Posts

ದೀಪಾವಳಿ - ಬಲಿ ಚಕ್ರವರ್ತಿ

Image
Time and tide waits for none - ಸಮಯ ನಿಂತ ನೀರಲ್ಲ... ಅದು ಯಾರಿಗೂ, ಯಾವುದಕ್ಕೂ ಕಾಯುವುದಿಲ್ಲ... ಇದು ಪ್ರಕೃತಿಗೂ ಹೊರತಲ್ಲ. ಚಲನೆಯು ಸಮಯದ ಗುಣ.  ಆಗಬೇಕಾಗಿರುವ ಘಟನೆಗಳೆಲ್ಲ ಆಯಾ ಸಮಯಕ್ಕೆ ತಾನೇ ತಾನಾಗಿ ಘಟಿಸುತ್ತಿರುತ್ತವೆ. " ಜಬ್ ಜಬ್  ಜೋ ಜೋ ಹೋನಾ ಹೈ..ತಬ್ ತಬ್  ಸೋ ಸೋ ಹೋತಾ ಹೈ" ಎನ್ನುವುದು ಒಂದು ಹಿಂದಿಯ ಹೇಳಿಕೆ. ಅದೇ ರೀತಿ , ವರ್ಷಕ್ಕೊಮ್ಮೆ ಭೂಲೋಕಕ್ಕೆ ಬಂದು ಜನರಿಂದ ಪೂಜಿಸಿಕೊಳ್ಳುವ ವರವನ್ನು, ವಿಷ್ಣುವಿನಿಂದ ಪಡೆದ ಬಲಿಚಕ್ರವರ್ತಿ, ಬರಬೇಕಾದ ದೀಪಾವಳಿಯ ಪಾಡ್ಯವೂ ಬಂತು... ಬಲಿಪಾಡ್ಯಮಿಯ ಬಲೀಂದ್ರನ ಪೂಜೆಯ ದಿನವೂ ಮುಗಿದೇ ಹೋಯಿತು.  ಬಲಿ ಚಕ್ರವರ್ತಿಯ ಕಥೆ.. ಚಿಕ್ಕಂದಿನಲ್ಲಿ ಕೇಳಿದಾಗ, ನನಗೆ ಮೂಡಿದ ಪ್ರಶ್ನೆಗೆ ಇದುವರೆಗೂ ಸಮಂಜಸವಾದ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ವಾಮನನ ಅವತಾರಿ ವಿಷ್ಣು ತ್ರಿವಿಕ್ರಮನಾಗಿ ಬೆಳೆದದ್ದು ಒಪ್ಪಲು ಕಷ್ಟವಾದರೂ, ಸಾಧ್ಯ ಉಂಟು ಎಂದು ನಂಬಿದೆ. (ಆಂಜನೇಯ ಆಕಾಶದೆತ್ತರಕ್ಕೆ ಬೆಳೆದು ಲಂಕೆಗೆ ಹಾರಿದ್ದ ಉದಾಹರಣೆ ಇತ್ತಲ್ಲ )  ಆದರೆ ತ್ರಿವಿಕ್ರಮ  ಇಟ್ಟ ಮೊದಲನೆಯ ಹೆಜ್ಜೆ ಭೂಮಿಯನ್ನಾವರಿಸಿದ್ದು ಒಪ್ಪಿದರೂ.. ಭೂಮಿಯ ಮೇಲಿದ್ದ ಜನರ ಪರಿಸ್ಥಿತಿ ಏನು, ಅದು ಬಿಡಿ ಬಲಿ ಚಕ್ರವರ್ತಿ ಆಗ ಎಲ್ಲಿದ್ದ ಎನ್ನುವುದು ನಿಗೂಢ. ಇಂಥ ಪ್ರಶ್ನೆ ಕೇಳಿದಾಗ, ತಲೆಹರಟೆ ಮಾಡಬೇಡ... ದೇವರ ಕಥೆ ಒಪ್ಪಿಕೋ ಬೇಕು ಅಷ್ಟೇ... ಎಂಬ ಉತ್ತರ ಸಮಾಧಾನ ತಂದಿಲ...

ದೈವಾಧೀನನಾದ ಮೋಹನ

Image
ಇಂದು (20.10.2025) ಸುತ್ತು ಮುತ್ತಲಿನ ಜನಕ್ಕೆಲ್ಲ ದೀಪಾವಳಿಯ ಸಡಗರ. ಎಲ್ಲಾ ಕಡೆ ಪಟಾಕಿ ಹಚ್ಚುವ ಶಬ್ದ, ನನ್ನ ಮನಸ್ಸು ಮಂಕಾಗಿದೆ. ನನ್ನ ಸ್ನೇಹಿತ ಮೋಹನನ (BS ಮೋಹನ ಕುಮಾರ್) ದೇಹವನ್ನು ಅಗ್ನಿಗರ್ಪಿಸಿ, ಸ್ನಾನ ಮಾಡಿ, ಊಟ ಮಾಡಿ ಕುಳಿತಿದ್ದೇನೆ.  ಹೋದ ಲೇಖನದಲ್ಲಿ ಅವನು ಆಸ್ಪತ್ರೆಯಲ್ಲಿದ್ದ ವಿಷಯ ಬರೆದು,ಬೇಗ ಗುಣಮುಖವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೆ, ಅದಕ್ಕೆ ದೇವರ ಒಪ್ಪಿಗೆ ಸಿಗಲಿಲ್ಲ.  ನೆನ್ನೆ ಬೆಳಿಗ್ಗೆ ಅವನನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಬಂದಿದ್ದೆ. ಬಾಯೊಳಗೆ ಹಾಕಿದ್ದ ನಳಿಕೆಗಳ ಕಾರಣ, ಮಾತಾಡಲಾಗದ ಮೋಹನ, ಸಂಜ್ಞೆಯ ಮೂಲಕವೇ ತಿಂಡಿ ಆಯ್ತಾ, ಆರಾಮವಾ, ಮೊಮ್ಮಗಳು ಹೇಗಿದ್ದಾಳೆ ಎಂದು ಕೇಳಿದ್ದು ಅರ್ಥವಾಯಿತು.  ಈ ಪರಿಸ್ಥಿತಿಯಲ್ಲೂ ಅವನ ಕಾಳಜಿ, ಆಶ್ಚರ್ಯ ಉಂಟು ಮಾಡಿತು. ಆದರೆ ಹೆಬ್ಬೆಟ್ಟು ಮೇಲೆತ್ತಿದ ಮುಷ್ಟಿಯನ್ನು ನಾಲ್ಕಾರು ಬಾರಿ ತೋರಿಸಿದ ಮೋಹನ ಹೇಳಿದ್ದು ಏನೆಂದು ತಿಳಿಯಲಿಲ್ಲ. ಮಾತುಗಾರ ಮೋಹನನನ್ನು ಮಾತಿಲ್ಲದ ಮೂಕನನ್ನಾಗಿ ನೋಡಲು ಕಷ್ಟ ಎನಿಸಿತು. ಸಂಜೆ ಅವನ ಸಾವಿನ ಸುದ್ದಿ ಕೇಳಿ ಮತ್ತೆ ಆಸ್ಪತ್ರೆಗೆ ಹೋಗಿ, ಮುಂದಿನ ಕಾರ್ಯಗಳಿಗೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ನಮ್ಮ ಸ್ನೇಹಿತರ ಗುಂಪು ತಯಾರಿ ನಡೆಸಿತು.  ಮೋಹನನ ನೆನಪುಗಳು ಬಲವಾಗಿ ಕಾಡಿದವು. ಅವನ ಪ್ರಭಾವ ನನ್ನ ಮೇಲೆ ಈ ಮಟ್ಟಕ್ಕಿದೆ ಎಂದು ನನಗೆ ಅನ್ನಿಸಿರಲಿಲ್ಲ. ನನಗೆ ಮೋಹನನ ಪರಿಚಯವಾದದ್ದು...  ಸುಮಾರು 20 ವರ್...

ಹೋಟೆಲ್- ತಿಂಡಿ - ಮಸಾಲೆ ದೋಸೆ

Image
ಕೆಲವು ದಿನಗಳಿಂದ.. ದಿನಗಳೇನು ತಿಂಗಳುಗಳೇ ಕಳೆದಿವೆ... ವಿದ್ಯಾರ್ಥಿ ಭವನ್ ನಲ್ಲಿ ಮಸಾಲೆ ದೋಸೆ ತಿನ್ನಬೇಕೆಂಬುದು ನನ್ನ ಮಡದಿಯ ಆಸೆ. ಯಾಕೋ ಕಾಲವೇ ಕೂಡಿ ಬಂದಿರಲಿಲ್ಲ. ಎಲ್ಲ ಸರಿ ಇದ್ದಾಗ ಶುಕ್ರವಾರ ಹೋಟೆಲ್ ಗೆ ರಜಾ, ಶನಿವಾರ ಭಾನುವಾರ ತುಂಬಾ ಜನಸಂದಣಿ ಬೇಡ.. ಹೀಗೆ ಏನೇನೋ ಕಾರಣಗಳು. ಇದ್ದಕ್ಕಿದ್ದಂತೆ ಇಂದು (ಬುಧವಾರ) ಬೆಳಿಗ್ಗೆ ಏನೋ ಮಾತನಾಡುತ್ತಾ ಕೂತಿದ್ದಾಗ, ದಿಡೀರ್ ಅಂತ ನಿರ್ಧಾರ ಮಾಡಿ ಹೊರಟೇ ಬಿಟ್ಟೆವು ವಿದ್ಯಾರ್ಥಿ ಭವನದ ಕಡೆಗೆ.  ಅನಿರೀಕ್ಷಿತವಾಗಿ ನಮ್ಮ ಜೊತೆ ಸೇರಿದವರು ನಮ್ಮ ನೆಂಟರು ಅನಸೂಯ ಮತ್ತು ನಾಗಭೂಷಣ್ ದಂಪತಿಗಳು. ಹಳೆಯದನ್ನು ನೆನಪಿಸಿಕೊಳ್ಳುತ್ತಾ ಇಡ್ಲಿ ಮತ್ತು ದೋಸೆಗಳನ್ನು ಸವಿದಿದ್ದಾಯ್ತು. ಅಂತೂ ಬಹಳ ದಿನಗಳಿಂದ ಬಾಕಿ ಇದ್ದ ಒಂದು ಕಾರ್ಯಕ್ರಮ ಮುಗಿದಂತಾಯ್ತು. ಸಾಮಾನ್ಯವಾಗಿ ಮಸಾಲೆ ದೋಸೆ ಎಂದರೆ, ಎಲ್ಲರಿಗೂ ಇಷ್ಟವೇ. ಅದರಲ್ಲೂ ವಿದ್ಯಾರ್ಥಿ ಭವನ್ ಮಸಾಲೆ ದೋಸೆಗೆ ಒಂದು ವಿಶಿಷ್ಟ ಸ್ಥಾನ. ದೋಸೆಯ ತಟ್ಟೆಗಳನ್ನು ಕೈ ಮೇಲೆ ಜೋಡಿಸಿಕೊಂಡು ಬಂದು ಕೊಡುವ ಶೈಲಿಯೇ ಚೆನ್ನ. 60 ರ ದಶಕದ  ಉತ್ತರಾರ್ಧದಲ್ಲಿ ವಿದ್ಯಾರ್ಥಿ ಭವನ್ ನಲ್ಲಿ.. ಜಾಗ ಸಿಗದಿದ್ದಾಗ ಹಿಟ್ಟು ರುಬ್ಬುವ ಒರಳು ಕಲ್ಲು ಬಳಿ ಹಾಕಿದ್ದ ಬೆಂಚಿನ ಮೇಲೆ, ತಟ್ಟೆಯನ್ನು ಕೈಯಲ್ಲಿ ಹಿಡಿದು, ಕೂತು ತಿಂದ ಮಸಾಲೆ ದೋಸೆ, ಚಟ್ನಿಯ ರುಚಿ ಈಗಿಲ್ಲದಿದ್ದರೂ... ವಿಶಾಲವಾದ ಜಾಗದಲ್ಲಿ ಕೂತು ತಿನ್ನುವ ಅನುಕೂಲ, ಕೈ ವರೆಸಿಕೊಳ್ಳಲು ಕೊಡುತ್ತಿದ್ದ ನ...

ವರ - ಶಾಪವಾಯಿತೇ?

Image
ಅಂದು ಪ್ರಸನ್ನ ಆಪ್ತ ಸಲಹಾ ಕೇಂದ್ರದಲ್ಲಿ ನನ್ನನ್ನು ಭೇಟಿಯಾಗಲು ಬಂದವರು ಗಿರೀಶ್. ಪರಿಚಯದ ನಂತರ ಅವರು ಹೇಳಿದ್ದು..." ನನ್ನ ಆತ್ಮೀಯ ಗೆಳೆಯನ ಬಗ್ಗೆ ಒಂದಷ್ಟು ಮಾತಾಡುವುದಿದೆ, ಅವನ ಸಮಸ್ಯೆಗೆ ಪರಿಹಾರ ಬೇಕಾಗಿದೆ... ಮಾತಾಡಬಹುದೇ?" ತನ್ನ ಸ್ನೇಹಿತನ  ಸಮಸ್ಯೆಗೆ ಪರಿಹಾರ ಹುಡುಕಲು ಬಂದ ಗಿರೀಶ್ ಬಗ್ಗೆ ನನಗೆ ಅಭಿಮಾನವೆನಿಸಿತು, ಮಾತು ಮುಂದುವರೆಯಿತು. ನನ್ನ ಬಾಲ್ಯ ಸ್ನೇಹಿತ ತುಷಾರ್... ನಮ್ಮ ಒಡನಾಟ ಶುರುವಾಗಿದ್ದು ಬಹುಶಃ ಎರಡನೇ ತರಗತಿಯಿಂದ.. ಸುಮಾರು 45 ವರ್ಷಗಳಿಂದ ನಮ್ಮ ಒಡನಾಟ ಸತತವಾಗಿ ನಡೆದಿದೆ. ಚಿಕ್ಕಂದಿನ ಠೂ ಬಿಡುವ ಕಾರ್ಯಕ್ರಮಗಳು, ದೊಡ್ಡವರಾದ ಮೇಲೂ ಆಗಾಗ್ಯೆ ನಡೆದರೂ, ಅದು ಬಹಳ ಬೇಗ ಸೇ ಮಾಡುವುದರೊಂದಿಗೆ  ಮುಕ್ತಾಯವಾಗುತ್ತದೆ. ಅವನು ಹೇಳಿದ್ದನ್ನು ನಾನು ಒಪ್ಪದೇ ವಿರೋಧಿಸಿದಾಗ, ಬಹುಬೇಗ ಅಸಹನೆ ತೋರುತ್ತಾನೆ, ಮೌನಕ್ಕೆ ಜಾರುತ್ತಾನೆ... ಅವನ ಒಡನಾಟ ನನಗೆ ಇಷ್ಟವಾದ್ದರಿಂದ, ನಾನು ಯಾವ ಸಂಕೋಚವಿಲ್ಲದೆ ಮಾತನಾಡಿಸುತ್ತೇನೆ, ಅವನು ಸಹ ಸಹಜವಾಗಿ ಬಿಡುತ್ತಾನೆ. ಅವನಿಂದ ಎಲ್ಲರೂ ದೂರವಾಗುತ್ತಿದ್ದಾರೆ ಹಾಗೂ ಅವನನ್ನು ತಿರಸ್ಕರಿಸುತ್ತಿದ್ದಾರೆ ಎನ್ನುವ ಭಾವನೆ ಬಲವಾಗಿ ಬೇರೂರುತ್ತಿದೆ. ತುಂಬಾ ಪ್ರೀತಿಯಿಂದ ಒಡನಾಡಿದ ಹಳೆಯ ಸ್ನೇಹಿತರೆಲ್ಲರಲ್ಲೂ ಅವನಿಗೆ ಕುಂದು ಕಾಣುತ್ತಿದೆ. ಈಗೀಗ ಅವರೊಡನೆ ಒಡನಾಟವನ್ನು ಕಳಚಿಕೊಂಡು ತಾನೇ ಒಂಟಿಯಾಗುತ್ತಿದ್ದಾನೆ ಹಾಗೂ ಒಳಗೊಳಗೆ ಕೊರಗುತ್ತಿದ್ದಾನೆ ಎಂದು ನನಗನ್ನಿಸುತ್ತ...

ಭಾವ - ಬಾಂಧವ್ಯ

Image
ನವರಾತ್ರಿಯ  ಕೊನೆಯ ದಿನ ವಿಜಯದಶಮಿ,ಮೈಸೂರಿನ  ಜಂಬೂ ಸವಾರಿಯ  ಸಡಗರ. ಹಿಂದಿನ ಕಾಲದ ರಾಜ ಮಹಾರಾಜರ ಜೈತ್ರ ಯಾತ್ರೆಯ ದಿನ.  ನನ್ನ ಭಾವ ಕರಲಮಂಗಲದ ರಾಮರಾವ್ ಅವರ ಅಸ್ತಿ ತುಂಬಿದ ಕುಂಡವನ್ನು ಹೊತ್ತು ತಿರುಮಕೂಡಲು ನರಸೀಪುರದ ಕಡೆಗೆ ಅಸ್ತಿ ವಿಸರ್ಜನೆ ಮಾಡಲು ಕಾರಿನಲ್ಲಿ ಸವಾರಿ ಹೊರಟಿದ್ದೇವೆ, ಭಾವನ ಮಗ,ಮೊಮ್ಮಗ, ಇಬ್ಬರು ಅಳಿಯಂದಿರೊಂದಿಗೆ ನಾನು. ಜೀವನದ ಕಷ್ಟ ಕೋಟಲೆಗಳನ್ನು  ಜಯಿಸಿ, ಜೀವನ್ಮುಕ್ತರಾದ ನನ್ನ ಭಾವನ ಭೌತಿಕ ಶರೀರದ ಭಸ್ಮವಾಗದೇ ಉಳಿದ ಭಾಗಗಳ ಜೈತ್ರ ಯಾತ್ರೆ ಎನ್ನಲೇ? ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು  ತಿಂದು ನಿನ್ನನ್ನ ಋಣ ತೀರುತಲೇ ಪಯಣ ಹಿಂದಾಗದೊಂದು ಚಣ ಮುಂದಕುಂ ಕಾದಿರದು ಸಂದಲೆಕ್ಕವದೆಲ್ಲ ಮಂಕುತಿಮ್ಮ. ಡಿವಿಜಿಯವರ ಮಂಕುತಿಮ್ಮನ ಕಗ್ಗದ ಈ ಸಾಲುಗಳು ಎಷ್ಟು ಸಮಂಜಸ ಅಲ್ಲವೇ? ಭೂಲೋಕದ ಅನ್ನದ ಋಣ ತೀರಿದ ಕ್ಷಣವೇ ಪರಲೋಕಕ್ಕೆ ಮುಂದಿನ ಪಯಣ. ಸ್ವಲ್ಪವೂ ಹಿಂದು ಮುಂದಾಗುವುದಿಲ್ಲ, ಅದರ ಲೆಕ್ಕವು ಈಗಾಗಲೇ ಬರೆದಾಗಿದೆ. ಅದನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ. ಇದು ಎಲ್ಲರಿಗೂ ಎಲ್ಲ ಕಾಲಕ್ಕೂ ಅನ್ವಯಿಸುವ ವಿಷಯ. ರಾಮರಾಯರ ಮದುವೆ ನನ್ನ ಅಕ್ಕ ಗಿರಿಜಾಂಬನೊಡನೆ ನಡೆದದ್ದು  1962ನೇ ಇಸವಿಯಲ್ಲಿ. ನಾನಾಗ ಹೈಸ್ಕೂಲ್ ವಿದ್ಯಾರ್ಥಿ. ಯಾಕೋ ಕಾಣೆ ನನಗೆ ಮತ್ತು ನನ್ನಣ್ಣ ಸತ್ತಿಗೆ ಅವರು ಹಿಡಿಸಿರಲಿಲ್ಲ. ನಾವಿಬ್ಬರೂ ಮಾತಾಡಿಕೊಂಡಿದ್ದೆವು. ಆದರೆ ವಿಧಿ ನಿ...

ಪರಿಸಮಾಪ್ತಿಯಾದ 'ಪರ್ವ'

Image
  ನಾನು ಗೌರವ ಭಕ್ತಿಯಿಂದ ನೋಡಿದ ಲೇಖಕರಲ್ಲಿ ಎಸ್ ಎಲ್ ಭೈರಪ್ಪನವರು ಅಗ್ರಗಣ್ಯರು. ಅವರು ನಮ್ಮನ್ನಗಲಿದ ಸುದ್ದಿಯನ್ನು ಕೇಳಿದಾಗ ಕೆಲ ಕ್ಷಣಗಳು ವಿಚಲಿತನಾದೆ. ವಯೋ ಸಹಜವಾದ ಸಾವು ಆದ್ದರಿಂದ, ಯಾವ ನೋವೂ ಇಲ್ಲದೆ, ಒಪ್ಪಿಕೊಳ್ಳಬೇಕೆಂಬುದು ನನ್ನ ನಿಲುವು. ಆದರೂ ಒಂದರೆಕ್ಷಣ ಸಂಕಟವಾದದ್ದು ಸತ್ಯ. " ದೇವರ ತಾವುಕ್ಕೆ ಹೋದದ್ದು, ಇನ್ನೇನು ಮಾತಾಡಿ ಸುಖವಿಲ್ಲ.. ಮುಂದಿನ ಕೆಲಸ ನೋಡೋಣ " ಎಂಬ ಗೃಹಭಂಗದ ಅಯ್ಯನವರ ಮೂಲಕ ಭೈರಪ್ಪನವರು  ಹೇಳಿದ  ಮಾತು  ಕಟು ಸತ್ಯ. ಎಸ್ ಎಲ್ ಭೈರಪ್ಪನವರ ಬಗ್ಗೆ ಮೊದಲು ಕೇಳಿದ್ದು, ನಾನು ಶಹಾಬಾದಿನಲ್ಲಿದ್ದಾಗ. ನಾನಿನ್ನೂ ನನ್ನ ಓದಿನ ಗುಂಗಿನಲ್ಲೇ  ಇದ್ದ ಕಾರಣ, ಕಾದಂಬರಿಗಳ ಬಗ್ಗೆ ಗಮನವಿರಲಿಲ್ಲ. ಆದರೆ ಸ್ನೇಹಿತರ ಗುಂಪಿನಲ್ಲಿ ನಡೆಯುತ್ತಿದ್ದ, ಭೈರಪ್ಪನವರ ಕಾದಂಬರಿಗಳ ಬಗ್ಗೆ ವಿಶ್ಲೇಷಣಾತ್ಮಕ ಚರ್ಚೆಯ ಮೂಲಕ. ಗೃಹಭಂಗದ ಗಂಗಮ್ಮನ ಬೈಗುಳ, " ಅನ್ನೆಲ್ಡಾಳುದ್ದ ಬಾವಿಗೆ  ಆರಾಳುದ್ದ ಹಗ್ಗ ಬುಟ್ರೆ ಎಟುಕುತೈತಾ"  ಎಂಬ ವಿಷಯದ ಬಗ್ಗೆ ನಡೆದ  ಚರ್ಚೆ, ನನ್ನ ಗಮನ ಸೆಳೆದದ್ದು. ಆಗ ಬಂದಿದ್ದೆ ಗೃಹಭಂಗ ಕಾದಂಬರಿಯನ್ನು ಓದಬೇಕೆಂಬುವ ಕುತೂಹಲ. ಜೀವನದ ಒಂದು ಘಟ್ಟದಲ್ಲಿ, ಗೃಹಭಂಗ ಕಾದಂಬರಿಯನ್ನು, ಗಂಗಮ್ಮನ ಬೈಗುಳದ ವೈಶಿಷ್ಟ್ಯವನ್ನು ಸವಿಯಲು ಆರಂಭ ಮಾಡಿದರೂ, ಮನಸ್ಸಿಗೆ ತಾಕಿದ್ದು ನಂಜಮ್ಮನ ಪಾತ್ರ. ನಂಜಮ್ಮನ ಪಾತ್ರದಲ್ಲಿ ಕಂಡದ್ದು ನನ್ನಮ್ಮನನ್ನು.  ಈ ವಿಷಯವನ...

ಜೀವನದರ್ಶನ - ಅವರವರ ದೃಷ್ಟಿಯಲ್ಲಿ.

Image
ನನ್ನ ಇಬ್ಬರು ಸ್ನೇಹಿತರ ಮಧ್ಯೆ ಒಂದು ಚರ್ಚೆ ನಡೆಯುತ್ತಿತ್ತು. ಚರ್ಚೆಯ ವಿಷಯ ಅವರಿಬ್ಬರಿಗೂ ತಿಳಿದ ವ್ಯಕ್ತಿಯ ಬಗ್ಗೆ. ಒಬ್ಬರ ಅಭಿಪ್ರಾಯ ಅವರು ಬಹಳ ಜನಕ್ಕೆ ಸಹಾಯ ಮಾಡಿದ್ದಾರೆ ಅದರಲ್ಲಿ ನಾನು ಒಬ್ಬ... ಇನ್ನೊಬ್ಬರ ಅಭಿಪ್ರಾಯ.. ಅವರು ಹಾಗೇನು ಮಾಡಿಲ್ಲ ನನಗೆ ಗೊತ್ತು. ಇದರಲ್ಲಿ ಯಾವುದು ಸರಿ ಯಾವುದು ತಪ್ಪು ಹೇಳುವುದು ಸಾಧ್ಯವೇ? ಇಬ್ಬರಿಗೂ ಅವರದೇ ಆದ ಅಭಿಪ್ರಾಯ ಆ ಮೂರನೆಯ ವ್ಯಕ್ತಿಯ ಬಗ್ಗೆ... ಅವರವರು ಕಂಡಂತೆ. ಜೀವನವೇ ಹಾಗಲ್ಲವೇ?. ಯಾವುದೇ ವಿಷಯವಾಗಲಿ ಅದರ ಬಗ್ಗೆ ನಮ್ಮ ಅಭಿಪ್ರಾಯ ಮೂಡುವುದು, ಆ ವಿಷಯದ ಬಗ್ಗೆ ನಮಗಿರುವ ತಿಳುವಳಿಕೆ, ಅನುಭವ ದಿಂದ ಮಾತ್ರ ನಿಲುಕುವಂಥದ್ದು. ಅಂದರೆ ನನ್ನ ಸೀಮಿತ ಜ್ಞಾನಕ್ಕೆ ನಿಲುಕುವಷ್ಟು. ಸಮುದ್ರದ ತುಂಬಾ ನೀರಿದ್ದರೂ , ಎಷ್ಟು ಬೇಕಾದರೂ ತೆಗೆದುಕೊಳ್ಳಲು ಅಡ್ಡಿ ಇಲ್ಲದಿದ್ದರೂ.. ನನಗೆ ದಕ್ಕುವುದು ಮೊದಲ ಹಂತದಲ್ಲಿ ನನ್ನ ಬೊಗಸೆಗೆ ನಿಲುಕುವಷ್ಟು ಮಾತ್ರ.. ಜಿಎಸ್ ಶಿವರುದ್ರಪ್ಪನವರ ಈ ಹಾಡು  ಮಣ್ಣಿನ ಬಗ್ಗೆ ಇಬ್ಬರಿಗಿರುವ ಇಬ್ಬಗೆಯ ದೃಷ್ಟಿಕೋನ. ನನಗೆ ತುಂಬಾ ಪರಿಚಿತ ಹಿರಿಯರೊಬ್ಬರ ಅಳಿಯ ಸರ್ಕಾರದ ಮುಖ್ಯ ಇಲಾಖೆಯಲ್ಲಿ  ಗುಮಾಸ್ತ. ಚೆನ್ನಾಗಿ ಸಂಪಾದಿಸುತ್ತಿದ್ದ (ಲಂಚ ಎಂದು ಬೇರೆ ಹೇಳಬೇಕೆ?) ವ್ಯಕ್ತಿ. ತಮ್ಮ ಅಳಿಯನಿಗೆ ಸಂಪಾದನೆ ಚೆನ್ನಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದವರು. ಮುಂದೊಂದು ದಿನ ತನ್ನ ಮಗ ಅದೇ  ಇಲಾಖೆಗೆ ತನ್ನ ಕೆಲಸ ಆಗಲು ದೊಡ್ಡ ಮೊತ್ತದ ಲ...

ಅಂಚೆ ಪೆಟ್ಟಿಗೆಯ ಸುತ್ತ...

Image
  ಕೆಲ ದಿನಗಳ ಹಿಂದೆ ವಾಟ್ಸಪ್ ನಲ್ಲಿ " ಅಂಚೆ ಪೆಟ್ಟಿಗೆಗಳನ್ನು  ಸೆಪ್ಟೆಂಬರ್ 2025ರ   ಒಂದನೇ ದಿನಾಂಕದಿಂದ ತೆಗೆದು ಹಾಕಲಿದ್ದಾರೆ" ಎಂಬ ಸಂದೇಶ ಹರಿದಾಡಿತು. ಅದನ್ನು ಓದಿದಾಗ ನನಗೆ ತಿಳಿಯದಂತೆ ಸಲ್ಪ ಕಸಿವಿಸಿ ಆಯಿತು. ಸೆಪ್ಟಂಬರ್ ಒಂದನೆಯ ತಾರೀಕು ನನ್ನ ಜೀವನದ ಅತ್ಯಂತ ಪ್ರಮುಖ ದಿನ... ಅಂದು ನಾನು ಮೊದಲ ಕೆಲಸಕ್ಕೆ ಸೇರಿದ ದಿನ. ಅದೇ ಸೆಪ್ಟೆಂಬರ್ 1 ಪೋಸ್ಟ್ ಬಾಕ್ಸ್ ಇರುವುದಿಲ್ಲ ಎನ್ನುವ ವಿಷಯ  ಒಪ್ಪಲು ನನ್ನ ಮನಸ್ಸು ನಿರಾಕರಿಸಿತು. ಹಾಗಾಗಿ, ಒಂದಷ್ಟು ಗೂಗಲ್ ನಲ್ಲಿ ಹುಡುಕಾಟದ ನಂತರ, ಆ ಸುದ್ದಿ ಸತ್ಯವಲ್ಲ ಎಂದು ತಿಳಿದು ಸಹಜವಾಗಿ ಸಂತೋಷವಾಯಿತು. ಅಂಚೆ ಮತ್ತು ತಂತಿ ಇಲಾಖೆಯೊಂದಿಗೆ ನನ್ನ ಒಡನಾಟ ಬೆಳೆದದ್ದು ಐದನೇ ತರಗತಿಯಲ್ಲಿ ಓದಲು ವಿದ್ಯಾನಗರದ ಸರ್ಕಾರಿ ಶಾಲೆಗೆ ಹೋಗಲು ಪ್ರಾರಂಭ ಮಾಡಿದಾಗ. ವಿದ್ಯಾನಗರದಲ್ಲಿ  ಮಾತ್ರ ಅಂಚೆ ಕಛೇರಿಯು  ಇದ್ದ ಕಾರಣದಿಂದ, ನನ್ನೂರು ದೊಡ್ಡಜಾಲಕ್ಕೆ ಬರುವ ಎಲ್ಲಾ ಪತ್ರಗಳನ್ನು ತಂದು ತಲುಪಿಸುವ ಜವಾಬ್ದಾರಿ ನಮಗೆ ಕೊಡಲಾಗಿತ್ತು. ಓದಲು ಬರದ ಕೆಲವರಿಗೆ ಬಂದ ಪತ್ರಗಳನ್ನು ಓದಿ ಹೇಳುವ ಜವಾಬ್ದಾರಿಯೂ ನಮ್ಮದಾಗಿತ್ತು. ಇದಲ್ಲದೆ ನಮ್ಮ ಊರಿನವರು ಬರೆದ ಕಾಗದಗಳನ್ನು ಅಂಚೆ ಪೆಟ್ಟಿಗೆಗೆ ಹಾಕುವುದು, ಊರಲ್ಲಿದ್ದ ಪಂಪ್ಸೆಟ್ಟುಗಳ ಎಲೆಕ್ಟ್ರಿಕ್ ಬಿಲ್ಲುಗಳನ್ನು ಮನಿ ಆರ್ಡರ್ ಮಾಡುವುದು ನಮ್ಮ ಕೆಲಸವಾಗಿತ್ತು. ಇದಕ್ಕೆಲ್ಲಾ ಯಾವುದೇ ರೀತಿಯ ಸರ್ಕಾರಿ ಆದೇಶಗಳ...

ಗಣೇಶ- ಗೀತೆ- ಗುಣಗಾನ

Image
  ಗಣೇಶನ ಹಬ್ಬ ಮನೆಯಲ್ಲಿ ಮುಗಿದಿದೆ, ಆದರೆ ಮನೆಯ ಸುತ್ತು ಮುತ್ತಿನ ರಸ್ತೆಯಲ್ಲಿ ಸಡಗರ ಮುಂದುವರೆದಿದೆ. ಮಕ್ಕಳ ಉತ್ಸಾಹಕ್ಕೆ ಮೇರೆ ಇಲ್ಲ, ಗಣೇಶನಿಗೆ ಜೈಕಾರ, ಹಾಡು, ಕುಣಿತ ಜೋರಿದೆ. ಗಣೇಶ ಬಂದ ಕಾಯಿ ಕಡಬು ತಿಂದ, ಹೊಟ್ಟೆ ಮೇಲೆ ಗಂಧ,  ಚಿಕ್ಕೆರೇಲ್ ಬಿದ್ದ ದೊಡ್ ಕೆರೇಲಿ ಎದ್ದ ..ಇದು ನಾವು ಚಿಕ್ಕಂದಿನಲ್ಲಿ ಹೇಳುತ್ತಿದ್ದ ಗಣೇಶನ  ಮೊದಲ  ಹಾಡು. ನಂತರ ಕೋಲಾಟಕ್ಕಾಗಿ ಕಲಿತದ್ದು ಶರಣು ಶರಣುವಯ್ಯ ಗಣನಾಯಕ ನಮ್ಮ ಕರುಣದಿಂದಲಿ ಕಾಯೋ ಗಣನಾಯಕ. ಕೋಲಾಟ ಆಡುತ್ತಾ  ಹಾಡುವುದು ಕಷ್ಟ ಆದಕಾರಣ, ನಾವು ಗಣನಾಯಕ ಭಾಗ ಮಾತ್ರ ಹೇಳುತ್ತಿದ್ದೆವು, ಮೂಲ ಹಾಡು ಬೇರೆ ಯಾರಾದರೂ ಹಾಡುತ್ತಿದ್ದರು. ಬೇರೆ ಬೇರೆ ವೇಗದಲ್ಲಿ ಕುಣಿಯುತ್ತ ಹಾಡುವಾಗ ನಮ್ಮ ಉತ್ಸಾಹ ಮುಗಿಲು ಮುಟ್ಟುತ್ತಿತ್ತು. ಪ್ರತಿದಿನ ಸಂಜೆ, ದೀಪ ಹೊತ್ತಿಸಿದ ತಕ್ಷಣ,  ಶುಕ್ಲಾಂಭರದರಂ ವಿಷ್ಣುಂ ಶಶಿವರ್ಣಂ... ಗಣೇಶ ಸ್ತುತಿಯೊಂದಿಗೆ ಪ್ರಾರಂಭ ಮಾಡಿ  ಗುರು ಬ್ರಹ್ಮ ಗುರು ವಿಷ್ಣು.. ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ ... ಶ್ಲೋಕಗಳನ್ನು ಹೇಳಿ ಓದುತ್ತಿದ್ದದ್ದು. ಗಣೇಶನಿಗೆ ಮೊದಲ ಪೂಜೆ ಎಂದು ತಲೆಯಲ್ಲಿ ಅಚ್ಚಾಗಿತ್ತು. ಅಗಜಾನನ ಪದ್ಮಾರ್ಕಮ್, ಗಜಾನನ ಮಹರ್ನಿಶಂ.. ಸ್ತೋತ್ರದ ಅನೇಕದಂತಂ ಹಾಗೂ ಏಕದಂತಂ ಬಗ್ಗೆ ನನಗೆ ಒಂದಷ್ಟು ಅನುಮಾನವಿತ್ತು. ಏಕದಂತಂ ಗಣೇಶನ ಒಂದು ಹೆಸರು ಅನೇಕದಂತಮ್ ಏನು? ರಾಷ್ಟ್ರೀಯ ವಿದ್ಯಾಲಯ ಹೈಸ್ಕೂಲಿನ ಸಂಸ್ಕ...

ಗೌರಿ ಹಬ್ಬ- ಬಾಂಧವ್ಯ ಬೆಸುಗೆ

Image
ಆಗಸ್ಟ್ 15 ಸ್ವಾತಂತ್ರ್ಯೋತ್ಸವದ ದಿನ, ಭಾರತದಲ್ಲೆಲ್ಲಾ ಅದರದೇ ಸಂಭ್ರಮ. ಈ ಸಂಭ್ರಮದ ಜೊತೆಗೆ ನಾನು ಪಾಲ್ಗೊಂಡದ್ದು ಇನ್ನೊಂದು ಸಂಭ್ರಮ. ಅದು “ ಹೂವಿನ ಕಟ್ಟೆ ಹೆಣ್ಣು ಮಕ್ಕಳ ಸಂಭ್ರಮ”  ಎನ್ನುವ ಹೆಸರಿನಲ್ಲಿ ಸಂಭ್ರಮಿಸಿದ್ದು. ಕಬ್ಬಿಣದ ಅಂಗಡಿಯಲ್ಲಿ ನೊಣಕ್ಕೇನು ಕೆಲಸ ಎಂದು ನಿಮಗೆ ಅನಿಸಿದ್ದರೆ ತಪ್ಪೇನಿಲ್ಲ... ಕಾರಣ ಆ ಹೆಣ್ಣು ಮಕ್ಕಳ ಸಂಭ್ರಮದಲ್ಲಿ ಸಂಬಂಧಪಟ್ಟ ಗಂಡಸರಿಗೂ ಭಾಗವಹಿಸಲು ಆಹ್ವಾನವಿತ್ತು. ನಾನು ಹೂವಿನ ಕಟ್ಟೆ ಮನೆತನಕ್ಕೆ ದೊಡ್ಡ ಅಳಿಯ ಆದ ಕಾರಣದಿಂದ ನಾನೂ ಅರ್ಹನೇ.  ಈ ಕಾರ್ಯಕ್ರಮ ಸುಮಾರು 18 ವರ್ಷಗಳಿಂದ ನಡೆಯುತ್ತಿದ್ದರೂ, ನನ್ನ ಸ್ಪಷ್ಟ ನೆನಪಿನಂತೆ  ನಾನು ಪೂರ್ಣ ಪ್ರಮಾಣದಲ್ಲಿ ಭಾಗವಹಿಸಿದ್ದು ಇದೇ ಮೊದಲು.  ಈ ಕಾರ್ಯಕ್ರಮಕ್ಕೆ ಮೂಲ ಸ್ರೋತವೇ ಎಚ್ ಪಿ ರಂಗನಾಥ್ ಮತ್ತು ಜಿ ವಿಜಯ ದಂಪತಿ.( #ಬಲು ಅಪರೂಪ ನಂಜೋಡಿ ) ಈ ಕಾರ್ಯಕ್ರಮ ಅವರು 25 ವರ್ಷದಿಂದ ವಾಸವಾಗಿದ್ದ ಮನೆಯಲ್ಲಿ ಸದ್ಯದ ಮಟ್ಟಿಗೆ ಕೊನೆಯ ಕಾರ್ಯಕ್ರಮ... ಅವರು ಬೇರೊಂದು ಹೊಸ ಮನೆಗೆ ವಾಸ್ತವ್ಯವನ್ನು ಬದಲಾಯಿಸುತ್ತಿದ್ದಾರೆ. ಇದೂ  ನಾನು ಭಾಗವಹಿಸಲು ಮುಖ್ಯ ಕಾರಣವಾಗಿತ್ತು.  ಗೌರಿ ಹಬ್ಬಕ್ಕೆ ಹೆಣ್ಣು ಮಕ್ಕಳಿಗೆ ಅರಿಶಿನ ಕುಂಕುಮ ಕೊಡುವ ಸಂಪ್ರದಾಯವನ್ನು, ಭಿನ್ನವಾಗಿ ಆಚರಿಸಲು ಸಂಬಂಧಪಟ್ಟ ಎಲ್ಲ ಹೆಣ್ಣು ಮಕ್ಕಳನ್ನು (ಬಹುಶಃ ಅಕ್ಕತಂಗಿಯರಿಂದ ಪ್ರಾರಂಭವಾದ  ಈ ಚಿಂತನೆ ಕ್ರಮೇಣ ವಿಸ್ತಾರಗೊಂಡು, ಅವರಿಬ್ಬರ ...