ಬಲು ಅಪರೂಪ ನಮ್ ಜೋಡಿ.....

ಫೆಬ್ರವರಿ 28ನೆಯ ತಾರೀಕು ನನ್ನ ಮದುವೆಯಾದ ದಿನ. ಇದು 44 ವರ್ಷಗಳ ಹಿಂದಿನ ಮಾತು. ಆದರೆ ನಾವು ಮದುವೆಯ ದಿನವನ್ನು ಆಚರಿಸುವುದು ಈ ತಾರೀಖಿನಲ್ಲಲ್ಲ... ಆದರೆ ನಮ್ಮ ಪಂಚಾಂಗದ ತಿಥಿಯ ಪ್ರಕಾರ ಅಂದರೆ ಪಾಲ್ಗುಣ ಮಾಸ ಶುಕ್ಲ ಪಕ್ಷ ಬಿದಿಗೆ. ಇದು ಹೋದ ಬುಧವಾರವೇ ಆಯಿತು. ಈಗಿನ ಸಾಮಾಜಿಕ ಜಾಲತಾಣದ ಪ್ರಭಾವದಲ್ಲಿ ನಮಗೆ ಶುಭಾಶಯಗಳನ್ನು ಹೇಳುವವರ ಸಂಖ್ಯೆ ಜಾಸ್ತಿಯಾಗಿದೆ. ಆದರೆ ಈ ಶುಭಾಶಯಗಳು ವಿನಿಮಯ ಮಾಡಿಕೊಳ್ಳುವ ಇನ್ನೊಂದು ದಂಪತಿ ಇದೆ... ನಾವಿಬ್ಬರೂ ಪರಸ್ಪರ thank you and same to you ಅಂತ ಹೇಳಿಕೊಳ್ಳುವ ವರು. ( ಈಗ ನಮ್ಮ ಜೊತೆಗೆ ಇನ್ನೊಂದು ಹೊಚ್ಚ ಹೊಸ ಜೋಡಿ ಸೇರಿಕೊಂಡಿದೆ ಅದು ಸಾರ್ಥಕ ಮತ್ತು ಸುಪ್ರಿಯ.. ಈ ಜೋಡಿ ವಿಶೇಷತೆಯಿಂದ ಹೊರತು) ನಮ್ಮ ಜೋಡಿಗಳಲ್ಲಿ ಅಪರೂಪದ ವಿಶೇಷತೆ ಇದೆ ಅದನ್ನು " ಕಾಕತಾಳಿಯ ಸಮಾನತೆಗಳು" ಎಂದರೂ ಸರಿಯೇ. ನಾನು DC ರಂಗನಾಥ ರಾವ್ ( DCರಂಗ) , ನನ್ನ ಗೆಳೆಯ HP ರಂಗನಾಥ (HP ರಂಗ) ಇನ್ನು ನನ್ನ ಮಡದಿಯ ಹೆಸರು H K ವಿಜಯ,(ವಿಜಿ) ನನ್ನ ಗೆಳೆಯನ ಮಡದಿಯ ಹೆಸರೂ ವಿಜಯ ..G ವಿಜಯ (ಜಿವಿಜಿ) ಇಲ್ಲಿಂದ ಶುರು ನಮ್ಮ ದಂಪತಿಗಳ ಸಮಾನತೆಗಳು. ಅನುಕೂಲಕ್ಕಾಗಿ ನಾನು ಹಾಗೂ ನನ್ನ ಗೆಳೆಯನನ್ನು " ನಾವಿಬ್ಬರು" ಎಂದು ಹೇಳುತ್ತೇನೆ... ನಮ್ಮ ಮಡದಿಯರನ್ನು " ಅವರಿಬ್ಬರು" ಎಂದು ಸಂಭೋಧಿಸುತ್ತೇನೆ. ನಾವಿಬ್ಬರೂ ಹುಟ್ಟಿದ್ದು ...