Posts

Camp - ಶಿಬಿರ - NCC

Image
ಸ್ನೇಹ ಸೇವಾ ಟ್ರಸ್ಟ್ ನ ಕೆಲವು ಕಾರ್ಯಕ್ರಮಗಳ ಆಯೋಜನೆಯಲ್ಲಿ ನನ್ನ ಕಿರು ಪಾತ್ರವೂ ಇದೇ ಎಂಬುದು ಮನಸ್ಸಿಗೆ ಮುದ ಕೊಡುವ ಸಂಗತಿ . ಅಂತಹ ಒಂದು ಕಾರ್ಯಕ್ರಮವೇ ನವೆಂಬರ್ 17, 18 ಭಾನುವಾರ,  ಸೋಮವಾರ ನಡೆದ ವ್ಯಕ್ತಿತ್ವ ವಿಕಸನ ಶಿಬಿರ. ಇದರಲ್ಲಿ ಭಾಗವಹಿಸಿದವರು, ಸ್ನೇಹ ಸೇವಾ ಟ್ರಸ್ಟ್ ನ ವಿವಿಧ ಕಾರ್ಯಕ್ರಮಗಳ ಪ್ರಯೋಜನ ಪಡೆಯುತ್ತಿರುವ   ಹೈಸ್ಕೂಲ್ ಮತ್ತು ಕಾಲೇಜ್ ಮಕ್ಕಳು.     ಈ ಶಿಬಿರದಲ್ಲಿ ರಸಪ್ರಶ್ನೆಯ ಮೂಲಕ ಮಕ್ಕಳೊಂದಿಗೆ ಸಂವಹನ ಮಾಡಿದ್ದು ನನಗೆ ತುಂಬಾ ಖುಷಿ ಕೊಟ್ಟ ವಿಷಯ. ಮಕ್ಕಳ ಜ್ಞಾನದ ಮಟ್ಟ, ಭಾಗವಹಿಸುವಾಗಿನ ಉತ್ಸಾಹ ಸ್ಪೂರ್ತಿದಾಯಕವಾಗಿತ್ತು.   ಮುಕ್ತಾಯ ಸಮಾರಂಭದಲ್ಲಿ ಮಕ್ಕಳು ಅವರ ಅನುಭವಗಳನ್ನು ಹಂಚಿ ಕೊಳ್ಳುವಾಗ .. ಇದು ನನ್ನ ಮೊದಲನೆಯ ಶಿಬಿರ, ಕ್ಯಾಂಪ್   ಫೈರ್ ಅನುಭವ.. ಆಟೋಟಗಳು... ಊಟ/ ತಿಂಡಿ ಹೀಗೆ ಅವರದೇ ಆದ ಆಲೋಚನೆಯ ಮಾತುಗಳು ಕೇಳಲು ಚೆನ್ನಾಗಿತ್ತು. ಆ ಕಾರ್ಯಕ್ರಮದ ಸಿಂಹಾವಲೋಕನದ ವಿಡಿಯೋ ತುಣುಕು ನಿಮಗಾಗಿ. ಕೆಳಗಿನ link  select  ಮಾಡಿ  open option ನಂತರ drive icon ಒತ್ತಿ ವೀಡಿಯೋ ನೋಡಿ... https://drive.google.com/file/d/1aYV6IGoEy-SISm1Fn92g1fo1tWv4WIRk/view?usp=drivesdk ವಿದ್ಯಾರ್ಥಿ ಜೀವನದಲ್ಲಿ ಇಂತಹ ಒಂದೇ ಒಂದು ಅನುಭವ ನನಗಾಗಿದ್ದು... ಅದು NCC camp  ಮೂಲಕ, ಓದಿನ ಕೊನೆಯ ಘ...

ಆಪ್ತ ಸಮಾಲೋಚಕನಾಗಿ...

Image
  ಹೊಸ ಸಣ್ಣ ಕಾರ್ಖಾನೆಯನ್ನು ಶುರು ಮಾಡಿ... ಕಷ್ಟಗಳನ್ನು ಅನುಭವಿಸಿ ಅದರಿಂದ ಹೊರಬಂದು ಹೊಸ ಜೀವನವನ್ನು ಕಟ್ಟಿಕೊಂಡು.. ಎಲ್ಲ ಕೋಟಲೆಗಳನ್ನು ನಿವಾರಿಸಿಕೊಂಡು.. ಹೊಟ್ಟೆಯೂ ತುಂಬಿದಾಗ... ಮನಸ್ಸಿನಲ್ಲಿ ಒಂದು ಭಾವ ಮೂಡಿತು ಏನಾದರೂ ಮಾಡಬೇಕೆಂದು... ಅದು ಹಣ ಸಂಪಾದನೆಯ ಗುರಿ ಆಗಿರಬಾರದು... ಸಾಧ್ಯವಾದರೆ ಸಮಾಜದ ಋಣ ಭಾರವನ್ನು ತೀರಿಸುವ ದಾರಿಯಲ್ಲಿರಬೇಕು. ಏನು ಮಾಡಬೇಕೆಂಬ ಗೊತ್ತು ಗುರಿಯಿಲ್ಲದೆ... ಬರೀ ಚಿಂತನೆಯ/ ಸ್ನೇಹಿತರ ಜೊತೆ ಮಾತುಕತೆಯ ರೂಪದಲ್ಲೇ ಕೆಲ ದಿನ ಇತ್ತು. ಹೀಗೊಂದು ಸಂಜೆ ನನ್ನ ಸ್ನೇಹಿತ ಆನಂದ್ ಅವರ ಫ್ಯಾಕ್ಟರಿಯಲ್ಲಿ  ಕೂತು ಹರಟೆ ಹೊಡೆಯುತ್ತಿದ್ದಾಗ.. ಮತ್ತೆ ಬಂತು ಈ ವಿಷಯ... ಕಾಕತಾಳಿಯವಾಗಿ.. ಅವರ ತಲೆಯಲ್ಲಿದ್ದ ಪ್ರಸನ್ನ ಆಪ್ತ ಸಲಹಾ ಕೇಂದ್ರದಲ್ಲಿ ನಡೆಯುವ ಆಪ್ತ ಸಮಾಲೋಚಕರ ತರಬೇತಿ ಶಿಬಿರದ ಬಗ್ಗೆ ಹೇಳಿದರು. ಆಪ್ತ ಸಮಾಲೋಚನೆ ಎಂಬುವ ವಿಷಯದಲ್ಲಿ ಏನೇನೂ ಜ್ಞಾನವಿಲ್ಲದಿದ್ದರೂ, ಯಾಕೆ ಪ್ರಯತ್ನ ಮಾಡಬಾರದು ಎಂಬ ಪ್ರಶ್ನೆ ನಮ್ಮ ಮುಂದೆ ಬಂತು. ತಕ್ಷಣ ಅವರು ಯಾರಿಗೋ ಫೋನ್ ಮಾಡಿ ವಿಚಾರಿಸಿದಾಗ.. ಈಗಾಗಲೇ ಒಂದು ಕ್ಲಾಸ್ ಆಗಿದೆ ಎಂದು ತಿಳಿಯಿತು. ನಾವಿಬ್ಬರೂ ಒಂದು ನಿರ್ಧಾರಕ್ಕೆ ಬಂದು ಹೇಗಾದರಾಗಲಿ, ಹೋಗಿ ಸೇರಿಕೊಳ್ಳೋಣ, ಸಲ್ಪ ಸಮಯ ನೋಡಿ, ಇಷ್ಟವಾದರೆ ಮುಂದುವರಿಸುವುದು ಇಲ್ಲದಿದ್ದರೆ....              ದೈವೇಚ್ಚೆ 1992 ರಲ್ಲಿ ಶುರುವಾದ ಈ ಕಾಯಕ ಇಂದೂ...

ಚಾಕು ಚೂರಿ ಕತ್ರಿಗೆ ಸಾಣೆ...

Image
  ಚಾಕು ಚೂರಿ ಕತ್ರಿಗೆ ಸಾಣೆ.. ಚೂಪು ಮಾಡಿಕೊಡ್ತೀವಿ ಅಂತ ಕೂಗುತ್ತಾ ಹೆಗಲ ಮೇಲೆ ಮಿಷಿನ್(!) ಹೊತ್ತು ಬರುತ್ತಿದ್ದದ್ದು ನಾವು ಚಿಕ್ಕವರಿದ್ದಾಗ... ಕ್ರಮೇಣ ಅದು ಸೈಕಲ್ ಮೇಲೆ ಬರಲು ಶುರು. ಈಗಂತೂ ಬನ್ನಿ ಅಮ್ಮ, ಬನ್ನಿ ಸಾರ್ ಅಂತ ರೆಕಾರ್ಡ್ ಮಾಡಿದ್ದನ್ನು ನಮಗೆ ಕೇಳಿಸುತ್ತಾ ಟಿ ವಿ ಎಸ್ ಗಾಡಿಯ ಮೇಲೆ ಬರುವವರೆಗೂ  ಬದಲಾಗಿದೆ. ಚಾಕು, ಚೂರಿ, ಕತ್ರಿ, ಮಚ್ಚು, ಕೊಡಲಿ, ರಂಪ, ಗರಗಸ,  ಹೀಗೆ ಯಾವುದೇ ಕತ್ತರಿಸುವ ಸಾಧನವನ್ನು ಚೂಪು (ಹರಿತ) ಮಾಡಿ ಸುಸ್ಥಿತಿಯಲ್ಲಿ ಇದ್ದರೆ ಕೆಲಸ ಹಗುರ.   ತಕ್ಷಣ ನೆನಪಿಗೆ ಬರುವುದು ಚಂದಮಾಮದಲ್ಲಿ ಓದಿದ್ದ ಒಂದು ಕಥೆ... ಒಂದು ಗುರುಕುಲ.. ಮಳೆಗಾಲ ಸಮೀಪಿಸುತ್ತಿದ್ದಂತೆ... ಉರುವಲಿಗಾಗಿ ಸೌದೆ ಶೇಖರಿಸುವುದು ಅನಿವಾರ್ಯ... ಗುರುಕುಲದ ಮಕ್ಕಳು ಆ ಕೆಲಸ ಮಾಡಬೇಕು. ಇದ್ದುದರಲ್ಲಿ ಇಬ್ಬರು ದೊಡ್ಡ ಮಕ್ಕಳಿಗೆ ಆ ಕೆಲಸವನ್ನು ವಹಿಸಲಾಯಿತು... ಒಬ್ಬ ಶ್ರಮಜೀವಿ ಕಷ್ಟಪಟ್ಟು ಕೆಲಸ ಮಾಡುವವ, ಮತ್ತೊಬ್ಬ ಅಷ್ಟೇನೂ ಶಕ್ತನಲ್ಲ ಆದರೆ ಜಾಣ. ಮೊದಲೆರಡು ದಿನಗಳು ಶ್ರಮಜೀವಿ ನಾಲ್ಕೈದು ದಿನಕ್ಕೆ ಆಗುವಷ್ಟು ಸೌದೆ ಕತ್ತರಿಸಿ ಜೋಡಿಸಿದ ಆದರೆ ಇನ್ನೊಬ್ಬ ಮಾತ್ರ ಎರಡೇ ದಿನಕ್ಕಾಗುವಷ್ಟು. ನಂತರದ ದಿನಗಳಲ್ಲಿ ನಮ್ಮ ಶ್ರಮಜೀವಿ ಕತ್ತರಿಸಿ ಜೋಡಿಸಿದ್ದು ಕಡಿಮೆಯಾಗುತ್ತಾ ಬಂದು, ಒಂದು ದಿನಕ್ಕಾಗುವಷ್ಟೂ ಜೋಡಿಸಲಾಗಲಿಲ್ಲ.. ಆದರೆ ಶಕ್ತನಲ್ಲದ ಹುಡುಗ ಎಲ್ಲ ದಿನಗಳೂ ಒಂದೇ ಸಮನೆ ಎರಡೇ ದಿನಕ್ಕಾಗುವಷ್...

ನೀರು ತುಂಬುವ ಹಬ್ಬ ...

Image
ಬೆಳಗಿನ walk ನಲ್ಲಿ ಕನ್ನಡದ "ವಾಕ್ ಪ್ರವಾಹ " ಜೋರಿತ್ತು.. ಹಾಗೇ ವಿಷಯ ದೀಪಾವಳಿ ಹಾಗೂ ನೀರು ತುಂಬುವ ಹಬ್ಬದ ಬಗ್ಗೆ ತಿರುಗಿತು... ಅವರವರ ವಿಶ್ಲೇಷಣೆಗಳು.. ಅನುಭವಗಳು ಹೊರಬಂದವು. ಈ ಮಧ್ಯೆ ಗೆಳೆಯ ವಾಸುದೇವ ಒಂದು ಬಾಣ ಬಿಟ್ಟರು... ಗುರಿ ನನ್ನ ಕಡೆಗೆ ನೇರವಾಗಿತ್ತು. " ಇನ್ನ ರಂಗಣ್ಣನ ಕಡೆಯಿಂದ ಬರುತ್ತೆ ಒಂದು ಬ್ಲಾಗು... ನೀರು ತುಂಬುವ ಹಬ್ಬ ನಮ್ಮ ಹಳ್ಳೀಲಿ ಹಂಗೆ ಹಿಂಗೆ.. ಅಂತ ಎಲ್ಲಾ".. ಅದರಲ್ಲಿ ಹಾಸ್ಯ ವ್ಯಂಗ್ಯ ಪ್ರೀತಿ ಎಲ್ಲ ತುಂಬಿತ್ತು ಅಂತ ನನಗನ್ನಿಸ್ತು.. ಆದರೆ ನನಗೆ ಸಿಕ್ಕಿದ್ದು ಮಾತ್ರ ಸ್ಪೂರ್ತಿ... ಹೌದಲ್ಲ ಈ ಸಂಧರ್ಬಕ್ಕೆ ಬ್ಲಾಗ್ ಬರೆಯಲು ಒಂದು ವಿಷಯ ಸಿಕ್ತು ಅಂತ... ಮನಸ್ಸು ಸಹಜವಾಗಿ ಅದರ ಬಗ್ಗೆ ಒಂದು ಯೋಚನೆ ಮಾಡ್ತು. ನೀರು ತುಂಬುವ ಹಬ್ಬ... ದೀಪಾವಳಿಯ ಸಂಭ್ರಮದ ಮೊದಲ ದಿನ... ಸಂಜೆ ಎಂದರೂ ಸರಿಯೇ... ಮೊದಲು ನೆನಪಿಗೆ ಬರುವುದೇ.. ನಮ್ಮ ದೊಡ್ಡಜಾಲದ ಮನೆಯಲ್ಲಿದ್ದ ವಿಶಾಲವಾದ ಬಚ್ಚಲು ಮನೆಯ ಹಂಡೆ.. ಕಂಠವಿಲ್ಲದ, ಅರ್ಧ ಹೊರ ಮೈ ಮಸಿಯಿಂದ ಕೂಡಿದ... ಇನ್ನರ್ಧ ಮಾತ್ರ ಥಳ ಥಳ ಹೊಳೆಯುತ್ತಾ, ದೊಡ್ಡದಾದ ಬೊಚ್ಚು ಬಾಯಿಯ ಒಲೆಯ ಮೇಲೆ ಕೂತಿರುತ್ತಿದ್ದ ದೃಶ್ಯ . ಅದಕ್ಕೆ ಸುಣ್ಣದ ಪಟ್ಟೆ ಬಳಿದು ಮೇಲೆ ಅರಿಶಿನ ಕುಂಕುಮ ಇಟ್ಟು, ತುಂಬಿ ತುಳುಕುವಷ್ಟು ನೀರು ಹಾಕಿ.. (ಜೊತೆಗೆ ಕೆಲಸೊಪ್ಪುಗಳನ್ನು ಹಾಕಿರುತ್ತಿದ್ದ ನೆನಪು). ಪಕ್ಕದಲ್ಲಿ ಬಚ್ಚಲು ಮನೆಯ ಬಿಂದಿಗೆಗಳು, ತಂಬಿಗೆ, ಬೋಸಿ ತಪ್ಪಲ...

ತಪ್ಪು- ಶಿಕ್ಷೆ- ಪಶ್ಚಾತ್ತಾಪ

Image
ಮೊನ್ನೆ ಒಂದು ದಿನ... ಯೂಟ್ಯೂಬ್ ನಲ್ಲಿ ನನಗೆ ತುಂಬಾ ಪ್ರಿಯವಾದ ಮುಖೇಶ್ ಹಾಡಿದ ಗೋಳು ಗೀತೆಗಳ(sad songs) ಹುಡುಕಾಟದಲ್ಲಿದ್ದಾಗ... ಧುತ್ತೆಂದು ಮುಂದೆ ಬಂದಿದ್ದು..ZEE TVಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಒಂದು ಸಂಚಿಕೆ... ಅದು ಚಿತ್ರನಟ ಅನಂತನಾಗ್ ಅವರದ್ದಾದ್ದರಿಂದ... ಕುತೂಹಲ ಮೂಡಿ ಪೂರ್ಣ ಸಂಚಿಕೆಯನ್ನು  ಸುಮಾರು ಒಂದು ಗಂಟೆಗೂ ಮೀರಿ ತುಂಬಾ ಇಷ್ಟದಿಂದ ನೋಡಿದೆ.  ಅದು  #ಅನಂತನಾಗ್ ಅವರ " ಸಿಹಿ ಕಹಿ  ನೆನಪುಗಳು" ಆಗಿತ್ತು ಎನ್ನುವ ಅನಿಸಿಕೆ( ಇದು ಒಂದು ತರಹ ತಿಕ್ಕಲುತನ ಎನ್ನಲೇ?) ನನ್ನದಾಯಿತು. #Ananthanag  ನಾನು ಮೆಚ್ಚಿದ ನಟರಲ್ಲಿ ಒಬ್ಬರು. ನನ್ನ ದೃಷ್ಟಿಯಲ್ಲಿ ಕನ್ನಡ ಚಿತ್ರರಂಗದ #versatile ನಟರು ಎಂದರೆ ಬಾಲಕೃಷ್ಣ ಹಾಗೂ #ಅನಂತ್ ನಾಗ್ ಅವರು. ಈ ನನ್ನ ಅಭಿಪ್ರಾಯವನ್ನು ಒಪ್ಪದೇ ಇರುವ, ವಿರೋಧಿಸುವ ಒಂದು ದೊಡ್ಡ ದಂಡೇ ನನ್ನ ಅತ್ತೆಯ ಮನೆ ಕಡೆ ಇದೆ... ನನ್ನ ಹೆಂಡತಿ ವಿಜಯ ಆ ಗುಂಪಿನ ಮಂಚೂಣಿಯಲ್ಲಿದ್ದಾಳೆ.. ಅವರಿಗೆಲ್ಲ ಅಣ್ಣಾವ್ರು  (ರಾಜಕುಮಾರ್) ಅಚ್ಚು ಮೆಚ್ಚು...ನನಗೂ #ರಾಜಕುಮಾರ್ ಎಂದರೆ ಇಷ್ಟವೇ... ವಿಷಯ ಪಲ್ಲಟವಾಯಿತು... ಇರಲಿ ಅದು ಒಂದು ಕಡೆ. #ಅನಂತ್ ನಾಗ್ ಅವರು ನಿರರ್ಗಳವಾಗಿ ಹಾಡಿದ ಒಂದು ನೀಳ ಗೀತೆ... ಪ್ರಾರ್ಥನೆಯ ರೂಪದಲ್ಲಿ ಚಿಕ್ಕಂದಿನಲ್ಲಿ ಕಲಿತದ್ದು... ವಿಶೇಷವಾಗಿತ್ತು, ಜೊತೆಯಲ್ಲೇ ಹೇಳಿದ ಮಾತು " ಯಾವ ಚಿತ್ರದ ಮಾತುಗಳೂ ನೆನಪಿಲ್ಲ" ... ಚಿಕ್...

ಸರಸ್ವತಿ ಪೂಜೆ

Image
  ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ// ಯಾಕುಂದೇಂದು ತುಷಾರ ಹಾರ ಧವಳಾ ಯಾ ಶುಭ್ರ ವಸ್ತ್ರಾನ್ವಿತ ಯಾ ವೀಣಾ ವರದಂಡ ಮಂಡಿತಕರ ಯಾ ಶ್ವೇತ ಪದ್ಮಾಸನಾ ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿಃ ದೇವೈ ಸದಾ ಪೂಜಿತಾ ಸಾಮಾಂಪಾತು ಸರಸ್ವತಿ ಭಗವತಿ  ನಿಃಶೇಷ ಜಾಡ್ಯಾಪಃ// ಇದು ಪ್ರತಿದಿನ ಸಂಜೆ ಮನೆಯ ದೀಪ ಹಚ್ಚಿದ ಮೇಲೆ ಓದಲು ಕುಳಿತಾಗ ಕೈ ಮುಗಿದು ಮಾಡುತ್ತಿದ್ದ ಮೊದಲ ಪ್ರಾರ್ಥನೆ. ಅದರ ಅರ್ಥವೂ ತಿಳಿಯದಿದ್ದ ಕಾಲ.. ಆದರೆ ಶ್ರದ್ಧೆ ಭಕ್ತಿ ನಂಬಿಕೆ ಮಾತ್ರ ಗಟ್ಟಿಯಾಗಿತ್ತು.  ಈ ಕರಿಷ್ಯಾಮಿ ಪದ ನನಗೆ ಒಂದು ಅನುಮಾನ ಮೂಡಿಸುತ್ತಿತ್ತು. ನಮ್ಮಪ್ಪನನ್ನು ಅಜ್ಜಿ " ಶಾಮಿ" ಎಂದು ಕರೆಯುತ್ತಿದ್ದದ್ದು.. ನಮ್ಮಪ್ಪ ಅಷ್ಟೇನೂ  ಬೆಳ್ಳಗಿಲ್ಲದಿದ್ದದ್ದು... ಎರಡು ಸೇರಿ ಕರಿಶ್ಯಾಮಿ ಆಗಿ ಇಲ್ಲಿ ಹೇಗೆ ಬಂತು ಎಂದು. ಅದಕ್ಕೆ ಉತ್ತರ ಸಿಕ್ಕಿದ್ದು ನಾನು ಹೈಸ್ಕೂಲ್ ನಲ್ಲಿ ಸಂಸ್ಕೃತ ಓದಲು ಆಯ್ಕೆ ಮಾಡಿದಾಗ .... ಸಂಸ್ಕೃತದ ಪಂಡಿತರು ವೆಂಕಟದಾಸಶರ್ಮ ಅವರಿಂದ. ಸರಸ್ವತಿ ಪೂಜೆ ನವರಾತ್ರಿ ಸಂಭ್ರಮದ ಒಂದು ಮುಖ್ಯ ಭಾಗ...  ಮನೆಯಲ್ಲಿ ಬೊಂಬೆಗಳನ್ನು ಜೋಡಿಸುವಾಗಲೇ... ನನ್ನೆಲ್ಲ ಪುಸ್ತಕಗಳನ್ನು ಸರಸ್ವತಿ ಪೂಜೆಗೆ ಇಡುತ್ತಿದ್ದದ್ದು.. ಅದರ ಹಿಂದಿನ ಕಾರಣ ಸುಮಾರು 12 ದಿನಗಳ ಕಾಲ ಪುಸ್ತಕ, ಓದು ಎನ್ನುವ ಜಂಜಾಟವೇ ಇಲ್ಲದ್ದು.  ಸರಸ್ವತಿ ಪೂಜೆಯ ದಿನ... ದೇವರಿಗೆ ನಮಸ್ಕಾ...

ನೂರು - ಶತಕ - ಸಂಭ್ರಮ

Image
  ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ ಪಲವುಂ ಪಳ್ಳ ಸಮುದ್ರವೈ  ಹರ ಹರಾ ಶ್ರೀ ಚನ್ನ ಸೋಮೇಶ್ವರ.. ಸೋಮೇಶ್ವರ ಶತಕದ ಈ ಪದ್ಯ ನಮ್ಮ ಜೀವಿತಕಾಲದಲ್ಲೆಲ್ಲ ಅಳವಡಿಸಿಕೊಳ್ಳಬೇಕಾದ ಒಂದು ಸೂತ್ರ ಎಂದು ನನ್ನ ನಂಬಿಕೆ. ಮನುಷ್ಯನ ಜೀವಿತಕಾಲ ಅಂದಾಗ ಅದು ನೂರು ವರ್ಷ ಎನ್ನುವ ಒಂದು ಪ್ರತೀತಿ. ನೂರು ವರ್ಷಗಳನ್ನು ಕಾಣದವರೇ ಬಹಳ ಮಂದಿ.. ನೂರು ವರ್ಷಗಳನ್ನು ಪೂರೈಸಿ ತಮ್ಮ ಜೀವಿತಕಾಲದಲ್ಲಿ ಜನರ ಪ್ರೀತಿಯನ್ನು ಗಳಿಸಿದ .. ಕರ್ನಾಟಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ರೂವಾರಿ ಸರ್ ಎಂ ವಿ... ವಿಶ್ವೇಶ್ವರಯ್ಯನವರು, ನಡೆದಾಡುವ ದೇವರೆಂದು ಪ್ರಸಿದ್ಧರಾದ ಸಿದ್ಧಗಂಗೆಯ ಶ್ರೀ ಶಿವಕುಮಾರ ಸ್ವಾಮಿಗಳು,  ನಿಘಂಟು ತಜ್ಞ ಎಂದು ಹೆಸರಾದ   ಶ್ರೀ ವೆಂಕಟಸುಬ್ಬಯ್ಯನವರು, ವೇದಪಾರಂಗತ ಪಂಡಿತ ಸುಧಾಕರ್ ಚತುರ್ವೇದಿಯವರು ತಕ್ಷಣ ನೆನಪಿಗೆ ಬಂದವರು. 108 ವರ್ಷ ಬದುಕಿದ್ದ ನಮ್ಮಪ್ಪನ ನೂರು ವರ್ಷದ  "ಶಾಮಣ್ಣನ ಶತಾಬ್ದಿ ಸಂಭ್ರಮ"ದ ಆಚರಣೆ ಅತಿ ಸಂಭ್ರಮ ಯುಕ್ತವಾಗಿತ್ತು. 100 / ಶತಕ ನಮ್ಮ ಜೀವನದ ವಿವಿಧ ಘಟ್ಟದಲ್ಲಿ ಮೂಗು ತೂರಿಸಿದೆ. ಚಿಕ್ಕಂದಿನಲ್ಲಿ ನನ್ನಮ್ಮ ಯುಗಾದಿ ಹಾಗೂ ದೀಪಾವಳಿ ಹಬ್ಬದಲ್ಲಿ ನಮಗೆಲ್ಲ ತಲೆಗೆ ಎಣ್ಣೆಯನ್ನು ಹಚ್ಚಿ.. ಅಭ್ಯಂಜನಕ್ಕೆ ಅಣಿ ಮಾಡುತ್ತಿದ್ದದ್ದು ಪದ್ಧತಿ... ಆಗೆಲ್...

ಅಜ್ಜಿ ತಾತ - ಪ್ರೀತಿಯ ಸ್ರೋತ

Image
  " ತಾತ.. ಬೆಳಿಗ್ಗೆ ಸ್ಕೂಲ್ಗೆ ಬಿಡಕ್ಕೆ ಬಸ್ ಹತ್ರ ಬರ್ತೀಯ ತಾನೆ? " ಇದು ನನ್ನ ಮೊಮ್ಮಗಳು ಮೊನ್ನೆ ಕೇಳಿದ ಮಾತು. ನಮ್ಮ ಮನೆಯಲ್ಲಿದ್ದಾಗ ಅವಳನ್ನು ಬಸ್ಸಿಗೆ ಹತ್ತಿಸಲು ನಾನು ಹೋಗುವುದು ಒಂದು ಅಭ್ಯಾಸ.   ಮೂರ್ನಾಲ್ಕು ದಿನದಿಂದ  ಮಗಳು ಮತ್ತು ಮೊಮ್ಮಗಳು ನಮ್ಮ ಮನೆಯಲ್ಲಿದ್ದಾರೆ. ಅವಳಿಗೆ ಪರೀಕ್ಷೆ ಶುರು.. ಅದಕ್ಕೆ ಅವರಮ್ಮನ ಜೊತೆಗೆ  ನಾವು ಅಜ್ಜಿ ತಾತ ಅವಳಿಗೆ ಪಾಠ ಹೇಳಿಕೊಡುವ ಹುಮ್ಮಸ್ಸು. ಮೊಮ್ಮಗಳ ಜೊತೆ ಕಾಲ ಕಳೆಯುವ ಒಂದೊಂದು ಕ್ಷಣವು... ಒಂದೊಂದು ಸ್ವರ್ಗದ ಮೆಟ್ಟಿಲು.  19.04.2018 ರ ದಿನ ನಮ್ಮ ಜೀವನದ ಒಂದು ವಿಶೇಷ ಮೈಲಿಗಲ್ಲು... ಅಂದು ನಮ್ಮ ಜೀವನಕ್ಕೆ ಮೊಮ್ಮಗಳು ವಿಸ್ಮಯನ ಆಗಮನ, ಹಾಗಾಗಿ ನಮಗೆ ಅಜ್ಜಿ ತಾತ ಆಗಿ ಬಡ್ತಿ ಸಿಕ್ಕಿದ ದಿನ. ಕೆಲವೇ ಕ್ಷಣಗಳ ಹಿಂದೆ ಇದ್ದ ಒಂದು ಸಣ್ಣ ಆತಂಕ ಕಳೆದು ಸಂತೋಷ ಚಿಮ್ಮಿದ ದಿನ. ಸುಮಾರು ಏಳು ದಿನಗಳ ಕಾಲ ಸತತವಾಗಿ ಆಸ್ಪತ್ರೆಯಲ್ಲಿ ಜೊತೆಯಲ್ಲಿದ್ದು, ಮಗಳು ಮೊಮ್ಮಗಳನ್ನು ನೋಡಿಕೊಂಡ ಸಮಯ ಮಿಶ್ರಭಾವದೊಂದಿಗೆ ಇತ್ತು. ತಾತನಾಗಿ ಮಗುವಿನ ಎಲ್ಲಾ ಆರೈಕೆಯಲ್ಲೂ ಭಾಗಿಯಾಗಿ... ರಾತ್ರಿ ನಿದ್ದೆ ಕೆಟ್ಟು, ಮೈ ಸೋತಿದ್ದರೂ ಮನಸ್ಸಿಗೆ ಏನೋ ಆಹ್ಲಾದ... ಆ ಮುದ್ದು ಬೊಮ್ಮಟೆಯನ್ನು ಎತ್ತಿ ಮುದ್ದಾಡಿದಾಗ ಸಿಕ್ಕ ಆನಂದ ಹೇಳಲು ಪದಗಳು ಇಲ್ಲ ಎಂದೇ ನನ್ನ ಭಾವನೆ. ಅಜ್ಜಿ ತಾತನಿಗೆ ಒಂದು ವಿಶೇಷ ಸವಲತ್ತು. ಅದು ಮಗುವಿನೊಂದಿಗಿನ ಒಡನಾಟ... ಯಾವುದೇ ವಿಶೇಷ ಜವಾಬ...