Posts

ಭಗವದ್ಗೀತೆ - ಗೀತೋತ್ಸವ

Image
ಭಗವದ್ಗೀತೆಯ ಪ್ರಭಾವ ವಿಶ್ವದೆಲ್ಲೆಡೆ ಪಸರಿಸುತ್ತಿದೆ. ಗೀತಾ ಅಭಿಯಾನಗಳು ನಿರಂತರವಾಗಿ ಎಲ್ಲೆಲ್ಲೂ ನಡೆಯುತ್ತಿವೆ. ಭಗವದ್ಗೀತಾ ಅಭಿಯಾನ- 2025 ಇನ್ನೇನು ಸಂಪನ್ನಗೊಳ್ಳಲಿದೆ. ಉಡುಪಿಯಲ್ಲಿ ನಡೆದ ಒಂದು ಲಕ್ಷ ಜನರ ಭಗವದ್ಗೀತಾ  ಸಾಮೂಹಿಕ ಕಂಠಪಾಠ, ವಿಶಿಷ್ಟವಾಗಿತ್ತು. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವತಃ ಭಾಗವಹಿಸಿದ್ದು ಕಾರ್ಯಕ್ರಮಕ್ಕೆ  ಮೆರುಗು ನೀಡಿತ್ತು . ಈ ವರ್ಷದ ಭಗವದ್ಗೀತಾ ಅಭಿಯಾನದಲ್ಲಿ.. ವಿಶೇಷವಾಗಿ ಶಾಲಾ ಮಕ್ಕಳಿಗೆ ಭಗವದ್ಗೀತೆಯನ್ನು ಪರಿಚಯಿಸಿ, ಅದರ ಬಗ್ಗೆ ಆಸ್ತೆ ಮೂಡಿಸಲು  ಒತ್ತುಕೊಡಲಾಗಿತ್ತು. ಇದರ ಅಂಗವಾಗಿ, ನಾನು ಒಡನಾಟ ಇಟ್ಟುಕೊಂಡಿರುವ  "ಸ್ನೇಹ ಸೇವಾ ಟ್ರಸ್ಟ್" ಈ ವರ್ಷ ಪ್ರೌಢಶಾಲೆಯ ಮಕ್ಕಳಿಗೆ ಭಗವದ್ಗೀತೆ ಸ್ಪರ್ಧೆ “ ಗೀತೋತ್ಸವ” ಹೆಸರಿನಲ್ಲಿ ನಡೆಸಿ 19.12.2025 ರಂದು ಸಮಾರೋಪ ಕಾರ್ಯಕ್ರಮವನ್ನು  ಆಯೋಜಿಸಲಾಗಿತ್ತು. ವಾಸವಿ ಕನ್ವೆನ್ಷನ್ ಹಾಲಿನಲ್ಲಿ , ಮಧ್ಯಾಹ್ನ ಸುಮಾರು 3 ಘಂಟೆಗೆ ಸೇರಿದ ಕಾರ್ಯಕರ್ತರು, ಸಮರೋಪಾದಿಯಲ್ಲಿ ಮಾಡಿದ, ಪ್ರಾಂಗಣದ ಅಲಂಕಾರ, ಮುಖ್ಯ ವೇದಿಕೆ, ಬಹುಮಾನ ವಿತರಣೆಗಾಗಿ ಮತ್ತೆ ಮೂರು ವೇದಿಕೆಗಳು, ಅತಿಥಿಗಳಿಗೆ ಗೌರವ ಸಮರ್ಪಣೆಗೆ ಬೇಕಾದ ಸಲಕರಣೆಗಳು ಹಾಗೂ ಬಹುಮಾನಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳುವ ಕೆಲಸಗಳು,  ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡಿದ ಸಂಭ್ರಮವನ್ನು  ನೋಡುತ್ತಾ ನಾನೂ ಸಂಭ್ರಮಿಸಿದ್ದ...

ದಾಂಪತ್ಯ - ವೈಪರೀತ್ಯ

Image
  ದಾಂಪತ್ಯ - ಸಾಂಗತ್ಯ  ಲೇಖನವನ್ನು ಓದಿದ ನಂತರ ಬಂದ ಅಭಿಪ್ರಾಯ...." ಯಾಕೋ ಪೂರ್ಣ ಎನಿಸಲಿಲ್ಲ.." ಎಂದು. " ಪೂರ್ಣಮದಃ.. ಪೂರ್ಣಮಿದಂ.. ." ಶ್ಲೋಕದಂತೆ ಪೂರ್ಣ ಎಂಬುದು ಅನಂತತೆ. ಪೂರ್ಣಕ್ಕೆ ಪೂರ್ಣ ಸೇರಿಸಿದರೆ ಮತ್ತದು ಪೂರ್ಣವೇ,  ಪೂರ್ಣದಿಂದ ಪೂರ್ಣ ತೆಗೆದರೆ ಅದೂ ಪೂರ್ಣವೇ... ಅದೇ ಇಂಗ್ಲಿಷಿನ infinity. ದಾಂಪತ್ಯದ ಬಗೆಗಿನ ವಿಷಯಗಳು.. ಹಾಗೇ ಅಕ್ಷಯ ಪಾತ್ರೆ ಇದ್ದಂತೆ. ಮೊಗೆದಷ್ಟೂ ಕಮ್ಮಿಯಾಗದ.. ಮತ್ತೆ ತುಂಬಿಕೊಳ್ಳುವ ತರಹ. ಹಾಗಾಗಿ ನನ್ನ ಓದುಗ ಮಿತ್ರರ ಅಭಿಪ್ರಾಯವನ್ನು ಸಂಪೂರ್ಣ ಗೌರವಿಸಿ...  ಪೂರ್ಣಮಾಡಲು ಯೋಚಿಸಿದೆ. ನನ್ನ ವೈಯುಕ್ತಿಕ ಅನುಭವ,  ಆಪ್ತಸಮಾಲೋಚನೆಯ ಸಮಯ, ಹಾಗೂ ಒಡನಾಡಿದ ದಂಪತಿಗಳ ಅಭಿಪ್ರಾಯಗಳನ್ನು, ಮತ್ತೊಮ್ಮೆ ಮೆಲುಕು ಹಾಕಿದೆ.   ಮತ್ತೆ  ಲೇಖನದ ಶೀರ್ಷಿಕೆಯನ್ನು ಓದಿದಾಗ... ಸಾಂಗತ್ಯಕ್ಕೆ ಸೀಮಿತವಾದ ಬರಹವಾದ ಕಾರಣ ಕೊರತೆ ಇರಬಹುದು ಎಂದು ಗಮನಿಸಿ.. ಹೊಸ ಶೀರ್ಷಿಕೆ ಬರೆದೆ.. ದಾಂಪತ್ಯ - ವೈಪರೀತ್ಯ.. ಅದೇ ಈ ಲೇಖನ. ಗಂಡ ಹೆಂಡತಿ ಬದುಕಿನ ಬಂಡಿಗೆ ಎರಡು ಚಕ್ರಗಳಿದ್ದಂತೆ. ಯಾವ ಚಕ್ರ ಹಾಳಾದರೂ ಬಂಡಿಯ ಓಟ ಕುಂಠಿತವಾಗುತ್ತದೆ. ಚಕ್ರ ಹಾಳಾಗಲು ನಾನಾ ಕಾರಣಗಳು... ಅಹಮಿಕೆ,  ಅನುಮಾನ, ಅಸಮಾಧಾನ, ಅತೃಪ್ತಿ, ಅಸೂಯೆ, ಅಗಲಿಕೆ, ತಾರತಮ್ಯ, ಸುಳ್ಳು, ಸ್ವತ್ವ / ಸ್ವಾಮಿತ್ವ  (posessiveness)..... ಹೀಗೆ ನೂರಾರು. ಹಣಕಾಸಿನ ವಿಚಾರದಲ್ಲಂತೂ ಗಂ...

ದಾಂಪತ್ಯ - ಸಾಂಗತ್ಯ

Image
  ಮನೆಯ ಹತ್ತಿರದ ಉದ್ಯಾನವನಕ್ಕೆ ಬೆಳಗಿನ ವಾಯು ವಿಹಾರಕ್ಕೆ ಹೋಗಲು ಪ್ರಾರಂಭ ಮಾಡಿ ಸುಮಾರು ಒಂದುವರೆ ವರ್ಷ ಆಗಿರಬಹುದು. ಎಲ್ಲ ಹೊಸಮುಖಗಳು, ಮಾತನಾಡಲು ಯಾರು ಜೊತೆ ಇಲ್ಲ.. ಹಾಗಾಗಿ ನನ್ನ ಗಮನ ಸುತ್ತಮುತ್ತ ನಡೆದಾಡುತ್ತಿರುವ ಜನಗಳ ಕಡೆಗೆ. ನಿಧಾನವಾಗಿ ಜನಗಳನ್ನು ಪರಿಚಯ ಮಾಡಿಕೊಳ್ಳುತ್ತಾ ಬಂದೆ.  ಹೀಗಿರುವಾಗ ಕಂಡದ್ದೆ ಒಂದು ಜೋಡಿ..( ಕ್ರೌಂಚ ಪಕ್ಷಿಗಳು ಎನ್ನಲೇ?) ಸಾಮಾನ್ಯವಾಗಿ ಇವರಿಬ್ಬರೂ ಮಾತನಾಡಿಕೊಂಡು ಸುತ್ತು ಹಾಕುತ್ತಿದ್ದದ್ದು... ಬೇರೆಯವರ ಜೊತೆ ಬೆರೆಯುವುದಿಲ್ಲವಾ? ಎಂಬ ಅನುಮಾನ ಕಾಡಿದ್ದು ಉಂಟು. ಆದರೆ ಅದು ಸತ್ಯವಲ್ಲ... ಯಾರಾದರೂ ಸಿಕ್ಕಾಗ ಅವರ ಜೊತೆಯೂ ನಾಲ್ಕು ಹೆಜ್ಜೆ ಹಾಕಿ.. ಮತ್ತೆ ಇಬ್ಬರು ಒಂದಾಗಿ ನಡೆದಾಡುವುದನ್ನು ಗಮನಿಸಿದೆ. ಕಾಲಕ್ರಮೇಣ ಅವರ ಪರಿಚಯವೂ ಆಯಿತು. ಅವರೇ ಲಕ್ಷ್ಮೀನಾರಾಯಣ ಮತ್ತು ಜಯಶ್ರೀ  ದಂಪತಿ.  ಮಾತಿನ ಮಧ್ಯೆ ಒಂದು ದಿನ ಲಕ್ಷ್ಮೀನಾರಾಯಣ ಅವರು  "ನಮ್ಮತ್ತೆಗೆ ಮಾತು ಕೊಟ್ಟಿದ್ದೇನೆ... ನಿಮ್ಮ ಮಗಳ ಜೊತೆ ಯಾವಾಗಲೂ ಇರುತ್ತೇನೆ" ಎಂದು ಹೇಳಿದರು.. ಸ್ವಲ್ಪ ತಮಾಷೆ ಮಾಡಿ ಸುಮ್ಮನಾದೆ. ಅವರ ಆ ಮಾತು ನನಗೆ ಹಿಡಿಸಿತು.   ಸಾಕಷ್ಟು ನನ್ನ ಪರಿಚಯದ ದಂಪತಿಗಳೊಡನೆ ಸಾಮಾನ್ಯವಾಗಿ ಹಾಗೂ ನನ್ನ ಆಪ್ತ ಸಮಾಲೋಚನೆಯ ಭಾಗವಾಗಿ ಮಾತನಾಡಿದ್ದೇನೆ. ದಾಂಪತ್ಯದ ವಿವಿಧ ಮುಖಗಳ ಪ್ರಸ್ತಾಪ ಮಾಡಿ  ಚರ್ಚಿಸಿದ್ದೇನೆ. ಹಾಗಾಗಿ ಇವರ ಬಳಿಯೂ ಮಾತನಾಡಲು ಬಯಸಿ ಅವರಲ್ಲಿ...

ಹುಟ್ಟಿದ ಹಬ್ಬ

Image
  ಸಾಮಾಜಿಕ ಜಾಲತಾಣವೇ ಸಂಪರ್ಕ ಮಾರ್ಗವಾಗಿ ಮಂಚೂಣಿಯಲ್ಲಿರುವ, ಇಂದಿನ ಕಾಲಘಟ್ಟದಲ್ಲಿ, ಯಾವುದೇ ಸಂದರ್ಭವಿರಲಿ ಪ್ರತಿಕ್ರಿಯೆಗಳು, ಸ್ಪಂದನೆಗಳು... ಯಾಂತ್ರಿಕವಾಗುತ್ತಿವೆ..   ಅದರಲ್ಲೂ ಗುಂಪುಗಳಲ್ಲಿ ವಿನಿಮಯವಾಗುವ ವಿಚಾರಕ್ಕಂತು.. ಇದು ಇನ್ನೂ ಹೆಚ್ಚು ಅನ್ವಯಿಸುತ್ತದೆ. ಯಾರಾದರೂ ಸತ್ತ ಸುದ್ದಿ ಯನ್ನು ನೋಡಿದ ತಕ್ಷಣ, ಸತ್ತವರು ಯಾರು ಎಂದು ತಿಳಿಯದಿದ್ದರೂ ಸಹ.. RIP, ಓಂ ಶಾಂತಿ,  🙏🏼  🌹 ಹೀಗೆ ಬರೆದರೆ ಮುಗೀತು. ಇನ್ನು ಹುಟ್ಟುಹಬ್ಬಕ್ಕಂತು HBD ಎಂದು ಬರೆದು ಕೈ ತೊಳೆದು ಕೊಂಡರಾಯಿತು. ಅದು ಒಂದು ಸಾಮಾಜಿಕ ಜವಾಬ್ದಾರಿಯೇನೋ... ಅದನ್ನು ನಿರ್ವಹಿಸದಿದ್ದರೆ ಅಪರಾಧವೇನೋ ಎನ್ನುವ ರೀತಿಯಲ್ಲಿ ಮಾಡುವುದು. ಇನ್ನು ಕೆಲವರು ಅದನ್ನು forwarded message ಮೂಲಕ ಮಾಡುತ್ತಾರೆ. ಇದೆಲ್ಲ  ಗಮನಿಸಿದಾಗ.. ಭಾವನೆಯೇ ಕಣ್ಮರೆಯಾಗಿದೆಯೇನೋ ಅನಿಸುತ್ತದೆ. ಇದೇ ಸಾಮಾಜಿಕ ಜಾಲತಾಣದಲ್ಲಿ ನನಗೂ ಇತ್ತೀಚೆಗೆ ಜನ್ಮದಿನದ ಶುಭಾಶಯಗಳ ಸುರಿಮಳೆ ಯಾಗುತ್ತದೆ, ನಿಜ ಹೇಳಲೇ... ಖುಷಿಯೂ ಆಗುತ್ತದೆ... ಎಷ್ಟೊಂದು ಜನ ಯಾಂತ್ರಿಕವಾಗಿಯಾದರೂ ನನ್ನನ್ನು ನೆನೆಸಿಕೊಂಡಿದ್ದಾರೆ ಎಂದು. ಹುಟ್ಟು ಹಬ್ಬದ ಆಚರಣೆ, ಚಿಕ್ಕಂದಿನಲ್ಲಿ ಕಂಡು ಕೇಳರಿಯದ ಸಂಗತಿ.  ನನಗೆ ಎರಡು ಹುಟ್ಟಿದ ದಿನಾಂಕಗಳಿವೆ. ಒಂದು ನಾನು ನಂಬಿರುವ ಜಾತಕದಲ್ಲಿ ಇರುವ 30.03.1948... ಎರಡನೆಯದು ನನ್ನ ಎಲ್ಲ ದಾಖಲಾತಿಗಳಲ್ಲಿ ಇರುವ,04.05.1947. ಈ ಎರ...

ವಯಸ್ಸು - ಒಂದು ಅಂಕಿ.. ಅಷ್ಟೇ

Image
ಹೋದ ಶನಿವಾರ, ಒಂದು ಹಿರಿಯ ನಾಗರೀಕರ ಗುಂಪಿನೊಡನೆ ಬೆರೆಯುವ ಅವಕಾಶ ಸಿಕ್ಕಿತ್ತು. ಈ ಗುಂಪಿನ ಸಾಮಾನ್ಯ ಅಂಶ... ಎಲ್ಲರೂ Geological Survey of India - ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯ ನಿವೃತ್ತ ನೌಕರರು.  ವರ್ಷಕ್ಕೆ ಎರಡು ಬಾರಿ ಎಲ್ಲರೂ ಸೇರಿ ಸಂತೋಷಪಡುವ / ಹಳೆಯ ನೆನಪುಗಳನ್ನು ನವೀಕರಿಸುವ, ಹಾಗೂ ವಿಚಾರವಿನಿಮಯ ಮಾಡಿಕೊಳ್ಳುವುದರ ಜೊತೆಗೆ ಪುಷ್ಕಳ ಭೋಜನದೊಂದಿಗೆ ಕಾರ್ಯಕ್ರಮ ಮುಗಿಸುವ ಪರಿ ಪಾಠ ಇಟ್ಟುಕೊಂಡಿರುವವರು. ನಾನು ಆ ಜಾಗವನ್ನು ಪ್ರವೇಶಿಸಿದಾಗ, ಅವರವರದೇ ಗುಂಪುಗಳಲ್ಲಿ ಮಾತನಾಡುತ್ತಿದ್ದದ್ದು ಕಾಣಿಸಿತು. ಇದು ನಮ್ಮ ಶಹಾಬಾದ್ ಗೆಳೆಯರ ಬಳಗದ ಕಾರ್ಯಕ್ರಮವನ್ನು ನೆನಪಿಸಿತು.  ಅಶಕ್ತ ಪೋಷಕ ಸಭಾದಲ್ಲಿನ ಹಿರಿಯ ನಾಗರೀಕರೊಡನೆ  ಒಡನಾಟ ನನಗೆ  ಸುಮಾರು ಹತ್ತು ವರ್ಷಗಳಿಂದ, ವಾರಕ್ಕೆ ಎರಡು ಬಾರಿ ದೊರಕಿದೆ. ಯಾವಾಗಲೂ ಭೇಟಿ ಮಾಡುವುದರಿಂದ ಅದರಲ್ಲಿ ವಿಶೇಷತೆ ಎದ್ದು ಕಾಣುವುದಿಲ್ಲ, ಮನೆ ಮಂದಿಯೊಡನೆ ಬೆರೆತು ವಾಡಿಕೆಯಂತೆ ಮಾತನಾಡುವ ಅನುಭವ ಅದು. ಆದರೆ ಹೊಸ ಗುಂಪುಗಳೊಡನೆ ಮಾತನಾಡುವಾಗ ಅವರ ಆಸಕ್ತಿ, ಅಭಿಲಾಷೆಗಳನ್ನು, ತಕ್ಕಮಟ್ಟಿಗಾದರೂ ಸರಿದೂಗಿಸುವ ಪ್ರಯತ್ನಮಾಡ ಬೇಕಲ್ಲ. ಹಾಗಾಗಿ ಸಾಮಾನ್ಯವಾಗಿ, ಎಲ್ಲಿ ಮಾತಾಡಬೇಕಾದರೂ ಸ್ವಲ್ಪ ಪೂರ್ವ ತಯಾರಿಯನ್ನು, ಅದರಲ್ಲೂ ಪ್ರಾರಂಭದ ಸಾಲುಗಳ ಆಯ್ಕೆಯ ಬಗ್ಗೆ ಸ್ವಲ್ಪ ಮುತುವರ್ಜಿ ವಹಿಸುತ್ತೇನೆ.  ಆದರೆ ಇಲ್ಲಿಗೆ ಬಂದಾಗ  ನಾಮಫಲಕ ದಲ್...

ತುಳಸಿ ತೋಟದಲ್ಲಿ.. ತುರಿಕೆ ಸೊಪ್ಪು

Image
  ಸೂಪರ್ ಮಾರ್ಕೆಟ್ ನಲ್ಲಿ ಗೋಡಂಬಿಗಾಗಿ ಹುಡುಕುತ್ತಿದ್ದೆ,  "ನಮಸ್ಕಾರ ಸರ್", ಅಂದದ್ದು ಕೇಳಿ ತಿರುಗಿ ನೋಡಿದರೆ ಮಧ್ಯ ವಯಸ್ಸಿನ ಒಬ್ಬ ಹೆಣ್ಣು ಮಗಳು. ಪ್ರತಿ ನಮಸ್ಕಾರ ಮಾಡಿದೆ, ಆದರೆ  ಯಾರೆಂದು ಗೊತ್ತಾಗಲಿಲ್ಲ. ನೆನಪಾಗ್ಲಿಲ್ವಾ ಸರ್, ಅಂತ ತಮಾಷೆಯಾಗಿ ಮಾತಾಡಿದ್ದು ಗಮನಿಸಿದರೆ, ಎಲ್ಲೋ ತುಂಬಾ ಪರಿಚಯ ಇರಬೇಕು ಅನ್ನಿಸ್ತು.. ಆದರೆ ಹೊಳೀಲಿಲ್ಲ... ತುಳಸಿ ತೋಟದಲ್ಲಿ.. ತುರಿಕೆ ಸೊಪ್ಪು.. ನೆನಪಿದೆಯಾ ಸರ್.... ಎಂದಾಗ.... ರಮ್ಯಾ ತಾನೇ.. ಗುರುತಿಸಿದೆ.. ಆತ್ಮೀಯವಾಗಿ ಕೈಕಲುಕಿದಳು ರಮ್ಯ. ಉಭಯ ಕುಶಲೋಪರಿಯಲ್ಲಿ ತಿಳಿದದ್ದು ರಮ್ಯಾ ಈಗ ಸುಖೀ ಗೃಹಿಣಿ, ಅತ್ತೆ ಮಾವನ ಜೊತೆಯಲ್ಲಿದ್ದಾಳೆ,  ಎರಡು ಮಕ್ಕಳ ತಾಯಿ, ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ. ಮಗಳ ವಿಚಾರ ಕೇಳಿದೆ.. ರಮ್ಯಾ ಹೇಳಿದ್ದು...“ಹೈ ಸ್ಕೂಲ್ ನಲ್ಲಿ ಓದುತ್ತಿದ್ದಾಳೆ, ಜಾಣೆ,... ನನ್ನ ತರಹ ಅಲ್ಲ ಸರ್”.  ಮನಸ್ಸು ಹಿಂದಕ್ಕೆ ಓಡಿತು... ಅಂದು ಪ್ರಸನ್ನ ಆಪ್ತ ಸಲಹಾ  ಕೇಂದ್ರದ ಕೊನೆಯ ವ್ಯಕ್ತಿಯಾಗಿ ಬಂದವರು ಭಾಗ್ಯಮ್ಮ. ಜೊತೆಯಲ್ಲಿ ಮಗಳು ರಮ್ಯಾ. ಬಂದವರೇ ಕಣ್ಣೀರು ಹಾಕುತ್ತಾ ಆರಂಭ ಮಾಡಿದರು ಭಾಗ್ಯಮ್ಮ...  "ಯಾಕಾದ್ರೂ ಇವಳು ನನಗೆ ಮಗಳಾಗಿ ಹುಟ್ಟಿದಾಳೋ.. ದಿನಾ ದಿನಾ ನನ್ನ ಹೊಟ್ಟೆನ ಉರುಸ್ತಾಳೆ. ಅವರ ಅಕ್ಕಂದಿರ ತರ ಹೇಳಿದಾಗೆ ಕೇಳಿಕೊಂಡು ಮುಚ್ಚಟೆಯಾಗಿ ಇರಕ್ಕೆ ಇವಳಿಗೆ ಏನು ಕಷ್ಟಾನೋ ಗೊತ್ತಾಗ್ತಿಲ್ಲ... ನಿಮಗೆ ಹೇಳಕ್ಕೆ...

ಪೋಲೀಸ್ - ಭಯ - ಬದಲಾವಣೆ

Image
  ಅಕ್ಟೋಬರ್ 28 ರಿಂದ, ನಮ್ಮ ರಾಜ್ಯದ ಪೊಲೀಸರ ಟೋಪಿಯನ್ನು ಬದಲಾಯಿಸುವ ಬಗ್ಗೆ, ಪತ್ರಿಕೆಗಳಲ್ಲಿ ನೋಡಿದ ನಂತರ  .... ಟೋಪಿಯ ಬದಲಾವಣೆ ಹೊರನೋಟಕ್ಕೆ ಕಾಣುವಂತದ್ದು, ನಿಜವಾಗಿ ಬದಲಾವಣೆ ಆಗಬೇಕಾಗಿರುವುದು ಅವರ ಕಾರ್ಯವೈಖರಿ ಎಂದು ಅನಿಸಿದ್ದು ಸತ್ಯ. ಹಾಗಂತ.. ನಮ್ಮ ಪೊಲೀಸ್ ಪಡೆಯ ದಕ್ಷತೆಯ ಬಗ್ಗೆ ನಾನು ಅನುಮಾನ ಪಡುತ್ತಿಲ್ಲ. Every herd has a black sheep ಎನ್ನುವ ಮಾತಿನಂತೆ, ಅಲ್ಲಿಯೂ ಕೆಲ ಅಪಸವ್ಯಗಳು ಇರುವುದು ಸಾಧ್ಯ. ಸಾಮಾನ್ಯವಾಗಿ, ಅವರ ಕೆಲಸದಲ್ಲಿ ಬೇರೆ ಯಾರೂ ಮೂಗು ತೂರಿಸದಿದ್ದಲ್ಲಿ, ಅವರು ತಮ್ಮ ಕಾರ್ಯಕ್ಷೇತ್ರದಲ್ಲಿ ನೈಪುಣ್ಯವನ್ನು ತೋರಿಸಿದ ಉದಾಹರಣೆಗಳು ಸಾಕಷ್ಟಿವೆ. ಈಚೆಗೆ ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ಉತ್ತರ ಪ್ರದೇಶದ ಪೊಲೀಸರು ದುಷ್ಟರ ವಿರುದ್ಧ ಮಾಡಿದ ಕಾರ್ಯಾಚರಣೆಯ ವಿಡಿಯೋ ತುಣುಕುಗಳು ನೋಡುವಾಗ, ಇದು ನಮ್ಮ ಭಾರತದಲ್ಲಿ ಸಾಧ್ಯವಾ ಎನ್ನುವ ಪ್ರಶ್ನೆ ಎದುರಾದದ್ದು ನಿಜ. ಆದರೆ ರಾಜಕೀಯ ಇಚ್ಛಾಶಕ್ತಿ ಇದ್ದಾಗ ಎಲ್ಲವೂ ಸಾಧ್ಯ ಎಂದು ಸಾಬೀತಾಯಿತು.  ದುರ್ದೈವವೆಂದರೆ, ರಾಜಕೀಯ ಇಚ್ಛಾ ಶಕ್ತಿಯನ್ನು, ಎದುರಾಳಿಗಳ ವಿರುದ್ಧ ಬಳಸುವ, ಹಾಗೆ ತಮ್ಮವರನ್ನು ರಕ್ಷಿಸುವ ಮಾರ್ಗವಾಗಿತ್ತೇ ಹೊರತು, ನಿಜವಾದ ದುಷ್ಟರನ್ನು ಹಾಗೂ ದೇಶದ್ರೋಹಿಗಳನ್ನು ಗುರುತಿಸಿ ಶಿಕ್ಷಿಸುವ ಮಾರ್ಗವಾಗಿದ್ದಂತೆ ಬಹಳಷ್ಟು ಸಮಯದಲ್ಲಿ ಕಂಡು ಬರಲಿಲ್ಲ. ಈ ಎಲ್ಲ ಸಮಯದಲ್ಲೂ  ನಮ್ಮ ಕಣ್ಣಿಗೆ ಕಾಣುತ್ತಿದ್ದದ್ದು ಪೋಲಿಸ್ ...

ದೀಪಾವಳಿ - ಬಲಿ ಚಕ್ರವರ್ತಿ

Image
Time and tide waits for none - ಸಮಯ ನಿಂತ ನೀರಲ್ಲ... ಅದು ಯಾರಿಗೂ, ಯಾವುದಕ್ಕೂ ಕಾಯುವುದಿಲ್ಲ... ಇದು ಪ್ರಕೃತಿಗೂ ಹೊರತಲ್ಲ. ಚಲನೆಯು ಸಮಯದ ಗುಣ.  ಆಗಬೇಕಾಗಿರುವ ಘಟನೆಗಳೆಲ್ಲ ಆಯಾ ಸಮಯಕ್ಕೆ ತಾನೇ ತಾನಾಗಿ ಘಟಿಸುತ್ತಿರುತ್ತವೆ. " ಜಬ್ ಜಬ್  ಜೋ ಜೋ ಹೋನಾ ಹೈ..ತಬ್ ತಬ್  ಸೋ ಸೋ ಹೋತಾ ಹೈ" ಎನ್ನುವುದು ಒಂದು ಹಿಂದಿಯ ಹೇಳಿಕೆ. ಅದೇ ರೀತಿ , ವರ್ಷಕ್ಕೊಮ್ಮೆ ಭೂಲೋಕಕ್ಕೆ ಬಂದು ಜನರಿಂದ ಪೂಜಿಸಿಕೊಳ್ಳುವ ವರವನ್ನು, ವಿಷ್ಣುವಿನಿಂದ ಪಡೆದ ಬಲಿಚಕ್ರವರ್ತಿ, ಬರಬೇಕಾದ ದೀಪಾವಳಿಯ ಪಾಡ್ಯವೂ ಬಂತು... ಬಲಿಪಾಡ್ಯಮಿಯ ಬಲೀಂದ್ರನ ಪೂಜೆಯ ದಿನವೂ ಮುಗಿದೇ ಹೋಯಿತು.  ಬಲಿ ಚಕ್ರವರ್ತಿಯ ಕಥೆ.. ಚಿಕ್ಕಂದಿನಲ್ಲಿ ಕೇಳಿದಾಗ, ನನಗೆ ಮೂಡಿದ ಪ್ರಶ್ನೆಗೆ ಇದುವರೆಗೂ ಸಮಂಜಸವಾದ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ವಾಮನನ ಅವತಾರಿ ವಿಷ್ಣು ತ್ರಿವಿಕ್ರಮನಾಗಿ ಬೆಳೆದದ್ದು ಒಪ್ಪಲು ಕಷ್ಟವಾದರೂ, ಸಾಧ್ಯ ಉಂಟು ಎಂದು ನಂಬಿದೆ. (ಆಂಜನೇಯ ಆಕಾಶದೆತ್ತರಕ್ಕೆ ಬೆಳೆದು ಲಂಕೆಗೆ ಹಾರಿದ್ದ ಉದಾಹರಣೆ ಇತ್ತಲ್ಲ )  ಆದರೆ ತ್ರಿವಿಕ್ರಮ  ಇಟ್ಟ ಮೊದಲನೆಯ ಹೆಜ್ಜೆ ಭೂಮಿಯನ್ನಾವರಿಸಿದ್ದು ಒಪ್ಪಿದರೂ.. ಭೂಮಿಯ ಮೇಲಿದ್ದ ಜನರ ಪರಿಸ್ಥಿತಿ ಏನು, ಅದು ಬಿಡಿ ಬಲಿ ಚಕ್ರವರ್ತಿ ಆಗ ಎಲ್ಲಿದ್ದ ಎನ್ನುವುದು ನಿಗೂಢ. ಇಂಥ ಪ್ರಶ್ನೆ ಕೇಳಿದಾಗ, ತಲೆಹರಟೆ ಮಾಡಬೇಡ... ದೇವರ ಕಥೆ ಒಪ್ಪಿಕೋ ಬೇಕು ಅಷ್ಟೇ... ಎಂಬ ಉತ್ತರ ಸಮಾಧಾನ ತಂದಿಲ...

ದೈವಾಧೀನನಾದ ಮೋಹನ

Image
ಇಂದು (20.10.2025) ಸುತ್ತು ಮುತ್ತಲಿನ ಜನಕ್ಕೆಲ್ಲ ದೀಪಾವಳಿಯ ಸಡಗರ. ಎಲ್ಲಾ ಕಡೆ ಪಟಾಕಿ ಹಚ್ಚುವ ಶಬ್ದ, ನನ್ನ ಮನಸ್ಸು ಮಂಕಾಗಿದೆ. ನನ್ನ ಸ್ನೇಹಿತ ಮೋಹನನ (BS ಮೋಹನ ಕುಮಾರ್) ದೇಹವನ್ನು ಅಗ್ನಿಗರ್ಪಿಸಿ, ಸ್ನಾನ ಮಾಡಿ, ಊಟ ಮಾಡಿ ಕುಳಿತಿದ್ದೇನೆ.  ಹೋದ ಲೇಖನದಲ್ಲಿ ಅವನು ಆಸ್ಪತ್ರೆಯಲ್ಲಿದ್ದ ವಿಷಯ ಬರೆದು,ಬೇಗ ಗುಣಮುಖವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೆ, ಅದಕ್ಕೆ ದೇವರ ಒಪ್ಪಿಗೆ ಸಿಗಲಿಲ್ಲ.  ನೆನ್ನೆ ಬೆಳಿಗ್ಗೆ ಅವನನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಬಂದಿದ್ದೆ. ಬಾಯೊಳಗೆ ಹಾಕಿದ್ದ ನಳಿಕೆಗಳ ಕಾರಣ, ಮಾತಾಡಲಾಗದ ಮೋಹನ, ಸಂಜ್ಞೆಯ ಮೂಲಕವೇ ತಿಂಡಿ ಆಯ್ತಾ, ಆರಾಮವಾ, ಮೊಮ್ಮಗಳು ಹೇಗಿದ್ದಾಳೆ ಎಂದು ಕೇಳಿದ್ದು ಅರ್ಥವಾಯಿತು.  ಈ ಪರಿಸ್ಥಿತಿಯಲ್ಲೂ ಅವನ ಕಾಳಜಿ, ಆಶ್ಚರ್ಯ ಉಂಟು ಮಾಡಿತು. ಆದರೆ ಹೆಬ್ಬೆಟ್ಟು ಮೇಲೆತ್ತಿದ ಮುಷ್ಟಿಯನ್ನು ನಾಲ್ಕಾರು ಬಾರಿ ತೋರಿಸಿದ ಮೋಹನ ಹೇಳಿದ್ದು ಏನೆಂದು ತಿಳಿಯಲಿಲ್ಲ. ಮಾತುಗಾರ ಮೋಹನನನ್ನು ಮಾತಿಲ್ಲದ ಮೂಕನನ್ನಾಗಿ ನೋಡಲು ಕಷ್ಟ ಎನಿಸಿತು. ಸಂಜೆ ಅವನ ಸಾವಿನ ಸುದ್ದಿ ಕೇಳಿ ಮತ್ತೆ ಆಸ್ಪತ್ರೆಗೆ ಹೋಗಿ, ಮುಂದಿನ ಕಾರ್ಯಗಳಿಗೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ನಮ್ಮ ಸ್ನೇಹಿತರ ಗುಂಪು ತಯಾರಿ ನಡೆಸಿತು.  ಮೋಹನನ ನೆನಪುಗಳು ಬಲವಾಗಿ ಕಾಡಿದವು. ಅವನ ಪ್ರಭಾವ ನನ್ನ ಮೇಲೆ ಈ ಮಟ್ಟಕ್ಕಿದೆ ಎಂದು ನನಗೆ ಅನ್ನಿಸಿರಲಿಲ್ಲ. ನನಗೆ ಮೋಹನನ ಪರಿಚಯವಾದದ್ದು...  ಸುಮಾರು 20 ವರ್...

ಹೋಟೆಲ್- ತಿಂಡಿ - ಮಸಾಲೆ ದೋಸೆ

Image
ಕೆಲವು ದಿನಗಳಿಂದ.. ದಿನಗಳೇನು ತಿಂಗಳುಗಳೇ ಕಳೆದಿವೆ... ವಿದ್ಯಾರ್ಥಿ ಭವನ್ ನಲ್ಲಿ ಮಸಾಲೆ ದೋಸೆ ತಿನ್ನಬೇಕೆಂಬುದು ನನ್ನ ಮಡದಿಯ ಆಸೆ. ಯಾಕೋ ಕಾಲವೇ ಕೂಡಿ ಬಂದಿರಲಿಲ್ಲ. ಎಲ್ಲ ಸರಿ ಇದ್ದಾಗ ಶುಕ್ರವಾರ ಹೋಟೆಲ್ ಗೆ ರಜಾ, ಶನಿವಾರ ಭಾನುವಾರ ತುಂಬಾ ಜನಸಂದಣಿ ಬೇಡ.. ಹೀಗೆ ಏನೇನೋ ಕಾರಣಗಳು. ಇದ್ದಕ್ಕಿದ್ದಂತೆ ಇಂದು (ಬುಧವಾರ) ಬೆಳಿಗ್ಗೆ ಏನೋ ಮಾತನಾಡುತ್ತಾ ಕೂತಿದ್ದಾಗ, ದಿಡೀರ್ ಅಂತ ನಿರ್ಧಾರ ಮಾಡಿ ಹೊರಟೇ ಬಿಟ್ಟೆವು ವಿದ್ಯಾರ್ಥಿ ಭವನದ ಕಡೆಗೆ.  ಅನಿರೀಕ್ಷಿತವಾಗಿ ನಮ್ಮ ಜೊತೆ ಸೇರಿದವರು ನಮ್ಮ ನೆಂಟರು ಅನಸೂಯ ಮತ್ತು ನಾಗಭೂಷಣ್ ದಂಪತಿಗಳು. ಹಳೆಯದನ್ನು ನೆನಪಿಸಿಕೊಳ್ಳುತ್ತಾ ಇಡ್ಲಿ ಮತ್ತು ದೋಸೆಗಳನ್ನು ಸವಿದಿದ್ದಾಯ್ತು. ಅಂತೂ ಬಹಳ ದಿನಗಳಿಂದ ಬಾಕಿ ಇದ್ದ ಒಂದು ಕಾರ್ಯಕ್ರಮ ಮುಗಿದಂತಾಯ್ತು. ಸಾಮಾನ್ಯವಾಗಿ ಮಸಾಲೆ ದೋಸೆ ಎಂದರೆ, ಎಲ್ಲರಿಗೂ ಇಷ್ಟವೇ. ಅದರಲ್ಲೂ ವಿದ್ಯಾರ್ಥಿ ಭವನ್ ಮಸಾಲೆ ದೋಸೆಗೆ ಒಂದು ವಿಶಿಷ್ಟ ಸ್ಥಾನ. ದೋಸೆಯ ತಟ್ಟೆಗಳನ್ನು ಕೈ ಮೇಲೆ ಜೋಡಿಸಿಕೊಂಡು ಬಂದು ಕೊಡುವ ಶೈಲಿಯೇ ಚೆನ್ನ. 60 ರ ದಶಕದ  ಉತ್ತರಾರ್ಧದಲ್ಲಿ ವಿದ್ಯಾರ್ಥಿ ಭವನ್ ನಲ್ಲಿ.. ಜಾಗ ಸಿಗದಿದ್ದಾಗ ಹಿಟ್ಟು ರುಬ್ಬುವ ಒರಳು ಕಲ್ಲು ಬಳಿ ಹಾಕಿದ್ದ ಬೆಂಚಿನ ಮೇಲೆ, ತಟ್ಟೆಯನ್ನು ಕೈಯಲ್ಲಿ ಹಿಡಿದು, ಕೂತು ತಿಂದ ಮಸಾಲೆ ದೋಸೆ, ಚಟ್ನಿಯ ರುಚಿ ಈಗಿಲ್ಲದಿದ್ದರೂ... ವಿಶಾಲವಾದ ಜಾಗದಲ್ಲಿ ಕೂತು ತಿನ್ನುವ ಅನುಕೂಲ, ಕೈ ವರೆಸಿಕೊಳ್ಳಲು ಕೊಡುತ್ತಿದ್ದ ನ...