Posts

Showing posts from September, 2017

ಶಾಲಾ ಮಕ್ಕಳ ಸಂಸತ್ತು ವತಿಯಿಂದ " ಶಿಕ್ಷಕರ ದಿನಾಚರಣೆ"

Image
ಶಾಲಾ ಮಕ್ಕಳ ಸಂಸತ್ತು ವತಿಯಿಂದ " ಶಿಕ್ಷಕರ ದಿನಾಚರಣೆ" ಇಂದು (28.09.2017) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಂಕೇನಹಳ್ಳಿ, ಬೆಂಗಳೂರು - 19, ಇಲ್ಲಿಯ ಮಕ್ಕಳು, ತಮ್ಮ ಶಾಲಾ ಮಕ್ಕಳ ಸಂಸತ್ತು ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು. ನನ್ನ ಸೌಭಾಗ್ಯ, ಇದರಲ್ಲಿ ಭಾಗವಹಿಸಲು ನನ್ನನ್ನೂ ಆಹ್ವಾನಿಸಿದ್ದರು. ಕಾರ್ಯಕ್ರಮವನ್ನು ಎಲ್ಲ ಮಕ್ಕಳೇ ನಿರ್ವಹಿಸಿದ ರೀತಿ ಹೆಮ್ಮೆಯೆನಿಸುತ್ತಿತ್ತು. ಅವರ ವಯಸ್ಸಿಗೂ ಮೀರಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ನಿರೂಪಕಿಯರು ಕಾರ್ಯಕ್ರಮವನ್ನು ನಡೆಸಿಕೊಟ್ಟ ಶೈಲಿ (ಪರಸ್ಪರ ಮಾತನಡುತ್ತಾ - ಕಾರ್ಯಕ್ರಮಕ್ಕೆ ಹೊಂದಿಸುತ್ತಾ) ವೃತ್ತಿಪರ ನಿರೂಪಕಿಯರಿಗೂ ಸರಿಸಮನಾಗಿತ್ತು. ಮಾಮೂಲಿನಂತೆ ಪ್ರಾರ್ಥನೆ, ಸ್ವಾಗತದ ನಂತರ, ಒಬ್ಬೊಬ್ಬ ವಿದ್ಯಾರ್ಥಿ ಒಬ್ಬ ಉಪಾಧ್ಯಾಯರ ಬಗ್ಗೆ ಮಾತನಾಡಿದರು. ಅವರದೇ ಆದ ನಿಷ್ಕಲ್ಮಷವಾದ, ಮುಗ್ಧ ಅಭಿಪ್ರಾಯಗಳು, ಸರಳ ಸುಂದರವಾಗಿದ್ದವು. ಎಲ್ಲ ಉಪಧ್ಯಾಯರುಗಳಿಗೆ ಉಡುಗೊರೆಗಳನ್ನೂ ಸಹ ಕೊಟ್ಟರು. ಆದರೆ ಇದನ್ನೆಲ್ಲಾ ಮಾಡಿದ ರೀತಿ ಮೆಚ್ಚುಗೆ ಸೂಸುವಂತಿತ್ತು. ನನ್ನ ಜೀವನದ ಮೊದಲ ಅನುಭವ - ಉಪಾಧ್ಯಾಯನಾಗಿ ಈ ಗೌರವ ಪಡೆದದ್ದು. ಆ ಕ್ಷಣ ನನ್ನೆಲ್ಲಾ ಗುರುಗಳಿಗೆ ಈ ಗೌರವವನ್ನು ಮನಸ್ಸಲ್ಲೇ ಸಮರ್ಪಿಸಿದೆ. ಇಂದಿನ ವಿಶೇಷ ಮತ್ತು ನನಗೂ ಇದು ಇಂದೇ ತಿಳಿದ ವಿಷಯ - ಭಾರತಾಂಬೆಯ ಮೊದಲ ಶಿಕ್ಷಕಿಯೆಂಬ ಗೌರವಕ್ಕೆ ಪಾತ್ರರಾದ ಶ್ರೀಮತಿ.ಸಾವಿತ್ರಿಬ...

"ಮಳೆ ಬಂತು ಮಳೆ ಕೊಡೆ ಹಿಡಿದು ನಡೆ"

"ಮಳೆ ಬಂತು ಮಳೆ ಕೊಡೆ ಹಿಡಿದು ನಡೆ" ಅಂತ ಮನಸ್ಸಿನಲ್ಲೇ ಹೇಳಿಕೊಂಡೆ. ಇವತ್ತು ಬೆಳಿಗ್ಗೆಯಿಂದ ಮಳೆ ಬರ್ತಾನೆ ಇದೆ. ಎಲ್ಲೂ ಆಚೆ ಹೋಗಲು ಬಿಡ್ತಾ ಇಲ್ಲ. ಸುಮ್ಮನೆ ಮಳೆ ಸುರಿಯುವುದನ್ನು ನೋಡ್ತಾ ಕುಳಿತೆ. ಮನಸ್ಸು ನನ್ನ ಹತೋಟಿ ಮೀರಿತು. ಗತಕಾಲಕ್ಕೆ ಜಾರಿತು. ಹಳ್ಳಿಯ ನಮ್ಮ ಮನೆ ಮಣ್ಣಿನ ಮಾಡಿನದು. ಹಾಗಾಗಿ ಜೋರು ಮಳೆ ಬಂದರೆ ಸೋರುತ್ತಿತ್ತು. ಮಳೆಗೆ ಮುಂಚಿನ ದಿನಗಳಲ್ಲಿ ಮಾಡು ಸರಿ ಮಾಡದಿದ್ದರೆ ಸೋರುವಿಕೆ ಇನ್ನೂ ಸ್ವಲ್ಪ ಜಾಸ್ತಿ. ಆ ಸಂಧರ್ಭಗಳಲ್ಲಿ ನೀರು ಸೋರುವಲ್ಲಿ ಒಂದು ಪಾತ್ರೆ ಇಟ್ಟು, ಅದು ತುಂಬಿದಾಗ ನೀರನ್ನು ಹೊರ ಚೆಲ್ಲುವುದು ಒಂದು ಉಪಾಯ. ಅಂದು ರಾತ್ರಿ ಜೋರು ಮಳೆ, ಸೋರಾಟ ಶುರು. ನಿದ್ದೆಯಿಂದ ಎಚ್ಚೆತ್ತ ನನಗೆ ಅಮ್ಮ ಪಡುತ್ತಿದ್ದ ಪಾಡು ನೋಡಿ ಸಹಾಯ ಮಾಡಲು ನಾನೂ ಪಾತ್ರೆ ತಂದು ಇಡಲು ಶುರು ಮಾಡಿದೆ. ಅದರಲ್ಲೂ ಆಟವಾಡುವ ಮೋಜು ನನಗೆ, ಪಾಪ ಅಮ್ಮನ ಒದ್ದಾಟ ಪೇಚಾಟ ಅಮ್ಮನಿಗೆ. ಮಳೆಗಾಲದ ಸಂಜೆ ಬಿಸಿ ಬಿಸಿ "ಬೆರಕೆ ಸೊಪ್ಪಿನ ಪಕೋಡ" - ಹಳ್ಳಿಯಲ್ಲಿ ಸಿಗುತ್ತಿದ್ದ ಬೇರೆ ಬೇರೆ ಸೊಪ್ಪುಗಳ ಮಿಶ್ರಣ - ಸೇರಿಸಿ ಮಾಡುತ್ತಿದ್ದದ್ದು, ತಿನ್ನುವ ಮಜ..ಬಾಯಲ್ಲಿ ಈಗಲೂ ನೀರೂರತ್ತೆ. ನಮ್ಮಲ್ಲೊಂದು ನೆಲಭಾವಿ - ಅಂದರೆ ಸುತ್ತಲೂ ಕಟ್ಟೆಯಿಲ್ಲ- ಮಳೆಗಾಲದಲ್ಲಿ ಹತ್ತಿರದಲ್ಲಿದ್ದ ಕೆರೆಯ ಪ್ರಭಾವದಿಂದ ತುಂಬಿ ತುಳುಕುತ್ತಿತ್ತು. ನೀರನ್ನು ನಾನೇ ಬಗ್ಗಿ ತುಂಬಿಕೊಳ್ಳುವಷ್ಟು ಮೇಲೆ. ಆದರೆ ಅದಕ್ಕೆ ಯಾವಾಗಲೂ ...

ಜೀವನೋತ್ಸಾಹ

Image
ಕಿಟ್ಟಿಮೇಷ್ಟ್ರು ಅವರು ತೆಗೆದ ಫೋಟೋ ಜೀವನೋತ್ಸಾಹ ಬಹಳಷ್ಟು ದಿನಗಳಿಂದ ನನ್ನ ಬೆಳಗಿನ ವಾಯುವಿಹಾರಕ್ಕೆ ಹೋಗುವುದು "ತಿಮ್ಮೇಶ ಪ್ರಭು ಉದ್ಯಾನವನ". ಇದು ಇತಿಹಾಸ ಪ್ರಸಿದ್ಢ ಗವಿ ಗಂಗಾಧರೇಶ್ವರ ದೇವಸ್ಥಾನದ ಬದಿಯಲ್ಲಿದೆ. ಇಲ್ಲಿ ನಮ್ಮದೇ ಆದ ಸ್ನೇಹಿತರ ಗುಂಪು ಇದ್ದರೂ ನಮ್ಮ ಮಾತು ಕಥೆ ಬಹಳಷ್ಟು ಮಂದಿಯ ಜೊತೆ ಇರುತ್ತದೆ. ನಾವುಗಳು ಜೊತೆಯಲ್ಲಿ ಕಳೆಯುವ ಹೊತ್ತು ನಿಜಕ್ಕೂ ಚೇತೋಹಾರಿ. ಮಾತನಾಡುವ ವಿಷಯಗಳಿಗೆ ಯಾವುದೇ ಕಟ್ಟುಪಾಡುಗಳಿಲ್ಲ. ಜಗತ್ತಿನ ಯಾವುದೇ ವಿಷಯವಾದರೂ ಸರಿ ಅದು ಬಹು ವಿಧ ನೋಟಗಳಿಂದ ವಿಶ್ಲೇಸಿಲ್ಪಡುತ್ತದೆ. (ಕೆಲವು ಸಲ ಅದು ಕಾಡು ಹರಟೆಯಲ್ಲಿ / ತಲೆಹರಟೆ ಯಲ್ಲಿ ಕೊನೆಗೊಳ್ಳಬಹುದು). ಇದು ಒಂದು ಮುಖವಾದರೆ, ಅಲ್ಲಿನ ವಾಯುವಿಹಾರಿಗಳು "ಸ್ನೇಹರಂಗ" ದ ಹೆಸರಿನಲ್ಲಿ ಒಗ್ಗೂಡಿ ಪ್ರತಿ ಸೋಮವಾರ ಭಜನೆ, ತಿಂಗಳಿಗೊಮ್ಮೆ, ಎರಡನೆಯ ಮಂಗಳವಾರ "ಕಾಫಿ ಡೇ" ಯಲ್ಲಿ ಇಲ್ಲಿರುವ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಚರಿಸುತ್ತೇವೆ. ವರ್ಷಕ್ಕೊಮ್ಮೆ "ಪ್ರತಿಭಾ ಪುರಸ್ಕಾರ" ದಲ್ಲಿ 10 ನೇ ತರಗತಿ ಮತ್ತು ಪಿ.ಯು. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿಧ್ಯಾರ್ಥಿಗಳಿಗೆ ಸನ್ಮಾನ, ಮತ್ತು "ಕನ್ನಡ ರಾಜ್ಯೋತ್ಸವವನ್ನು ಆಟೊಟಗಳೊಂದಿಗೆ ಸಂಭ್ರಮದಿಂದ ಆಚರಿಸುತ್ತೇವೆ. ಈ ಎಲ್ಲ ಕಾರ್ಯಕ್ರಮಗಳೂ ಹಿರಿಯರಾದ ನಮ್ಮ ಪ್ರೀತಿಯ "ಕಿಟ್ಟಿ ಮೇಷ್ಟ್ರ" ಮುಂದಾಳ...

ಕಾಯುವ ದೈವ ಯಾವ ರೂಪದಲ್ಲಿ ಬಂದ?

Image
ಕಾಯುವ ದೈವ ಯಾವ ರೂಪದಲ್ಲಿ ಬಂದ? ನೆನ್ನೆ ಮಳೆಯ ಆರ್ಭಟ ಎಷ್ಟಿತ್ತೆಂದರೆ - ನನ್ನ ನೆನಪಿನಲ್ಲಿರುವಂತೆ ಇಷ್ಟು ಭಯಾನಕ ಪರಿಸ್ಥಿತಿಯನ್ನು ನಾನು ಕಣ್ಣಾರೆ ಕಂಡಿರಲಿಲ್ಲ. ಕಿವಿಯಿಂದ ಕೇಳಿದ್ದೆ ಮತ್ತು ವಾರ್ತೆಗಳ ಮೂಲಕ ತಿಳಿದಿದ್ದೆ. ಸಂಜೆ ಸುಮಾರು 7.30 ರ ಸಮಯ. ಮನೆಯಕಡೆ ಬರುತ್ತಿದ್ದೆ. ಜೊತೆಯಲ್ಲಿದ್ದಳು ನನ್ನ ಮಡದಿ. ಮಳೆಯ ಹನಿ ಶುರುವಾಯಿತು. ಕೆಲವೇ ಕ್ಷಣಗಳಲ್ಲಿ ಮಳೆಯ ಆರ್ಭಟ ಎಷ್ಟು ಹೆಚ್ಚಾಯಿತೆಂದರೆ ನನಗೆ ಮುಂದಿನ ರಸ್ತೆ ಕಾಣದಷ್ಟು. ನನಗೆ ಕಾರನ್ನು ಓಡಿಸಲು ಸಾಧ್ಯವಾಗಲಿಲ್ಲ. ಹೇಗೋ ಕಷ್ಟಪಟ್ಟು ಮನೆಯ ಹತ್ತಿರ ಬಂದು ಕಾರನ್ನು ನಿಲ್ಲಿಸಿ ಹೊರಗೆ ಬರಲಾರದೆ ಯೋಚಿಸುತ್ತಿದ್ದೆವು. ಸುತ್ತಲೂ ಕಾರ್ಗತ್ತಲು. ಗುಡುಗು ಮಿಂಚಿನ ಆರ್ಭಟ. ಜೊತೆಯಲ್ಲಿ ನಮ್ಮ ಹಿಂದೆ ಏನೋ ಬಿದ್ದ ಸದ್ದು. ಹೇಗಾದರಾಗಲಿ ಮನೆ ಒಳಗೆ ಹೋಗೋಣವೆಂದು ನಿರ್ಧರಿಸಿ, ಓಡಿ ಮನೆಯೊಳಗೆ ಸೇರಿ ದೀಪ ಬೆಳಗಿಸಿ ರಸ್ತೆಯ ಕಡೆ ನೋಡಿದಾಗ ನಮಗೆ ಒಂದು ತರಹ ಆಘಾತ. ನಮ್ಮ ಕಾರಿನ ಸ್ವಲ್ಪ ಹಿಂದೆ ಪಕ್ಕದ ಮರದ ಒಂದು ದೊಡ್ಡ ಕೊಂಬೆ ಮುರಿದು ಬಿದ್ದಿದೆ. ಒಂದು ಕೊನೆ ರಸ್ತೆಯಮೇಲೆ ಇನ್ನೊಂದು ಕೊನೆ ಎಲೆಕ್ಟ್ರಿಕ್ ತಂತಿಯ ಮೇಲೆ. ಆ ಕೊಂಬೆ ತಂತಿಯ ಮೇಲೆ ಬೀಳದಿದ್ದರೆ, ನಮ್ಮ ಕಾರು ಕೊಂಬೆಯ ಕೆಳಗೆ ಸಿಕ್ಕಿಹಾಕಿಕೊಳ್ಳುತ್ತಿತ್ತು. ನಮ್ಮ ಪರಿಸ್ಥಿತಿ ಏನಾಗುತ್ತಿತ್ತೋ ಊಹೆಗೂ ನಿಲುಕದು. ಕಾಯುವ ದೈವ ಯಾವ ರೂಪದಲ್ಲಿ ಬರುತ್ತದೋ ಬಲ್ಲವರಾರು. ನೆನ್ನೆ ನಮ್ಮನ್ನು ಕಾಯ್ದ ದೈವ ಎಲೆಕ್ಟ್ರಿಕ್ ತಂತಿ...

ಶಿಕ್ಷಕರ ದಿನಾಚರಣೆ:

ಶಿಕ್ಷಕರ ದಿನಾಚರಣೆ: ಇಂದು 05.09.2017 ಶಿಕ್ಷಕರ ದಿನಾಚರಣೆ: ಸುಂಕೇನಹಳ್ಳಿ ಶಾಲೆಯ ಏಳನೆಯ ತರಗತಿಯ ಮಕ್ಕಳು ಇಂದು ನನ್ನನ್ನು ಆದರಿಸಿದ ಪರಿ - ಅಬ್ಬಾ ಹೃದಯ ತುಂಬಿ ಬಂತು. ನಾನು ಅವರೊಡನೆ ಒಡನಾಡುವುದು ವಾರಕ್ಕೊಮ್ಮೆ ಮಂಗಳವಾರ ಮಾತ್ರ. ಅದೂ ಕೇವಲ 45 ನಿಮಿಷಗಳ ಕಾಲ. ಆದರೆ ಅವರ ಪ್ರೀತಿಯ ಕೊಡುಗೆ ವರ್ಷ ಪೂರ್ತಿಗೆ ಸಾಕಾಗುವಷ್ಟು. ಇನ್ನು ಯಾವಾಗಲೂ ಅವರೊಡನೆ ಕಾಲ ಕಳೆಯುವ ಶಿಕ್ಷಕರ ಖುಶಿ ಅಪರಿಮಿತ. ಉಪಾಧ್ಯಾಯ ವೃತ್ತಿ - ಅದರಲ್ಲೂ ಪ್ರೌಡಶಾಲೆಯ ವರೆಗೆ- ಬಹಳ ಭಾವನಾತ್ಮಕವಾದದ್ದು. ಅಲ್ಲಿನ ಮಕ್ಕಳಲ್ಲಿ ಇನ್ನೂ ಮುಗ್ಢತೆಯಿರುತ್ತದೆ, ಮತ್ತು ಅವರದು ನಿಷ್ಕಲ್ಮಷ ಪ್ರೀತಿ. ನನ್ನ ನೆನಪು ನನ್ನ ಬಾಲ್ಯಕ್ಕೆ ಓಡುತ್ತಿದೆ. ನನ್ನ ಹಳ್ಳಿಯ ಶಾಲೆಯಲ್ಲಿ ನನ್ನ ಮೇಲೆ ಪ್ರಭಾವ ಬೀರಿದ ಮೇಷ್ಟ್ರುಗಳು : ಮೊಟ್ಟ ಮೊದಲಿಗೆ ನನಗೆ ಅ ಆ ಹೇಳಿಕೊಟ್ಟ (ಶ್ರೀನಿವಾಸಯ್ಯ ?) ಮೇಷ್ಟ್ರು. ನನಗಾಗ 5 ವರ್ಷಕ್ಕೂ ಕಡಿಮೆ. ಅಪ್ಪ ಶಾಲೆಗೆ ಬಿಟ್ಟಿದ್ದು ನೆನಪು. ನನಗೆ ಭಯ. ಗೋಡೆಯ ಪಕ್ಕದಲ್ಲಿ ಕೂಡಿಸಿ ಹುಣಿಸೆ ಬೀಜಗಳನ್ನು ಕೊಟ್ಟು ನೆಲದಮೇಲೆ ಅ ಮತ್ತು ಆ ಅಕ್ಷರಗಳನ್ನು ಬರೆದು ಅದರಮೇಲೆ ಹುಣಿಸೆ ಬೀಜಗಳನ್ನು ಜೋಡಿಸಲು ಹೇಳಿದ್ದು. ನನಗೆ ಈಗಲೂ ಕಣ್ಣಿಗೆ ಕಟ್ಟಿದಂತಿರುವುದು ಅವರ ವೇಷ ಭೂಷ. ಬಿಳಿಯ ಕಚ್ಚೆ ಪಂಚೆ, ಕಪ್ಪು ಬಣ್ಣದ ಕೋಟು ಮತ್ತು ಟೋಪಿ, ಮತ್ತು ನನ್ನೆದುರಿಗೆ ಬಗ್ಗಿ ನನಗೆ ಸರಿ ಕಾಣುವ ಹಾಗೆ ಅಕ್ಷರಗಳನ್ನು ಬರೆದದ್ದು. ಮುನಿಶಾಮಯ್ಯ ಮೇಷ್ಟ್ರು ಅಂದ್ರ...