ಎರಡೆರಡು ಸಂಭ್ರಮ
ಭಗವದ್ಗೀತೆಯ ಗೀತೋತ್ಸವದ ಸಂಭ್ರಮ ಮುಗಿಯುತ್ತಿಂದಂತೆಯೇ ಮತ್ತೊಂದು ಸಂಭ್ರಮಕ್ಕೆ ಅಣಿಯಾದೆ. ಅದು ರುದ್ರಪಟ್ಟಣದಲ್ಲಿ ನಡೆದ ಧಾತ್ರಿ ಹವನ. ರುದ್ರಪಟ್ಟಣದ ನಂಟು ಮತ್ತಷ್ಟು ಗಟ್ಟಿಯಾದ ಸಮಯ Dhatri homa video ಕಾವೇರಿ ನದಿ ತೀರದ ಮರದ ತೋಪಿನ ಮಧ್ಯದಲ್ಲಿ ಸುಂದರವಾಗಿ ಅಣಿಗೊಳಿಸಿದ್ದ ಯಜ್ಞ ಕುಂಡದಲ್ಲಿ ಸುಧೀರ್ಘವಾಗಿ ನಡೆದ ಹೋಮ. ರುದ್ರಪಟ್ಟಣದ ಶ್ರೀರಾಮ ಸೇವಾ ಸಮಿತಿಯ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದ ರೂವಾರಿ, ಸಂಗೀತಜ್ಞ RK ಪದ್ಮನಾಭ ಅವರ ಮಾತಿನಂತೆ, ಈ ಕಾರ್ಯಕ್ರಮಕ್ಕೆ ಸ್ಪೂರ್ತಿಯೇ1961 ರಲ್ಲಿ ನಡೆದ ಅತಿರುದ್ರ ಮಹಾಯಾಗ. 20.12.1961 ರಂದು ಪ್ರಾರಂಭವಾಗಿ 31.12.1961ರ ವರೆಗೆ ನಡೆದ ಈ ವಿಶೇಷ ಯಾಗವು ಶೃಂಗೇರಿ ಪೀಠದ ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ ಸನ್ನಿಧಿಯಲ್ಲಿ, ಅವರ ಮಾರ್ಗದರ್ಶನದಲ್ಲಿ ನೆರವೇರಿದ್ದು. ಇದರಲ್ಲಿ ಮೈಸೂರು ರಾಜ ಮನೆತನದ ಜಯ ಚಾಮರಾಜೇಂದ್ರ ಒಡೆಯರ್ ರವರು, ಅಂದಿನ ಮುಖ್ಯಮಂತ್ರಿ ಬಿ ಡಿ ಜತ್ತಿಯವರು ಹಾಗೂ ಇತರ ಗಣ್ಯಾತಿ ಗಣ್ಯರು ಭಾಗವಹಿಸಿದ್ದರೆಂಬುದು ಚರಿತ್ರೆಯ ಭಾಗ. ನಂತರದ ದಿನಗಳಲ್ಲೂ, ಧಾತ್ರಿ ಹವನ ನಡೆಯುತ್ತಿದ್ದು, ಕಾರಣಾಂತರಗಳಿಂದ ಮುಂದುವರೆದಿರಲಿಲ್ಲ. ಈ ಕಾರ್ಯವನ್ನು ರುದ್ರಪಟ್ಟಣದ ವಾಸಿಗಳ ಹಾಗೂ ರುದ್ರಪಟ್ಟಣದ ಬೇರುಗಳನ್ನು ಹೊಂದಿರುವ, ಎಲ್ಲ ಕಡೆ ಪಸರಿಸಿರುವ ಜನಗಳ ಸರ್ವತೋಮುಖ ಬೆಳವಣಿಗೆ ಹಾಗೂ ಶುಭಕ್ಕಾಗಿ ಮುಂದುವರಿಸಿ ಕೊಂಡು ಹೋಗಬೇಕೆಂದು ನಿಶ್ಚಯಿಸ...