ಬಲು ಅಪರೂಪ ನಮ್ ಜೋಡಿ.....
ಫೆಬ್ರವರಿ 28ನೆಯ ತಾರೀಕು ನನ್ನ ಮದುವೆಯಾದ ದಿನ. ಇದು 44 ವರ್ಷಗಳ ಹಿಂದಿನ ಮಾತು. ಆದರೆ ನಾವು ಮದುವೆಯ ದಿನವನ್ನು ಆಚರಿಸುವುದು ಈ ತಾರೀಖಿನಲ್ಲಲ್ಲ... ಆದರೆ ನಮ್ಮ ಪಂಚಾಂಗದ ತಿಥಿಯ ಪ್ರಕಾರ ಅಂದರೆ ಪಾಲ್ಗುಣ ಮಾಸ ಶುಕ್ಲ ಪಕ್ಷ ಬಿದಿಗೆ. ಇದು ಹೋದ ಬುಧವಾರವೇ ಆಯಿತು. ಈಗಿನ ಸಾಮಾಜಿಕ ಜಾಲತಾಣದ ಪ್ರಭಾವದಲ್ಲಿ ನಮಗೆ ಶುಭಾಶಯಗಳನ್ನು ಹೇಳುವವರ ಸಂಖ್ಯೆ ಜಾಸ್ತಿಯಾಗಿದೆ.
ಆದರೆ ಈ ಶುಭಾಶಯಗಳು ವಿನಿಮಯ ಮಾಡಿಕೊಳ್ಳುವ ಇನ್ನೊಂದು ದಂಪತಿ ಇದೆ... ನಾವಿಬ್ಬರೂ ಪರಸ್ಪರ thank you and same to you ಅಂತ ಹೇಳಿಕೊಳ್ಳುವ ವರು.
( ಈಗ ನಮ್ಮ ಜೊತೆಗೆ ಇನ್ನೊಂದು ಹೊಚ್ಚ ಹೊಸ ಜೋಡಿ ಸೇರಿಕೊಂಡಿದೆ ಅದು ಸಾರ್ಥಕ ಮತ್ತು ಸುಪ್ರಿಯ.. ಈ ಜೋಡಿ ವಿಶೇಷತೆಯಿಂದ ಹೊರತು)
ನಮ್ಮ ಜೋಡಿಗಳಲ್ಲಿ ಅಪರೂಪದ ವಿಶೇಷತೆ ಇದೆ ಅದನ್ನು
" ಕಾಕತಾಳಿಯ ಸಮಾನತೆಗಳು" ಎಂದರೂ ಸರಿಯೇ.
ನಾನು DC ರಂಗನಾಥ ರಾವ್ ( DCರಂಗ) , ನನ್ನ ಗೆಳೆಯ HP ರಂಗನಾಥ (HP ರಂಗ) ಇನ್ನು ನನ್ನ ಮಡದಿಯ ಹೆಸರು H K ವಿಜಯ,(ವಿಜಿ) ನನ್ನ ಗೆಳೆಯನ ಮಡದಿಯ ಹೆಸರೂ ವಿಜಯ ..G ವಿಜಯ (ಜಿವಿಜಿ) ಇಲ್ಲಿಂದ ಶುರು ನಮ್ಮ ದಂಪತಿಗಳ ಸಮಾನತೆಗಳು.
ಅನುಕೂಲಕ್ಕಾಗಿ ನಾನು ಹಾಗೂ ನನ್ನ ಗೆಳೆಯನನ್ನು
" ನಾವಿಬ್ಬರು" ಎಂದು ಹೇಳುತ್ತೇನೆ... ನಮ್ಮ ಮಡದಿಯರನ್ನು " ಅವರಿಬ್ಬರು" ಎಂದು ಸಂಭೋಧಿಸುತ್ತೇನೆ.
ನಾವಿಬ್ಬರೂ ಹುಟ್ಟಿದ್ದು ಒಂದೇ ವರ್ಷದಲ್ಲಿ, ಒಂದೇ ಓದು, (DME) ಸಹಪಾಠಿಗಳು, ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡಿದವರು (ACC-Shahabad), ಅಲ್ಲಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದವರು.
ಅವರಿಬ್ಬರೂ ಸಮವಯಸ್ಕರು, ಒಂದೇ ಓದು,(BA, BEd ) ಸಹಪಾಠಿಗಳು.
ಇನ್ನು ನಾವಿಬ್ಬರೂ ಮುಂದಿನ ಜೀವನದ ವೃತ್ತಿಯಲ್ಲಿ ಸಮಾನರು (business) ಅವರಿಬ್ಬರೂ ವೃತ್ತಿಯಲ್ಲಿ ಕನ್ನಡ ಅಧ್ಯಾಪಕರು.
ನಮ್ಮಿಬ್ಬರ ಅಮ್ಮಂದಿರ ಹೆಸರು ಒಂದೇ ಅದು ಲಕ್ಷ್ಮೀದೇವಮ್ಮ... ಹಾಗೇ ಅವರಿಬ್ಬರ ಅಮ್ಮಂದಿರ ಹೆಸರು ಒಂದೇ ಅದು ಭಾಗಿರಥಮ್ಮ...
ನಾವಿಬ್ಬರೂ ಅಮ್ಮಂದಿರನ್ನು ಕಳೆದುಕೊಂಡ ವರ್ಷ 1986.
ನಾವಿಬ್ಬರೂ ನಮ್ಮ ಮನೆಯಲ್ಲಿ ಕೊನೆಯವರು. ಹಾಗಾಗಿ ಅವರಿಬ್ಬರೂ ಕಿರಿಯ ಸೊಸೆಗಳು.
ನಾವಿಬ್ಬರೂ ಓದಿನ ದಿನಗಳಲ್ಲಿ ಒಟ್ಟಿಗೆ ಓದಿ, ಹಾಡುಗಳನ್ನು ಹೇಳಿಕೊಂಡು ಕಾಲ ಕಳೆದವರು. ಎಷ್ಟೋ ಸಲ ಹಾಡಿನ ಮೂಲಕವೇ ಸಂಭಾಷಣೆ ಮಾಡಿದವರು. ನಾವಿಬ್ಬರೂ ಒಟ್ಟಿಗೆ ಲಗ್ನ ಪತ್ರಿಕೆ ಸಿನಿಮಾದ " ಬಲು ಅಪರೂಪ ನಮ್ ಜೋಡಿ ಎಂಥಾ ಕಚೇರಿಗೂ ನಾವು ರೆಡಿ" ಹಾಡನ್ನು ಹಾಡಿ ಸೀನು ಸುಬ್ಬು ಜೋಡಿ ಎಂದು ಶಹಾಬಾದಿನಲ್ಲಿ ಕರೆಸಿಕೊಂಡವರು. ಈಗಲೂ ಕೆಲಸಲ ಆ ಹಾಡನ್ನು ಹಾಡುವುದುಂಟು.
ಮದುವೆಗೆ ಮುಂಚೆ ನಾವುಗಳು ಸ್ನೇಹಿತರು ಆದರೆ ಮದುವೆಯ ನಂತರ ನಾವಾದೆವು ಬಂಧುಗಳು. ವಾರಿಗೆಯಲ್ಲಿ GVG ನನಗೆ ಚಿಕ್ ..ಕತ್ತೆ ...ಅಲ್ಲಲ್ಲ...ಚಿಕ್ಕತ್ತೆ.
( ಕ್ಷಮೆ ಇರಲಿ, ಕಾಗುಣಿತದ ತಪ್ಪು ಮುದ್ರಾ ರಾಕ್ಷಸನದು)
HP ರಂಗ ನನ್ನ ಚಿಕ್ಕ ಮಾವ.
ನಮ್ಮಿಬ್ಬರದು 58 ವರ್ಷಗಳ ಒಡನಾಟ ಅವರಿಬ್ಬರದು 51 ವರ್ಷಗಳ ಒಡನಾಟ.
ಈಗಾಗಲೇ ಹೇಳಿದಂತೆ ನಮ್ಮಗಳ ಮದುವೆಯಾದದ್ದು
ಫಾಲ್ಗುಣ ಮಾಸ ಶುಕ್ಲ ಪಕ್ಷ ಬಿದಿಗೆಯ ದಿನ... ವರ್ಷಗಳು ಬೇರೆಯಾದರೂ....
ಇನ್ನೊಂದು ಬಹು ಮುಖ್ಯ ವಿಚಾರ ನಾವುಗಳು ಪರಸ್ಪರ ಮೆಚ್ಚಿ ಮದುವೆಯಾದವರು.
ಹಾಗಾದ್ರೆ ನಮ್ಮಲ್ಲಿ ಬರೀ ಸಾಮ್ಯತೆಯೇ?... ಇದು ಸಾಧ್ಯವೇ?... ಸಾಕಷ್ಟು ಭಿನ್ನತೆಯೂ ಇದೆ... ಆದರೆ ಅದು ಇಲ್ಲಿ ಅಪ್ರಸ್ತುತ. ನಮ್ಮ ಅರ್ಧ ಶತಮಾನಕ್ಕೂ ಮಿಕ್ಕಿದ ಒಡನಾಟದ ಜೀವನದಲ್ಲಿ ಕೆಲ ಕಿರಿಕಿರಿಗಳೂ, ಭಿನ್ನಾಭಿಪ್ರಾಯಗಳು ತಲೆದೋರಿದ್ದವು..... ಆದರೆ ಅದನ್ನು ಮೆಟ್ಟಿ ನಿಂತು ಸಂಬಂಧಗಳನ್ನು ಗಟ್ಟಿಗೊಳಿಸಿ ಮುನ್ನಡೆಯುತ್ತಿರುವ ಕಾಯಕದಲ್ಲಿ ನಾವೆಲ್ಲರೂ ಸಾಮ್ಯತೆಯನ್ನು ಕಾಯ್ದುಕೊಂಡಿದ್ದೇವೆ.
ಬಹುಶಃ .. ನಮ್ಮದು "ಬಲು ಅಪರೂಪ ನಮ್ ಜೋಡಿ"
ಎನ್ನುವುದನ್ನು ನೀವು ಒಪ್ಪಿದಿರಿ ಎಂದು ನಂಬಲೇ?
ದೇವರು ದಯಾಮಯ.....ಇರುವಷ್ಟು ಕಾಲ ಹೀಗೇ ಇಟ್ಟಿರಲಿ.
Chennagide
ReplyDeleteಖಂಡಿತ ವಾಗಿಯೂ ಬಲು ಅಪರೂಪ..ನಿಮ್ಮ ಜೋಡಿ.
DeleteSooperb chikkappa
ReplyDeleteAwwww.so nice
ReplyDeleteWow so nice...
ReplyDeleteWow
ReplyDelete👌👌👍👍
ReplyDeleteAwesome, Greatest apuroopa jodi🙏🙏💐💐🎊🎊🎉🎉
ReplyDeleteನಿಜ ನಿಜ ಬಲು ಅಪರೂಪ ನಿಮ್ಮ ಜೋಡಿ...!!
ReplyDeleteಹೌದು ಅಪರೂಪದಲ್ಲಿ ಅಪರೂಪ ,ವಿಶೇಷ, ಜೋಡಿ
ReplyDeleteಸುಂದರ ದಿನ, ಸುಂದರ ಇನ ಸುಂದರ ಮನ ಅಪರೂಪದ ಆನಂದದ ಅತಿ ವಿಶೇಷ ದಿನ. ಧನ್ಯವಾದಗಳು ದೊಡ್ಡ ಅಳಿಯ.
ReplyDeleteVery beautiful friendship and relationship...
ReplyDeleteWonderful
ReplyDeleteHappy wedding anniversary sir...
ReplyDeleteVery nice friendship tooo..
100 true...! I am a Live Witness to all your (ಇಬ್ಬರ) mischiefs, since Shahabad days...!
ReplyDeleteBelated Happy Anniversary...!!!
ಆಶ್ಚರ್ಯಕರ ಅಪರೂಪದ ಜೋಡಿಗಳ ಬಾಂಧವ್ಯ ಅಂದಿನಿದ ಇಂದಿನವರೆಗೂ. ದೇವರು ಈ ನಿಮ್ಮ ಜೋಡಿಯನ್ನು ಎಂದೆಂದೂ ಹೀಗೇ ಇರುವಂತೆ ಅನುಗ್ರಹಿಸಲೆಂದು ಹಾರೈಸುವೆ.
ReplyDeleteಕಾಕತಾಳೀಯ ಅಂದುಕೊಂಡರೂ ಸಾಮ್ಯತೆಗಳು ಆಶ್ಚರ್ಯಕರ.
ReplyDeleteತುಂಬ ಒಳ್ಳೆಯ, ತುಂಬ ಬೇಕಾದ ಫೋಟೋ ಸಿಕ್ಕಿತು. ಹೀಗೇ ಮುಂದುವರಿಯಲಿ ಎಂದು ಹಾರೈಸುತ್ಯೇನೆ. ಭಗವಂತನ ಕೃಪೆಯಿಂದ ನಿಮ್ಮ ಸ್ನೇಹ ಹೀಗೇ ಮುಂದುವರಿಯಲಿ.
ReplyDeleteNice plz continue to write
ReplyDelete