Posts

ಪ್ರತಿಭೆ - ಪ್ರದರ್ಶನ - ಪುರಸ್ಕಾರ

Image
ಮೊನ್ನೆ ಭಾನುವಾರ, ತಿಮ್ಮೇಶ ಪ್ರಭು ಉದ್ಯಾನವನದಲ್ಲಿ, ಸ್ನೇಹ ರಂಗದ ವತಿಯಿಂದ ಈ ವರ್ಷದ ಪ್ರತಿಭಾ ಪುರಸ್ಕಾರವನ್ನು ಏರ್ಪಡಿಸಲಾಗಿತ್ತು. ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.  ಬೆಳಗಿನ ಸುಂದರ ವಾತಾವರಣದಲ್ಲಿ ಮಕ್ಕಳ ಉತ್ಸಾಹ, ಪೋಷಕರ ಮುಖದಲ್ಲಿದ್ದ ಹೆಮ್ಮೆ, ಸ್ನೇಹ ರಂಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿನ ಸಲುವಾಗಿ ಉತ್ಸಾಹದಿಂದ ಮಾಡುತ್ತಿದ್ದ ಕೆಲಸಗಳು  ಅಲ್ಲೊಂದು ಸಂಭ್ರಮದ, ಸಡಗರದ ದೃಶ್ಯಗಳಾಗಿ ಕಾಣುತ್ತಿದ್ದವು. ಸುಂಕೇನಹಳ್ಳಿ ಸರ್ಕಾರಿ ಶಾಲೆಯ 34  SSLC ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಿದ್ದರು. ಸುಂಕೇನಹಳ್ಳಿ ಶಾಲೆ ಯೊಂದಿಗೆ ನನ್ನದು ಒಂದಷ್ಟು ಒಡನಾಟವಿದೆ, ಅಭಿಮಾನವಿದೆ.      ಪ್ರತಿಭಾ ಪುರಸ್ಕಾರಗಳು ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ಪತ್ರಿಕೆಗಳಲ್ಲಿ ಬರುವ ಸುದ್ದಿಗಳನ್ನು ಗಮನಿಸಿದಾಗ, ಆ ಕಾರ್ಯಕ್ರಮಗಳು ಒಂದು ಸೀಮಿತ ಸಮುದಾಯದ ಮಕ್ಕಳನ್ನು ಮಾತ್ರ ಒಳಗೊಂಡಿರುತ್ತದೆ. ಅದು ಒಂದು ಜಾತಿ, ಪಂಗಡದ ಮಕ್ಕಳಾಗಿರಬಹುದು ಅಥವಾ ಒಂದು ಸಂಸ್ಥೆಯ ಸದಸ್ಯರ ಮಕ್ಕಳಾಗಿರಬಹುದು.   ಆದರೆ ಸ್ನೇಹ ರಂಗದ ವೈಶಿಷ್ಟ್ಯ ... ಹತ್ತಿರದಲ್ಲೇ ಇರುವ ಸುಂಕೇನಹಳ್ಳಿ ಸರ್ಕಾರಿ ಶಾಲೆ, ಹಾಗೂ ವಿವೇಕಾನಂದ ಶಾಲೆಯ ಮಕ್ಕಳಿಗೆ ಆದ್ಯತೆ .( ಈ ಮಕ್ಕಳ ಪೋಷಕರು ಸಾಮಾನ್ಯವಾಗಿ ಆರ್ಥಿಕವಾಗಿ ಕೆಳವರ್ಗದವರಿದ್ದು, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಶಕ್ತಿಮೀರಿ ಪ್ರಯತ್ನ ಮಾಡುತ್ತಿರುವವ...

ಯೋಗ - ಯೋಗಾ ಯೋಗ

Image
ಹೋದ ಶನಿವಾರ ಅಶಕ್ತ ಪೋಷಕ ಸಭಾ ನಿವಾಸಿಗಳಿಂದ ಪ್ರತಿವರ್ಷದಂತೆ ಯೋಗ ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಕಾರಣಗಳಿಂದ ಮನೆಯವರಿಂದ ದೂರವಾಗಿ ವೃದ್ಧಾಶ್ರಮದಲ್ಲಿ ಇರಬೇಕಾಗಿ ಬಂದಿರುವ ಮನಸ್ಥಿತಿಯ ಹಾಗೂ ವಯೋ ಸಹಜ ಇತಿಮಿತಿಗಳನ್ನು ಹೊಂದಿರುವ ವ್ಯಕ್ತಿಗಳು ಯೋಗ ಪ್ರದರ್ಶನ, ಹಾಡು, ನೃತ್ಯ, ಏಕ ಪಾತ್ರಾಭಿನಯ, ಕಿರು ನಾಟಕ ಹೀಗೆ ವಿವಿಧ ಕಲೆಗಳನ್ನು ಪ್ರದರ್ಶಿಸಲು ತೋರಿಸಿದ  ಉತ್ಸಾಹವನ್ನು ನೋಡಲು, ಅವರೊಡನೆ ಒಡನಾಡಲು ಬಲು ಛಂದ. ಇದು ಸಾಧ್ಯವಾಗಲು ನಮ್ಮ   ತಂಡದ ಎಲ್ಲ ಸದಸ್ಯರ ಅವಿರತ ಶ್ರಮ ಬಹು ಮುಖ್ಯವಾದದ್ದು. ಕಾರ್ಯಕ್ರಮದ ನಂತರ ಅವರು ಹಂಚಿಕೊಂಡ ಅನಿಸಿಕೆಗಳಲ್ಲಿ ತೃಪ್ತಿ ಕಾಣುತ್ತಿತ್ತು. ಇದು ನಮ್ಮ ಯೋಗಾಯೋಗವೇ ಸರಿ. ಭಗವದ್ಗೀತೆಯಲ್ಲಿ ಕೃಷ್ಣನು ಹೇಳಿದ ಕರ್ಮ ಯೋಗ- ಪ್ರತಿಫಲಾಪೇಕ್ಷೆ ಇಲ್ಲದ ನಿಸ್ವಾರ್ಥ ಕೆಲಸವನ್ನು ಸ್ವಲ್ಪ ಭಾಗವಾದರೂ ಪಾಲಿಸಿದ ತೃಪ್ತಿ ನಮ್ಮೆಲ್ಲರದು. ಯೋಗಾಯೋಗವನ್ನು ಆಡು ಮಾತಿನಲ್ಲಿ ಯೋಗ ಎಂದೇ ಉಪಯೋಗಿಸುತ್ತಾರೆ. ಯೋಗ ಎಂಬುದು ಜನಮಾನಸದ ದೃಷ್ಟಿಯಲ್ಲಿ ಯೋಗಾಸನದ ವಿವಿಧ ಭಂಗಿಗಳನ್ನು ಮಾಡುವುದು. ಯೋಗ ಪದ ರೂಪುಗೊಂಡಿರುವುದು... ಯುಜ್ಯತೆ ಇತಿ ಯೋಗಃ... ಅಂದರೆ ಒಂದುಗೂಡಿಸುವುದು. ನಿಜ ಅರ್ಥದಲ್ಲಿ ದೇಹ ಮತ್ತು ಮನಸ್ಸನ್ನು ಒಂದುಗೂಡಿಸುವುದು... ಅದು ಬೇರೆಯೇ ಸ್ತರ. ಯೋಗಾಯೋಗದ ಪ್ರಯೋಗವು ಅದೃಷ್ಟ ಕೂಡಿ ಬರುವುದು, ದೈವ ಕೃಪೆ, ದೈವಬಲ, ದೈವ ಯೋಗ ಎಂಬ ಭಾವದಿಂದ, ಎಲ್ಲಾ ಒಳ್ಳೆಯ ಪ್...

ವಸಂತವನ್ನೇ ಕಾಣದ ವಸಂತಲಕ್ಷ್ಮಿ

Image
ನನ್ನ ಕಛೇರಿಯಲ್ಲಿ ಯಾವುದೋ Technical discussion  ನ್ನಲ್ಲಿದ್ದೆ. ಫೋನ್ ರಿಂಗಣಿಸಿತು.. ಉತ್ತರಿಸದೆ ನಿರಾಕರಿಸಿದೆ.  ಮತ್ತೆರಡು ಸಲ  ಅದೇ ಫೋನ್  ಕರೆ... ಅಪರಿಚಿತ ನಂಬರ್ ನಿಂದ. ಪ್ರಾಯಶಃ ಯಾವುದೋ ಗಹನವಾದ ವಿಷಯವೇ ಇರಬಹುದೆಂದು ಕರೆಯನ್ನು ಸ್ವೀಕರಿಸಿದೆ. ' ಸರ್ ಕ್ಷಮಿಸಿ, ಮತ್ತೆ ಮತ್ತೆ ಫೋನ್ ಮಾಡಿದ್ದಕ್ಕೆ. ನಾನು ವಸಂತ ಲಕ್ಷ್ಮಿಯ ತಂಗಿ, ಅಕ್ಕನ ಆರೋಗ್ಯ ತುಂಬಾ ಹದಗೆಟ್ಟಿದೆ, ಪದೇ ಪದೇ ನಿಮ್ಮ ಹೆಸರು ಹೇಳ್ತಾಳೆ, ನೀವು ಒಂದು ನಿಮಿಷ ಬಂದು ಅಕ್ಕನನ್ನು ಮಾತಾಡಿಸಲು ಸಾಧ್ಯವಾ ಎಂದು ಅಪ್ಪ ಕೇಳಿದ್ದಾರೆ, ಬರ್ತೀರ ಅಲ್ವಾ?' ಮನೆಯ ವಿಳಾಸ ಕೇಳಿ ತಿಳಿದುಕೊಂಡೆ, ನಡೆಯುತ್ತಿದ್ದ ಮಾತುಕತೆಯನ್ನು ಬೇಗ ಮುಗಿಸಿ, ಹೊರಡಲನುವಾದೆ. ಮನೆ ಸಮೀಪಿಸಿದಾಗ, ಅಳು ಕೇಳಿ ಬಂತು, ಅನುಮಾನವಾಯಿತು, ನನ್ನ ಕಂಡೊಡನೆ ಅವರ ಅಪ್ಪ ಹೇಳಿದ್ದು "ನೋಡಿ ಸರ್ ಹೆಂಗ್ ಮಲಗವಳೆ, ನನ್ ಮೇಲೆ ಕೋಪ ಬಂದಾಗ ರಂಗನಾಥ್ ರಾವ್ ಸರ್ ಗೆ ಹೇಳ್ತೀನಿ ಅಂತ ಹೆದರಿಸುತ್ತಿದ್ದೋಳು ಈಗ ತೆಪ್ಪಗೆ ಮಲಗವಳೆ.. ನಮ್ಮನ್ನ ಬಿಟ್ಟು ಹೋಗ್ಬಿಟ್ಲು' . ನನಗೆ ಆಘಾತವಾಯಿತು, ಇಷ್ಟು ಬೇಗ ಹೀಗಾಗುತ್ತದೆ ಎಂದು ನಾನು ಎಣಿಸಿರಲಿಲ್ಲ. ಸ್ವಲ್ಪ ಹೊತ್ತು ಇದ್ದು ಸಮಾಧಾನದ ಮಾತಾಡಿ, ಅಲ್ಲಿಂದ ಹೊರಟೆ... ಮನಸ್ಸು ಹಿಂದಕ್ಕೆ ಓಡಿತು. ಆಗಿನ್ನು ಆಪ್ತ ಸಮಾಲೋಚಕನಾದ ಹೊಸತು, ಬುಧವಾರ ಸಂಜೆ ಹೋದೊಡನೆ, ಪ್ರಸನ್ನ ಆಪ್ತ ಸಲಹಾ ಕೇಂದ್ರದ ಬಾಗಿಲು ತೆಗೆದು,  ಬಂದಿರುವ ಎಲ್ಲರ ಹೆ...

Air India - ಕೃತಕ ಬುದ್ದಿಮತ್ತೆ

Image
ಜೂನ್ ಹನ್ನೆರಡರಂದು ಅಹಮದಾಬಾದ್ ನಲ್ಲಿ ನಡೆದ     A ir  I ndia ದ  ನಂಬರ್   A   I - 117  ವಿಮಾನದ ಅಪಘಾತದ ಸುದ್ದಿ ನಮ್ಮನ್ನೆಲ್ಲ ಬೆಚ್ಚಿಬೀಳಿಸಿತು. 250 ಕ್ಕೂ ಹೆಚ್ಚು ಜನರು ಸತ್ತಿದ್ದು ನೋವಾಯಿತು. ಅದರಲ್ಲೂ ಹಾಸ್ಟೆಲ್ ನಲ್ಲಿ ಊಟ ಮಾಡುತ್ತಿದ್ದ ಅಮಾಯಕ ವಿದ್ಯಾರ್ಥಿಗಳು ಸತ್ತದ್ದು ವಿಧಿಯಾಟವೇ ಸರಿ.  .... ವಿಶ್ವ ಕುಮಾರ್ ರಮೇಶ್ ಎಂಬ ಒಬ್ಬರೇ ವ್ಯಕ್ತಿ ಬದುಕುಳಿದದ್ದು ಸಹ ವಿಧಿಯಾಟವೇ. ಈ ಸುದ್ದಿಯನ್ನು ಓದುವಾಗ ನನಗೆ ಎದ್ದು ಕಂಡದ್ದು  A   I.   ಪ್ರಸಕ್ತ ಕಾಲಮಾನದಲ್ಲಿ    A   I - ಕೃತಕ ಬುದ್ದಿಮತ್ತೆ , ಮುಂಚೂಣಿಯಲ್ಲಿರುವ ವಿದ್ಯಮಾನ. ಎಲ್ಲ ಸ್ತರಗಳಲ್ಲೂ ಅದರ ಉಪಯೋಗ ಅನಿವಾರ್ಯವೋ ಎಂಬಂತೆ ಬೆಸೆದುಕೊಂಡಿದೆ.  ಜೊತೆಗೆ ಅದರಿಂದ ಆಗಬಹುದಾದ  ಅನಾಹುತಗಳ ಬಗ್ಗೆ ಚರ್ಚೆ, ಚಿಂತನೆಗಳು...  ಮನುಷ್ಯನ ಬುದ್ಧಿಮತ್ತೆಯ ಕಣ್ಗಾವಲು ತಪ್ಪಿದರೆ, ಮನುಷ್ಯನನ್ನೇ ನುಂಗುವ ಪರಿಸ್ಥಿತಿ ಬರಬಹುದು ಎನ್ನುವ ವಿಚಾರ ಚಾಲ್ತಿಯಲ್ಲಿವೆ.   ತನ್ನ ಕೈಯನ್ನು ಬೇರೆಯವರ ತಲೆಯ ಮೇಲೆ ಇಟ್ಟು ಸುಡುವ ಶಕ್ತಿಯ ವರವನ್ನು  ಶಿವನಿಂದ  ಪಡೆದ ಭಸ್ಮಾಸುರ, ಶಿವನ ಮೇಲೆ ಪ್ರಯೋಗ ಮಾಡಲು ಹೊರಟಂತೆ, ಕೊನೆಗೆ ವಿಷ್ಣು ಮೋಹಿನಿ ರೂಪದಲ್ಲಿ ಬಂದು ಭಸ್ಮಾಸುರನನ್ನು ಕೊಂದಂತೆ... ಕೃತಕ ಬುದ್ಧಿಮತ್ತೆ...

ಮಂತ್ರಾಲಯಕೆ ಹೋಗೋಣ...

Image
  ಮಳೆ ಹನಿಗಳ ಸಿಂಚನ ಮೈ ಮೇಲೆ, ಮಂತ್ರಾಲಯಕೆ ಹೋಗೋಣ.. ಗುರುರಾಯರ ದರುಶನ ಮಾಡೋಣ.. ಎಂಬ ಹಾಡು ಕಿವಿಯ ಮೇಲೆ, ಝಗಮಗಿಸುವ ದೀಪಾಲಂಕಾರ ಕಣ್ಣಿಗೆ, ಮಳೆಯಲ್ಲೇ ಸಡಗರದಿಂದ ಓಡಾಡುತ್ತಿದ್ದ ಜನಸಾಗರ... ಇದು  ಮೊನ್ನೆ ಭಾನುವಾರ ಮಂತ್ರಾಲಯದ ನೆಲದ ಮೇಲೆ, ಮಗಳು, ಮೊಮ್ಮಗಳೊಡನೆ ಕಾಲಿಟ್ಟಾಗ ನನಗಾದ ಅನುಭವ. ಪ್ರಯಾಣ ಮಾಡಿ ದಣಿದಿದ್ದ ಕಾರಣ, ಕೈಕಾಲು ಮುಖ ತೊಳೆದು ಬರಲೂ ಸಹ ಸಮಯ ಇಲ್ಲದಂತೆ ದರ್ಶನದ ಸಮಯ ಕೊನೆಯ ಹಂತದಲ್ಲಿತ್ತು. ಹೊರಗಿಂದಲೇ ಕೈಮುಗಿದು, ನಮ್ಮ ಕೋಣೆಗೆ ಬಂದು ವಿರಮಿಸಿದ್ದಾಯ್ತು.  ಕಾಲ ಸರಿದಂತೆ ಜೀವನಶೈಲಿಯಲ್ಲಿ ಬದಲಾವಣೆಗಳು ಬಂದು... ಸೆಖೆಯನ್ನು ನೀಗಲು  ಫ್ಯಾನ್ ಹಾಗೂ AC ಯ ಅನುಕೂಲತೆಗಳು ನಮ್ಮ ಕೋಣೆಯಲ್ಲಿದ್ದವು. ಮಗಳು ಮೊಮ್ಮಗಳ ಜೊತೆಯಲ್ಲಿ ಒಂದಿಷ್ಟು ಮಾತು ಆಟ ಆಡಿ ಮಲಗಲು ಅಣಿಯಾದರೂ... ತಕ್ಷಣ ನಿದ್ರೆ ಬರಲಿಲ್ಲ.... ನೆನಪಿಗೆ ಬಂದದ್ದೇ ಕಷ್ಟದಿಂದ ಕಳೆದ ಆ ರಾತ್ರಿ..... ಮದುವೆಯಾದ ಹೊಸತು... ಮಂತ್ರಾಲಯಕ್ಕೆ ಹೋಗಬೇಕೆಂದು ನಿರ್ಧರಿಸಿ ನಾವಿಬ್ಬರೂ ಹೊರಟೇ ಬಿಟ್ಟೆವು. ಮಂತ್ರಾಲಯವನ್ನು ಮುಟ್ಟಿದಾಗ ಮಧ್ಯಾಹ್ನ... ಸುಡುವ ಬಿಸಿಲು, ಹೇಗೋ ನಮ್ಮ ಹಣಕಾಸಿನ ನಿಲುಕಿನಲ್ಲಿದ್ದ ಒಂದು ಕೋಣೆಯನ್ನು ಆಯ್ಕೆ ಮಾಡಿ ದೇವರ ದರ್ಶನ ಮಾಡಿ... ಆಗೆಲ್ಲಾ ಕೋಣೆಯ ಬಳಿ ಬಂದು ಮಾರುತ್ತಿದ್ದ ಇಡ್ಲಿಯನ್ನು ತಿಂದು ದಿನದ ಕೊನೆಗೆ ಬಂದೆವು. ಫ್ಯಾನಿನ ಗಾಳಿ ಪ್ರಖರ ಸೆಖೆಯೊಡನೆ ಗುದ್ದಾಡಿ  ಸೋಲುತ್ತಿತ್ತು, ಗೆಲ್ಲುವ ಪ...

ಹದಿ ವಯಸು - ಕುತೂಹಲ

Image
  ಅವತ್ತು ಬುಧವಾರ ಸಂಜೆ ಯಾವಾಗಿನಂತೆ ಆಪ್ತ ಸಲಹಾ ಕೇಂದ್ರಕ್ಕೆ ಬಂದೆ...  ಹಿರಿಯ ಶ್ರೀನಿವಾಸ್ ಅವರು .. ರಂಗನಾಥ್ ನಿಮಗಾಗಿ ಒಂದು ಕೇಸ್ ಕಾಯ್ತಾ ಇದೆ.. ಬೇರೆ ಊರಿಂದ ಬಂದಿದ್ದಾರೆ... ಕಳಿಸ್ತೀನಿ  ಅಂದ್ರು. ಗಂಡ ಹೆಂಡತಿ ಒಂದು ಹೆಣ್ಣು ಮಗುವನ್ನು ಕರ್ಕೊಂಡು ರೂಮಿನ ಒಳಗೆ ಬಂದರು..  'ನನ್ನ ಸ್ನೇಹಿತ ನಿಮ್ಮನ್ನ ಭೇಟಿ ಮಾಡಕ್ಕೆ ಹೇಳಿದ...' ' ಕೂತ್ಕೊಳ್ಳಿ... ನಿಮ್ಮ ಹೆಸರು?' ' ನಾನು ರಮೇಶ್... ನನ್ ಹೆಂಡ್ತಿ ಸುಮತಿ'...  ಏನ್ ಮಗು  ನಿನ್ನ ಹೆಸರು  ಅಂತ ಕೇಳಿದೆ... "ಸುಮಾ” ಅಂತ ಅಮ್ಮ ಹೇಳಿದ್ದು.  ' ಬಂದ ವಿಷಯ?'  'ಏನ್ ಹೇಳ್ಬೇಕು ಎಲ್ಲಿಂದ ಶುರು ಮಾಡಬೇಕು ಗೊತ್ತಾಗ್ತಾ ಇಲ್ಲ' ಅಂದಾಗ... ನಿಮಗೆ ಏನು ಹೇಳಬೇಕು ಅನ್ಸುತ್ತೆ ಮನಸ್ಸು ಬಿಚ್ಚಿ ಹೇಳಿ, ಎಲ್ಲಿಂದ ಬೇಕಾದರೂ ಶುರು ಮಾಡಿ  ಎಂದೆ.. ಗಂಡ ಹೆಂಡತಿಯ ಮಧ್ಯೆ ಒಂದೆರಡು ಪಿಸುಮಾತು.. ನಂತರ ಗಂಡ ಹೇಳಿದ್ದು... ಅವಳೇ ಮಾತಾಡ್ತಾಳೆ ನಾನು ಮಗುನ ಕರ್ಕೊಂಡು ಆಚೆ ಕಡೆ ಇರ್ತೀನಿ.. ಅಂತ ಹೊರಗೆ ಹೋದರು. ಮಾತು ಮುಂದುವರಿತು 'ನಂಗೆ ತುಂಬಾ ಭಯ ಆಗುತ್ತೆ ಸರ್.. ನನ್ ಮಗಳದೇ ನನಗೆ ಚಿಂತೆಯಾಗಿದೆ' ' ಮಗು ಆರೋಗ್ಯದಲ್ಲಿ ಏನಾದ್ರೂ ತೊಂದರೆ ಇದೆಯೇನಮ್ಮ?'  'ಹಾಗೇನಿಲ್ಲ' ' ಮಗು ಯಾವ ಕ್ಲಾಸು' ' ಒಂದನೇ ಕ್ಲಾಸು' ' ಮಗು ಬೆಳವಣಿಗೆಯಲ್ಲಿ ಏನಾದ್ರೂ ತೊಂದರೆ ಇದೆಯಾ' ' ...

ಸುಳ್ಳು - ಸತ್ಯ - ಆಣೆ

Image
ಸುಳ್ಳು ಯಾಕೆ ಹೇಳಲೀ ನಾನು.... ಮೊನ್ನೆ ವಾಕಿಂಗ್ ನಲ್ಲಿ ಯಾರೋ ಒಬ್ಬರು ಹೇಳ್ತಿದ್ರು  “ನನ್ನ ಜೀವಮಾನದಲ್ಲಿ ಒಂದು ಸುಳ್ಳು ಹೇಳಿಲ್ಲ" ಅಂತ.... ಅವರ ಮುಖ ನೋಡಿ ಸಣ್ಣ ನಗೆ ಬೀರಿದೆ... ಯಾಕ್ರೀ ನಗ್ತೀರಾ ಅಂತ ತಮಾಷೆಯಾಗಿ ಧಮ್ಕಿ ಹಾಕಿದರು. ಮನಸ್ಸಿಗೆ ಬಂತು ಅವರು ಹೇಳಿದ್ದು ಸರಿ ಅಂತ... ಯಾಕಂದ್ರೆ ಒಂದೋ ಅವರು ಹೇಳಿದ್ದು ಒಂದು ಸುಳ್ಳು ಹೇಳಿಲ್ಲ ಅಂತ... ನೂರಾರು ಹೇಳಿರಬಹುದಲ್ಲ... ಅಥವಾ ಅವರು ಹೇಳಿದ್ದು ಹಸಿ ಸುಳ್ಳು ಇರಬಹುದಲ್ಲ.  ಚೆನ್ನಾಗಿ ಪರಿಚಯವಿಲ್ಲದಿದ್ದ ಕಾರಣ ಇದನ್ನು ಅವರಿಗೆ ಹೇಳುವ ಧೈರ್ಯ ಬರಲಿಲ್ಲ.. ಸುಮ್ನೆ ಮುಂದೆ ಹೆಜ್ಜೆ ಹಾಕ್ದೆ.   ಗೊದ್ದ ಗೋಡೆ ಹಾಕಿದ್ ಕಂಡೆ                             ಇಲಿ ಬೆಕ್ಕಿನ್ ತಿನ್ನೋದ್ ಕಂಡೆ                     ಕಂಡೇನಕ್ಕ ಮುಂಗ್ ಸೀಯ                         ಕಡಾಯಿ ಗಾತ್ರವ... ಇದು ನಾನು ಚಿಕ್ಕಂದಿನಲ್ಲಿ ಕಲಿತ ದಾಸರ ಪದ. ಆಗ ಅದು ಅರ್ಥವೇ ಇಲ್ಲದ ತಮಾಷೆಯಾಗಿ ಮಾತ್ರ ಕಾಣುತ್ತಿತ್ತು.  ಸುಳ್ಳು ನಮ್ಮಲ್ಲಿಲ್ಲವಯ್ಯ,  ಸುಳ್ಳು ನಮ್ಮಲ್ಲಿಲ್ಲ.    ಸುಳ್ಳೇ ನಮ್ಮನೆ ದೇವರು . .......

ಸೋದರ ಮಾವ - ಊರ ಹಬ್ಬ

Image
ನಮ್ಮ ಸಮಾಜದ ಕೂಡು ಕುಟುಂಬದ ವ್ಯವಸ್ಥೆಯಲ್ಲಿ ಸೋದರ ಮಾವನಿಗೆ ವಿಶಿಷ್ಟ ಸ್ಥಾನವಿತ್ತು. ಅಮ್ಮನ ನಂತರದ ಪ್ರೀತಿ ಪಾತ್ರ ವ್ಯಕ್ತಿ ಸೋದರ ಮಾವ ಎಂಬುದು ಪ್ರತೀತಿ.  ಈಗಲೂ ಮದುವೆಯ ಸಮಯದಲ್ಲಿ.... ವಧುವನ್ನು ಕರೆ ತರಲು / ಹೊತ್ತು ತರಲು ಸೋದರ ಮಾವ / ಮಾವಂದಿರೇ  ಬೇಕು... ಇದು ಶಾಸ್ತ್ರದ ರೂಪ ತಳೆದಿದೆ. ಬಾಣಂತನಕ್ಕಾಗಿ ಹೆಣ್ಣು ಮಕ್ಕಳು,  ತವರು ಮನೆಗೆ ಹೋಗುವುದು ಸಾಮಾನ್ಯ, ಜೊತೆಗೆ ಈಗಾಗಲೇ ಇರುವ ಚಿಕ್ಕ ಮಕ್ಕಳು. ಇಷ್ಟೆಲ್ಲವನ್ನು ಸಂಭಾಳಿಸಲು ತವರು ಮನೆಯಲ್ಲಿನ ಅಣ್ಣ ತಮ್ಮಂದಿರು ಹಾಗೂ ಮದುವೆಯಾಗದ ತಂಗಿಯರು ಸದಾ ಸಿದ್ಧ.  ಮಕ್ಕಳಿಗೆ ಇವರೊಡನೆ ಸಲಿಗೆ ಜಾಸ್ತಿ... ಹಾಗಾಗಿ ಅವರ ಜೊತೆ ಆಟ, ಊಟ, ನಿದ್ದೆ ಎಲ್ಲವೂ. ಆಗಿನ ಕಾಲದಲ್ಲಿ ಚಿಕ್ಕ ವಯಸ್ಸಿಗೇ ಮದುವೆ ಮಾಡುತ್ತಿದ್ದದ್ದು.... ಮದುವೆಯ ಹೆಣ್ಣು... ಎಲ್ಲೋ ಇರುತ್ತಿದ್ದದ್ದು ಸೋದರ ಮಾವಂದಿರ ಜೊತೆ, ಬಹುಶಃ ಆಟವಾಡುತ್ತಾ. ಹಾಗಾಗಿ ಮುಹೂರ್ತದ ಸಮಯಕ್ಕೆ... ಸೋದರ ಮಾವ ಮಗುವನ್ನು ಕರೆ ತರುವುದು / ಎತ್ತಿಕೊಂಡು ಬರುವುದು... ಅನಿವಾರ್ಯವಾಗಿತ್ತು... ಅದೇ ಸಂಪ್ರದಾಯವಾಗಿರಬೇಕು... ಶಾಸ್ತ್ರದ ರೂಪ ತಳೆದಿರಬೇಕು... ಸೋದರ ಮಾವನನ್ನೇ ಮದುವೆಯಾಗುತ್ತಿದ್ದ ಸಂಗತಿಗಳು ನಡೆಯುತ್ತಿದ್ದವು... ಆಗೊಂದು ತೆಲುಗಿನ ಮಾತು " ಮಾಮಾ ಮಾಮಾ... ಮಗುಡಾಯ" ಚಾಲ್ತಿಯಲ್ಲಿತ್ತು. ಸೋದರ ಮಾವಂದಿರು ಅಂದಾಗ ನನಗಿದ್ದದ್ದು ಭಯ ಮಿಶ್ರಿತ ಗೌರವ. ಅಮ್ಮ ಕೊಟ್ಟ ಚಿತ್ರಣದಂತೆ.. ಅವರು 'ಉಳ್ಳವರ...

ಅಬಲೆ - ಅಮ್ಮ - ದುರ್ಗೆ

Image
  ಪಹಲ್ಗಾಮ್ ಘಟನೆಯ, ಸುದ್ದಿ ಚಿತ್ರಗಳು ಹೊರ ಬರುತ್ತಿದ್ದಂತೆ, ಮನಸ್ಸು ವ್ಯಗ್ರಗೊಂಡಿತು. ಹಿಂದುಗಳೆಂದು ಖಚಿತಪಡಿಸಿಕೊಂಡು, ಅಸಹಾಯಕ ಹೆಣ್ಣು ಮಕ್ಕಳ ಮುಂದೆ ಗಂಡ, ಅಪ್ಪ, ಅಣ್ಣ, ತಮ್ಮ ಎಂದು ನೋಡದೆ, ಗುಂಡಿಟ್ಟು ಕೊಂದ ಆ ಕ್ರೂರ ಮನಸ್ಸಿನ ಪಾತಕಿಗಳನ್ನು ಸದೆ ಬಡಿಯಲೇ ಬೇಕು... ಎಂಬುದು  ಆಶಯವಾಗಿತ್ತು. ಅದರಲ್ಲೂ " ಮೋದಿಗೆ ಹೋಗಿ ಹೇಳಿ" ಎಂಬ ಉದ್ಧಟತನದ ಮಾತು ರಕ್ತ ಕುದಿಯುವಂತೆ ಮಾಡಿತ್ತು. ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡರು ಎಂದು ಅನಿಸಿದ್ದು ಸಹಜವಾದರೂ... ಜವಾಬ್ದಾರಿ ಸ್ಥಾನದಲ್ಲಿ ಕುಳಿತವರು, ಎಲ್ಲ ದೃಷ್ಟಿಯಿಂದಲೂ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ, ಆಗಬಹುದಾದ ಪರಿಣಾಮಗಳು ಅದಕ್ಕೆ ಬೇಕಾದ ತಯಾರಿಗಳು ಎಲ್ಲವನ್ನೂ ಮಾಡಿಕೊಂಡು  "ಆಪರೇಷನ್ ಸಿಂಧೂರ" ಹೆಸರಿನ ಕಾರ್ಯಾಚರಣೆ ಮಾಡಿ, ಅದರಿಂದ ಸಾಕಷ್ಟು ಉಗ್ರಗಾಮಿಗಳನ್ನು ಹತಗೊಳಿಸಿದ ವಿಷಯ ಮನಸ್ಸಿಗೆ ಒಂದಷ್ಟು ನೆಮ್ಮದಿಯನ್ನು ಕೊಟ್ಟಿತು. ಅದಕ್ಕೂ ಹೆಚ್ಚು ಸಂತೋಷ ಕೊಟ್ಟಿದ್ದು, ಈ ವಿಚಾರವಾಗಿ ನಡೆದ ಪತ್ರಿಕಾಗೋಷ್ಠಿ. ಅದರಲ್ಲಿ ವಿವರಗಳನ್ನು ಕೊಡಲು, ಮಿಲಿಟರಿ ಉಡುಗೆ ತೊಟ್ಟು, ಟೋಪಿಯೊಂದಿಗೆ ಕಂಗೊಳಿಸುತ್ತಿದ್ದ ಧೀರ ಮಹಿಳೆಯರು... colonel ಸೋಫಿಯಾ ಖುರೇಶಿ ಹಾಗೂ wing commander ವ್ಯೋಮಿಕಾ ಸಿಂಗ್. ಅಸಹಾಯಕ ಮಹಿಳೆಗೆ ಹೇಳಿದ   "ಮೋದಿಗೆ ಹೇಳು" ಎಂಬ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ ಮಾಡಿದ ಆಪರೇಷನ್ ಸಿಂಧೂರದ ವಿವರಣೆಯನ್ನು ಉಗ್ರಗಾಮಿ ಸಂ...