ಪರಿಸರ - ಗಣಪ:
ಪರಿಸರ - ಗಣಪ: ನಮ್ಮ ಸುತ್ತಲಿನ ಪರಿಸರದ ಬಗೆಗಿನ ಕಾಳಜಿ ಈಗ ಬಹಳ ಬೇಕಿದೆ. ಯಾಂತ್ರೀಕರಣಕ್ಕೂ, ಪರಿಸರಕ್ಕೂ ಉತ್ತರ ಧೃವ, ದಕ್ಷಿಣ ಧೃವ ಸಂಭಂಧ. ಹಾಗೇ ಮನುಷ್ಯನ ದುರಾಸೆಗೂ ವಿಲೋಮ ಸಂಭಂಧ. ಪುರಾತನ ಕಾಲದಿಂದಲೂ ನಮ್ಮ ಹಿರಿಯರ ಜೀವನಶೈಲಿ ಪರಿಸರಕ್ಕೆ ಹೊಂದಿಕೊಂಡು ಅದಕ್ಕೆ ಪೂರಕವಾಗಿರುತ್ತಿತ್ತು. ತನ್ನೆಲ್ಲ ಬೇಕುಗಳಿಗೆ ಮನುಷ್ಯ ಪರಿಸರದಮೇಲೆ ಅವಲಂಬಿಸಿದ್ದರೂ, ತನ್ನ ಬೇಕುಗಳನ್ನು ಮಿತಿಯಲ್ಲಿಟ್ಟಿರುತ್ತಿದ್ದ. ಪ್ರಕೃತಿ ತನ್ನದೆಲ್ಲವನ್ನೂ ಜೀವ ಸಂಕುಲಕ್ಕೆ ಧಾರೆಯೆರೆದಿದೆ. ಮೂಕ ಪ್ರಾಣಿಗಳು ಸಹ ತಮ್ಮ ಜೀವನವನ್ನು ಪ್ರಕೃತಿಯಮೇಲೆ ಅವಲಂಬಿಸಿಕೊಂಡಿವೆ. ಆದರೆ ಅವುಗಳು ತಮ್ಮ ಹೊಟ್ಟೆ ತುಂಬಿದನಂತರ ಅವುಗಳ ಬೇಕುಗಳಿಗೆ (brake) ಕಡಿವಾಣ ಹಾಕುತ್ತವೆ. ಮನುಷ್ಯ ಪ್ರಾಣಿ ಮಾತ್ರ ಇದಕ್ಕೆ ಹೊರತು. ಅವನ ಆಸೆಗೆ (ದುರಾಸೆಗೆ) ಮಿತಿಯೇ ಇಲ್ಲ. ಹಾಗಾಗಿ ನೆಲ, ಜಲ, ಗಾಳಿ, ಮರಗಿಡಗಳು, ಖನಿಜಸಂಪತ್ತು ಎಲ್ಲದರ ಮೇಲೂ ತನ್ನ ದುರಾಸೆಯ ಹಸ್ತವನ್ನು ಚಾಚಿದ್ದಾನೆ. ಹಾಗಾಗಿ ಇಂದು ಪರಿಸರ ವಿನಾಶದ ಅಂಚಿಗೆ ಬಂದು ನಿಂತಿದೆ. ಇದು ಎಲ್ಲರಿಗೂ ತಿಳಿದ ವಿಷಯ. ಗಣೇಶನ ಹಬ್ಬ ಬಂದಿದೆ. ಇದು ನಮ್ಮೆಲ್ಲರಿಗೂ ಸಡಗರ ನಿಜ. ಈ ಸಡಗರದ ಜೊತೆ ಜೊತೆಗೆ ನಮ್ಮ ಪರಿಸರದ ಬಗ್ಗೆ ಯೋಚಿಸಬೇಕಾದ್ದು ನಮ್ಮ ಕರ್ತವ್ಯ. ಈ ವಿಷಯ ಚರ್ವಿತ ಚರ್ವಣವಾದರೂ ಸಹ ಮತ್ತೊಮ್ಮೆ ನೆನಸಿಕೊಳ್ಳುವುದು ಸಮಂಜಸ ಎಂದು ನನ್ನ ನಂಬಿಕೆ. ಮೊದಲು ಮನೆ. ಮನೆಗೆ ತರುವ ಗಣಪ ಮತ್ತು ಗೌರ...