Posts

ಭಿತ್ತಿಪತ್ರ-ಗೋಡೆ ಬರಹ

Image
  ಕೂಗುಮಾರಿ ಬಂದು ಬಾಗಿಲು ಬಡಿತಾಳೆ, ತಕ್ಷಣ ಬಾಗಿಲು ತೆಗೆದು ಅವಳನ್ನು ನೋಡಿದರೆ, ರಕ್ತಕಾರಿ ಸಾಯೋದು ಖಚಿತ. ಅದನ್ನ ತಪ್ಸೋಕೇ ಬಾಗಿಲ ಮೇಲೆ ಮೂರು ನಾಮ ಬರೆದು ನಾಳೆ ಬಾ ಎಂದು ಜೊತೆಗೆ ಸೇರಿಸಿದರೆ.. ಕೂಗು ಮಾರಿ ಅದನ್ನು ಓದಿ ನಾಳೆ ಬರೋಣ ಅಂತ ಹೋಗ್ತಾಳೆ,  ನಾಳೆ ಮತ್ತದೇ, ಹಾಗಾಗಿ ಸಾಯೋದು ತಪ್ಪುತ್ತೆ.  ಇದು ಚಿಕ್ಕಂದಿನಲ್ಲಿ ಕೇಳಿದ್ದ ಒಂದು ಸುದ್ದಿ . ಹಾಗಾಗಿ ಎಲ್ಲರ ಮನೆಯ ಬಾಗಿಲ ಮೇಲೆ ಇದು ಬರೆದದ್ದನ್ನು ನೋಡಿದ್ದೇನೆ... ನಮ್ಮ ಮನೆಯ ಬಾಗಿಲ ಮೇಲೂ  ಬರೆದದ್ದನ್ನು ಈಗ ನೆನೆದು ನಕ್ಕಿದ್ದೇನೆ. ಇದು ನೆನಪಾಗಲು ಕಾರಣವೇನೋ ಗೊತ್ತಿಲ್ಲ.. ಹಾಗೇ ಮನಸ್ಸಿಗೆ ಬಂತು... ಅದರ ಹಿಂದೆಯೇ ನೆನಪಿನ ಸರಮಾಲೆ. ಬಹಳ ಜನಕ್ಕೆ ವಿಷಯವನ್ನು ತಿಳಿಸಬೇಕಾದಾಗ ಅದನ್ನು  ಗೋಡೆಯ ಮೇಲಿನ ಬರಹ ಅಥವಾ ಗೋಡೆಗೆ ಅಂಟಿಸಿದ ಚೀಟಿಯ ಮೂಲಕ ಮಾಡುತ್ತಿದ್ದದ್ದು ರೂಢಿಗತ. ಅದಕ್ಕೂ ಮೊದಲು, ಓದು ಬರಹ ಬರದ ಜನ ಜಾಸ್ತಿ ಇದ್ದಾಗ, ಈ ವಿಚಾರಗಳನ್ನು ಡಂಗುರದ ಮೂಲಕ ಸಾರುತ್ತಿದ್ದರು.   ಡಂಗುರವ ಸಾರಿರಯ್ಯ ಡಿಂಗರಿಗರೆಲ್ಲರು ಭೂ-ಮಂಡಲಕ್ಕೆ ಪಾಂಡುರಂಗವಿಠ್ಠಲ ಪರದೈವವೆಂದು.. ಪುರಂದರದಾಸರು ಆಗಿನ ಕಾಲಕ್ಕೆ ಹೇಳಿದ್ದು. ಚಿಕ್ಕಂದಿನಲ್ಲಿ ನನ್ನೂರು ದೊಡ್ಡಜಾಲದಲ್ಲಿ ಕಂಡಂತಹ ಮೊದಲ ಭಿತ್ತಿ ಪತ್ರಗಳು.. ಚಿಕ್ಕಜಾಲದ ಸಿನಿಮಾ ಟೆಂಟ್ ನಲ್ಲಿ ಬರುತ್ತಿದ್ದ ಚಲನ ಚಿತ್ರಗಳ ವಿಚಾರ ತಿಳಿಸುವ ಪೋಸ್ಟರ್ ಗಳು. ನಂತರ ತುಂಬಾ ಕಣ್ಣಿಗೆ ಬಿದ್ದಂತಹ ಗ...

ಮುದ ನೀಡಿದ ಮನಸ್ಸುಗಳು

Image
ಮುದ ನೀಡಿದ ಮನಸ್ಸುಗಳು ಶನಿವಾರ ಬೆಳಿಗ್ಗೆ ವಾಕಿಂಗ್ ಮಾಡುವಾಗ, ಯಾವಾಗಲಾದರೂ ಒಮ್ಮೆ ಸಿಗುವ  ಹೇಮಾ   ( ನನ್ನ ಭಾವ ಮೈದುನನ ಹೆಂಡತಿ), ಒಬ್ಬ ಸ್ನೇಹಜೀವಿ. ವಾಕಿಂಗ್ ಮಾಡುತ್ತಾ ಟಾಕಿಂಗ್ ಮಾಡುವುದು ಸಾಮಾನ್ಯ... ವಿಷಯ ಇಂತದೇ ಆಗಿರಬೇಕೆಂದೇನೂ ಇಲ್ಲ. ಇಂದು ಮಾತನಾಡುವಾಗ ಬಂದ ವಿಷಯ- ಚಿಕ್ಕಂದಿನಲ್ಲಿ ರಜೆಯ ಕಾಲದಲ್ಲಿ ಬೇರೆಯವರ ಮನೆಗೆ ಹೋಗಿ ಇರುತ್ತಿದ್ದ ವಿಷಯ. ಆಗ ನೆನಪಿಗೆ ಬಂದಿದ್ದೆ ನಾನು ಕುಣಿಗಲ್ ಗೆ ಹೋಗಿದ್ದದ್ದು.  ನೆಂಟರಲ್ಲದ, ಹೆಚ್ಚು ಪರಿಚಯವಿಲ್ಲದವರಾದರೂ, ಪ್ರತಿಫಲಾಪೇಕ್ಷೆ ಇಲ್ಲದ ಪ್ರೀತಿ ತೋರಿಸಿದವರ ನೆನಪು ಮನಸ್ಸಿಗೆ ಬಂತು. ಅಂತ ಮನಸ್ಸುಳ್ಳ ವ್ಯಕ್ತಿಗಳ ಜೊತೆ ನನ್ನ ಒಡನಾಟದ ನೆನಪುಗಳ ಚಿತ್ರಣವೇ ಈ ಲೇಖನದ ವಿಷಯ. ಕುಣಿಗಲ್ ಭಾವ - ಹನುಮಂತ ರಾಯಪ್ಪನವರು: ನಾನು ಹೈಸ್ಕೂಲ್ ನಲ್ಲಿ ಓದುತ್ತಿದ್ದ ಹುಡುಗ, ಗವಿಪುರದ ನಮ್ಮ ವಠಾರದಲ್ಲಿ ಇದ್ದ ಎಂ ಎನ್ ಸುಮಿತ್ರ,  ( ಈಗ ಅವರು ನನಗೆ ಸುಮಿತ್ರ ಅತ್ತಿಗೆ)ಅವರ ಜೊತೆ ಸಲಿಗೆ... ನನ್ನಕ್ಕ ಗಿರಿಜಾಂಬನ ಮದುವೆಯಲ್ಲಿ ಅವರ ಜೊತೆ ಸೇರಿ ಹಾಡುಗಳನ್ನು ಹಾಡಿದ್ದೆ. ಅವರ ಅಕ್ಕ ಶಾಂತಾ ..ಅವರನ್ನು ಒಂದು ಸಲ ನೋಡಿದ್ದೆ. ಮಾಗಡಿ ಜಾತ್ರೆಗೆ ಹೋಗಿದ್ದಾಗ... ಈ ಶಾಂತ ಅಕ್ಕ ಸಿಕ್ಕರು.. ಹಾಗೆ ಕುಣಿಗಲ್ಲಿಗೆ ಹೋಗೋಣ ಬಾ ಅಂತ ಕರೆದರು... ಸ್ವಲ್ಪ ಸಂಕೋಚವಾದರೂ ಹೋಗುವ ಆಸೆ ಇತ್ತು.. ಅವರ ಗಂಡ ಸಹ (ನಾನು ಮೊದಲು ಬಾರಿ ನೋಡಿದ ಆದರೆ ಕೇಳಿದ್ದ "ಕುಣುಗುಲು ಭಾವ"), ನಡಿ ಹೋಗೋ...

ಸವಿ ನೆನಪುಗಳು ಬೇಕು-ಸವಿಯಲೀ ಬದುಕು

Image
    ಫೆಬ್ರವರಿ 3ನೇ ವಾರ ನನ್ನಣ್ಣನ ಮಗಳು ವಾಣಿ ಮತ್ತು ಶಶಿಧರ್ ದಂಪತಿಗಳ ಮಗ ಆಕಾಶನ ಮದುವೆ... ಚೆನ್ನೈಯಲ್ಲಿ.  ಮದುವೆ ಆಧುನಿಕತೆ ಹಾಗೂ ಪರಂಪರೆ ಎರಡರ ಮಿಳಿತವಾಗಿತ್ತು. ಸಂತೋಷದಿಂದ ಕೂಡಿತ್ತು.. ಹಾಗೇ ಒಂದಷ್ಟು ನೆನಪುಗಳನ್ನು ಮೇಲುಕುಹಾಕುವಂತೆ ಮಾಡಿತು. ಚೆನ್ನೈ ( ಅಂದಿನ ಮದರಾಸು) ನನ್ನ  ಓದು ಮುಗಿದ ನಂತರ(1967) ಮೊದಲ ಬಾರಿಗೆ ನನ್ನ ಕಾರ್ಯಕ್ಷೇತ್ರವಾದ ಕಾರ್ಖಾನೆಯ ಸಂಪರ್ಕ ಕೊಟ್ಟ ಊರು. ಪೆರಂಬೂರಿನಲ್ಲಿರುವ ದಕ್ಷಿಣ ರೈಲ್ವೆಯ ಕಾರ್ಖಾನೆಯಲ್ಲಿ ಭಾರತ ಸರ್ಕಾರ ಪ್ರಾಯೋಜಿತ apprentice ಯೋಜನೆಯಲ್ಲಿ ಕೆಲಸ, ಯಾವ ಅರ್ಜಿಯೂ ಸಲ್ಲಿಸದೆ, ಸಂದರ್ಶನವೂ ಇಲ್ಲದೆ, ಕೇವಲ ಅರ್ಹತೆಯ ಆಧಾರದ ಮೇಲೆ ಸಿಕ್ಕ ಅವಕಾಶ. ತಿಂಗಳಿಗೆ 150 ರೂಪಾಯಿ ವೇತನ ಪಡೆದು, ಒಂದಷ್ಟು ಹೊಸದನ್ನು ಕಲಿತು, ಒಂದಷ್ಟು ಕಾಲಹರಣವನ್ನು ಮಾಡಿ ವರ್ಷ ಪೂರೈಸಿದ್ದು. ಆಗ ಪರಿಚಯವಾಗಿ ಈಗಲೂ ಉಳಿದಿರುವ ಸ್ನೇಹ ಅಂದರೆ ಅದು S ರಾಮನ್ ನದು.  ವಾಣಿ ಲಗ್ನ  ಪತ್ರಿಕೆ ಕೊಟ್ಟಿದ್ದು ಪ್ರಾಯಶಃ ಡಿಸೆಂಬರ್ ಮೊದಲ ವಾರದಲ್ಲಿ... ಆಗಲೇ ರಾಮನಿಗೆ ವಿಷಯ ತಿಳಿಸಿದ್ದೆ. ಆಗ ಅವನು ಆಸ್ಟ್ರೇಲಿಯಾದಲ್ಲಿದ್ದ... ಮದುವೆಯ ಹೊತ್ತಿಗೆ ವಾಪಸ್ ಬರುವನೆಂದೂ ಖಂಡಿತವಾಗಿಯೂ ಭೇಟಿಯಾಗುವುದೆಂದು ನಿರ್ಧಾರ ಮಾಡಿದೆವು. ನಮ್ಮ ಭೇಟಿಯು ನಿಯಮಿತವಾಗಿಲ್ಲದಿದ್ದರೂ, ಸಂಪರ್ಕ ಮಾತ್ರ ತಕ್ಕಮಟ್ಟಿಗೆ ಇತ್ತು. ಚೆನ್ನೈಗೆ  ಮೊದಲ ಮದುವೆಗೆ ಹೋದದ್ದು ರಾಮನ್ ದಂಪತಿಗಳ ಮಗಳ ...

ಜೀವನ- ಉತ್ಸಾಹ- ಉತ್ಸವ

Image
  ಜೀವನ- ಉತ್ಸಾಹ- ಉತ್ಸವ ಹೋದ   ಲೇಖನದಲ್ಲಿ ಹೇಳಿದಂತೆ... ಜೀವನದ ವಿಷಯಗಳ ಬಗ್ಗೆ ಬರೆಯಲು ಯೋಚಿಸುತ್ತಿದ್ದಾಗ ಕಣ್ಣಿಗೆ ಬಿದ್ದದ್ದೆ, ನನ್ನ ಯುವ ಸ್ನೇಹಿತ ಮಣಿಕಂಠ facebook ನಲ್ಲಿ ಬರೆದಿದ್ದ ಒಂದು ಲೇಖನ. ಮಣಿಕಂಠನಿಗೆ ಮದುವೆಯಾಗಿ ಒಂದು ವರ್ಷ ಆದ ಸಂದರ್ಭದಲ್ಲಿ ತನ್ನ ಮಡದಿಗೆ ಬರೆದ ಪತ್ರರೂಪದ ಲೇಖನ. ಅದು ತನ್ನ ಮಡದಿಗೆ ಬರೆದದ್ದಾದರೂ.. ಪತ್ರವು ಬಹಿರಂಗ ರೂಪದಲ್ಲಿ ಇತ್ತು. ಪತ್ರವೂ ಭಾವುಕತೆಯಿಂದ ಕೂಡಿತ್ತು... ಅಲ್ಲಿ ಮದುವೆಯ ಮುಂಚಿನ ಮತ್ತು ನಂತರದ ಸುಂದರ ಕ್ಷಣಗಳು, ಮದುವೆಯ ಸಂಭ್ರಮ, ಕಾರ್ಯನಿಮಿತ್ತ ದೂರವಿರಬೇಕಾದಂತ ಸಮಯದ ಅಗಲಿಕೆ (ವಿರಹ ಎನ್ನಲೇ) ಇದರ ಮಧ್ಯೆ ಮುದ್ದು ಕಂದನ ಆಗಮನದ ಮುನ್ಸೂಚನೆಯ ಸಿಹಿ ಸುದ್ದಿ.... ಅದರ ಜೊತೆ ಜೊತೆಗೆ ಮಗುವನ್ನು ಪಡೆಯಲು ತಾಯಿ ಪಡಬೇಕಾದಂತಹ ನೋವು, ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಇರುವ ಸ್ಥಾನಮಾನ ಹೀಗೆ ಸಾಕಷ್ಟು ವಿಷಯಗಳ ಚಿಂತನ ಮಂಥನ. ಜೀವನವನ್ನು ಉತ್ಸಾಹದಿಂದ ನೋಡಿದ,  ಸಂಭ್ರಮದಿಂದ ಅನುಭವಿಸಿದ ಮನದಾಳದ ಮಾತುಗಳು. ಅದರಲ್ಲೂ ಮಗನ ಆಗಮನ ಸಂಭ್ರಮವನ್ನು ಇಮ್ಮಡಿಸಿತ್ತು ಎಂದು ನನ್ನ ಅನಿಸಿಕೆ. ಓದಿದ ನಂತರ... ಜೀವನವನ್ನು ಉತ್ಸಾಹದಿಂದ..ಉತ್ಸವದಂತೆ ಆಚರಿಸುವ, ಸಂಭ್ರಮಿಸುವ ಕ್ಷಣಗಳನ್ನು, ಅಂತಹ ಸ್ಫೂರ್ತಿದಾಯಕ ವ್ಯಕ್ತಿಗಳನ್ನು  ನೆನಪಿನಿಂದ ಹೆಕ್ಕಿ  ತೆಗೆಯುವ ಮನಸಾಯಿತು... ಇದೋ ನಿಮ್ಮ ಮುಂದೆ ಆ ಮಧುರ ನೆನಪುಗಳು. ಉತ್ಸವ ಎಂದ ಕ್ಷಣ ನನ್ನ ನೆನಪಿಗ...

ದಯಾ ಮರಣ - ಇಚ್ಛಾ ಮರಣ

Image
ದಯಾ ಮರಣ - ಇಚ್ಛಾ ಮರಣ ಜಾತಸ್ಯ ಮರಣಂ ಧ್ರುವಂ... ಹುಟ್ಟಿದವರೆಲ್ಲ ಸಾಯಲೇಬೇಕು... ಸಾವು ಖಚಿತ ... ಆದರೆ ಸಾಯಲು ಇಚ್ಚಿಸುವವರು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ ಎಂದು ಹೇಳಬಹುದು. "ನಾನು ಸಾಯಕ್ಕೆ ರೆಡಿ" ಎಂದು ಹೇಳುವ ಬಹಳಷ್ಟು ಮಂದಿಯನ್ನು ನೋಡಿದ್ದೇನೆ... ಆದರೆ ಅವರ ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಾಸವಾದರೂ ಡಾಕ್ಟರ್ ಬಳಿ ಓಡಿ ಹೋಗುವುದನ್ನೂ ನಾನು ನೋಡಿದ್ದೇನೆ.  ಕೆಲವರ ಆರೋಗ್ಯ ಹದಗೆಟ್ಟು... ಯಾವ ರೀತಿಯ ಸುಧಾರಣೆಯೂ ಸಾಧ್ಯವಿಲ್ಲವೆಂದು ತಿಳಿದಿದ್ದರೂ... ಅವರು ಪಡುತ್ತಿರುವ ಕಷ್ಟ, ನೋವು ಸಹಿಸಲು ಅಸಾಧ್ಯ ವಾದರೂ... ಅವರ ಕ್ಷಣ ಕ್ಷಣದ ಬೇಡಿಕೆ ಸಾವೇ ಆದರೂ... ಆ ಭಾಗ್ಯ ಅವರಿಗಿಲ್ಲ. ಇದರ ಇನ್ನೊಂದು ಮುಖ... ನರಳುವವರದು ಒಂದು ಪಾಡಾದರೆ ಅವರನ್ನು ನೋಡಿಕೊಳ್ಳುವ  ಮನೆಯ ಜನರ ಕಷ್ಟ ಹೇಳತೀರದು. ಈ ಸ್ಥಿತಿ ಬಹಳ ಕಾಲ ಎಳೆದಷ್ಟು... ಮನೆ ಮಂದಿಯ ಸಹನಾ ಶಕ್ತಿಗೆ ಸವಾಲೇ ಸರಿ. ಇದು ಮನೆಯವರ ದೈಹಿಕ ಶ್ರಮ, ಮಾನಸಿಕ ಒತ್ತಡ, ಹಣಕಾಸಿನ ತೊಂದರೆ ಎಲ್ಲವೂ ಒಟ್ಟಿಗೆ ತೊಡರಿಕೊಂಡು ಹಣ್ಣು ಮಾಡುವುದನ್ನು ಕಂಡಿದ್ದೇನೆ. "ಎಷ್ಟು ದಿನ ಈ ಜಂಜಾಟ.. ಇದಕ್ಕೆ ಕೊನೆಯೇ ಇಲ್ಲವೇ... ಸಾಕಾಗಿದೆ" ಎಂದು  ಹೇಳಿದುದನ್ನು ಕೇಳಿದ್ದೇನೆ. ಅಷ್ಟೇಕೆ, ನನ್ನಪ್ಪ 109ನೆಯ ವಯಸ್ಸಿನ ತನಕ ಇದ್ದವರು, ಆರೋಗ್ಯವಾದ ಸುಖ ಜೀವನವನ್ನು ನಡೆಸಿದವರು... ಕೊನೆಯ ದಿನಗಳ ಅವರ ಕಣ್ಣೋಟದಲ್ಲಿದ್ದ ದೈನ್ಯತೆಯನ್ನು ಕಂಡ ನಾನು ಎಷ್ಟೋ ಸಲ ದೇವರಲ್ಲ...

ಕೊನೆಯ ಆಸೆ - Last wish

Image
  ಕೊನೆಯ ಆಸೆ - Last wish (will) ನನ್ನ ಬ್ಲಾಗ್  ಲೇಖನ “ನನಸಾಗದ ಕನಸುಗಳು.. ಕೈಗೂಡದ ಆಸೆಗಳು” ಓದಿದ ಶ್ರೀಮಾನ್ ಗುಂಡೂರಾಯರ ಪ್ರತಿಕ್ರಿಯೆ ಕೆಳಗಿನಂತಿತ್ತು: ಕೆಲ ದಿನಗಳ ನಂತರ ಮತ್ತೊಮ್ಮೆ ನಾ ಬರೆದ ಲೇಖನವನ್ನು... ನಾನೇ ಓದಿದೆ.. ಅಮ್ಮನ ಬಗ್ಗೆ ಬರೆದದ್ದನ್ನು ಬಿಟ್ಟರೆ... ಭಾವವನ್ನು ಪ್ರಚೋದಿಸುವ ಯಾವ ಅಂಶವು ಬೇರೆಲ್ಲೂ ನನಗೆ ಕಾಣಲಿಲ್ಲ.. ಅಂದಿನ ಕಾಲಕ್ಕೆ ಕೆಲವು ವಿಚಾರದಲ್ಲಿ ನಿರಾಶೆಯಾಗಿದ್ದರೂ... ಕಾಲಕ್ರಮೇಣ ವಸ್ತು ಸ್ಥಿತಿಯನ್ನು ಒಪ್ಪಿಕೊಂಡದ್ದರಿಂದ ನಿರ್ಲಿಪ್ತ ಭಾವನೆ ಇತ್ತು. ಇನ್ನು ಕೆಲವೊಂದು ತಿಕ್ಕಲುತನಗಳು.. ಯಾವ ಭಾವ ಹೊಮ್ಮಲು ಸಾಧ್ಯ ಇತ್ತು? ಲೇಖನ ಬರೆದ ಆಗಿನ ಭಾವನೆಗಳು ಮಾತ್ರ ಅಲ್ಲಿ ಹೊರ ಹೊಮ್ಮಿದೆ.  ಗುಂಡೂರಾಯರ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಗೌರವವಿದೆ.. ಅದನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಆಶ್ವಾಸನೆ ಕೊಡಬಲ್ಲೆ. ನಿಮ್ಮ ಅಭಿಪ್ರಾಯಕ್ಕೆ ನನ್ನ ನಮನಗಳು ಸರ್. ಇನ್ನು ಎರಡನೆಯ ಭಾಗಕ್ಕೆ ಬಂದಾಗ..  ಇದೇ ಶೀರ್ಷಿಕೆಯಲ್ಲಿ ಎರಡನೇ ಪ್ರಬಂಧ  ಬರೆಯುವ ಸಲಹೆ. ಇದು ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿತು. “once more ಎಂದರೆ ಹಾಡುವುದು ಪಾತ್ರದಾರನ ಮರ್ಜಿ" ಎಂದು ಪ್ರಕಟಿಸಿದ್ದ ನಾಟಕದ ಕರಪತ್ರ... ಶಹಾಬಾದಿನಲ್ಲಿ ಓದಿದ್ದು ನೆನಪಿಗೆ ಬಂದು.. ಆ ಸಾಲನ್ನೇ ಉಪಯೋಗಿಸಿ ಎರಡನೇ ಪ್ರಬಂಧವನ್ನು ಬರೆಯಲು ತಪ್ಪಿಸಿಕೊಳ್ಳೋಣವೇ ಎಂದು ಯೋಚಿಸಿದ್ದು ಉಂಟು. ಹಾಗೆ ಮಾಡಲು ಮನಸ...

ಜೀವನದ ಸಹ ಪ್ರಯಾಣಿಕರು

Image
ಸಾವಿನ ಚಿಂತನೆಯ ಬಳಿಕ ಜೀವನದ ಬಗ್ಗೆ ಮುಖ ಮಾಡುವುದು ಅನಿವಾರ್ಯ... ಅಪೇಕ್ಷಣೀಯ  ಸಹ. ಆ ಗುಂಗಿನಲ್ಲಿ.. ಸತ್ತ ಹಿರಿಯರು ಹಾಗೂ ಸಮಕಾಲೀನರ ನೆನಪುಗಳೇ ಒಂದರ ಹಿಂದೆ ಒಂದು ಓಡುತ್ತಿದ್ದವು.. ಅದನ್ನು ಹತೋಟಿಗೆ ತರಲು ಹೆಣಗಾಡುತ್ತಿದ್ದಾಗ, ಪ್ರಯತ್ನಪೂರ್ವಕವಾಗಿ ನೆನೆಸಿಕೊಂಡದ್ದು ಬದುಕಿರುವ ವ್ಯಕ್ತಿಗಳನ್ನು... ಜೊತೆ ಜೊತೆಗೆ ಬಂದದ್ದು ನನ್ನ ಜೀವನದ ಪಯಣದಲ್ಲಿ ಇಣುಕಿ ಹೋದ ಕೆಲ ವ್ಯಕ್ತಿಗಳ ನೆನಪು. ಅವರ ಜೊತೆ ಕಳೆದ ಕ್ಷಣಗಳು ಕೆಲವೇ ಆದರೂ.. ನನ್ನ ಮನಸಿನಲ್ಲಿ  ಅಚ್ಚಳಿಯದೆ ಉಳಿದಿರುವ  ಅವರುಗಳ ನೆನಪು ಬಂತು. ಇಲ್ಲಿದೆ ಅಪರೂಪದ ವ್ಯಕ್ತಿಗಳ ಪರಿಚಯ... . ಚನ್ನಬಸಪ್ಪ: ನನ್ನೂರು ದೊಡ್ಡಜಾಲ ಬಿಟ್ಟು ಬೆಂಗಳೂರಿಗೆ ಬಂದು... ರಾಷ್ಟ್ರೀಯ ವಿದ್ಯಾಲಯ ಹೈಸ್ಕೂಲಿಗೆ ಸೇರಿದ ಹೊಸದು. ವಾತಾವರಣವೂ ಹೊಸದು, ಜನಗಳೂ ಹೊಸಬರು.  "ಢಣ ಢಣ ಢಣಾ" ಎಂದು ಶಬ್ದ ಬರುತ್ತಿದ್ದ ಶಾಲೆಯ ಗಂಟೆಯ ಪರಿಚಯವಿದ್ದ ನನಗೆ  "ಡುಂಟ ಢಾಂಠು ಢಾಣ್  ಢಾಣ್...ಡುಂಟ ಢಾಂಠು ಢಾಣ್  ಢಾಣ್" ಎಂದು ಲಯಬದ್ಧವಾಗಿ ಹೊಡೆಯುವ ಗಂಟೆಯ ಸದ್ದು ಸಹ ಹೊಸದೇ. ಈ ಘಂಟೆಯ ಬಗ್ಗೆ ನನಗೆ ಕುತೂಹಲ... ಇನ್ನೂ ಸರಿಯಾಗಿ ಪರಿಚಯವಾಗದವರನ್ನು ಕೇಳಲು ಮಖೇಡಿತನ. ಒಂದು ದಿನ ಇದ್ದಕ್ಕಿದ್ದಂತೆ ಕಣ್ಣಿಗೆ ಬಿದ್ದದ್ದು ....ಹಿಡಿ ಇರುವ ಗಂಟೆಯನ್ನು ಕೈಯಲ್ಲಿ ಹಿಡಿದು, ಕೈಯನ್ನು ಮೇಲೆ ಕೆಳಗೆ ಆಡಿಸುತ್ತಾ, ಸ್ವಲ್ಪ ಮುಂಗೈಯನ್ನು ತಿರುಗಿಸುತ್ತಾ... ಲಯಬದ್ಧವಾಗಿ... ...