವ ಅನಿಸಿಕೆ ನನ್ನದು. ಕಾರಣ ನನಗೆ ಗೊತ್ತು... ನಾನು ಈ ದಿನಗಳಲ್ಲಿ ಕಾರ್ ಡ್ರೈವ್ ಮಾಡುವಾಗ ನನ್ನ reflexes ಕಡಿಮೆ ಯಾಗಿರುವುದು. ಅದು ವಯೋ ಸಹಜವೂ ಆಗಿರಬಹುದು, ಸ್ವಲ್ಪ ನನ್ನ ಮನಸ್ಸಿನ ಪ್ರಭಾವವು ಇರಬಹುದು. ಈಗೀಗ ನನಗೆ ಕಾರನ್ನು ಓಡಿಸುವ ಉತ್ಸಾಹ ಸಾಕಷ್ಟು ಕಡಿಮೆಯಾಗಿದೆ. ರಸ್ತೆಯಲ್ಲಿ ಓಡಾಡಲು ಅಥವಾ ಕಾರು ನಡೆಸಲು ಜಾಗವೇ ಇಲ್ಲವೇನೋ ಅನ್ನುವಷ್ಟು ವಾಹನಗಳ ದಟ್ಟಣೆ. ಎಲ್ಲರಿಗೂ ಅದೇನೋ ಧಾವಂತ. ತಮ್ಮ ಗುರಿ ಮುಟ್ಟಲು ಎಲ್ಲಿಲ್ಲದ ಅವಸರ. ಹಾಗಾಗಿ ಒಂದು ಸೆಕೆಂಡ್ ಸಹ ಕಾಯುವ ತಾಳ್ಮೆ ಇಲ್ಲ. ಹಾರನ್ ಬಾರಿಸುವುದು, ಸಂದಿಯಲ್ಲಿ ನುಗ್ಗಿ ಮುನ್ನಡೆಯುವುದು, ಯಾವ ಕಡೆಯಿಂದ ಬೇಕಾದರೂ ನಮ್ಮನ್ನು ಹಿಂದಕ್ಕಿ ಓಡುವ ಸಾಹಸಿಗರು, ಅದರಲ್ಲೂ ದ್ವಿಚಕ್ರವಾಹನಗಳ ಯುವ ಜನಾಂಗ ಶರವೇಗದಲ್ಲಿ ಮುನ್ನುಗುವ ಪರಿ ನನಗೆ ಗಾಬರಿ ಹುಟ್ಟಿಸುವಂತದ್ದು. ಎಷ್ಟೋ ಸಲ... ನಾನು ಬೇರೆಯವರಿಗೆ ಡಿಕ್ಕಿ ಹೊಡೆದು ಬಿಟ್ಟೆನೇನೋ ಎಂದು ಭಯ ಪಟ್ಟದ್ದಿದೆ. ಆ ಸನ್ನಿವೇಶಗಳನ್ನು ನಿಭಾಯ...

ನನ್ನಮ್ಮ...

Image
ಇವತ್ತು ನನ್ನ ಆತ್ಮೀಯ ಪದ್ಮನಾಭ ಅವರ ಮೊಮ್ಮಗನ ಮದುವೆಯ ಮನೆಯ ಊಟ. ಪಾಯಸದ ವಿಚಾರಣೆ ಸಮಯ. ನಾನು ಪಾಯಸವನ್ನು ಸ್ವಲ್ಪವೇ ಹಾಕಿ ಅಂತ ಕೇಳಿದೆ... ಅದಕ್ಕೆ ಬಡಿಸುವವರು  ಎರಡೇ ತೊಟ್ಟು ಬೀಳುವಂತೆ ಬಡಿಸಿ ತಮಾಷೆಯಾಗಿ ಸಾಕ ಸರ್ ಅಂದರು... ತುಂಬಾ ಖುಷಿಯಾಯಿತು ಅವರ ಹಾಸ್ಯ ಪ್ರಜ್ಞೆಯಿಂದ. ಪಕ್ಕದ ಸ್ನೇಹಿತ ಕೇಳಿದ ಅಷ್ಟೇ ಹಾಕಿಸಿಕೊಳ್ಳುವ ಅವಶ್ಯಕತೆ ಏನಿತ್ತು ಎಂದು ? ಅದಕ್ಕೆ ನನ್ನ ಉತ್ತರ  "ಅಮ್ಮ " .  ಹೌದು ನಾನು ಎಲ್ಲೇ  ಊಟ ಮಾಡಲಿ, ಪಾಯಸ ಬಂದಾಗ ಬೇಡ ಅನ್ನುವುದೇ ಇಲ್ಲ... ಇದಕ್ಕೆ ಕಾರಣ ನನ್ನಮ್ಮ.  ಯಾವ ಸಮಯದಲ್ಲಿ ಹೇಳಿದ್ದೋ ಗೊತ್ತಿಲ್ಲ ಆದರೆ ಅದು ನನ್ನಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ. " ಪಾಯಸ ಬೇಡ್ವಾ , ಅಮ್ಮನ ಮೇಲೆ ಪ್ರೀತಿ ಇಲ್ವಾ, ಪಾಯಸ ಬೇಡ ಅಂದ್ರೆ ನಿಮ್ಮಮ್ಮ ಸತ್ತೋಗ್ತಾಳೆ" ಯಾಕೆ ಹಾಗೆ ಹೇಳಿದಳೋ... ಪ್ರಾಯಶಃ ಮಗ ಪಾಯಸ ತಿನ್ನಲಿ ಎಂದಿರಬೇಕು.... ನನಗೆ ಕೋಪ ಬಂದಿತ್ತು, ದುಃಖ ಆಗಿತ್ತು, ಪಾಯಸ ಹಾಕಿಸಿಕೊಂಡು ತಿಂದದ್ದು ನೆನಪಿದೆ. ಕೋಪ ಮತ್ತು ದುಃಖ ಅಳುವಿನ ರೂಪದಲ್ಲಿ ಅಮ್ಮನ ಮುಂದೆ ಹೊರಹಾಕಿದ್ದು, ಅಮ್ಮ ಮುದ್ದು ಮಾಡಿದ್ದು ಸಹ ನೆನಪಿದೆ... ಇದು ಪಾಯಸದ ಹಿಂದಿನ ಪ್ರಸಂಗ. ಮಾತು ಮುಂದುವರಿದು ಇವತ್ತು mother's day ಅನ್ನುವ ವಿಚಾರ ಹೊರಕ್ಕೆ ಬಂತು. ನನಗೆ ವರ್ಷಕ್ಕೊಮ್ಮೆ ಆಚರಣೆ ಮಾಡುವ ಇಂತಹ ದಿನಗಳು ಅಷ್ಟೇನೂ ಪ್ರಭಾವ ಬೀರಿಲ್ಲ. ಹಾಗಂತ ನಾನು ವಿರೋಧಿಯಲ್ಲ. ಹಾಗಾಗಿ ಅಮ್ಮನ ನೆನಪುಗಳ ಈ...

ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯ

Image
  ಇದು ಚುನಾವಣೆಯ ಸಮಯ ಎಲ್ಲೆಲ್ಲೂ ಅದೇ ವಿಷಯ. ಟಿವಿಯಲ್ಲಿ ಅಂತೂ 24 ಗಂಟೆಯೂ ಅದರ ಬಗ್ಗೆಯೇ ಮಾತುಕತೆ. ಇನ್ನು ಜನಸಾಮಾನ್ಯರ ಮಾತಿನಲ್ಲಿ ಚುನಾವಣೆಯ ವಿಚಾರ ಬರದೇ ಇರುವುದು ಸಾಧ್ಯವೇ ಇಲ್ಲ. ರಾಜ ಯಾರಾದರೇನು ರಾಗಿ ಬೀಸುವುದು ತಪ್ಪಲಿಲ್ಲ ಎನ್ನುವುದು ಒಂದು ನಾಣ್ಣುಡಿ... ಆದರೆ ಪ್ರಜಾಪ್ರಭುತ್ವದಲ್ಲಿ ರಾಜನನ್ನು ಆರಿಸುವುದು ನಮ್ಮ ಜವಾಬ್ದಾರಿ.  ಈಚೆಗೆ ಸ್ನೇಹ ಸೇವಾ ಟ್ರಸ್ಟ್ ನಡೆಸಿದ ಮಕ್ಕಳಿಗಾಗಿ ಬೇಸಿಗೆ ಶಿಬಿರದಲ್ಲೂ ಸಹ ಚುನಾವಣೆಯ ವಿಷಯ ರಿಂಗಣಿಸಿತು.  ಆದರೆ ಮಕ್ಕಳು ಮಾಡಿದ್ದು ಚುನಾವಣೆಯ ಬಗ್ಗೆ ಜಾಗೃತಿ. ಮಕ್ಕಳಿಗೆ ಈ ವರ್ಷವೂ ಒಂದು ಕಿರು ನಾಟಕವನ್ನು ಮಾಡಲು ಉಮೇದು. ಕಿರು ನಾಟಕದ ವಿಷಯ " ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯ,  ಆಮಿಷಕ್ಕೆ ಒಳಗಾಗಿ ಮತದಾನ ಮಾಡಬಾರದು".  ದಿವ್ಯ ಮತ್ತು ಅಶ್ವಿನಿ ಪಿಯುಸಿ ಓದುತ್ತಿರುವ ಹುಡುಗಿಯರು, ಈ ವಿಷಯವನ್ನು ತಮ್ಮದೇ ರೀತಿಯಲ್ಲಿ ರೂಪ ಕೊಟ್ಟು ಮಕ್ಕಳನ್ನು ತಯಾರಿ ಮಾಡಿದರು.  ಮಕ್ಕಳ ಉತ್ಸಾಹ ಹೇಳತಿರದು. ಒಂದು ವಾರದ ಅವಧಿಯಲ್ಲಿ ಅವರು ಮಾಡಿದ ಪ್ರಯತ್ನ ಯಶಸ್ವಿ ಆಯಿತು ಎಂದು ಹೇಳಲೇಬೇಕು. ಆದರೆ ಈ ವಿಷಯ ಎಷ್ಟು ಜನದ ಮೇಲೆ ಪ್ರಭಾವ ಬೀರಿ ಬದಲಾವಣೆ ತರಲಿದೆ ಎನ್ನುವುದು ಮಾತ್ರ ಆಶಾಭಾವ. ಈ ಕಿರು ನಾಟಕ ನನ್ನ ಹಳ್ಳಿಯ ದಿನಗಳನ್ನು ನೆನಪಿಸಿತು. ನಾನು ಓದುತ್ತಿದ್ದದ್ದು 5ನೇ ತರಗತಿಯಲ್ಲಿ (1957 ರ ಸಾರ್ವತ್ರಿಕ ಚುನಾವಣೆ ಅಂತ ಈಗ ಹೇಳಬಲ್ಲೆ). ನಮ್ಮೂರಲ್ಲೂ ಚ...

ಅನ್ನಂ ನ ನಿಂದ್ಯಾತ್..ತದ್ ವ್ರತಂ

Image
  ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂದು ಹೇಳಿದ್ದಾರೆ ದಾಸ ವರೇಣ್ಯ ಪುರಂದರ ದಾಸರು. ಹೊಟ್ಟೆಗೆ ಮೊದಲ ಆದ್ಯತೆ.. ಹೊಟ್ಟೆ ತುಂಬಲು ಬೇಕು ಅನ್ನ / ಆಹಾರ.  ಅಗುಳು, ಅಗುಳಿನ ಮೇಲು ತಿನ್ನುವವನ ಹೆಸರು ಬರೆದಿದೆ ಎನ್ನುವುದು ಒಂದು ಜಾಣ್ನುಡಿ.  ಅನ್ನಂ ಪರಬ್ರಹ್ಮ ಎಂದು ಹೇಳಿದ್ದಾರೆ ಹಿರಿಯರು.. ಅನ್ನ ನಮ್ಮ ಜೀವನಕ್ಕೆ ಬೇಕಾದ ಶಕ್ತಿಯನ್ನು ಕೊಡುವ ಮೂಲವಸ್ತು ಹಾಗಾಗಿ ಅದನ್ನು ದೇವರಿಗೆ ಹೋಲಿಸಿದ್ದಾರೆ.  ಜೊತೆಗೆ ಅನ್ನಂ  ನ ನಿಂದ್ಯಾತ್..ತದ್ ವ್ರತಂ... ಅಂತಲೂ ಹೇಳಿದ್ದಾರೆ... ಅಂದರೆ ಅನ್ನಕ್ಕೆ       ಅಗೌರವ ತೋರಿಸಬೇಡ, ಹಾಳು ಮಾಡಬೇಡ... ಅದೊಂದು ವ್ರತ. ನಾನು ಚಿಕ್ಕವನಿದ್ದಾಗ ಊಟ ಮಾಡುವಾಗ ತಟ್ಟೆಯಲ್ಲಿ ಅನ್ನವನ್ನು/ ತಿನ್ನುವ ಪದಾರ್ಥವನ್ನು ಬಿಟ್ಟರೆ ಅದನ್ನು ನನ್ನ ತಲೆಗೆ ಕಟ್ಟುತ್ತೇನೆ ಎಂದು ನಮ್ಮಪ್ಪ ಹೇಳುತ್ತಿದ್ದರು ... ಹಾಗಾಗಿ ನನಗೆ ಆಹಾರ ಪದಾರ್ಥವನ್ನು ಚೆಲ್ಲಬಾರದು ಎಂಬ ಮಾತು ಮನಸ್ಸಿನಲ್ಲಿ ಭದ್ರವಾಗಿ ಮೂಡಿದೆ. ಅಕ್ಕಿಗೆ ಕಷ್ಟವಾಗಿದ್ದ ಕಾಲ.. ಆಗ ಮನೆಯಲ್ಲಿ ಹೇಳುತ್ತಿದ್ದ ಒಂದು ಮಾತು “ಹೊಟ್ಟೆ ತುಂಬಾ ಹಿಟ್ಟು, ಬಾಯಿ ತುಂಬಾ ಅನ್ನ" . ಅಂದಿನ ದಿನಗಳಲ್ಲಿ, ಯಾವ ಕಾರಣಕ್ಕೂ ಅನ್ನವನ್ನು ಬೀದಿಗೆ ಎಸೆಯುತ್ತಿರಲಿಲ್ಲ.... ಕಲಗಚ್ಚಿನ ಬಾನಿಯಲ್ಲಿ ಹಾಕಿದರೆ ಅದನ್ನು ಹಸು ಎಮ್ಮೆಗಳು ಕುಡಿಯುತ್ತಿದ್ದವು. ಭತ್ತಕುಟ್ಟಿದಾಗ, ಹೊಟ್ಟನ್ನು ಜರಡಿ ಮಾಡಿ ಉಳಿದ ...

ನಾಟಕದ ಪ್ರಸಂಗಗಳು....

Image
  ನಾಲ್ಕಾರು ದಿನಗಳ ಹಿಂದೆ ನನ್ನ ಮಗಳು ಹಳೆಯ ಫೋಟೋ ಆಲ್ಬಮ್ ಹರಡಿಕೊಂಡು ಖುಷಿಪಡುತ್ತಿದ್ದಳು, ನನ್ನನ್ನು ಕರೆದು ಒಂದು ವಿಶೇಷ ಆಲ್ಬಮ್ ಅನ್ನು ಕೊಟ್ಟಳು.... ಅದು ಸುಮಾರು ಹತ್ತು ವರ್ಷಕ್ಕೂ ಹಿಂದಿನದು, ನಾವು ಮಾಡಿದ ಒಂದು ನಾಟಕದ ಚಿತ್ರಗಳು. ನನ್ನ ಗೆಳೆಯ ವಾಸುವಿನ  "ಮಾವಿನಕೆರೆ ಬಬ್ಬೂರು ಕಮ್ಮೆ ಅಸೋಸಿಯೇಷನ್" ಅವರ ಒಂದು ಮಿಲನದ ಸಂದರ್ಭ.  ಅಮೆರಿಕದಲ್ಲಿ ವಾಸವಾಗಿರುವ ಶ್ರೀ ಶಂಕರನಾರಾಯಣ್,  ಶ್ರೀ ಪ್ರಸಾದ್  ಹಾಗೂ ನಮ್ಮ ವಾಕಿಂಗ್ ಗೆಳೆಯರು ಸೇರಿ ಮಾಡಿದ ಒಂದು ನಾಟಕ "ಶ್ರೀಕೃಷ್ಣ ಸಂಧಾನ". ಆ ದಿನಗಳು ತುಂಬಾ ಸಂತೋಷದಾಯಕವಾಗಿತ್ತು. ಆ ಫೋಟೋಗಳನ್ನು ನೋಡುತ್ತಾ ನನ್ನ ಮನಸ್ಸು ಹಳೆಯ ಕಾಲದ ನಾಟಕಗಳ ಸಂದರ್ಭಗಳನ್ನು ನೆನೆಸಿಕೊಳ್ಳಲು ಪೂರಕವಾಗಿತ್ತು... ಮುದ ಕೊಟ್ಟಿತ್ತು. ಆ ನೆನಪುಗಳ ಸರಮಾಲೆಯನ್ನು ಅಕ್ಷರ ರೂಪದಲ್ಲಿ ಇಳಿಸುವ ಪ್ರಯತ್ನ ನನ್ನದು. " ಮೂರುವರೆ ನಾಟಕದ ಕಲಾವಿದರು" ಎಂಬ ಹೆಸರು ಪಡೆದ ನಮ್ಮ ಶಹಾಬಾದ್ ಬ್ರಹ್ಮಚಾರಿಗಳ ತಂಡ. ನಮ್ಮ ತಂಡ ಶಹಾಬಾದಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಮಾಡಬೇಕೆಂದು ನಿರ್ಧರಿಸಿ ಪ್ರತಿ ವರ್ಷ ನಾಟಕ ಮತ್ತಿತರ ಮನರಂಜನೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದೆವು. ಹೀಗಿದ್ದಾಗ ಶಹಾಬಾದಿನ ಪಟ್ಟಣದ ನಾಡಹಬ್ಬದ ಕಾರ್ಯಕ್ರಮದಲ್ಲಿ ನಮ್ಮ ತಂಡಕ್ಕೆ ಭಾಗವಹಿಸಲು ಹೇಗೋ ಒಂದು ಅವಕಾಶ ಸಿಕ್ಕಿತ್ತು. ನಮಗೆ ಅತಿ ಉತ್ಸಾಹ, ಜನಸ್ತೋಮ ನೋಡಿ ಆ ಉತ್ಸಾಹಕ್ಕೆ ಮತ್ತಷ್ಟು ಇ...

ಬೇವು - ಬೆಲ್ಲ... ಜೀವನವೆಲ್ಲ

Image
  ಯುಗ ಯುಗಾದಿ ಕಳೆದರೂ,  ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ  ಹೊಸತು ಹೊಸತು ತರುತಿದೆ..... ಬೇಂದ್ರೆ ಅಜ್ಜನ ಈ ಹಾಡು ಎಷ್ಟೋ ಯುಗಾದಿಗಳಿಂದ ಕೇಳುತ್ತಿದ್ದೇನೆ, ಅದು ಯುಗಾದಿಯಂತೆಯೇ ಹೊಸತು ಹೊಸದಾಗಿಯೇ ಇದೆ. ಯುಗಾದಿ ಕನ್ನಡಿಗರಿಗೆ ಹೊಸ ವರ್ಷದ ಹಬ್ಬ. ವಸಂತ ಋತುವಿನಲ್ಲಿನ ಬಹು ಮುಖ್ಯ ಹಬ್ಬ. ವಸಂತ ... ಋತುಗಳ ರಾಜ... ಎಲ್ಲೆಲ್ಲಿಯೂ ಹಸಿರು ಚಿಗುರು ಒಡೆದು ಮರ-ಗಿಡಗಳೆಲ್ಲಾ ನಳನಳಿಸುವ ಸಮಯ. ಅದರಲ್ಲೂ ಮಾವಿನ ಮತ್ತು ಅರಳಿ ಮರದ ಚಿಗುರು ಎಲೆಗಳ ಕೆಂಪು ಮಿಶ್ರಿತ ಬಣ್ಣ ಚಿಕ್ಕಂದಿನಿಂದಲೂ ನನಗೆ ಬಲುಮೆಚ್ಚುಗೆ. ಯುಗಾದಿಗೆ ಹೊಸ ಬಟ್ಟೆ ಒಂದು ಸಂಭ್ರಮ.... ನನಗಂತೂ ವಿಶೇಷ ಸಂಭ್ರಮ... ನಾನು ಹುಟ್ಟಿದ್ದು ಯುಗಾದಿಯ ಆಸು ಪಾಸಿನಲ್ಲಿ.. ಹಾಗಾಗಿ ನನ್ನ ಹುಟ್ಟಿದ ಹಬ್ಬ ಆಚರಿಸುವ ದಿನ ಯುಗಾದಿ.  ಹೇಗೂ ಮನೆಯಲ್ಲಿ ಒಬ್ಬಟ್ಟು ಮಾಡಿರುತ್ತದೆ, ಎಣ್ಣೆ ನೀರು ಹಾಕಿಕೊಂಡು, ದೇವರಿಗೆ ನಮಸ್ಕರಿಸಿ, ಒಂದು ಲೋಟ ಹಾಲು ಕುಡಿದರೆ ಅದು ಹುಟ್ಟಿದ ಹಬ್ಬದ ಆಚರಣೆ. ಮನೆ ತುಂಬಾ ಮಕ್ಕಳು ಜೊತೆಗೆ ಒಂದಷ್ಟು ಬಡತನ, ಹೀಗಿರುವಾಗ ಮಕ್ಕಳ ಹುಟ್ಟಿದ ಹಬ್ಬದ ಸಂಭ್ರಮ ಎಲ್ಲಿ ಬರಬೇಕು.. ಜೊತೆಗೆ ಅದೊಂದು ದೊಡ್ಡ ಸಂಗತಿ ಏನೂ ಆಗಿರಲಿಲ್ಲ.. ಅಂದಿನ ಕಾಲಕ್ಕೆ. ಹೊಸ ಬಟ್ಟೆ ಎಂದರೆ ಸಾಮಾನ್ಯವಾಗಿ ನಮ್ಮೂರಿನ ಪರಿಣತ ಟೈಲರ್ ಆಗಿದ್ದ ಅಚ್ಚಪ್ಪನವರು ಹೊಲಿದುಕೊಟ್ಟದ್ದು . ಬಟ್ಟೆ ಅಂಗಡಿಗೆ ಹೋದಾಗ ಸಾಮಾನ್ಯವಾದ ಮಾತು- ಸ್ವಲ್ಪ ದೊಡ್ಡ ದೊಡ್...

ನಿರಾಕರಣ - ಮನಸ್ಸಿನ ಅನಾವರಣ

Image
ನಾನು ನನ್ನ ಮಡದಿ ಇಬ್ಬರೂ ಓದುವ ಹವ್ಯಾಸ ಉಳ್ಳವರು, ಹಾಗಾಗಿ ನಮ್ಮ ಮನೆಯಲ್ಲಿ ಸಾಕಷ್ಟು ಪುಸ್ತಕಗಳ ಸಂಗ್ರಹವಿದೆ. ಭೈರಪ್ಪನವರ ಕಾದಂಬರಿಗಳ ಸಂಗ್ರಹವೂ ಇದೆ. ಆದರೆ " ನಿರಾಕರಣ" ಕಾದಂಬರಿ ಮಾತ್ರ ನಮ್ಮಲ್ಲಿ ಇರಲಿಲ್ಲ.  ಕೆಲ ದಿನಗಳ ಹಿಂದೆ ನಿರಾಕರಣ ಪುಸ್ತಕವನ್ನು ತಂದು ಕೈಗಿಟ್ಟಳು ವಿಜಯ. ಓದಿ ಮುಗಿಸಿದಾಗ  " ನರಹರಿ ರಾಯರ " ತುಮುಲಗಳು ನನ್ನ ಮನಸ್ಸನ್ನು ಚಿಂತನೆಗೆ ದೂಡಿತ್ತು. ಸಾಮಾನ್ಯವಾಗಿ ಮನುಷ್ಯ ಕಷ್ಟ ಬಂದಾಗ , ಮನಸ್ಸಿಗೆ ತೀವ್ರ ನೋವಾದಾಗ,  ನಿರಾಶೆಯಾದಾಗ, ಏನೂ ತೋಚದೆ ಗೊಂದಲದಲ್ಲಿದ್ದಾಗ ಬರುವ ಭಾವನೆಗಳು,  " ಸಾಕಪ್ಪ ಈ ಜೀವನ " " ಎಲ್ಲ ಬಿಟ್ಟು ಎಲ್ಲಾದರೂ ಓಡಿ ಹೋಗೋಣ ಅನ್ಸುತ್ತೆ  " " ಸಾಯ್ಬೇಕು ಅನ್ಸುತ್ತೆ - ಆದರೆ ಧೈರ್ಯ ಇಲ್ಲ". ಹೀಗೆ.... ಈ ಭಾವನೆಗಳು / ಮಾತುಗಳು ಸಂದಿಗ್ಧ ಸಮಯದಲ್ಲಿ ಬರುವಂತ ತತ್ ಕ್ಷಣದ ಭಾವನೆಗಳು.. ಅದರಿಂದ ಪ್ರೇರಿತವಾದ ನಿರ್ಧಾರಗಳು ಸಹ.  ಬಹಳಷ್ಟು ಸಲ ಇವು ಕೆಲ ದಿನಗಳ ಕಾಲ ಧಾಳಿ ನಡೆಸುವಂಥಹವು.  ಆಪ್ತ ಸಮಾಲೋಚನೆಗಾಗಿ ನನ್ನಲ್ಲಿ ಬರುವ ವ್ಯಕ್ತಿಗಳಿಗೆ ಇಂಥ ನಿರಾಶಾ ಸ್ಥಿತಿಯಲ್ಲಿ ಸಮಾಧಾನ ಮಾಡಿ, ಕಷ್ಟಗಳು ಸಹಜ ಆದರೆ ಅವು ನಿರಂತರವಲ್ಲ, ಒಳ್ಳೆಯ ದಿನಗಳು ಬರುತ್ತವೆ ಅದಕ್ಕಾಗಿ ಸ್ವಲ್ಪ ಸಮಯ ಸಹನೆಯಿಂದ ಇರಬೇಕು, ನಮ್ಮ ಯೋಚನಾ ಲಹರಿಯನ್ನು ಸಾಧ್ಯವಾದಷ್ಟು ಬದಲಾಯಿಸಿಕೊಳ್ಳಬೇಕು, ಕತ್ತಲೆಯ ನಂತರ ಬೆಳಕು, ಬದಲಾವಣೆ ಜಗದ ನಿಯಮ... ಹೀಗ...

ಅಂದು ....... ನಾನೂ ಮಂತ್ರಿಯಾಗಿದ್ದೆ

Image
  ನಾಲ್ಕನೆಯ ಕ್ಲಾಸಿನ ತನಕ ನಾನು ಓದಿದ್ದು ನಮ್ಮೂರು ದೊಡ್ಡಜಾಲದ ಪ್ರಾಥಮಿಕ ಶಾಲೆಯಲ್ಲಿ. ಮುಂದಿನ ಓದಿಗೆ ಐದನೇ ಕ್ಲಾಸಿಗೆ ಅನಿವಾರ್ಯವಾಗಿ ನಾವು ಹೋಗಬೇಕಾಗಿದ್ದು ನಮಗೆ (ಮೂರು ಮೈಲಿ)  ಹತ್ತಿರವಿದ್ದ  “ ವಿದ್ಯಾನಗರದ ಮಾಧ್ಯಮಿಕ ಶಾಲೆಗೆ.  ಅಲ್ಲಿಗೆ ಹೋಗಿಬರುವುದೇ ಒಂದುಸಂಭ್ರಮ.   ಶಾಲೆಗೆ ಹೋಗಲು ಶುರು ಮಾಡಿ ಮೂರು ನಾಲ್ಕು ತಿಂಗಳು ಆಗಿರಬಹುದು, ನಮ್ಮ ದೊಡ್ಡ ಜಾಲದ ಶಾಲೆಗೆ ಮಾಧ್ಯಮಿಕ ತರಗತಿಗಳನ್ನು ಶುರು ಮಾಡಲು ಅಪ್ಪಣೆ ಸಿಕ್ಕಿತು ಹಾಗಾಗಿ ಮತ್ತೆ ದೊಡ್ಡಜಾಲಕ್ಕೆ ಹಿಂತಿರುಗಿದೆವು.... ಮತ್ತೇನು ಕಾರಣವೋ ಪ್ರಾಯಶಃ ಏಳನೇ ತರಗತಿಗೆ ಮತ್ತೆ ವಿದ್ಯಾನಗರಕ್ಕೆ ಮರಳುವ ಪರಿಸ್ಥಿತಿ ಬಂತು. ವಿದ್ಯಾನಗರ ಮೊದಲು ಮಿಲಿಟರಿ ತಾಣವಾಗಿತ್ತು, ಹಾಗಾಗಿ ಅದು ವಿಶಾಲವಾಗಿಯೂ ಅಚ್ಚುಕಟ್ಟಾಗಿ ಕಟ್ಟಿದ ಕಟ್ಟಡಗಳು ಹಾಗೂ ಅದರ ಮಧ್ಯದಲ್ಲಿ ಹೂವು ಹಣ್ಣುಗಳ ಗಿಡಗಳು ಬೆಳೆದಿದ್ದವು. ನಲ್ಲಿಯ ನೀರಿನ ಸೌಕರ್ಯವೂ ಇತ್ತು , ಹಾಗಾಗಿ ನಮ್ಮ ಪಾಲಿಗೆ ಅದು ಸ್ವರ್ಗ. ಶಾಲೆಯಲ್ಲಿ ಗಾಂಧಿ ಪ್ರಣೀತ ಶಿಸ್ತು.   ದಿನದ ಕಾರ್ಯಕ್ರಮ ಶುರುವಾಗುವುದು " ಸಫಾಯಿ" ಯಿಂದ.  ಶಾಲೆಯ ಎಲ್ಲಾ ಮಕ್ಕಳು ಇದರಲ್ಲಿ ಭಾಗವಹಿಸಬೇಕು. ಅದು ಪೊರಕೆ ಹಿಡಿದು ಕಸ ಗುಡಿಸುವುದಾಗಲಿ, ಗಿಡಗಳಿಗೆ ಪಾತಿ ಮಾಡುವುದಾಗಲಿ, ಬಿದ್ದಿರುವ ಕಸ ಕಡ್ಡಿಗಳನ್ನು ಕೈಯಿಂದ ಹೆಕ್ಕುವುದಾಗಲಿ, ಕೊನೆಗೆ ಇಬ್ಬರು ಮಂಕರಿಯನ್ನು ಹಿಡಿದು ಕಸ ಕಡ್ಡಿಗಳನ್ನು  ...

ಬಲು ಅಪರೂಪ ನಮ್ ಜೋಡಿ.....

Image
  ಫೆಬ್ರವರಿ 28ನೆಯ ತಾರೀಕು ನನ್ನ ಮದುವೆಯಾದ ದಿನ. ಇದು 44 ವರ್ಷಗಳ ಹಿಂದಿನ ಮಾತು. ಆದರೆ ನಾವು ಮದುವೆಯ ದಿನವನ್ನು ಆಚರಿಸುವುದು ಈ ತಾರೀಖಿನಲ್ಲಲ್ಲ... ಆದರೆ ನಮ್ಮ ಪಂಚಾಂಗದ ತಿಥಿಯ ಪ್ರಕಾರ ಅಂದರೆ ಪಾಲ್ಗುಣ ಮಾಸ ಶುಕ್ಲ ಪಕ್ಷ ಬಿದಿಗೆ. ಇದು ಹೋದ ಬುಧವಾರವೇ ಆಯಿತು.  ಈಗಿನ ಸಾಮಾಜಿಕ ಜಾಲತಾಣದ ಪ್ರಭಾವದಲ್ಲಿ ನಮಗೆ ಶುಭಾಶಯಗಳನ್ನು ಹೇಳುವವರ ಸಂಖ್ಯೆ ಜಾಸ್ತಿಯಾಗಿದೆ. ಆದರೆ ಈ ಶುಭಾಶಯಗಳು ವಿನಿಮಯ ಮಾಡಿಕೊಳ್ಳುವ ಇನ್ನೊಂದು ದಂಪತಿ ಇದೆ... ನಾವಿಬ್ಬರೂ ಪರಸ್ಪರ  thank you and same to you ಅಂತ ಹೇಳಿಕೊಳ್ಳುವ ವರು.   ( ಈಗ ನಮ್ಮ ಜೊತೆಗೆ ಇನ್ನೊಂದು ಹೊಚ್ಚ ಹೊಸ ಜೋಡಿ ಸೇರಿಕೊಂಡಿದೆ ಅದು ಸಾರ್ಥಕ ಮತ್ತು ಸುಪ್ರಿಯ.. ಈ ಜೋಡಿ ವಿಶೇಷತೆಯಿಂದ ಹೊರತು)  ನಮ್ಮ ಜೋಡಿಗಳಲ್ಲಿ ಅಪರೂಪದ ವಿಶೇಷತೆ ಇದೆ ಅದನ್ನು  " ಕಾಕತಾಳಿಯ ಸಮಾನತೆಗಳು" ಎಂದರೂ ಸರಿಯೇ. ನಾನು DC ರಂಗನಾಥ ರಾವ್ ( DCರಂಗ) , ನನ್ನ ಗೆಳೆಯ HP ರಂಗನಾಥ (HP ರಂಗ) ಇನ್ನು ನನ್ನ ಮಡದಿಯ ಹೆಸರು H K ವಿಜಯ,(ವಿಜಿ)  ನನ್ನ ಗೆಳೆಯನ ಮಡದಿಯ ಹೆಸರೂ ವಿಜಯ ..G ವಿಜಯ (ಜಿವಿಜಿ) ಇಲ್ಲಿಂದ ಶುರು ನಮ್ಮ ದಂಪತಿಗಳ ಸಮಾನತೆಗಳು. ಅನುಕೂಲಕ್ಕಾಗಿ ನಾನು ಹಾಗೂ ನನ್ನ ಗೆಳೆಯನನ್ನು      " ನಾವಿಬ್ಬರು" ಎಂದು ಹೇಳುತ್ತೇನೆ... ನಮ್ಮ ಮಡದಿಯರನ್ನು " ಅವರಿಬ್ಬರು" ಎಂದು ಸಂಭೋಧಿಸುತ್ತೇನೆ. ನಾವಿಬ್ಬರೂ ಹುಟ್ಟಿದ್ದು ...

ಈಜು ಕಲಿಸಿದ ರಾಮಲಿಂಗಣ್ಣಯ್ಯ

Image
   ”ಈಜಕ್ಕೆ ಬರಲ್ವಾ...?” ಅಂತ ಪ್ರಶ್ನೆ ಕೇಳಿದಾಗ ಇಲ್ಲ ಅನ್ನುವುದು ಅವಮಾನಕರ ಅನ್ನುವ ಪ್ರತೀತಿ ಇತ್ತು- ನಾನು ಹಳ್ಳಿಯಲ್ಲಿದ್ದಾಗ. ಹಾಗಾಗಿ ನಾನು ಈಜು ಕಲಿಯಲು ಶುರುಮಾಡಿದ್ದು ಪ್ರಾಯಶಃ ಎರಡನೆಯ ತರಗತಿಯಲ್ಲಿ ಓದುತ್ತಿದ್ದಾಗ. ಬೇಸಿಗೆಯ ರಜಾ ಇನ್ನೇನು ಶುರು ಅಂದಾಗ, ನಮ್ಮಪ್ಪ ಹೇಳಿದ್ದು ಅವರ ಸ್ನೇಹಿತ ರಾಮಲಿಂಗಾಚಾರ್ಯ ಅವರ ಹೆಸರು...... ನಮಗೆಲ್ಲಾ ಅವರು "ರಾಮಲಿಂಗಣ್ಣಯ್ಯ" ಎಂದೆ ಪರಿಚಿತರು. ರಾಮಲಿಂಗಣ್ಣಯ್ಯ ಇದ್ದದ್ದು ನಮ್ಮ ಮನೆಯ ಮುಂದೆ.. ಬಹಳ ಸಲ ಬೆಳ್ಳಂಬೆಳಗ್ಗೆಯೇ ಅವರ ಹಾಡು ಶುರು... ಅದಕ್ಕೆ ನಮ್ಮಪ್ಪನ ವ್ಯಾಖ್ಯಾನ.... ಉದಯರಾಗ ಶುರುವಾಯಿತು ಎಂದು. ರಾಮಲಿಂಗಣ್ಣಯ್ಯ ವೃತ್ತಿಯಲ್ಲಿ ಅಕ್ಕಸಾಲಿಗರು- ಚಿನ್ನ ಬೆಳ್ಳಿಯ ಕೆಲಸಗಾರರು. ತಮ್ಮದೇ ಹೊಲಗದ್ದೆಗಳನ್ನು ಹೊಂದಿದ್ದವರು.  ಸರಿ, ನಮ್ಮ ಪಟಾಲಮ್ಮು ( ನಾನು ನನ್ನಣ್ಣ ಸತ್ತಿ, ಮುಕುಂದ, ಮೂರ್ತಿ ಹಾಗೂ ಇತರರು) ರಾಮಲಿಂಗಣ್ಣಯ್ಯನ ಹಿಂದೆ ಬಿದ್ದೆವು. ದಿನ ಬೆಳಗ್ಗೆ ಸಾಯಂಕಾಲ ಅವರನ್ನು  ಕಾಡಿಸುವುದು ಪೀಡಿಸುವುದು.. ಅವರು ಕೆಲಸ ಮಾಡುತ್ತಿದ್ದರೆ ಸಣ್ಣಪುಟ್ಟ ಸಹಾಯ ಮಾಡುವುದು, ತಿದಿ ಒತ್ತುವುದು, ಅವರಿಗೆ ಬೀಡಿ ತಂದು ಕೊಡುವುದು, ಹೀಗೆ ಅವರ ಮನಮೆಚ್ಚಿಸಲು ಮಾಡುತ್ತಿದ್ದ ಕೆಲಸಗಳು. ತುಂಬಾ ಕಾಡಿಸಿದಾಗ " ಅಸ್ಸಿಸ್ಸಿ.... ಹೋಗಯ್ಯ ಅತ್ತಾಗೆ" ಅಂತ ಬೈಸಿಕೊಂಡದ್ದು ಉಂಟು. ಏನೇ ಆದರೂ ನಮ್ಮ ಉತ್ಸಾಹಕ್ಕೆ ಭಂಗ ಬರಲಿಲ್ಲ. ಅಂತೂ ಕೊನೆಗೊಂದು ದಿನ  " ತ...

ಶಿವರಾತ್ರಿ ಹಬ್ಬವೂ... ಗೊಟ್ಟಿಗೆರೆ ಜಾತ್ರೆಯೂ..

Image
  ಇವತ್ತು ಶಿವರಾತ್ರಿ ಹಬ್ಬ.. ಆದರೆ ನಮ್ಮ ಕುಟುಂಬಕ್ಕೆ ಹಬ್ಬದ ಆಚರಣೆ ಇಲ್ಲ ಕಾರಣ - ನನ್ನ ದೊಡ್ಡಣ್ಣ ತೀರಿಕೊಂಡ ವರ್ಷ. ಇದರೊಡನೆ ಇನ್ನೊಂದು ಅಣ್ಣನ ನೆನಪು ಕಾಡಿತು. ಇಂದು ಬೆಳಿಗ್ಗೆ ವಾಕಿಂಗ್ ಸಮಯದಲ್ಲಿ ಗೆಳೆಯರು ನೆನೆಸಿಕೊಂಡ ವ್ಯಕ್ತಿ ಈ ಇನ್ನೊಂದು ಅಣ್ಣ.. ಜಿ.ಎನ್. ಶ್ರೀನಿವಾಸ ಮೂರ್ತಿ, ಹಾಗೂ ಶಿವರಾತ್ರಿ ಯೊಂದಿಗಿನ ಅವನ ನಂಟು. ಮೂರ್ತಿ ಗೊಟ್ಟಿಗೆರೆಯ ಮೂಲದವನು( ಗೊಟ್ಟಿಗೆರೆಯ ಮಾಜಿ ಜಮೀನ್ದಾರ ಹಾಗೂ ಅವನೇ ಹೇಳುತ್ತಿದ್ದಂತೆ ಒಬ್ಬ ಹೆಸರುವಾಸಿ ಸಂಗೀತ ಗಾಯಕಿಯ ಮದುವೆ ಪ್ರಪೋಸಲ್ ಬಂದಿದ್ದ ಮಾಜಿ ವರ). ಶಿವರಾತ್ರಿ ಅಂದೊಡನೆ ನನಗೆ ಸಹಜವಾಗಿ ನೆನಪಿಗೆ ಬರುವುದು ಶಿವರಾತ್ರಿ ಮಾರನೆಯ ದಿನದ ಗೊಟ್ಟಿಗೆರೆ ಸೋಮೇಶ್ವರ ದೇವರ ಜಾತ್ರೆ. ಈ ಜಾತ್ರೆಗೆ ನಾವು ವಾಕಿಂಗ್ ಸ್ನೇಹಿತರೆಲ್ಲ ತಪ್ಪದೇ ಬಹಳಷ್ಟು ವರ್ಷಗಳ ಕಾಲ ಹೋಗಿ, ತೇರಿನ ಸಂಭ್ರಮ, ಬಾಳೆಹಣ್ಣು ಧವನ ಎಸೆಯುವುದು, ಪಾನಕ ಪನ್ಯಾರ, ಭರ್ಜರಿ ಊಟ ಸವಿದು ಬರುವುದು ಒಂದು ಸಂಪ್ರದಾಯವೇ ಆಗಿತ್ತು. ಅಣ್ಣನ ಕುಟುಂಬದವರ ಆತ್ಮೀಯತೆ , ಆದರ , ಸತ್ಕಾರ ಇವೆಲ್ಲ ಸ್ಮರಣೀಯ. ಕೋವಿಡ್ ಕಾಲದಲ್ಲಿ ನಿಂತ ಸಂಪ್ರದಾಯ ನಿಂತೇ ಹೋಯಿತು, ಅಣ್ಣನ ನಿಧನದಿಂದ. ನನ್ನ ಜೀವನದ ಸರಿಸುಮಾರು 18 ವರ್ಷಗಳ ಕಾಲ ಒಡೆನಾಡಿದ ಆತ್ಮೀಯ ಗೆಳೆಯ. ಅದೇನೋ ಪ್ರೀತಿ ಅಭಿಮಾನ ಅವನನ್ನು ಕಂಡರೆ. ಬೆಳಿಗ್ಗೆ ವಾಕಿಂಗ್ ಸಮಯದಲ್ಲಿನ ಮಾತು, ತಲೆ ಹರಟೆ, ಹಳ್ಳಿ ಭಾಷೆಯ ಸೊಗಡು ಹಾಗೂ ಅದರಲ್ಲಿನ ರಸಿಕತೆ, ಹಾಡಿನ ಗುನುಗಾಟ ಹೀಗೆ ...

ಇನ್ನೊಂದು ಪಯಣ - ಬೇರೆಯೇ ದಿಕ್ಕು

Image
  ಈ ಭಾನುವಾರ ಡಾ ಸಿ ಆರ್ ಚಂದ್ರಶೇಖರ್ ಅವರು ಬರೆದ " ನಾನು ಕಂಡ ನಾಡಿನ ನಕ್ಷತ್ರಗಳು" ಪುಸ್ತಕದ ಬಿಡುಗಡೆ ಸಮಾರಂಭ ನ್ಯಾಷನಲ್ ಕಾಲೇಜ್ ಸಭಾಂಗಣದಲ್ಲಿ ನಡೆಯಿತು.  ನಾನು ಓದಿದ ಕಾಲೇಜಿನ ಆವರಣಕ್ಕೆ ಹೊಕ್ಕಾಗ ಅಲ್ಲಾಗಿದ್ದ ಬದಲಾವಣೆಗಳು, ಕಣ್ಣಿಗೆ ಬಿದ್ದ ಹಳೆಯ ಕುರುಹುಗಳು ಮನಸ್ಸನ್ನು ಪುಳಕಗೊಳಿಸಿತು. ಕಾರ್ಯಕ್ರಮದಲ್ಲಿ ಸಾಕಷ್ಟು ಮಂದಿ ಹಳೆಯ ಮುಖಗಳ ಭೇಟಿ ಉಭಯಕುಶಲಾಪರಿ ಆಯಿತು. ಈ ಮಧ್ಯೆ ರಾಜೇಶ್ವರಿ (ನನ್ನನ್ನು ಅಪ್ಪ ಎಂದು ಅಭಿಮಾನದಿಂದ ಸಂಭೋಧಿಸುವ ಹೆಣ್ಣು  ಮಗಳು) ಕೊಟ್ಟ ಆಹ್ವಾನ ಹಾಗೂ ಅದರ ಹಿಂದಿರುವ ಕಾರಣವನ್ನು ತಿಳಿದಾಗ ಆಗದು ಎನ್ನುವ ಮನಸ್ಸು ಬರಲಿಲ್ಲ... ಹಾಗಂತ ಸಂಪೂರ್ಣ ಒಪ್ಪಿಗೆಯೂ ಇರಲಿಲ್ಲ. ಮನೆಯಲ್ಲಿ ಮಡದಿಗೆ ಈ ಕಾರ್ಯಕ್ರಮದ ಬಗ್ಗೆ ತಿಳಿಸಿದಾಗ ಸಿಕ್ಕ ಪ್ರತಿಕ್ರಿಯೆಯಲ್ಲಿ ಅಸಮಾಧಾನದ ಹೊಗೆಯಾಡುತ್ತಿತ್ತು.. ಸಹಜವೇ.... ಕಾರ್ಯಕ್ರಮಕ್ಕೆ ಹೋಗುವಾಗ ಮನಸ್ಸು ಅರಳಿರಲಿಲ್ಲ. ಇದಕ್ಕೆ ಎರಡು ಕಾರಣ ಇರಬಹುದು  ಮೊದಲನೆಯದು ನಾನು ಹೋಗುತ್ತಿದ್ದದ್ದು ಕಾರ್ಯಕ್ರಮದ ಮುಖ್ಯಅತಿಥಿಯಾಗಿ...ಎರಡನೆಯದು ನನ್ನಾಕೆಯನ್ನು ಒಂಟಿಯಾಗಿ ಬಿಟ್ಟು ಬಂದ ಅಪರಾಧೀ ಭಾವ. Omkar Nagar residents welfare Association ಅವರ ವಾರ್ಷಿಕ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳುವಾಗ ಖುಷಿಯ ಅನುಭವ. ಮಕ್ಕಳಿಂದ ಹಿಡಿದು ಹಿರಿಯ ನಾಗರೀಕರ ತನಕ ಎಲ್ಲಾ ವಯಸ್ಸಿನ, ಬೇರೆ ಬೇರೆ ಭಾಷೆಯ ಜನರ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ಮುದ ...

ಮದುವೆಯ ಸಡಗರ - ಅಭಿಮಾನದ ಮಹಾಪೂರ

Image
ಈಗೀಗ ಮದುವೆಯ ಮನೆಯ ಸಮಾರಂಭಗಳು ವ್ಯವಹಾರಿಕವಾಗಿವೆ. ನಮ್ಮ ಪಾತ್ರ  / ಒಳಗೊಳ್ಳುವಿಕೆ ಇಲ್ಲವೇ ಇಲ್ಲ ಎನ್ನುವಷ್ಟು. ಪರಿಚಯದ ಕೆಲವರನ್ನು ಮಾತಾಡಿಸಿ ವಧೂವರರಿಗೆ ಕೈಕುಲುಕಿ ಊಟ ಮಾಡಿ ಬಂದರೆ ಮುಗಿಯಿತು. ಇನ್ನು ಕೆಲ ಕಡೆಗಳಲ್ಲಂತೂ ಜನಸಂದಣಿಯನ್ನು ಗಮನಿಸಿ ಮೊದಲು ಊಟ ಮಾಡಿ ನಂತರ ಕೈ ಕುಲುಕಿ ಬರುವುದೂ ಇದೆ. ಎಲ್ಲವೂ.... ಎಲ್ಲಕ್ಕೂ  event management ಕಡೆಯಿಂದ ತಯಾರಿ.   ಬಂದವರನ್ನು ಸತ್ಕರಿಸುವ ಯೋಚನೆಯೂ ಇಲ್ಲದಿರುವಷ್ಟು ಅನುಕೂಲಗಳು. ನಾವು ಚಿಕ್ಕವರಿದ್ದಾಗ ಮದುವೆ ಮನೆ ಅಂದರೆ ಕೈ ತುಂಬಾ ಕೆಲಸ. ಸಾಮಾನುಗಳು , ಪಾತ್ರೆ, ಸೌದೆ, ಆಮಂತ್ರಣ ಪತ್ರಿಕೆ ಹಂಚುವುದು, ಬಂದವರಿಗೆ ಆತಿಥ್ಯ , ಅಡಿಗೆ ಮಾಡುವವರಿಗೆ ಬೇಕಾದ ಸಾಮಾನುಗಳನ್ನು ಕೊಡುವುದು , ಕೆಲ  ಸಮಯದಲ್ಲಿ ಊಟಕ್ಕೆ ಬಡಿಸುವುದು ಸಹ ನಮ್ಮ ಮೇಲಿನ ಜವಾಬ್ದಾರಿಯಾಗಿತ್ತು. ಕೆಲಸದ ಮಧ್ಯಯೂ ಸಡಗರ ಸಂಭ್ರಮ ಇರುತ್ತಿತ್ತು... ಎಂಥಾ ಬದಲಾವಣೆ ಅಲ್ವಾ...  ಇದೆಲ್ಲಾ ನೆನಪಿಗೆ ಬರಲು ಕಾರಣ ಈಚೆಗೆ ನಾನು ಭೇಟಿ ನೀಡಿದ ಒಂದು ಮದುವೆ. ಇಂದಿನ ಮದುವೆಯಲ್ಲಿ ನನಗೆ ತಕ್ಕಮಟ್ಟಿಗೆ ಪರಿಚಯವಿದ್ದವರು ಮೂರೇ ಜನ, ಅದರಲ್ಲಿ ಒಬ್ಬಳು ಮದುಮಗಳು. ನಾನು ಮದುವೆ ಮನೆ ಪ್ರವೇಶಿಸುತ್ತಿದ್ದಂತೆ ತುಂಬಾ ಆತ್ಮೀಯತೆಯಿಂದ ಬರಮಾಡಿಕೊಂಡು ಸಂತೋಷವನ್ನು ವ್ಯಕ್ತಪಡಿಸಿದವರು ಇನ್ನಿಬ್ಬರು. ಅವರ ಪ್ರೀತಿ ಆದರಗಳು ಪರ್ವತದಷ್ಟು. ಈಚಿನ ದಿನಗಳಲ್ಲಿ ನಾನು ಕಂಡು ಕೇಳರಿಯದ ಆತ್ಮೀಯ ಭಾವ ಅ...

ಪುಸ್ತಕದ ಲೋಕಾರ್ಪಣೆ... ನನ್ನದೊಂದು ಚಿಂತನೆ

Image
  ನನಗೆ ಪುಸ್ತಕಗಳೆಂದರೆ ಇಷ್ಟ-- ಅದರಲ್ಲೂ ಎಸ್ ಎಲ್ ಭೈರಪ್ಪನವರು ಹಾಗೂ ಬೀchi ನನ್ನ ಪ್ರಿಯ ಲೇಖಕರು. ಪುಸ್ತಕ ಬಿಡುಗಡೆ/ ಲೋಕಾರ್ಪಣೆ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.. ನಾನು ಕೆಲ ಕಾರ್ಯಕ್ರಮಗಳಿಗೆ ಹೋಗಿದ್ದುಂಟು.. ಲೇಖಕರ ಬಗೆಗಿನ ಪ್ರೀತಿಗಾಗಿ, ಅಭಿಮಾನಿಯಾಗಿ, ಪ್ರೇಕ್ಷಕನಾಗಿ... ಆದರೆ ಪುಸ್ತಕವನ್ನು ಲೋಕಾರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡುವ ಒಂದು ಅವಕಾಶ ನೆನ್ನೆ ಭಾನುವಾರ ನನಗೆ ದೊರೆಯಿತು. ಅಶಕ್ತ ಪೋಷಕ ಸಭಾ ಬಳಗದ ಸಕ್ರಿಯ ಸದಸ್ಯೆ ಶ್ರೀಮತಿ ಸುಮಾ Y V ಅವರು ಬರೆದ ಪುಸ್ತಕ ” ಮಕ್ಕಳ ಮಾನಸ ಲೋಕ" ದ ಬಿಡುಗಡೆ ಕಾರ್ಯಕ್ರಮಕ್ಕೆ ಅವರ ಆಹ್ವಾನವನ್ನು ಕೊಂಚ ಮುಜುಗರದಿಂದಲೇ ಒಪ್ಪಿದೆ ( ಈ ಕೆಲಸಕ್ಕೆ ನನಗಿರುವ ಅರ್ಹತೆಯಾದರೂ ಏನು ಎಂಬ ಅನುಮಾನ ನನ್ನನ್ನು ಕಾಡಿದ್ದರಿಂದ). ಸಮಾಧಾನ ಆಪ್ತ ಸಲಹಾ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮವು ಡಾಕ್ಟರ್ C R ಚಂದ್ರ ಶೇಖರ್ ಅವರ ನೇತೃತ್ವದಲ್ಲಿ ನಡೆಯಿತು. ವಯಸ್ಸಿನಲ್ಲಿ ನಾನು ಅವರಿಗಿಂತ ಕೆಲ ದಿನಗಳು ದೊಡ್ಡವನಾದರೂ ಅವರ ಪಕ್ಕದಲ್ಲಿ ನಾನು ಕುಬ್ಜನೇ... ಆದರೂ ಅವರೊಂದಿಗೆ ಒಂದಷ್ಟು ಸಲಿಗೆ ಇದೆ. ಅವರ ಜೊತೆ ವೇದಿಕೆಯಲ್ಲಿ ಕುಳಿತಾಗಲೆಲ್ಲ ಒಂದು ತರಹದ ಹೆಮ್ಮೆಯನ್ನು ಪಟ್ಟದ್ದಿದೆ. ಕಾರ್ಯಕ್ರಮ ಚೆನ್ನಾಗಿ ನಡೆಯಿತು.. ನನಗೆ ವಹಿಸಿದ ಹೊಣೆಯನ್ನು  ನಿಭಾಯಿಸಿದೆ ಅಂತ ನನ್ನ ಅನಿಸಿಕೆ. ಕಾರ್ಯಕ್ರಮದ ನಂತರ ಊಟವನ್ನಂತೂ ಸರಿಯಾಗಿ ಮಾಡಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಇನ್...

ಮಕ್ಕಳ ಪ್ರತಿಭಾ ಪ್ರದರ್ಶನ - ಪೋಷಕರಿಗೆ ಸಂಭ್ರಮದ ಕ್ಷಣ

Image
  ಇದು ನೆನ್ನೆಯ ದಿನದ ಸಂಜೆಯ ನನ್ನ ಅನುಭವ, ಬನ್ನೇರುಘಟ್ಟ ರಸ್ತೆಯಲ್ಲಿರುವ ಸುದರ್ಶನ್ ವಿದ್ಯಾ ಮಂದಿರದ ಶಾಲೆಯ ಆವರಣವನ್ನು ಹೊಕ್ಕಾಗ ಆದದ್ದು. ಕಣ್ಣಳತೆಯಲ್ಲೆಲ್ಲ ಚಿಕ್ಕವಯಸ್ಸಿನ ಅಪ್ಪ ಅಮ್ಮಂದಿರು ಜೊತೆಗೆ ನಾವುಗಳು ಅಜ್ಜಿ ತಾತಂದಿರು. ಕೆಲ ಚಿಕ್ಕ ಮಕ್ಕಳು ಸಹ. ಕಾರಣ LKG, UKG ಮಕ್ಕಳ ವಾರ್ಷಿಕ ಪ್ರತಿಭಾ ಪ್ರದರ್ಶನ. ಎಲ್ಲರ ಸಡಗರ ಸಂಭ್ರಮ.  ನಾವು ಹೋದಾಗ ಮಕ್ಕಳನ್ನು  ಕರೆದು ತಂದು ವೇದಿಕೆಯ ಹತ್ತಿರ ಕೂಡಿಸುತ್ತಿದ್ದರು. ಮಕ್ಕಳ ಉತ್ಸಾಹ ಅದೆಷ್ಟೋ.... ಶಿಕ್ಷಕರ ಪರಿಶ್ರಮ ಮೆಚ್ಚುವಂಥದ್ದು. ನನ್ನ ಮೊಮ್ಮಗಳು ವಿಸ್ಮಯ ಸಹ ಒಂದು ನೃತ್ಯದಲ್ಲಿ ಭಾಗಿ ಹಾಗಾಗಿ ನಾವು ಸಹ ಅಲ್ಲಿ ಕಾತುರದಿಂದ ಇದ್ದ ಪ್ರೇಕ್ಷಕರು. ಯಾವ ಪೂರ್ವಾಗ್ರಹವು ಇಲ್ಲದ ಮುಗ್ಧ ಮನಸ್ಸಿನ ಮಕ್ಕಳು ವಿವಿಧ ವೇಷಭೂಷಣಗಳೊಂದಿಗೆ ವೇದಿಕೆಯ ಮೇಲೆ ಬಂದು ಅವರಿಗೆ ಕಲಿಸಿದಂತಹ ಭಾಗವನ್ನು ಅವರದೇ ರೀತಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದು ನೋಡಲು ಚಂದ. ಮಕ್ಕಳು ಹೇಗೆ ಹಾಡಿದರೂ ಕುಣಿದರೂ ಚಂದ.. ಅದರಲ್ಲೂ ನಮ್ಮ ಮಕ್ಕಳು ಕುಣಿದರಂತೂ ಇನ್ನೂ ಚೆಂದ.....ಪ್ರೇಕ್ಷಕರ ಚಪ್ಪಾಳೆ.. ಮಕ್ಕಳ  ಈ ಪ್ರದರ್ಶನಕ್ಕೆ ಶಿಕ್ಷಕರ ಪ್ರಯತ್ನ ಹೇಳಲಾಗದು. ಅವರವರ ಮಕ್ಕಳು  ವೇದಿಕೆಯ ಮೇಲೆ ಬಂದಾಗ ಅವರ ಅಪ್ಪ ಅಮ್ಮ ಅಜ್ಜಿ ತಾತಂದಿರ ಸಂಭ್ರಮ ಹೇಳತೀರದು. ಈಗಿನ ಮೊಬೈಲ್ ಫೋನ್ ಯುಗದಲ್ಲಿ ಎಲ್ಲರೂ ಫೋಟೋ ತೆಗೆಯುವವರೆ ವಿಡಿಯೋ ಮಾಡುವವರೇ.. (ಮಾಡಬಾರದೆಂಬ ಸೂಚನೆ ಮತ್ತು ವಿ...

ಎಂದರೋ ಮಹಾನು ಭಾವುಲು... ಮೊದಲಕ್ಷರ ಕಲಿಸಿದ ನಂಜುಂಡಯ್ಯ ಮೇಷ್ಟ್ರು.

ಎಂದರೋ ಮಹಾನು ಭಾವುಲು... ಅಂದರಿಕಿ ವಂದನಮುಲು... ಇದು ನಾನು ಹೈಸ್ಕೂಲಿನಲ್ಲಿ ಓದುತಿದ್ದಾಗಿನಿಂದ ಕೇಳಿದ ಹಾಡು. ಆಗ ನನಗದು ತ್ಯಾಗರಾಜರ ಪಂಚರತ್ನ ಕೃತಿ ಎಂದಾಗಲಿ ಅದರ ಅರ್ಥವಾಗಲಿ ತಿಳಿಯದು. ಆದರೆ ಹಾಡು ಮಾತ್ರ ನನಗೆ ತುಂಬ ಪ್ರಿಯ. ಮಾವಳ್ಳಿಯಲ್ಲಿ ಚಂದ್ರ ಕಲಾವಿದರು (ನನ್ನಣ್ಣಂದಿರು ಚೂಡಣ್ಣ, ಕಿಟ್ಟಣ್ಣ ಅದರ ಸಕ್ರಿಯ ಸದಸ್ಯರು) ನಡೆಸುತ್ತಿದ್ದ ತ್ಯಾಗರಾಜ ಆರಾಧನೆಯ ಸಮಯದಲ್ಲಿ ಕೇಳಿದ್ದು. ಈಗ ನನ್ನ ಸಂಗೀತದ ಭಾಗವಾಗಿ ಈ ಹಾಡು ಮತ್ತಷ್ಟು ಹೃದಯಕ್ಕೆ ಹತ್ತಿರವಾಗಿದೆ.. ಹಾಗೂ ನನ್ನ ಜೀವನದ ಹಾದಿಯಲ್ಲಿ ಪ್ರಭಾವ ಬೀರಿದ ಮಹಾನುಭಾವರುಗಳನ್ನು ನೆನಪಿಸಿಕೊಳ್ಳಲು ಸ್ಪೂರ್ತಿ ನೀಡಿದೆ. ನನ್ನ ಈಗಿನ ವ್ಯಕ್ತಿ ಚಿತ್ರವನ್ನು ರೂಪಿಸಲು ಬಹಳಷ್ಟು ಮಹಾನುಭಾವರುಗಳು ಗೆರೆಗಳನ್ನು ಎಳೆದು ಬಣ್ಣಗಳನ್ನು ತುಂಬಿದ್ದಾರೆ. "ಕಲಿಸಿದಾತಂ ವರ್ಣಮಾತ್ರಂ ಗುರು" ಈ ಲೋಕೋಕ್ತಿಯಂತೆ ನನಗೆ ಮೊದಲ ಅಕ್ಷರಗಳನ್ನು ಕಲಿಸಿದ ಗುರುಗಳಿಗೆ ನನ್ನ ಭಕ್ತಿಪೂರ್ವಕ ನಮನ. ಹೀಗಿದೆ  ನನಗೆ ಅ ಆ ಇ ಈ ಕಲಿಸಿದ ನಂಜುಂಡಯ್ಯ ಮೇಷ್ಟರ ನೆನಪು. ನಂಜುಂಡಯ್ಯ ಮೇಷ್ಟ್ರು ಅಂದರೆ ಬಿಳಿಯ ಕಚ್ಚೆ ಪಂಚೆ, ಬಿಳಿಯ ಶರ್ಟು ಕಂದು ಬಣ್ಣದ ಕೋಟು ಕರಿಯ ಟೋಪಿ ಕಾಲಿಗೆ ಚಪ್ಪಲಿ ಇದು ಮನದಲ್ಲಿ ಅಚ್ಚು ಮೂಡಿದ ಚಿತ್ರಣ. ಮುಖದ ನೆನಪು ಮಾತ್ರ ಇಲ್ಲ.  ಹಳ್ಳಿಯಲ್ಲಿ ಮಕ್ಕಳು ಮನೆಯಲ್ಲಿ ತುಂಬಾ ಚೇಷ್ಟೆ ಮಾಡುತ್ತಾರೆ ಅಂದರೆ ಅವರನ್ನು ಶಾಲೆಗೆ ಕಳಿಸುವುದು ಒಂದು ಸಂಪ್ರದಾಯವೇ ಆಗಿತ್ತು. ನನ್ನನ್ನು...

ಇನ್ನೊಂದು ಕೊಂಡಿ ಕಳಚಿತು...

Image
  ಡಿ.ಸಿ.ಚಂದ್ರಚೂಡ ರಾವ್ ಹುಟ್ಟಿದವರು ಸಾಯಲೇಬೇಕು ಎನ್ನುವ ಮಾತು ಸಹಜವಾದರೂ ಕ್ಲೀಷೆ ಏನೋ ಅನಿಸುತ್ತೆ. ನಮ್ಮ ಆತ್ಮೀಯರ ಸಾವು ಹಾಗೂ ಆ ಸಂದರ್ಭದಲ್ಲಿ ಸಾಮಾನ್ಯವಾಗಿ ಎಲ್ಲರೂ ಆಡುವ ಸಾಂತ್ವನದ ಮಾತು, ನೆನ್ನೆ ನನ್ನ ದೊಡ್ಡಣ್ಣ- ಚೂಡಣ್ಣ ನಮ್ಮನ್ನಗಲಿದ ದಿನವೂ ಕೇಳಿ ಬಂತು. ನಾವು ಏಳು ಜನ ಅಣ್ಣ ತಮ್ಮಂದಿರು ಅಕ್ಕತಂಗಿಯರ ಗುಂಪಿನಿಂದ ನನ್ನಕ್ಕ ಸತ್ಯಲಕ್ಷಮ್ಮ ಈಗಾಗಲೇ ನಮ್ಮಿಂದ ದೂರವಾಗಿದ್ದಳು . ಈಗ ನನ್ನಣ್ಣನ ಸಾವಿನಿಂದ ನಮ್ಮ ಏಳು ಜನದ ಕೊಂಡಿಯಲ್ಲಿ ಮತ್ತೊಂದು ಕೊಂಡಿ ಕಳಚಿದಂತಾಯಿತು. ಚೂಡಣ್ಣ ನನ್ನ ಚಿಕ್ಕಂದಿನಿಂದಲೂ ಒಂದು ಬಗೆಯ ಮಾರ್ಗದರ್ಶಿ. ನನ್ನ ಹೆಸರನ್ನು ಇಂಗ್ಲಿಷ್ ನಲ್ಲಿ ಬರೆಯಲು ಹೇಳಿಕೊಟ್ಟವನು. ನಾನು ಹೈ ಸ್ಕೂಲ್ ಸೇರಲು ಬೆಂಗಳೂರಿಗೆ ಬಂದಾಗ ನನ್ನನ್ನು ರಾಷ್ಟ್ರೀಯ ವಿದ್ಯಾಲಯಕ್ಕೆ ಕರೆದುಕೊಂಡು ಹೋಗಿ ಸೇರಿಸಿದವನು. ಲಾಲ್ ಬಾಗ್ ತೋರಿಸಿದವನು. ನಮ್ಮೂರು ದೊಡ್ಡಜಾಲಕ್ಕೆ ಸೈಕಲ್ ನಲ್ಲಿ ಹೋಗಲು ಸಮ್ಮತಿಸಿ ಹೋಗುವ ದಾರಿಯನ್ನು ಬರೆದುಕೊಟ್ಟು ಪ್ರೋತ್ಸಾಹಿಸಿದವನು.  ಹಳ್ಳಿಯಲ್ಲಿದ್ದಾಗ ದೀಪಾವಳಿಗೆ ಪಟಾಕಿ ತಂದುಕೊಟ್ಟವನು. ಹೈಸ್ಕೂಲ್ ಹುಡುಗನಿದ್ದಾಗಿನಿಂದಲೂ ಯಾವುದೇ ಫಾರಂ ತುಂಬಿಸುವಾಗ ನನಗೇ ತುಂಬಲು ಹೇಳಿ ಪ್ರೋತ್ಸಾಹಿಸಿದವನು. ನಾನು ನೋಡಿದ ಮೊದಲ ಹಿಂದಿ ಚಿತ್ರ ಕಾಲಾಬಜಾರ್.. ಅಲಂಕಾರ್ ಸಿನಿಮಾ ಥಿಯೇಟರ್ ನಲ್ಲಿ ತೋರಿಸಿದವನು , ಹೀಗೇ ಇನ್ನೂ ಅನೇಕ ರೀತಿಯಲ್ಲಿ ಹುರಿದುಂಬಿಸಿದವನು... ಏಳು ಗಂಟೆಗೆಲ್ಲ ಮಲಗುತ್ತೇನೆಂ...

ಕನ್ನಡಿ ಸುಳ್ಳು ಹೇಳಿತೇ?

" ತಾತ ಒಂದು, ಮೂರು ಆಡೋಣ ಬಾ" ಅಂತ ನನ್ನ ಮೊಮ್ಮಗಳು ಕಣ್ಣಾ ಮುಚ್ಚಾಲೆ ಆಟಕ್ಕೆ ಕರೆದಾಗ  ಬೇಡ ಅನ್ನುವ ಪ್ರಮೇಯವೇ ಇಲ್ಲ. ಆ ಉತ್ಸಾಹದ ಚಿಲುಮೆಯ ಜೊತೆ ಕಾಲ ಕಳೆಯುವುದು ನನಗಿಷ್ಟ. ಅವಳ ಜೊತೆ ಎಲ್ಲಾ ಆಟಗಳನ್ನು ಆಡಿದರೂ... ಕೆಲಸ ಸಮಯ ಅವಳ ಕುಣಿತಕ್ಕೆ , ಓಟಕ್ಕೆ, ಆಟಕ್ಕೆ ಸರಿಸಮನಾಗಿ ನಿಲ್ಲುವುದು ಕಷ್ಟ. ಆಗ ಮೆತ್ತಗೆ ಜಾರಿಕೊಂಡದ್ದು ಇದೆ. ನಮ್ಮ ದೊಡ್ಡ ಕುಟುಂಬದ ಮಕ್ಕಳು ಮೊಮ್ಮಕ್ಕಳು ಹಾಗೂ ಸೊಸೆಯಂದಿರ ಜೊತೆ ಕಾಲ ಕಳೆಯುವ ಸಮಯ ತುಂಬ ಸೊಗಸು. ಹಾಗೆಯೇ ಅವರುಗಳೂ ಸಹ ನನ್ನ ಜೊತೆ ಗೌರವಪೂರ್ವಕ ಸಲುಗೆಯಿಂದ ನಮ್ಮನ್ನು ಕೀಟಲೇ ಮಾಡುವುದೂ ಸಹ ಮುದ ಕೊಡುವ ವಿಚಾರ. ಇದು ನಮ್ಮ ಹತ್ತಿರದ ನೆಂಟರಿಷ್ಟರ ಮಕ್ಕಳಿಗೂ ಅನ್ವಯಿಸುತ್ತದೆ. ಅವರುಗಳು ನನ್ನ ಜೊತೆ ಸಮಯ ಕಳೆಯಲು ಇಷ್ಟಪಡುತ್ತಾರೆ ಎನ್ನುವುದು ನನಗೆ ಹೆಮ್ಮೆಯೇ... ಇಂಥ ಸಮಯಗಳಲ್ಲಿ ನನ್ನ ಹೆಂಡತಿ ನನಗೆ ಹೇಳುವ ಮಾತು " ನಿಮಗೆ ವಯಸ್ಸಾಗಿದೆ ಅಷ್ಟೇ..." ಬುದ್ಧಿ ಬಂದಿಲ್ಲ ಅನ್ನುವ ಮಾತನ್ನು ಇಲ್ಲಿಯತನಕ ಹೇಳಿಲ್ಲ ಅಷ್ಟೇ. ಇದು ಕೆಲಸಲ ಆರೋಪ, ಮೂದಲಿಕೆ ಅನಿಸಿದರೆ ಕೆಲಸಲ ಮೆಚ್ಚುಗೆಯೂ ಇರಬಹುದೇನೋ ಅನಿಸಿದೆ. ಇನ್ನೊಂದು ಮುಖ... ನಿಮ್ಹಾನ್ಸ್ ನ ಒಂದು ಅಂಗವಾದ "ವಯೋಮಾನಸ ಸಂಜೀವಿನಿ"  ಹಿರಿಯ ನಾಗರಿಕರಿಗಾಗಿ ಕೆಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಒಂದು ಸಂಘಟನೆ. ಇದರಲ್ಲಿ ನಾನು ಸಹ ಕೆಲ ಚಟುವಟಿಕೆಗಳಲ್ಲಿ ಭಾಗವಹಿಸುತ್ತೇನೆ. ಅಲ್ಲಿ ಮೂಡಿ ಬರುವ ಅ...

ಯೋಗಾ ಯೋಗ - Narrow gauge train ಇಂದ ವಿಮಾನಯಾನದ ವರೆಗೆ

Image
30 Dec 2022  2022ರ ಕೊನೆಯ ವಾರ ಒಂದು ವಿಶಿಷ್ಟ ಅನುಭವ. 33 ಜನರೊಡನೆ... ಅದರಲ್ಲೂ ಅಕ್ಕತಂಗಿಯರು ಅಣ್ಣ ತಮ್ಮಂದಿರು ಮತ್ತು ಅವರ ಮಕ್ಕಳು ಮೊಮ್ಮಕ್ಕಳೊಡನೆ ವಿಮಾನಯಾನ. ಸಂದರ್ಭ ನಮ್ಮಪ್ಪನ ಹಿರಿಯ ಮೊಮ್ಮಗ ರವಿ ಹಾಗೂ ವಿನುತಾ ದಂಪತಿಯ ಮೊದಲ ಮಗಳ ಮದುವೆಯ ನಿಶ್ಚಿತಾರ್ಥ ದೂರದ ಕಲ್ಬುರ್ಗಿಯಲ್ಲಿ. ಮೈಸೂರಿನ ಹುಡುಗಿ... ಕಲ್ಬುರ್ಗಿಯ ಹುಡುಗ.. ಇದೇ ಅಲ್ಲವೇ ಋಣಾನುಬಂಧ. ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತ ಣಿಂದೆತ್ತ ಸಂಬಂಧವಯ್ಯಾ.. ಎಷ್ಟು ಸತ್ಯ ಅಲ್ಲವಾ? ಮೂರು ದಿನದ ನಮ್ಮ ಕಾರ್ಯಕ್ರಮ ವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದವರು ರವಿ ವಿನುತಾ ದಂಪತಿ.... ಅತ್ತ ಕಲ್ಬುರ್ಗಿಯ ಶ್ರೀಮತಿ ಆರತಿ ಹಾಗೂ ಡಾಕ್ಟರ್ ಅರುಣ್ ಕುಮಾರ್ ಕುಲಕರ್ಣಿ ದಂಪತಿಗಳ ಆದರ ಆತಿಥ್ಯವು ಕಲ್ಬುರ್ಗಿಯ ಬಿಸಿಲಿನ ನಡುವೆಯೂ ನಮ್ಮನ್ನು ತಂಪಾಗಿರಿಸಿತ್ತು. ಇಷ್ಟು ದೊಡ್ಡ ನಮ್ಮವರ ಗುಂಪಿನಲ್ಲಿ ಪ್ರಯಾಣ ಮಾಡಿದ ಅನುಭವ ಬಹು ವರ್ಷಗಳ ನಂತರ ಸಿಕ್ಕಿತ್ತು. ಕಾರ್ಯಕ್ರಮ ಮುಗಿದು ನೆನ್ನೆ ಬೆಂಗಳೂರಿಗೆ ಬಂದೆವು... ವಿಮಾನ ನಿಲ್ದಾಣದಿಂದ ನಾನು ಮತ್ತು ನನ್ನಾಕೆ ವಿಜಯ, ನಮ್ಮ ಮನೆಗೆ ಬರುವ ಹಾದಿಯಲ್ಲಿ ಮತ್ತೆ ಸಿಕ್ಕಿದ್ದು ನನ್ನೂರು, ನಾ ಹುಟ್ಟಿದ ಊರು ದೊಡ್ಡ ಜಾಲ. ಈ ಸಲ ಸಮಯ ನನ್ನ ಪರವಾಗಿತ್ತು.. ಜೊತೆಯಲ್ಲಿದ್ದ taxi driver ಸಹ ನನ್ನ ಪರವಾಗಿದ್ದ,  ಹಾಗಾಗಿ ನನ್ನೂರಿನಲ್ಲಿ ಸಮಯ ಕಳೆಯುವ ಒಂದು ಅವಕಾಶ ಸಿಕ್ಕಿತ್ತು.  ಕೆಲ ಬೀದಿಗಳಲ್ಲಿ ಓಡಾಡಿ ಹಳೆಯ ...

ಪ್ರಕೃತಿಯ ಕೋಪ - ಮನುಷ್ಯನಿಗೆ ಶಾಪ

 ಪ್ರಕೃತಿಯ ಕೋಪ - ಮನುಷ್ಯನಿಗೆ ಶಾಪ ಈ ಕೆಳಗಿರುವ ವಿಡಿಯೋ ಲಿಂಕ್ ಅನ್ನು ಓಪನ್ ಮಾಡಿ ನೋಡಿ. ಇದು ವಾಟ್ಸಪ್ ಮೂಲಕ ಬಂದ ಒಂದು ವಿಡಿಯೋ ತುಣುಕು. https://drive.google.com/file/d/19oncxtl8jndBDDrjkXBbzYss06nW-kxD/view?usp=drivesdk     ಇದು ಇಂಡೋನೇಷ್ಯಾದಲ್ಲಿ ಆದ ಭೂಕಂಪವನ್ನು ಸ್ಯಾಟಿಲೈಟ್ ಮೂಲಕ ತೆಗೆದ ಚಿತ್ರಣ. ಇದರಲ್ಲಿ ಸಾಲು ಸಾಲು ಮನೆಗಳು ಕೊಚ್ಚಿಕೊಂಡು ಹೋಗುವ ದೃಶ್ಯ ಮನ ಕಲಕುವಂತಿದೆ. ವಿಡಿಯೋ ಚಿತ್ರಣ ತುಂಬಾ ಸ್ಪಷ್ಟವಾಗಿ ಕಾಣುತ್ತದೆ. ಇಲ್ಲಿ ನನಗೆ ಕಂಡದ್ದು ಪ್ರಕೃತಿಯ ಕೋಪದ ಒಂದು ಮುಖ ಹಾಗೂ ಮನುಷ್ಯನು ಸಾಧಿಸಿರುವ ಟೆಕ್ನಾಲಜಿಯ ಆವಿಷ್ಕಾರದ ಇನ್ನೊಂದು ಮುಖ. ವಿಪರ್ಯಾಸ ಎಂದರೆ ಈ ಪ್ರಕೃತಿಯ ಕೋಪಕ್ಕೆ ಕಾರಣ ಬಹುತೇಕ ಮನುಷ್ಯನ ದುರಾಸೆ... ಹಾಗೂ ಅವನು ಪ್ರಕೃತಿಯ ಮೇಲೆ ಮಾಡುತ್ತಿರುವ ಹಲ್ಲೆ.. ಹಾಗೆ ಮನುಷ್ಯನು ತನ್ನ ಜ್ಞಾನ/ ವಿಜ್ಞಾನ ಬೆಳವಣಿಗೆಯ ಸಹಾಯದಿಂದ ತನ್ನಿಂದಾದ ಅನಾಹುತವನ್ನು ತಾನೇ ಚಿತ್ರಣ ಮಾಡಿ ಜಗತ್ತಿಗೆ ತೋರಿಸುತ್ತಿರುವ ಪರಿ. ಮನುಷ್ಯನ ಜೀವನವು ಒಂದಲ್ಲ ಒಂದು ರೀತಿಯಲ್ಲಿ ಪ್ರಕೃತಿಯ ಜೊತೆಗೆ ಬೆಸೆದುಕೊಂಡಿದೆ. ನೀರು, ಗಾಳಿ, ಕಾಡುಗಳು, ಭೂಗರ್ಭದಲ್ಲಿರುವ ಖನಿಜಗಳು, ಇವೆಲ್ಲವೂ ಮನುಷ್ಯನ ಬೆಳವಣಿಗೆಗೆ ಪೂರಕವಾಗಿವೆ. ಮನುಷ್ಯ ಇದನ್ನು ಅತಿಯಾಗಿ ಬಳಸಿ ಸಮತೋಲನವನ್ನು ಹಾಳು ಮಾಡಿ ತನ್ನ ನಾಶಕ್ಕೆ ತಾನೇ ಕಾರಣನಾಗುತ್ತಿದ್ದಾನೆ. ಕಾಡನ್ನು ಕಡಿದು ನಾಡನ್ನು ಮಾಡುವ ಕೆಲಸ ಇಂದು ನೆನ...