ವಸಂತವನ್ನೇ ಕಾಣದ ವಸಂತಲಕ್ಷ್ಮಿ

ನನ್ನ ಕಛೇರಿಯಲ್ಲಿ ಯಾವುದೋ Technical discussion ನ್ನಲ್ಲಿದ್ದೆ. ಫೋನ್ ರಿಂಗಣಿಸಿತು.. ಉತ್ತರಿಸದೆ ನಿರಾಕರಿಸಿದೆ. ಮತ್ತೆರಡು ಸಲ ಅದೇ ಫೋನ್ ಕರೆ... ಅಪರಿಚಿತ ನಂಬರ್ ನಿಂದ. ಪ್ರಾಯಶಃ ಯಾವುದೋ ಗಹನವಾದ ವಿಷಯವೇ ಇರಬಹುದೆಂದು ಕರೆಯನ್ನು ಸ್ವೀಕರಿಸಿದೆ. ' ಸರ್ ಕ್ಷಮಿಸಿ, ಮತ್ತೆ ಮತ್ತೆ ಫೋನ್ ಮಾಡಿದ್ದಕ್ಕೆ. ನಾನು ವಸಂತ ಲಕ್ಷ್ಮಿಯ ತಂಗಿ, ಅಕ್ಕನ ಆರೋಗ್ಯ ತುಂಬಾ ಹದಗೆಟ್ಟಿದೆ, ಪದೇ ಪದೇ ನಿಮ್ಮ ಹೆಸರು ಹೇಳ್ತಾಳೆ, ನೀವು ಒಂದು ನಿಮಿಷ ಬಂದು ಅಕ್ಕನನ್ನು ಮಾತಾಡಿಸಲು ಸಾಧ್ಯವಾ ಎಂದು ಅಪ್ಪ ಕೇಳಿದ್ದಾರೆ, ಬರ್ತೀರ ಅಲ್ವಾ?' ಮನೆಯ ವಿಳಾಸ ಕೇಳಿ ತಿಳಿದುಕೊಂಡೆ, ನಡೆಯುತ್ತಿದ್ದ ಮಾತುಕತೆಯನ್ನು ಬೇಗ ಮುಗಿಸಿ, ಹೊರಡಲನುವಾದೆ. ಮನೆ ಸಮೀಪಿಸಿದಾಗ, ಅಳು ಕೇಳಿ ಬಂತು, ಅನುಮಾನವಾಯಿತು, ನನ್ನ ಕಂಡೊಡನೆ ಅವರ ಅಪ್ಪ ಹೇಳಿದ್ದು "ನೋಡಿ ಸರ್ ಹೆಂಗ್ ಮಲಗವಳೆ, ನನ್ ಮೇಲೆ ಕೋಪ ಬಂದಾಗ ರಂಗನಾಥ್ ರಾವ್ ಸರ್ ಗೆ ಹೇಳ್ತೀನಿ ಅಂತ ಹೆದರಿಸುತ್ತಿದ್ದೋಳು ಈಗ ತೆಪ್ಪಗೆ ಮಲಗವಳೆ.. ನಮ್ಮನ್ನ ಬಿಟ್ಟು ಹೋಗ್ಬಿಟ್ಲು' . ನನಗೆ ಆಘಾತವಾಯಿತು, ಇಷ್ಟು ಬೇಗ ಹೀಗಾಗುತ್ತದೆ ಎಂದು ನಾನು ಎಣಿಸಿರಲಿಲ್ಲ. ಸ್ವಲ್ಪ ಹೊತ್ತು ಇದ್ದು ಸಮಾಧಾನದ ಮಾತಾಡಿ, ಅಲ್ಲಿಂದ ಹೊರಟೆ... ಮನಸ್ಸು ಹಿಂದಕ್ಕೆ ಓಡಿತು. ಆಗಿನ್ನು ಆಪ್ತ ಸಮಾಲೋಚಕನಾದ ಹೊಸತು, ಬುಧವಾರ ಸಂಜೆ ಹೋದೊಡನೆ, ಪ್ರಸನ್ನ ಆಪ್ತ ಸಲಹಾ ಕೇಂದ್ರದ ಬಾಗಿಲು ತೆಗೆದು, ಬಂದಿರುವ ಎಲ್ಲರ ಹೆ...