Posts

ನಾವು ಸ್ವಾರ್ಥಿ ಆಗಬೇಕೇ?

Image
  ಸರ್ವೇ ಜನಾಃ ಸುಖಿನೋ ಭವಂತು//ಲೋಕಾ ಸಮಸ್ತಾಃ  ಸುಖಿನೋಭವಂತು//  ಎನ್ನುವ ಮೂಲಭೂತ ಚಿಂತನೆ ಇರುವ ಧರ್ಮದ ಭಾಗವಾದ ನಮಗೆ... ಸ್ವಾರ್ಥಿ ಆಗಬೇಕೇ ಎನ್ನುವ ಪ್ರಶ್ನೆ ಅಸಮಂಜಸ ಎನಿಸಿತೇ? ಮೊದಲಿಗೆ ಸ್ವಾರ್ಥ ಪದದ ಅರ್ಥ... ತಾನು, ತನ್ನದು ..ತನ್ನ ಬಗ್ಗೆ ಯೋಚಿಸುವುದು....                             ಈ ಭಾವ ಇಲ್ಲದಿದ್ದರೆ... ಮನುಷ್ಯನ ಜೀವನಕ್ಕೆ ಗುರಿಯೇ ಇಲ್ಲದಂತಾಗುತ್ತದೆ... ಅಸ್ತಿತ್ವದ ಪ್ರಶ್ನೆ ಎಂದು ನನ್ನ ಅನಿಸಿಕೆ... ನಾನು ಸಂತೋಷದಿಂದಿದ್ದರೆ... ಅದನ್ನು ಬೇರೆಯವರಿಗೆ ಹಂಚಲು ಸಾಧ್ಯ... ಇದರ ಇನ್ನೊಂದು ಮುಖ ನಿಸ್ವಾರ್ಥ....ತನ್ನದಲ್ಲದ... ಪರರ ಚಿಂತನೆ.  ಈ ಶ್ಲೋಕವನ್ನು ಗಮನಿಸಿ.. ಪರೋಪಕಾರಾಯ ಫಲಂತಿ ವೃಕ್ಷಃ ಪರೋಪಕಾರಾಯ ವಹಂತಿ ನದ್ಯಃ ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮಿದಂ ಶರೀರಂ// ಇದರ ಚಿಂತನೆ ಏನೋ ಸರಿ ಇದೆ... ಆದರೆ ಈಗಿನ ಕಾಲಮಾನದ ಮನುಷ್ಯನ ಜೀವನಶೈಲಿಗೆ ಹೊಂದಿಕೆಯಾಗುವುದಿಲ್ಲ.... ಎಲ್ಲವನ್ನೂ ಹಣದಿಂದಲೇ ಅಳೆಯುವ ಇಂದಿನ ಕಾಲಘಟ್ಟದಲ್ಲಿ ಹಣ್ಣು ಕೊಡುವ ಮರ / ನೆರಳು ಕೊಡುವ ಮರ ಯಾವುದೇ ಆಗಲಿ.. ತನ್ನ ಅಭಿವೃದ್ಧಿಗಾಗಿ ನಾಶ ಮಾಡುತ್ತಾನೆ. ಹರಿಯುವ ನದಿಯ ನೀರನ್ನು.. ಕೊಳಕು ಮಾಡುತ್ತಾನೆ... ಹಾಲು ಕೊಡುವ ಹಸುವನ್ನು ಎಷ್ಟರಮಟ್ಟಿಗೆ ಶೋಷಣೆ ಮಾಡುತ್ತಾನೆಂದರೆ... ಅದರ ಕರುವಿಗೂ ಹಾಲು ಸಿ...

ಪರೀಕ್ಷೆ- ಜೀವನ

Image
  ಮೊನ್ನೆ ಪೇಪರ್ ನಲ್ಲಿ ಬಂದ ಸುದ್ದಿ...CET ಪರೀಕ್ಷೆಯಲ್ಲಿ ಕೊಟ್ಟ ಪ್ರಶ್ನೆಗಳು... ಸಿಲಬಸ್ ನಿಂದ ಹೊರತಾಗಿತ್ತು... ಎಂದು.  ವಿದ್ಯಾರ್ಥಿಗಳು ಪೋಷಕರು ಹಾಗೂ ಕೆಲ ಕಾಲೇಜುಗಳಿಂದ ಖಂಡನೆ... ಮರು ಪರೀಕ್ಷೆಯು ನಡೆಯಬಹುದೇನೋ ಎಂಬ  ಸೂಚನೆ.  ಮರು ಪರೀಕ್ಷೆ ಅಂದಾಕ್ಷಣ ನನ್ನ ಮನಸ್ಸು ಹೋಗಿದ್ದು ನನ್ನ ಹತ್ತನೆಯ ತರಗತಿಯ ವರ್ಷಕ್ಕೆ. ನಾನು 10ನೇ ತರಗತಿ (SSLC) ಪರೀಕ್ಷೆಯನ್ನು ಎರಡು ಸಲ ಬರೆದಿದ್ದೇನೆಂಬ ಹೆಮ್ಮೆ.. ಸಾಮಾನ್ಯವಾಗಿ ಎರಡನೆಯ ಬಾರಿ ಪರೀಕ್ಷೆ ಬರೆದಿದ್ದರೆ... ಅದು ಫೇಲಾದ ಸೂಚನೆ ಹಾಗೂ ಕೆಲ ಮಟ್ಟಿಗೆ ಅವಮಾನಕರ... ಅಲ್ಲವೇ. ಆದರೆ ನನ್ನ ವಿಷಯದಲ್ಲಿ (ಆ ವರ್ಷದ ಎಲ್ಲ 10ನೇ ತರಗತಿಯ ವಿದ್ಯಾರ್ಥಿಗಳ ವಿಷಯದಲ್ಲಿ) ಹಾಗಲ್ಲ. ನಮ್ಮದೇ ವೈಶಿಷ್ಟ್ಯ. ಆಗಷ್ಟೇ ಶುರುಮಾಡಿದ್ದ ಹೊಸ ಶೈಲಿಯ... ಮೊದಲನೆಯ ತಂಡ ನಮ್ಮದು.  ಪ್ರಶ್ನೆ ಪತ್ರಿಕೆಯು ಹೊಸ ತರಹ.. new type questions ಸಮೇತ.. ಹಾಗಾಗಿ ನಮಗೆ ಒಂದಷ್ಟು ಕುತೂಹಲ ...ಸಾಕಷ್ಟು ಭಯ. ಸುದೈವದಿಂದ ಎಲ್ಲವೂ ಸರಾಗವಾಗಿ ನಡೆಯುತ್ತಿತ್ತು.... ಅಲ್ಲಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಗುಸು-ಗುಸು... ಗಣಿತದ ಪರೀಕ್ಷೆ ಎರಡು ದಿನ ಇರುವಾಗ... ನನ್ನಣ್ಣ ಒಂದು ಟೈಪ್ ಮಾಡಿದ ಪ್ರಶ್ನೆ ಪತ್ರಿಕೆ ತಂದುಕೊಟ್ಟ... ಅದು ಗಣಿತ ಪ್ರಶ್ನೆ ಪತ್ರಿಕೆಯ ತದ್ರೂಪು... ಅದು ಯಾವ ಮಟ್ಟದಲ್ಲಿ ಪ್ರಸಾರವಾಗಿತ್ತು ಎಂದರೆ ಗಾಂಧಿಬಜಾರ್ ನಲ್ಲಿ ಹಂಚುವಷ್ಟು. ನಾನು ಎಷ್ಟರ...

ಜಾತ್ರೆ -ತೇರು -ರಥೋತ್ಸವ

Image
  ಈಗ ಎಲ್ಲ ಕಡೆಯೂ ಜಾತ್ರೆ.. ರಥೋತ್ಸವ ... ತೇರನ್ನೆಳೆಯುವ ಸಂಭ್ರಮ. ಬೆಳಗಾದರೆ ಪೇಪರ್ ನಲ್ಲಿ ಅಲ್ಲಲ್ಲಿ ನಡೆದ ಜಾತ್ರೆಯ ವಿಷಯ ಬಂದಿರುತ್ತೆ. ಬೇಸಿಗೆ ಕಾಲ ಬಂತೆಂದರೆ ರೈತರಿಗೆ ವ್ಯವಸಾಯಕ್ಕೆ ಒಂದಷ್ಟು ಬಿಡುವು... ಜೊತೆಗೆ ಮಳೆ ಗಾಳಿಯ ತೊಡಕು ಇಲ್ಲದ ಸಮಯ... ಹಾಗಾಗಿ ಜನ ಸೇರುವ ಕಾರ್ಯಕ್ರಮಗಳಿಗೆ ಇದು ಸೂಕ್ತ ಸಮಯ. ಹಾಗಾಗಿ ಜಾತ್ರೆ, ಊರಿನ ದೇವಸ್ಥಾನದ ದೇವರ ರಥೋತ್ಸವ / ತೇರು ಕಾರ್ಯಕ್ರಮಗಳು. ಇದಕ್ಕೆ ಬಹಳಷ್ಟು ಮನೆಗಳಿಗೆ ಅವರ ನೆಂಟರು ಇಷ್ಟರು ಬಂದು ಭಾಗವಹಿಸುವುದು ಒಂದು ಸಂಪ್ರದಾಯ.  ಈಗ ಅದೇ ಪದ್ಧತಿ ಮುಂದುವರಿದು ಜಾತ್ರೆಯಂಥಾ ಕಾರ್ಯಕ್ರಮಗಳು ನಡೆಯುವುದು ಬೇಸಿಗೆ ಸಮಯದಲ್ಲೇ. ಜಾತ್ರೆ/ ರಥೋತ್ಸವ ಎಂದರೆ ಅದು ಶ್ರದ್ಧೆ ,ಭಕ್ತಿ ಸಡಗರ, ಸಂಭ್ರಮ , ಮನರಂಜನೆ ಎಲ್ಲಾ ಒಟ್ಟುಗೂಡಿರುವ ಒಂದು ಕಾರ್ಯಕ್ರಮ. ಹಳ್ಳಿ , ಪಟ್ಟಣ,  ನಗರ,.. ಹಾಗೇ ಚಿಕ್ಕವರು - ದೊಡ್ಡವರು ಹೆಣ್ಣು- ಗಂಡು   ಎಂಬ ಭೇದ ಭಾವವಿಲ್ಲದೆ ಎಲ್ಲ ಕಡೆಯೂ ಜಾತ್ರೆಯಲ್ಲಿ ಉತ್ಸಾಹದಿಂದ ಭಾಗವಹಿಸುವುದು ಸಾಮಾನ್ಯ. ಚಿಕ್ಕ ಮಕ್ಕಳು... ಅಲ್ಲಿ ಸಿಗುವ ಬಣ್ಣ ಬಣ್ಣದ ಆಟದ ಸಾಮಾನುಗಳು, ವಿವಿಧ ಆಟಗಳು ಹಾಗೂ ತಿನ್ನುವ ಆಸೆಯಿಂದ ಜಾತ್ರೆಗೆ ಬಂದರೆ... ಯುವಕ ಯುವತಿಯರು ಅಂದ ಚಂದವಾಗಿ ಸಿಂಗರಿಸಿಕೊಂಡು, ತಮ್ಮದೇ ಲೋಕದಲ್ಲಿ ವಿಹರಿಸಲು, ಖುಷಿಪಡಲು ಬರುತ್ತಾರೆ. ನವ ದಂಪತಿಗಳು ಕೈ ಕೈ ಹಿಡಿದು ಓಡಾಡುತ್ತಾ.. ಹೊಸತನವನ್ನು ಅನುಭವಿಸುತ್ತಾರೆ. ಮಕ್ಕಳ ತಂದ...

ಮೂರ್ಖರ ದಿನಾಚರಣೆ

Image
ಈಗೀಗ ಎಲ್ಲದಕ್ಕೂ ಒಂದು ಅಂತರರಾಷ್ಟ್ರೀಯ ದಿನ ಉಂಟು. ಇದನ್ನು ಪಾಲಿಸಿದಾಗ ಮನುಕುಲಕ್ಕೆ ಉಪಯೋಗ ಉಂಟು ಎನ್ನುವ ಭಾವನೆಯಿಂದ.  ಎಷ್ಟೋ ಸಲ ಅದು ಘೋಷ ವಾಕ್ಯಗಳಲ್ಲೇ ಮುಗಿಯುತ್ತದೆ.  ವಿಶೇಷವೆಂದರೆ ಏಪ್ರಿಲ್ ಒಂದನ್ನು ಅಂತರರಾಷ್ಟ್ರೀಯ ಮೂರ್ಖರ ದಿನ ಅಂತ ಇದುವರೆಗೂ ಯಾವ ಸಂಸ್ಥೆಯೂ (UNESCO ಸೇರಿ) ಘೋಷಣೆ ಮಾಡಿರದಿದ್ದರೂ... ಈ ದಿನವನ್ನು ಶ್ರದ್ಧೆಯಿಂದ ಆಚರಿಸುವ ಜನಸಂಖ್ಯೆ ಸುಮಾರು. ಅದರಲ್ಲೂ ಮಕ್ಕಳು ಹಾಗೂ ಯುವ ಜನತೆ ಸ್ವಪ್ರೇರಣೆಯಿಂದ ಆಚರಿಸುವ ದಿನ ಇದು ಮಾತ್ರ ಎಂದು ನನ್ನ ಅನಿಸಿಕೆ. ಅಷ್ಟೇ ಏಕೆ ವರ್ಷಪೂರ್ತಿ.. ಮೂರ್ಖರಾಗುವ / ಆಗಿಸುವ ಕಾಯಕ ನಡೆಯುತ್ತಲೇ ಇರುತ್ತದೆ. ಮನುಷ್ಯನ ಒಂದು ಸ್ವಭಾವ( Sadistic behaviour).. ಬೇರೊಬ್ಬರನ್ನು ಮುಜುಗರಕ್ಕೆ ಸಿಕ್ಕಿಸಿ/ ನೋಯಿಸಿ ಸಂತೋಷಪಡುವುದು. ನಾನಾಗ ಹೈ ಸ್ಕೂಲ್ ನಲ್ಲಿ ಓದುತ್ತಿದ್ದೆ... ಬೆಂಗಳೂರಿಗೆ ಬಂದು ವರ್ಷ ವಾಗಿತ್ತು.... ಒಂದಷ್ಟು  ಸಂಕೋಚ ಕಳೆದಿತ್ತು. ಬೇಸಿಗೆಯ ರಜಕ್ಕೆ ದೊಡ್ಡಜಾಲಕ್ಕೆ ಹೋಗಬೇಕು.... ಖುಷಿ.....ಏಪ್ರಿಲ್ ಒಂದು...ನನಗೇನೂ ತಿಳಿಯದು.  ನನ್ನ ಸ್ನೇಹಿತ TR ಶ್ರೀನಿವಾಸ ರಾವ್ ಮನೆಗೆ ಹೋಗಿ ಹೇಳಿ ಹೊರಡುವ ಮನಸು....ಯಾವ ಮಾಯದಲ್ಲೋ ಒಂದು plastic ಚೇಳನ್ನು ನನ್ನ ಮೇಲೆಸೆದ... ಗಾಬರಿಯಿಂದ ನಾನು ಒದ್ದಾಡುತ್ತಿದ್ದಾಗ ಅವನ ಅಕ್ಕ ಬಂದು ತೋರಿಸಿ ಸಮಾಧಾನ ಮಾಡುತ್ತಿದ್ದಾಗ ಅವನು ಹೇಳಿದ್ದೆ ” ಏಪ್ರಿಲ್ ಫೂಲ್ ... ಏಪ್ರಿಲ್ ಫೂಲ್.." ಇದು ಏಪ್ರ...

ನೀರು - ನಾಗರೀಕತೆಯ ಬೇರು

Image
 ಕಾಮದಹನವಾಯಿತು.... ರಂಗಿನಾಟ ವಾಯಿತು... ಮೈ ಮೇಲಿನ ಹಾಗೂ ಬಟ್ಟೆಗಳ ರಂಗು ತೊಳೆಯಲು ಯಥೇಚ್ಛ ನೀರು ಬೇಕಾಯಿತು... ಕಾಕತಾಳಿಯವಾಗಿ ಈ ಸಲದ ಹಬ್ಬದ ಸಮಯಕ್ಕೆ ಎಲ್ಲೆಡೆ ನೀರಿಗೆ ಹಾಹಾಕಾರ.  ಆದರೆ ಯಾವುದೂ ನಿಲ್ಲದು... ಸ್ವಲ್ಪಮಟ್ಟಿಗಾದರೂ ಹಬ್ಬ ಹರಿದಿನಗಳನ್ನು ಆಚರಿಸಲೇಬೇಕು. ನಮ್ಮ ಪರಿಸ್ಥಿತಿ ಮಳೆಗಾಗಿ ಕಾಯುವ ಜಾತಕ ಪಕ್ಷಿಗಳಂತೆ ಆಗಿದೆ. ಇನ್ನೂ ಕೆಲಕಾಲ ಮಳೆ ಬರದಿದ್ದರೆ.. ನೀರಿಗೆ ತತ್ವಾರವಾಗಬಹುದು. ಚಿಕ್ಕಂದಿನಲ್ಲಿಯೂ ಇಂಥ ಪರಿಸ್ಥಿತಿಯನ್ನು ದಾಟಿದ ನೆನಪಿದೆ. ಆಗ ಊರಿನಲ್ಲಿ ಒಬ್ಬ ವ್ಯಕ್ತಿ ತಲೆಯ ಮೇಲೆ ಹೂ ಮತ್ತು ಅಡಕೆ/ ತೆಂಗಿನ ಹೊಂಬಾಳೆಯಿಂದ ಅಲಂಕರಿಸಿದ ಕಳಶವನ್ನು ಹೊತ್ತು ಮನೆಮನೆಗೂ ಹೋಗುವುದು... ನಾವು ಮಕ್ಕಳೆಲ್ಲ ಒಕ್ಕೊರಲಿನಿಂದ " ಹುಯ್ಯೋ ಹುಯ್ಯೋ..ಮಳೆರಾಯ ಹೂವಿನ ತೋಟಕೆ ನೀರಿಲ್ಲ... ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ....." ಹೇಳುತ್ತಾ ಹೋದಾಗ ಪ್ರತಿ ಮನೆಯ ಮುಂದೂ ಕಳಸದ ಮೇಲೆ ...ಇರುವುದರಲ್ಲಿ ಸ್ವಲ್ಪ ....ನೀರು ಹಾಕುವುದು... ವರುಣನನ್ನು ಪ್ರಾರ್ಥಿಸುವ ಬಗೆ.  ತಕ್ಷಣ ಮಳೆ ಸುರಿಯಿತೋ ಇಲ್ಲವೋ ನೆನಪಿಲ್ಲ... ಆದರೆ ಮಳೆಯಂತೂ ಬಂತಲ್ಲ... ನಾವೆಲ್ಲ ಉಳಿದಿದ್ದೇವಲ್ಲ...ಅಂತೆಯೇ ಮಳೆಗಾಗಿ ಪರ್ಜನ್ಯ ಜಪ, ಕಪ್ಪೆಗಳಮದುವೆ..ಹೀಗೆ ವಿವಿಧ ಉಪಾಯಗಳು...ಹೇಗೋ ಮಳೆ ಬಂದರೆ ಸರಿ. ಒಮ್ಮೆ ಹಿಂದಕ್ಕೆ ನೋಡಿದರೆ... ಮನುಷ್ಯನ ವಸತಿ.... ನಾಗರಿಕತೆ ಪ್ರಾರಂಭವಾದದ್ದು ನೀರಿನ ತಟದಲ್ಲಿ... ನದಿಯ ಪಾತ್ರ...

ಪದ್ಮಶ್ರೀ Dr. CRC

Image
60 ವರ್ಷದ ಹಿಂದೆ ನಾನು ಓದಿದ ಬಸವನಗುಡಿ ನ್ಯಾಷನಲ್ ಕಾಲೇಜ್ ಅಂಗಳದೊಳಗೆ - ಹೋದ ಭಾನುವಾರ, ಕಾಲಿಟ್ಟ ಕ್ಷಣ ಮನಸ್ಸು ಪುಳಕಗೊಂಡಿತು... ಹಳೆಯ ನೆನಪುಗಳಿಂದ. ಹೋದ ಸಂದರ್ಭವೂ ಅಷ್ಟೇ ಮುಖ್ಯವಾಗಿತ್ತು. ಡಾಕ್ಟರ್ ಸಿಆರ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಕೆಲಸ ಮಾಡುತ್ತಿರುವ ಸಮಾಧಾನ ಆಪ್ತ ಸಲಹಾ ಕೇಂದ್ರದ 17ನೆಯ ವಾರ್ಷಿಕೋತ್ಸವ ಹಾಗೂ ಡಾಕ್ಟರ್ ಅವರ ಮಡದಿ ರಾಜೇಶ್ವರಿಯವರ ಒಂಬತ್ತನೇ ವರ್ಷದ  ಸ್ಮರಣೆ ಕಾರ್ಯಕ್ರಮ.... ಈ ವರ್ಷ ಇದರ ಜೊತೆಗೆ ಒಂದು ವಿಶೇಷ ಸೇರ್ಪಡೆ... ಅದು... Dr.CRC  ಅವರು ಪದ್ಮಶ್ರೀ ಪ್ರಶಸ್ತಿ ಪಡೆದದ್ದಕ್ಕಾಗಿ  ಅಭಿನಂದನೆ ಸಲ್ಲಿಕೆಯ ಸಡಗರ. ಒಳಗೆ ಹೋಗುತ್ತಿದ್ದಂತೆ ಕಂಡದ್ದು ಹಬ್ಬದ ವಾತಾವರಣ... ಬಹಳ ಜನ ಪರಿಚಯದವರ ಭೇಟಿ... ಉಭಯ ಕುಶಲೊಪರಿ... ಹಾಗೆ ಕೆಲ ಹೊಸಬರ ಪರಿಚಯ ಸಹ. Dr.CRC  ಅವರನ್ನು ಭೇಟಿ ಮಾಡಿ... ಅಭಿನಂದಿಸಿ ಒಂದೆರಡು ಮಾತಾಡಿ.... ಮತ್ತೆ ಬೇರೆಯವರೊಡನೆ ಮಾತಾಡುತ್ತಿದ್ದೆ.... ಆ ಸಮಯದಲ್ಲಿ ನನ್ನ ಕಣ್ಣಿಗೆ ಬಿದ್ದದ್ದು.. ಒಳಗೆ ಹೆಜ್ಜೆ ಹಾಕುತ್ತಿದ್ದ ಹಿರಿಯರು ಡಾಕ್ಟರ್. G. ನಾರಾಯಣ ರೆಡ್ಡಿ ಅವರು. ಇವರನ್ನು ಬಹುತೇಕ ಸಮಾಧಾನ ಕೇಂದ್ರದ ಕಾರ್ಯಕ್ರಮಗಳಲ್ಲಿ.. ಹಾಗೂ ರಾಮನಗರದ ನೆಮ್ಮದಿ ಆಶ್ರಮದ ಕಾರ್ಯಕ್ರಮಗಳಲ್ಲಿ ಕಂಡಿದ್ದೆ... ಅವರ ಪರಿಚಯ ನನಗಿದೆ... Dr.CRC   ಹೇಳಿದಂತೆ.... ಅವರು ಮನೋವೈದ್ಯರಾಗಲು ಕಾರಣರಾದವರು ಹಾಗೂ ಗುರು ಸ್ಥಾನದಲ್ಲಿರುವವರು ಡಾಕ್ಟರ್...

ಮನೆ...

Image
  ಆಟ ಪಾಠ ಮನೆ ಕಡೆ ಓಟ... ಚಿಕ್ಕಂದಿನಲ್ಲಿ ಹೇಳುತ್ತಿದ್ದ ಈ ವಾಕ್ಯ... ಆಗ ಪದಗಳ ಗುಂಪು... ಈಗ ಯೋಚಿಸಿದರೆ.. ಮನೆ ಕಡೆ ಓಟ.... ಎಲ್ಲ ಕೆಲಸದ ನಂತರ ಇರುವ ಗುರಿ. ಮನೆ ಸೇರಿದಾಗ ಸಿಗುವ ಒಂದು ತೃಪ್ತಿ... ಪ್ರಾಯಶಃ ಪದಗಳಲ್ಲಿ ವರ್ಣಿಸಲು ನನಗಿರುವ ಮಿತಿಯಲ್ಲಿ ಅಸಾಧ್ಯ.  ಅದನ್ನು ಅನುಭವಿಸಿಯೇ ತೀರಬೇಕು.  ಮೊದಲಿನಿಂದಲೂ ನನಗೆ ಮನೆಯ ವ್ಯಾಮೋಹ. ಕತ್ತಲಾಗುವುದರೊಳಗೆ ಮನಗೆ ಬರಬೇಕು ಎಂಬ ನಿಯಮದ ಕಾರಣ ಬೇಗ ಮನೆ ಸೇರಬೇಕು ಎನ್ನುವ ತವಕ ಹಾಗೂ ಭಯ. ಮೊದಲು ಅಮ್ಮ ಅಜ್ಜಿಯ ಸೆಳೆತ ...ನಂತರ ಮಡದಿ ಮಗಳ ಸೆಳೆತ... ಮನೆ ಒಂದು ನಾವಿರಲು ಬೇಕಾದ ಕಟ್ಟಡ ಮಾತ್ರವೇ? ಮೊದಲ ಹಂತಕ್ಕೆ... ಅದು ನಮ್ಮನ್ನು ಬಿಸಿಲು ಮಳೆ ಗಾಳಿ ಎಲ್ಲದರಿಂದ ರಕ್ಷಿಸುವ ತಾಣ ಹೌದು. ಇಷ್ಟೇ ಆಗಿದ್ದರೆ... ನಾವು ಉಳಿಯುವ ಹೋಟೆಲ್ ರೂಂ, ಛತ್ರ ಹೀಗೆ ಎಲ್ಲವೂ ಮನೆಯಾದೀತು. ಆದರೆ ಇವೆಲ್ಲವೂ ಮನೆಯಲ್ಲ. ಮನೆ ಎಂದರೆ ದೈಹಿಕ ರಕ್ಷಣೆ ಮಾತ್ರವಲ್ಲ.... ಮಾನಸಿಕ ಸಾಂತ್ವನ ನೆಮ್ಮದಿ ಹಾಗೂ ಮನೆಯವರಿಂದ ಸಿಕ್ಕುವ ಪ್ರೀತಿ, ರಕ್ಷಣೆ... ಮನೆಯ ಕಲ್ಪನೆಯ ಜೊತೆ ಜೊತೆಗೆ ಮನೆಯಲ್ಲಿರುವವರ ಪ್ರೀತಿ ಭಾಂದವ್ಯ ಎದ್ದು ತೋರುತ್ತದೆ( ಕೆಲಸಮಯ ಬೇರೆ ಬೇರೆ ಕಾರಣಗಳಿಂದ ಪ್ರೀತಿ ವಾತ್ಸಲ್ಯದ ತಾತ್ಕಾಲಿಕ ಕೊರತೆಯಾಗಬಹುದು.) ಇದಕ್ಕೇ ಇರಬಹುದು   "ಹಂಗಿನರಮನೆಗಿಂತ ಅಂಗಣದ ಗುಡಿ ಲೇಸು..." ##ಎಂಬ ನುಡಿಗಟ್ಟಿನ  ಪ್ರಯೋಗ. ನಮ್ ಕೈಲಾಸಂ ಹೇಳಿದಂತೆ... "ಮಕ್ಕಳಿಸ್ಕೂಲ್ ...

ಅಧಿಕ ಮಾಸ - Leap year

Image
  ತಾರೀಕು 29 ಫೆಬ್ರವರಿ ಅಂತ ದೊಡ್ಡದಾಗಿ  ಬರೆದು ,  ಬೇರೆ ದಿನಾನೇ ಈ ಲೇಖನ ಬರ್ದಿದ್ದಂಗೆ ಇದೆಯಲ್ಲ ಅನ್ಸಿದ್ರೆ ನಿಮ್ಮ ಅನಿಸಿಕೆ ಸರಿಯಾಗಿದೆ.... ಹಾಗೇ.... "29 ಫೆಬ್ರವರಿ"  ಈ ಲೇಖನದ ವಿಷಯ ಅನ್ಸಿದ್ರೆ ಅದೂ ಸರಿಯಾಗಿದೆ.... "ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ " ಎಂಬಂತೆ. 29, ಫೆಬ್ರವರಿ ಒಂದು ವಿಶೇಷ ದಿನ... ಪ್ರತಿ ವರ್ಷ ಸಿಗುವುದಲ್ಲ... ಸಿಗುವುದೇ ಅಪರೂಪಕ್ಕೆ ನಾಲ್ಕು ವರ್ಷಕ್ಕೆ ಒಂದು ಸಲ. ಆ  ವರ್ಷದ 366 ನೇ  ದಿನ.  ಆ ವರ್ಷವನ್ನು ಲೀಪ್ ಇಯರ್ (ಅಧಿಕ ವರ್ಷ) ಎಂದು ಕರೆಯುತ್ತಾರೆ....ಎಂದು ನಾನು ಕಲಿತದ್ದು ಈ ಕೆಳಗಿನ ಸಾಲುಗಳಿಂದ... 30 days in september, april, June and November, all the rest are 31, except february 28 and 29 in a leap year. ಬಹುಶಃ ನಾನು ಐದನೆಯ ತರಗತಿಯಲ್ಲಿದ್ದಾಗ ನಮ್ಮ ಶಂಕರನಾರಾಯಣರಾವ್ ಮೇಷ್ಟ್ರು.. ಹೇಳಿ ಕೊಟ್ಟದ್ದು....  ಮುಷ್ಟಿಯನ್ನು ಉಪಯೋಗಿಸಿ 30 ಹಾಗೂ 31 ದಿನ ಇರುವ ತಿಂಗಳುಗಳನ್ನು ಗುರುತಿಸುವ ಬಗೆ. ಹಾಗೇ.... ಲೀಪ್ ಇಯರ್ ಗುರುತಿಸಲು.. ಆ ವರ್ಷದ ಸಂಖ್ಯೆಯನ್ನು ನಾಲ್ಕರಿಂದ ಭಾಗಿಸಿ... ಶೇಷ ಏನೂ ಉಳಿಯದಿದ್ದರೆ ಅದು ಲೀಪ್ ಇಯರ್ ಎಂದು... ಮುಂದೆ ಹೈಸ್ಕೂಲ್ನಲ್ಲಿ ಕಲಿತದ್ದು... ಇಸವಿ...1700, 1800 ಹೀಗೆ ಬಂದಾಗ ಅದು 400 ರಿಂದ ಸಂಪೂರ್ಣ ಭಾಗವಾಗಬೇಕೆಂದು. ನಾನು ಇಂ...

ಮದುವೆ - ಒಂದು ಚಿಂತನೆ

Image
  Marriages are made in heaven ಅನ್ನುವುದು ಇಂಗ್ಲೀಷಿನ ಚಿರಪರಿಚಿತ ನಾಣ್ಣುಡಿ. ನಮ್ಮ ಸಂಸ್ಕೃತಿಯಲ್ಲಿ ಅದನ್ನು " ಋಣಾನುಬಂಧಂ ರೂಪೇಣ ಪಶು ಪತ್ನಿ ಸುತಾಲಯಃ" ಎಂದು ವಿಶಾಲ ತಳಹದಿಯಲ್ಲಿ ಹೇಳಿದ್ದಾರೆ. ಈ ಹೇಳಿಕೆ ಗಂಡಿನ ಕೇಂದ್ರಿತವಾದರೂ... ಪತಿ ಪತ್ನಿಯ ಸಂಬಂಧ ಮೊದಲೇ ನಿರ್ಧಾರವಾದಂತೆ ಸೂಚಿಸುತ್ತದೆ... ಏಳೇಳು ಜನ್ಮದ ಸಂಬಂಧ ಅಂತಾರಲ್ಲ.. ಹಾಗೆ ( ಏಳೇ ಯಾಕೋ ಗೊತ್ತಿಲ್ಲ...ಕೆಲ ಸಲ ನನ್ನಹೆಂಡತಿ ಏಳೇಳು ಜನ್ಮಕ್ಕೂ ನೀವೇ ನನ್ನ ಗಂಡ ಎಂದು ಹೇಳಿದಾಗ.. ನಾನು ದೇವರನ್ನು ಕೇಳಿದ್ದಿದೆ....ಇದೇ 7 ನೇ ಜನ್ಮ ಆಗಲೀಂತ...ಇದು ನನ್ನಾಕೆಗೆ ಇಷ್ಟವಾಗದ್ದು..ಮುನಿಸು ತರುವಂತದ್ದು...ಅದಕ್ಕೇ.. ನನಗೆ ಇಷ್ಟವಾಗುವುದು). ಎಲ್ಲಿಯೋ ಇದ್ದ ಹೆಣ್ಣು... ಇನ್ನೆಲ್ಲಿಯೋ ಇದ್ದ ಗಂಡಿನೊಡನೆ ಒಂದಾಗಿ ಬಾಳುವ ಈ ಮದುವೆ ಎನ್ನುವ ಸಂಬಂಧ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ... ಎತ್ತಣ ಮಾಮರ ಎತ್ತಣ ಕೋಗಿಲೆ .. ಎಷ್ಟು ಸೂಕ್ತ ಅಲ್ಲವೇ? ಕೆ.ಎಸ್. ನ.  ಹೇಳಿದಂತೆ... ಒಂದು ಗಂಡು ಒಂದು ಹೆಣ್ಣು ಹೇಗೋ ಸೇರಿ ಹೊಂದಿಕೊಂಡು, ಕಾಣದೊಂದ ಕನಸು ಕಂಡು..... ಜೀವನ ಮುಂದುವರಿಸೋದು.... ಈ ಚಿಂತನೆ ನನ್ನ ಮನಸ್ಸಿನಲ್ಲಿ ಬರಲು ಕಾರಣ ಫೆಬ್ರವರಿಯಲ್ಲಿ ನಾನು ಭಾಗವಹಿಸಿದ ಎರಡು ಮದುವೆಗಳು.... ಎರಡರಲ್ಲೂ ಒಂದಷ್ಟು ಸಾಮ್ಯ.... ಹೆಣ್ಣು ಗಂಡು ಇಬ್ಬರೂ ವಿದೇಶದಲ್ಲಿ ನೆಲೆಸಿರುವವರು...    ಒಂದು ಜೋಡಿ ನೆಲೆಸಿರುವುದು ಇಂಗ್ಲೆಂಡ್ ನಲ್ಲಿ... ಇಬ್ಬರೂ ಕ...

ತ್ಯಾಗರಾಜರ ಆರಾಧನೆ.. ರುದ್ರಪಟ್ಟಣ

Image
  ಎಂದರೋ ಮಹಾನುಭಾವಲು ಅಂದರಿಕಿ ವಂದನಮು.... ಇದು ನಾನು ಬಹಳ ಸಲ ನೆನೆಸಿಕೊಳ್ಳುವುದು... ನನ್ನ ಜೀವನದಲ್ಲಿ ಬಂದು ಪ್ರಭಾವ ಬೀರಿದ ವ್ಯಕ್ತಿಗಳನ್ನು ಸ್ಮರಿಸಿದಾಗ.  ತ್ಯಾಗರಾಜರ ಈ ಕೀರ್ತನೆ ನನ್ನ ಹೃದಯಕ್ಕೆ ಬಲು ಹತ್ತಿರ (ಅದರ ಅರ್ಥವೂ ಸರಿಯಾಗಿ ಗೊತ್ತಿಲ್ಲದ ಸಮಯದಿಂದ).... ಇದು ನೆನ್ನೆ ಮೊನ್ನೆಯದಲ್ಲ ಸುಮಾರು ಅರ್ಧ ಶತಮಾನಕ್ಕೂ ಮಿಕ್ಕಿ ವರ್ಷಗಳಿಂದ. ಅದು 60ರ ದಶಕ.... ನಾನು ಬೆಂಗಳೂರಿಗೆ ಬಂದ ಹೊಸದು.... ಚಿಕ್ಕಮಾವಳ್ಳಿಯಲ್ಲಿ ಚಂದ್ರಾ ಕಲಾವಿದರು( ನನ್ನಣ್ಣಂದಿರು ಇದರ ಭಾಗ) ನಡೆಸುತ್ತಿದ್ದ ತ್ಯಾಗರಾಜರ ಆರಾಧನೆಯ ದಿನಗಳು.... ತ್ಯಾಗರಾಜರು ಯಾರೆಂದು ತಿಳಿಯದಿದ್ದರೂ...  ತ್ಯಾಗರಾಜರ ಫೋಟೋದ ಮೆರವಣಿಗೆ ಹಾಗೂ ಪಂಚರತ್ನ ಕೀರ್ತನೆಗಳ ಗಾಯನ ನನಗೆ ಮೆಚ್ಚುಗೆ. ಇದು ಸುಮಾರು ವರ್ಷ ನಡೆಯಿತು... ಯೋಗಾ ಯೋಗವೇನೋ.... ಆ ಫೋಟೋ ಇಂದಿಗೂ ನಮ್ಮ ಮನೆಯಲ್ಲಿದೆ, ಅದು ನನ್ನಲ್ಲಿರುವ ಒಂದು ಅಮೂಲ್ಯ ವಸ್ತು.  ಮನೆ ಕಟ್ಟುವಾಗ ಸಹ ಅದಕ್ಕಾಗಿಯೇ ಸ್ಥಳ ಮೀಸಲು ಮಾಡಿದ್ದು... ಅಲಂಕರಿಸಿದ್ದು, ತ್ಯಾಗರಾಜರ ಮೇಲಿನ ಭಕ್ತಿಯಿಂದ ಅಭಿಮಾನದಿಂದ. ಹಲವು ಬಾರಿ ಟಿವಿಯಲ್ಲಿ ಪ್ರಸಾರವಾದ... ತಿರುವೈಯಾರುವಿನಲ್ಲಿ ನಡೆದ ತ್ಯಾಗರಾಜರ ಆರಾಧನೆ ನೋಡಿ ಕೇಳಿ ಸಂತೋಷಪಟ್ಟಿದ್ದೇನೆ. ಆ ಹಾಡುಗಳಲ್ಲಿ ನನಗೆ ತುಂಬಾ ಇಷ್ಟವಾದದ್ದು ...ಎಂದರೋ ಮಹಾನುಭಾವುಲು... ಎರಡನೆಯದು ಸಾಧಿಂಚನೆ ಹಾಡಿನ... "ಸಮಯಾನಿಕಿ ತಗು ಮಾಟಲಾಡೆನೇ" ಭಾಗ. ನನ್ನ ವ್ಯವಹಾರಿಕ ...

ಕೃತಜ್ಞತೆ - ತೃಪ್ತಿ - ಅಭಿಲಾಷೆ

Image
    ದೇವ ನಿನ್ನ ರಾಜ್ಯದ ನ್ಯಾಯವಿದೇನಾ? ಲೋಕಕೆಲ್ಲ ಒಬ್ಬ ಸೂರ್ಯ ಒಬ್ಬನೇ ಚಂದಿರ ಎಲ್ಲರಿಗೂ ಒಂದೇ ಭೂಮಿ ಇರುವುದೊಂದೇ ಅಂಬರ, ಆದರೇನು ಜಗದಲಿ ಭೇದ ಭಾವನಾ, ಈ ಭೇದ ಭಾವನಾ...  ಇದು ಚಿಕ್ಕಂದಿನಲ್ಲಿ ಕೇಳಿದ್ದ ಒಂದು ಹಾಡು. ಹೌದು... ಮನುಕುಲಕ್ಕೆಲ್ಲ ಇರುವುದು ಒಂದು ಭೂಮಿ, ಒಂದು ಆಕಾಶ, ಒಂದು ಸೂರ್ಯ, ದಿನದಲ್ಲಿ 24 ಗಂಟೆ... ಇದರಲ್ಲಿ ಭೇದ ಭಾವವಿಲ್ಲ... ಆದರೆ ಮನುಷ್ಯನ ಬೆಳವಣಿಗೆ ....ಎಲ್ಲರದೂ ಒಂದೇ ರೀತಿ ಇರುವುದಿಲ್ಲ... ಸಾಕಷ್ಟು ವ್ಯತ್ಯಾಸಗಳು... ಅಜಗಜಾಂತರ... ಇದು ಯಾಕಿರಬಹುದೆಂದು ಯೋಚಿಸಿದಾಗ ಅನಿಸಿದ್ದು.... ಸಮಾನ ಅವಕಾಶಗಳಿದ್ದಾಗಲೂ ಸಹ ...ಆಯಾ ವ್ಯಕ್ತಿಯ ಸಾಮರ್ಥ್ಯಕ್ಕೆ ತಕ್ಕಂತೆ ಅವರವರ ಬೆಳವಣಿಗೆ. ಒಂದೇ ಸಾಮರ್ಥ್ಯ ಇರುವಂತಹ ವ್ಯಕ್ತಿಗಳಲ್ಲೂ ಸಹ.. ಬೆಳವಣಿಗೆಗಳು ವ್ಯತ್ಯಾಸವಾಗಬಹುದು... ಇದಕ್ಕೆ ಕಾರಣ ಅದೃಷ್ಟ ಎನ್ನಬಹುದೇ? ಅಥವಾ ಕಾಣದ ಕೈಗಳ ಪ್ರಭಾವವೇ? ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದಂತೆ ...ನಿನ್ನ ಕೆಲಸ ನೀ ಮಾಡು....ಫಲಾಫಲಗಳು ನಿನ್ನ ಭಾಗ್ಯದಂತೆ.....ಅಂದರೆ ಬಂದ ಫಲವನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುವುದು ನೆಮ್ಮದಿಯ ಜೀವನದ ಲಕ್ಷಣ. ಇದನ್ನೇ ಇದ್ದುದರಲ್ಲಿ ತೃಪ್ತಿ ಹೊಂದುವುದು ಎನ್ನುವುದು. ಇದು ಸಾಧ್ಯವಾಗದಿದ್ದಾಗ... ಬೇರೆಯವರಲ್ಲಿರುವುದನ್ನು... ನೋಡಿ ನನಗಿಲ್ಲ ಎಂದು ಹಳಹಳಿಸುವುದು... ನಮ್ಮ ಜೀವನ ಶೈಲಿಯನ್ನೇ ತಲೆಕೆಳಗು ಮಾಡುತ್ತದೆ. ಇಲ್ಲಿ ಋಣಾತ್ಮಕ ಭಾವನೆಗಳು ಹೆಚ್ಚಾಗಿ ...

ಎಲ್ಲೆಲ್ಲಿ ನೋಡಿದರೂ ಅಲ್ಲಿ ಶ್ರೀರಾಮಚಂದ್ರ

Image
2‌2.01.2024 ಈ ದಿನ ಮುಂದಿನ ಪೀಳಿಗೆಯವರಿಗೆ ಚರಿತ್ರೆಯಲ್ಲಿ ಇರಬಹುದಾದಂತ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ.  ನಾವು ಈ ದಿನದ ಕಾರ್ಯಕ್ರಮದಲ್ಲಿ ಪರೋಕ್ಷವಾಗಿಯಾದರೂ ಭಾಗವಹಿಸಿದ್ದೇವೆಂಬ ಹೆಮ್ಮೆ ಪಡ ಬಹುದಾದಂತಹ ಜನ. ಎಲ್ಲೆಲ್ಲೂ ಜೈ ಶ್ರೀ ರಾಮ್ ಎಂಬ ಘೋಷಣೆ... ಭಜನೆಗಳು ಅಲ್ಲಲ್ಲಿ...  ಹೆಣ್ಣು ಗಂಡು ಎಂಬ ಭೇದವಿಲ್ಲದೆ...ಖುಷಿಯಿಂದ ಕುಣಿಯುತ್ತಿರುವ...ಜನತೆ.... ಕಾರ್ಯಕರ್ತರ ಓಡಾಟ, ಮಾಧ್ಯಮದವರ ಉತ್ಸಾಹ.. ಎಲ್ಲದರ ನೋಟ ದೂರದರ್ಶನದಲ್ಲಿ ನೋಡಿ ಪುಳಕಗೊಂಡ ನಾವು.... ಇನ್ನು ಅಲ್ಲಿಗೇ ಹೋಗಿ ಸಂಭ್ರಮದಲ್ಲಿ ಪಾಲ್ಗೊಂಡವರ ಮನಸ್ಸಿನ ಸ್ಥಿತಿ ಹೇಗಿರಬಹುದು ಎಂದು ಊಹಿಸಿದರೆ ಮೈ ನವಿರೇಳುತ್ತದೆ. 90 ವರ್ಷ ಮೀರಿದ  ಕೆ.ಪರಾಶನ್ ಅವರನ್ನು ಕಂಡಾಗ ಭಕ್ತಿ ಭಾವ ಉಕ್ಕಿ ಬಂತು... ನ್ಯಾಯಾಲಯದಲ್ಲಿ ರಾಮನ ಪರವಾಗಿ ವಾದ ಮಂಡಿಸುವಾಗ ಬರಿಗಾಲಲ್ಲಿ ನಿಂತು ವಾದ ಮಾಡಿದ್ದನ್ನು ಕೇಳಿ ತಿಳಿದಿದ್ದೆ...ಎಂಥಾ ನಿಷ್ಟೆ.. ಮತ್ತೊಂದು ಮನಕರಗುವ ದೃಶ್ಯ... ರಾಮಮಂದಿರಕ್ಕಾಗಿ ಗುಂಡೇಟು ತಿಂದು ಬಲಿದಾನ ಮಾಡಿದ ರಾಮ್ ಕೊಠಾರಿ ಹಾಗೂ ಶರತ್ ಕೊಠಾರಿ ( ಇಬ್ಬರು 18... 20 ವರ್ಷದ ಅಣ್ಣ ತಮ್ಮಂದಿರು) ಇವರ ಅಕ್ಕ ಮಾತನಾಡಿದ ಪರಿ. ಇನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಶ್ರದ್ಧೆ ಭಕ್ತಿ ಎಷ್ಟು ಹೇಳಿದರೂ ಕಮ್ಮಿಯೇ ...ತುಂಬಾ ಮೆಚ್ಚುಗೆ ಆಯ್ತು... ಎಲ್ಲವನ್ನೂ ಹೇಳಲು ನೆನಪಿಗೆ ಬಾರದು... ಸ್ಥಳವೂ ಸಾಲದು... ಆದರೆ ಸುಮಾರು ಐದು ಗಂಟೆಗಳ ಕಾಲ ...