ಎಂಟು ವರ್ಷಕ್ಕೆ ಮಗ... ದಂಟು ಅಂದ
ಎಂಟು ವರ್ಷಕ್ಕೆ ಮಗ... ದಂಟು ಅಂದ
ಏನಿದು ಶೀರ್ಷಿಕೆ ಅನಿಸ್ತಾ?
ಹೌದು ರೀ.. ನನ್ನ ಪರಿಸ್ಥಿತೀನು ಈಗ ಹಾಗೆ ಇದೆ.
ಇದು ನನ್ನ 48ನೇ ಬ್ಲಾಗ್. ... ಎಂಟು ಅಂತ ಕೊನೆಗೆ ಬಂದಾಗ ನನಗೆ ನೆನಪಾಗಿದ್ದೇ ಈ ಶೀರ್ಷಿಕೆ...
ವರ್ಷ ಎಂಟಕ್ಕೆ ಅಂದ ಮಗ ದಂಟು
48 ಮುಟ್ಟಕ್ಕೆ ನಾ ತಗೊಂಡೆ ತಿಂಗಳು 68...
ಸ್ವಂತ ಮನೆ ಕಟ್ಟಿದಾಗ ನನ್ನ ವಯಸ್ಸು 48
ಈಗ ತಕ್ಕಮಟ್ಟಿಗೆ ಅರ್ಥ ಆಯ್ತಾ ಯಾಕೆ ಈ ಶೀರ್ಷಿಕೆ ಅಂತ...
48 ಸಂಭ್ರಮಿಸಲು ಯಾವ ಮಾನದಂಡ? ಸಾಮಾನ್ಯವಾಗಿ 25, 50, 60, 75, 100 ಹೀಗೆ ಸಂಭ್ರಮಿಸುವ ಘಟ್ಟಗಳು.... ನನ್ನ ಮೆಚ್ಚಿನ ಲೇಖಕರು ಬೀchi ಹೇಳಿದಂತೆ.....60 ವರ್ಷಕ್ಕೆ ಸಂಭ್ರಮಿಸಲಿಕ್ಕೆ ಏನಿದೆ ರೀ...59ಕ್ಕೆ ಸಾಯ್ಲಿಲ್ಲ ಅದಕ್ಕೆ 60 ಆಗಿದೆ.. ಅದರಲ್ಲಿ ಏನು ವಿಶೇಷ ಇಲ್ಲ.... ಅಂಥಹವರ ಮಾತನ್ನ ಇಟ್ಕೊಂಡು ನಾನು 48 ನ್ನ ಗುರ್ತಿಸ್ದೆ, ಹೌದಲ್ಲ ಅನ್ನಿಸ್ತು... ಅಷ್ಟೇ..
48 ಬ್ಲಾಗ್ ಬರ್ದಿದಿನಿ ಅಂತ ಜಂಭ ಕೊಚ್ಕೊಳ್ತಿದೀನ... ಗೊತ್ತಾಗ್ತಾ ಇಲ್ಲ... ಯೋಚನೆ ಮಾಡಿದಾಗ ದೊಡ್ಡವರು ಹೇಳಿದ್ದ ಮಾತು ನೆನಪಿಗೆ ಬಂತು... ಒಂದು - ನಿನ್ನ ಬಗ್ಗೆ ನೀನೇ ಹೆಚ್ಚಿಗೆ ಹೇಳಬೇಡ.. ನಿನ್ನ ಕೆಲಸ ಹೇಳ್ಬೇಕು ಅದನ್ನ ಬೇರೆಯವರು ಮೆಚ್ಚಿ ಹೇಳ್ಬೇಕು..
ಇನ್ನೊಂದು ಮಾತು - ನಿನ್ನ ಶಕ್ತಿ / ಪ್ರತಿಭೆ ಬಗ್ಗೆ ನೀನೇ ಹೇಳದಿದ್ದರೆ ನಿನ್ನ ಪರವಾಗಿ ಬೇರೆಯವರು ಯಾಕೆ ಹೇಳ್ತಾರೆ... ಸ್ವಲ್ಪ ತುತ್ತೂರಿ ಊದಬೇಕು..
ಆ ಆ ಸಮಯಕ್ಕೆ ಹೊಂದಿಸಿ ನೋಡಿದರೆ ಎರಡೂ ಸರಿ ಅನ್ಸುತ್ತೆ .....ಹಾಗಾದ್ರೆ ಏನ್ ಮಾಡಬೇಕು? ಇದಕ್ಕೆ ನನ್ನ ಅನುಭವದಿಂದ ಕಲಿತದ್ದು ... ನಾನು ಮಾಡಿದ ಕೆಲಸವನ್ನು ಬೇರೊಬ್ಬರು ಮೆಚ್ಚಲಿ / ಅದಕ್ಕೆ ಮನ್ನಣೆ ಸಿಗಲಿ ಎಂದಾದರೆ ಅದನ್ನು ಹೇಳಬಾರದು ನಮ್ಮ ಕೆಲಸ ಅದನ್ನು ಹೇಳಬೇಕು... ಇದನ್ನು ನಾನು ನನ್ನ ವೃತ್ತಿಯಲ್ಲಿ ಹಾಗೂ ಪ್ರವೃತ್ತಿಯಲ್ಲಿ (ಒಬ್ಬ ಆಪ್ತ ಸಮಾಲೋಚಕನಾಗಿ) ತಕ್ಕಮಟ್ಟಿಗೆ ಪಾಲಿಸಿಕೊಂಡು ಬರುತ್ತಿದ್ದೇನೆ. ಸ್ವಲ್ಪ ಮಟ್ಟದ ಯಶಸ್ಸೂ ಸಿಕ್ಕಿದೆ ಅನ್ನುವ ಸಮಾಧಾನ ನನ್ನದು (ಈ ಭಾವ ನನಗೆ ಮುದ ಕೊಡುತ್ತದೆ).
ಇನ್ನು ನನ್ನ ಬಗ್ಗೆ ನಾನೇ ಹೇಳಬೇಕಾದ ಪ್ರಸಂಗ ಕೆಲಸಲ ಬರುತ್ತದೆ.... ಕೆಲ ಆತ್ಮೀಯರು ಮಾತನಾಡುವಾಗ, ಆಪ್ತ ಸಮಾಲೋಚನೆಯ ಆಗುಹೋಗುಗಳ ಬಗ್ಗೆ ತಿಳಿಯಬಯಸುತ್ತಾರೆ... ಆ ಸಮಯದಲ್ಲಿ Dr.C R ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ನಾವು ಮಾಡುತ್ತಿರುವ ಕೆಲಸಗಳು, ಅದರಿಂದ ಆದ ಬದಲಾವಣೆಗಳು ಎಲ್ಲವನ್ನು ತಿಳಿಸುವಾಗ, ಸ್ವಲ್ಪ ನನ್ನ ಗುಣಗಾನ ಬಂದೇ ಬರುತ್ತೆ ಅಲ್ವಾ?
ಇನ್ನು ನನ್ನ ವೃತ್ತಿಯಲ್ಲಿ ನಾನು ಮಾಡುತ್ತಿದ್ದ ವಿಶಿಷ್ಟ ಕೆಲಸಗಳ ಸಂದರ್ಭದಲ್ಲಿ, ನನ್ನ ಶಕ್ತಿ/ ಸಾಮರ್ಥ್ಯ ಗಳ ಬಗ್ಗೆ ಹೇಳಿಕೊಳ್ಳದಿದ್ದರೆ, ನನಗೆ ಕೆಲಸ ಕೊಡುವವರಿಗೆ ಒಪ್ಪಿಗೆ ಆಗಬೇಕಲ್ಲ... ಆಗ ಅನಿವಾರ್ಯ.
ಮತ್ತೆ ಬ್ಲಾಗ್ ವಿಷಯಕ್ಕೆ ಬರೋಣ.... ನಾನು ಬ್ಲಾಗ್ ಬರೆಯಕ್ಕೆ ಶುರು ಮಾಡಿದ್ದೇ ಒಂದು ವಿಚಿತ್ರ ಸನ್ನಿವೇಶ.
ಅದನ್ನ ನಾನು ನನ್ನ ಮೊದಲನೆಯ ಬ್ಲಾಗ್ ನಲ್ಲಿ ಹೇಳಿಕೊಂಡಿದ್ದೇನೆ... ಇದೋ ನಿಮ್ಮ ಮುಂದೆ ಮತ್ತೆ.. ಅದರ ಪುನರಾವರ್ತನೆ...(copied and pasted)
”ನಮಸ್ಕಾರ...
ಸ್ನೇಹಿತ ಸುಬ್ಬಯ್ಯ ಶೆಟ್ಟರು ಇಂದು ಬೆಳಗಿನ ವಿಹಾರದ ಸಮಯದಲ್ಲಿ ಕೊಟ್ಟ ಒಂದು ಸಲಹೆ : "ನೀವು ಇಲ್ಲಿ ಮಾತನಾಡುವುದನ್ನೇ ಬರೆದಿಡಿ... ಬಹುಶಃ ಅದು ಒನ್ದು ದಿನ ನಿಮಗೆ ಖುಶಿ ಕೊಡಬಹುದು"...
ನನಗೂ ಬರೆಯುವ ಆಸೆ ಬಹಳವಿದೆ. ಆದರೆ ಬರೆಯಲು ಕುಳಿತರೆ ಯೋಚನೆ ಮತ್ತು ಬರಹದ ನಡುವಿನ ವೇಗದ ಅಂತರ ನನ್ನನ್ನು ಹಿಡಿದಿಡುತ್ತದೆ.
ಬರೆದದ್ದೂ ಇದೆ... ಅದು ಬಹಳ ಸಲ ಬೇರೆಯವರ ಒತ್ತಾಯದಿಂದ .... ಈ ವಿಚಾರದಲ್ಲಿ ನನಗೆ ನನ್ನ ಮೇಲೆ ಅಸಮಧಾನವಿದೆ.
ನೋಡೋಣ...ಇಂದೇ ನಿರ್ಧರಿಸಿದ್ದೇನೆ... ಬರವಣಿಗೆಯನ್ನು ಚಾಲ್ತಿಯಲ್ಲಿಡಬೇಕೆಂದು......
ಬ್ಲಾಗ್ ನಲ್ಲಿ ಬರೆಯಲು ಸಲಹೆಯನ್ನಿತ್ತವರು....ಅದೇ ಸುಬ್ಬಯ್ಯ ಶೆಟ್ಟರು.
ಮೊದಲ ಸಾಲುಗಳು ಅವರಿಗೆ ಅರ್ಪಣೆ.....”
ಹೀಗೆ ಶುರುವಾದ ನನ್ನ ಬ್ಲಾಗ್ ಬರವಣಿಗೆ ಕೆಲ ದಿನಗಳು ಉತ್ಸಾಹದಿಂದ ನಡೆದವು. ಆದರೆ ಅದು ತೆಗೆದುಕೊಳ್ಳುತ್ತಿದ್ದ ಸಮಯ, ನಾನು ಕನ್ನಡ ಟೈಪ್ ಮಾಡಲು ಪಡುತ್ತಿದ್ದ ಕಷ್ಟ ಕ್ರಮೇಣ ನನ್ನ ಉತ್ಸಾಹವನ್ನು ತಗ್ಗಿಸಿತು. ಕೆಲ ಕಾಲ ಬರವಣಿಗೆ ಸೊನ್ನೆ. ಯಥಾಪ್ರಕಾರ ನನ್ನ ಮೇಲೆ ನನಗೆ ಬೇಸರ, ಆದರೆ ಕಷ್ಟ ಎನ್ನುವ ಸಬೂಬನ್ನು ಮುಂದಿಟ್ಟುಕೊಂಡು ನನ್ನ ಸೋಮಾರಿತನವನ್ನು ನಾನೇ ಕ್ಷಮಿಸಿಬಿಡುತ್ತಿದ್ದೆ.
ಇಂಥ ಸಮಯದಲ್ಲೇ ನನಗೆ ಸಿಕ್ಕಿದ್ದು, ನನ್ನ ಕೈಯ ಅಳತೆಯ ದರದಲ್ಲಿ..speech to text APP. ಇದರಿಂದ ನನ್ನ ಸಮಯ ಬರವಣಿಗೆಗೆ ಕೊಡಲು , ಹಾಗೂ ಟೈಪಿಂಗ್ ಇಲ್ಲದ ಬರವಣಿಗೆಗೆ (?) ತುಂಬಾ ಅನುಕೂಲವಾಗಿದೆ. ಹಾಗಾಗಿ ಕಾಯಕ ಮುಂದುವರೆದಿದೆ. 68 ತಿಂಗಳಲ್ಲಿ 48 ಬ್ಲಾಗ್ ಬರೆದ ಸರದಾರನಾಗಿ ನನ್ನನ್ನು ನಾನು ಹೊಗಳಿ ಕೊಳ್ಳಲು ಮಾಡಿಕೊಂಡ ಅವಕಾಶ.( ಅಥವಾ ನನ್ನ ಬಂಡವಾಳವನ್ನು ನಾನೇ ಬಯಲು ಮಾಡಿದಂತೆ)
ಇನ್ನು ನನ್ನ ಬರಹಕ್ಕೆ ಸಿಕ್ಕ ಪ್ರತಿಕ್ರಿಯೆಗಳು ಪ್ರಶಂಸೆಗಳು... ಅಯ್ಯೋ ಒಂದು ಬ್ಲಾಗನ್ನು ಈ ಪ್ರಪಂಚದಲ್ಲಿ ಮೂವರು ಮಾತ್ರ ನೋಡಿದ್ದಾರೆ / ಓದಿದ್ದಾರೆ... ಎಂಥ ಪರಿಸ್ಥಿತಿ.. ಯಾರೋ ಒಬ್ಬರ " ಚೆನ್ನಾಗಿದೆ" ಅನ್ನುವ ಪ್ರತಿಕ್ರಿಯೆ, ನನಗೆ ಮೊದಲ ಸಂಬಳ ಪಡೆದಾಗಿನ ಖುಷಿಯ ಅನುಭವ. ಬರೆದು ಬ್ಲಾಗ್ನಲ್ಲಿ ಹಾಕಿದ ತಕ್ಷಣ ಎಲ್ಲರ ಕಣ್ಣಿಗೆ ಕಾಣಲು ನಾನೇನು ದೊಡ್ಡ ಬರಹಗಾರನೇ ಅಥವಾ ಪ್ರಮುಖ ವ್ಯಕ್ತಿಯೇ? ... ಯಾವುದೂ ಅಲ್ಲ.
ಆದರೂ ಮನದ ಮರ್ಕಟ, ಮೆಚ್ಚುಗೆಯನ್ನು ಬಯಸಿದ್ದು ಸುಳ್ಳಲ್ಲ. ಅದಕ್ಕೊಂದು ಮಾರ್ಗ ವಾಟ್ಸಪ್ ಸ್ಟೇಟಸ್ ನಲ್ಲಿ ಲಿಂಕ್ ಹಾಕುವುದು.... ಮತ್ತದೇಪರಿಸ್ಥಿತಿ. ಸ್ಟೇಟಸ್ ನೋಡಿದವರು ಬಹಳ ಮಂದಿ, ನೋಡಿದವರೆಲ್ಲಾ ಬ್ಲಾಗ್ ಓದಲೇ ಬೇಕೆಂಬ ನಿಯಮ ಇಲ್ಲವಲ್ಲ.. ಆದರೂ ನೋಡುವವರ / ಓದುವವರ ಸಂಖ್ಯೆ ಸ್ವಲ್ಪ ಜಾಸ್ತಿ ಆಯ್ತು.... ಮತ್ತೆ ಫೇಸ್ಬುಕ್ ನಲ್ಲಿ ಬರೆದುಕೊಂಡಾಯ್ತು.... ಈಗ ನೋಡುಗರ / ಓದುಗರ ಸಂಖ್ಯೆ ಇನ್ನೂ ಜಾಸ್ತಿ ಆಯ್ತು ಅಂತ ಅಂಕಿ ಅಂಶಗಳಿಂದ ಗೊತ್ತಾಯ್ತು... ಅದಲ್ಲದೆ ,ಈಗೀಗ ಸಲ್ಪ ಸಮಾಧಾನವೆಂದರೆ 40 ರಿಂದ 50 ಜನ ನನ್ನ ಬ್ಲಾಗ್ ತೆರೆದು ನೋಡಿರುತ್ತಾರೆ (ಓದೇ ಇರುತ್ತಾರೆ ಅಂತ ಹೇಳಲಾಗದು)...USA, Netherland, Russia, Ireland, Germany, Australia, Kenya, ಹಾಗೂ unknown region ನಲ್ಲಿನ ಜನ ನೋಡಿದ್ದಾರೆ ಎನ್ನುವ ಖುಷಿಯೂ ಇದೆ. ಅತಿ ಹೆಚ್ಚು ಅಂದರೆ 270 ಜನ ಒಂದು ಬ್ಲಾಗನ್ನು ನೋಡಿದ್ದಾರೆ... ಏನೋ ಖುಷಿ. ಹಾಗೆ ಕಾಮೆಂಟ್ಸ್ ಸಹ ಸ್ವಲ್ಪ ಜಾಸ್ತಿಯಾಗಿದೆ ಒಂದೆರಡು ಪ್ರತಿಕ್ರಿಯೆಗಳು - ನನ್ನ ಬರಹವನ್ನು ಹೊಗಳಿದಾಗ ( ನನ್ನ ಬಾಲ್ಯದ ನೆನಪಾಯಿತು... ನನ್ನಮ್ಮ ನೆನಪಿಗೆ ಬಂದ್ಲು... ನೀವು ಬರೆದ ಒಡಪುಗಳನ್ನು ಕಳಿಸಿ...ಹೀಗೆ) ಮನಸ್ಸಿನ ಮಂಗಕ್ಕೆ ಹೆಂಡ ಕುಡಿಸಿದಂತಾಯ್ತು... ಕೇಳಬೇಕೇ... ಇನ್ನೂ ಹೆಚ್ಚು ಜನ ನೋಡಬೇಕು ಎಂಬ ಆಸೆ ಬೆಳೆಯಿತು...
ಈ ಸಮಯದಲ್ಲಿ ಒಬ್ಬ ಚಾಣಕ್ಯ ಸ್ನೇಹಿತ( ಅವನ ಹೆಸರು ಬರೆಯಬಾರದಂತೆ - ಯಾಕೋ ಗೊತ್ತಿಲ್ಲ) ಒಂದು ಸಲಹೆ ಕೊಟ್ಟ.... ಇನ್ನೂ ಜಾಸ್ತಿ ಜನ ನೋಡಬೇಕು ಅಂದ್ರೆ ನಿನ್ನ ಬ್ಲಾಗ್ ಬಗ್ಗೆ ಪ್ರಚಾರ ಮಾಡಬೇಕು / ಬಹಳ ಜನಕ್ಕೆ ತಿಳಿಸಬೇಕು ಅಂತ.. ಹೌದಲ್ವಾ ಅನ್ನಿಸ್ತು ಮನಸ್ಸಿನ ಮಂಗಕ್ಕೆ ಚೇಳು ಕಡೀತು.. ಇನ್ನು ಮಂಗದ ಕುಣಿತ ಕೇಳಬೇಕೆ?...
ಆದರೂ ತುತ್ತೂರಿ ಊದಕ್ಕೆ ಸಂಕೋಚ.. ಆದರೆ ಮನವೆಂಬ ಮರ್ಕಟ ಕೇಳಬೇಕಲ್ಲ... ಅವನೇ ಗೆದ್ದ...
ಪ್ರಚಾರ ಮಾಡುವುದು ಹೇಗೆ ಅನ್ನೋದು ಸಮಸ್ಯೆಯಾಯಿತು.
ನನ್ನ ಸ್ನೇಹಿತನ ಸಲಹೆ.." ಎಲ್ಲರಿಗೂ ವಾಟ್ಸಪ್ ನಲ್ಲಿ ನಿನ್ನ ಬ್ಲಾಗ್ ನ ಲಿಂಕ್ ಕಳುಹಿಸು... ಓದಲಿ" ... ನನಗನ್ಸಿದ್ದು ಮೆಸೇಜ್ ನೋಡಿ ನೋಡಿ ... ಇವನ್ದೊಂದು ಹಿಂಸೆ ಅನ್ಕೊಂಡ್ರೆ... ಅದಕ್ಕೆ ಅವನ ಉತ್ತರ ...ಅನ್ಕೊಂಡ್ರೂ ಪರ್ವಾಗಿಲ್ಲ, ಪ್ರಾಯಶಃ ಯಾರೂ ನಿನ್ನ ಮುಖದ ಮೇಲೆ ಹೇಳಲ್ಲ.. ಅಕಸ್ಮಾತ್ ಹೇಳಿದ್ರೆ ಸಾರಿ ಅನ್ಬುಡು... ಓದಿದ್ರೆ ಅದರ ಬಗ್ಗೆ ಹೇಳಿದರೆ ಬೋನಸ್ ಅಂದುಕೋ...... ಇದು ಸರಿಯೇನೋ ಅನ್ನಿಸ್ತು..
ಮುಂದುವರಿದ ಸಲಹೆ .. ಒಂದು * ಹಾಕಿ ಬರಿ..(conditions apply ಥರ) ನಿಮಗೆ ಇಷ್ಟ ಆಗದಿದ್ರೆ ಹೇಳಿ... ಕ್ಷಮಿಸಿ... ಮುಂದೆ ಕಳಿಸಲ್ಲ ಅಂತ....
ಇಷ್ಟ ಆಗದಿದ್ದರೂ ಸೌಜನ್ಯಕ್ಕಾಗಿ ಸುಮ್ನಿರ್ತಾರೆ.. ಓದಲ್ಲ, delete ಮಾಡ್ತಾರೆ... ಅಷ್ಟೇ ತಾನೇ.. ನಿನಗೇನು ಕಷ್ಟ ಇಲ್ವಲ್ಲ...
ಹೌದು ಹೌದು ಇದೇ ಸರಿ ಅನ್ನುಸ್ತು... ಅದಕ್ಕೆ ಈ ಬ್ಲಾಗ್ ನಿಂದ ನಾನು ಲಿಂಕ್ ಕಳಿಸುವುದು ಅಂತ ನಿರ್ಧಾರ ಮಾಡಿದ್ದೀನಿ...
ಹಾಗಾಗಿ ಈ ಲಿಂಕ್ ನಿಮ್ಮ ಬಳಿ ಬಂದಿರುವುದು.
ದಯವಿಟ್ಟು ನನ್ನ ಸ್ನೇಹಿತನ ಸಲಹೆಯನ್ನು(ನಿಮ್ಮ ಆಯ್ಕೆ ಯಾವುದಾರೂ ನನಗೆ ಅಭ್ಯಂತರ ಇಲ್ಲ) ಗೌರವಸ್ತೀರಾ ಅಂತ ಭಾವಿಸಲೆ? ....
ನೀಮ್ಮ ಅನಿಸಿಕೆ ತಿಳಿಸಿ... ಟೀಕೆಯಾದರೂ ಸರಿ... ನನಗದು ಮಾರ್ಗದರ್ಶನ..
ಇಷ್ಟ ಆದರೆ ನಿಮ್ಮ ಹತ್ತಿರದವರಿಗೆ ಹೇಳ್ತೀರಾ?
ನಮಸ್ಕಾರ.
ಅದ್ಭುತವಾದ ಬರವಣಿಗೆ! ತುಂಬ ಖುಷಿಯ ವಿಚಾರ!!
ReplyDelete68 - 48 😊👌👌👌👍ಅಭಿನಂದನೆಗಳು 💐 ಹೀಗೆ ಮುಂದುವರೆಯಲಿ ನಿಮ್ಮ ಬರವಣಿಗೆ.
ReplyDeleteThis comment has been removed by the author.
ReplyDeleteನೀವು ಬರೆಯಿರಿ .ನಾವು ಓದುತ್ತೇವೆ ಬರೆದದ್ದನ್ನು ಕ್ರೂಡಿಕರಸಿ ಪುಸ್ತಕ ಮಾಡಿ .ಇನ್ನಷ್ಟು ಜನರಿಗೆ ತಲಪುತ್ತದೆ
ReplyDeleteಬಹಳ ಒಳ್ಳೆಯ ಆಲೋಚನೆ ಸರ್, ನಿಮ್ಮ ಶೀರ್ಷಿಕೆಯ ಹಾಗೆ ತಡವಾದರೂ, ಸಂಕೋಚವನ್ನು ಬದಿಗಿಟ್ಟು ಶುರು ಮಾಡಿದ್ದೀರಿ ಅಭಿನಂದನೆಗಳು, ಇನ್ನೂ ಹೆಚ್ಚಿನ ಬರಹಗಳಿಗೆ ಕಾಯುತ್ತೇವೆ
ReplyDeleteSooooper sir
ReplyDeleteSuper Sir...👌
ReplyDeleteನಮ್ಮ ಕನ್ನಡದ ಸಂಖ್ಯೆ ಎಂಟು (ಅಷ್ಟ) ರ ನಂಟು ಬಹಳ....
8 ಜ್ಞಾನ ಪೀಠ ಪ್ರಶಸ್ತಿಗಳು
ಅಷ್ಟ ಲಕ್ಷ್ಮೀಯರು
ಅಷ್ಟ ದಿಕ್ ಪಾಲಕರು
ಅಷ್ಟಾಂಗ ಯೋಗ.....etc.,
ಹೀಗೆ ನಿಮ್ಮ ಎಂಟರ blog ಅಷ್ಟಾಂಗ ಯೋಗದ ದೆಸೆಯಿಂದ, ಅಷ್ಟ ಲಕ್ಷ್ಮಿಯರ ಕೃಪಾ ಕಟಾಕ್ಷದಿಂದ ಅಷ್ಟ ದಿಕ್ಕುಗಳಲ್ಲಿ ಹರಡಿ 48..108..1008... blogಗಳಾಗಲಿ ಎಂದು ಹಾರೈಸುತ್ತೇನೆ....🙏
Ranganatha rayare. Bahala chennagide baraha. Bhavane rasa gandha ellavu. Nanagae Kannada typing sariyaagi baralla.
ReplyDeleteKshamisi.
ನಮಸ್ಕಾರ ರಂಗನಾಥ ರಾಯರಿಗೆ. ನಿಮ್ಮ ಬರವಣಿಗೆಯ ಶೈಲಿ ಮನಸ್ಸಿಗೆ ಹತ್ತಿರವಾಗುವಂತಿದೆ. ಸರಳ, ನೈಜ, ಮನೋಹರ. ಎಂಟರ ನಂಟು ಬಹಳ ಚೆನ್ನಾಗಿ ಮೂಡಿದೆ. ಮಂಗನಂತೆ ಆಡುವ ಮನಸೆಂಬ ಮರ್ಕಟನ ವರ್ಣನೆ ಸೊಗಸಾಗಿದೆ. ಅಭಿನಂದನೆಗಳು.
ReplyDeleteಅದ್ಭುತ DCR. ಇದನ್ನು ಮುಂದುವರಿಸಿ 👏🙏ಅದ್ಭುತ DCR. ಇದನ್ನು ಮುಂದುವರಿಸಿ 👏🙏
ReplyDeleteನಿಮ್ಮ ಅನುಭವದ ಹಂಚಿಕೆಯಿಂದ ನಿಮ್ಮ ಬುಟ್ಟಿ (ಬುತ್ತಿ ಎಂದಾದರೂ ಅನ್ನಿ)ಯ ಸಂಚಿಕೆ ಓದಿ ಖುಷಿಯೂ ಆಯ್ತು ಸರ್. ನಿಮ್ಮ ಬರವಣಿಗೆಯ ಬುಟ್ಟಿಯನ್ನು ಬೇರೆಯವರು ಓದಲಿ ಎಂಬ ನಿರೀಕ್ಷೆ ಇರುವುದು ಸಹಜವಾದರೂ, ಈ ನಿಮ್ಪ್ಮ ಪ್ರವೃತ್ತಿ ನಿಮಗೆ ಖುಷಿ ಕೊಡುವುದಂತೂ ಸತ್ಯ.
ReplyDeleteGood mind talk...keep writing ...more experiences of yours...
ReplyDelete👍👍
ReplyDeleteKannadadali barayalu kashta, so kanndavallada kannadahlli barayuthidadhene , thumba chennagidhe
ReplyDeleteNanna hesarnnu mention madiedira vandhanegalu
ಎಲ್ಲರಿಗೂ ನನ್ನ ನಮನಗಳು...ನಿಮ್ಮ ಪ್ರೋತ್ಸಾಹ ಹೀಗೇ ಇರಲಿ
ReplyDeleteಪತ್ರಿಕೆಯ ಅಂಕಣ ಓದಿದಂತಹ ಅನುಭವು ನಿಮ್ಮ ಬ್ಲಾಗ್ ಓದುತ್ತಿರುವಾಗ ಉಂಟಾಗುತ್ತದೆ.
ReplyDeleteಮೊದಲ ದಿನವೇ ಓದಿದೆ. ಗುಂಪಿನಲ್ಲಿ ಓದುತ್ತಿದ್ದೆ ನಿಮ್ಮ ಬರವಣಿಗೆ. ನನಗೇ ನೇರವಾಗಿ ಬಂದಿದ್ದು ಖುಷಿ ಆನ್ನಿಸಿತು. ಲೇಖನ ಕೂಡ ಸರಳ,ಸಹಜ ಹಾಗೂ ಸುಂದರವಾಗಿ ಮೂಡಿದೆ.
ReplyDelete🙏🙏🙏🙏🙏🙏🙏
ReplyDelete