Posts

ಎಲ್ಲೆಲ್ಲಿ ನೋಡಿದರೂ ಅಲ್ಲಿ ಶ್ರೀರಾಮಚಂದ್ರ

Image
2‌2.01.2024 ಈ ದಿನ ಮುಂದಿನ ಪೀಳಿಗೆಯವರಿಗೆ ಚರಿತ್ರೆಯಲ್ಲಿ ಇರಬಹುದಾದಂತ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ.  ನಾವು ಈ ದಿನದ ಕಾರ್ಯಕ್ರಮದಲ್ಲಿ ಪರೋಕ್ಷವಾಗಿಯಾದರೂ ಭಾಗವಹಿಸಿದ್ದೇವೆಂಬ ಹೆಮ್ಮೆ ಪಡ ಬಹುದಾದಂತಹ ಜನ. ಎಲ್ಲೆಲ್ಲೂ ಜೈ ಶ್ರೀ ರಾಮ್ ಎಂಬ ಘೋಷಣೆ... ಭಜನೆಗಳು ಅಲ್ಲಲ್ಲಿ...  ಹೆಣ್ಣು ಗಂಡು ಎಂಬ ಭೇದವಿಲ್ಲದೆ...ಖುಷಿಯಿಂದ ಕುಣಿಯುತ್ತಿರುವ...ಜನತೆ.... ಕಾರ್ಯಕರ್ತರ ಓಡಾಟ, ಮಾಧ್ಯಮದವರ ಉತ್ಸಾಹ.. ಎಲ್ಲದರ ನೋಟ ದೂರದರ್ಶನದಲ್ಲಿ ನೋಡಿ ಪುಳಕಗೊಂಡ ನಾವು.... ಇನ್ನು ಅಲ್ಲಿಗೇ ಹೋಗಿ ಸಂಭ್ರಮದಲ್ಲಿ ಪಾಲ್ಗೊಂಡವರ ಮನಸ್ಸಿನ ಸ್ಥಿತಿ ಹೇಗಿರಬಹುದು ಎಂದು ಊಹಿಸಿದರೆ ಮೈ ನವಿರೇಳುತ್ತದೆ. 90 ವರ್ಷ ಮೀರಿದ  ಕೆ.ಪರಾಶನ್ ಅವರನ್ನು ಕಂಡಾಗ ಭಕ್ತಿ ಭಾವ ಉಕ್ಕಿ ಬಂತು... ನ್ಯಾಯಾಲಯದಲ್ಲಿ ರಾಮನ ಪರವಾಗಿ ವಾದ ಮಂಡಿಸುವಾಗ ಬರಿಗಾಲಲ್ಲಿ ನಿಂತು ವಾದ ಮಾಡಿದ್ದನ್ನು ಕೇಳಿ ತಿಳಿದಿದ್ದೆ...ಎಂಥಾ ನಿಷ್ಟೆ.. ಮತ್ತೊಂದು ಮನಕರಗುವ ದೃಶ್ಯ... ರಾಮಮಂದಿರಕ್ಕಾಗಿ ಗುಂಡೇಟು ತಿಂದು ಬಲಿದಾನ ಮಾಡಿದ ರಾಮ್ ಕೊಠಾರಿ ಹಾಗೂ ಶರತ್ ಕೊಠಾರಿ ( ಇಬ್ಬರು 18... 20 ವರ್ಷದ ಅಣ್ಣ ತಮ್ಮಂದಿರು) ಇವರ ಅಕ್ಕ ಮಾತನಾಡಿದ ಪರಿ. ಇನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಶ್ರದ್ಧೆ ಭಕ್ತಿ ಎಷ್ಟು ಹೇಳಿದರೂ ಕಮ್ಮಿಯೇ ...ತುಂಬಾ ಮೆಚ್ಚುಗೆ ಆಯ್ತು... ಎಲ್ಲವನ್ನೂ ಹೇಳಲು ನೆನಪಿಗೆ ಬಾರದು... ಸ್ಥಳವೂ ಸಾಲದು... ಆದರೆ ಸುಮಾರು ಐದು ಗಂಟೆಗಳ ಕಾಲ ...

ಎಳ್ಳು ಬೆಲ್ಲ - ಒಳ್ಳೆ ಮಾತು

Image
ಸತತವಾಗಿ ಎರಡನೆಯ ವರ್ಷವೂ ಸಂಕ್ರಾಂತಿ ಹಬ್ಬದ ಆಚರಣೆ ಇಲ್ಲ.... ಹತ್ತಿರದವರ ಸಾವಿನ ಸೂತಕದ ಛಾಯೆ ಹಬ್ಬದ ಮೇಲೆ. ಆದರೆ ನೆನಪಿನ ಓಟದ ಮೇಲೆ ಯಾವ ಸೂತಕದ ಛಾಯೆಯೂ ಬೀಳದು‌.. ಸಂಕ್ರಾಂತಿ ಎಂದರೆ  ಮೊದಲು ಹೊಳೆಯುವುದೇ.. ಎಳ್ಳು ಬೆಲ್ಲ.... ಜೊತೆ ಜೊತೆಗೆ ಸಕ್ಕರೆ ಅಚ್ಚು, ಕಬ್ಬು.... ನಂತರ.. ಕುಸುರಿ ಎಳ್ಳು, ಯಲಚೀ ಹಣ್ಣು, ಅವರೆಕಾಯಿ, ಗೆಣಸು, ಕಳ್ಳೆಕಾಯಿ‌... ಹೀಗೆ.. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು... ಎನ್ನುವುದು ಸಾಂಪ್ರದಾಯಿಕವಾಗಿ ಹೇಳುವ ಮಾತು... ಆದರೆ ಎಳ್ಳು ಬೆಲ್ಲ ತಿಂದಾಗ ಮಾತ್ರ ಒಳ್ಳೆಯ ಮಾತೇ... ಬೇರೆಲ್ಲ ತಿಂದಾಗ ಬೇಡವೇ... ಇದು ನನ್ನನ್ನು ಕಾಡುವ ಪ್ರಶ್ನೆ... ಯಾಕೋ ಸಮಂಜಸವಾದ ಉತ್ತರ ನನಗಿನ್ನೂ ಸಿಕ್ಕಿಲ್ಲ... ಯಾರಾದರೂ ಹೇಳಬಹುದೇ.. ಎಳ್ಳು ಈ ಹವಾಮಾನಕ್ಕೆ ಬೇಕಾದ ಎಣ್ಣೆಯ ಅಂಶವನ್ನು ಹೊಂದಿರುವ ಧಾನ್ಯ... ಹಾಗಾಗಿ ಅದನ್ನು ತಿನ್ನುವುದು ಒಳ್ಳೆಯದು. "ಕೊಟ್ಟು ತಿನ್ನು" ಎನ್ನುವುದು ಹಿಂದಿನವರು ರೂಢಿಸಿಕೊಂಡಿದ್ದ ಒಂದು ಸಂಪ್ರದಾಯ. ಹಾಗಾಗಿ ಬೆಳೆದ ಎಳ್ಳನ್ನು ಬೇರೆಯವರಿಗೆ ಕೊಡಬೇಕು. ಆದರೆ ಇಲ್ಲೊಂದು ಸಂದಿಗ್ಧ... ಎಳ್ಳನ್ನು ಯಾರೂ ಸುಲಭವಾಗಿ ದಾನವಾಗಿ ತೆಗೆದುಕೊಳ್ಳಲು ಒಪ್ಪುವುದಿಲ್ಲ... ಅದು ಋಣದ ದ್ಯೋತಕವೂ ಹೌದು... ಅದಕ್ಕೆ ನಮ್ಮ ಪೂರ್ವಜರಿಗೆ ನಾವು ತಿಲತರ್ಪಣ ಕೊಡುವುದು... ಬರೀ ಎಳ್ಳು ತಿನ್ನಲು ಸಹ ರುಚಿಕರವಾಗಿರುವುದಿಲ್ಲ... ಹಾಗಾಗಿ ಅದಕ್ಕೆ ಒಂದಷ್ಟು ವ್ಯಂಜನಗಳು (ಬೆಲ್ಲ, ಒಣಕೊಬ್ಬರಿ ಚ...

ಸಾವು - ನೋವು - ಮರೆವು

Image
ನನ್ನ ಬ್ಲಾಗ್ ಹೆಸರು ಸಿಹಿ ಕಹಿ ನೆನಪುಗಳು ಎಂದಾದರೂ.... ಇಂದು ನಾನು ಯೋಚಿಸುತ್ತಿರುವ ವಿಚಾರ ಮರೆವಿನ ಬಗ್ಗೆ... ಮರೆವೂ ಸಹ ನೆನಪಿನ ಇನ್ನೊಂದು ಮುಖ ತಾನೇ.... ಬಾರದ ನೆನಪು. ಒಂದು ಕುಟುಂಬಕ್ಕೆ ಹಾಗೂ ಅವರ ಸುತ್ತು ಮುತ್ತಿನವರಿಗೆ ತುಂಬಾ ನೋವು ತರುವುದು ಸಾವು.... ಸಾವು ಸಹಜ ... ಕಟ್ಟಿಟ್ಟ ಬುತ್ತಿ ಎಂದು ಗೊತ್ತಿದ್ದರೂ..... ಸಾವಿಗೆ ತುಂಬಾ ಹತ್ತಿರ ಆಗುತ್ತಿದ್ದಾರೆ ಎಂದು ತಿಳಿದ ನಂತರವೂ.... ವ್ಯಕ್ತಿಯ ಕೊನೆಯನ್ನು ಬಹುಭಾಗ ಒಪ್ಪಿಕೊಂಡಿದ್ದರೂ ಸಹ.... ಸಾವು ಸಂಭವಿಸಿದಾಗ ಅದನ್ನು ಒಪ್ಪಿ ಜೀರ್ಣಿಸಿಕೊಳ್ಳುವುದು ಸ್ವಲ್ಪ ಕಷ್ಟವೇ.... ಸಾವು ಸಂಭವಿಸಿದಾಗ, ದುಃಖ... ಅದರ ಪರಿಣಾಮವಾಗಿ ಅಳು ಸಾಮಾನ್ಯ... ಅದರಲ್ಲೂ ಜನ ಬರುತ್ತಿದ್ದಂತೆ... ಅಳುವಿನ ಅಲೆ ಅಪ್ಪಳಿಸುತ್ತದೆ. ಹಾಗಾಗಿ ಶವವನ್ನು ಆದಷ್ಟು ಬೇಗ ಸ್ಮಶಾನಕ್ಕೆ ಕಳಿಸುವುದು... Out of sight is out of mind ಎನ್ನುವುದು ಎಷ್ಟು ಸತ್ಯ ಅಲ್ಲವೇ? ತಲೆಯ ಮೇಲೆ ನೀರು ಬಿದ್ದಾಗ ದುಃಖವೂ ಸಾಕಷ್ಟು ಶಮನವಾಗುತ್ತದೆ...  ಇಲ್ಲಿ ಈಗ ನಮ್ಮೊಂದಿಗೆ ಇಲ್ಲದ ಸ್ನೇಹಿತ ಶ್ರೀನಿವಾಸ್ ನಟನೆಯೊಂದಿಗೆ ತಮಾಷೆಯಾಗಿ  ಹೇಳುತ್ತಿದ್ದ ಪ್ರಸಂಗ ಪ್ರಸ್ತುತವೆನಿಸುತ್ತದೆ.... ಮನೆಯಲ್ಲಿ ಯಜಮಾನರ ಸಾವು.... ಯಜಮಾನಿಗೆ ಅತೀವ ದುಃಖ... ಸತ್ತ ಮೇಲೆ ಸುಮಾರು 20 ಗಂಟೆಗಳ ನಂತರ ಶವ ಮನೆಯಿಂದ ಹೋಯಿತು ....ತಲೆಯ ಮೇಲೆ ನೀರು ಬಿತ್ತು.. ಅಷ್ಟು ಹೊತ್ತೂ ನೀರನ್ನೂ ಕುಡಿಯದ ಯಜಮಾನಿಗೆ ಮನೆಯವರೆಲ...

ಹೊಸ ವರ್ಷ- ನಿರ್ಣಯಗಳು

Image
ಸಾಮಾನ್ಯವಾಗಿ ಹೊಸ ವರ್ಷದ ಶುರುವಿನಲ್ಲಿ ಏನಾದರೂ ಮಾಡಬೇಕು ಎನ್ನುವ ನಿರ್ಣಯ ಬಹಳ ಜನ ಮಾಡುತ್ತಾರೆ.... ನಾನೇನೂ ಹೊರತಲ್ಲ...New Year resolutions ...ಬ್ರಿಟಿಷರು ಕೊಟ್ಟ ಕೊಡುಗೆ ಎಂದು ನನ್ನ ಭಾವನೆ... ಆದರೆ ಹೀಗೆ ಮಾಡುವೆ ಎಂದು ಶಪಥ ಮಾಡುವುದು.... ಹಾಗೂ ಪ್ರತಿಜ್ಞೆ ಮಾಡುವುದು ನಮಗೇನು ಹೊಸದಲ್ಲ.... ತನಗೆ ಅವಮಾನ ಮಾಡಿದವರು ಸಾಯುವ ತನಕ ತನ್ನ ಮುಡಿಯನ್ನು ಕಟ್ಟುವುದಿಲ್ಲವೆಂದು ನಿರ್ಧಾರ ಮಾಡಿದ ದ್ರೌಪದಿ..... ಅದಕ್ಕೆ ದುಶ್ಯಾಸನನ ರಕ್ತವನ್ನು ಎಣ್ಣೆಯಾಗಿ ಹಚ್ಚುವೆನೆಂದು ಶಪಥ ಮಾಡಿದ ಭೀಮ...... ದ್ರೌಪದಿಗೆ ಅವಮಾನ ಆಗುತ್ತಿದ್ದರೂ, ಅಸಹಾಯಕನಾಗಿ ತನ್ನ ಯಾವುದೋ ಪ್ರತಿಜ್ಞೆಗೆ ಕಟ್ಟು ಬಿದ್ದು, ಅವಳ ಸಹಾಯಕ್ಕೆ ಮುಂದಾಗದ ಭೀಷ್ಮ ಪಿತಾಮಹ..( ಭೀಷ್ಮ ಪ್ರತಿಜ್ಞೆ ಎನ್ನುವುದು ಜನಜನಿತ) ಇವರೆಲ್ಲ ನಮ್ಮ ಮಹಾಭಾರತದ ಕಾಲದವರು. ಇದಲ್ಲದೆ ಇಂತಹ ಪ್ರತಿಜ್ಞೆಗಳನ್ನು ಮಾಡಿ ಉಳಿಸಿಕೊಂಡವರು , ಸೋತವರು ಬಹಳಷ್ಟು ಮಂದಿ ಇದ್ದಾರೆ... ಬಡತನವನ್ನು ಭಾರತದಿಂದ ತೊಲಗಿಸುತ್ತೇವೆ ಎಂದು ನಿರ್ಧಾರ ಮಾಡಿ... ಜನಗಳಿಗೆ ಆಶ್ವಾಸನೆಯನ್ನು ಇತ್ತ ನಮ್ಮ ರಾಜಕಾರಣಿಗಳು.... ಈಗ ಆ ನಿಟ್ಟಿನಲ್ಲಿ ಸಾಕಷ್ಟು ವಸ್ತುಗಳನ್ನು ಬಿಟ್ಟಿಯಾಗಿ ಕೊಟ್ಟು.. (ಏನೂ ಕೆಲಸ ಮಾಡದೆ ಗಳಿಸಿದ್ದು...) ಜನರನ್ನು ಸೋಮಾರಿಗಳಾಗಿ ಮಾಡುತ್ತಿರುವ ಇಂದಿನ ಪರಿಸ್ಥಿತಿಯನ್ನು ಗಮನಿಸಿದಾಗ...... ವಿದೂಷಕರಂತೆ ಕಾಣುತ್ತಾರೆ. ಇರಲಿ ಅದು ರಾಜಕೀಯ ಕಸರತ್ತು. ಕ್ಷಮಿಸಿ... ವಿಷಯ ಸ್ವಲ್ಪ ...

ಶಹಾಬಾದ್ ..ಬಿಟ್ಟರೂ ಬಿಡದ ನಂಟು

Image
  ನಾನು ಶಹಾಬಾದ್ ಬಿಟ್ಟು ಈ ಡಿಸೆಂಬರ್ ಗೆ 50 ವರ್ಷಗಳು ಮುಗಿದವು.... ಆದರೆ ಇಂದಿಗೂ ಶಹಾಬಾದ್ ಹೆಸರು ಕೇಳಿದರೆ ಏನೋ ಒಂದು ರೀತಿಯ ಪುಳಕ ಹಾಗೂ ಅಭಿಮಾನ. ಏನು ವಿಶೇಷವೋ ಆ ಶಹಾಬಾದಿನ ಮಣ್ಣಲ್ಲಿ... ಅದರ ಸೆಳೆತ ಸ್ವಲ್ಪವೂ ಕಡಿಮೆಯಾಗಿಲ್ಲ... ನಂಟು ಬಲು ಅಂಟು.... ಬಿಸಿಲೂ ಉಂಟು... ಸಿಮೆಂಟಿನ ಧೂಳೂ ಉಂಟು... ಬಿರು ಬೇಸಿಗೆಯಲ್ಲಿ... ಮಧ್ಯಾಹ್ನ ಆಫೀಸಿಗೆ ಹೋಗುವಾಗ, ತಲೆಗೆ ಹ್ಯಾಟ್ ಕಡ್ಡಾಯ... ಆಫೀಸ್ ಒಳಗೆ ಹೋದ ತಕ್ಷಣ ಫ್ಯಾನ್ ಕೆಳಗೆ ಒಂದೆರಡು ನಿಮಿಷ ವಿಶ್ರಾಂತಿ ಅವಶ್ಯಕ.  ನಮ್ಮ ಆಫೀಸ್ ಸಮಯ ಬೆಳಿಗ್ಗೆ 8 ರಿಂದ 12 ಮಧ್ಯಾಹ್ನ 2 ರಿಂದ 5.... ಹಾಗಾಗಿ ಮಧ್ಯಾಹ್ನ ಊಟ ಆದ ನಂತರ ಒಂದು ನಿದ್ದೆ ಬಲು ಸಹಜವಾಗಿ ಬರುತ್ತಿತ್ತು...12.20 ಕ್ಕೆ ಹಾಸಿಗೆಯ ಮೇಲೆ 2.05 ಕ್ಕೆ ಮತ್ತೆ ಆಫೀಸ್. ಶಹಾಬಾದ್ ನಂಟು ಬೆಳೆಯಲು ಕಾರಣ ನನ್ನ ಸ್ನೇಹಿತ ಎಚ್ ಪಿ ರಂಗನಾಥ್... ಅವನಾಗಲೇ ಶಹಾಬಾದ್ ನಲ್ಲಿ ಕೆಲಸ ಮಾಡುತ್ತಿದ್ದ.... ಅವರ ಸಂಬಂಧಿ.. ಎಂ ಎಸ್ ವೆಂಕಟರಾಮು ಅವರ ಪರಿಚಯದಿಂದ. ಇಂಟರ್ವ್ಯೂನಲ್ಲಿ ಒಂದು ಪ್ರಶ್ನೆ " why do you want to come to this desert like place" ಕೇಳಿದವರು ಯಾರೋ ಗೊತ್ತಿಲ್ಲ.... ಅವರ ಮನಸ್ಸಿನ ಭಾವನೆಯನ್ನು ಹೊರ ಹಾಕಿದರಾ? ಉತ್ತರ ಏನು ಹೇಳಿದೆನೋ ಗೊತ್ತಿಲ್ಲ.... ಆದರೆ ಕೆಲಸ ಅಂತೂ ಸಿಕ್ಕಿತ್ತು.... ಹಾಗಾಗಿ ನಾನು ಶಹಾಬಾದ್ ವಾಸಿಯಾದೆ. ಇರಲು ರಂಗನಾಥನ ಮನೆ... ಊಟಕ್ಕೆ ಕ್ಯಾಂಟೀನ್... ಜೊತೆಗೆ ಒಂದು ...

ಚಾರಣ... ನೆನಪಿನ ತೋರಣ

Image
ಸುಮಾರು ಒಂದು ತಿಂಗಳಿಂದ  ನಾನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಒಂದಷ್ಟು ಸವಾಲುಗಳನ್ನು ಅನಿವಾರ್ಯವಾಗಿ ಎದುರಿಸ ಬೇಕಾದಂತ ಘಟನೆಗಳು ನನ್ನ ಸುತ್ತ ನಡೆದವು... ಇಂಥ ಸಂದರ್ಭಗಳು ಇದೇ ಮೊದಲೇನಲ್ಲ... ಹಿಂದೆಯೂ ಅನುಭವಿಸಿದ್ದಿದೆ...ಅದೂ ಆರ್ಥಿಕ ಸವಾಲುಗಳೊಂದಿಗೆ... ಮುಂದೆಯೂ ಬರಬಹುದೇನೋ...ತಿಳಿಯದು.  ....ದೇವರ ದಯೆ ಈಗ ಆರ್ಥಿಕ ಸವಾಲಿಲ್ಲ. ಇಂಥ ಎಲ್ಲ ಸಂದರ್ಭದಲ್ಲಿ ನನಗೆ ಮುನ್ನುಗ್ಗಲು ಸ್ಪೂರ್ತಿಯನ್ನು ತುಂಬುವುದು ಹಾಗೂ ಶಕ್ತಿಯನ್ನು ಕೊಡುವುದು ಕೆಳಗೆ ಉಲ್ಲೇಖಿಸಿದ ಒಂದು ಇಂಗ್ಲಿಷ್ ಪದ್ಯ.... ಈ ಪದ್ಯದ ಅಕ್ಷರಶಃ ಅರ್ಥದ ಅನುಭವವು ನನಗಾಗಿದೆ... ಅದು ನಾನು ಚಾರಣಕ್ಕೆ ಹೋದ ಸಮಯದಲ್ಲಿ.. ಪಶ್ಚಿಮ ಘಟ್ಟಗಳ ಏರಿಳಿತಗಳನ್ನು ... ಬೆನ್ನಿನ ಮೇಲೆ ಭಾರವನ್ನು ಹೊತ್ತು.. ಕ್ರಮಿಸಿದ ಸಮಯ.... ಆಗೆಲ್ಲ  Rest if you must but dont you quit ನಮಗೆಲ್ಲಾ ಮೂಲ ಮಂತ್ರವಾಗಿತ್ತು. ಡಿಸೆಂಬರ್ ಬಂತು ಅಂದಾಗ... ನಮ್ಮ ಮಂಜು (ಎ ಮಂಜುನಾಥ) ಚಾರಣದ ಬಗ್ಗೆ ಚಿಂತನ ಮಂಥನ ಶುರು ಮಾಡುತ್ತಿದ್ದ... ಬೆಳಗಿನ ವಾಕಿಂಗ್ನಲ್ಲಿ ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದು... ಕೊನೆಗೆ ಅವನೇ ನಿರ್ಧರಿಸುತ್ತಿದ್ದ ಒಂದು ಜಾಗಕ್ಕೆ ಹೋಗುವುದು ಮಾಮೂಲು. ಅವನು BSNL ನಲ್ಲಿ ಕೆಲಸ ಮಾಡುತ್ತಿದ್ದ... ಹಾಗಾಗಿ ಅವನಿಗೆ ಕರ್ನಾಟಕದ ಬಹು ಭಾಗದ ಜನರೊಡನೆ ಸಂಪರ್ಕವಿತ್ತು.... ಅಲ್ಲಿನ ಅನುಕೂಲಗಳು... ಇಳಿದು ಕೊಳ್ಳುವ ಜಾಗ ಎಲ್ಲವನ್ನು ಸುಗಮವಾಗಿ ಆಯ್ಕ...

ಉಪವಾಸ. .. NETಉಪವಾಸ

Image
  ಹೋದ ವರ್ಷ ಉತ್ಥಾನ ದ್ವಾದಶಿ ದಿನ ನಮ್ಮ ಕುಟುಂಬದ ಮುವ್ವತ್ತಕ್ಕೂ ಮೀರಿ ಜನ ಒಂದು ಪ್ರವಾಸದಲ್ಲಿದ್ದೆವು.. ಅದರ ಹೆಸರು ಉತ್ವಾನ್ ದ್ವಾದಶಿ ಟ್ರಿಪ್... ವರ್ಷ ಉರುಳಿದೆ.... ಈ ವರ್ಷ ಈ ಏಕಾದಶಿ ಸ್ವಲ್ಪ ವಿಶೇಷ.... ನಮ್ಮ ವೈಶಾಖ್ ಹಾಗೂ ಸೌಮ್ಯ ದಂಪತಿಗೆ ಮಗ ಹುಟ್ಟಿದ ಸಂಭ್ರಮ.... ಆ ಸಂಭ್ರಮದಲ್ಲಿ ಸೌಮ್ಯನಿಗೆ ಊಟ ಇಲ್ಲ... ಅದು ಸಹಜ... ಸಂತೋಷದಲ್ಲಿ ವೈಶಿಯೂ ಊಟ ಮಾಡಿರಲಿಕ್ಕಿಲ್ಲ.... ಅವನಿಗೂ ಉಪವಾಸ.... ನನಗೂ ನನ್ನ ಹೆಂಡತಿಗೂ ಈ ಏಕಾದಶಿ / ದ್ವಾದಶಿಯೆಲ್ಲಾ ಹೊರಗುಳಿದ ಸಂದರ್ಭ.... ಉಪವಾಸವೂ ಸಹ... ಆದರೆ ಇದ್ದಿದ್ದು ಆಸ್ಪತ್ರೆಯಲ್ಲಿ.... ವಿಜಯಳ ಆರೋಗ್ಯ ಸ್ವಲ್ಪ ತಾಳ ತಪ್ಪಿದ್ದರಿಂದ... ಈ ಲೇಖನ ರೂಪುಗೊಂಡದ್ದು.. ಕರಡನ್ನು ಬರೆದದ್ದು ಆಸ್ಪತ್ರೆಯಲ್ಲೇ....  ಮನೆಗೆ ಹೋಗಲು ಅನುಮತಿಗಾಗಿ ಡಾಕ್ಟರನ್ನು ಕಾಯುತ್ತಾ..... ಕೃಷ್ಣ ಹುಟ್ಟಿದಾಗ ತುಂಬಾ ಜನಕ್ಕೆ ಸಂತೋಷ... ಸಂತೋಷದ ಭರದಲ್ಲಿ ಹಸಿವೆ ಕಾಡಿಲ್ಲ... ಹಾಗಾಗಿ ಉಪವಾಸ... ಇನ್ನು ಕೆಲವರು ಸಿಹಿ ತಿಂದು ಸಂಭ್ರಮಿಸಿದರು... ಅವರವರ ಭಾವಕ್ಕೆ ತಕ್ಕಂತೆ. ಉಪವಾಸಕ್ಕೂ ಏಕಾದಶಿಗೂ ವಿಶೇಷ ನಂಟು... ಚಾಂದ್ರಮಾನ ಪಂಚಾಂಗದ ಪ್ರಕಾರ ಏಕಾದಶಿ 11ನೇ ದಿನ.. ಅಂದು .....ವೈಜ್ಞಾನಿಕವಾಗಿ ಸಹ ತಿಳಿದಂತೆ .....ವಾತಾವರಣದಲ್ಲಿ ವಾಯು ಭಾರ(atmospheric prssure) ಕಡಿಮೆ ಇರುತ್ತದೆ... ಹಾಗಾಗಿ ಉಪವಾಸ ಮಾಡಿದಾಗ ಹಾಗೂ ಬರಬಹುದಾದ ನಿಃಶಕ್ತಿ ಕಡಿಮೆ ಸ್ತರದಲ್ಲಿ ಇರುತ್ತದೆ.  ...

ಅಳಿಯತನ, ಮಾವನ ಮನೆ, ದೀಪಾವಳಿ

Image
ಈ ವರ್ಷ ದೀಪಾವಳಿ ಹಬ್ಬದ ಆಚರಣೆ ನಮಗಿಲ್ಲ... ಅಣ್ಣ ಮತ್ತು ಅತ್ತಿಗೆ ತೀರಿಕೊಂಡ ಕಾರಣದಿಂದ. ಆದರೂ ಈ ದೀಪಾವಳಿ ನಮಗೆ ವಿಶೇಷವಾಗಿತ್ತು. ಮೊದಲನೆಯ ಕಾರಣ ನನ್ನ ಮಾವ ಶ್ರೀ ಎಚ್ ಪಿ ಕೃಷ್ಣಮೂರ್ತಿಯವರು, ಹಬ್ಬಕ್ಕೆ ಉಡುಗೊರೆಯಾಗಿ ಹಣವನ್ನು ನನ್ನ ಕೈಗೆ ಕೊಟ್ಟಿದ್ದು... ಮುಂಚಿನ ದಿನಗಳಲ್ಲಿ ಅವರ ಮಗಳ ಕೈಗೆ ಕೊಟ್ಟು ನನಗೆ ತಲುಪಿಸುತ್ತಿದ್ದರು. 96 ವರ್ಷದ ಹಿರಿಯರು ಬೆಳಿಗ್ಗೆಯೇ ಆಟೋ ಮಾಡಿಕೊಂಡು ಬಂದು... ಎಲ್ಲರಿಗೂ ಕೊಟ್ಟಾಯ್ತು ನಿನಗೆ ಮಾತ್ರ ಇನ್ನು ಕೊಟ್ಟಿಲ್ಲ... ಹಬ್ಬಕ್ಕೆ ಮುಂಚೆ ಕೊಡಬೇಡವೇ ಎಂದು ಹೇಳಿ...76 ವರ್ಷದ ನನಗೆ ಕೊಟ್ಟು ಹೋದದ್ದು ಅವರ ಪ್ರೀತಿಯ ದ್ಯೋತಕ. ಕೊಡುವ  ಹಿಂದಿನ ಭಾವ ಬಹು ಮುಖ್ಯ. ನಾನೂ ಒಬ್ಬ ಮಾವನಾಗಿ ಹೀಗೆ ಮಾಡಿಲ್ಲ. ಎರಡನೆಯದು, ಸೋಮವಾರ ಸಂಜೆ ನನ್ನ ಭಾವ ಮೈದುನ, ಕುಮಾರನ ( ಎಚ್ ಕೆ ಹರೀಶ್)  ಮನೆಯಲ್ಲಿ ಕಳೆದ ಕೆಲ ಗಂಟೆಗಳು. ನಮ್ಮ ಮಾವನವರ  ಜೊತೆಯಲ್ಲಿ..  ಅವರ ನಾಲ್ಕನೇ ತಲೆಮಾರಿನ...  ಅಭಿನವ ಶಂಕರ...(   ಸ್ನೇಹ ಳ ಮಗ)  ಪಟಾಕಿ ಹಚ್ಚಿದ್ದನ್ನು ನೋಡುವ ಸಂಭ್ರಮ.... ಅಭಿನವ ಶಂಕರನ ಮುದ್ದು ಮುದ್ದು ..ಜೊತೆಗೆ ತರಲೆಯ ಆಟ ಕಣ್ಣಿಗೊಂದು ಹಬ್ಬ....  ಇದಕ್ಕೆ ಕಾರಣ ಲಕ್ಷ್ಮಿ... ಆಗ್ರಹಪೂರ್ವಕವಾಗಿ ನಮ್ಮನ್ನು ಹಬ್ಬಕ್ಕೆ ಕರೆದು... ಸಂಭ್ರಮಿಸುವಂತೆ ಮಾಡಿ... ಪ್ರೀತಿಯಿಂದ ಉಡುಗೊರೆ ಕೊಟ್ಟು ಕಳಿಸಿದ್ದು. ಯಾವ ಪ್ರೇರಣೆಯೋ ಕಾಣೆ... ನನ್ನ ಮದುವೆಯಾದ 44...

ಕಾರ್ತಿಕ ಮಾಸ - ಕೈ ತುತ್ತು - ವನಭೋಜನ

Image
  ಕೆಲ ದಿನಗಳ ಹಿಂದೆ ಒಂದು ಕಾರ್ಯಕ್ರಮ... ಸಂಜೆ ಸ್ನೇಹಿತನ ಮನೆಯಲ್ಲಿ ಎಲ್ಲ ಸೇರಿದ್ದೆವು ಹರಟೆ ,ಆಟ, ನಂತರ ಇದ್ದದ್ದೇ ಊಟ...   ಊಟ ಮನೆಯಲ್ಲಿನ ಸಣ್ಣ ಕೈದೋಟದಲ್ಲಿ ಮಾಡಲು ತಯಾರಾದೆವು... ಇದ್ದ ಒಂದು ಮರ ಎನ್ನಬಹುದಾದ ದೊಡ್ಡಗಿಡ ಹಾಗೂ ಹೂ ಗಿಡಗಳು ಇವುಗಳ ಮಧ್ಯೆ ತಿಳಿ ಬೆಳಕಿನಲ್ಲಿ, ಕೈಯಲ್ಲಿ ತಟ್ಟೆ ಹಿಡಿದು ಹರಟೆ ಹೊಡೆಯುತ್ತಾ ಊಟ ಮಾಡಿದ್ದು ....ಒಂದು ಕೈ ಹೆಚ್ಚೇ..ತಿಂದದ್ದು. . ಮಾತಿನ ಮಧ್ಯೆ ಬೆಳದಿಂಗಳು ಇದ್ದರೆ ಚೆನ್ನಾಗಿರುತ್ತೆ ಅಂತ ಒಂದು ಚಿಂತನೆ... ಬೆಂಗಳೂರು ಬೆಳಕಲ್ಲಿ ಬೆಳದಿಂಗಳ ಸವಿ ಕಷ್ಟ .....ಎಲ್ಲ ದೀಪಗಳು ಆರಿ ಬೆಳದಿಂಗಳಿದ್ದರೆ ಚನ್ನಲ್ಲವೇ.. ಬೆಳದಿಂಗಳ ಊಟ ನೆನಪುಗಳನ್ನ ಮುಂದೆ ತಂತು. ದೊಡ್ಡಜಾಲದಲ್ಲಿ ನಾನಿದ್ದ ಸಮಯದಲ್ಲಿ ವಿದ್ಯುತ್  ಇಲ್ಲದ ಕಾಲ... ಬೆಳಕಿಗೆ ಒಂದು ಸೀಮೆಎಣ್ಣೆ ದೀಪ... ಸಂಜೆ ನನ್ನಪ್ಪ ದೀಪದ ಗಾಜನ್ನು ಬೂದಿ ಹಾಕಿ ಚೆನ್ನಾಗಿ ಒರೆಸಿ ಪಳ ಪಳ ಮಾಡಿ ದೀಪಕ್ಕೆ ಇಡುತ್ತಿದ್ದದ್ದು.... ಅದೇ ಬೆಳಕಿಗೆ ನಮ್ಮ ಜೀವನ ಹೊಂದಿಕೊಂಡಿತ್ತು...  ಹಾಗಾಗಿ ಬೆಳದಿಂಗಳು ಇರುವ ದಿನಗಳು ನಮಗೆ ಹೆಚ್ಚಿನ ಉತ್ಸಾಹ ಕೊಡುತ್ತಿದ್ದವು... ಆಗೆಲ್ಲ ತುಳಸಿ ಕಟ್ಟೆಯ ಹತ್ತಿರ ಕೈತುತ್ತು ಊಟ ನಮಗೆಲ್ಲಾ ಖುಷಿಯ ಸಂಗತಿ..... ಮೊದಲ ಕಾರಣ ಉಂಡತಟ್ಟೆಯನ್ನು ತೊಳೆಯುವ ಕೆಲಸದಿಂದ ತಪ್ಪಿಸಿಕೊಳ್ಳಬಹುದಲ್ಲ..... ಜೊತೆಗೆ ಅಜ್ಜಿ/ ಅಮ್ಮ ಏನೆಲ್ಲ ಸೇರಿಸಿ ಹದ ಮಾಡಿ ಕಲಸಿ ಹಾಕುತ್ತಿದ್ದ ಕೈತುತ್ತಿನ ರು...

ಪ್ರೇಮ..ಜ್ವರ..ಹಾಗೂ ನವಂಬರ್

Image
ಪ್ರೇಮದಲ್ಲಿ ಬಿದ್ದವರಿಗೆ, ಜ್ವರ ಬೇಗ ಕಾಣಿಸಿಕೊಳ್ಳುತ್ತಂತೆ.... ಇದು ಒಂದು ಅಭಿಪ್ರಾಯ.... ಇಲ್ಲೊಂದು ವಿಶಿಷ್ಟ ಜ್ವರ....ಸಾಮಾನ್ಯವಾಗಿ ಈ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವುದು ಅಕ್ಟೋಬರ್ ಕೊನೆಯ ವಾರದಲ್ಲಿ.... ನವಂಬರ್ ಒಂದಕ್ಕೆ ತುತ್ತ ತುದಿಯನ್ನು ಮುಟ್ಟಿ... ನಂತರ ನಿಧಾನವಾಗಿ.... ಕ್ಷೀಣಿಸಿ ನವೆಂಬರ್ ಕೊನೆಗೆ ಇಳಿದು ಹೋಗುತ್ತೆ.  ಕರೋನಾದಂತೆ ಭಯಂಕರವಲ್ಲದಿದ್ದರೂ...  ಅದರಷ್ಟೇ ಬೇಗ ಹರಡುವ ಖ್ಯಾತಿಯನ್ನು ಹೊಂದಿದೆ. ಈ ಪ್ರೇಮ ಜ್ವರ ಕಾಣಿಸಿಕೊಂಡಿದ್ದು 1956 ರಲ್ಲಿ.. ಹಾಗೂ ಇದು ಪ್ರತಿ ವರ್ಷವೂ ತಪ್ಪದೇ , ಇದೇ ಸಮಯದಲ್ಲೇ ಕಾಣಿಸಿಕೊಳ್ಳುತ್ತಿದೆ.... ಇದುವೇ ಈ ಪ್ರೇಮ ಜ್ವರದ ವಿಶೇಷತೆ. ನಿಮಗೆ ಅರ್ಥವಾಗಿದೆ ಅನ್ಕೋತೀನಿ..... ಹೌದೂರಿ.... ಅದೇ ...ಅದೇ.... ಕನ್ನಡದ ಮೇಲಿನ ಪ್ರೀತಿಯ, ಅಭಿಮಾನದ "ಪ್ರೇಮ ಜ್ವರ".  ಇದು ಜಗದಲ್ಲೆಡೆ ನೆಲೆಸಿರುವ  ಕನ್ನಡಿಗರಿಗೆ/ ಕನ್ನಡದ ಅಭಿಮಾನಿಗಳಿಗೆ ಮಾತ್ರ ಬರುವ ಜ್ವರ.....ಅದೇ ಕನ್ನಡ ರಾಜ್ಯೋತ್ಸವದ ಜ್ವರ. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದು ಬರೆದ ಹುಯಿಲಗೋಳ ನಾರಾಯಣರಾಯರ ಮನದಾಳದ ಆಸೆಯಂತೆ 1956 ರಲ್ಲಿ ಕನ್ನಡ ಮೂಲ ಭಾಷೆಯಾದ ಪ್ರದೇಶಗಳು ಒಂದುಗೂಡಿ ಕನ್ನಡ ನಾಡಿನ ಉದಯವಾಯಿತು..... ಹೆಸರಾಯಿತು ಕರ್ನಾಟಕ... ಉಸಿರಾಗಲಿ ಕನ್ನಡ ಎನ್ನುವ ಆಸೆ ಮಾತ್ರ ಇನ್ನೂ ಪೂರ್ಣವಾಗಿಲ್ಲ...ಸರ್ಕಾರದ ದೊಡ್ಡ ಅಧಿಕಾರಿಗಳೂ ಸಹ ಈ ವಿಚಾರದಲ್ಲಿ ನಿಷ್ಕ್ರಿಯರು...  ...

ಜೀವನ ಕಲಿಸಿದ ವ್ಯವಹಾರದ ಪಾಠಗಳು

Image
ದಸರಾ...ದೇಶಕ್ಕೆ... ಅದರಲ್ಲೂ ಕನ್ನಡ ನಾಡಿಗೆ ವಿಶೇಷ ಹಬ್ಬ.. ನಾಡ ಹಬ್ಬ ಸಹ. ಇದರ ಒಂದು ವಿಶೇಷ ಭಾಗ ಆಯುಧ ಪೂಜೆ... ನಾವು ಚಿಕ್ಕ ಕಾರ್ಖಾನೆಯನ್ನು ನಡೆಸುತ್ತಿದ್ದಷ್ಟು ದಿನವೂ ಆಯುಧ ಪೂಜೆಯನ್ನು ಆಚರಿಸಿದ್ದಿದೆ.... ಶುರುವಿನ ದಿನಗಳಲ್ಲಿ, ಹಣಕ್ಕಾಗಿ ಕಷ್ಟವಿದ್ದಾಗ ಪೂಜೆಯನ್ನು ಬಿಡದೆ ಕ್ಲುಪ್ತವಾಗಿ ಮಾಡಿ ಮುಗಿಸುತ್ತಿದ್ದೆವು. ಹಣಕ್ಕೆ ಪರದಾಡದೆ ಆಯುಧ ಪೂಜೆಯನ್ನು ಮಾಡುವ ಹಂತ ತಲುಪಲು ಸವೆಸಿದ ದಾರಿ ಬಹುದೀರ್ಘ, ಕಠಿಣ ಹಾಗೂ ಸವಾಲಿಂದ ಕೂಡಿತ್ತು. ಆ ಕಲಿಕೆ ಸುದೀರ್ಘವೂ ಮತ್ತು ದುಬಾರಿ ಖರ್ಚಿನದೂ ಆಗಿತ್ತು.  ಈ ಹಂತದಲ್ಲಿ ಆಯುಧ ಪೂಜೆ ನಿಜಕ್ಕೂ ಒಂದು ಸಂಭ್ರಮ.... ಎಲ್ಲ ಕೆಲಸಗಾರರಿಗೂ ಬಟ್ಟೆ, ಬೋನಸ್, (ಹಣ್ಣುಗಳು, ಸಿಹಿ ಹಾಗೂ ಹಣದ ಕವರನ್ನು ನಮ್ಮ ಕೆಲಸದವರಿಗೆ ಕೊಡುತ್ತಿದ್ದದ್ದು ನಮ್ಮಪ್ಪ- ಅವರಿರುವವರೆಗೂ) ಹಾಗೂ ಪೂಜೆಯ ದಿನ  ಬಂದ ಇಷ್ಟರು ಹಾಗೂ ಸ್ನೇಹಿತರು ಎಲ್ಲರೂ ಒಟ್ಟಿಗೆ ಸೇರಿ ಊಟ ಮಾಡುವುದು. ಇದೊಂದು ಸಂಪ್ರದಾಯದಂತೆ ಸುಮಾರು 30 ವರ್ಷಗಳ ಕಾಲ ಸತತವಾಗಿ ನಡೆಯಿತು. 70ರ ದಶಕದಲ್ಲಿ ಸಣ್ಣ ಕೈಗಾರಿಕೆಗಳ ಪ್ರಾರಂಭಕ್ಕೆ ಸರ್ಕಾರ, ಬ್ಯಾಂಕುಗಳಿಂದ ತುಂಬಾ ಪ್ರೋತ್ಸಾಹವಿತ್ತು. ಸಾಲಗಳನ್ನು ಸುಲಭವಾಗಿ ಕೊಡುತ್ತಾರೆ ಎನ್ನುವ ಒಂದು ಕಾರಣವೇ ಸಾಕಾಗಿತ್ತು... ನನ್ನ ಮನಸ್ಸಿಗೆ ಸಣ್ಣ ಕೈಗಾರಿಕೆ ಶುರು ಮಾಡಲು ಸಿಕ್ಕಿದ ಪ್ರೋತ್ಸಾಹ. ಆಗ ನನ್ನಲ್ಲಿ ಇದ್ದದ್ದು ಏನು ಬೇಕಾದರೂ ಸಾಧಿಸಬಲ್ಲೆ ಎಂಬ ಹುಮ್ಮಸ್ಸು... ಇದಕ್ಕೆ ಒಂದು ...

ಶಾಮಣ್ಣನ ಶತಾಭ್ಧಿ ಸಂಭ್ರಮ...

Image
ಹೋದ ಭಾನುವಾರ ನನ್ನ ಮಾವ ಶ್ರೀ. ಹೆಚ್. ಪಿ. ಕೃಷ್ಣಮೂರ್ತಿಯವರ 96 ನೇ ಹುಟ್ಟು ಹಬ್ಬದ  ಪ್ರಯುಕ್ತ ಅವರ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು, ಅಳಿಯಂದಿರು, ಸೊಸೆಯಂದಿರು...ಎಲ್ಲ ಒಟ್ಟಾಗಿ ಸೇರಿ UD Residency ಹೋಟೆಲ್ ನಲ್ಲಿ ಸಂಭ್ರಮಿಸಿದೆವು. ವಿಶೇಷ ಅಂದರೆ ನಮಗೆಲ್ಲಾ ಭರ್ಜರಿಯಾಗಿ ಭೋಜನ ಕೊಡಿಸಿದ್ದು ನಮ್ಮ ಮಾವ. ಸಾಮಾನ್ಯವಾಗಿ ಇದು ನಾವು ಮಾಡಬೇಕಾದ್ದು.....ಇನ್ನೊಂದು ವಿಶೇಷ...ಕೇಕ್ ಜೊತೆಗೆ...ನನ್ನ ನಾದಿನಿ ಮಣಿ ಕೈಯ್ಯಾರ ಮಾಡಿ ತಂದಿದ್ದ  ಹಾಲ್ ಬಾಯಿಯನ್ನು ಕತ್ತರಿಸಿ ಎಲ್ಲರೂ ತಿಂದಿದ್ದು.  ತಕ್ಕಮಟ್ಟಿನ ಹರಟೆ, photo session, ಪುಷ್ಕಳವಾದ ಊಟ, ಉಡುಗೊರೆ ಕೊಡುವುದು ಎಲ್ಲಾ  ಸಾಂಗೋಪಾಂಗವಾಗಿ ನಡೆಯಿತು.  ಅದರಲ್ಲಿ  ನನ್ನ ಮೊಮ್ಮಗಳು ವಿಸ್ಮಯ ಕೊಟ್ಟ greeting card  ಸಹ ಒಂದು.   ಈ greeting card ಮಾಡಲು ನನ್ನ ಮೊಮ್ಮಗಳ (ನನ್ನ  ಮಾವನ ಮರಿ ಮಗಳು) ತಯಾರಿ, ತಾತನ ಹೆಸರಿನ ಸ್ಪೆಲ್ಲಿಂಗ್ ಕೇಳಿ ಬರೆದದ್ದು, ಹೀಗೆ...ಉತ್ಸಾಹಕ್ಕೆ ಎಣೆಯಿರಲಿಲ್ಲ.... ಇದನ್ನು ನೋಡುತ್ತಾ...ನನ್ನ ನೆನಪಿಗೆ ಬಂದದ್ದು .. ನನ್ನಣ್ಣನ ಮೊಮ್ಮಗಳು... ಮುರಳಿಯ ಮಗಳು ಮಾಧುರಿ(ನಮ್ಮಪ್ಪನಿಗೆ ಮರಿ ಮಗಳು). ನಮ್ಮಪ್ಪನ 100 ನೇ ವರ್ಷದ ಹುಟ್ಟು ಹಬ್ಬದ ಸಮಯದಲ್ಲಿ, ನಾವು ಹೊರ ತಂದ ಸ್ಮರಣ ಸಂಚಿಕೆಗೆ ಮಾಧುರಿ ಬರೆದ ಲೇಖನ. ಒಂದಕ್ಷರವೂ ಬರೆಯಲು ಬರದ, ಆದರೆ ಬರೆಯುವ ಉತ್ಸಾಹ ತುಂಬಿದ.. ಮಗುವಿ...