Posts

ಸುಂಕೇನಹಳ್ಳಿ ಸರ್ಕಾರಿ ಶಾಲೆಯ ವಾರ್ಷಿಕೋತ್ಸವ:

Image
ಸುಂ ಕೇನಹಳ್ಳಿ ಸರ್ಕಾರಿ ಶಾಲೆಯ ವಾರ್ಷಿಕೋತ್ಸವ:    ಕೆಲಕ್ಷಣಗಳು ನನ್ನ ಮನಸ್ಸು ಗತಕಾಲದಲ್ಲಿ ಸಿಲುಕಿತ್ತು. ನನ್ನ ಪ್ರಾಥಮಿಕ ಶಾಲಾ ದಿನಗಳಲ್ಲಿ ಭಾಗವಹಿಸಿದ ನೆನಪುಗಳು. ರೋಮಾಂಚಕ, ಮಧುರ ನೆನಪುಗಳು. ಇದಕ್ಕೆ ಕಾರಣ, ಇಂದು (23.12.2019)  ನಾನು ಭಾಗವಹಿಸಿದ ಸುಂಕೇನಹಳ್ಳಿ ಸರ್ಕಾರಿ ಶಾಲೆಯ ವಾರ್ಷಿಕೋತ್ಸವ ಸಮಾರಂಭ. ಕಾರ್ಯಕ್ರಮವನ್ನು ಶಾಲೆಯ ಪಕ್ಕದಲ್ಲಿರುವ ಕೆ.ಹೆಚ್. ಕಲಾಸೌಧದಲ್ಲಿ ಏರ್ಪಡಿಸಿದ್ದರು ( ಕೆ.ಹೆಚ್. ಕಲಾಸೌಧದ ಬಗ್ಗೆ ನನ್ನ ಲೇಖನದ ಲಿಂಕ್.....https://www.blogger.com/blogger.g?blogID=169266169028192815#editor/target=post;postID=503227361699777314;onPublishedMenu=allposts;onClosedMenu=allposts;postNum=8;src=postname. ಅಲ್ಲಿದ್ದ ಸುಂದರ ವಾತಾವರಣ, ಮಕ್ಕಳ ವೇಷಭೂಷಣ, ಒಂದು ನಿಯೋಜಿತ ಗುಂಪು ಎಲ್ಲರನ್ನು ಸ್ವಾಗತಿಸುತ್ತಿದ್ದ ಪರಿ, ಉತ್ಸಾಹ ಎಲ್ಲ ನೋಡಿದಾಗ, ಇದು ಯಾವ ತರಹದ ಖಾಸಗಿ ಶಾಲೆಗೂ ಕಡಿಮೆಯೆನಿಸಲಿಲ್ಲ. ಇನ್ನು ಕಾರ್ಯಕ್ರಮ ಶುರು - ಚಂದನ್ ಮತ್ತು ಮೋನಿಕಾ - ನಿರೂಪಕರಾಗಿ ನಿರ್ವಹಿಸಿದ ರೀತಿ,ಅಧ್ಭುತವಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲೋಕಸಭಾ ಸದಸ್ಯ ಶ್ರೀ.ತೇಜಸ್ವಿ ಸೂರ್ಯ ಅವರು, ಸ್ವಯಂಪ್ರೇರಿತರಾಗಿ ಮೆಚ್ಚುಗೆ ಸೂಚಿಸಿ ಬಹುಮಾನವಿತ್ತರು. ಇವರು ಈ ಶಾಲೆಯಲ್ಲಿ ಓದಿದ ಮಕ್ಕಳು. ಇದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಲ್ಲಿರು...

ಶಾಲಾ ಮಕ್ಕಳ ಸಂಸತ್ತು ವತಿಯಿಂದ " ಶಿಕ್ಷಕರ ದಿನಾಚರಣೆ"

Image
ಶಾಲಾ ಮಕ್ಕಳ ಸಂಸತ್ತು ವತಿಯಿಂದ " ಶಿಕ್ಷಕರ ದಿನಾಚರಣೆ" ಇಂದು (28.09.2017) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಂಕೇನಹಳ್ಳಿ, ಬೆಂಗಳೂರು - 19, ಇಲ್ಲಿಯ ಮಕ್ಕಳು, ತಮ್ಮ ಶಾಲಾ ಮಕ್ಕಳ ಸಂಸತ್ತು ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು. ನನ್ನ ಸೌಭಾಗ್ಯ, ಇದರಲ್ಲಿ ಭಾಗವಹಿಸಲು ನನ್ನನ್ನೂ ಆಹ್ವಾನಿಸಿದ್ದರು. ಕಾರ್ಯಕ್ರಮವನ್ನು ಎಲ್ಲ ಮಕ್ಕಳೇ ನಿರ್ವಹಿಸಿದ ರೀತಿ ಹೆಮ್ಮೆಯೆನಿಸುತ್ತಿತ್ತು. ಅವರ ವಯಸ್ಸಿಗೂ ಮೀರಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ನಿರೂಪಕಿಯರು ಕಾರ್ಯಕ್ರಮವನ್ನು ನಡೆಸಿಕೊಟ್ಟ ಶೈಲಿ (ಪರಸ್ಪರ ಮಾತನಡುತ್ತಾ - ಕಾರ್ಯಕ್ರಮಕ್ಕೆ ಹೊಂದಿಸುತ್ತಾ) ವೃತ್ತಿಪರ ನಿರೂಪಕಿಯರಿಗೂ ಸರಿಸಮನಾಗಿತ್ತು. ಮಾಮೂಲಿನಂತೆ ಪ್ರಾರ್ಥನೆ, ಸ್ವಾಗತದ ನಂತರ, ಒಬ್ಬೊಬ್ಬ ವಿದ್ಯಾರ್ಥಿ ಒಬ್ಬ ಉಪಾಧ್ಯಾಯರ ಬಗ್ಗೆ ಮಾತನಾಡಿದರು. ಅವರದೇ ಆದ ನಿಷ್ಕಲ್ಮಷವಾದ, ಮುಗ್ಧ ಅಭಿಪ್ರಾಯಗಳು, ಸರಳ ಸುಂದರವಾಗಿದ್ದವು. ಎಲ್ಲ ಉಪಧ್ಯಾಯರುಗಳಿಗೆ ಉಡುಗೊರೆಗಳನ್ನೂ ಸಹ ಕೊಟ್ಟರು. ಆದರೆ ಇದನ್ನೆಲ್ಲಾ ಮಾಡಿದ ರೀತಿ ಮೆಚ್ಚುಗೆ ಸೂಸುವಂತಿತ್ತು. ನನ್ನ ಜೀವನದ ಮೊದಲ ಅನುಭವ - ಉಪಾಧ್ಯಾಯನಾಗಿ ಈ ಗೌರವ ಪಡೆದದ್ದು. ಆ ಕ್ಷಣ ನನ್ನೆಲ್ಲಾ ಗುರುಗಳಿಗೆ ಈ ಗೌರವವನ್ನು ಮನಸ್ಸಲ್ಲೇ ಸಮರ್ಪಿಸಿದೆ. ಇಂದಿನ ವಿಶೇಷ ಮತ್ತು ನನಗೂ ಇದು ಇಂದೇ ತಿಳಿದ ವಿಷಯ - ಭಾರತಾಂಬೆಯ ಮೊದಲ ಶಿಕ್ಷಕಿಯೆಂಬ ಗೌರವಕ್ಕೆ ಪಾತ್ರರಾದ ಶ್ರೀಮತಿ.ಸಾವಿತ್ರಿಬ...

"ಮಳೆ ಬಂತು ಮಳೆ ಕೊಡೆ ಹಿಡಿದು ನಡೆ"

"ಮಳೆ ಬಂತು ಮಳೆ ಕೊಡೆ ಹಿಡಿದು ನಡೆ" ಅಂತ ಮನಸ್ಸಿನಲ್ಲೇ ಹೇಳಿಕೊಂಡೆ. ಇವತ್ತು ಬೆಳಿಗ್ಗೆಯಿಂದ ಮಳೆ ಬರ್ತಾನೆ ಇದೆ. ಎಲ್ಲೂ ಆಚೆ ಹೋಗಲು ಬಿಡ್ತಾ ಇಲ್ಲ. ಸುಮ್ಮನೆ ಮಳೆ ಸುರಿಯುವುದನ್ನು ನೋಡ್ತಾ ಕುಳಿತೆ. ಮನಸ್ಸು ನನ್ನ ಹತೋಟಿ ಮೀರಿತು. ಗತಕಾಲಕ್ಕೆ ಜಾರಿತು. ಹಳ್ಳಿಯ ನಮ್ಮ ಮನೆ ಮಣ್ಣಿನ ಮಾಡಿನದು. ಹಾಗಾಗಿ ಜೋರು ಮಳೆ ಬಂದರೆ ಸೋರುತ್ತಿತ್ತು. ಮಳೆಗೆ ಮುಂಚಿನ ದಿನಗಳಲ್ಲಿ ಮಾಡು ಸರಿ ಮಾಡದಿದ್ದರೆ ಸೋರುವಿಕೆ ಇನ್ನೂ ಸ್ವಲ್ಪ ಜಾಸ್ತಿ. ಆ ಸಂಧರ್ಭಗಳಲ್ಲಿ ನೀರು ಸೋರುವಲ್ಲಿ ಒಂದು ಪಾತ್ರೆ ಇಟ್ಟು, ಅದು ತುಂಬಿದಾಗ ನೀರನ್ನು ಹೊರ ಚೆಲ್ಲುವುದು ಒಂದು ಉಪಾಯ. ಅಂದು ರಾತ್ರಿ ಜೋರು ಮಳೆ, ಸೋರಾಟ ಶುರು. ನಿದ್ದೆಯಿಂದ ಎಚ್ಚೆತ್ತ ನನಗೆ ಅಮ್ಮ ಪಡುತ್ತಿದ್ದ ಪಾಡು ನೋಡಿ ಸಹಾಯ ಮಾಡಲು ನಾನೂ ಪಾತ್ರೆ ತಂದು ಇಡಲು ಶುರು ಮಾಡಿದೆ. ಅದರಲ್ಲೂ ಆಟವಾಡುವ ಮೋಜು ನನಗೆ, ಪಾಪ ಅಮ್ಮನ ಒದ್ದಾಟ ಪೇಚಾಟ ಅಮ್ಮನಿಗೆ. ಮಳೆಗಾಲದ ಸಂಜೆ ಬಿಸಿ ಬಿಸಿ "ಬೆರಕೆ ಸೊಪ್ಪಿನ ಪಕೋಡ" - ಹಳ್ಳಿಯಲ್ಲಿ ಸಿಗುತ್ತಿದ್ದ ಬೇರೆ ಬೇರೆ ಸೊಪ್ಪುಗಳ ಮಿಶ್ರಣ - ಸೇರಿಸಿ ಮಾಡುತ್ತಿದ್ದದ್ದು, ತಿನ್ನುವ ಮಜ..ಬಾಯಲ್ಲಿ ಈಗಲೂ ನೀರೂರತ್ತೆ. ನಮ್ಮಲ್ಲೊಂದು ನೆಲಭಾವಿ - ಅಂದರೆ ಸುತ್ತಲೂ ಕಟ್ಟೆಯಿಲ್ಲ- ಮಳೆಗಾಲದಲ್ಲಿ ಹತ್ತಿರದಲ್ಲಿದ್ದ ಕೆರೆಯ ಪ್ರಭಾವದಿಂದ ತುಂಬಿ ತುಳುಕುತ್ತಿತ್ತು. ನೀರನ್ನು ನಾನೇ ಬಗ್ಗಿ ತುಂಬಿಕೊಳ್ಳುವಷ್ಟು ಮೇಲೆ. ಆದರೆ ಅದಕ್ಕೆ ಯಾವಾಗಲೂ ...

ಜೀವನೋತ್ಸಾಹ

Image
ಕಿಟ್ಟಿಮೇಷ್ಟ್ರು ಅವರು ತೆಗೆದ ಫೋಟೋ ಜೀವನೋತ್ಸಾಹ ಬಹಳಷ್ಟು ದಿನಗಳಿಂದ ನನ್ನ ಬೆಳಗಿನ ವಾಯುವಿಹಾರಕ್ಕೆ ಹೋಗುವುದು "ತಿಮ್ಮೇಶ ಪ್ರಭು ಉದ್ಯಾನವನ". ಇದು ಇತಿಹಾಸ ಪ್ರಸಿದ್ಢ ಗವಿ ಗಂಗಾಧರೇಶ್ವರ ದೇವಸ್ಥಾನದ ಬದಿಯಲ್ಲಿದೆ. ಇಲ್ಲಿ ನಮ್ಮದೇ ಆದ ಸ್ನೇಹಿತರ ಗುಂಪು ಇದ್ದರೂ ನಮ್ಮ ಮಾತು ಕಥೆ ಬಹಳಷ್ಟು ಮಂದಿಯ ಜೊತೆ ಇರುತ್ತದೆ. ನಾವುಗಳು ಜೊತೆಯಲ್ಲಿ ಕಳೆಯುವ ಹೊತ್ತು ನಿಜಕ್ಕೂ ಚೇತೋಹಾರಿ. ಮಾತನಾಡುವ ವಿಷಯಗಳಿಗೆ ಯಾವುದೇ ಕಟ್ಟುಪಾಡುಗಳಿಲ್ಲ. ಜಗತ್ತಿನ ಯಾವುದೇ ವಿಷಯವಾದರೂ ಸರಿ ಅದು ಬಹು ವಿಧ ನೋಟಗಳಿಂದ ವಿಶ್ಲೇಸಿಲ್ಪಡುತ್ತದೆ. (ಕೆಲವು ಸಲ ಅದು ಕಾಡು ಹರಟೆಯಲ್ಲಿ / ತಲೆಹರಟೆ ಯಲ್ಲಿ ಕೊನೆಗೊಳ್ಳಬಹುದು). ಇದು ಒಂದು ಮುಖವಾದರೆ, ಅಲ್ಲಿನ ವಾಯುವಿಹಾರಿಗಳು "ಸ್ನೇಹರಂಗ" ದ ಹೆಸರಿನಲ್ಲಿ ಒಗ್ಗೂಡಿ ಪ್ರತಿ ಸೋಮವಾರ ಭಜನೆ, ತಿಂಗಳಿಗೊಮ್ಮೆ, ಎರಡನೆಯ ಮಂಗಳವಾರ "ಕಾಫಿ ಡೇ" ಯಲ್ಲಿ ಇಲ್ಲಿರುವ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಚರಿಸುತ್ತೇವೆ. ವರ್ಷಕ್ಕೊಮ್ಮೆ "ಪ್ರತಿಭಾ ಪುರಸ್ಕಾರ" ದಲ್ಲಿ 10 ನೇ ತರಗತಿ ಮತ್ತು ಪಿ.ಯು. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿಧ್ಯಾರ್ಥಿಗಳಿಗೆ ಸನ್ಮಾನ, ಮತ್ತು "ಕನ್ನಡ ರಾಜ್ಯೋತ್ಸವವನ್ನು ಆಟೊಟಗಳೊಂದಿಗೆ ಸಂಭ್ರಮದಿಂದ ಆಚರಿಸುತ್ತೇವೆ. ಈ ಎಲ್ಲ ಕಾರ್ಯಕ್ರಮಗಳೂ ಹಿರಿಯರಾದ ನಮ್ಮ ಪ್ರೀತಿಯ "ಕಿಟ್ಟಿ ಮೇಷ್ಟ್ರ" ಮುಂದಾಳ...

ಕಾಯುವ ದೈವ ಯಾವ ರೂಪದಲ್ಲಿ ಬಂದ?

Image
ಕಾಯುವ ದೈವ ಯಾವ ರೂಪದಲ್ಲಿ ಬಂದ? ನೆನ್ನೆ ಮಳೆಯ ಆರ್ಭಟ ಎಷ್ಟಿತ್ತೆಂದರೆ - ನನ್ನ ನೆನಪಿನಲ್ಲಿರುವಂತೆ ಇಷ್ಟು ಭಯಾನಕ ಪರಿಸ್ಥಿತಿಯನ್ನು ನಾನು ಕಣ್ಣಾರೆ ಕಂಡಿರಲಿಲ್ಲ. ಕಿವಿಯಿಂದ ಕೇಳಿದ್ದೆ ಮತ್ತು ವಾರ್ತೆಗಳ ಮೂಲಕ ತಿಳಿದಿದ್ದೆ. ಸಂಜೆ ಸುಮಾರು 7.30 ರ ಸಮಯ. ಮನೆಯಕಡೆ ಬರುತ್ತಿದ್ದೆ. ಜೊತೆಯಲ್ಲಿದ್ದಳು ನನ್ನ ಮಡದಿ. ಮಳೆಯ ಹನಿ ಶುರುವಾಯಿತು. ಕೆಲವೇ ಕ್ಷಣಗಳಲ್ಲಿ ಮಳೆಯ ಆರ್ಭಟ ಎಷ್ಟು ಹೆಚ್ಚಾಯಿತೆಂದರೆ ನನಗೆ ಮುಂದಿನ ರಸ್ತೆ ಕಾಣದಷ್ಟು. ನನಗೆ ಕಾರನ್ನು ಓಡಿಸಲು ಸಾಧ್ಯವಾಗಲಿಲ್ಲ. ಹೇಗೋ ಕಷ್ಟಪಟ್ಟು ಮನೆಯ ಹತ್ತಿರ ಬಂದು ಕಾರನ್ನು ನಿಲ್ಲಿಸಿ ಹೊರಗೆ ಬರಲಾರದೆ ಯೋಚಿಸುತ್ತಿದ್ದೆವು. ಸುತ್ತಲೂ ಕಾರ್ಗತ್ತಲು. ಗುಡುಗು ಮಿಂಚಿನ ಆರ್ಭಟ. ಜೊತೆಯಲ್ಲಿ ನಮ್ಮ ಹಿಂದೆ ಏನೋ ಬಿದ್ದ ಸದ್ದು. ಹೇಗಾದರಾಗಲಿ ಮನೆ ಒಳಗೆ ಹೋಗೋಣವೆಂದು ನಿರ್ಧರಿಸಿ, ಓಡಿ ಮನೆಯೊಳಗೆ ಸೇರಿ ದೀಪ ಬೆಳಗಿಸಿ ರಸ್ತೆಯ ಕಡೆ ನೋಡಿದಾಗ ನಮಗೆ ಒಂದು ತರಹ ಆಘಾತ. ನಮ್ಮ ಕಾರಿನ ಸ್ವಲ್ಪ ಹಿಂದೆ ಪಕ್ಕದ ಮರದ ಒಂದು ದೊಡ್ಡ ಕೊಂಬೆ ಮುರಿದು ಬಿದ್ದಿದೆ. ಒಂದು ಕೊನೆ ರಸ್ತೆಯಮೇಲೆ ಇನ್ನೊಂದು ಕೊನೆ ಎಲೆಕ್ಟ್ರಿಕ್ ತಂತಿಯ ಮೇಲೆ. ಆ ಕೊಂಬೆ ತಂತಿಯ ಮೇಲೆ ಬೀಳದಿದ್ದರೆ, ನಮ್ಮ ಕಾರು ಕೊಂಬೆಯ ಕೆಳಗೆ ಸಿಕ್ಕಿಹಾಕಿಕೊಳ್ಳುತ್ತಿತ್ತು. ನಮ್ಮ ಪರಿಸ್ಥಿತಿ ಏನಾಗುತ್ತಿತ್ತೋ ಊಹೆಗೂ ನಿಲುಕದು. ಕಾಯುವ ದೈವ ಯಾವ ರೂಪದಲ್ಲಿ ಬರುತ್ತದೋ ಬಲ್ಲವರಾರು. ನೆನ್ನೆ ನಮ್ಮನ್ನು ಕಾಯ್ದ ದೈವ ಎಲೆಕ್ಟ್ರಿಕ್ ತಂತಿ...

ಶಿಕ್ಷಕರ ದಿನಾಚರಣೆ:

ಶಿಕ್ಷಕರ ದಿನಾಚರಣೆ: ಇಂದು 05.09.2017 ಶಿಕ್ಷಕರ ದಿನಾಚರಣೆ: ಸುಂಕೇನಹಳ್ಳಿ ಶಾಲೆಯ ಏಳನೆಯ ತರಗತಿಯ ಮಕ್ಕಳು ಇಂದು ನನ್ನನ್ನು ಆದರಿಸಿದ ಪರಿ - ಅಬ್ಬಾ ಹೃದಯ ತುಂಬಿ ಬಂತು. ನಾನು ಅವರೊಡನೆ ಒಡನಾಡುವುದು ವಾರಕ್ಕೊಮ್ಮೆ ಮಂಗಳವಾರ ಮಾತ್ರ. ಅದೂ ಕೇವಲ 45 ನಿಮಿಷಗಳ ಕಾಲ. ಆದರೆ ಅವರ ಪ್ರೀತಿಯ ಕೊಡುಗೆ ವರ್ಷ ಪೂರ್ತಿಗೆ ಸಾಕಾಗುವಷ್ಟು. ಇನ್ನು ಯಾವಾಗಲೂ ಅವರೊಡನೆ ಕಾಲ ಕಳೆಯುವ ಶಿಕ್ಷಕರ ಖುಶಿ ಅಪರಿಮಿತ. ಉಪಾಧ್ಯಾಯ ವೃತ್ತಿ - ಅದರಲ್ಲೂ ಪ್ರೌಡಶಾಲೆಯ ವರೆಗೆ- ಬಹಳ ಭಾವನಾತ್ಮಕವಾದದ್ದು. ಅಲ್ಲಿನ ಮಕ್ಕಳಲ್ಲಿ ಇನ್ನೂ ಮುಗ್ಢತೆಯಿರುತ್ತದೆ, ಮತ್ತು ಅವರದು ನಿಷ್ಕಲ್ಮಷ ಪ್ರೀತಿ. ನನ್ನ ನೆನಪು ನನ್ನ ಬಾಲ್ಯಕ್ಕೆ ಓಡುತ್ತಿದೆ. ನನ್ನ ಹಳ್ಳಿಯ ಶಾಲೆಯಲ್ಲಿ ನನ್ನ ಮೇಲೆ ಪ್ರಭಾವ ಬೀರಿದ ಮೇಷ್ಟ್ರುಗಳು : ಮೊಟ್ಟ ಮೊದಲಿಗೆ ನನಗೆ ಅ ಆ ಹೇಳಿಕೊಟ್ಟ (ಶ್ರೀನಿವಾಸಯ್ಯ ?) ಮೇಷ್ಟ್ರು. ನನಗಾಗ 5 ವರ್ಷಕ್ಕೂ ಕಡಿಮೆ. ಅಪ್ಪ ಶಾಲೆಗೆ ಬಿಟ್ಟಿದ್ದು ನೆನಪು. ನನಗೆ ಭಯ. ಗೋಡೆಯ ಪಕ್ಕದಲ್ಲಿ ಕೂಡಿಸಿ ಹುಣಿಸೆ ಬೀಜಗಳನ್ನು ಕೊಟ್ಟು ನೆಲದಮೇಲೆ ಅ ಮತ್ತು ಆ ಅಕ್ಷರಗಳನ್ನು ಬರೆದು ಅದರಮೇಲೆ ಹುಣಿಸೆ ಬೀಜಗಳನ್ನು ಜೋಡಿಸಲು ಹೇಳಿದ್ದು. ನನಗೆ ಈಗಲೂ ಕಣ್ಣಿಗೆ ಕಟ್ಟಿದಂತಿರುವುದು ಅವರ ವೇಷ ಭೂಷ. ಬಿಳಿಯ ಕಚ್ಚೆ ಪಂಚೆ, ಕಪ್ಪು ಬಣ್ಣದ ಕೋಟು ಮತ್ತು ಟೋಪಿ, ಮತ್ತು ನನ್ನೆದುರಿಗೆ ಬಗ್ಗಿ ನನಗೆ ಸರಿ ಕಾಣುವ ಹಾಗೆ ಅಕ್ಷರಗಳನ್ನು ಬರೆದದ್ದು. ಮುನಿಶಾಮಯ್ಯ ಮೇಷ್ಟ್ರು ಅಂದ್ರ...

ಪರಿಸರ - ಗಣಪ:

  ಪರಿಸರ - ಗಣಪ: ನಮ್ಮ ಸುತ್ತಲಿನ ಪರಿಸರದ ಬಗೆಗಿನ ಕಾಳಜಿ ಈಗ ಬಹಳ ಬೇಕಿದೆ. ಯಾಂತ್ರೀಕರಣಕ್ಕೂ, ಪರಿಸರಕ್ಕೂ ಉತ್ತರ ಧೃವ, ದಕ್ಷಿಣ ಧೃವ ಸಂಭಂಧ. ಹಾಗೇ ಮನುಷ್ಯನ ದುರಾಸೆಗೂ ವಿಲೋಮ ಸಂಭಂಧ. ಪುರಾತನ ಕಾಲದಿಂದಲೂ ನಮ್ಮ ಹಿರಿಯರ ಜೀವನಶೈಲಿ ಪರಿಸರಕ್ಕೆ ಹೊಂದಿಕೊಂಡು ಅದಕ್ಕೆ ಪೂರಕವಾಗಿರುತ್ತಿತ್ತು. ತನ್ನೆಲ್ಲ ಬೇಕುಗಳಿಗೆ ಮನುಷ್ಯ ಪರಿಸರದಮೇಲೆ ಅವಲಂಬಿಸಿದ್ದರೂ, ತನ್ನ ಬೇಕುಗಳನ್ನು ಮಿತಿಯಲ್ಲಿಟ್ಟಿರುತ್ತಿದ್ದ. ಪ್ರಕೃತಿ ತನ್ನದೆಲ್ಲವನ್ನೂ ಜೀವ ಸಂಕುಲಕ್ಕೆ ಧಾರೆಯೆರೆದಿದೆ. ಮೂಕ ಪ್ರಾಣಿಗಳು ಸಹ ತಮ್ಮ ಜೀವನವನ್ನು ಪ್ರಕೃತಿಯಮೇಲೆ ಅವಲಂಬಿಸಿಕೊಂಡಿವೆ. ಆದರೆ ಅವುಗಳು ತಮ್ಮ ಹೊಟ್ಟೆ ತುಂಬಿದನಂತರ ಅವುಗಳ ಬೇಕುಗಳಿಗೆ (brake) ಕಡಿವಾಣ ಹಾಕುತ್ತವೆ. ಮನುಷ್ಯ ಪ್ರಾಣಿ ಮಾತ್ರ ಇದಕ್ಕೆ ಹೊರತು. ಅವನ ಆಸೆಗೆ (ದುರಾಸೆಗೆ) ಮಿತಿಯೇ ಇಲ್ಲ. ಹಾಗಾಗಿ ನೆಲ, ಜಲ, ಗಾಳಿ, ಮರಗಿಡಗಳು, ಖನಿಜಸಂಪತ್ತು ಎಲ್ಲದರ ಮೇಲೂ ತನ್ನ ದುರಾಸೆಯ ಹಸ್ತವನ್ನು ಚಾಚಿದ್ದಾನೆ. ಹಾಗಾಗಿ ಇಂದು ಪರಿಸರ ವಿನಾಶದ ಅಂಚಿಗೆ ಬಂದು ನಿಂತಿದೆ. ಇದು ಎಲ್ಲರಿಗೂ ತಿಳಿದ ವಿಷಯ. ಗಣೇಶನ ಹಬ್ಬ ಬಂದಿದೆ. ಇದು ನಮ್ಮೆಲ್ಲರಿಗೂ ಸಡಗರ ನಿಜ. ಈ ಸಡಗರದ ಜೊತೆ ಜೊತೆಗೆ ನಮ್ಮ ಪರಿಸರದ ಬಗ್ಗೆ ಯೋಚಿಸಬೇಕಾದ್ದು ನಮ್ಮ ಕರ್ತವ್ಯ. ಈ ವಿಷಯ ಚರ್ವಿತ ಚರ್ವಣವಾದರೂ ಸಹ ಮತ್ತೊಮ್ಮೆ ನೆನಸಿಕೊಳ್ಳುವುದು ಸಮಂಜಸ ಎಂದು ನನ್ನ ನಂಬಿಕೆ. ಮೊದಲು ಮನೆ. ಮನೆಗೆ ತರುವ ಗಣಪ ಮತ್ತು ಗೌರ...

ಕೆಂಗಲ್ ಹನುಮಂತಯ್ಯ ಕಲಾಸೌಧ

ಕೆಂಗಲ್ ಹನುಮಂತಯ್ಯ ಕಲಾಸೌಧ ಹೆಸರು ಹೊಸದೋ? ಅಥವಾ ಎಲ್ಲೋ ಕೇಳಿದ ನೆನಪೇ? ಇದೇ ನಮ್ಮ ಕನ್ನಡಿಗರ ದೌರ್ಭಾಗ್ಯ. ಈಗ ಹೇಳಿ "ಕೆ.ಹೆಚ್. ಕಲಾಸೌಧ" ಗೊತ್ತಾ? ಹೌದು ನಿಮ್ಮ ಯೋಚನೆ ಸರಿಯಾಗಿದೆ. ಇದು ಹನುಮಂತನಗರದ ರಾಮಾಂಜನೇಯ ಗುಡ್ಡದ ಒಂದು ಭಾಗದಲ್ಲಿದೆ. "ಕೆಂಗಲ್ ಹನುಮಂತಯ್ಯ ಕಲಾಸೌಧ" ಅಂತ ಸುಂದರವಾದ ಕನ್ನಡದ ಹೆಸರನ್ನ ಕುಲಗೆಡಿಸಿ "ಕೆ.ಹೆಚ್. ಕಲಾಸೌಧ" ಮಾಡಿಬಿಟ್ಟರು. ಇದು ಮಾಡಿದ್ದು ಯಾರು ಗೊತ್ತೇ... ಕನ್ನಡದ ಕಂದಮ್ಮಗಳೆಂದು ಹೊಗಳಿಕೊಳ್ಳುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು (ಅದೇ ರೀ.. ಬಿ.ಬಿ.ಎಮ್.ಪಿ). ಇದು ನಡೆದಿರೊದು ನಮ್ಮ ಕನ್ನಡದ ಆಗು ಹೋಗು ನೊಡಿಕೊಳ್ಳುವ ಸರ್ಕಾರಿ ಕೃಪಾಪೋಷಿತ ಕನ್ನಡ ಕಾವಲು ಸಮಿತಿಯ ಮೂಗಿನ ಕೆಳಗೆ. ಇದಲ್ಲದೇ ಕನ್ನಡಕ್ಕಾಗಿ ಪ್ರಾಣವನ್ನು ಕೊಡಲು ತಯಾರಿರುವ ಕಟ್ಟಾಳುಗಳ ಕನ್ನಡ ಕೋಟೆಯಲ್ಲೇ. ಇದು ಹೆಸರಿನ ಕಥೆ ಮತ್ತು ವ್ಯಥೆ. ಇದು ಇಲ್ಲಿಗೆ ಮುಗಿಯದ ಕಥೆ (ವ್ಯಥೆ ಕೂಡ). ಸದಾ ಚಟುವಟಿಕೆ ಇಂದ ಇರುತ್ತಿದ್ದ ಈ ಜಾಗ ಈಗ ಬಿಕೋ ಎನ್ನುತ್ತಿದೆ. ಈ ಭಾಗದ ಕಲಾರಸಿಕರ ತಾಣವಾಗಿದ್ದ ಈ ಜಾಗವನ್ನು ಕೊಂಪೆಯಾಗಿ ಮಾಡುವ ಕಾರ್ಯಕ್ರಮವೇ ಸಿಧ್ಧಗೊಂಡಿದೆಯೇನೋ ಎನ್ನುವಂತೆ ಇದನ್ನು ಮುಚ್ಚಲಾಗಿದೆ. ಕನ್ನಡದ ಬೆಳವಣಿಗೆಗೆ ಚಿಂತನೆ ಮಾಡುವ ಎಲ್ಲರೂ ಯೋಚಿಸಬೇಕಾದ ವಿಷಯ. ಇದನ್ನು ಹೀಗೇ ಮುಚ್ಚಲು ಬಿಡಬೇಕೆ? ಯಾವುದೇ ವಸ್ತು ಉಪಯೋಗಿಸದೆ ಬಿಟ್ಟಾಗ ಅದು ಬಹಳ ಬೇಗ ಹಾಳಾಗುತ್ತದೆ. ...

ಸ್ವಾತಂತ್ಯ ದಿನೋತ್ಸವ:

ಸ್ವಾತಂತ್ಯ ದಿನೋತ್ಸವ: ಸ್ವಾತಂತ್ಯ ದಿನೋತ್ಸವ ಅಂದ ಕೂಡಲೇ ನೆನಪಿಗೆ ಬರುವುದು ದಲಿತಕವಿ ಎಂದೇ ಖ್ಯಾತರಾದ ಶ್ರೀ ಸಿದ್ದಲಿಂಗಯ್ಯನವರು. ನಾಟಕದ ಹೆಸರು ಜ್ಞಾಪಕವಿಲ್ಲ. ಆದರೆ ಅಂದು ಅವರು ಕಲಾಕ್ಷೇತ್ರದ ಬಾಲ್ಕನಿಯಿಂದ ತಮಟೆ ಬಾರಿಸಿಕೊಂಡು ದೊಡ್ಡ ಧ್ವನಿಯಲ್ಲಿ " ಯಾರಿಗೆ ಸಿಕ್ಕಿದೆ ಎಲ್ಲಿ ಸಿಕ್ಕಿದೆ ನಲವತ್ತೇಳರ ಸ್ವಾತಂತ್ಯ" ಎಂದು ಹೇಳಿಕೊಂಡು ರಂಗಕ್ಕೆ ಪ್ರವೇಶಮಾಡಿದ್ದು ನೆನಪಲ್ಲಿ ಹಸಿರಾಗಿದೆ. ದೆಹಲಿಯ ಕೆಂಪು ಕೋಟೆ ಮತ್ತು ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ಮೂಡಿಬರುವ ಕಾರ್ಯಕ್ರಮಗಳನ್ನು ದೂರದರ್ಶನದಲ್ಲಿ ನೋಡಿದ್ದಿದೆ. ಬಾಲ್ಯದ ಸ್ವಾತಂತ್ಯ ದಿನೋತ್ಸವದಲ್ಲಿ ನಾವು ಶಾಲೆಯ ಮಕ್ಕಳೆಲ್ಲಾ ಗಾಂಧೀಜಿ ಫೋಟೋ ಮತ್ತು ಬಾವುಟ ಎತ್ತಿಕೊಂಡು ನಮ್ಮೂರ ಬೀದಿಗಳಲ್ಲಿ ಮೆರವಣಿಗೆ ಮಾಡುವುದು. ಮೆರವಣಿಗೆ ನಮ್ಮ ಮನೆಯ ಹತ್ತಿರ ಬಂದಾಗ ನಾನು ಬಾವುಟವನ್ನು ಎತ್ತಿಕೊಂಡಿರುವುದನ್ನು ನಮ್ಮಮ್ಮ ಹೆಮ್ಮೆಯಿಂದ ನೋಡಿ ಸಂತೋಷ ಪಡೋಳು. ಮೆರವಣಿಗೆ ಮುಗಿದಮೇಲೆ ಯಾರೋ ದೊಡ್ಡವರು ಭಾಷಣ ಮಾಡೋರು. ನಮಗೆಲ್ಲ ಅದು ಏನೂ ಅರ್ಥ ಆಗ್ತಿರಲಿಲ್ಲ. ನಮ್ಮೆಲ್ಲರ ಗಮನ ಅವತ್ತು ಕೊಡುವ ಸಿಹಿಯ ಮೇಲೆ. ಜನಗಣಮನ ಹೇಳಿದ್ದು ಕೊನೆಯಲ್ಲಿ ಸಿಹಿ ಬೂಂದಿ ತಿಂದಿದ್ದು ಮಾತ್ರ ನೆನಪಿನಲ್ಲಿದೆ. ಈಗ್ಗೆ ಸುಮಾರು 12 ವರ್ಷಗಳಿಂದ ನನ್ನ ಸ್ವಾತಂತ್ಯ ದಿನಾಚರಣೆಯ ನಂಟು ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ , ಹುಂಗೇನಹಳ್ಳಿ, ಸರ್ಕಾರಿ ಪ್ರಾಥಮಿಕ ಶಾಲೆಯೊಂದಿಗೆ ಬ...

ಕೃಷ್ಣ ಜನ್ಮಾಷ್ಟಮಿ

ಕೃಷ್ಣ ಜನ್ಮಾಷ್ಟಮಿ.... ಬಹಳಷ್ಟು ಸಂಭ್ರಮ ಒಬ್ಬೊಬ್ಬರ ಆಚರಣೆ ಒಂದೊಂದು ತರಹ. ಕೆಲವರಿಗೆ ಸಂತೋಷ ಸಂಭ್ರಮಕ್ಕೆ ಬೇರೆಲ್ಲರಿಗೂ ಸಿಹಿ ಹಂಚಿ ತಾವೂ ತಿನ್ನುವ ಮನಸ್ಸು. ಇನ್ನು ಕೆಲವರು ಸಂತೋಷದ ಭರದಲ್ಲಿ ತಿನ್ನುವುದನ್ನೇ ಮರೆತಿದ್ದಾರೆ. ಇವರು ಉಪವಾಸ ಹಾಗಾಗಿ ಇವರನ್ನು ನಂಬಿದವರಿಗೆಲ್ಲ ಉಪವಾಸ. ನಾವು ಯಾವುದನ್ನು ಬೇಕಾದರೂ ಆರಿಸಿಕೊಳ್ಳಬಹುದು. ನಾನು ವೈಯುಕ್ತಿಕವಾಗಿ ಮೊದಲ ಗುಂಪಿನಲ್ಲಿ ಗುರುತಿಸಿಕೊಳ್ಳುವವನು. ಕೃಷ್ಣನನ್ನು ಬಹುರೂಪಿ ಎನ್ನುತ್ತಾರೆ. ವಸ್ತುಸ್ಥಿತಿ ಏನೇ ಇರಲಿ ರಾಧೆ, ರುಕ್ಮಿಣಿ, ಸತ್ಯಭಾಮೆ, ಮೀರಾ, ಗೋಪಿಕೆಯರು, ಇನ್ನು ಬಾಲ್ಯದ ಗೆಳೆಯ ಸುಧಾಮ, ದ್ರೌಪದಿ ಹೀಗೆ ಎಲ್ಲರೂ ಕೃಷ್ಣನನ್ನು ಅವರವರ ದೃಷ್ಟಿಯಲ್ಲಿ ಕಂಡವರೇ. ನನ್ನ ತಿಳುವಳಿಕೆಯ ಮಟ್ಟದಲ್ಲಿ ಎಲ್ಲರೂ ಕೃಷ್ಣನಿಂದ ಪಡೆಯಲು ಬಯಸಿದವರೆ (ಏನಾದರಿರಲಿ). ಇವರಲ್ಲಿ ಸುಧಾಮ ಮಾತ್ರ ವಿಶಿಷ್ಟ ರೀತಿಯಲ್ಲಿ ಕಾಣುತ್ತಾನೆ. ತನ್ನ ಹೆಂಡತಿಯ ಆಗ್ರಹದ ಮೇರೆಗೆ ಕೃಷ್ಣನನ್ನು ಭೇಟಿ ಮಾಡಲು ಬರುವುದು ಕೇಳುವುದಕ್ಕಾಗಿಯೆ, ಆದರೆ ಅವನು ಬರುವಾಗ ತಾನು ಕೃಷ್ಣನಿಗೆ ಏನು ಕೊಡಬೇಕು ಎಂದು ಯೋಚಿಸುತ್ತಾನೆ. ಕಡೆಗೆ ಬಡತನದ ತನ್ನ ಮನೆಯಲ್ಲಿದ್ದ ಒಂದು ಹಿಡಿ ಅವಲಕ್ಕಿಯನ್ನು ಗಂಟು ಮಾಡಿ ಕೃಷ್ಣನಿಗಾಗಿ ಪ್ರೀತಿಯಿಂದ ತರುತ್ತಾನೆ. ಈ ಭಾವ ನನಗೆ ತುಂಬಾ ಪ್ರಿಯವಾಗಿದ್ದು. ಹಾಗಾಗಿ ನನಗೆ ಸುಧಾಮನ ಬಗ್ಗೆ ವಿಶೇಷ ಅಭಿಮಾನ. ಹೀಗೆ ತಮ್ಮಲ್ಲಿಲ್ಲದಿದ್ದರೂ ಬೇರೆಯವರಿಗೆ ಕೊಡುವ ಮಹಾನುಭಾವರು...

ಮೂರಕ್ಕೆ ಮುಕ್ತಾಯ ????

ಮೂರಕ್ಕೆ ಮುಕ್ತಾಯ ???? "ಮೂರು " ಎಣಿಕೆ ಚಿಕ್ಕದಾದರೂ ಪ್ರಾಮುಖ್ಯತೆ ಜೋರು. ಸೃಷ್ಟಿ, ಸ್ಥ್ತಿತಿ ಮತ್ತು ಲಯ ಅದಕ್ಕೆ ಸಂಭಂದಿಸಿದಂತೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಮೂರು ಮೂರು. ಜನನ, ಜೀವನ ಮತ್ತು ಮರಣ - ಹುಟ್ಟಿನಿಂದ ಸಾವಿನವರೆಗೆ ಅಕ್ಷರಗಳು ಮೂರು. ಇನ್ನು ಜೀವಿಸಿರುವವರೆಗೂ ಮೂರರ ಪ್ರಭಾವ : ಜನನಿ, ಜನಕ, ಪಠನ, ಬರಹ, ಕೆಲಸ, ಮಡದಿ, ಮದುವೆ, ಮಕ್ಕಳು ಹೀಗೆ. "ಮುಟ್ಟಿದರೆ ಮೂರು ಸಲ" "ಮೂರಕ್ಕೆ ಮುಕ್ತಾಯ" "ಮುಖ ಮೂರು ಕಡೆ" ಇವು ನುಡಿಗಟ್ಟುಗಳು. ನದಿ ಅಥವಾ ಸಮುದ್ರದಲ್ಲಿ ಮೂರು ಸಲ ಮುಳುಗಿ, ಮೂರು ಸಲ ಆರ್ಘ್ಯ ಬಿಟ್ಟು, ದೇವರಿಗೆ ಮೂರು ಸುತ್ತು ಹಾಕಿ ಮಾಡುವುದು ಮೂರು ನಮಸ್ಕಾರ, ಹಾಕಿ ಕೊಳ್ಳುವುದು (ಕೆಲವುಸಲ ಬೇರೊಬ್ಬರಿಗೆ ಹಾಕುವುದು?) ಮೂರು ನಾಮ, ಕೊನೆಗೆ ನೆನಪಿಗೆ ಬಂದದ್ದು "ಗಂಗಮ್ಮ ಸಹ ಮೂರು ಸಲ ತೇಲಿಸಿ ಆಮೇಲೆ ಒಳಕ್ಕೆ ಎಳೆದುಕೊಳ್ಳುತ್ತಾಳೆ" ಅನ್ನುವ ಒಂದು ಮಾತು. ಈ ಮಾತು ಇಂದಿಗೂ ನನಗೆ ಒಂದು ತರಹ ಭಯ ಮತ್ತು ಗಾಬರಿಯನ್ನು ಉಂಟುಮಾಡುತ್ತದೆ. ಹಳ್ಳಿಯ ವಾತವರಣದಲ್ಲಿ ಬೆಳೆದ ನಾನು ಈಜಲು ಕಲಿತದ್ದು 6, 7 ನೇ ವಯಸ್ಸಿನಲ್ಲಿ. ಕಲಿಯಲು ಆಸೆ, ನೀರಿಗೆ ಬೀಳಲು ಭಯ. ನಮ್ಮ ಗುಂಪು ಬೇಸಿಗೆ ರಜಾ ಕಾಲದಲ್ಲಿ ಈಜುವುದು, ಮಾವು, ಸೀಬೆ, ದಾಳಿಂಬೆ, ಹುಣಿಸೆ ಹೀಗೆ ಸಿಕ್ಕಿದ ಯಾವುದೇ ಕಾಯಿಯಾದರೂ ಸರಿ ಉಪ್ಪು ಮೆಣಸಿನ ಪುಡಿ ಬೆರೆಸಿ ತಿಂದು ಮನೆಗೆ ಬರು...

ದ್ವಿತೀಯ ವಿಘ್ನ ಆಗಬಾರದು

ಇವತ್ತು ಎರಡನೆಯ ದಿನ. ದ್ವಿತೀಯ ವಿಘ್ನ ಆಗಬಾರದು... ಅದಕ್ಕೆ ಬರೀಲೇ ಬೇಕು. ಹೇಗಿದೆ ನಮ್ಮ ಹಿರಿಯರು ಮಾಡಿದ ಸಂಪ್ರದಾಯ. ಕೆಲಸ ಮಾಡಕ್ಕೆ ಸ್ಪೂರ್ತಿ ತುಂಬಲು ಒಂದು ಸೂಚನೆ. ನಮಗೆ ಗೊತ್ತಾಗದ ಹಾಗೆ ಸಣ್ಣ ಒತ್ತಡ. ದ್ವಿತೀಯ ವಿಘ್ನ ಅಂದ ತಕ್ಷಣ ನೆನಪಿಗೆ ಬರುವುದು " ಪ್ರಥಮ ಚುಂಬನೆ ದಂತ ಭಗ್ನೆ" ನಾಣ್ಣುಡಿ. ಚುಂಬನದಿಂದ ಅಲ್ಲದಿದ್ದರೂ ದಂತ ಭಗ್ನ ವಾದ ಸನ್ನಿವೇಷದ ನೆನಪು. ನಾನಿನ್ನೂ 5 , 6 ನೇ ತರಗತಿಯಲ್ಲಿ ಓದುತ್ತಿದ್ದ ಸಮಯ. ನನ್ನ ಅಂದಿನ ಹಳ್ಳಿ (ಇಂದು ಬೆಂಗಳೂರಿನ ಭಾಗವೇ ಆಗಿದೆ) ದೊಡ್ದಜಾಲದಲ್ಲಿ ನಾವು ಮಕ್ಕಳೆಲ್ಲಾ ನಾಟಕ ಮಾಡಬೇಕೆಂದು ನಿರ್ಢರಿಸಿದೆವು. ನಮ್ಮ ಮೇಷ್ಟ್ರ ಮಗ ತಾನೇ ಕೃಷ್ಣನ ಪಾತ್ರ ಮಾಡಬೇಕು ಅಂತ ಒಂದೇ ಹಠ. ಮೇಷ್ಟ್ರ ಮಗ ಹಾಗಾಗಿ ಅವನಿಗೆ ಒಂದಷ್ಟು ಪ್ರಾಮುಖ್ಯತೆ. ಇದು ನಮಗೆಲ್ಲಾ ಒಪ್ಪಿಗೆಯಾಗದ ವಿಷಯ. ಕೃಷ್ಣನ ಪಾತ್ರ ಅಂದ್ರೆ ಹೀರೋ, ಎಲ್ಲರಿಗೂ ಆಸೆ, ಆದರೆ ಅದನ್ನು ಹೇಳುವುದಕ್ಕೆ ಹಿಂಜರಿಕೆ. ( ಇದು ಮೇಷ್ಟ್ರ ಗಮನಕ್ಕೆ ಬಂದು ಅವರು ಬೈತಾರೆ ಅನ್ನುವ ಭಯ). ಈ ಒಳಗುದಿಯಲ್ಲೇ ನಾಟಕದ ಅಭ್ಯಾಸ ಶುರು. ನಮ್ಮೂರ ಈಶ್ವರನ ದೇವಸ್ಠಾನವೇ ನಮ್ಮ ರಂಗಸ್ಥಳ, ಮೆಟ್ಟಿಲುಗಳು ಸಿಂಹಾಸನ. ಕೃಷ್ಣ ಸಿಂಹಾಸನದ ಮೇಲೆ ಕೂತು ಮಾತನಾಡುವ ಸನ್ನಿವೇಷ. ಎಲ್ಲರೂ ನೋಡಿದ್ದ ನಾಟಕ. ನಮಗೆಲ್ಲಾ ತಿಳಿದಿದೆ ಎನ್ನುವ ಹಮ್ಮು ಬೇರೆ. ಕೃಷ್ಣನ ಪಾತ್ರಧಾರಿಯ ಮೇಲೆ ನಮ್ಮಲ್ಲಿ ಕೆಲವರಿಗೆ ಅಸಮಧಾನ, ಕೋಪ. ಹಾಗಾಗಿ ಕೃಷ್ಣ...
ನಮಸ್ಕಾರ... ಸ್ನೇಹಿತ ಸುಬ್ಬಯ್ಯ ಶೆಟ್ಟರು ಇಂದು ಬೆಳಗಿನ ವಿಹಾರದ ಸಮಯದಲ್ಲಿ ಕೊಟ್ಟ ಒಂದು ಸಲಹೆ : "ನೀವು ಇಲ್ಲಿ ಮಾತನಾಡುವುದನ್ನೇ ಬರೆದಿಡಿ... ಬಹುಶಃ ಅದು ಒನ್ದು ದಿನ ನಿಮಗೆ ಖುಶಿ ಕೊಡಬಹುದು"... ನನಗೂ ಬರೆಯುವ ಆಸೆ ಬಹಳವಿದೆ. ಆದರೆ ಬರೆಯಲು ಕುಳಿತರೆ ಯೋಚನೆ ಮತ್ತು ಬರಹದ ನಡುವಿನ ವೇಗದ ಅಂತರ ನನ್ನನ್ನು ಹಿಡಿದಿಡುತ್ತದೆ. ಬರೆದದ್ದೂ ಇದೆ... ಅದು ಬಹಳ ಸಲ ಬೇರೆಯವರ ಒತ್ತಾಯದಿಂದ .... ಈ ವಿಚಾರದಲ್ಲಿ ನನಗೆ ನನ್ನ ಮೇಲೆ ಅಸಮಧಾನವಿದೆ. ನೋಡೋಣ...ಇಂದೇ ನಿರ್ಧರಿಸಿದ್ದೇನೆ... ಬರವಣಿಗೆಯನ್ನು ಚಾಲ್ತಿಯಲ್ಲಿಡಬೇಕೆಂದು...... ಬ್ಲಾಗ್ ನಲ್ಲಿ ಬರೆಯಲು ಸಲಹೆಯನ್ನಿತ್ತವರು....ಅದೇ ಸುಬ್ಬಯ್ಯ ಶೆಟ್ಟರು. ಮೊದಲ ಸಾಲುಗಳು ಅವರಿಗೆ ಅರ್ಪಣೆ.....