ಅಮ್ಮನ ಮಡಿಲು.. ಅಪ್ಪನ ಹೆಗಲು
.jpeg)
ಅಮ್ಮನ ಮಡಿಲು.. ಅಪ್ಪನ ಹೆಗಲು ಬುಧವಾರ ಸುಮಾರು 12 ಗಂಟೆ ಸಮಯದಲ್ಲಿ ಮನೆಗೆ ಬರ್ತಾ ಇದ್ದೆ. ಸಣ್ಣಗೆ ಹನಿ ಹಾಕ್ತಾ ಇತ್ತು.... ಕೆಂಪು ದೀಪ ಅಡ್ಡ ಬಂತು ಅಂತ ನನ್ನ ಗಾಡಿಯನ್ನು ನಿಲ್ಲಿಸ್ದೆ.... ಪಕ್ಕದಲ್ಲಿ ಸ್ಕೂಟರ್ ನ ಮುಂದಿನ ಜಾಗದಲ್ಲಿ ನಿಂತಿದ್ದ ಮಗುವಿನ ಕಣ್ಣಲ್ಲಿ ನೀರು ಹರೀತಿತ್ತು.... ಮನಸ್ಸು ತಡೆಯದೆ ಕೇಳಿದೆ ' ಯಾಕೋ ಮರಿ ಅಳ್ತಾ ಇದ್ದೀಯಾ' ಅಂತ. ಉತ್ತರ ಕೊಟ್ಟಿದ್ದು ಮಗುವಿನ ಅಮ್ಮ... ನೋಡಿ ಹನಿ ಬರ್ತಾ ಇದೆ ತಲೆ ಮೇಲೆ ಟೋಪಿ ಹಾಕು ಅಂದ್ರೆ ಬೇಡ ಅಂತ ಹಠ ಮಾಡ್ತಾಳೆ.... ಕೋಪ ಬಂತು ತಲೆ ಮೇಲೆ ಮಟಕ್ದೆ.. ಅದಕ್ಕೆ ಅಳು. ಮಗು ಅಮ್ಮನ ತೊಡೇನ ತಬ್ಬಿ ಕೊಳ್ತು, ಅಮ್ಮ ಮಗುನ ಮುದ್ದು ಮಾಡಿ ಕಣ್ಣೀರು ಒರೆಸಿದ್ಲು ಅಷ್ಟರಲ್ಲಿ ಹಸಿರು ದೀಪ ಬಂತು ನನ್ನ ದಾರಿ ನಾನು ಹಿಡಿದೆ. ಅಮ್ಮನಿಂದನೆ ನೋವಾಗಿದ್ರು, ಅಮ್ಮನ ಪ್ರೀತಿಯ ಅಪ್ಪುಗೆ ಆ ಮಗುವಿಗೆ ಸಮಾಧಾನ ಕೊಡ್ತು... ಅದೇ ಅಲ್ವಾ ಅಮ್ಮನ ಅಪ್ಪುಗೆಯ ವಿಶೇಷತೆ. "ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು... ನಿನ್ನ ಸಂಗ ಆಡಲೆಂದು ಬಂದೆ ನಾನು...." ಕಪ್ಪು ಬಿಳುಪು ಚಿತ್ರದ ಈ ಹಾಡಿನ ದೃಶ್ಯದಲ್ಲಿ ಕಲ್ಪನಾ ಅವರ ಅಭಿನಯ ನೋಡಿದಾಗ ಅಮ್ಮನ ತೋಳಿನ ಹಿತವಾದ ಅನುಭವದ ಕಲ್ಪನೆ ತಾನಾಗಿ ನಮ್ಮ ಮುಂದೆ ಬರುತ್ತದೆ ಮನೆಯಲ್ಲಿ ಹೆಂಡತಿ ಇರಲಿಲ್ಲ, ನಾನೊಬ್ಬನೇ... ಸಂಜೆಯಾದರೆ ಮತ್ತೆ ಜಿಟಿ ಜಿಟಿ ಮಳೆ, ಮಬ್ಬು ಬೆಳಕಿನ ವಾತಾವರಣ.. ತಿನ್ನಕ್ಕೆ ಏನಾದರೂ ಬಿಸಿ ಬಿಸಿ ...