Posts

Showing posts from January, 2023

ಪುಸ್ತಕದ ಲೋಕಾರ್ಪಣೆ... ನನ್ನದೊಂದು ಚಿಂತನೆ

Image
  ನನಗೆ ಪುಸ್ತಕಗಳೆಂದರೆ ಇಷ್ಟ-- ಅದರಲ್ಲೂ ಎಸ್ ಎಲ್ ಭೈರಪ್ಪನವರು ಹಾಗೂ ಬೀchi ನನ್ನ ಪ್ರಿಯ ಲೇಖಕರು. ಪುಸ್ತಕ ಬಿಡುಗಡೆ/ ಲೋಕಾರ್ಪಣೆ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.. ನಾನು ಕೆಲ ಕಾರ್ಯಕ್ರಮಗಳಿಗೆ ಹೋಗಿದ್ದುಂಟು.. ಲೇಖಕರ ಬಗೆಗಿನ ಪ್ರೀತಿಗಾಗಿ, ಅಭಿಮಾನಿಯಾಗಿ, ಪ್ರೇಕ್ಷಕನಾಗಿ... ಆದರೆ ಪುಸ್ತಕವನ್ನು ಲೋಕಾರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡುವ ಒಂದು ಅವಕಾಶ ನೆನ್ನೆ ಭಾನುವಾರ ನನಗೆ ದೊರೆಯಿತು. ಅಶಕ್ತ ಪೋಷಕ ಸಭಾ ಬಳಗದ ಸಕ್ರಿಯ ಸದಸ್ಯೆ ಶ್ರೀಮತಿ ಸುಮಾ Y V ಅವರು ಬರೆದ ಪುಸ್ತಕ ” ಮಕ್ಕಳ ಮಾನಸ ಲೋಕ" ದ ಬಿಡುಗಡೆ ಕಾರ್ಯಕ್ರಮಕ್ಕೆ ಅವರ ಆಹ್ವಾನವನ್ನು ಕೊಂಚ ಮುಜುಗರದಿಂದಲೇ ಒಪ್ಪಿದೆ ( ಈ ಕೆಲಸಕ್ಕೆ ನನಗಿರುವ ಅರ್ಹತೆಯಾದರೂ ಏನು ಎಂಬ ಅನುಮಾನ ನನ್ನನ್ನು ಕಾಡಿದ್ದರಿಂದ). ಸಮಾಧಾನ ಆಪ್ತ ಸಲಹಾ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮವು ಡಾಕ್ಟರ್ C R ಚಂದ್ರ ಶೇಖರ್ ಅವರ ನೇತೃತ್ವದಲ್ಲಿ ನಡೆಯಿತು. ವಯಸ್ಸಿನಲ್ಲಿ ನಾನು ಅವರಿಗಿಂತ ಕೆಲ ದಿನಗಳು ದೊಡ್ಡವನಾದರೂ ಅವರ ಪಕ್ಕದಲ್ಲಿ ನಾನು ಕುಬ್ಜನೇ... ಆದರೂ ಅವರೊಂದಿಗೆ ಒಂದಷ್ಟು ಸಲಿಗೆ ಇದೆ. ಅವರ ಜೊತೆ ವೇದಿಕೆಯಲ್ಲಿ ಕುಳಿತಾಗಲೆಲ್ಲ ಒಂದು ತರಹದ ಹೆಮ್ಮೆಯನ್ನು ಪಟ್ಟದ್ದಿದೆ. ಕಾರ್ಯಕ್ರಮ ಚೆನ್ನಾಗಿ ನಡೆಯಿತು.. ನನಗೆ ವಹಿಸಿದ ಹೊಣೆಯನ್ನು  ನಿಭಾಯಿಸಿದೆ ಅಂತ ನನ್ನ ಅನಿಸಿಕೆ. ಕಾರ್ಯಕ್ರಮದ ನಂತರ ಊಟವನ್ನಂತೂ ಸರಿಯಾಗಿ ಮಾಡಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಇನ್...

ಮಕ್ಕಳ ಪ್ರತಿಭಾ ಪ್ರದರ್ಶನ - ಪೋಷಕರಿಗೆ ಸಂಭ್ರಮದ ಕ್ಷಣ

Image
  ಇದು ನೆನ್ನೆಯ ದಿನದ ಸಂಜೆಯ ನನ್ನ ಅನುಭವ, ಬನ್ನೇರುಘಟ್ಟ ರಸ್ತೆಯಲ್ಲಿರುವ ಸುದರ್ಶನ್ ವಿದ್ಯಾ ಮಂದಿರದ ಶಾಲೆಯ ಆವರಣವನ್ನು ಹೊಕ್ಕಾಗ ಆದದ್ದು. ಕಣ್ಣಳತೆಯಲ್ಲೆಲ್ಲ ಚಿಕ್ಕವಯಸ್ಸಿನ ಅಪ್ಪ ಅಮ್ಮಂದಿರು ಜೊತೆಗೆ ನಾವುಗಳು ಅಜ್ಜಿ ತಾತಂದಿರು. ಕೆಲ ಚಿಕ್ಕ ಮಕ್ಕಳು ಸಹ. ಕಾರಣ LKG, UKG ಮಕ್ಕಳ ವಾರ್ಷಿಕ ಪ್ರತಿಭಾ ಪ್ರದರ್ಶನ. ಎಲ್ಲರ ಸಡಗರ ಸಂಭ್ರಮ.  ನಾವು ಹೋದಾಗ ಮಕ್ಕಳನ್ನು  ಕರೆದು ತಂದು ವೇದಿಕೆಯ ಹತ್ತಿರ ಕೂಡಿಸುತ್ತಿದ್ದರು. ಮಕ್ಕಳ ಉತ್ಸಾಹ ಅದೆಷ್ಟೋ.... ಶಿಕ್ಷಕರ ಪರಿಶ್ರಮ ಮೆಚ್ಚುವಂಥದ್ದು. ನನ್ನ ಮೊಮ್ಮಗಳು ವಿಸ್ಮಯ ಸಹ ಒಂದು ನೃತ್ಯದಲ್ಲಿ ಭಾಗಿ ಹಾಗಾಗಿ ನಾವು ಸಹ ಅಲ್ಲಿ ಕಾತುರದಿಂದ ಇದ್ದ ಪ್ರೇಕ್ಷಕರು. ಯಾವ ಪೂರ್ವಾಗ್ರಹವು ಇಲ್ಲದ ಮುಗ್ಧ ಮನಸ್ಸಿನ ಮಕ್ಕಳು ವಿವಿಧ ವೇಷಭೂಷಣಗಳೊಂದಿಗೆ ವೇದಿಕೆಯ ಮೇಲೆ ಬಂದು ಅವರಿಗೆ ಕಲಿಸಿದಂತಹ ಭಾಗವನ್ನು ಅವರದೇ ರೀತಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದು ನೋಡಲು ಚಂದ. ಮಕ್ಕಳು ಹೇಗೆ ಹಾಡಿದರೂ ಕುಣಿದರೂ ಚಂದ.. ಅದರಲ್ಲೂ ನಮ್ಮ ಮಕ್ಕಳು ಕುಣಿದರಂತೂ ಇನ್ನೂ ಚೆಂದ.....ಪ್ರೇಕ್ಷಕರ ಚಪ್ಪಾಳೆ.. ಮಕ್ಕಳ  ಈ ಪ್ರದರ್ಶನಕ್ಕೆ ಶಿಕ್ಷಕರ ಪ್ರಯತ್ನ ಹೇಳಲಾಗದು. ಅವರವರ ಮಕ್ಕಳು  ವೇದಿಕೆಯ ಮೇಲೆ ಬಂದಾಗ ಅವರ ಅಪ್ಪ ಅಮ್ಮ ಅಜ್ಜಿ ತಾತಂದಿರ ಸಂಭ್ರಮ ಹೇಳತೀರದು. ಈಗಿನ ಮೊಬೈಲ್ ಫೋನ್ ಯುಗದಲ್ಲಿ ಎಲ್ಲರೂ ಫೋಟೋ ತೆಗೆಯುವವರೆ ವಿಡಿಯೋ ಮಾಡುವವರೇ.. (ಮಾಡಬಾರದೆಂಬ ಸೂಚನೆ ಮತ್ತು ವಿ...

ಎಂದರೋ ಮಹಾನು ಭಾವುಲು... ಮೊದಲಕ್ಷರ ಕಲಿಸಿದ ನಂಜುಂಡಯ್ಯ ಮೇಷ್ಟ್ರು.

ಎಂದರೋ ಮಹಾನು ಭಾವುಲು... ಅಂದರಿಕಿ ವಂದನಮುಲು... ಇದು ನಾನು ಹೈಸ್ಕೂಲಿನಲ್ಲಿ ಓದುತಿದ್ದಾಗಿನಿಂದ ಕೇಳಿದ ಹಾಡು. ಆಗ ನನಗದು ತ್ಯಾಗರಾಜರ ಪಂಚರತ್ನ ಕೃತಿ ಎಂದಾಗಲಿ ಅದರ ಅರ್ಥವಾಗಲಿ ತಿಳಿಯದು. ಆದರೆ ಹಾಡು ಮಾತ್ರ ನನಗೆ ತುಂಬ ಪ್ರಿಯ. ಮಾವಳ್ಳಿಯಲ್ಲಿ ಚಂದ್ರ ಕಲಾವಿದರು (ನನ್ನಣ್ಣಂದಿರು ಚೂಡಣ್ಣ, ಕಿಟ್ಟಣ್ಣ ಅದರ ಸಕ್ರಿಯ ಸದಸ್ಯರು) ನಡೆಸುತ್ತಿದ್ದ ತ್ಯಾಗರಾಜ ಆರಾಧನೆಯ ಸಮಯದಲ್ಲಿ ಕೇಳಿದ್ದು. ಈಗ ನನ್ನ ಸಂಗೀತದ ಭಾಗವಾಗಿ ಈ ಹಾಡು ಮತ್ತಷ್ಟು ಹೃದಯಕ್ಕೆ ಹತ್ತಿರವಾಗಿದೆ.. ಹಾಗೂ ನನ್ನ ಜೀವನದ ಹಾದಿಯಲ್ಲಿ ಪ್ರಭಾವ ಬೀರಿದ ಮಹಾನುಭಾವರುಗಳನ್ನು ನೆನಪಿಸಿಕೊಳ್ಳಲು ಸ್ಪೂರ್ತಿ ನೀಡಿದೆ. ನನ್ನ ಈಗಿನ ವ್ಯಕ್ತಿ ಚಿತ್ರವನ್ನು ರೂಪಿಸಲು ಬಹಳಷ್ಟು ಮಹಾನುಭಾವರುಗಳು ಗೆರೆಗಳನ್ನು ಎಳೆದು ಬಣ್ಣಗಳನ್ನು ತುಂಬಿದ್ದಾರೆ. "ಕಲಿಸಿದಾತಂ ವರ್ಣಮಾತ್ರಂ ಗುರು" ಈ ಲೋಕೋಕ್ತಿಯಂತೆ ನನಗೆ ಮೊದಲ ಅಕ್ಷರಗಳನ್ನು ಕಲಿಸಿದ ಗುರುಗಳಿಗೆ ನನ್ನ ಭಕ್ತಿಪೂರ್ವಕ ನಮನ. ಹೀಗಿದೆ  ನನಗೆ ಅ ಆ ಇ ಈ ಕಲಿಸಿದ ನಂಜುಂಡಯ್ಯ ಮೇಷ್ಟರ ನೆನಪು. ನಂಜುಂಡಯ್ಯ ಮೇಷ್ಟ್ರು ಅಂದರೆ ಬಿಳಿಯ ಕಚ್ಚೆ ಪಂಚೆ, ಬಿಳಿಯ ಶರ್ಟು ಕಂದು ಬಣ್ಣದ ಕೋಟು ಕರಿಯ ಟೋಪಿ ಕಾಲಿಗೆ ಚಪ್ಪಲಿ ಇದು ಮನದಲ್ಲಿ ಅಚ್ಚು ಮೂಡಿದ ಚಿತ್ರಣ. ಮುಖದ ನೆನಪು ಮಾತ್ರ ಇಲ್ಲ.  ಹಳ್ಳಿಯಲ್ಲಿ ಮಕ್ಕಳು ಮನೆಯಲ್ಲಿ ತುಂಬಾ ಚೇಷ್ಟೆ ಮಾಡುತ್ತಾರೆ ಅಂದರೆ ಅವರನ್ನು ಶಾಲೆಗೆ ಕಳಿಸುವುದು ಒಂದು ಸಂಪ್ರದಾಯವೇ ಆಗಿತ್ತು. ನನ್ನನ್ನು...

ಇನ್ನೊಂದು ಕೊಂಡಿ ಕಳಚಿತು...

Image
  ಡಿ.ಸಿ.ಚಂದ್ರಚೂಡ ರಾವ್ ಹುಟ್ಟಿದವರು ಸಾಯಲೇಬೇಕು ಎನ್ನುವ ಮಾತು ಸಹಜವಾದರೂ ಕ್ಲೀಷೆ ಏನೋ ಅನಿಸುತ್ತೆ. ನಮ್ಮ ಆತ್ಮೀಯರ ಸಾವು ಹಾಗೂ ಆ ಸಂದರ್ಭದಲ್ಲಿ ಸಾಮಾನ್ಯವಾಗಿ ಎಲ್ಲರೂ ಆಡುವ ಸಾಂತ್ವನದ ಮಾತು, ನೆನ್ನೆ ನನ್ನ ದೊಡ್ಡಣ್ಣ- ಚೂಡಣ್ಣ ನಮ್ಮನ್ನಗಲಿದ ದಿನವೂ ಕೇಳಿ ಬಂತು. ನಾವು ಏಳು ಜನ ಅಣ್ಣ ತಮ್ಮಂದಿರು ಅಕ್ಕತಂಗಿಯರ ಗುಂಪಿನಿಂದ ನನ್ನಕ್ಕ ಸತ್ಯಲಕ್ಷಮ್ಮ ಈಗಾಗಲೇ ನಮ್ಮಿಂದ ದೂರವಾಗಿದ್ದಳು . ಈಗ ನನ್ನಣ್ಣನ ಸಾವಿನಿಂದ ನಮ್ಮ ಏಳು ಜನದ ಕೊಂಡಿಯಲ್ಲಿ ಮತ್ತೊಂದು ಕೊಂಡಿ ಕಳಚಿದಂತಾಯಿತು. ಚೂಡಣ್ಣ ನನ್ನ ಚಿಕ್ಕಂದಿನಿಂದಲೂ ಒಂದು ಬಗೆಯ ಮಾರ್ಗದರ್ಶಿ. ನನ್ನ ಹೆಸರನ್ನು ಇಂಗ್ಲಿಷ್ ನಲ್ಲಿ ಬರೆಯಲು ಹೇಳಿಕೊಟ್ಟವನು. ನಾನು ಹೈ ಸ್ಕೂಲ್ ಸೇರಲು ಬೆಂಗಳೂರಿಗೆ ಬಂದಾಗ ನನ್ನನ್ನು ರಾಷ್ಟ್ರೀಯ ವಿದ್ಯಾಲಯಕ್ಕೆ ಕರೆದುಕೊಂಡು ಹೋಗಿ ಸೇರಿಸಿದವನು. ಲಾಲ್ ಬಾಗ್ ತೋರಿಸಿದವನು. ನಮ್ಮೂರು ದೊಡ್ಡಜಾಲಕ್ಕೆ ಸೈಕಲ್ ನಲ್ಲಿ ಹೋಗಲು ಸಮ್ಮತಿಸಿ ಹೋಗುವ ದಾರಿಯನ್ನು ಬರೆದುಕೊಟ್ಟು ಪ್ರೋತ್ಸಾಹಿಸಿದವನು.  ಹಳ್ಳಿಯಲ್ಲಿದ್ದಾಗ ದೀಪಾವಳಿಗೆ ಪಟಾಕಿ ತಂದುಕೊಟ್ಟವನು. ಹೈಸ್ಕೂಲ್ ಹುಡುಗನಿದ್ದಾಗಿನಿಂದಲೂ ಯಾವುದೇ ಫಾರಂ ತುಂಬಿಸುವಾಗ ನನಗೇ ತುಂಬಲು ಹೇಳಿ ಪ್ರೋತ್ಸಾಹಿಸಿದವನು. ನಾನು ನೋಡಿದ ಮೊದಲ ಹಿಂದಿ ಚಿತ್ರ ಕಾಲಾಬಜಾರ್.. ಅಲಂಕಾರ್ ಸಿನಿಮಾ ಥಿಯೇಟರ್ ನಲ್ಲಿ ತೋರಿಸಿದವನು , ಹೀಗೇ ಇನ್ನೂ ಅನೇಕ ರೀತಿಯಲ್ಲಿ ಹುರಿದುಂಬಿಸಿದವನು... ಏಳು ಗಂಟೆಗೆಲ್ಲ ಮಲಗುತ್ತೇನೆಂ...

ಕನ್ನಡಿ ಸುಳ್ಳು ಹೇಳಿತೇ?

" ತಾತ ಒಂದು, ಮೂರು ಆಡೋಣ ಬಾ" ಅಂತ ನನ್ನ ಮೊಮ್ಮಗಳು ಕಣ್ಣಾ ಮುಚ್ಚಾಲೆ ಆಟಕ್ಕೆ ಕರೆದಾಗ  ಬೇಡ ಅನ್ನುವ ಪ್ರಮೇಯವೇ ಇಲ್ಲ. ಆ ಉತ್ಸಾಹದ ಚಿಲುಮೆಯ ಜೊತೆ ಕಾಲ ಕಳೆಯುವುದು ನನಗಿಷ್ಟ. ಅವಳ ಜೊತೆ ಎಲ್ಲಾ ಆಟಗಳನ್ನು ಆಡಿದರೂ... ಕೆಲಸ ಸಮಯ ಅವಳ ಕುಣಿತಕ್ಕೆ , ಓಟಕ್ಕೆ, ಆಟಕ್ಕೆ ಸರಿಸಮನಾಗಿ ನಿಲ್ಲುವುದು ಕಷ್ಟ. ಆಗ ಮೆತ್ತಗೆ ಜಾರಿಕೊಂಡದ್ದು ಇದೆ. ನಮ್ಮ ದೊಡ್ಡ ಕುಟುಂಬದ ಮಕ್ಕಳು ಮೊಮ್ಮಕ್ಕಳು ಹಾಗೂ ಸೊಸೆಯಂದಿರ ಜೊತೆ ಕಾಲ ಕಳೆಯುವ ಸಮಯ ತುಂಬ ಸೊಗಸು. ಹಾಗೆಯೇ ಅವರುಗಳೂ ಸಹ ನನ್ನ ಜೊತೆ ಗೌರವಪೂರ್ವಕ ಸಲುಗೆಯಿಂದ ನಮ್ಮನ್ನು ಕೀಟಲೇ ಮಾಡುವುದೂ ಸಹ ಮುದ ಕೊಡುವ ವಿಚಾರ. ಇದು ನಮ್ಮ ಹತ್ತಿರದ ನೆಂಟರಿಷ್ಟರ ಮಕ್ಕಳಿಗೂ ಅನ್ವಯಿಸುತ್ತದೆ. ಅವರುಗಳು ನನ್ನ ಜೊತೆ ಸಮಯ ಕಳೆಯಲು ಇಷ್ಟಪಡುತ್ತಾರೆ ಎನ್ನುವುದು ನನಗೆ ಹೆಮ್ಮೆಯೇ... ಇಂಥ ಸಮಯಗಳಲ್ಲಿ ನನ್ನ ಹೆಂಡತಿ ನನಗೆ ಹೇಳುವ ಮಾತು " ನಿಮಗೆ ವಯಸ್ಸಾಗಿದೆ ಅಷ್ಟೇ..." ಬುದ್ಧಿ ಬಂದಿಲ್ಲ ಅನ್ನುವ ಮಾತನ್ನು ಇಲ್ಲಿಯತನಕ ಹೇಳಿಲ್ಲ ಅಷ್ಟೇ. ಇದು ಕೆಲಸಲ ಆರೋಪ, ಮೂದಲಿಕೆ ಅನಿಸಿದರೆ ಕೆಲಸಲ ಮೆಚ್ಚುಗೆಯೂ ಇರಬಹುದೇನೋ ಅನಿಸಿದೆ. ಇನ್ನೊಂದು ಮುಖ... ನಿಮ್ಹಾನ್ಸ್ ನ ಒಂದು ಅಂಗವಾದ "ವಯೋಮಾನಸ ಸಂಜೀವಿನಿ"  ಹಿರಿಯ ನಾಗರಿಕರಿಗಾಗಿ ಕೆಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಒಂದು ಸಂಘಟನೆ. ಇದರಲ್ಲಿ ನಾನು ಸಹ ಕೆಲ ಚಟುವಟಿಕೆಗಳಲ್ಲಿ ಭಾಗವಹಿಸುತ್ತೇನೆ. ಅಲ್ಲಿ ಮೂಡಿ ಬರುವ ಅ...