Posts

Showing posts from November, 2025

ಹುಟ್ಟಿದ ಹಬ್ಬ

Image
  ಸಾಮಾಜಿಕ ಜಾಲತಾಣವೇ ಸಂಪರ್ಕ ಮಾರ್ಗವಾಗಿ ಮಂಚೂಣಿಯಲ್ಲಿರುವ, ಇಂದಿನ ಕಾಲಘಟ್ಟದಲ್ಲಿ, ಯಾವುದೇ ಸಂದರ್ಭವಿರಲಿ ಪ್ರತಿಕ್ರಿಯೆಗಳು, ಸ್ಪಂದನೆಗಳು... ಯಾಂತ್ರಿಕವಾಗುತ್ತಿವೆ..   ಅದರಲ್ಲೂ ಗುಂಪುಗಳಲ್ಲಿ ವಿನಿಮಯವಾಗುವ ವಿಚಾರಕ್ಕಂತು.. ಇದು ಇನ್ನೂ ಹೆಚ್ಚು ಅನ್ವಯಿಸುತ್ತದೆ. ಯಾರಾದರೂ ಸತ್ತ ಸುದ್ದಿ ಯನ್ನು ನೋಡಿದ ತಕ್ಷಣ, ಸತ್ತವರು ಯಾರು ಎಂದು ತಿಳಿಯದಿದ್ದರೂ ಸಹ.. RIP, ಓಂ ಶಾಂತಿ,  🙏🏼  🌹 ಹೀಗೆ ಬರೆದರೆ ಮುಗೀತು. ಇನ್ನು ಹುಟ್ಟುಹಬ್ಬಕ್ಕಂತು HBD ಎಂದು ಬರೆದು ಕೈ ತೊಳೆದು ಕೊಂಡರಾಯಿತು. ಅದು ಒಂದು ಸಾಮಾಜಿಕ ಜವಾಬ್ದಾರಿಯೇನೋ... ಅದನ್ನು ನಿರ್ವಹಿಸದಿದ್ದರೆ ಅಪರಾಧವೇನೋ ಎನ್ನುವ ರೀತಿಯಲ್ಲಿ ಮಾಡುವುದು. ಇನ್ನು ಕೆಲವರು ಅದನ್ನು forwarded message ಮೂಲಕ ಮಾಡುತ್ತಾರೆ. ಇದೆಲ್ಲ  ಗಮನಿಸಿದಾಗ.. ಭಾವನೆಯೇ ಕಣ್ಮರೆಯಾಗಿದೆಯೇನೋ ಅನಿಸುತ್ತದೆ. ಇದೇ ಸಾಮಾಜಿಕ ಜಾಲತಾಣದಲ್ಲಿ ನನಗೂ ಇತ್ತೀಚೆಗೆ ಜನ್ಮದಿನದ ಶುಭಾಶಯಗಳ ಸುರಿಮಳೆ ಯಾಗುತ್ತದೆ, ನಿಜ ಹೇಳಲೇ... ಖುಷಿಯೂ ಆಗುತ್ತದೆ... ಎಷ್ಟೊಂದು ಜನ ಯಾಂತ್ರಿಕವಾಗಿಯಾದರೂ ನನ್ನನ್ನು ನೆನೆಸಿಕೊಂಡಿದ್ದಾರೆ ಎಂದು. ಹುಟ್ಟು ಹಬ್ಬದ ಆಚರಣೆ, ಚಿಕ್ಕಂದಿನಲ್ಲಿ ಕಂಡು ಕೇಳರಿಯದ ಸಂಗತಿ.  ನನಗೆ ಎರಡು ಹುಟ್ಟಿದ ದಿನಾಂಕಗಳಿವೆ. ಒಂದು ನಾನು ನಂಬಿರುವ ಜಾತಕದಲ್ಲಿ ಇರುವ 30.03.1948... ಎರಡನೆಯದು ನನ್ನ ಎಲ್ಲ ದಾಖಲಾತಿಗಳಲ್ಲಿ ಇರುವ,04.05.1947. ಈ ಎರ...

ವಯಸ್ಸು - ಒಂದು ಅಂಕಿ.. ಅಷ್ಟೇ

Image
ಹೋದ ಶನಿವಾರ, ಒಂದು ಹಿರಿಯ ನಾಗರೀಕರ ಗುಂಪಿನೊಡನೆ ಬೆರೆಯುವ ಅವಕಾಶ ಸಿಕ್ಕಿತ್ತು. ಈ ಗುಂಪಿನ ಸಾಮಾನ್ಯ ಅಂಶ... ಎಲ್ಲರೂ Geological Survey of India - ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯ ನಿವೃತ್ತ ನೌಕರರು.  ವರ್ಷಕ್ಕೆ ಎರಡು ಬಾರಿ ಎಲ್ಲರೂ ಸೇರಿ ಸಂತೋಷಪಡುವ / ಹಳೆಯ ನೆನಪುಗಳನ್ನು ನವೀಕರಿಸುವ, ಹಾಗೂ ವಿಚಾರವಿನಿಮಯ ಮಾಡಿಕೊಳ್ಳುವುದರ ಜೊತೆಗೆ ಪುಷ್ಕಳ ಭೋಜನದೊಂದಿಗೆ ಕಾರ್ಯಕ್ರಮ ಮುಗಿಸುವ ಪರಿ ಪಾಠ ಇಟ್ಟುಕೊಂಡಿರುವವರು. ನಾನು ಆ ಜಾಗವನ್ನು ಪ್ರವೇಶಿಸಿದಾಗ, ಅವರವರದೇ ಗುಂಪುಗಳಲ್ಲಿ ಮಾತನಾಡುತ್ತಿದ್ದದ್ದು ಕಾಣಿಸಿತು. ಇದು ನಮ್ಮ ಶಹಾಬಾದ್ ಗೆಳೆಯರ ಬಳಗದ ಕಾರ್ಯಕ್ರಮವನ್ನು ನೆನಪಿಸಿತು.  ಅಶಕ್ತ ಪೋಷಕ ಸಭಾದಲ್ಲಿನ ಹಿರಿಯ ನಾಗರೀಕರೊಡನೆ  ಒಡನಾಟ ನನಗೆ  ಸುಮಾರು ಹತ್ತು ವರ್ಷಗಳಿಂದ, ವಾರಕ್ಕೆ ಎರಡು ಬಾರಿ ದೊರಕಿದೆ. ಯಾವಾಗಲೂ ಭೇಟಿ ಮಾಡುವುದರಿಂದ ಅದರಲ್ಲಿ ವಿಶೇಷತೆ ಎದ್ದು ಕಾಣುವುದಿಲ್ಲ, ಮನೆ ಮಂದಿಯೊಡನೆ ಬೆರೆತು ವಾಡಿಕೆಯಂತೆ ಮಾತನಾಡುವ ಅನುಭವ ಅದು. ಆದರೆ ಹೊಸ ಗುಂಪುಗಳೊಡನೆ ಮಾತನಾಡುವಾಗ ಅವರ ಆಸಕ್ತಿ, ಅಭಿಲಾಷೆಗಳನ್ನು, ತಕ್ಕಮಟ್ಟಿಗಾದರೂ ಸರಿದೂಗಿಸುವ ಪ್ರಯತ್ನಮಾಡ ಬೇಕಲ್ಲ. ಹಾಗಾಗಿ ಸಾಮಾನ್ಯವಾಗಿ, ಎಲ್ಲಿ ಮಾತಾಡಬೇಕಾದರೂ ಸ್ವಲ್ಪ ಪೂರ್ವ ತಯಾರಿಯನ್ನು, ಅದರಲ್ಲೂ ಪ್ರಾರಂಭದ ಸಾಲುಗಳ ಆಯ್ಕೆಯ ಬಗ್ಗೆ ಸ್ವಲ್ಪ ಮುತುವರ್ಜಿ ವಹಿಸುತ್ತೇನೆ.  ಆದರೆ ಇಲ್ಲಿಗೆ ಬಂದಾಗ  ನಾಮಫಲಕ ದಲ್...

ತುಳಸಿ ತೋಟದಲ್ಲಿ.. ತುರಿಕೆ ಸೊಪ್ಪು

Image
  ಸೂಪರ್ ಮಾರ್ಕೆಟ್ ನಲ್ಲಿ ಗೋಡಂಬಿಗಾಗಿ ಹುಡುಕುತ್ತಿದ್ದೆ,  "ನಮಸ್ಕಾರ ಸರ್", ಅಂದದ್ದು ಕೇಳಿ ತಿರುಗಿ ನೋಡಿದರೆ ಮಧ್ಯ ವಯಸ್ಸಿನ ಒಬ್ಬ ಹೆಣ್ಣು ಮಗಳು. ಪ್ರತಿ ನಮಸ್ಕಾರ ಮಾಡಿದೆ, ಆದರೆ  ಯಾರೆಂದು ಗೊತ್ತಾಗಲಿಲ್ಲ. ನೆನಪಾಗ್ಲಿಲ್ವಾ ಸರ್, ಅಂತ ತಮಾಷೆಯಾಗಿ ಮಾತಾಡಿದ್ದು ಗಮನಿಸಿದರೆ, ಎಲ್ಲೋ ತುಂಬಾ ಪರಿಚಯ ಇರಬೇಕು ಅನ್ನಿಸ್ತು.. ಆದರೆ ಹೊಳೀಲಿಲ್ಲ... ತುಳಸಿ ತೋಟದಲ್ಲಿ.. ತುರಿಕೆ ಸೊಪ್ಪು.. ನೆನಪಿದೆಯಾ ಸರ್.... ಎಂದಾಗ.... ರಮ್ಯಾ ತಾನೇ.. ಗುರುತಿಸಿದೆ.. ಆತ್ಮೀಯವಾಗಿ ಕೈಕಲುಕಿದಳು ರಮ್ಯ. ಉಭಯ ಕುಶಲೋಪರಿಯಲ್ಲಿ ತಿಳಿದದ್ದು ರಮ್ಯಾ ಈಗ ಸುಖೀ ಗೃಹಿಣಿ, ಅತ್ತೆ ಮಾವನ ಜೊತೆಯಲ್ಲಿದ್ದಾಳೆ,  ಎರಡು ಮಕ್ಕಳ ತಾಯಿ, ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ. ಮಗಳ ವಿಚಾರ ಕೇಳಿದೆ.. ರಮ್ಯಾ ಹೇಳಿದ್ದು...“ಹೈ ಸ್ಕೂಲ್ ನಲ್ಲಿ ಓದುತ್ತಿದ್ದಾಳೆ, ಜಾಣೆ,... ನನ್ನ ತರಹ ಅಲ್ಲ ಸರ್”.  ಮನಸ್ಸು ಹಿಂದಕ್ಕೆ ಓಡಿತು... ಅಂದು ಪ್ರಸನ್ನ ಆಪ್ತ ಸಲಹಾ  ಕೇಂದ್ರದ ಕೊನೆಯ ವ್ಯಕ್ತಿಯಾಗಿ ಬಂದವರು ಭಾಗ್ಯಮ್ಮ. ಜೊತೆಯಲ್ಲಿ ಮಗಳು ರಮ್ಯಾ. ಬಂದವರೇ ಕಣ್ಣೀರು ಹಾಕುತ್ತಾ ಆರಂಭ ಮಾಡಿದರು ಭಾಗ್ಯಮ್ಮ...  "ಯಾಕಾದ್ರೂ ಇವಳು ನನಗೆ ಮಗಳಾಗಿ ಹುಟ್ಟಿದಾಳೋ.. ದಿನಾ ದಿನಾ ನನ್ನ ಹೊಟ್ಟೆನ ಉರುಸ್ತಾಳೆ. ಅವರ ಅಕ್ಕಂದಿರ ತರ ಹೇಳಿದಾಗೆ ಕೇಳಿಕೊಂಡು ಮುಚ್ಚಟೆಯಾಗಿ ಇರಕ್ಕೆ ಇವಳಿಗೆ ಏನು ಕಷ್ಟಾನೋ ಗೊತ್ತಾಗ್ತಿಲ್ಲ... ನಿಮಗೆ ಹೇಳಕ್ಕೆ...

ಪೋಲೀಸ್ - ಭಯ - ಬದಲಾವಣೆ

Image
  ಅಕ್ಟೋಬರ್ 28 ರಿಂದ, ನಮ್ಮ ರಾಜ್ಯದ ಪೊಲೀಸರ ಟೋಪಿಯನ್ನು ಬದಲಾಯಿಸುವ ಬಗ್ಗೆ, ಪತ್ರಿಕೆಗಳಲ್ಲಿ ನೋಡಿದ ನಂತರ  .... ಟೋಪಿಯ ಬದಲಾವಣೆ ಹೊರನೋಟಕ್ಕೆ ಕಾಣುವಂತದ್ದು, ನಿಜವಾಗಿ ಬದಲಾವಣೆ ಆಗಬೇಕಾಗಿರುವುದು ಅವರ ಕಾರ್ಯವೈಖರಿ ಎಂದು ಅನಿಸಿದ್ದು ಸತ್ಯ. ಹಾಗಂತ.. ನಮ್ಮ ಪೊಲೀಸ್ ಪಡೆಯ ದಕ್ಷತೆಯ ಬಗ್ಗೆ ನಾನು ಅನುಮಾನ ಪಡುತ್ತಿಲ್ಲ. Every herd has a black sheep ಎನ್ನುವ ಮಾತಿನಂತೆ, ಅಲ್ಲಿಯೂ ಕೆಲ ಅಪಸವ್ಯಗಳು ಇರುವುದು ಸಾಧ್ಯ. ಸಾಮಾನ್ಯವಾಗಿ, ಅವರ ಕೆಲಸದಲ್ಲಿ ಬೇರೆ ಯಾರೂ ಮೂಗು ತೂರಿಸದಿದ್ದಲ್ಲಿ, ಅವರು ತಮ್ಮ ಕಾರ್ಯಕ್ಷೇತ್ರದಲ್ಲಿ ನೈಪುಣ್ಯವನ್ನು ತೋರಿಸಿದ ಉದಾಹರಣೆಗಳು ಸಾಕಷ್ಟಿವೆ. ಈಚೆಗೆ ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ಉತ್ತರ ಪ್ರದೇಶದ ಪೊಲೀಸರು ದುಷ್ಟರ ವಿರುದ್ಧ ಮಾಡಿದ ಕಾರ್ಯಾಚರಣೆಯ ವಿಡಿಯೋ ತುಣುಕುಗಳು ನೋಡುವಾಗ, ಇದು ನಮ್ಮ ಭಾರತದಲ್ಲಿ ಸಾಧ್ಯವಾ ಎನ್ನುವ ಪ್ರಶ್ನೆ ಎದುರಾದದ್ದು ನಿಜ. ಆದರೆ ರಾಜಕೀಯ ಇಚ್ಛಾಶಕ್ತಿ ಇದ್ದಾಗ ಎಲ್ಲವೂ ಸಾಧ್ಯ ಎಂದು ಸಾಬೀತಾಯಿತು.  ದುರ್ದೈವವೆಂದರೆ, ರಾಜಕೀಯ ಇಚ್ಛಾ ಶಕ್ತಿಯನ್ನು, ಎದುರಾಳಿಗಳ ವಿರುದ್ಧ ಬಳಸುವ, ಹಾಗೆ ತಮ್ಮವರನ್ನು ರಕ್ಷಿಸುವ ಮಾರ್ಗವಾಗಿತ್ತೇ ಹೊರತು, ನಿಜವಾದ ದುಷ್ಟರನ್ನು ಹಾಗೂ ದೇಶದ್ರೋಹಿಗಳನ್ನು ಗುರುತಿಸಿ ಶಿಕ್ಷಿಸುವ ಮಾರ್ಗವಾಗಿದ್ದಂತೆ ಬಹಳಷ್ಟು ಸಮಯದಲ್ಲಿ ಕಂಡು ಬರಲಿಲ್ಲ. ಈ ಎಲ್ಲ ಸಮಯದಲ್ಲೂ  ನಮ್ಮ ಕಣ್ಣಿಗೆ ಕಾಣುತ್ತಿದ್ದದ್ದು ಪೋಲಿಸ್ ...