ದ್ವಿತೀಯ ವಿಘ್ನ ಆಗಬಾರದು
ಇವತ್ತು ಎರಡನೆಯ ದಿನ. ದ್ವಿತೀಯ ವಿಘ್ನ ಆಗಬಾರದು... ಅದಕ್ಕೆ ಬರೀಲೇ ಬೇಕು.
ಹೇಗಿದೆ ನಮ್ಮ ಹಿರಿಯರು ಮಾಡಿದ ಸಂಪ್ರದಾಯ. ಕೆಲಸ ಮಾಡಕ್ಕೆ ಸ್ಪೂರ್ತಿ ತುಂಬಲು ಒಂದು ಸೂಚನೆ. ನಮಗೆ ಗೊತ್ತಾಗದ ಹಾಗೆ ಸಣ್ಣ ಒತ್ತಡ.
ದ್ವಿತೀಯ ವಿಘ್ನ ಅಂದ ತಕ್ಷಣ ನೆನಪಿಗೆ ಬರುವುದು " ಪ್ರಥಮ ಚುಂಬನೆ ದಂತ ಭಗ್ನೆ" ನಾಣ್ಣುಡಿ. ಚುಂಬನದಿಂದ ಅಲ್ಲದಿದ್ದರೂ ದಂತ ಭಗ್ನ ವಾದ ಸನ್ನಿವೇಷದ ನೆನಪು.
ನಾನಿನ್ನೂ 5 , 6 ನೇ ತರಗತಿಯಲ್ಲಿ ಓದುತ್ತಿದ್ದ ಸಮಯ. ನನ್ನ ಅಂದಿನ ಹಳ್ಳಿ (ಇಂದು ಬೆಂಗಳೂರಿನ ಭಾಗವೇ ಆಗಿದೆ) ದೊಡ್ದಜಾಲದಲ್ಲಿ ನಾವು ಮಕ್ಕಳೆಲ್ಲಾ ನಾಟಕ ಮಾಡಬೇಕೆಂದು ನಿರ್ಢರಿಸಿದೆವು. ನಮ್ಮ ಮೇಷ್ಟ್ರ ಮಗ ತಾನೇ ಕೃಷ್ಣನ ಪಾತ್ರ ಮಾಡಬೇಕು ಅಂತ ಒಂದೇ ಹಠ. ಮೇಷ್ಟ್ರ ಮಗ ಹಾಗಾಗಿ ಅವನಿಗೆ ಒಂದಷ್ಟು ಪ್ರಾಮುಖ್ಯತೆ. ಇದು ನಮಗೆಲ್ಲಾ ಒಪ್ಪಿಗೆಯಾಗದ ವಿಷಯ. ಕೃಷ್ಣನ ಪಾತ್ರ ಅಂದ್ರೆ ಹೀರೋ, ಎಲ್ಲರಿಗೂ ಆಸೆ, ಆದರೆ ಅದನ್ನು ಹೇಳುವುದಕ್ಕೆ ಹಿಂಜರಿಕೆ. ( ಇದು ಮೇಷ್ಟ್ರ ಗಮನಕ್ಕೆ ಬಂದು ಅವರು ಬೈತಾರೆ ಅನ್ನುವ ಭಯ).
ಈ ಒಳಗುದಿಯಲ್ಲೇ ನಾಟಕದ ಅಭ್ಯಾಸ ಶುರು. ನಮ್ಮೂರ ಈಶ್ವರನ ದೇವಸ್ಠಾನವೇ ನಮ್ಮ ರಂಗಸ್ಥಳ, ಮೆಟ್ಟಿಲುಗಳು ಸಿಂಹಾಸನ. ಕೃಷ್ಣ ಸಿಂಹಾಸನದ ಮೇಲೆ ಕೂತು ಮಾತನಾಡುವ ಸನ್ನಿವೇಷ. ಎಲ್ಲರೂ ನೋಡಿದ್ದ ನಾಟಕ. ನಮಗೆಲ್ಲಾ ತಿಳಿದಿದೆ ಎನ್ನುವ ಹಮ್ಮು ಬೇರೆ. ಕೃಷ್ಣನ ಪಾತ್ರಧಾರಿಯ ಮೇಲೆ ನಮ್ಮಲ್ಲಿ ಕೆಲವರಿಗೆ ಅಸಮಧಾನ, ಕೋಪ. ಹಾಗಾಗಿ ಕೃಷ್ಣನ ಪಾತ್ರಧಾರಿ ಮಾಡಿದ ಸಣ್ಣ ತಪ್ಪೂ ಎತ್ತಿ ತೋರಿಸುವ ಉಮೇದು .
ಅಭ್ಯಾಸ ಮುಂದುವರಿದಂತೆ ಈ ಬೇಗುದಿ ಜಾಸ್ತಿಯಾಗಿ, ಒಂದು ಹಂತದಲ್ಲಿ ಎಲ್ಲರೂ ಕೃಷ್ಣನ ಪಾತ್ರಧಾರಿಯ ಮೇಲೆ ಮುಗಿಬಿದ್ದ ಕಾರಣ ಅವನು ಸಿಂಹಾಸನದಿಂದ ಕೆಳಗೆ ಬಿದ್ದ. ( ನನಗೆ ಈಗಲೂ ಒಂದು ವಿಷಯ ಅರ್ಥವಾಗಿಲ್ಲ ... ಅಂದಿನ ನಮ್ಮ ವರ್ತನೆ ನಮ್ಮ ಅಸಹನೆಯದೋ ಅಥವಾ ಮೇಷ್ಟ್ರ ಮಗನ ಹಠಮಾರಿ ಧೋರಣೆಯದೋ ಎಂದು) ಬಿದ್ದ ರಭಸಕ್ಕೆ ಮುಖಕ್ಕೆ ಏಟು ಬಿದ್ದು ಬಾಯಲ್ಲಿ ರಕ್ತ ಬಂತು. ಈಗ ಅಲ್ಲಿನ ವಾತಾವರಣವೇ ಬದಲು. ಎಲ್ಲರಲ್ಲೂ ತಪ್ಪಿತಸ್ಥ ಭಾವನೆ. ಮುಖಭಂಗವಾದ (ಮಾನಸಿಕವಾಗಿ ಮತ್ತು ದೈಹಿಕವಾಗಿ) ಮೇಷ್ಟ್ರ ಮಗನ ಆರ್ಭಟ ನೋಡಬೇಕು... "ನಮ್ಮಪ್ಪಂಗೆ ಹೇಳ್ತೀನಿ" ಅನ್ನುವ ಬೆದರಿಕೆ.
ವಿಷಯ ಮೇಷ್ಟ್ರ ಗಮನಕ್ಕೆ ಬಂದು,ಮಗನ ಹಲ್ಲು ಮುರಿದಿರುವುದನ್ನು ನೋಡಿ, ನಮ್ಮನ್ನೆಲ್ಲಾ ಕರೆಸಿ ವಿಚಾರಣೆ ನಡೆಸಿ, ಕೊನೆಗೆ ಸಮಾಧಾನ ಮಾಡಿ, ನಾಟಕ ಮುಂದುವರಿಸಿಕೋಡು ಹೋಗಲು ಸೂಚಿಸಿದರು (ಆಜ್ಞೆ ?). ಜೊತೆಗೆ ಎರಡನೆ ದಿನ ವಿಘ್ನ ಆಗಬಾರದು, ಅಂತ ತಿಳಿ ಹೇಳಿ ಕಳುಹಿಸಿದರು.
ಈಗ ಯೋಚಿಸಿದರೆ ದ್ವಿತೀಯ ವಿಘ್ನ ಆಗದೇ ಇರಬೇಕಾದ್ದು ನಾಟಕದ ಆಭ್ಯಾಸಕ್ಕೋ ಅಥವಾ ಮೇಷ್ಟ್ರ ಮಗನ ದಂತ ಭಗ್ನಕ್ಕೋ? ನಗೆಯು ಬರುತಿದೆ ಎನಗೆ ನಗೆಯು ಬರುತಿದೆ..
ನಮಸ್ಕಾರ.
ಹೇಗಿದೆ ನಮ್ಮ ಹಿರಿಯರು ಮಾಡಿದ ಸಂಪ್ರದಾಯ. ಕೆಲಸ ಮಾಡಕ್ಕೆ ಸ್ಪೂರ್ತಿ ತುಂಬಲು ಒಂದು ಸೂಚನೆ. ನಮಗೆ ಗೊತ್ತಾಗದ ಹಾಗೆ ಸಣ್ಣ ಒತ್ತಡ.
ದ್ವಿತೀಯ ವಿಘ್ನ ಅಂದ ತಕ್ಷಣ ನೆನಪಿಗೆ ಬರುವುದು " ಪ್ರಥಮ ಚುಂಬನೆ ದಂತ ಭಗ್ನೆ" ನಾಣ್ಣುಡಿ. ಚುಂಬನದಿಂದ ಅಲ್ಲದಿದ್ದರೂ ದಂತ ಭಗ್ನ ವಾದ ಸನ್ನಿವೇಷದ ನೆನಪು.
ನಾನಿನ್ನೂ 5 , 6 ನೇ ತರಗತಿಯಲ್ಲಿ ಓದುತ್ತಿದ್ದ ಸಮಯ. ನನ್ನ ಅಂದಿನ ಹಳ್ಳಿ (ಇಂದು ಬೆಂಗಳೂರಿನ ಭಾಗವೇ ಆಗಿದೆ) ದೊಡ್ದಜಾಲದಲ್ಲಿ ನಾವು ಮಕ್ಕಳೆಲ್ಲಾ ನಾಟಕ ಮಾಡಬೇಕೆಂದು ನಿರ್ಢರಿಸಿದೆವು. ನಮ್ಮ ಮೇಷ್ಟ್ರ ಮಗ ತಾನೇ ಕೃಷ್ಣನ ಪಾತ್ರ ಮಾಡಬೇಕು ಅಂತ ಒಂದೇ ಹಠ. ಮೇಷ್ಟ್ರ ಮಗ ಹಾಗಾಗಿ ಅವನಿಗೆ ಒಂದಷ್ಟು ಪ್ರಾಮುಖ್ಯತೆ. ಇದು ನಮಗೆಲ್ಲಾ ಒಪ್ಪಿಗೆಯಾಗದ ವಿಷಯ. ಕೃಷ್ಣನ ಪಾತ್ರ ಅಂದ್ರೆ ಹೀರೋ, ಎಲ್ಲರಿಗೂ ಆಸೆ, ಆದರೆ ಅದನ್ನು ಹೇಳುವುದಕ್ಕೆ ಹಿಂಜರಿಕೆ. ( ಇದು ಮೇಷ್ಟ್ರ ಗಮನಕ್ಕೆ ಬಂದು ಅವರು ಬೈತಾರೆ ಅನ್ನುವ ಭಯ).
ನಮಸ್ಕಾರ.
Comments
Post a Comment