Posts

ನಾಗರ ಪಂಚಮಿ

Image
  ನಾಗರ ಪಂಚಮಿಯ ಈ ಲೇಖನ ಇಷ್ಟು ತಡವಾಗಿ ಬರಲು ಕಾರಣ ಚಂದ್ರ ಎಂದರೆ ತಪ್ಪಾಗಲಾರದು. ಚಂದ್ರಯಾನ ಮೂರರ ಯಶಸ್ಸಿನ ಪರಿಣಾಮ ಆ ಲೇಖನಕ್ಕೆ ಪ್ರಾಮುಖ್ಯ ಸಿಕ್ಕಿ ಇದು ಹಿಂದೆ ಸರಿದಿತ್ತು. ನೆಲಕ್ಕೆ ಬಿದ್ದ ಬೀಜ ಹೇಗೆ ಮೊಳಕೆ ಒಡೆಯಲು ತವಕಿಸುತ್ತೋ ಹಾಗೆ ಈ ವಿಷಯವೂ ಹೊರಗೆ ಬರಲು ತವಕಿಸುತ್ತಿತ್ತು  ( ಪ್ರಸವ ವೇದನೆ ಎನ್ನಲೇ?). ಇದೀಗ.... ನಾಗರ ಪಂಚಮಿ ಹಬ್ಬ ಅಕ್ಕಂದಿರ ಮನೆಗೆ ಹೋಗಿ, ಊಟ ಮಾಡಿ ಬೆನ್ನು ತೊಳಿಸಿಕೊಂಡು, ಹರಟೆ ಹೊಡೆದು ಬರುವುದು ಮಾಮೂಲು. ಈ ವರ್ಷವೂ ಅದೇ ನಡೆಯಿತು . ಆದರೆ ಈ ಬಾರಿ ದೊಡ್ಡಣ್ಣನ ಅನುಪಸ್ಥಿತಿ ಕಾಡಿತು.   ಚಿಕ್ಕಂದಿನಲ್ಲಿ ನಾಗರ ಪಂಚಮಿ ಹಬ್ಬಕ್ಕೆ ಮಡಿಯನ್ನು ಉಟ್ಟು, ಅಕ್ಕನ ಜೊತೆ ಕೆರೆ ಏರಿಯ ಮೇಲೆ ಇದ್ದ ನಾಗರಕಲ್ಲಿಗೆ ತನಿ ಎರೆದು ಬರುವುದು ಮೊದಲ ಕೆಲಸ. ಸಾಧಾರಣವಾಗಿ ಅಂದು ಜಿಟಿ ಜಿಟಿ ಮಳೆ ಇರುತ್ತಿದ್ದದ್ದು ನೆನಪು. ಅಂದು ಹಬೆಯಲ್ಲಿ ಬೇಯಿಸಿದ ಸಿಹಿ, ಖಾರದ  ಕಡುಬು (ಹೊಯ್ಗಡುಬು) ವಿಶೇಷ. ಅಜ್ಜಿ... ಅಪ್ಪನ ಅಮ್ಮ... ಕಡುಬನ್ನು ಮಡಿಸುತ್ತಿದ್ದ ಕೈಚಳಕ ನೆನಪಿದೆ.  ಹಾಗೇ.. ಎಣ್ಣೆಯಲ್ಲಿ ಕರಿದ ಯಾವುದೇ ಪದಾರ್ಥವನ್ನು ಮಾಡುವುದು ನಿಷೇಧ. ಕೆಲವರು ಜೀವನಪರ್ಯಂತ ಪಡವಲಕಾಯಿಯನ್ನು ತಿನ್ನುವುದಿಲ್ಲ.     (ಹಾವೆಂಬ ಭಾವ). ಈಚಿನ ದಿನಗಳಂತೂ ಮನೆಯಲ್ಲೇ, ಒದ್ದೆ ಬಟ್ಟೆಯಲ್ಲಿ , ನಾಗರ ಪ್ರತಿಮೆಯನ್ನು ಇಟ್ಟು, ಅದಕ್ಕೆ ಭತ್ತದ ಅರಳು, ಕಡಲೆಕಾಳು, ಅಕ್ಕಿ ಹಿಟ್ಟು, ಹ...

ಚಂದ್ರಯಾನ - ಮೂರು

Image
ಜಯಭೇರಿ ಬಾರಿಸಿತು ಚಂದ್ರಯಾನ ಮೂರು ಭಾರತಾಂಬೆಯ ಕಿರೀಟದಿ ಗರಿಗಳು ನೂರಾರು ಕೆಲ ದಿನಗಳಿಂದ ಚಂದ್ರಯಾನ - 3, ವಿಕ್ರಂ ಲ್ಯಾಂಡರ್, ಪ್ರಗ್ಯಾನ್ ರೋವರ್, ಚಂದ್ರಯಾನ ಯಶಸ್ಸಿಗಾಗಿ ಮಾಡಿದ ಹವನ ಹೋಮಗಳು, ಪೂಜೆ ಪ್ರಾರ್ಥನೆಗಳು ಇವೆಲ್ಲ ಸುದ್ದಿಯ ಭಾಗಗಳಾಗಿದ್ದವು. ಇದರ ಜೊತೆಗೆ, ISRO ದ ಕೆಲವರು ಚಂದ್ರಯಾನ -3 ರ ಯಶಸ್ಸಿಗಾಗಿ ತಿರುಪತಿಯಲ್ಲಿ ಮಾಡಿದ ಪೂಜೆಗಾಗಿ ಅವಹೇಳನಕಾರಿ ಮಾತುಗಳನ್ನು ಆಡಿದ ಬುದ್ಧಿಜೀವಿಗಳ ಸುದ್ದಿಯು ಒಂದು ಭಾಗವಾಗಿತ್ತು. ಇರಲಿ ಬಿಡಿ... ಊರಿಗೊಂದು ದಾರಿಯಾದರೆ ಈ ಎಡವಟ್ಟು ಜೀವಿಗಳಿಗೇ ಒಂದು ದಾರಿ... ಬುದ್ಧಿಜೀವಿಗಳು ವಿಘ್ನ ಸಂತೋಷಿಗಳಾಗುತ್ತಿದ್ದಾರೆ, ಎಲ್ಲದರಲ್ಲೂ ತಪ್ಪು ಕಾಣುವುದು, ಕೊಂಕು ಮಾತನಾಡುವುದು  ಅವರ ಜಾಯಮಾನ.  ನಿನ್ನೆ ಬುಧವಾರವಂತೂ ಭಾರತದ ಮೂಲೆ ಮೂಲೆಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಬಹು ಜನರ ಹೃದಯದಲ್ಲಿ ಇದ್ದ ಆಶಯ - ಚಂದ್ರಯಾನ-3 ಯಶಸ್ವಿಯಾಗಲಿ ಎಂಬುದು- ಅದು ಪ್ರಾರ್ಥನೆಯೂ ಸಹ. ಆ ಪ್ರಾರ್ಥನೆ ಫಲಿಸಿದ ಕ್ಷಣ ನಿಜಕ್ಕೂ ಅವಿಸ್ಮರಣೀಯ.  TV ಯ ಮುಂದೆ ಕುಳಿತು ನೋಡುತ್ತಿದ್ದ ನನಗೆ, ವಿಕ್ರಮ.. ಚಂದ್ರನ ಮೇಲೆ ತನ್ನ ಕಾಲೂರಿದ ಆ ಕ್ಷಣ ರೋಮಾಂಚನವಾಯಿತು.  ಇದು ಕೋಟ್ಯಾಂತರ ಜನರ ಅನುಭವವೂ ಆಗಿರಬಹುದು ಎಂದು ನನ್ನ ನಂಬಿಕೆ. ನನ್ನಂತೆ ಎಲ್ಲರ ಹೃದಯವು ತುಂಬಿ ಬಂದಿರತ್ತೆ. ISRO ದ ಸಿಬ್ಬಂದಿ ವರ್ಗದವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಸಂಭ್ರಮಿಸಿದ್ದೇ ಸಂಭ್ರಮಿಸಿದ್ದು.  ಪ್ರಧಾನ...

ಓದಿನ ವೈಖರಿ..

Image
ಓದಿನ ವೈಖರಿ.. ಮಂಗಳವಾರ ನನ್ನ ಕೊನೆಯ ಅಕ್ಕ ಗಿರಿಜಾಂಬ ಮನೆಗೆ ಹೋಗಿದ್ದೆ. ಲೋಕಾಭಿರಾಮವಾಗಿ ಮಾತುಕತೆ ಇದ್ದರೂ ಸಹ ಹರಟೆಯ ರೂಪದಲ್ಲಿ ಹಳೆಯದನ್ನು ನೆನೆಸಿಕೊಳ್ಳುವುದು ಒಂದು ಮುಖ್ಯವಾದ ಅಂಗ. ನೆನ್ನೆಯ ಈ ಹರಟೆಯಲ್ಲಿ ಚರ್ಚೆ ಆದದ್ದು ನನ್ನ ನಿದ್ದೆ ಮತ್ತು ಓದು... ಈ ಲೇಖನಕ್ಕೆ ಅದೇ ಸ್ಪೂರ್ತಿ. ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಇದು ವೇದ ವಾಕ್ಯದಷ್ಟೇ ಸತ್ಯ. ಜೀವನಕ್ಕೆ ಬೇಕಾದ ಕೌಶಲಗಳನ್ನು ತಿಳಿಸಲು ಪ್ರಾರಂಭ ಬಾಯಿ ಪಾಠದಿಂದ ಅನ್ನುವುದು ನನ್ನ ಸ್ವಂತ ಅನುಭವ. ಸೋಮವಾರದಿಂದ ಶುರುವಾಗಿ ಭಾನುವಾರದವರೆಗೆ ವಾರಗಳು, ಪ್ರಭವದಿಂದ ಅಕ್ಷಯದವರೆಗೆ ಸಂವತ್ಸರಗಳು, ಚೈತ್ರದಿಂದ.. ಫಾಲ್ಗುಣದ ವರೆಗೆ ತಿಂಗಳುಗಳು, ಪಾಡ್ಯ ದಿಂದ ಅಮಾವಾಸ್ಯೆ ಪೂರ್ಣಿಮೆಯವರೆಗೆ ದಿನಗಳು, ಅಂಕಿಗಳು, ಸಂಡೆ ಮಂಡೆ, ಜನವರಿ ಫೆಬ್ರವರಿ ಹೀಗೆ ಎಲ್ಲವೂ ಬಾಯಿ ಪಾಠದ ಮೂಲಕವೇ ಕಲಿತದ್ದು.  ಅಧಿಕೃತವಾಗಿ ಓದು ಬರಹ ಅಕ್ಷರಭ್ಯಾಸದಿಂದ ಶುರುವಾದರೂ, ಅನಧಿಕೃತವಾಗಿ ಬಾಯಿ ಪಾಠ ಒಂದು ಹಂತಕ್ಕೆ ಬಂದಿರುತ್ತದೆ. ಇದು ಮಕ್ಕಳ ಕಲಿಕೆಯನ್ನು ಬಂದವರ ಮುಂದೆ ಪ್ರದರ್ಶಿಸಲು ಒಂದು ಮಾರ್ಗ. ಬಾಯಿ ಪಾಠದ ಮುಂದಿನ ಭಾಗ... ಶಾಲೆಯಲ್ಲಿ ಒಂದರಿಂದ ಹತ್ತರ ಮಗ್ಗಿಯನ್ನು ಎಲ್ಲರೂ ಒಟ್ಟಿಗೆ ಹೇಳುವುದು.. ಒಂದರ ಮಗ್ಗಿಯಿಂದ ಶುರುವಾದ ತಾರಕ ಸ್ವರದ ಹೇಳಿಕೆ ಎರಡರ ನಂತರ ಮಂದ್ರಕ್ಕೆ ಹೋಗಿ  ಒಂಬತ್ತಕ್ಕೆ ಬರುವಷ್ಟಲ್ಲಿ... ಸ್ವರ ಉಡುಗಿಯೇ ಹೋಗಿರುತ್ತಿತ್ತು... ಹತ್ತಕ್ಕೆ ಬಂದಾಗ ಹತ್...

ಸ್ನೇಹ - ಸ್ನೇಹಿತರು

Image
 ಸ್ನೇಹ - ಸ್ನೇಹಿತರು ಹೋದವಾರ ಪತ್ರಿಕೆಗಳು, ಟಿವಿ ಹಾಗೂ ಎಲ್ಲಾ ಮಾಧ್ಯಮಗಳಲ್ಲೂ ಸ್ನೇಹಿತರ ದಿನಾಚರಣೆಯದೇ ಸಾಕು ಸಾಕು ಸಾಕೆನುಸುವಷ್ಟು ಅಬ್ಬರ.  ಸ್ವಲ್ಪ ಕಿರಿಕಿರಿ ಆಗಿದ್ದೂ ಉಂಟು. ಆದರೆ ಇನ್ನೊಂದು ದಿಕ್ಕಿನಲ್ಲಿ ಯೋಚಿಸಿದಾಗ... ಅದೂ ಸಹ ನಮ್ಮದೇ ಸಂಪ್ರದಾಯಗಳನ್ನು ಹೋಲುತ್ತದೆ.... ಉದಾಹರಣೆಗೆ ವರ್ಷಕೊಮ್ಮೆ ರಾಮ ನವಮಿಯ ಪಾನಕ, ಸಂಕ್ರಾಂತಿಯ ಎಳ್ಳು ಬೆಲ್ಲ, ನವರಾತ್ರಿಯ ಬನ್ನಿ, ನಾಗರ ಪಂಚಮಿಯಲ್ಲಿ ಬೆನ್ನಲ್ಲಿ ಬಿದ್ದವರಿಗೆ ಬೆನ್ನು ತೊಳೆಯುವ ಸಂಭ್ರಮ, ಭೀಮನ ಅಮಾವಾಸ್ಯೆ ಯಲ್ಲಿ ಅಣ್ಣ ತಮ್ಮಂದಿರು ಭಂಡಾರ ಹೊಡೆಯುವುದು, ಗೌರಿ ಹಬ್ಬದಲ್ಲಿ ಹೆಣ್ಣು ಮಕ್ಕಳಿಗೆ ಬಾಗಿನ ಕೊಡುವುದು ಹೀಗೆ... ಸಂಭಂಧಗಳನ್ನು ಬೆಸೆಯುವ ಕಾರ್ಯಕ್ರಮಗಳು... ಹಾಗಾಗಿ ನಿರಂತರವಾದ ಸ್ನೇಹವನ್ನು ಬೆಸೆಯಲು / ಸಂಭ್ರಮಿಸಲು ಒಂದು ದಿನ ಒಳ್ಳೆಯದೇ ಅಲ್ಲವೇ?  ಗೆಳೆಯರು, ಗೆಳೆತನ ಅಂದಾಗ ನನಗೆ ಮೊದಲು ಹೊಳೆಯುವುದು ಮಹಾಭಾರತದ ಎರಡು ಗೆಳೆತನಗಳು.ಒಂದು ಕೃಷ್ಣ ಸುಧಾಮರದು ಇನ್ನೊಂದು ದೃಪದ ದ್ರೋಣರದು. ಮೊದಲನೆಯದು ಹೇಗಿರಬೇಕು ಎಂದು ತೋರಿಸಿದರೆ ಎರಡನೆಯದು ಹೇಗಿರಬಾರದು ಎಂದು ತೋರಿಸುತ್ತೆ. ಕೃಷ್ಣ ತನ್ನ ಬಾಲ್ಯದ ಗೆಳೆಯನನ್ನು ಯಾವುದೇ ಹಂತದಲ್ಲೂ ಮರೆಯಲಿಲ್ಲ, ಕಡೆಗಣಿಸಲಿಲ್ಲ, ಬಹು ಆದರದಿಂದಲೇ ಕಂಡವನು. ಆದರೆ ದೃಪದನ ಮನಃಸ್ಥಿತಿಯೇ ಬೇರೆ. ತಾನು ರಾಜನಾದ ಮೇಲೆ ಸಹಾಯ ಕೇಳಲು ಬಂದ ದ್ರೋಣನನ್ನು ಕೀಳಾಗಿ ಕಂಡಿದ್ದು, ಛೇಡಿಸಿದ್ದು, ಭಿಕ್ಷೆಯನ್ನು ಕೊಡಬಲ್ಲ...

ಪ್ರತಿಭಾ ಪುರಸ್ಕಾರ

Image
 ಪ್ರತಿಭಾ  ಪುರಸ್ಕಾರ ಹೋದ ಭಾನುವಾರ, ಗವಿಪುರದ ಹರಿ ಹರೇಶ್ವರನ ಸನ್ನಿಧಿಯಲ್ಲಿ, ತಿಮ್ಮೇಶ ಪ್ರಭು ಉದ್ಯಾನವನದಲ್ಲಿ, ಸ್ನೇಹ ರಂಗದ ಆಶ್ರಯದಲ್ಲಿ 12ನೇ ವರ್ಷದ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿದೆವು.. ಸುಮಾರು ನೂರು ಜನ ಮಕ್ಕಳಿಗೆ - 10ನೇ ತರಗತಿ ಹಾಗೂ ಪಿಯು ತರಗತಿಯಲ್ಲಿ ಹೆಚ್ಚು ಅಂಕ ತೆಗೆದ, ಜೊತೆಗೆ ಕನ್ನಡ ಮತ್ತು ಸಂಸ್ಕೃತದಲ್ಲಿ ಹೆಚ್ಚು ಅಂಕ ಗಳಿಸಿದವರನ್ನು ಪುರಸ್ಕರಿಸಲಾಯಿತು. ಮಕ್ಕಳು, ಅವರ ಹೆತ್ತವರು, ಕೆಲ ಉಪಾಧ್ಯಾಯರುಗಳು,ಹಿತೈಷಿಗಳು ಪಟ್ಟ ಸಂಭ್ರಮ ಹೇಳತೀರದು... ಅವರವರ ಮಕ್ಕಳು ಗೌರವಿಸಲ್ಪಟ್ಟಾಗ ಅವರು ಹಿಗ್ಗುತ್ತಿದ್ದದ್ದನ್ನು ನೋಡಲು ಸಂತಸವಾಗುತಿತ್ತು.... ಸಹಜವಲ್ಲವೇ ನಮ್ಮ ಮಕ್ಕಳನ್ನು ಯಾರಾದರೂ ಮೆಚ್ಚಿದರೆ, ಗೌರವಿಸಿದರೆ ನಮಗೆ ಹೆಮ್ಮೆಯೇ. ಸ್ನೇಹ ರಂಗ ಶುರುವಾಗಿದ್ದು ಒಂದು ಅನೌಪಚಾರಿಕ ಗುಂಪಿನಂತೆ.. ಇದೀಗ ಅದು ಒಂದು ಸಂಸ್ಥೆಯಾಗಿ ರೂಪು ಗೊಳ್ಳುತ್ತಿದೆ.  ಅಂದಿಗೆ ಸಮಾನ ಮನಸ್ಕರು ಒಂದಷ್ಟು ಜನ ಸೇರಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶುರುಮಾಡಿದೆವು. ಮಂಜು (ಎ. ಮಂಜುನಾಥ) ಈ ಕಾರ್ಯಕ್ರಮಕ್ಕೆ ತನ್ನನ್ನು ತಾನು ಸಂಪೂರ್ಣ ತೊಡಗಿಸಿಕೊಂಡವನು, ಹಾಗೂ ಸಾಕಷ್ಟು ಜನರ ಸಹಕಾರದೊಂದಿಗೆ,  ಇಂದಿನವರೆಗೂ ಅದು ನಡೆದು ಬರುತ್ತಿದೆ. ಸುಮಾರು 15 ಮಕ್ಕಳನ್ನು ಗೌರವಿಸುವ ಗುರಿಯೊಂದಿಗೆ ಶುರುವಾದ ಕಾರ್ಯಕ್ರಮ ಇಂದು ಶತಕವನ್ನು ಮುಟ್ಟಿದೆ ಅನ್ನುವುದೇ ಹೆಗ್ಗಳಿಕೆ. ...

ಅಮ್ಮನ ಮಡಿಲು.. ಅಪ್ಪನ ಹೆಗಲು

Image
 ಅಮ್ಮನ ಮಡಿಲು.. ಅಪ್ಪನ ಹೆಗಲು ಬುಧವಾರ ಸುಮಾರು 12 ಗಂಟೆ ಸಮಯದಲ್ಲಿ ಮನೆಗೆ ಬರ್ತಾ ಇದ್ದೆ. ಸಣ್ಣಗೆ ಹನಿ ಹಾಕ್ತಾ ಇತ್ತು.... ಕೆಂಪು ದೀಪ ಅಡ್ಡ ಬಂತು ಅಂತ ನನ್ನ ಗಾಡಿಯನ್ನು ನಿಲ್ಲಿಸ್ದೆ.... ಪಕ್ಕದಲ್ಲಿ ಸ್ಕೂಟರ್ ನ ಮುಂದಿನ ಜಾಗದಲ್ಲಿ ನಿಂತಿದ್ದ ಮಗುವಿನ ಕಣ್ಣಲ್ಲಿ ನೀರು ಹರೀತಿತ್ತು.... ಮನಸ್ಸು ತಡೆಯದೆ ಕೇಳಿದೆ ' ಯಾಕೋ ಮರಿ ಅಳ್ತಾ ಇದ್ದೀಯಾ'  ಅಂತ. ಉತ್ತರ ಕೊಟ್ಟಿದ್ದು ಮಗುವಿನ ಅಮ್ಮ... ನೋಡಿ ಹನಿ ಬರ್ತಾ ಇದೆ ತಲೆ ಮೇಲೆ ಟೋಪಿ ಹಾಕು ಅಂದ್ರೆ ಬೇಡ ಅಂತ ಹಠ ಮಾಡ್ತಾಳೆ.... ಕೋಪ ಬಂತು ತಲೆ ಮೇಲೆ ಮಟಕ್ದೆ.. ಅದಕ್ಕೆ ಅಳು.    ಮಗು ಅಮ್ಮನ ತೊಡೇನ ತಬ್ಬಿ ಕೊಳ್ತು, ಅಮ್ಮ ಮಗುನ ಮುದ್ದು ಮಾಡಿ ಕಣ್ಣೀರು ಒರೆಸಿದ್ಲು ಅಷ್ಟರಲ್ಲಿ ಹಸಿರು ದೀಪ ಬಂತು ನನ್ನ ದಾರಿ ನಾನು ಹಿಡಿದೆ.   ಅಮ್ಮನಿಂದನೆ ನೋವಾಗಿದ್ರು, ಅಮ್ಮನ ಪ್ರೀತಿಯ ಅಪ್ಪುಗೆ ಆ ಮಗುವಿಗೆ ಸಮಾಧಾನ ಕೊಡ್ತು... ಅದೇ ಅಲ್ವಾ ಅಮ್ಮನ ಅಪ್ಪುಗೆಯ ವಿಶೇಷತೆ. "ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು... ನಿನ್ನ ಸಂಗ ಆಡಲೆಂದು ಬಂದೆ ನಾನು...." ಕಪ್ಪು ಬಿಳುಪು ಚಿತ್ರದ ಈ ಹಾಡಿನ ದೃಶ್ಯದಲ್ಲಿ ಕಲ್ಪನಾ ಅವರ ಅಭಿನಯ ನೋಡಿದಾಗ ಅಮ್ಮನ ತೋಳಿನ ಹಿತವಾದ ಅನುಭವದ ಕಲ್ಪನೆ ತಾನಾಗಿ ನಮ್ಮ ಮುಂದೆ ಬರುತ್ತದೆ ಮನೆಯಲ್ಲಿ ಹೆಂಡತಿ ಇರಲಿಲ್ಲ, ನಾನೊಬ್ಬನೇ... ಸಂಜೆಯಾದರೆ ಮತ್ತೆ ಜಿಟಿ ಜಿಟಿ ಮಳೆ, ಮಬ್ಬು ಬೆಳಕಿನ ವಾತಾವರಣ.. ತಿನ್ನಕ್ಕೆ ಏನಾದರೂ ಬಿಸಿ ಬಿಸಿ ...

ಘ್ನಾನಪೀಠ...

Image
 ಘ್ನಾನಪೀಠ... ಶೀರ್ಷಿಕೆಯಲ್ಲಿ ಕಾಗುಣಿತ ತಪ್ಪು ಅನಿಸ್ತಾ ಇದೆಯಾ?  ನಿಮ್ಮ ಯೋಚನೆ ತಕ್ಕಮಟ್ಟಿಗೆ ಸರಿ ಇದೆ, ಚಿತ್ರಕ್ಕೂ ಶೀರ್ಷಿಕೆಗೂ ಅರ್ಥಾರ್ಥಕ್ಕೆ ಸಂಭಂದ ಇಲ್ಲ ಅನ್ಸತ್ತಾ? ನೀವು ನೂರಕ್ಕೆ ನೂರು ಸರಿ.  ಆದರೆ ಸ್ವಲ್ಪ ತಾಳಿ ನಾನು ಯೋಚನೆ ಮಾಡಿಯೇ ಬರೆದಿದ್ದೇನೆ... ಅದಕ್ಕೂ ಮೊದಲು ನಾನು ನನ್ನೆಲ್ಲಾ ಓದುಗರಿಗೆ ಸಪ್ರೇಮ ನಮಸ್ಕಾರಗಳನ್ನ ತಿಳಿಸುತ್ತೇನೆ. ಯಾಕೆ ಗೊತ್ತಾ... ಹೊಸ ದಾರಿಯಲ್ಲಿ ನಿಮ್ಮನ್ನು ಮುಟ್ಟಿದ ನನ್ನ ಬ್ಲಾಗ್  " ಎಂಟು ವರ್ಷಕ್ಕೆ ಮಗ ದಂಟು ಅಂದ"  ಅನ್ನು ನನ್ನ ಊಹೆಗೂ ಮೀರಿ ನೋಡಿ, ಅಭಿಪ್ರಾಯಗಳನ್ನು ತಿಳಿಸಿದ್ದಕ್ಕಾಗಿ.  ಅದರಲ್ಲೂ ನನ್ನ ಪುಟ್ಟ ನಾದಿನಿ ಮನಸಿ  (ಡಾ// H R ಮನಸ್ವಿನಿ  MD (Ayu) , MSc, DFSM) ...ಮಾಡಿದ  "ನಿಮ್ಮಿಂದ ಸ್ಪೂರ್ತಿ ಪಡೆದು ನಾನು ಬ್ಲಾಗ್ ಬರೀತೀನೀ ಅಂತ ನೀವ್ಯಾಕೆ ಬರೀಲಿಲ್ಲ"  ಅನ್ನುವ ಆಕ್ಷೇಪಣೆ... ನನಗೂ ಸಂತೋಷ ಆಯ್ತು... ನನ್ನಿಂದ ಅವಳಿಗೆ ಸ್ಪೂರ್ತಿ ಸ್ಪುರಿಸಿತಲ್ಲ ಅಂತ.   ಮನಸ್ವಿನಿಯ ಬರವಣಿಗೆ ಚೆನ್ನಾಗಿ ಮುಂದುವರೆಯಲಿ ಎಂದು ಆಶಿಸುತ್ತಾ.... ವಿಷಯಾಂತರ ಆಗಿದ್ದಕ್ಕೆ ಕ್ಷಮೆ ಇರಲಿ ಮತ್ತೆ ನನ್ನ ವಿಷಯಕ್ಕೆ ಬರ್ತೀನಿ... ಘ್ನಾನಪೀಠ.. ಕನ್ನಡಪ್ರಭದಲ್ಲಿ ಬರುವ ಒಂದು ಪ್ರಶ್ನೋತ್ತರ ಅಂಕಣ... ಆ ಅಂಕಣದ ಲೋಗೋ ಸರಿಸುಮಾರು ಇಂತಿದೆ. ಅದನ್ನು ನೋಡಿದಾಗೆಲ್ಲಾ  ನನಗನಿಸೋದು " ಉತ್ತರ ಹೊಳಿಯಕ್ಕೆ ಅದು...

ಕಣ್ಣು.. ಅದ ಮಾಡದಿರಿ ಮಣ್ಣು

Image
ಕಣ್ಣು.. ಅದ ಮಾಡದಿರಿ ಮಣ್ಣು  ಪಂಚೇಂದ್ರಿಯಗಳು ನಮ್ಮ ದೇಹದ sensor ಗಳು. ನಮ್ಮ ಎಲ್ಲ ದೈನಂದಿನ ಕೆಲಸಗಳಲ್ಲಿ ಪೂರಕವಾಗಿ ಇರುವ ಈ sensor ಗಳು ಬಹು ಪ್ರಾಮುಖ್ಯತೆ ಪಡೆದಿವೆ. ಎಲ್ಲ ಇಂದ್ರಿಯಗಳಿಗೂ ಅದರದೇ ಸ್ಥಾನವಿದೆ, ಅದರಲ್ಲೂ  ಕಣ್ಣು ಪಂಚೇಂದ್ರಿಯಗಳಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ. ನಮ್ಮ ಸುತ್ತಲಿನ ಎಲ್ಲ ಆಗುಹೋಗುಗಳನ್ನು ಮೊದಲು ಗಮನಿಸುವುದು ಕಣ್ಣು.... ಕಣ್ಣು ಸುತ್ತಲಿನ ಸೌಂದರ್ಯವನ್ನು ನೋಡಲಷ್ಟೇ ಅಲ್ಲ, ಅದು ನಮ್ಮ ಸೌಂದರ್ಯವನ್ನು ಹೆಚ್ಚಿಸುವ ಅಂಗ. ಸೌಂದರ್ಯ ಎನ್ನುವ ಪದ ಬಂದ ಕೂಡಲೇ ಅದರ ಜೊತೆ ಬರುವುದು ಹೆಣ್ಣು. ಹೆಣ್ಣಿಗೂ ಕಣ್ಣಿಗೂ ಅವಿನಾಭಾವ ಸಂಬಂಧ. ಹೆಣ್ಣು ಸಂಸಾರದ ಕಣ್ಣು ಎಂದಾಗ, ಕಣ್ಣಿಗಿರುವ ಪ್ರಾಶಸ್ತ್ಯ ಸಂಸಾರದಲ್ಲಿ ಹೆಣ್ಣಿಗೂ ಇದೆ ಎಂದು ಹೇಳಿದೆ.  ಕವಿಗಳು ಕಾದಂಬರಿ ಕಾರರು ಹೆಣ್ಣಿನ ವರ್ಣನೆಯಲ್ಲಿ ಕಣ್ಣಿಗೆ ಮೊದಲ ಸ್ಥಾನವನ್ನು ಕೊಟ್ಟಿದ್ದಾರೆ. ಇನ್ನು ಕಣ್ಣಿನ ಶಕ್ತಿಯ ವಿಷಯಕ್ಕೆ ಬಂದಾಗ " ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ" , ನಮ್ಮ ರಾಜಕುಮಾರ ಹಾಡಿದ ಹಾಡಿಗಿನ್ನ ಬೇಕೆ? " ಹೆಣ್ಣಿನ ಮೇಲೆ ಕಣ್ಣಿಡುವಾಗ ನಿಗಾ ತುಂಬಬೇಕು, ಕಣ್ಣಲ್ಲಿ ಕಣ್ಣಿಡಬೇಕು ಛಲಬೇಕು"   " ಕಣ್ಣು ಕಣ್ಣು ....."  ಇಂದ ಶುರುವಾಗುವ ಕೆಲ ಹಾಡುಗಳು,  ಇವೆಲ್ಲಾ ಕಣ್ಣಿನ ಬಣ್ಣನೆ. ಹೆಣ್ಣಿನ ಕಣ್ಣೀರು ಎಂಥ ಕಲ್ಲು ಹೃದಯದ ಗಂಡಸರನ್ನು ಕರಗಿಸುತ್ತದೆ ಎನ್ನುವುದು ಸ್ವಲ್ಪ ಉತ್ಪ್ರೇಕ್ಷೆಯ...

ಎಂಟು ವರ್ಷಕ್ಕೆ ಮಗ... ದಂಟು ಅಂದ

Image
 ಎಂಟು ವರ್ಷಕ್ಕೆ ಮಗ... ದಂಟು ಅಂದ ಏನಿದು ಶೀರ್ಷಿಕೆ ಅನಿಸ್ತಾ?   ಹೌದು ರೀ.. ನನ್ನ ಪರಿಸ್ಥಿತೀನು ಈಗ ಹಾಗೆ ಇದೆ. ಇದು ನನ್ನ 48ನೇ ಬ್ಲಾಗ್. ... ಎಂಟು ಅಂತ ಕೊನೆಗೆ ಬಂದಾಗ ನನಗೆ ನೆನಪಾಗಿದ್ದೇ ಈ ಶೀರ್ಷಿಕೆ... ವರ್ಷ ಎಂಟಕ್ಕೆ ಅಂದ ಮಗ ದಂಟು 48 ಮುಟ್ಟಕ್ಕೆ ನಾ ತಗೊಂಡೆ ತಿಂಗಳು 68...  ಸ್ವಂತ ಮನೆ ಕಟ್ಟಿದಾಗ ನನ್ನ ವಯಸ್ಸು 48 ಈಗ ತಕ್ಕಮಟ್ಟಿಗೆ ಅರ್ಥ ಆಯ್ತಾ ಯಾಕೆ ಈ ಶೀರ್ಷಿಕೆ ಅಂತ... 48 ಸಂಭ್ರಮಿಸಲು ಯಾವ ಮಾನದಂಡ? ಸಾಮಾನ್ಯವಾಗಿ 25, 50, 60, 75, 100 ಹೀಗೆ ಸಂಭ್ರಮಿಸುವ ಘಟ್ಟಗಳು.... ನನ್ನ ಮೆಚ್ಚಿನ ಲೇಖಕರು ಬೀchi ಹೇಳಿದಂತೆ.....60 ವರ್ಷಕ್ಕೆ ಸಂಭ್ರಮಿಸಲಿಕ್ಕೆ ಏನಿದೆ ರೀ...59ಕ್ಕೆ ಸಾಯ್ಲಿಲ್ಲ ಅದಕ್ಕೆ 60 ಆಗಿದೆ.. ಅದರಲ್ಲಿ ಏನು ವಿಶೇಷ ಇಲ್ಲ....  ಅಂಥಹವರ ಮಾತನ್ನ ಇಟ್ಕೊಂಡು ನಾನು 48 ನ್ನ ಗುರ್ತಿಸ್ದೆ, ಹೌದಲ್ಲ ಅನ್ನಿಸ್ತು... ಅಷ್ಟೇ.. 48 ಬ್ಲಾಗ್ ಬರ್ದಿದಿನಿ ಅಂತ  ಜಂಭ ಕೊಚ್ಕೊಳ್ತಿದೀನ... ಗೊತ್ತಾಗ್ತಾ ಇಲ್ಲ... ಯೋಚನೆ ಮಾಡಿದಾಗ ದೊಡ್ಡವರು ಹೇಳಿದ್ದ ಮಾತು ನೆನಪಿಗೆ ಬಂತು... ಒಂದು - ನಿನ್ನ ಬಗ್ಗೆ ನೀನೇ ಹೆಚ್ಚಿಗೆ ಹೇಳಬೇಡ.. ನಿನ್ನ ಕೆಲಸ ಹೇಳ್ಬೇಕು ಅದನ್ನ ಬೇರೆಯವರು ಮೆಚ್ಚಿ ಹೇಳ್ಬೇಕು..  ಇನ್ನೊಂದು ಮಾತು  - ನಿನ್ನ ಶಕ್ತಿ / ಪ್ರತಿಭೆ ಬಗ್ಗೆ ನೀನೇ ಹೇಳದಿದ್ದರೆ ನಿನ್ನ ಪರವಾಗಿ ಬೇರೆಯವರು ಯಾಕೆ ಹೇಳ್ತಾರೆ... ಸ್ವಲ್ಪ ತುತ್ತೂರಿ ಊದಬೇಕು.. ಆ ...

ಯೋಗ ದಿನದ ಆಚರಣೆ @ ಅಶಕ್ತ ಪೋಷಕ ಸಭಾ

Image
 ಯೋಗ ದಿನದ ಆಚರಣೆ @ ಅಶಕ್ತ ಪೋಷಕ ಸಭಾ ನೆನ್ನೆಯ ದಿನದ ಕಾರ್ಯಕ್ರಮದ ಗುಂಗಿನಲ್ಲೇ ಬೆಳಗ್ಗೆ ಎದ್ದೆ... ಈಗೀಗ ಎದ್ದು ಬೆಳಗಿನ ಶುಚಿ ಕಾರ್ಯ ಕ್ರಮಗಳು ಮುಗಿದ ಕೂಡಲೇ ಫೋನ್ ಕೈಗೆತ್ತಿಕೊಳ್ಳುವುದು ಒಂದು ಚಟವೇ ಆಗಿದೆ. ಎಂದಿನಂತೆ ಫೋನ್ ಕೈಗೆತ್ತಿಕೊಂಡಾಗ ಅದರ ವಾಟ್ಸಪ್ ಮೆಸೇಜುಗಳ ಒಂದು ಪಟ್ಟಿ.. ಅಶಕ್ತ ಪೋಷಕ ಸಭಾ ಸಮೂಹ ಎಂಬ ಗ್ರೂಪ್ನಲ್ಲಿ ಚಿತ್ರಗಳು ಹಾಗೂ ವೀಡಿಯೋಗಳ ಸುರಿಮಳೆ... ಈ ಚಿತ್ರಗಳು ಹಾಗೂ ವಿಡಿಯೋಗಳು ನೆನ್ನೆಯ ದಿನ ಅಶಕ್ತ ಪೋಷಕ ಸಭಾ ದಲ್ಲಿ ನಡೆದ ಯೋಗ ದಿನದ ಕಾರ್ಯಕ್ರಮಕ್ಕೆ ಸಂಬಂಧ ಪಟ್ಟಿದ್ದು.... ಅದನ್ನು ನೋಡುತ್ತಾ ಸಭಾದ ನಿವಾಸಿಗಳು ನಡೆಸಿಕೊಟ್ಟ ಕಾರ್ಯಕ್ರಮ... ಹಾಗೂ ಅವರಲ್ಲಿ ಆದ ಬದಲಾವಣೆಗಳ ನೆನಪಿನ ಓಟ ಮನಸ್ಸಿನಲ್ಲಿ ಮೂಡಿತು. ಅಶಕ್ತ ಪೋಷಕ ಸಭಾ ಒಂದು ವೃದ್ಧಾಶ್ರಮ, ಬೆಂಗಳೂರಿನ ವಿಶ್ವೇಶ್ವರಪುರ ದಲ್ಲಿ ಇದೆ. ಇದು ಶತಮಾನ ಕಂಡಿರುವ ಒಂದು ಸಂಸ್ಥೆ. ಇದರಲ್ಲಿ 120ಕ್ಕೂ ಹೆಚ್ಚು ಜನ ನಿವಾಸಿಗಳಿದ್ದಾರೆ. ಎಲ್ಲವೂ ಅಚ್ಚುಕಟ್ಟು ಹಾಗೂ ಎಲ್ಲವೂ ಉಚಿತ.... ಇದು ಈ ಸಂಸ್ಥೆಯ ವಿಶೇಷತೆ. ಒಂದು ಸಂಸ್ಥೆ ಒಂದು ಶತಮಾನದ ಕಾಲ ನಡೆದು ಬಂದಿದೆ ಎನ್ನುವುದೇ ಒಂದು ವಿಶೇಷ... ಇದಕ್ಕೆ ಮೂಲತಃ ಅಡಿಪಾಯ ಹಾಕಿದ ಮಹನೀಯರ ಧ್ಯೇಯ, ನಿಸ್ವಾರ್ಥ ಮನೋಭಾವ ಹಾಗೂ ಬದ್ಧತೆ... ಅದನ್ನು ಉಳಿಸಿ ಪೋಷಿಸಿ ಬೆಳೆಸಿದ ಮುಂದಿನ ತಲೆಮಾರಿನ ಮಹನೀಯರು ಹಾಗೂ ಇಂದಿನ ಆಡಳಿತ ವರ್ಗ ಹಾಗೂ ಸಿಬ್ಬಂದಿಯ ಮುಂದುವರಿದ ಅದೇ ಧ್ಯೇಯ, ನಿಸ್ವಾರ್ಥ ಮನೋಭಾವ ಹಾಗ...

ಹಣ್ಣುಗಳ ರಾಜ - ಮಾವು

Image
 ಹಣ್ಣುಗಳ ರಾಜ - ಮಾವು ಇದು ಮಾವಿನ ಹಣ್ಣಿನ ಕಾಲ... ಎಲ್ಲಿ ನೋಡಿದರೂ ರಾಶಿ ರಾಶಿ ವಿಧವಿಧವಾದ ಮಾವಿನ ಹಣ್ಣುಗಳು. ನೋಡಲು ಚೆನ್ನ ತಿನ್ನಲ್ಲಂತೂ ಬಹು ಚೆನ್ನ. ಮಾವಿನ ಹಣ್ಣನ್ನ ಹಣ್ಣುಗಳ ರಾಜ ಅಂತ ಹೇಳ್ತಾರೆ. ಎಲ್ಲ ಹಣ್ಣುಗಳು ತಿನ್ನಲು ಅದರದೇ ಆದ ವಿಶೇಷ ರುಚಿಯನ್ನು ಹೊಂದಿದ್ದರೂ, ನನಗೆ ಅನ್ನಿಸಿದ ಹಾಗೆ ಮಾವಿನ ಕಾಯಿ ಹಾಗೂ ಮಾವಿನ ಹಣ್ಣುಗಳಲ್ಲಿ ಮಾಡುವ ವೈವಿಧ್ಯ ತಿನಿಸುಗಳು ಮಾವಿನ ಹಣ್ಣಿನ ಸ್ಥಾನಕ್ಕೆ ಒಂದು ಮೆಟ್ಟಿಲು ಮೇಲೆ ಕೊಟ್ಟಿರಬಹುದು. ಈ ವೈವಿಧ್ಯ ಹೇಳಲು ಒಂದು ಆರು ಸಾಲಿನ ಪದ್ಯ ನನಗೆ ತೋಚಿದ್ದು... ಗೀಚಿದ್ದು.. (ಬೀchiಯವರ ಮಾತಿನಂತೆ ತೋಚಿದ್ದು ಬೀಚಿದ್ದು) ನಿಮಗಾಗಿ.. ಚಿತ್ರಾನ್ನದ ಜೊತೆ ಹಣ್ಣಿನ ಪಾಯಸ,  ರುಚಿ ರುಚಿ ಹಣ್ಣು ಅದರದ್ದೇ ರಸ ಅಪ್ಪೆಸಾರು ಉಪ್ಪಿನಕಾಯಿ ಕೋಸಂಬರಿಗೆ ಮಾವಿನಕಾಯಿ  ಚಟ್ಣೀ ಗೊಜ್ಜು ಸಿಕರಣೆ ದೇವರೇ ನಿನಗೆ ಆರೋಗಣೆ ನಾನು ಹಳ್ಳಿಯಲ್ಲಿ ತಿಂದಂಥ ಒಂದೆರಡು ವಿಧವಾದ ಮಾವಿನ ಹಣ್ಣು ಹೊರತುಪಡಿಸಿದರೆ, ಈಗಿರುವ ವೈವಿಧ್ಯ ಮಾವಿನ ಹಣ್ಣಿನ ತಳಿಗಳು ನಿಜವಾಗಲೂ ಗೊತ್ತಾದದ್ದು ಬಹಳ ತಡವಾಗಿ, ಕೆಲವಂತೂ ಈಚೀಚೆಗೆ.... ಯಾವುದರ ರುಚಿ ಹೇಗೆ ಎನ್ನುವ ಸಂಪೂರ್ಣ ಅರಿವಿಲ್ಲ.  ಬೇಸಿಗೆಯ ರಜ, ನಮಗೆಲ್ಲ ಈಜುವ, ಆಟವಾಡುವ ಹಾಗೂ ಸಿಕ್ಕಸಿಕ್ಕ ಹಣ್ಣುಗಳನ್ನು( ಕಾಯಿ, ಪಿಂದೆ, ದೊರೆಗಾಯಿ, ಹಣ್ಣು ಎಲ್ಲವೂ ಸೇರಿ) ತಿನ್ನುವುದೇ ಒಂದು ಮೋಜು. ಯಾವಾಗಲೂ ನಮ್ಮ ಚಡ್ಡಿಯ ಜೇಬಿನಲ್ಲಿ ಉಪ್ಪು ಮೆಣಸಿನ ಪುಡಿ...

ಒಡಪು - ವೈಯಾರ- ಹೆಸರು

Image
ಇದೇನಿದು ಶೀರ್ಷಿಕೆಯೇ ಒಂದಕ್ಕೊಂದು ಸಂಬಂಧವಿಲ್ಲದಂಗೆ ಇದೆಯೆಂದು ಯೋಚಿಸುತ್ತಿದ್ದೀರಾ? ಬನ್ನಿ ನೋಡೋಣ.  ಒಡಪು ಎಂದರೆ ಒಗಟು ಸಹ, ಸಮಸ್ಯೆ ಎಂಬ ಅರ್ಥವೂ ಇದೆ. ಇನ್ನು ವೈಯಾರಕ್ಕೆ ಬಂದರೆ.. ಹಾವ ಭಾವಗಳು, ನಡೆ ನುಡಿ, ಮಾತಿನ ಶೈಲಿ ಎಲ್ಲವೂ ಮಿಳಿತವಾದ ಹೆಣ್ಣಿನ ಸೌಂದರ್ಯವನ್ನು ವರ್ಣಿಸುವಾಗ ಉಪಯೋಗಿಸುವ ಪದ ವಯ್ಯಾರ.. ಹಾಗಾಗಿ ವೈಯಾರಗಿತ್ತಿ / ಬಿನ್ನಾಣಗಿತ್ತಿ ಎಂದು ಹೇಳುವ ವಾಡಿಕೆ. ಇನ್ನು ಹೆಸರಿನ ಬಗ್ಗೆ ನಾನು ಹೇಳುವುದು ಏನೂ ಇಲ್ಲ... ನಿಮಗೆಲ್ಲ ತಿಳಿದಿರುವಂತೆ ಗುರುತಿಸಲು ಉಪಯೋಗಿಸುವ ಒಂದು ಪದ, ನಾಮಪದ. ಬಹು ಪಾಲು ಉತ್ತರ ಕರ್ನಾಟಕದ ಹೆಂಗಸರು ಸಂತೋಷ ಸಮಾರಂಭಗಳಲ್ಲಿ ಅದರಲ್ಲೂ ಮದುವೆಯಂತಹ ಕಾರ್ಯಕ್ರಮಗಳಲ್ಲಿ,  ಗಂಡನ ಹೆಸರು ಹೇಳುವಾಗ ಪದ ವಯ್ಯಾರದಿಂದ, ಪ್ರಾಸ ಬದ್ಧವಾಗಿ, ಪ್ರಾಸಂಗಿಕವಾಗಿ, ಹಾಸ್ಯ ರೂಪದಲ್ಲಿ, ಬಹು ಪಾಲು ಸೂಚ್ಯವಾಗಿ ಹೇಳುವ ವಿಧಾನವನ್ನು ವಡಪು ಎಂದು ಹೇಳುತ್ತಾರೆ. ಪದಗಳ ಉಪಯೋಗ ಅವರೋಹಣ ಕ್ರಮದಲ್ಲಿ ಇದೆ ಬಿಟ್ಟರೆ ಎಲ್ಲವನ್ನು ಹೇಳಿದ್ದೇನೆ ಎನ್ನುವ ನಂಬಿಕೆ ನನ್ನದು. ಹಾಯ್.. ದಿಸ್ ಇಸ್ ಮುಳ್ (ಮುಳ್ಳು?) ಎಂದುತನ್ನ  ಭಾವೀ ಪತಿ ಮುರಳಿಧರನನ್ನು ಪರಿಚಯಿಸುವ ಅತ್ಯಾಧುನಿಕ ಹುಡುಗಿಯೂ ಸಹ ಮದುವೆ ಮನೆಯಲ್ಲಿ ನಾಚಿಕೊಂಡು ಹೀಗೆ ಹೇಳಬಹುದೇನೋ... ಹೆಸರಾಗೇನದೇ ಬರೀ ಐದಕ್ಷರ ಕೂಗಿದ ಕೂಡಲೇ ಓ ಅಂತಾರಾ ಕಡೆಗಣ್ಣಲ್ಲೇ ಹುಡುಗೀರ್ನ ನೋಡ್ತಾರ ನನ್ನವ ಕೃಷ್ಣನ ಅಪರಾವತಾರ ಕಲ್ಪನೆಗೆ, ಕ್ರಿಯಾಶೀಲತ್ವಕ್ಕೆ, ಪ...