Posts

ಗುರುಪೂರ್ಣಿಮೆ

Image
  ಮೊನ್ನೆ ಭಾನುವಾರ ಗುರುಪೂರ್ಣಿಮೆಯ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಗುರುಪೂರ್ಣಿಮೆಯ ಶುಭಾಶಯಗಳು ಹಾಗೂ ಸಂಬಂಧಪಟ್ಟ ವಿಷಯಗಳ ಬಗ್ಗೆ ಮೆಸೇಜುಗಳ ಮಹಾಪೂರವೇ ಹರಿದು ಬಂತು. ಗುರುಪೂರ್ಣಿಮೆಯ ಆಚರಣೆ ಹಿಂದಿನಿಂದ ಇತ್ತಾದರೂ... ಅದು ಜನಮಾನಸದ ಎಲ್ಲ ಸ್ತರದ ಜನರನ್ನು ಮುಟ್ಟಿರಲಿಲ್ಲ.... ಸಾಮಾಜಿಕ ಜಾಲತಾಣದ ಕೃಪೆಯಿಂದಾಗಿ.. ಇಂದು ಬಹು ಜನರನ್ನು ಮುಟ್ಟಿದೆ... ಹಾಗೂ ಈ ವಿಷಯ ಜನಜನಿತವಾಗಿದೆ. ಇದೊಂದು ಧಾರ್ಮಿಕ ಆಚರಣೆಯೇ ಆಗಿಲ್ಲದೆ... ಸಾಮಾಜಿಕವಾಗಿಯೂ ಆಚರಣೆಯಲ್ಲಿ ಇದೆ... ತಮಗೆ ಇಷ್ಟವಾದ ಗುರುಗಳನ್ನು ಆದರಿಸಿ ಸತ್ಕರಿಸಿ ಗೌರವ ತೋರಿಸಿ, ಕೃತಜ್ಞತೆ ಸಲ್ಲಿಸುವ ಮೂಲಕ. ಅದರಲ್ಲೂ ಸಂಗೀತ ಕ್ಷೇತ್ರದಲ್ಲಿ ಗುರು ವಂದನೆಗೆ ಹೆಚ್ಚಿನ ಪ್ರಾಮುಖ್ಯತೆ. ನಮ್ಮ ಸಂಸ್ಕೃತಿಯಲ್ಲಿ... ಅಪ್ಪ ಅಮ್ಮನ ನಂತರದ ಸ್ಥಾನ ಗುರುವಿಗೆ. " ಮಕ್ಕಳಿಸ್ಕೂಲ್ ಮನೇಲಲ್ವೇ" ಎಂಬ ಕೈಲಾಸಂ ಮಾತಿನಂತೆ.. ತಾಯಿಯೇ ಮೊದಲ ಗುರು. " ಅಜ್ಞಾನಾತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ" ಅಜ್ಞಾನದಿಂದ ಕುರುಡಾದವನ ಕಣ್ಣುಗಳನ್ನು ಜ್ನಾನಾಂಜನ ಎಂಬ ಸಲಾಕೆಯಿಂದ.. ಕಣ್ಣನ್ನು ತೆರೆಸಿದವನೇ ಗುರು. ವರ್ಣಮಾತ್ರಂ ಕಲಿಸಿದಾತಂ ಗುರು ಎನ್ನುವ ಹೇಳಿಕೆಯೂ ಇದೆ. ಗುರುವಿನ ಬಗ್ಗೆ ಇಂತಹ ಸಾಲುಗಳು ಅನೇಕವು.. ಬಗೆದಷ್ಟೂ ಸಿಗುವಂತಹವು. ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರದ ಶಿವನನ್ನು ಆದಿ ಗುರು ಎಂದು ಕರೆಯುವು...

Walking - ನಡೆದಾಟ

Image
ವಾಕಿಂಗ್ ಎಂದರೆ.. ಈಗ ಅರ್ಥ ಮಾಡಿಕೊಳ್ಳುವುದು... ಬೆಳಿಗ್ಗೆ ಅಥವಾ ಸಂಜೆ ಯಾವುದಾದರೂ ಉದ್ಯಾನವನದಲ್ಲೋ... ಜನ ಸಂದಣಿ ಇಲ್ಲದ ರಸ್ತೆಯಲ್ಲೋ... ಸ್ವಚ್ಛ ಗಾಳಿಯನ್ನು ಕುಡಿದು ನಡೆದಾಡುವ ಕ್ರಿಯೆ ಎಂದು. ಅಷ್ಟರಮಟ್ಟಿಗೆ ಅದು ಕನ್ನಡದ ಪದವಾಗಿ ಬಳಕೆಯಲ್ಲಿದೆ. 2004 ರಿಂದ ಕರೋನಾ ಮಾರಿ ಬಂದು ಕಾಡುವ ತನಕ ನಿರಂತರವಾಗಿ ನಾನು ಹರಿಹರ ಗುಡ್ಡಕ್ಕೆ ವಾಕಿಂಗ್ (ವಾಕಿಂಗ್ ಗೂ ಮಿಕ್ಕಿ talking ಇರುತ್ತಿತ್ತು) ಹೋಗುತ್ತಿದ್ದೆ. ಕರೋನಾ ನನ್ನನ್ನು ಮನೆಯಲ್ಲಿ ಹಿಡಿದಿಟ್ಟಿತ್ತು,  ಹಾಗಾಗಿ ಮನೆಯಲ್ಲಿ ವಾಕಿಂಗ್.... ನಂತರದಲ್ಲಿ ಹರಿಹರ ಗುಡ್ಡಕ್ಕೆ ವಾಕಿಂಗ್ ಶುರುವಾದರೂ... ನಿಯಮಿತವಾಗಿ ಹೋಗುತ್ತಿಲ್ಲ.. ಈಗ ಮನೆಯ ಹತ್ತಿರದ ಉದ್ಯಾನವನದಲ್ಲಿ ವಾಕಿಂಗ್ ಮಾಡುತ್ತೇನೆ. ಈಗೀಗ ವಾಕಿಂಗ್ ಮಾಡುವ ಜನ ಜಾಸ್ತಿಯಾಗುತ್ತಿದ್ದಾರೆ.... ಕೆಲವರು ಕಾಲ ಕಳೆಯಲು, ಕೆಲವರು ಆರೋಗ್ಯದ ದೃಷ್ಟಿಯಿಂದ, ಯುವಕ ಯುವತಿಯರು ತಮ್ಮ ದೇಹದ fitness ಗಾಗಿ, ಇನ್ನೂ ಕೆಲ ಅಗೋಚರ ಕಾರಣಗಳಿಗಾಗಿಯೂ ಇರಬಹುದು. ಲೋಕಾರೂಢಿಯಾಗಿ ಮಾತಾಡ್ತಾ... ಯಾವಾಗ ವಾಕಿಂಗ್ ಶುರು ಮಾಡಿದ್ದು ಅಂದಾಗ......" ಸುಮಾರು ನನಗೆ ಒಂದು ವರ್ಷವಾದಾಗಲಿಂದ ವಾಕಿಂಗ್ ಮಾಡುತ್ತಿದ್ದೇನೆ" ಎಂಬ ತಲೆಹರಟೆ / ತಮಾಷೆ ಉತ್ತರ ಕೊಟ್ಟಿದ್ದೇನೆ... ಹೌದಲ್ವಾ walking ನ ನಿಜಾರ್ಥದಲ್ಲಿ ಅದುವೇ ಸರಿ...  ಮಗುವಿನ ಮೊದಲ ಹೆಜ್ಜೆಯನ್ನು ಇಟ್ಟ ಕ್ಷಣ... ಅಪ್ಪ ಅಮ್ಮನಿಗೆ ಸಂಭ್ರಮ.. ಮಗುವನ್ನು ಅಪ್ಪಿ ಮುದ್ದಾಡುವ...

ಸುಖದ ಪರಿಕಲ್ಪನೆ

Image
  ಹೋದ ಗುರುವಾರ NIMHANS ನ ಅಂಗ ಸಂಸ್ಥೆಯಾದ ವಯೋಮಾನಸ ಸಂಜೀವನಿಯ ಸ್ಪೂರ್ತಿ ತಂಡದ.. ವಾರದ online ಕಾರ್ಯಕ್ರಮದಲ್ಲಿ ಮಾತನಾಡುವ ಅವಕಾಶವನ್ನು ಮಾಡಿಕೊಟ್ಟಿದ್ದರು ಶ್ರೀಮತಿ ರತ್ನಪ್ರಭಾ ಅವರು. ವಿಷಯ ಇಂದಿನ ನನ್ನ ಶೀರ್ಷಿಕೆಯೇ... ಸುಖದ ಪರಿಕಲ್ಪನೆ.  ಮೊದಲ ಹಂತದಲ್ಲಿಯೇ ಭಾಗಿಗಳಾಗಿದ್ದ ಜನರನ್ನು.. ಅವರ ದೃಷ್ಟಿಯಲ್ಲಿ.. ಸುಖ ಎಂದರೆ ಏನು? ಎಂಬ ಪ್ರಶ್ನೆಗೆ ಸಿಕ್ಕ ಉತ್ತರಗಳು ಹೀಗಿತ್ತು * ತೃಪ್ತಿಯಿಂದ ಇರುವುದು * ಆಸೆಯೇ ದುಃಖಕ್ಕೆ ಕಾರಣ * ನಮಗೆ ಬೇಕಾದ್ದು ಸಿಕ್ಕಾಗ * Acceptance.. ಒಪ್ಪಿಕೊಳ್ಳುವುದು * Balancing of life. ಹೊಂದಾಣಿಕೆ  * ಬೇರೆಯವರಿಗೆ ಸಂತೋಷ  ಹಂಚುವುದು * ಸಮಾಜ ಸೇವೆ * ಆರೋಗ್ಯ * ಕಷ್ಟವಿಲ್ಲದ್ದು.... ಸುಖ * ಶಾಂತಿ * ಖುಷಿ * ನೆಮ್ಮದಿ * ಚಿಂತೆ ಇಲ್ಲದ ಜೀವನ * ಸುಖವಾದ ಮರಣ * ಹೊಗಳಿಕೆ ಸಿಕ್ಕಾಗ * ಸಂಬಂಧಗಳು ಚೆನ್ನಾಗಿದ್ದಾಗ * ಗೆಲುವು / ಯಶಸ್ಸು * Expectations * ತಿನ್ಕೊಂಡು ಉಂಡ್ಕೊಂಡು    ಹಾಯಾಗಿರೋದು * ಬೆಚ್ಚನಾ ಮನೆಯಿರಲು..... ಸರ್ವಜ್ಞ ಸುಖ ಅನ್ನುವುದು... ಅವರವರ ಭಾವನೆ/ ಕಲ್ಪನೆ.... ಸಾಮಾನ್ಯವಾಗಿ ಅವರಿಗೆ ಆ ಸಮಯದಲ್ಲಿ ಕಷ್ಟ ಅನ್ನಿಸಿದ್ದು ಇಲ್ಲವಾದಾಗ ಅದು ಸುಖ.  ಮೇಲಿನ ಎಲ್ಲಾ ವಿಷಯಗಳನ್ನು ಸ್ವಲ್ಪ ಮಟ್ಟಿಗೆ ಒಳಗೊಂಡು ನನ್ನದೇ ಆದ ವಿಶ್ಲೇಷಣೆಯನ್ನು ಸೇರಿಸಿ, ಮಾತನಾಡಿ ಕಾರ್ಯಕ್ರಮ ಮುಗಿಸಿದೆ. ನಂತರ.. ನನ್ನ ಜೀವನದ ಒಂದು ಸಿಂಹಾವಲೋ...

ಅನಂತ ಸುಬ್ಬರಾಯರು

Image
  ಬೆಳಗಿನ ಜಾವ 5 ಘಂಟೆಯ ಸುಮಾರಿಗೆ ...ಬಕೆಟ್ ಗೆ ನೀರು ಬಿಡುವ ಶಬ್ದ...ಮೇಲಿಂದ ನೀರು ಸುರಿವ ಶಬ್ದ...ಕೇಳಿಸಿದರೆ.. ಸುಬ್ಬರಾಯರು ಊರಲ್ಲಿದ್ದಾರೆ, ಅವರ  ದಿನಚರಿ ಶುರುವಾಯಿತು ಎಂದು ಅರ್ಥ. ಇದಾದ ನಂತರ ಛಕ್ ಛಕ್ ಛಕ್....ಛಕ್ ಛಕ್ ಛಕ್ ಅಂತ ಲಯಬದ್ಧವಾಗಿ ಬಟ್ಟೆ  ಕಸಕುವ ಶೈಲಿ ಸುಬ್ಬರಾಯರ ಹೆಗ್ಗುರುತು. ಇನ್ನು ಅವರು ಬಟ್ಟೆ  ಒಗೆದು..ಪಂಚೆಗಳನ್ನು ಮಡಿಸಿ... ಕೈಯಿಂದ ತಟ್ಟಿ  ಮಟ್ಟಸಮವಾಗಿ ಒಣಗಲು ಹಾಕಿದ್ದನ್ನು ನೋಡಲು ಸೊಗಸು. ಶಿಸ್ತಿನ ಅಪರಾವತಾರ ಸುಬ್ಬರಾಯರು.  ಸುಬ್ಬರಾಯರು, ನಾವು ಶ್ರೀನಗರದಲ್ಲಿ ಬಾಡಿಗೆಗೆ ಇದ್ದ ಮನೆಯ ಮಾಲಿಕರು, ಅದಕ್ಕೂ ಹೆಚ್ಚು  ಅವರು ನಮ್ಮ ಹಿತೈಷಿಗಳು.   ನನ್ನ ಹೆಂಡತಿಯ ತವರು ಮನೆಯ ಹತ್ತಿರವೇ ಇದ್ದ ಸುಬ್ಬರಾಯರ ಬಗ್ಗೆ ಕೇಳಿ ತಿಳಿದಿದ್ದೆ. (ನಮ್ಮ ಮದುವೆಗೆ  ಬಂದಿದ್ದರೆಂದು ಗೊತ್ತು...ಆದರೆ ನೆನಪಿಲ್ಲ.   ಮದುವೆಯ Reception ನಲ್ಲಿ ನಾವಿಬ್ಬರೂ ಓಡಾಡಿಕೊಂಡು ಬಂದವರೊಡನೆ ಮಾತಾಡುತ್ತಿದ್ದದ್ದನ್ನು ಸುಬ್ಬರಾಯರು ನನಗೆ ಮೆಚ್ಚುಗೆ ಸೂಚಿಸಿದ್ದರು....ಈ ಮನೆಗೆಬಂದಮೇಲೆ...)    ತಮ್ಮ ಇಬ್ಬರು ಗಂಡು ಮಕ್ಕಳ ಜೊತೆ ಒಂದು ಸುತ್ತು ಹಾಗೂ ಅವರ ಹೆಂಡತಿ ಶಾಂತಮ್ಮ ಅವರ ಜೊತೆ ಒಂದು ಸುತ್ತು ವಾಕಿಂಗ್ ಪ್ರತಿದಿನ ಹೋಗುತ್ತಾರೆ..ತುಂಬಾ ಶಿಸ್ತಿನ ಮನುಷ್ಯ ಎಂದು.  ಅವರನ್ನು ಭೇಟಿ ಮಾಡುವ ಅವಕಾಶ  ಬಂದಿದ್ದು...ಅವರ ಮನ...

ಬಾಲ್ಯದ ಪ್ರಸಂಗಗಳು

Image
  ಮೊನ್ನೆ  ಶನಿವಾರ ಅಶಕ್ತ ಪೋಷಕ ಸಭಾದಲ್ಲಿ ಎಂಟನೆಯ“ಯೋಗ ದಿನಾಚರಣೆ” ಹಾಗೂ ಒಂದಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.  ಅಲ್ಲಿನ ನಿವಾಸಿಗಳು,  ಎಲ್ಲರೂ ಹಿರಿಯ ನಾಗರಿಕರು.  ಆದರೆ ಈ ಕಾರ್ಯಕ್ರಮಕ್ಕೆ ತಯಾರಿ ಮಾಡುವಾಗಿನ ಉತ್ಸಾಹ ಎಳೆಯರನ್ನು ಮೀರಿಸುತ್ತಿತ್ತು. ಒಂದು ಮಾತಿದೆ ವಯಸ್ಸಾದಂತೆ... ಮುದುಕರು ಮಕ್ಕಳಾಗುತ್ತಾರೆ ಎಂದು.  ಇದು ಅಕ್ಷರ ಸಹ ಕಣ್ಣಿಗೆ ಕಟ್ಟುವಂತೆ ಕಾಣುತ್ತಿತ್ತು. ತೊಡುವ ಬಟ್ಟೆ, ಅಲಂಕಾರ, ಅವರು ಮಾಡುವ ಕಾರ್ಯಕ್ರಮಕ್ಕೆ ತಕ್ಕ ಹಾಗೆ ಹೊಂದಿಸಿಕೊಳ್ಳುವ ಉತ್ಸಾಹ... ಅದು ಸರಿ ಇದೆಯೇ ಎಂದು ನಮ್ಮಗಳಿಂದ ತಿಳಿದುಕೊಳ್ಳುವ ಕಾತರ.... ಚಟುವಟಿಕೆಯಿಂದ ಓಡಾಡುವ ಅವರುಗಳನ್ನು ನೋಡಿ ಸಂಭ್ರಮ ಪಟ್ಟವರು ನಮ್ಮ ತಂಡದವರು.  ಅವರುಗಳ ಈ ಕ್ರಿಯಾಶೀಲತೆ ನನ್ನನ್ನು ನನ್ನ ಬಾಲ್ಯಕ್ಕೆ ಎಳೆದೊಯ್ಯಿತು.  ನನಗೆ ಇನ್ನೂ ನೆನಪಿದೆ...." ಸ್ವರ್ಗದಲ್ಲಿ ಎಲೆಕ್ಷನ್" ಎನ್ನುವ ನಾಟಕ... ಅದರಲ್ಲಿ ನಾರದನ ಪಾತ್ರ ನನ್ನದು. ಪಂಚೆ, ಶಲ್ಯ, ಜನಿವಾರ, ತಲೆಯ ಜುಟ್ಟು  ಅದಕ್ಕೆ ಹೂ, ಎಲ್ಲವೂ ಹೊಂದಿಸಿಯಾಯ್ತು.  ಚಿಟಿಕೆಯನ್ನೂ ಹೊಂದಿಸಿಯಾಯ್ತು ಆದರೆ.. ನಾರದನ ಕೈಯಲ್ಲಿನ ವೀಣೆ ಸಿಗುವುದು ಎಲ್ಲಿ?.... ನನ್ನ ಹಳ್ಳಿ ದೊಡ್ಡ ಜಾಲದಲ್ಲಿ. ಉತ್ಸಾಹದ ಮೇಲೆ ನೀರು ಚೆಲ್ಲಿದಂತಾಯ್ತು.. ಇನ್ನೇನು ಅಳುವುದೊಂದೇಬಾಕಿ... ಆಗ ಬಂದ ಸಲಹೆ.. ನೇಯ್ಗೆ ಅಜ್ಜನ ಬಳಿ ಇದ್ದ ಏಕತಾರಿ.  ಅದನ್ನೇ ವ...

ಬಾಲ್ಯದ ಸೊಗಸು

Image
ಬೆಳಿಗ್ಗೆ ವಾಕಿಂಗ್ ಹೋದಾಗ ನಡೆದ ಒಂದು ಪ್ರಸಂಗ... ಗಂಡ ಹೆಂಡತಿಯ ಜೋಡಿ ಒಟ್ಟಾಗಿ ಸ್ಕೂಟರ್ ಮೇಲೆ ಬಂದು... ಪಾರ್ಕಿನಲ್ಲಿ ತಮ್ಮಷ್ಟಕ್ಕೆ ತಾವು ಬೇರೆ ಬೇರೆಯಾಗಿ ವಾಕಿಂಗ್ ಮಾಡುತ್ತಿದ್ದರು. ತಕ್ಕಮಟ್ಟಿಗೆ ಪರಿಚಯವಿದ್ದ ಗಂಡನೊಡನೆ ಲೋಕಾ ರೂಢಿಯಾಗಿ ಮಾತನಾಡಿದಾಗ ಹೇಳಿದ್ದು.." ಅವರು ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡಿತಾರೆ... ಅವರ ಜೊತೆ ನನ್ನ ವಾಕಿಂಗು ಸರಿಯಾಗಲ್ಲ". ಹೌದು ತಕ್ಕಮಟ್ಟಿಗೆ ಇದು ನನ್ನ ಅನುಭವವೂ ಹೌದು.. ಒಂದೇ ವ್ಯತ್ಯಾಸ ಹೇಗೋ ಜೊತೆಯಲ್ಲಿ ನಡೆಯುತ್ತೇನೆ (ವಾಕಿಂಗ್ ಹೋಗುವುದು ಅಪರೂಪ ಆದ್ದರಿಂದ ಅದು ಅಷ್ಟಾಗಿ ಪ್ರಾಮುಖ್ಯತೆ ಪಡೆದಿಲ್ಲ.) ಹೆಜ್ಜೆ ಮೇಲೆ ಹೆಜ್ಜೆ ಇಟ್ಟು.. ಅನ್ನುವ ಪದ ಪುಂಜ ಮತ್ತೆ ಮತ್ತೆ ನನ್ನ ತಲೆಯಲ್ಲಿ ಓಡಿತು.. ತಕ್ಷಣ ಅದರ ಕಾರಣವೂ ತಿಳಿಯಿತು... ನೆನಪಿಗೆ ಬಂದದ್ದು ಆ ಶಿಶು ಗೀತೆ... ಅಥವಾ ಜಾನಪದ ಹಾಡು ಎನ್ನಲೇ?  ಇದೋ ಕೆಳಗಿದೆ ಆ ಸಾಲುಗಳು... ಸಾಧ್ಯವಾದರೆ ಪದ್ಯದ ಧಾಟಿಯಲ್ಲಿ ಓದುವ ಪ್ರಯತ್ನ ಮಾಡಿ... ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆದಳು ಸೀತೆ ಸೀತೆಕಾಲೊಳಗೆ ಪದ್ಮ ರೇಖೆ ನೋಡೆ ಪದ್ಮ ರೇಖೆಯೊಳಗೆ ಚಿನ್ನ ಮೊಳ ನೋಡೆ ಚಿನ್ನ ಮೊಳದೊಳಗೆ ತಿಳಿ ನೀರ್ ನೋಡೆ ತಿಳಿ ನೀರು ಕುಡಿಯಕ್ ಬಂತು ಆನೆಯ ನೋಡೆ ಆನೆಯ ಮೇಲೆ ಅಂಬಾರಿ ನೋಡೆ ಅಂಬಾರಿಯೊಳಗೆ ಅರಸನ್ ಮಕ್ಕಳ್ ನೋಡೆ ಅರಸನ ಮಕ್ಕಳ ಕೈಲಿ ಬೆಳ್ಳಿ ಬಟ್ಲು ನೋಡೇ ಬೆಳ್ಳಿ ಬಟ್ಟಲೊಳಗೆ ಹಾಲು ತುಪ್ಪ ನೋಡೆ ಹಾಲು ತುಪ್ಪ ಕುಡಿಯಕ್ ಬಂತು ಮಾಳ್ ಬೆ...

ಯಾಕೋ ಕಾಣೆ... ಒಂದು ಆತ್ಮಾವಲೋಕನ

Image
  ಯಾಕೋ ಕಾಣೆ ರುದ್ರ ವೀಣೆ ಮಿಡಿಯುತಿರುವುದು ಜೀವದಾಣೆಯಂತೆ ತಾನೇ ನುಡಿಯುತಿರುವುದು.... ದ.ರಾ. ಬೇಂದ್ರೆ ಯವರ ಈ ಕವನದ ಸಾಲುಗಳು ನನ್ನ ಮನಸ್ಸಿನಲ್ಲಾದ ತುಮುಲದ ಪ್ರತೀಕ. ಈ ತುಮುಲವನ್ನು ಅಕ್ಷರ ರೂಪದಲ್ಲಿ ಇಳಿಸಲು ಸರಿಯಾದ ಮಾರ್ಗವೇ ಕಾಣಲಿಲ್ಲ.... ಇನ್ನೂ ಸ್ಪಷ್ಟತೆ ಬಂದಿಲ್ಲ.... ಹಾಗಂತ ಸುಮ್ಮನಿರಲು ಮನಸ್ಸು ಒಪ್ಪುತ್ತಿಲ್ಲ... ಹಾಗಾಗಿ ಈ ಪ್ರಯತ್ನ ಜಾರಿಯಲ್ಲಿದೆ. ಮನಸ್ಸಿನಲ್ಲಿ ಏನೋ ಗೊಂದಲ... ಯೋಚನೆಗಳು ಎಲ್ಲ ಕಲಸು ಮೇಲೋಗರ. ಇದ್ದಕ್ಕಿದ್ದಂತೆ ಮರೆಗುಳಿತನ, ಅಸಮಾಧಾನ, ಕೆಲಸಲ ಕೋಪ.. ಶಕ್ತಿ ಕುಂದಿತೇನೋ ಅನ್ನುವ ಭಾವ, ಜಡತ್ವ, ಸೋಮಾರಿತನ, ಕೆಲಸದಲ್ಲಿ ಅಚ್ಚುಕಟ್ಟಿನ ಕೊರತೆ, ಉತ್ಸಾಹದ ಕೊರತೆ... ಏನು ಮಾಡಲೂ ತೋಚದು...  ಓದಲು ಕುಳಿತಾಗ ಏಕಾಗ್ರತೆಯ ಕೊರತೆ... ಅಬ್ಬಬ್ಬಾ ಎಷ್ಟೊಂದು ನ್ಯೂನತೆಗಳು... ಯಾಕೋ ಕಾಣೆ ನನ್ನ ಸೋದರ ಮಾವ ರಾಮಣ್ಣಯ್ಯನ ನೆನಪು ಹಾಗೂ ಚಿತ್ರಣ ನನ್ನ ಕಣ್ಣ ಮುಂದೆ....  ಇವೆಲ್ಲವನ್ನೂ ಗುರುತಿಸಿಕೊಳ್ಳಲು ಸಾಧ್ಯವಾದದ್ದು ನನ್ನಲ್ಲಿದ್ದ ಆಪ್ತ ಸಮಾಲೋಚಕ. ಇದು ಆಪ್ತ ಸಮಾಲೋಚಕನಾಗಿ ನನಗೆ ಸಿಕ್ಕ ಬಳುವಳಿ... ಹಾಗಂತ ಏನೂ ಕೆಲಸವನ್ನೇ ಮಾಡಿಲ್ಲವಾ ಎಂದು ಯೋಚಿಸಿದಾಗ ನಾನು ಒಪ್ಪಿಕೊಂಡ ಕೆಲಸಗಳು ಎಲ್ಲಾ ನಡೆದಿವೆ... ವಿಶ್ಲೇಷಿಸಿದಾಗ ಅದಕ್ಕೆ ಬೇಕಾದಷ್ಟು ತಯಾರಿ.... ಒಳಗೊಳ್ಳುವಿಕೆ ಕಡಿಮೆ... ಹೇಗೋ ಸಂತೆಯ ಸಮಯಕ್ಕೆ 3 ಮೊಳ ನೇಯ್ದಂತೆ ಸರಿದೂಗಿಸಿದ್ದೇನೆ. ಈ ಎಲ್ಲ ನ್ಯೂನ್ಯತೆಗೆ ಕಾರಣಗಳೇನು ಎ...

ನಾವು ಸ್ವಾರ್ಥಿ ಆಗಬೇಕೇ?

Image
  ಸರ್ವೇ ಜನಾಃ ಸುಖಿನೋ ಭವಂತು//ಲೋಕಾ ಸಮಸ್ತಾಃ  ಸುಖಿನೋಭವಂತು//  ಎನ್ನುವ ಮೂಲಭೂತ ಚಿಂತನೆ ಇರುವ ಧರ್ಮದ ಭಾಗವಾದ ನಮಗೆ... ಸ್ವಾರ್ಥಿ ಆಗಬೇಕೇ ಎನ್ನುವ ಪ್ರಶ್ನೆ ಅಸಮಂಜಸ ಎನಿಸಿತೇ? ಮೊದಲಿಗೆ ಸ್ವಾರ್ಥ ಪದದ ಅರ್ಥ... ತಾನು, ತನ್ನದು ..ತನ್ನ ಬಗ್ಗೆ ಯೋಚಿಸುವುದು....                             ಈ ಭಾವ ಇಲ್ಲದಿದ್ದರೆ... ಮನುಷ್ಯನ ಜೀವನಕ್ಕೆ ಗುರಿಯೇ ಇಲ್ಲದಂತಾಗುತ್ತದೆ... ಅಸ್ತಿತ್ವದ ಪ್ರಶ್ನೆ ಎಂದು ನನ್ನ ಅನಿಸಿಕೆ... ನಾನು ಸಂತೋಷದಿಂದಿದ್ದರೆ... ಅದನ್ನು ಬೇರೆಯವರಿಗೆ ಹಂಚಲು ಸಾಧ್ಯ... ಇದರ ಇನ್ನೊಂದು ಮುಖ ನಿಸ್ವಾರ್ಥ....ತನ್ನದಲ್ಲದ... ಪರರ ಚಿಂತನೆ.  ಈ ಶ್ಲೋಕವನ್ನು ಗಮನಿಸಿ.. ಪರೋಪಕಾರಾಯ ಫಲಂತಿ ವೃಕ್ಷಃ ಪರೋಪಕಾರಾಯ ವಹಂತಿ ನದ್ಯಃ ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮಿದಂ ಶರೀರಂ// ಇದರ ಚಿಂತನೆ ಏನೋ ಸರಿ ಇದೆ... ಆದರೆ ಈಗಿನ ಕಾಲಮಾನದ ಮನುಷ್ಯನ ಜೀವನಶೈಲಿಗೆ ಹೊಂದಿಕೆಯಾಗುವುದಿಲ್ಲ.... ಎಲ್ಲವನ್ನೂ ಹಣದಿಂದಲೇ ಅಳೆಯುವ ಇಂದಿನ ಕಾಲಘಟ್ಟದಲ್ಲಿ ಹಣ್ಣು ಕೊಡುವ ಮರ / ನೆರಳು ಕೊಡುವ ಮರ ಯಾವುದೇ ಆಗಲಿ.. ತನ್ನ ಅಭಿವೃದ್ಧಿಗಾಗಿ ನಾಶ ಮಾಡುತ್ತಾನೆ. ಹರಿಯುವ ನದಿಯ ನೀರನ್ನು.. ಕೊಳಕು ಮಾಡುತ್ತಾನೆ... ಹಾಲು ಕೊಡುವ ಹಸುವನ್ನು ಎಷ್ಟರಮಟ್ಟಿಗೆ ಶೋಷಣೆ ಮಾಡುತ್ತಾನೆಂದರೆ... ಅದರ ಕರುವಿಗೂ ಹಾಲು ಸಿ...