Posts

ಜೀವನ ಕಲಿಸಿದ ವ್ಯವಹಾರದ ಪಾಠಗಳು

Image
ದಸರಾ...ದೇಶಕ್ಕೆ... ಅದರಲ್ಲೂ ಕನ್ನಡ ನಾಡಿಗೆ ವಿಶೇಷ ಹಬ್ಬ.. ನಾಡ ಹಬ್ಬ ಸಹ. ಇದರ ಒಂದು ವಿಶೇಷ ಭಾಗ ಆಯುಧ ಪೂಜೆ... ನಾವು ಚಿಕ್ಕ ಕಾರ್ಖಾನೆಯನ್ನು ನಡೆಸುತ್ತಿದ್ದಷ್ಟು ದಿನವೂ ಆಯುಧ ಪೂಜೆಯನ್ನು ಆಚರಿಸಿದ್ದಿದೆ.... ಶುರುವಿನ ದಿನಗಳಲ್ಲಿ, ಹಣಕ್ಕಾಗಿ ಕಷ್ಟವಿದ್ದಾಗ ಪೂಜೆಯನ್ನು ಬಿಡದೆ ಕ್ಲುಪ್ತವಾಗಿ ಮಾಡಿ ಮುಗಿಸುತ್ತಿದ್ದೆವು. ಹಣಕ್ಕೆ ಪರದಾಡದೆ ಆಯುಧ ಪೂಜೆಯನ್ನು ಮಾಡುವ ಹಂತ ತಲುಪಲು ಸವೆಸಿದ ದಾರಿ ಬಹುದೀರ್ಘ, ಕಠಿಣ ಹಾಗೂ ಸವಾಲಿಂದ ಕೂಡಿತ್ತು. ಆ ಕಲಿಕೆ ಸುದೀರ್ಘವೂ ಮತ್ತು ದುಬಾರಿ ಖರ್ಚಿನದೂ ಆಗಿತ್ತು.  ಈ ಹಂತದಲ್ಲಿ ಆಯುಧ ಪೂಜೆ ನಿಜಕ್ಕೂ ಒಂದು ಸಂಭ್ರಮ.... ಎಲ್ಲ ಕೆಲಸಗಾರರಿಗೂ ಬಟ್ಟೆ, ಬೋನಸ್, (ಹಣ್ಣುಗಳು, ಸಿಹಿ ಹಾಗೂ ಹಣದ ಕವರನ್ನು ನಮ್ಮ ಕೆಲಸದವರಿಗೆ ಕೊಡುತ್ತಿದ್ದದ್ದು ನಮ್ಮಪ್ಪ- ಅವರಿರುವವರೆಗೂ) ಹಾಗೂ ಪೂಜೆಯ ದಿನ  ಬಂದ ಇಷ್ಟರು ಹಾಗೂ ಸ್ನೇಹಿತರು ಎಲ್ಲರೂ ಒಟ್ಟಿಗೆ ಸೇರಿ ಊಟ ಮಾಡುವುದು. ಇದೊಂದು ಸಂಪ್ರದಾಯದಂತೆ ಸುಮಾರು 30 ವರ್ಷಗಳ ಕಾಲ ಸತತವಾಗಿ ನಡೆಯಿತು. 70ರ ದಶಕದಲ್ಲಿ ಸಣ್ಣ ಕೈಗಾರಿಕೆಗಳ ಪ್ರಾರಂಭಕ್ಕೆ ಸರ್ಕಾರ, ಬ್ಯಾಂಕುಗಳಿಂದ ತುಂಬಾ ಪ್ರೋತ್ಸಾಹವಿತ್ತು. ಸಾಲಗಳನ್ನು ಸುಲಭವಾಗಿ ಕೊಡುತ್ತಾರೆ ಎನ್ನುವ ಒಂದು ಕಾರಣವೇ ಸಾಕಾಗಿತ್ತು... ನನ್ನ ಮನಸ್ಸಿಗೆ ಸಣ್ಣ ಕೈಗಾರಿಕೆ ಶುರು ಮಾಡಲು ಸಿಕ್ಕಿದ ಪ್ರೋತ್ಸಾಹ. ಆಗ ನನ್ನಲ್ಲಿ ಇದ್ದದ್ದು ಏನು ಬೇಕಾದರೂ ಸಾಧಿಸಬಲ್ಲೆ ಎಂಬ ಹುಮ್ಮಸ್ಸು... ಇದಕ್ಕೆ ಒಂದು ...

ಶಾಮಣ್ಣನ ಶತಾಭ್ಧಿ ಸಂಭ್ರಮ...

Image
ಹೋದ ಭಾನುವಾರ ನನ್ನ ಮಾವ ಶ್ರೀ. ಹೆಚ್. ಪಿ. ಕೃಷ್ಣಮೂರ್ತಿಯವರ 96 ನೇ ಹುಟ್ಟು ಹಬ್ಬದ  ಪ್ರಯುಕ್ತ ಅವರ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು, ಅಳಿಯಂದಿರು, ಸೊಸೆಯಂದಿರು...ಎಲ್ಲ ಒಟ್ಟಾಗಿ ಸೇರಿ UD Residency ಹೋಟೆಲ್ ನಲ್ಲಿ ಸಂಭ್ರಮಿಸಿದೆವು. ವಿಶೇಷ ಅಂದರೆ ನಮಗೆಲ್ಲಾ ಭರ್ಜರಿಯಾಗಿ ಭೋಜನ ಕೊಡಿಸಿದ್ದು ನಮ್ಮ ಮಾವ. ಸಾಮಾನ್ಯವಾಗಿ ಇದು ನಾವು ಮಾಡಬೇಕಾದ್ದು.....ಇನ್ನೊಂದು ವಿಶೇಷ...ಕೇಕ್ ಜೊತೆಗೆ...ನನ್ನ ನಾದಿನಿ ಮಣಿ ಕೈಯ್ಯಾರ ಮಾಡಿ ತಂದಿದ್ದ  ಹಾಲ್ ಬಾಯಿಯನ್ನು ಕತ್ತರಿಸಿ ಎಲ್ಲರೂ ತಿಂದಿದ್ದು.  ತಕ್ಕಮಟ್ಟಿನ ಹರಟೆ, photo session, ಪುಷ್ಕಳವಾದ ಊಟ, ಉಡುಗೊರೆ ಕೊಡುವುದು ಎಲ್ಲಾ  ಸಾಂಗೋಪಾಂಗವಾಗಿ ನಡೆಯಿತು.  ಅದರಲ್ಲಿ  ನನ್ನ ಮೊಮ್ಮಗಳು ವಿಸ್ಮಯ ಕೊಟ್ಟ greeting card  ಸಹ ಒಂದು.   ಈ greeting card ಮಾಡಲು ನನ್ನ ಮೊಮ್ಮಗಳ (ನನ್ನ  ಮಾವನ ಮರಿ ಮಗಳು) ತಯಾರಿ, ತಾತನ ಹೆಸರಿನ ಸ್ಪೆಲ್ಲಿಂಗ್ ಕೇಳಿ ಬರೆದದ್ದು, ಹೀಗೆ...ಉತ್ಸಾಹಕ್ಕೆ ಎಣೆಯಿರಲಿಲ್ಲ.... ಇದನ್ನು ನೋಡುತ್ತಾ...ನನ್ನ ನೆನಪಿಗೆ ಬಂದದ್ದು .. ನನ್ನಣ್ಣನ ಮೊಮ್ಮಗಳು... ಮುರಳಿಯ ಮಗಳು ಮಾಧುರಿ(ನಮ್ಮಪ್ಪನಿಗೆ ಮರಿ ಮಗಳು). ನಮ್ಮಪ್ಪನ 100 ನೇ ವರ್ಷದ ಹುಟ್ಟು ಹಬ್ಬದ ಸಮಯದಲ್ಲಿ, ನಾವು ಹೊರ ತಂದ ಸ್ಮರಣ ಸಂಚಿಕೆಗೆ ಮಾಧುರಿ ಬರೆದ ಲೇಖನ. ಒಂದಕ್ಷರವೂ ಬರೆಯಲು ಬರದ, ಆದರೆ ಬರೆಯುವ ಉತ್ಸಾಹ ತುಂಬಿದ.. ಮಗುವಿ...

ಎಮ್ಮೆ ಹಾಲು- ಮೊದ್ದುರಂಗ

Image
  "ಎಮ್ಮೆ ಹಾಲು ಕುಡಿದು ಕುಡಿದು ರಂಗ ಮೊದ್ದಾಗ್ತಾನೆ" ಇದು ನನ್ನ ಕೆಲ ಸ್ನೇಹಿತರು ನನಗೆ ಛೇಡಿಸುತ್ತಿದ್ದ ರೀತಿ. ನಾನು ಪಾಠ ಹೇಳಿಕೊಡಲು ಹೋಗುತ್ತಿದ್ದ ಆ ಮನೆಯ ಅಜ್ಜಿ ಕೊಡುತ್ತಿದ್ದ ಎಮ್ಮೆಯ ಹಾಲನ್ನು ಕುಡಿಯುತ್ತಿದ್ದದ್ದು ಸತ್ಯ... ಆದರೆ ನನ್ನ ಬುದ್ಧಿ ಮೊದ್ದಾಗಿತ್ತಾ.... ಅದು ಅವರ ಅಭಿಪ್ರಾಯ.... ನನ್ನದು ಅದೇ ಆಗಿರಬೇಕಿಲ್ಲ ಅಲ್ಲವೇ? ಪಾಠ ಹೇಳಿ ಕೊಡುವುದು ನನಗೆ ಚಿಕ್ಕಂದಿನಿಂದ ಬಂದ ಒಂದು ಹವ್ಯಾಸ... ನಾನು 5ನೇ ಕ್ಲಾಸಿನಲ್ಲಿ ಓದುತ್ತಿದ್ದಾಗಿನಿಂದ ನನ್ನ ಜೊತೆಯವರಿಗೆ / ನನಗಿಂತ ಚಿಕ್ಕವರಿಗೆ ಪಾಠ ಹೇಳಿ ಕೊಡುತ್ತಿದ್ದೆ.... ಅಂಥವರಲ್ಲಿ ನನ್ನೂರ ರಾಮದಾಸನೂ ಒಬ್ಬ. ಒಂದು ದಿನ ರಾಮದಾಸ ಕೈಯಲ್ಲಿ ಏನೋ ತೋರಿಸುತ್ತಾ ರಂಗಣ್ಣಾ.. ರಂಗಣ್ಣಾ.. ಎಂದು ಕೂಗಿದ... ಹತ್ತಿರ ಬಂದಾಗ ಅವನ ಕೈಯಲ್ಲಿ ಕಂಡದ್ದು ನಾಲ್ಕಾಣೆಯ ನಾಣ್ಯ. ಅದನ್ನು ನನಗೆ ಕೊಟ್ಟು... "ನಮ್ಮಮ್ಮ ಕೊಟ್ಟಳು... ನಿನಗೆ.... ಪಾಠ ಹೇಳಿ ಕೊಟ್ಟಿದ್ದಕ್ಕೆ..." ಅಂದ....  ನನಗೂ ಖುಷಿ... ತಂದು ನಮ್ಮಮ್ಮನಿಗೆ ಹೆಮ್ಮೆಯಿಂದ ತೋರಿಸಿ ಹೇಳಿದೆ.... ನಮ್ಮಮ್ಮನ ತಕ್ಷಣದ ಪ್ರತಿಕ್ರಿಯೆ.." ನಾಲ್ಕಕ್ಷರ ಹೇಳಿಕೊಟ್ಟು.. ದುಡ್ಡು ಇಸ್ಕೊಂಡ್ಯಾ... ರಂಗಪ್ಪಾ....." .. ಅಲ್ಲಿ ಅಸಮ್ಮತಿಯಿತ್ತು... ನಂತರ ತಿಳಿ ಹೇಳಿದ್ದು.... ನಾನು ಅರ್ಥ ಮಾಡಿಕೊಂಡಿದ್ದು....ಪಾಠ ಹೇಳಿಕೊಟ್ಟು ದುಡ್ಡು ತಗೋಬಾರದು ಅಂತ. ಅಂದಿನಿಂದ ಇದುವರೆಗೂ ಅದನ್ನು ಪಾಲಿಸಿಕೊಂ...

ದೇವಸ್ಥಾನದ ಊಟ - ಪ್ರಸಾದ

Image
ಹೋದ ಭಾನುವಾರ, ಕಲ್ಯಾಣಿ ತೋಟದ ರಾಯರ ಮಠದಲ್ಲಿ ಒಂದು ಸೀಮಂತ ಕಾರ್ಯಕ್ರಮ ಇತ್ತು... ಸಾಮಾನ್ಯವಾಗಿ ಸೀಮಂತ ಕಾರ್ಯಕ್ರಮದಲ್ಲಿ, ಗಂಡಸರಿಗೆ ಪ್ರಾಮುಖ್ಯತೆಯೇ ಇಲ್ಲ, ಊಟಕ್ಕೆ ಮಾತ್ರ ಲೆಕ್ಕ.  ನನಗೆ ತುಂಬಾ ಬೇಕಾದವರಾದ್ದರಿಂದ ನಾನು ಊಟಕ್ಕೇ ಹೋಗಿದ್ದೆ. ದೇವಸ್ಥಾನ, ರಾಯರ ಮಠ ಇಂಥ ಜಾಗಗಳಲ್ಲಿ ನೆಲದ ಮೇಲೆ, ಬಾಳೆ ಎಲೆ ಊಟ , ಹಾಗೂ ಉಡುಗೆ ತೊಡಿಗೆಯಲ್ಲಿ ಒಂದಷ್ಟು ಶಿಸ್ತು ಇರುತ್ತದೆ. ಆದರೆ ಇಲ್ಲಿ ಎರಡಕ್ಕೂ ಪ್ರಾಮುಖ್ಯತೆ ಇರಲಿಲ್ಲ... ಎಲ್ಲರಿಗೂ ಟೇಬಲ್ ಮೇಲೆ ಊಟ, ಅವರಿಷ್ಟ ಬಂದ ಉಡುಗೆ.  ಸ್ವಲ್ಪ ಆಶ್ಚರ್ಯ ಎನಿಸಿತು.. ಆದರೆ ಜಾಗ ಮಾಡಿಕೊಂಡು ಕುಳಿತುಕೊಳ್ಳುವ ಕಲೆ ಮಾತ್ರ  ಯಾವಾಗಿನಂತೆ ಇತ್ತು.  ಊಟ ಸೊಗಸಾಗಿತ್ತು... ಹಸಿವೆಯೂ ಜೊತೆಗೂಡಿತ್ತು... ಹೇಳಬೇಕೇ ಕಂಠಪೂರ್ತಿ ಉಂಡಿದ್ದಾಯ್ತು. ಮಾತಿನ ಮಧ್ಯೆ ನನ್ನ ಬ್ಲಾಗ್ ಬರವಣಿಗೆಯ ವಿಷಯ ಬಂತು... ಇಂದಿನ ಕಾರ್ಯಕ್ರಮದ ಬಗ್ಗೆ ಬ್ಲಾಗುಂಟಾ? ಎಂಬ ಪ್ರಶ್ನೆಯು ಎದುರಾಯಿತು.. ಆಗಿನ ನನ್ನ ಉತ್ತರ ...ಯಾವ ಸ್ಪೂರ್ತಿಯೂ ಇಲ್ಲ... ಆ ಕಾರ್ಯಕ್ರಮದ ಬಗ್ಗೆ ತಳಕು ಹಾಕುವ ನನ್ನ ಅನುಭವ / ನೆನಪು ಯಾವುದು ಗೋಚರಿಸುತ್ತಿಲ್ಲ .... ಆದರೆ ತಲೆಯಲ್ಲಿ ಹುಳಕೊರೆಯಿತು.... ದಾರಿಯೂ ಕಾಣಿಸಿತು ಹಾಗಾಗಿ ಈ ಲೇಖನ... ನನ್ನ ನೆನಪಿನಾಳದಿಂದ ಕೆದಕಿದಾಗ... ಮೊದಲ ದೇವಸ್ಥಾನದ ಸಾರ್ವಜನಿಕ ಊಟ ಮಾಡಿದ್ದು ಜಾಲದ ಅಕ್ಕಯ್ಯಮ್ಮನ ಬೆಟ್ಟದ ತಪ್ಪಲಿನಲ್ಲಿ ನಡೆದ ಪರ್ವದಲ್ಲಿ.  ನಮ್ಮಪ್ಪನ ಜೊತೆಯ...

ಬಾಲ್ ಗ್ಲ್ಯಾಡರ್ ನಲ್ಲಿ ಕಲ್ಲು

Image
"ವಿಧಿ ಬರೆದ ಬರಹವ ತಪ್ಪಿಸಲು ಹರಿಹರ ವಿರಿಂಚಾದ್ಯರಿಗೆ ಸಾಧ್ಯವೇ.. ನಮ್ಮ ಪಾಡೇನು" ಇದು ಮಾಧ್ಯಮಿಕ ಶಾಲೆಯಲ್ಲಿ ನಾನು ಓದಿದ ನಳ ಚರಿತ್ರೆಯ ಒಂದೆರಡು ಸಾಲು.... ಹಣೆ ಬರಹಕ್ಕೆ ಹೊಣೆಯಾರು ? ಅನ್ನುವುದು ಒಂದು ಮಾತು.... ಈ ಮಾತುಗಳು ನಾವು ಉಪಯೋಗಿಸುವುದು ನಮ್ಮೆಲ್ಲ ಪ್ರಯತ್ನಗಳು ಮುಗಿದು ನಮಗೆ ಬೇಕಾದ ಗುರಿಯನ್ನು ಮುಟ್ಟಲು ಸಾಧ್ಯವಾಗದಿದ್ದಾಗ ಹೇಳುವ ಮಾತು.  ಅದು ಸಾಂತ್ವನ ಮಾಡುವ / ಮಾಡಿಕೊಳ್ಳುವ ವಿಧಾನದ ಕೊನೆಯ ಮಜಲು ಅಂತ ನನ್ನ ಅನಿಸಿಕೆ..ಹಾಗೂ ಆಪ್ತಸಮಾಲೋಚಕನಾಗಿ ನನ್ನ ಅನುಭವ. ಹಣಕಾಸಿನ ಕಷ್ಟ, ದೈಹಿಕ ಕಷ್ಟ ಇದಕ್ಕೆ ಪರಿಹಾರ ಹುಡುಕುವುದು ಅಷ್ಟು ಕಷ್ಟವಲ್ಲ... ಆದರೆ ಮಾನಸಿಕ ಕಷ್ಟಕ್ಕೆ ಪರಿಹಾರ ಅಷ್ಟು ಸುಲಭವಲ್ಲ... ಇಂಥ ಸಮಯದಲ್ಲಿ ಎಲ್ಲಾ ವೈರುಧ್ಯಗಳೊಡನೆ ಮನಸ್ಸಿನ ಸಮತೋಲನ ಕಾಪಾಡಿಕೊಳ್ಳುವುದು ಒಂದು ಸವಾಲೇ ಸರಿ.. ಒಂದು ದಶಕದ ಹಿಂದಿನ ಮಾತು... ನನಗೂ ಹೀಗೆ ಅನಿಸಿತ್ತು.... ಒಂದು ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದು.. ನೆರೆದಿದ್ದ ಒಂದಷ್ಟು ಜನರ ಜೊತೆ ಹರಟೆ ಹೊಡೆದು ಕೊಟ್ಟ ಸಿಹಿಯನ್ನು ತಿಂದು... ಎಲ್ಲರನ್ನೂ ಕಳಿಸಿಯಾದ ಮೇಲೆ... ಸ್ವಲ್ಪ ಹೊತ್ತಿನಲ್ಲೇ ಏನೋ ಕಿರಿಕಿರಿ, ಹೊಟ್ಟೆಯ ಮೇಲಿನ ಹಾಗೂ ಎದೆ ಕೆಳಗಿನ ಜಾಗದಲ್ಲಿ ಸ್ವಲ್ಪ ನೋವು... ಬರುಬರುತ್ತ ಆ ನೋವು ಜಾಸ್ತಿ ಆಯ್ತು, ಸಾಮಾನ್ಯವಾಗಿ ಇಂಥ ನೋವುಗಳಿಗೆ ನಾನು ಅಷ್ಟು ಪ್ರಾಮುಖ್ಯತೆ ಕೊಡುವುದಿಲ್ಲ.. ಆದರೆ ಆಗಿನ ನೋವು ತಾರಕ ಮುಟ್ಟುತ್ತಿತ್ತು... ತಡೆ...

ಗಣೇಶ ಬಂದ ಕಾಯ್ ಕಡುಬು ತಿಂದ

Image
  ಗಣೇಶ ಬಂದ ಕಾಯ್ ಕಡುಬು ತಿಂದ  ಹೊಟ್ಟೆ ಮೇಲೆ ಗಂಧ,  ಚಿಕ್ಕ ಕೆರೇಲ್ಬಿದ್ದ ದೊಡ್ಡ ಕೆರೇಲಿ ಎದ್ದ... ಇದು ನಾವು ಗಣೇಶನಿಗೆ ಹೇಳುತ್ತಿದ್ದ ಪದ... ಯಾಕೆ ಚಿಕ್ಕ ಕೆರೆಯಲ್ಲಿ ಬಿದ್ದ, ದೊಡ್ಕೆರೇಲೀ ಎದ್ದ.. ಇವತ್ತೂ ಗೊತ್ತಿಲ್ಲ.  ಸಾಮಾನ್ಯವಾಗಿ ಹಬ್ಬ ಅಂದ್ರೆ ಎರಡು ಕಾರಣಕ್ಕೆ ಖುಷಿ ಒಂದು ಶಾಲೆ ಇಲ್ಲ ಮಜಾ, ಎರಡು ಹಬ್ಬದ ಊಟ... ಗಣೇಶನ ಹಬ್ಬ ಅಂದ್ರೆ ಕಡುಬು,ಚಿಗಳಿ, ತಂಬಿಟ್ಟು... ಹಿಂದಿನ ದಿನ ಗೌರಿ ಹಬ್ಬದ ಪ್ರಯುಕ್ತ ಮಾಡಿದ ಒಬ್ಬಟ್ಟು... ಹೀಗೆ ತಿನ್ನುವುದೇ ಒಂದು ಮೋಜು.. ಗಣೇಶನ ಹಬ್ಬದ ಸಂಭ್ರಮ, ಗೌರಿ ಪೂಜೆಯಿಂದ ಶುರು... ಗೌರಿ ಪೂಜೆಗೆ ಮಣ್ಣನ್ನು ಊರ ಕೆರೆಯಿಂದ ಸಂಗ್ರಹಿಸಿ ತರುವ ಒಂದು ಸಂಪ್ರದಾಯ... ಇದು ಓಲಗ ಬಾಜಾ ಭಜಂತ್ರಿ ಯೊಂದಿಗೆ ಊರ ಮುಖ್ಯರಸ್ತೆಯ ಮೂಲಕ ಕೆರೆಗೆ ಹೋಗಿ ಪೂಜೆ ಮಾಡಿ, ಅಲ್ಲಿಂದ ತಂದ ಮಣ್ಣಿನ ಗೌರಿ(? ಇಲ್ಲಿ ನನಗೆ ಸಂಪೂರ್ಣ ಮಾಹಿತಿ ಇಲ್ಲ)ಯನ್ನು ಪೂಜೆ ಮಾಡುವುದು ನಮ್ಮನೆಯಲ್ಲಿ ಚಾಚೂ ತಪ್ಪದೆ ನಡೆಯುತ್ತಿತ್ತು.. ಆ ದಿನಗಳಲ್ಲಿ ಮಳೆ ಸಾಮಾನ್ಯ..  ಕೆರೆಗೆ ಹೋದಾಗೆಲ್ಲ ಮಳೆ ಹನಿಯಲ್ಲಿ ನೆಂದ ನೆನಪಿದೆ.  ಇನ್ನು ಗಣೇಶನ ವಿಗ್ರಹ ಮಾಡಿಕೊಡುವುದು ನಮ್ಮ ಸುಬ್ಬಣ್ಣಯ್ಯ ( ಸಕಲ ಕಲಾವಲ್ಲಭ ಸುಬ್ರಾಯಾಚಾರ್). ಗಣೇಶನ ಹಬ್ಬದ ದಿವಸವೇ ವಿಗ್ರಹಕ್ಕೆ ಬಣ್ಣ ಹಚ್ಚುವ ಕೆಲಸ ಮುಗಿಯುತ್ತಿದ್ದದ್ದು... ಅದರೊಳಗೂ ಗಣೇಶನ ಕಣ್ಣುಬರೆಯಲು ಸುಬ್ಬಣ್ಣಯ್ಯನೇ ಆಗಬೇಕು.  ಸುಬ್ಬಣ್ಣಯ್ಯನ ಮಕ್...

ಪಂಚವಟಿಯಲ್ಲಿ ...ಕೃಷ್ಣ...

Image
  ಹೋದ ಭಾನುವಾರ ವೈಯಕ್ತಿಕ ಕಾರ್ಯನಿಮಿತ್ತ ಮೈಸೂರಿಗೆ ಹೋಗಬೇಕಾಗಿತ್ತು... ಸಾಮಾನ್ಯವಾಗಿ ಮೈಸೂರಿಗೆ ಹೋದಾಗ ಅಣ್ಣನ ಮನೆಯಲ್ಲಿ( ಸತ್ತಿ ಸರ್) ಊಟ ಉಪಚಾರ... ಆದರೆ ಈ ಬಾರಿ ಅತ್ತಿಗೆ ಊರಲ್ಲಿರದ ಕಾರಣ ಹೋಟೆಲ್ ಗೆ ಹೋಗುವುದೆಂದು ಮೊದಲೇ ನಿರ್ಧಾರವಾಗಿತ್ತು. ಹಾಗಾಗಿ ನಾವು ಊಟಕ್ಕೆ ಬಂದಿದ್ದು ಪಂಚವಟಿಗೆ... ವಾತಾವರಣ / ಪರಿಸರ ಚೆನ್ನಾಗಿತ್ತು... ಒಳಗೆ ಹೋದಾಕ್ಷಣ ಕಣ್ಣಿಗೆ ಕಂಡದ್ದು ಸುಂದರವಾದ ಕೃಷ್ಣನ ವಿಗ್ರಹ. ಊಟಕ್ಕೆ ಕೂತಾಗ ಮತ್ತೊಮ್ಮೆ ಅದೇ ವಿಗ್ರಹ ಕಣ್ಣಿಗೆ ಬಿತ್ತು... ಆಗ ಬಂದ ಯೋಚನೆ ಪಂಚವಟಿಗೂ ಕೃಷ್ಣನಿಗೂ ಹೇಗೆ ಸಂಬಂಧ??.... ನನ್ನ ರಾಮಾಯಣ ಮಹಾಭಾರತದ ಜ್ಞಾನಕ್ಕೆ ಹಾಗೂ ನನ್ನ ಬುದ್ಧಿವಂತಿಕೆಗೆ ನಾನೇ ಮೆಚ್ಚಿಕೊಂಡೆ.. ಹೇಳಿಕೊಂಡೆ ಪಂಚವಟಿಯಲ್ಲಿ ಕೃಷ್ಣ ಹೇಗೆ.... ಅದು ರಾಮಾಯಣದ ರಾಮ ಸೀತೆ ಲಕ್ಷ್ಮಣ ಇದ್ದ ಜಾಗ.... ಕಬ್ಬಿಣದ ಅಂಗಡಿಯಲ್ಲಿ ನೊಣಕ್ಕೇನು ಕೆಲಸ... ತಕ್ಷಣ ಇನ್ನೊಂದು ಮನಸ್ಸು ಹೇಳಿತು.. ಅಯ್ಯಾ.. ರಂಗನಾಥ ಪಂಚವಟಿ ಹೋಟೆಲ್ ನ ಹೆಸರು... ಕೃಷ್ಣ.... ದೇವರ ವಿಗ್ರಹ.. ಬಹುಶಃ ಹೋಟೆಲ್ ಯಜಮಾನರ ಆರಾಧ್ಯ ದೈವ ಇರಬಹುದಲ್ಲವೇ..???. ಯೋಚಿಸಬೇಕಾದ್ದೆ...  ಸಾಮಾನ್ಯವಾಗಿ ಅಚ್ಚ ಸಸ್ಯಾಹಾರಿ ಹೋಟೆಲ್ ನಡೆಸುವ ಕಲೆ ಉಡುಪಿ ಮಂಗಳೂರು ಕಡೆಯವರಿಗೆ ಕರಗತವಾಗಿದೆ... ಸಹಜವಾಗಿ ಉಡುಪಿ  ಕೃಷ್ಣ.. ಪೊಡವಿಗೊಡೆಯ... ಅವರಿಗೆ ಅಚ್ಚುಮೆಚ್ಚು... ಅದಲ್ಲದೆ ಹೆಸರು ಅವರ ಇಷ್ಟಕ್ಕೆ ಸಂಬಂಧಪಟ್ಟವಿಷಯ..ಅವರ ಆಯ್ಕೆ... ಅದ...

ಚಿಕ್ಕಂದಿನಲ್ಲಿ ಕಂಡ ಪಾತ್ರಗಳು, ವ್ಯಕ್ತಿಗಳು

Image
  ಚಿಕ್ಕಂದಿನಲ್ಲಿ ಕಂಡ ಪಾತ್ರಗಳು, ವ್ಯಕ್ತಿಗಳು ಹರಿ ಭಜನೆಯಾನಂದ ಕಿರು ಶಿಶುವಿನಾನಂದ... ಹೀಗೊಂದು ಪದ್ಯದ ಸಾಲು... ನಿಜಕ್ಕೂ ಚಿಕ್ಕ ಮಕ್ಕಳ ಒಡನಾಟ ದೇವರ ಭಜನೆಯಷ್ಟೇ ಆನಂದ ಕೊಡುವುದು.. ಈಗಂತೂ ನನ್ನ ಮೊಮ್ಮಗಳ ಒಡನಾಟದಿಂದ ನನ್ನ ಜೀವನ ಶೈಲಿಯೇ ಸಾಕಷ್ಟು ಬದಲಾವಣೆಯಾಗಿದೆ... ಅದರಲ್ಲೂ ಅವಳು ನಮ್ಮ ಮನೆಯಲ್ಲಿ ಬಂದಿದ್ದಾಗ, ನನ್ನ ದಿನಚರಿಯೆಲ್ಲ ಅವಳ ಸುತ್ತ ಸುತ್ತುತ್ತಿರುತ್ತದೆ.  ಅವಳ ಜೊತೆ ಕಣ್ಣ ಮುಚ್ಚಾಲೆ, ಗಿಡಗಳಿಗೆ ನೀರು ಹಾಕುವುದು, ಇಸ್ಪೀಟ್, ಮೊಬೈಲ್ ಗೇಮ್ಸ್, ಜೊತೆಯಲ್ಲಿ ಊಟ, ಮಧ್ಯಾಹ್ನದ ನಿದ್ದೆ, ಬೆಳಿಗ್ಗೆ ಸ್ಕೂಲ್ ವ್ಯಾನಿಗೆ ಬಿಡುವುದು... ಇದೆಲ್ಲಾ ಅವಳು ನನ್ನನ್ನು ಪುಸಲಾಯಿಸಿ, ಮಾಡಿಸುವ ಕೆಲಸಗಳು.  ಅವಳ ಆ ಪ್ರೀತಿಯ ಕರೆಗೆ ಇಲ್ಲ ಅನ್ನಲು ಮನಸ್ಸೇ ಬರುವುದಿಲ್ಲ... ಕೆಲ ಸಲ  ನನ್ನ ಮೈ ಹಾಗೂ ಮನಸ್ಸು  ಸಹಕರಿಸದಿದ್ದರೂ... ನಿದ್ದೆ ಮಾಡುತ್ತಿದ್ದಾಗ ಬಂದು ಮೆತ್ತಗೆ ಕಾಲ್ಕೆರೆಯುವುದು, ಕಿವಿಯಲ್ಲಿ ಏನಾದರೂ ಪಿಸುಗುಟ್ಟುವುದು ಹೀಗೆ ಕೆಲ ಚೇಷ್ಟೆಗಳು .  Click here ಈಚೆಗೆ ಅವಳು ಹಾಕಿದ ಕಿತ್ತೂರು ಚೆನ್ನಮ್ಮನ ವೇಷ ಹಾಗೂ ಅವಳಾಡಿದ ಮಾತುಗಳು...  ಆ ತಯಾರಿಯಲ್ಲಿ ಅವಳು ಪಟ್ಟ ಸಂಭ್ರಮ, ನನ್ನನ್ನು ಎಲ್ಲದಕ್ಕೂ ಒಳಗೊಳ್ಳುವಂತೆ ಮಾಡಿದ್ದು, ನನ್ನ ಚಿಕ್ಕಂದಿನ ದಿನಗಳಲ್ಲಿ ನಾನು ಸಡಗರಿಸಿದ, ಸಂಭ್ರಮಿಸಿದ ಕ್ಷಣಗಳನ್ನು ನೆನಪು ಮಾಡಿಸಿತು... ನನ್ನ  ಹಳ್ಳಿಯ ದಿನಗಳ ಜೀವನದಲ್ಲ...

ನಾಗರ ಪಂಚಮಿ

Image
  ನಾಗರ ಪಂಚಮಿಯ ಈ ಲೇಖನ ಇಷ್ಟು ತಡವಾಗಿ ಬರಲು ಕಾರಣ ಚಂದ್ರ ಎಂದರೆ ತಪ್ಪಾಗಲಾರದು. ಚಂದ್ರಯಾನ ಮೂರರ ಯಶಸ್ಸಿನ ಪರಿಣಾಮ ಆ ಲೇಖನಕ್ಕೆ ಪ್ರಾಮುಖ್ಯ ಸಿಕ್ಕಿ ಇದು ಹಿಂದೆ ಸರಿದಿತ್ತು. ನೆಲಕ್ಕೆ ಬಿದ್ದ ಬೀಜ ಹೇಗೆ ಮೊಳಕೆ ಒಡೆಯಲು ತವಕಿಸುತ್ತೋ ಹಾಗೆ ಈ ವಿಷಯವೂ ಹೊರಗೆ ಬರಲು ತವಕಿಸುತ್ತಿತ್ತು  ( ಪ್ರಸವ ವೇದನೆ ಎನ್ನಲೇ?). ಇದೀಗ.... ನಾಗರ ಪಂಚಮಿ ಹಬ್ಬ ಅಕ್ಕಂದಿರ ಮನೆಗೆ ಹೋಗಿ, ಊಟ ಮಾಡಿ ಬೆನ್ನು ತೊಳಿಸಿಕೊಂಡು, ಹರಟೆ ಹೊಡೆದು ಬರುವುದು ಮಾಮೂಲು. ಈ ವರ್ಷವೂ ಅದೇ ನಡೆಯಿತು . ಆದರೆ ಈ ಬಾರಿ ದೊಡ್ಡಣ್ಣನ ಅನುಪಸ್ಥಿತಿ ಕಾಡಿತು.   ಚಿಕ್ಕಂದಿನಲ್ಲಿ ನಾಗರ ಪಂಚಮಿ ಹಬ್ಬಕ್ಕೆ ಮಡಿಯನ್ನು ಉಟ್ಟು, ಅಕ್ಕನ ಜೊತೆ ಕೆರೆ ಏರಿಯ ಮೇಲೆ ಇದ್ದ ನಾಗರಕಲ್ಲಿಗೆ ತನಿ ಎರೆದು ಬರುವುದು ಮೊದಲ ಕೆಲಸ. ಸಾಧಾರಣವಾಗಿ ಅಂದು ಜಿಟಿ ಜಿಟಿ ಮಳೆ ಇರುತ್ತಿದ್ದದ್ದು ನೆನಪು. ಅಂದು ಹಬೆಯಲ್ಲಿ ಬೇಯಿಸಿದ ಸಿಹಿ, ಖಾರದ  ಕಡುಬು (ಹೊಯ್ಗಡುಬು) ವಿಶೇಷ. ಅಜ್ಜಿ... ಅಪ್ಪನ ಅಮ್ಮ... ಕಡುಬನ್ನು ಮಡಿಸುತ್ತಿದ್ದ ಕೈಚಳಕ ನೆನಪಿದೆ.  ಹಾಗೇ.. ಎಣ್ಣೆಯಲ್ಲಿ ಕರಿದ ಯಾವುದೇ ಪದಾರ್ಥವನ್ನು ಮಾಡುವುದು ನಿಷೇಧ. ಕೆಲವರು ಜೀವನಪರ್ಯಂತ ಪಡವಲಕಾಯಿಯನ್ನು ತಿನ್ನುವುದಿಲ್ಲ.     (ಹಾವೆಂಬ ಭಾವ). ಈಚಿನ ದಿನಗಳಂತೂ ಮನೆಯಲ್ಲೇ, ಒದ್ದೆ ಬಟ್ಟೆಯಲ್ಲಿ , ನಾಗರ ಪ್ರತಿಮೆಯನ್ನು ಇಟ್ಟು, ಅದಕ್ಕೆ ಭತ್ತದ ಅರಳು, ಕಡಲೆಕಾಳು, ಅಕ್ಕಿ ಹಿಟ್ಟು, ಹ...

ಚಂದ್ರಯಾನ - ಮೂರು

Image
ಜಯಭೇರಿ ಬಾರಿಸಿತು ಚಂದ್ರಯಾನ ಮೂರು ಭಾರತಾಂಬೆಯ ಕಿರೀಟದಿ ಗರಿಗಳು ನೂರಾರು ಕೆಲ ದಿನಗಳಿಂದ ಚಂದ್ರಯಾನ - 3, ವಿಕ್ರಂ ಲ್ಯಾಂಡರ್, ಪ್ರಗ್ಯಾನ್ ರೋವರ್, ಚಂದ್ರಯಾನ ಯಶಸ್ಸಿಗಾಗಿ ಮಾಡಿದ ಹವನ ಹೋಮಗಳು, ಪೂಜೆ ಪ್ರಾರ್ಥನೆಗಳು ಇವೆಲ್ಲ ಸುದ್ದಿಯ ಭಾಗಗಳಾಗಿದ್ದವು. ಇದರ ಜೊತೆಗೆ, ISRO ದ ಕೆಲವರು ಚಂದ್ರಯಾನ -3 ರ ಯಶಸ್ಸಿಗಾಗಿ ತಿರುಪತಿಯಲ್ಲಿ ಮಾಡಿದ ಪೂಜೆಗಾಗಿ ಅವಹೇಳನಕಾರಿ ಮಾತುಗಳನ್ನು ಆಡಿದ ಬುದ್ಧಿಜೀವಿಗಳ ಸುದ್ದಿಯು ಒಂದು ಭಾಗವಾಗಿತ್ತು. ಇರಲಿ ಬಿಡಿ... ಊರಿಗೊಂದು ದಾರಿಯಾದರೆ ಈ ಎಡವಟ್ಟು ಜೀವಿಗಳಿಗೇ ಒಂದು ದಾರಿ... ಬುದ್ಧಿಜೀವಿಗಳು ವಿಘ್ನ ಸಂತೋಷಿಗಳಾಗುತ್ತಿದ್ದಾರೆ, ಎಲ್ಲದರಲ್ಲೂ ತಪ್ಪು ಕಾಣುವುದು, ಕೊಂಕು ಮಾತನಾಡುವುದು  ಅವರ ಜಾಯಮಾನ.  ನಿನ್ನೆ ಬುಧವಾರವಂತೂ ಭಾರತದ ಮೂಲೆ ಮೂಲೆಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಬಹು ಜನರ ಹೃದಯದಲ್ಲಿ ಇದ್ದ ಆಶಯ - ಚಂದ್ರಯಾನ-3 ಯಶಸ್ವಿಯಾಗಲಿ ಎಂಬುದು- ಅದು ಪ್ರಾರ್ಥನೆಯೂ ಸಹ. ಆ ಪ್ರಾರ್ಥನೆ ಫಲಿಸಿದ ಕ್ಷಣ ನಿಜಕ್ಕೂ ಅವಿಸ್ಮರಣೀಯ.  TV ಯ ಮುಂದೆ ಕುಳಿತು ನೋಡುತ್ತಿದ್ದ ನನಗೆ, ವಿಕ್ರಮ.. ಚಂದ್ರನ ಮೇಲೆ ತನ್ನ ಕಾಲೂರಿದ ಆ ಕ್ಷಣ ರೋಮಾಂಚನವಾಯಿತು.  ಇದು ಕೋಟ್ಯಾಂತರ ಜನರ ಅನುಭವವೂ ಆಗಿರಬಹುದು ಎಂದು ನನ್ನ ನಂಬಿಕೆ. ನನ್ನಂತೆ ಎಲ್ಲರ ಹೃದಯವು ತುಂಬಿ ಬಂದಿರತ್ತೆ. ISRO ದ ಸಿಬ್ಬಂದಿ ವರ್ಗದವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಸಂಭ್ರಮಿಸಿದ್ದೇ ಸಂಭ್ರಮಿಸಿದ್ದು.  ಪ್ರಧಾನ...

ಓದಿನ ವೈಖರಿ..

Image
ಓದಿನ ವೈಖರಿ.. ಮಂಗಳವಾರ ನನ್ನ ಕೊನೆಯ ಅಕ್ಕ ಗಿರಿಜಾಂಬ ಮನೆಗೆ ಹೋಗಿದ್ದೆ. ಲೋಕಾಭಿರಾಮವಾಗಿ ಮಾತುಕತೆ ಇದ್ದರೂ ಸಹ ಹರಟೆಯ ರೂಪದಲ್ಲಿ ಹಳೆಯದನ್ನು ನೆನೆಸಿಕೊಳ್ಳುವುದು ಒಂದು ಮುಖ್ಯವಾದ ಅಂಗ. ನೆನ್ನೆಯ ಈ ಹರಟೆಯಲ್ಲಿ ಚರ್ಚೆ ಆದದ್ದು ನನ್ನ ನಿದ್ದೆ ಮತ್ತು ಓದು... ಈ ಲೇಖನಕ್ಕೆ ಅದೇ ಸ್ಪೂರ್ತಿ. ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಇದು ವೇದ ವಾಕ್ಯದಷ್ಟೇ ಸತ್ಯ. ಜೀವನಕ್ಕೆ ಬೇಕಾದ ಕೌಶಲಗಳನ್ನು ತಿಳಿಸಲು ಪ್ರಾರಂಭ ಬಾಯಿ ಪಾಠದಿಂದ ಅನ್ನುವುದು ನನ್ನ ಸ್ವಂತ ಅನುಭವ. ಸೋಮವಾರದಿಂದ ಶುರುವಾಗಿ ಭಾನುವಾರದವರೆಗೆ ವಾರಗಳು, ಪ್ರಭವದಿಂದ ಅಕ್ಷಯದವರೆಗೆ ಸಂವತ್ಸರಗಳು, ಚೈತ್ರದಿಂದ.. ಫಾಲ್ಗುಣದ ವರೆಗೆ ತಿಂಗಳುಗಳು, ಪಾಡ್ಯ ದಿಂದ ಅಮಾವಾಸ್ಯೆ ಪೂರ್ಣಿಮೆಯವರೆಗೆ ದಿನಗಳು, ಅಂಕಿಗಳು, ಸಂಡೆ ಮಂಡೆ, ಜನವರಿ ಫೆಬ್ರವರಿ ಹೀಗೆ ಎಲ್ಲವೂ ಬಾಯಿ ಪಾಠದ ಮೂಲಕವೇ ಕಲಿತದ್ದು.  ಅಧಿಕೃತವಾಗಿ ಓದು ಬರಹ ಅಕ್ಷರಭ್ಯಾಸದಿಂದ ಶುರುವಾದರೂ, ಅನಧಿಕೃತವಾಗಿ ಬಾಯಿ ಪಾಠ ಒಂದು ಹಂತಕ್ಕೆ ಬಂದಿರುತ್ತದೆ. ಇದು ಮಕ್ಕಳ ಕಲಿಕೆಯನ್ನು ಬಂದವರ ಮುಂದೆ ಪ್ರದರ್ಶಿಸಲು ಒಂದು ಮಾರ್ಗ. ಬಾಯಿ ಪಾಠದ ಮುಂದಿನ ಭಾಗ... ಶಾಲೆಯಲ್ಲಿ ಒಂದರಿಂದ ಹತ್ತರ ಮಗ್ಗಿಯನ್ನು ಎಲ್ಲರೂ ಒಟ್ಟಿಗೆ ಹೇಳುವುದು.. ಒಂದರ ಮಗ್ಗಿಯಿಂದ ಶುರುವಾದ ತಾರಕ ಸ್ವರದ ಹೇಳಿಕೆ ಎರಡರ ನಂತರ ಮಂದ್ರಕ್ಕೆ ಹೋಗಿ  ಒಂಬತ್ತಕ್ಕೆ ಬರುವಷ್ಟಲ್ಲಿ... ಸ್ವರ ಉಡುಗಿಯೇ ಹೋಗಿರುತ್ತಿತ್ತು... ಹತ್ತಕ್ಕೆ ಬಂದಾಗ ಹತ್...