ಜಾಹೀರಾತಿಗೆ ಮನಸೋತು..
ಮಾತು ಏಕಮುಖ ಸಂಚಾರಿ. ಅನುಭವಿ ಮಾತುಗಾರರನ್ನು ಒಳ್ಳೆಯ ಸಂವಹನಕಾರ (communicator) ಎಂದು ಹೇಳುವರು. communication skill (ಸಂವಹನಕಲೆ) ಎಂದಾಗ ಬರೀ ಮಾತನಾಡುವುದಲ್ಲ, ಒಳ್ಳೆಯ ಕೇಳುಗನೂ (listener) ಆಗಬೇಕು. ಆಪ್ತ ಸಮಾಲೋಚಕರ ತರಬೇತಿ ಶಿಬಿರದಲ್ಲಿ, ಸಂವಹನ ಕಲೆ ಬಗ್ಗೆ ತಿಳಿಸುವಾಗ, ಮಾತನಾಡುವ ಕಲೆಯ ಜೊತೆಗೆ, ಗಮನವಿಟ್ಟು ಕೇಳುವುದು , ಕೇಳಿದ್ದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು, ವಿಶ್ಲೇಷಣೆ ಮಾಡುವುದು, ನಂತರ ಸರಿಯಾದ ಮಾರ್ಗದರ್ಶನ ಮಾಡುವುದು, ಎಲ್ಲವೂ ಬಹು ಮುಖ್ಯ ಎಂಬುದನ್ನು ಒತ್ತಿ ಹೇಳುತ್ತೇವೆ. ಇನ್ನೊಂದು ಕ್ಷೇತ್ರವಿದೆ, ಅಲ್ಲಿ ಮಾತು, ಬರಹ, ಚಿತ್ರ, ಚಲನಚಿತ್ರದ ಮೂಲಕ ಸಂವಹನವಿರುತ್ತದೆ, ಆದರೆ ಅದೆಲ್ಲವೂ ಏಕಮುಖಿ. ಹೇಳಬೇಕಾದುದನ್ನು, ಅದು ಯಾರಿಗೆ ಮುಟ್ಟಬೇಕು, ಯಾವ ಪರಿಣಾಮ ಆಗಬೇಕು ಎನ್ನುವುದನ್ನು ನಿರ್ಧರಿಸಿ ಅವರಿಗೆ ತಲುಪುವಂತೆ ಮಾಡುವ ಕಲೆ. ಅದು ವಿಶೇಷ ಅಭಿವ್ಯಕ್ತಿ. ಅದೇ ಜಾಹೀರಾತಿನ ಪ್ರಪಂಚ. ಇಂದಿನ ದಿನಗಳಲ್ಲಿ ಜಾಹೀರಾತಿಗೆ ವಿಶೇಷ ಸ್ಥಾನಮಾನವಿದೆ. ಹೆಜ್ಜೆ ಹೆಜ್ಜೆಗೂ, ಒಂದಲ್ಲ ಒಂದು ಜಾಹೀರಾತು ನಮ್ಮ ಕಣ್ಣ ಮುಂದೆ ಬರುತ್ತದೆ. ಅದರಲ್ಲೂ ಫೋನ್ ನಲ್ಲಿ ಏನೇ ನೋಡಲು ಮೊದಲು ಮಾಡಿದರೂ, ಜಾಹೀರಾತುಗಳ ಮಹಾಪೂರವೇ ಹರಿದು ಬರುತ್ತದೆ. ಸ್ವಲ್ಪ ಕಿರಿ ಕಿರಿ ಅನಿಸಿದರೂ ಅದನ್ನು ನೋಡುವುದು ಅನಿವಾರ್ಯವಾಗಿದೆ. ಕೆಲವನ್ನು ಸ್ಕಿಪ್ ಮಾಡಲು ಅವಕಾಶ ಇರುವುದೇ ಒಂದು ವರವಾಗಿದೆ. ಈ ಜಾಹೀರಾತುಗಳ...