ಇನ್ನೊಂದು ಪಯಣ - ಬೇರೆಯೇ ದಿಕ್ಕು

 


ಈ ಭಾನುವಾರ ಡಾ ಸಿ ಆರ್ ಚಂದ್ರಶೇಖರ್ ಅವರು ಬರೆದ " ನಾನು ಕಂಡ ನಾಡಿನ ನಕ್ಷತ್ರಗಳು" ಪುಸ್ತಕದ ಬಿಡುಗಡೆ ಸಮಾರಂಭ ನ್ಯಾಷನಲ್ ಕಾಲೇಜ್ ಸಭಾಂಗಣದಲ್ಲಿ ನಡೆಯಿತು.  ನಾನು ಓದಿದ ಕಾಲೇಜಿನ ಆವರಣಕ್ಕೆ ಹೊಕ್ಕಾಗ ಅಲ್ಲಾಗಿದ್ದ ಬದಲಾವಣೆಗಳು, ಕಣ್ಣಿಗೆ ಬಿದ್ದ ಹಳೆಯ ಕುರುಹುಗಳು ಮನಸ್ಸನ್ನು ಪುಳಕಗೊಳಿಸಿತು.

ಕಾರ್ಯಕ್ರಮದಲ್ಲಿ ಸಾಕಷ್ಟು ಮಂದಿ ಹಳೆಯ ಮುಖಗಳ ಭೇಟಿ ಉಭಯಕುಶಲಾಪರಿ ಆಯಿತು. ಈ ಮಧ್ಯೆ ರಾಜೇಶ್ವರಿ (ನನ್ನನ್ನು ಅಪ್ಪ ಎಂದು ಅಭಿಮಾನದಿಂದ ಸಂಭೋಧಿಸುವ ಹೆಣ್ಣು  ಮಗಳು) ಕೊಟ್ಟ ಆಹ್ವಾನ ಹಾಗೂ ಅದರ ಹಿಂದಿರುವ ಕಾರಣವನ್ನು ತಿಳಿದಾಗ ಆಗದು ಎನ್ನುವ ಮನಸ್ಸು ಬರಲಿಲ್ಲ... ಹಾಗಂತ ಸಂಪೂರ್ಣ ಒಪ್ಪಿಗೆಯೂ ಇರಲಿಲ್ಲ.

ಮನೆಯಲ್ಲಿ ಮಡದಿಗೆ ಈ ಕಾರ್ಯಕ್ರಮದ ಬಗ್ಗೆ ತಿಳಿಸಿದಾಗ ಸಿಕ್ಕ ಪ್ರತಿಕ್ರಿಯೆಯಲ್ಲಿ ಅಸಮಾಧಾನದ ಹೊಗೆಯಾಡುತ್ತಿತ್ತು.. ಸಹಜವೇ....

ಕಾರ್ಯಕ್ರಮಕ್ಕೆ ಹೋಗುವಾಗ ಮನಸ್ಸು ಅರಳಿರಲಿಲ್ಲ. ಇದಕ್ಕೆ ಎರಡು ಕಾರಣ ಇರಬಹುದು 

ಮೊದಲನೆಯದು ನಾನು ಹೋಗುತ್ತಿದ್ದದ್ದು ಕಾರ್ಯಕ್ರಮದ ಮುಖ್ಯಅತಿಥಿಯಾಗಿ...ಎರಡನೆಯದು ನನ್ನಾಕೆಯನ್ನು ಒಂಟಿಯಾಗಿ ಬಿಟ್ಟು ಬಂದ ಅಪರಾಧೀ ಭಾವ.

Omkar Nagar residents welfare Association ಅವರ ವಾರ್ಷಿಕ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳುವಾಗ ಖುಷಿಯ ಅನುಭವ. ಮಕ್ಕಳಿಂದ ಹಿಡಿದು ಹಿರಿಯ ನಾಗರೀಕರ ತನಕ ಎಲ್ಲಾ ವಯಸ್ಸಿನ, ಬೇರೆ ಬೇರೆ ಭಾಷೆಯ ಜನರ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ಮುದ ನೀಡಿದವು. ಆಟೋಟ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಹಾಗೂ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಎಲ್ಲಾ ಅಚ್ಚುಕಟ್ಟಾಗಿ ನಡೆಯಿತು.

ನಾನು ಆಡಿದ ಮಾತುಗಳ ಬಗ್ಗೆ ಕಾರ್ಯಕ್ರಮದ ನಂತರ ಒಂದೆರಡು ಮೆಚ್ಚುಗೆಯ ಮಾತೂ ಕೇಳಿ  ಬಂತು.

ಊಟವನ್ನು ನಯವಾಗಿ ತಿರಸ್ಕರಿಸಿ, ಕೊಟ್ಟ ಸಿಹಿಯನ್ನು ತಿಂದು ಮನೆಗೆ ಹೊರಟೆ. ಪ್ರಯಾಣದ ಸಮಯದಲ್ಲಿ ಯೋಚನೆಗಳು ತೂರಿ ಬರುತ್ತಿದ್ದವು. ಗೊಂದಲವೂ ಇತ್ತು.  ಈ ಮಧ್ಯೆ ಕಿವಿಗೆ ಬಿದ್ದ ಹಾಡು..

“ಇರಬೇಕು ಇರುವಂತೆ ಮರೆತು ಸಾವಿರ ಚಿಂತೆ ಮಳೆ ಸುರಿಸಿ ಹಗುರಾದ ಮುಗಿಲಿನಂತೆ“ ಡಾಕ್ಟರ್ ಎಚ್ ಎಸ್ ವಿ ಅವರ ಕವನ.

ಸಾಮಾನ್ಯವಾಗಿ ನನಗೆ ಜನಗಳ ಜೊತೆ ಬೆರೆತು ನಗುನಗುತ್ತಾ ಹರಟೆ ಹೊಡೆಯುತ್ತಾ ಸಂತೋಷವಾಗಿ ಕಾಲ ಕಳೆಯುವುದು ಬಹು ಇಷ್ಟದ ಹವ್ಯಾಸ.

ನಾನು ನನ್ನ ಜೀವನದ ಕೊನೆಯ ಘಟ್ಟದಲ್ಲಿದ್ದೇನೆ,.

 ಜೀವನದ ಬಹುಭಾಗ ಹೊಟ್ಟೆ ಬಟ್ಟೆಗಾಗಿ ಕೆಲಸ ಮಾಡಿದ್ದಾಯ್ತು, ಇನ್ನು ನಮಗೆ ಮುದ ಕೊಡುವ ಕೆಲಸಗಳನ್ನು ಮಾಡಬೇಕು ಎಂದು ಹಿರಿಯ ನಾಗರೀಕರ ಗುಂಪುಗಳಲ್ಲಿ ಪ್ರತಿಪಾದಿಸುವವನು ನಾನು. ಆದರೆ ನಿಜ ಜೀವನದಲ್ಲಿ ಹಾಗಿರಲು ಅಷ್ಟು ಸುಲಭವಲ್ಲ ಯಾಕೆಂದರೆ ನಮಗೆ ನಮ್ಮ ಸಂಗಾತಿಯ ಜೊತೆಗಿರುವ ಜವಾಬ್ದಾರಿಯೂ ಇದೆ. 

" ವಯಸ್ಸಾದ ಮೇಲೆ ಜೊತೆಯಲ್ಲಿರಬೇಕು....." ಎಂದು ಕೇಳಿದ ಮಧ್ಯಾಹ್ನದ ಮಾತು ಕಿವಿಯಲ್ಲಿ ರಿಂಗಣಿಸಿತು... ಈ ಮಾತು ಸಹ ಸಂಪೂರ್ಣ ಸರಿ ಆಕೆಯ ದೃಷ್ಟಿಯಿಂದ ನೋಡಿದಾಗ....

 ಅದೇನೋ ಕಾಣೆ ಈಗೀಗ ನನಗೆ ಇಂತಹ ಅವಕಾಶಗಳು ಕೂಡಿ ಬರುತ್ತಿದೆ.. ಬಿಡಲೂ ಮನಸ್ಸಿಲ್ಲ  .. ಒಪ್ಪಿಕೊಳ್ಳಲು ಕಷ್ಟ.

ಈ ದ್ವಂದ್ವವನ್ನು ಕಡೆಗಾಣಿಸುವ , ಜೀವನದ ಸಮತೋಲನವನ್ನು ಕಾಯ್ದುಕೊಳ್ಳುವ ಶಕ್ತಿ ಮತ್ತು ಮನಸ್ಥಿತಿಯನ್ನು ಕೊಡು ಎಂದು ದೇವರನ್ನು ಕೇಳಲೇ?


Comments

  1. Nimma mathugalannu kelalu Mudavagittu sir.. Thank you for your time

    ReplyDelete
  2. ದ್ವಂದ್ವ ಸಹಜವೇ ಸರ್ ಆದರೆ ಇಂತಹ ಒಂದೆರಡು ಕಾರ್ಯಕ್ರಮಗಳು ಮತ್ತೆ ಜೀವನೋತ್ಸಾಹವನ್ನು ಮರಳಿಸುತ್ತವೆ,

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ