Posts

ನೂರು - ಶತಕ - ಸಂಭ್ರಮ

Image
  ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ ಪಲವುಂ ಪಳ್ಳ ಸಮುದ್ರವೈ  ಹರ ಹರಾ ಶ್ರೀ ಚನ್ನ ಸೋಮೇಶ್ವರ.. ಸೋಮೇಶ್ವರ ಶತಕದ ಈ ಪದ್ಯ ನಮ್ಮ ಜೀವಿತಕಾಲದಲ್ಲೆಲ್ಲ ಅಳವಡಿಸಿಕೊಳ್ಳಬೇಕಾದ ಒಂದು ಸೂತ್ರ ಎಂದು ನನ್ನ ನಂಬಿಕೆ. ಮನುಷ್ಯನ ಜೀವಿತಕಾಲ ಅಂದಾಗ ಅದು ನೂರು ವರ್ಷ ಎನ್ನುವ ಒಂದು ಪ್ರತೀತಿ. ನೂರು ವರ್ಷಗಳನ್ನು ಕಾಣದವರೇ ಬಹಳ ಮಂದಿ.. ನೂರು ವರ್ಷಗಳನ್ನು ಪೂರೈಸಿ ತಮ್ಮ ಜೀವಿತಕಾಲದಲ್ಲಿ ಜನರ ಪ್ರೀತಿಯನ್ನು ಗಳಿಸಿದ .. ಕರ್ನಾಟಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ರೂವಾರಿ ಸರ್ ಎಂ ವಿ... ವಿಶ್ವೇಶ್ವರಯ್ಯನವರು, ನಡೆದಾಡುವ ದೇವರೆಂದು ಪ್ರಸಿದ್ಧರಾದ ಸಿದ್ಧಗಂಗೆಯ ಶ್ರೀ ಶಿವಕುಮಾರ ಸ್ವಾಮಿಗಳು,  ನಿಘಂಟು ತಜ್ಞ ಎಂದು ಹೆಸರಾದ   ಶ್ರೀ ವೆಂಕಟಸುಬ್ಬಯ್ಯನವರು, ವೇದಪಾರಂಗತ ಪಂಡಿತ ಸುಧಾಕರ್ ಚತುರ್ವೇದಿಯವರು ತಕ್ಷಣ ನೆನಪಿಗೆ ಬಂದವರು. 108 ವರ್ಷ ಬದುಕಿದ್ದ ನಮ್ಮಪ್ಪನ ನೂರು ವರ್ಷದ  "ಶಾಮಣ್ಣನ ಶತಾಬ್ದಿ ಸಂಭ್ರಮ"ದ ಆಚರಣೆ ಅತಿ ಸಂಭ್ರಮ ಯುಕ್ತವಾಗಿತ್ತು. 100 / ಶತಕ ನಮ್ಮ ಜೀವನದ ವಿವಿಧ ಘಟ್ಟದಲ್ಲಿ ಮೂಗು ತೂರಿಸಿದೆ. ಚಿಕ್ಕಂದಿನಲ್ಲಿ ನನ್ನಮ್ಮ ಯುಗಾದಿ ಹಾಗೂ ದೀಪಾವಳಿ ಹಬ್ಬದಲ್ಲಿ ನಮಗೆಲ್ಲ ತಲೆಗೆ ಎಣ್ಣೆಯನ್ನು ಹಚ್ಚಿ.. ಅಭ್ಯಂಜನಕ್ಕೆ ಅಣಿ ಮಾಡುತ್ತಿದ್ದದ್ದು ಪದ್ಧತಿ... ಆಗೆಲ್...

ಅಜ್ಜಿ ತಾತ - ಪ್ರೀತಿಯ ಸ್ರೋತ

Image
  " ತಾತ.. ಬೆಳಿಗ್ಗೆ ಸ್ಕೂಲ್ಗೆ ಬಿಡಕ್ಕೆ ಬಸ್ ಹತ್ರ ಬರ್ತೀಯ ತಾನೆ? " ಇದು ನನ್ನ ಮೊಮ್ಮಗಳು ಮೊನ್ನೆ ಕೇಳಿದ ಮಾತು. ನಮ್ಮ ಮನೆಯಲ್ಲಿದ್ದಾಗ ಅವಳನ್ನು ಬಸ್ಸಿಗೆ ಹತ್ತಿಸಲು ನಾನು ಹೋಗುವುದು ಒಂದು ಅಭ್ಯಾಸ.   ಮೂರ್ನಾಲ್ಕು ದಿನದಿಂದ  ಮಗಳು ಮತ್ತು ಮೊಮ್ಮಗಳು ನಮ್ಮ ಮನೆಯಲ್ಲಿದ್ದಾರೆ. ಅವಳಿಗೆ ಪರೀಕ್ಷೆ ಶುರು.. ಅದಕ್ಕೆ ಅವರಮ್ಮನ ಜೊತೆಗೆ  ನಾವು ಅಜ್ಜಿ ತಾತ ಅವಳಿಗೆ ಪಾಠ ಹೇಳಿಕೊಡುವ ಹುಮ್ಮಸ್ಸು. ಮೊಮ್ಮಗಳ ಜೊತೆ ಕಾಲ ಕಳೆಯುವ ಒಂದೊಂದು ಕ್ಷಣವು... ಒಂದೊಂದು ಸ್ವರ್ಗದ ಮೆಟ್ಟಿಲು.  19.04.2018 ರ ದಿನ ನಮ್ಮ ಜೀವನದ ಒಂದು ವಿಶೇಷ ಮೈಲಿಗಲ್ಲು... ಅಂದು ನಮ್ಮ ಜೀವನಕ್ಕೆ ಮೊಮ್ಮಗಳು ವಿಸ್ಮಯನ ಆಗಮನ, ಹಾಗಾಗಿ ನಮಗೆ ಅಜ್ಜಿ ತಾತ ಆಗಿ ಬಡ್ತಿ ಸಿಕ್ಕಿದ ದಿನ. ಕೆಲವೇ ಕ್ಷಣಗಳ ಹಿಂದೆ ಇದ್ದ ಒಂದು ಸಣ್ಣ ಆತಂಕ ಕಳೆದು ಸಂತೋಷ ಚಿಮ್ಮಿದ ದಿನ. ಸುಮಾರು ಏಳು ದಿನಗಳ ಕಾಲ ಸತತವಾಗಿ ಆಸ್ಪತ್ರೆಯಲ್ಲಿ ಜೊತೆಯಲ್ಲಿದ್ದು, ಮಗಳು ಮೊಮ್ಮಗಳನ್ನು ನೋಡಿಕೊಂಡ ಸಮಯ ಮಿಶ್ರಭಾವದೊಂದಿಗೆ ಇತ್ತು. ತಾತನಾಗಿ ಮಗುವಿನ ಎಲ್ಲಾ ಆರೈಕೆಯಲ್ಲೂ ಭಾಗಿಯಾಗಿ... ರಾತ್ರಿ ನಿದ್ದೆ ಕೆಟ್ಟು, ಮೈ ಸೋತಿದ್ದರೂ ಮನಸ್ಸಿಗೆ ಏನೋ ಆಹ್ಲಾದ... ಆ ಮುದ್ದು ಬೊಮ್ಮಟೆಯನ್ನು ಎತ್ತಿ ಮುದ್ದಾಡಿದಾಗ ಸಿಕ್ಕ ಆನಂದ ಹೇಳಲು ಪದಗಳು ಇಲ್ಲ ಎಂದೇ ನನ್ನ ಭಾವನೆ. ಅಜ್ಜಿ ತಾತನಿಗೆ ಒಂದು ವಿಶೇಷ ಸವಲತ್ತು. ಅದು ಮಗುವಿನೊಂದಿಗಿನ ಒಡನಾಟ... ಯಾವುದೇ ವಿಶೇಷ ಜವಾಬ...

ಬಾಲ್ಯದ ಪ್ರಸಂಗಗಳು - ಇನ್ನಷ್ಟು.

Image
  ಹೈಸ್ಕೂಲ್ ಹಂತದಲ್ಲಿ ನಾನು ಟಿ ಆರ್ ಶ್ರೀನಿವಾಸರಾವ್ ಆಪ್ತರು. ಅವನದು ಎಲ್ಲಕ್ಕೂ ಎಡಗೈ ಬಳಕೆ ( ಲೊಡ್ಡೇ ಎಂದು ಕರೆಯುತ್ತಿದ್ದದ್ದು ಉಂಟು) ಒಟ್ಟಿಗೆ ಸ್ಕೂಲಿಗೆ ಹೋಗಿ ಬರುವುದು. ಒಂದೇ ಬೆಂಚಿನಲ್ಲಿ ಕೂಡುವುದು... ಹೀಗೆ. ಪ್ರತಿದಿನ ದಾರಿಯಲ್ಲಿರುವ ಅವರ ಮನೆಗೆ ಹೋಗಿ ಅಲ್ಲಿಂದ ಸ್ಕೂಲಿಗೆ ಹೋಗುವುದು ಒಂದು ಅಭ್ಯಾಸ. ಅವರ ಮನೆಗೆ ಹೋದಾಗಲೆಲ್ಲ... ಅವರ ಒಬ್ಬ ಅಕ್ಕನನ್ನು ನೋಡುತ್ತಿದ್ದೆ... ಮಾತನಾಡುತ್ತಿರಲಿಲ್ಲ... ಮುಖ ನೋಡಿ ನಗುವುದು ಮಾತ್ರ. ಕೆಲವು ಸಲ ಕೈಯಲ್ಲಿ ಒಂದು ಹಾರ್ಲಿಕ್ಸ್ ಬಾಟಲ್ಲು... ಅದರಲ್ಲಿ ಮಜ್ಜಿಗೆ.. ಅದನ್ನು ಅಲ್ಲಾಡಿಸುತ್ತಾ ಕುಳಿತಿರುವುದನ್ನು ಗಮನಿಸಿದ್ದೆ. ಒಂದು ದಿನ ತಿಳಿದದ್ದು ಅವರು ಬುದ್ಧಿಮಾಂದ್ಯರೆಂದು, ( ಆಗ ಅದರ ಅರಿವೇ ಇರಲಿಲ್ಲ). ಹಾಗಾಗಿ ಮಜ್ಜಿಗೆಯಿಂದ ಬೆಣ್ಣೆ ತೆಗೆಯಲು ಅವರ ಕೈಗೆ ಬಾಟಲ್ ಕೊಟ್ಟರೆ ಸ್ವಲ್ಪ ಸಮಯದ ನಂತರ ಬೆಣ್ಣೆ ಕಟ್ಟಿರುತ್ತಿತ್ತು.... ಅವರನ್ನು ನೋಡಿದಾಗಲೆಲ್ಲ  ನನಗೆ ಒಂದು ಹೇಳಲಾಗದ ಭಾವ.... ಸಧ್ಯ ನನ್ನಕ್ಕ ಹಾಗಿಲ್ಲ ಅಂದುಕೊಂಡದ್ದು ಉಂಟು. ಟಿ.ಆರ್ ಶ್ರೀನಿವಾಸ್ ರಾವ್   ನನ್ನು  ಕೊನೆಯ ಬಾರಿ ಭೇಟಿ ಮಾಡಿದ್ದು 72  - 73 ರಲ್ಲಿ... ಆಗ ಅವನು ಸಿಂಡಿಕೇಟ್ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ. ನಂತರ ನನ್ನ ಹೊಸ ಫ್ಯಾಕ್ಟರಿಯ ಸಂಭ್ರಮ (ಜಂಜಾಟ ಎಂತಲೂ ಹೇಳಬಹುದು) ದಲ್ಲಿ ನಾನೇ ಒಂದು ಸ್ವಯಂ ನಿರ್ಮಿತ ದ್ವೀಪದಲ್ಲಿದ್ದೆ. ಈಗ ಎರಡು ಮೂರು ವರ್...

ಈಶ್ವರ - ವಿಶ್ವೇಶ್ವರ

Image
  ಮೊನ್ನೆ ಭಾನುವಾರ ಆಕಸ್ಮಿಕವಾಗಿ, ಬಹುದಿನದ ಆಸೆ... ಮುದ್ದೇನಹಳ್ಳಿಯನ್ನು ನೋಡುವುದು..... ನೆರವೇರಿತು ...ಅದು ನನ್ನ ಸ್ನೇಹಿತ ವಾಸು ( NS ವಾಸುದೇವ್) ವಿನ ಕೃಪೆಯಿಂದ. ಬೆಂಗಳೂರು ಮಹಾನಗರ ಸಾರಿಗೆ ಏರ್ಪಡಿಸಿರುವ ಒಂದು ದಿನದ ಪ್ರವಾಸದ ಮೂಲಕ. ಸಾಮಾನ್ಯ ಕಣ್ಣಿಗೆ ಕಾಣದ, ಸರ್ವಾಂತರ್ಯಾಮಿ ಹಾಗೂ ಸರ್ವಶಕ್ತ... ಪ್ರಪಂಚಕ್ಕೆ ಯೋಗ ಜ್ಞಾನವನ್ನು ಕೊಟ್ಟ ಆದಿ ಗುರು ಶಿವ... ಈಶ್ವರನ ದರ್ಶನ.... ಹಾಗೆ ನಮ್ಮ ಜೀವಿತ ಕಾಲದಲ್ಲೇ ಇದ್ದು ಜನಹಿತದ ಕೆಲಸಗಳನ್ನು ಮಾಡಿದ ತಮ್ಮ ಇಂಜಿನಿಯರಿಂಗ್ ಜ್ಞಾನದ ಮೂಲಕ ನೀರು ವಿದ್ಯುತ್ ಅಣೆಕಟ್ಟು ಹೀಗೆ ಅನೇಕ  ವಿಧದ ಅನುಕೂಲತೆಗಳನ್ನು ಮಾಡಿದ, ಮೈಸೂರು ರಾಜ್ಯದ ದಿವಾನರಾಗಿ ಬ್ಯಾಂಕು, ಕಾರ್ಖಾನೆಗಳು, ವಿದ್ಯಾಸಂಸ್ಥೆಗಳನ್ನು ಹುಟ್ಟು ಹಾಕಿದ.. ನಮ್ಮ ನಾಡಿನಲ್ಲಿ ನಡೆದಾಡಿದ ವಿಶ್ವೇಶ್ವರನ ದರ್ಶನ... ಹೌದು ಅದು ಸರ್ MV ಎಂದೇ ಪ್ರಸಿದ್ಧರಾದ, ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ದರ್ಶನ. ಈಶ್ವರ, ವಿಶ್ವೇಶ್ವರ ಇಬ್ಬರ ದರ್ಶನ ನನಗೆ ತುಂಬಾ ಖುಷಿ ಕೊಟ್ಟಿತು. ಅಂದು ಸುಮಾರು 11.15 ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣವನ್ನು ಬಿಟ್ಟು ಮೊದಲು ತಲುಪಿದ್ದು ಕಣಿವೆ ಬಸವೇಶ್ವರನ ದೇವಸ್ಥಾನ.  ಹೆಸರೇ ಹೇಳುವಂತೆ ಒಂದು ಕಡೆ ಬೆಟ್ಟ ಮತ್ತೊಂದು ಕಡೆ ಕಣಿವೆ... ಮಳೆ ಬಂದ ಕಾರಣದಿಂದ ಎಲ್ಲವೂ ಹಸಿರು ಹಸಿರು... ನೋಡಲು ಕಣ್ತುಂಬಿ ಬಂದಂತ ವನಸಿರಿ. ಜೊತೆಗೆ ದೊಡ್ಡದಾದ ಉದ್ಭವ ಮೂರ್ತಿ ಎಂದು ಹೇಳಲಾದ ಬಸವಣ್ಣನ ವಿ...

ವಾಸ್ತುಶಾಸ್ತ್ರ- ವಸ್ತುಸ್ಥಿತಿ

Image
Walking ಸಮಯದ talking ನನಗೆ ಬಲು ಇಷ್ಟ ... ಅದು ನಮ್ಮದಾದರೂ ಸರಿ.. ಬೇರೆಯವರ ಮಾತಾದರೂ ಸರಿ. ಹೀಗೆ ಕೇಳಿಸಿಕೊಂಡ ಮಾತು ವಾಸ್ತು ಶಾಸ್ತ್ರದ ಬಗೆಗಿತ್ತು.." ಎಂಥಾ ಸಂದಿಗ್ಧ  ಅಂತೀರಾ... ನಮ್ ಪಕ್ಕದ ಸೈಟ್ ನಲ್ಲಿ ದೇವಮೂಲೆಯಲ್ಲಿ ಬೋರ್ ವೆಲ್ ಹಾಕಿಸಿದ್ದಾರೆ ...ಒಳ್ಳೆ ನೀರು ಬಂದಿದೆ. ನಮ್ ಸೈಟ್ ನಲ್ಲೂ ಬೋರ್ ವೆಲ್ ಹಾಕಿಸ ಬೇಕು... ಅದು ದೇವಮೂಲೆಯಲ್ಲಿ ಇದ್ರೆ ಒಳ್ಳೇದು ಅಂತ ವಾಸ್ತು ತಿಳಿದವರು ಹೇಳ್ತಾರೆ... ಆದರೆ ನೀರಿನ ಸೆಲೆ ಹುಡುಕಿಕೊಟ್ಟವರು ಅದನ್ನ ಅಗ್ನಿಮೂಲೆ ತೋರಿಸಿದ್ದಾರೆ... ಏನ್ ಮಾಡಬೇಕು ತೋಚುತ್ತಾ ಇಲ್ಲ" . ಕಣ್ಮುಚ್ಚಿ ಅಕ್ಕ ಪಕ್ಕ ಸೈಟ್ ಅನ್ನ ಕಲ್ಪಿಸ್ಕೊಂಡೆ ಆಗ ಕಾಣಿಸಿದ್ದೇ ...ಒಬ್ಬರ ಮನೆಯ ಅಗ್ನಿ ಮೂಲೆಯ  ಬಲಗಡೆ ಪಕ್ಕದ ಮನೆಯವರ ದೇವ ಮೂಲೆ. ನೀರಿನ ಹರಿವು ಅದೃಷ್ಟವಶಾತ್ ಒಬ್ಬರಿಗೆ ದೇವಮೂಲೆಯಲ್ಲಿ ಸಿಕ್ಕಿದೆ, ಪಕ್ಕದಲ್ಲಿ ಬೋರ್ ಹಾಕಿದರೆ ನೀರಿನ ಸಾಧ್ಯತೆ ಹೆಚ್ಚು ಅಲ್ಲವೇ( ಕಾನೂನುಗಳ ವಿಧಿಯನ್ನು ಗಮನಿಸದೆ)... ವಾಸ್ತು ಶಾಸ್ತ್ರಕ್ಕೂ ವಸ್ತು ಸ್ಥಿತಿಗೂ ಇರುವ ಅಂತರ... ಅದರಿಂದಾಗುವ ಗೊಂದಲ ನನ್ನಲ್ಲಿ ಮೂಡಿತು.... ನನಗಿದು ಸಂಬಂಧವೇ ಇಲ್ಲದಿರುವ ವಿಷಯವಾದರೂ. ಇನ್ನು ಅದನ್ನು ನಿಭಾಯಿಸಬೇಕಾದ ವ್ಯಕ್ತಿಗೆ ಆಗುವ ಗೊಂದಲ....  ಹಣದ ಪ್ರಶ್ನೆಯ ಜೊತೆಗೆ... ಅರ್ಥ ಮಾಡಿಕೊಳ್ಳಲು ಅಷ್ಟು ಸುಲಭವಲ್ಲ, ಅನುಭವಿಸಿ ಅರ್ಥಮಾಡಿಕೊಳ್ಳಬೇಕು. ವಾಸ್ತು ಶಾಸ್ತ್ರದ ಜೊತೆ ನನ್ನ ಮೊದಲ ಮುಖಾಮುಖಿ 1975ರ ಸುಮಾರ...

ತುಂಬು ಕುಟುಂಬ - ಸುವರ್ಣ ಕಾಲ

Image
ನನ್ನ ಪರಿಚಯದ ಶ್ರೀಮತಿ ಸುಜಾತ ರೆಡ್ಡಿ ಅವರು... ನನ್ನ ಲೇಖನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುತ್ತಾರೆ, ಜೊತೆ ಜೊತೆಗೆ ಅವರಿಗೆ ನೆನಪಾದ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೊಂದು ನನ್ನನ್ನು ಉಬ್ಬಿಸುತ್ತವೆ...  ಹುರಿದುಂಬಿಸುತ್ತವೆ. ಇಂದು ಅವರ ಮೆಸೇಜ್ ನೋಡುವಾಗ ಅನಿರೀಕ್ಷಿತವಾಗಿ ಕಣ್ಣಿಗೆ ಬಿದ್ದ ಅವರ ಮದುವೆಯ ಸಂದರ್ಭ. ..ಹಾಗೂ Joint family  ಪದವೇ ನನ್ನ ಲೇಖನಕ್ಕೆ ಸ್ಫೂರ್ತಿ. Joint family ಎನ್ನುವ ಪದ ವಿಶೇಷವೇ. ಚಿಕ್ಕಂದಿನಲ್ಲಿ ನಮಗೆ ತಿಳಿಯದು. ಹಳ್ಳಿಯ ಎಲ್ಲ ಮನೆಗಳಲ್ಲೂ ಜನವೋ ಜನ... ನನಗೆ ನೆನಪಿರುವಂತೆ, ಒಂದೇ ಮನೆಯಲ್ಲಿ ಗಂಡ ಹೆಂಡತಿ ಇದ್ದದ್ದು... ಅವರಿಗೆ ಮಕ್ಕಳಿರಲಿಲ್ಲ ಎಂಬ ನೆನಪು.  ಬೆಂಗಳೂರಿಗೆ ಬಂದ ನಂತರವೇ ಕೆಲ ದಿನ ನಾವು ಅಣ್ಣ ತಮ್ಮಂದಿರು, ಜೊತೆಗೆ ನನ್ನಕ್ಕ ಗಿರಿಜಾಂಬ ಮಾತ್ರ ಮನೆಯಲ್ಲಿದ್ದದ್ದು... ಅದು ಒಂದು ತರಹ branch office ಇದ್ದ ಹಾಗೆ. ನಂತರ, ದೊಡ್ಡಜಾಲ ಬಿಟ್ಟು ಅಪ್ಪ, ಅಮ್ಮ ಬೆಂಗಳೂರಿಗೆ ಬಂದಮೇಲೆ, ಬೆಂಗಳೂರೇ head office ಆಯ್ತು.  ಕೂಡು ಕುಟುಂಬದ ಭಾಗವಾಗಿದ್ದು... ಅನುಭವಿಸಿದ ಸುಂದರ ಕ್ಷಣಗಳು ಅವಿಸ್ಮರಣೀಯ.  ಅಕ್ಕಂದಿರುಗಳ ಮದುವೆಯಾಗಿ ಅವರುಗಳ ಜೀವನ ಸಾಗುತ್ತಿದ್ದು... ಮನೆಯಲ್ಲಿ ಅಮ್ಮನನ್ನು ಬಿಟ್ಟರೆ ಬೇರೆ ಹೆಣ್ಣಿಲ್ಲ... ಬರೀ ಗಂಡಸರು... ಇದಾದ ನಂತರದ ತಿರುವು... ಒಬ್ಬರ ನಂತರ ಒಬ್ಬರು, ನಮ್ಮಣ್ಣಂದಿರಿಬ್ಬರ ಮದುವೆ... ಮನೆಗೆ ಅತ...

ಚೌರ - ಕ್ಷೌರಿಕ - ಕೇಶ ಶೃಂಗಾರ

Image
ಸಂಜೆ ಮನೆಗೆ ಮರಳುವ ಹೊತ್ತಿಗೆ ನಮ್ಮ ಮನೆಯ ಮುಂದಿನ ಸಾಲಿನಲ್ಲಿ ಒಂದು ಹೊಸ ಬೋರ್ಡ್ ಕಾಣಿಸಿಕೊಂಡಿತು... ಅದರಲ್ಲಿ ಬರೆದದ್ದು... ರಿಶಿ ಬ್ಯೂಟಿ ಸ್ಟುಡಿಯೋ.. ಅಂದರೆ ಅದೊಂದು ಮೂಲತಃ (ನನ್ನ ಚಿಕ್ಕಂದಿನ ಭಾಷೆಯಲ್ಲಿ ಹೇಳುವುದಾದರೆ) ಚೌರದ ಅಂಗಡಿ. ನಿಜಕ್ಕೂ ಈ ಚೌರದ ವಿಚಾರವಾಗಿ ಆಗಿರುವ ರೂಪಾಂತರ ಆಶ್ಚರ್ಯ ಪಡುವಂಥದ್ದು. ಮರದ ಕೆಳಗೆ, ನಮ್ಮ ಮನೆಯ ಬಳಿ ನಡೆಯುತ್ತಿದ್ದ ಚೌರದ ಕಾರ್ಯಕ್ರಮ ಈಗ ಸುಸಜ್ಜಿತ ಸ್ಟುಡಿಯೋ ವರೆಗೆ ಬಂದು ನಿಂತಿದೆ. ಒಂದು ಸಮಯವಿತ್ತು... ಅವರನ್ನು ಮುಟ್ಟಬಾರದು...ಮೈಲಿಗೆ, ಸಂಜೆಯ ಹೊತ್ತು ನೆನೆಯಬಾರದು, ಎಲ್ಲಿಯಾದರೂ ಹೊರಟಾಗ ಅವರು ಎದುರಿಗೆ ಬಂದರೆ ಅಪಶಕುನ ಎಂಬ ಭಾವನೆ. ಆದರೆ ಅವರ ಓಲಗದ ನಾದ ಮಾತ್ರ ಎಲ್ಲ ಶುಭ ಸಂದರ್ಭಗಳಲ್ಲೂ ಬೇಕು... ಇದು ಯಾವ ನ್ಯಾಯ... ಅರ್ಥವಾಗದು.  ಈ ವಿಚಾರವಾಗಿ ಶತಾವಧಾನಿ ಗಣೇಶ್ ಅವರು ಹೇಳಿದ ಒಂದು ಘಟನೆ ಕಣ್ಣು ತೆರೆಸುವಂತದು. ಶತಾವಧಾನಿ ಗಣೇಶ್ ಅವರು ಅವರ ತಾತನ ಜೊತೆ ಶೃಂಗೇರಿಯ ಆಗಿನ ಜಗದ್ಗುರು ಶ್ರೀ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಯವರ ದರ್ಶನಕ್ಕೆ ಹೋಗಿದ್ದರಂತೆ...ಆ ಸಮಯದಲ್ಲಿ ತಾತ ಜಗದ್ಗುರುಗಳಲ್ಲಿ ಒಂದು ಪ್ರಶ್ನೆ ಕೇಳಿದರಂತೆ ..."ಅವರುಗಳು ತೆಲುಗಿನಲ್ಲಿ ಮಾತಾಡುತ್ತಿದ್ದರಂತೆ.. ಇದರ  ಕನ್ನಡ ಭಾವಾನುವಾದ "ಕ್ಷೌರ ಮಾಡುವವರನ್ನು ಮುಟ್ಟಿದರೆ ಮೈಲಿಗೆ, ಎದುರಿಗೆ ಬಂದರೆ ಅಪಶಕುನ ಎಂದು ಭಾವಿಸುತ್ತೇವೆ... ಆದರೆ ಅದೇ ಮನುಷ್ಯರು ದೇವರ ಮೆರವಣಿಗೆಯಲ್ಲಿ ನಾದಸ್ವರವನ...