Posts

Showing posts from April, 2025

ಹಿಂದು ಮುಂದಾದರೂ ಒಂದಾಗಬೇಕು

Image
ಇದೀಗ ಬಂದ ಸುದ್ದಿಯಲ್ಲಿ ಕಾಶ್ಮೀರದಲ್ಲಿ... ಹಿಂದುಗಳನ್ನೇ ಗುರುತಿಸಿ ಕೊಲ್ಲುವಾಗ.... ಉಗ್ರರು ಯಾವ ಜಾತಿಯೆಂದು ಯಾರನ್ನೂ ಕೇಳಲಿಲ್ಲ...  ಹಿಂದುಗಳೆಂದು ಮಾತ್ರ ಗುರುತಿಸಿ ಗುಂಡಿಕ್ಕಿದ್ದು .   ಅಲ್ಲಿಗೆ ಜಾತಿ ಜಾತಿ ಎಂದು ನಮ್ಮಲ್ಲೇ ನಾವು ಕಚ್ಚಾಡುತ್ತಿರುವ... ಅದನ್ನೇ ದಾಳವಾಗಿ ಉಪಯೋಗಿಸಿಕೊಂಡು ತಮ್ಮ ಕುರ್ಚಿಯನ್ನು ಭದ್ರ ಮಾಡಿಕೊಳ್ಳುವ ದುರುಳ ರಾಜಕಾರಣಿಗಳ ಹುನ್ನಾರದಿಂದ ಹೊರಬರಲು ಇನ್ನಾದರೂ ನಿರ್ಧಾರ ಮಾಡಬೇಕು. ಈಗಲಾದರೂ ನಾವು ಜಾತಿ ಪಂಗಡಗಳಿಂದ ಹೊರಬಂದು ನಾವೆಲ್ಲಾ ಹಿಂದುಗಳು ಎಂಬ ಭಾವನೆಯಿಂದ ಒಂದುಗೂಡಿದರೆ ಮಾತ್ರ, ನಾವೆಲ್ಲರೂ ಹಾಗೂ ನಮ್ಮ ಮುಂದಿನ ಪೀಳಿಗೆಯವರು ಸುರಕ್ಷತೆಯಿಂದ ಇರಬಹುದು.  ಕೋಟ್ಯಾಂತರ ರೂಪಾಯಿಗಳನ್ನು ಗಳಿಸಿ ಆಸ್ತಿ ಮಾಡಿ ಅದನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋದರೆ, ನಾವಂದುಕೊಂಡಂತೆ ಅವರು ಅದನ್ನು ಅನುಭವಿಸಿಕೊಂಡು ಸುಖವಾಗಿರಲಾರರು. ಅದನ್ನು ದುರುಳ ಉಗ್ರವಾದಿಗಳು ಕಿತ್ತುಕೊಂಡು, ಮತಾಂತರ ಮಾಡಿ, ಒಪ್ಪದಿದ್ದರೆ ಕೊಂದು, ಹೆಣ್ಣು ಮಕ್ಕಳನ್ನು ಅವಮಾನಿಸಿ, ಹಿಂಸಿಸಿ ಅವರನ್ನು ಹೊತ್ತೊಯ್ಯುತ್ತಾರೆ. ಇದನ್ನು ತಪ್ಪಿಸಬೇಕೆಂದರೆ, ನಾವೆಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಹೋರಾಡಿ ಆ ದುರುಳ ಸಂತತಿಯನ್ನು ಎದುರಿಸಿ, ಅವರ ಶಕ್ತಿಯನ್ನು ನಿರ್ನಾಮ ಮಾಡುವುದೊಂದೇ ದಾರಿ.  ಈಗಿನ ದಿನಗಳಲ್ಲಿ ಯಾವುದೇ ಮಾಧ್ಯಮದಲ್ಲಿ ನೋಡಿದರೂ ದೇಶದಲ್ಲಿ ನಡೆಯುತ್ತಿರುವ ಗಲಭೆಗಳ ಬಗ್ಗೆಯೇ ಕಾಣುತ್ತೇವೆ. ಅದರಲ...

ಚರಮಗೀತೆ - ಬಿನ್ನವತ್ತಳೆ

Image
ನಾನು ಬರೆದ ಬ್ಲಾಗ್ ನ ಲೇಖನಗಳಿಗೆ ಭೇಷ್ ಎನ್ನುವ ಪ್ರತಿಕ್ರಿಯೆಗಳು ಬಂದಾಗ ಸಹಜವಾಗಿ ಖುಷಿಯಾಗುತ್ತದೆ. ಕೆಲವರು ಸಲಹೆ/ ಸೂಚನೆಗಳನ್ನು ಕೊಟ್ಟಿದ್ದಾರೆ,  ಅವುಗಳಲ್ಲಿ ಕೆಲವನ್ನು ಅಳವಡಿಸಿಕೊಂಡಿದ್ದೇನೆ. ನನ್ನ ಮಾವನ ಬಗ್ಗೆ ಬರೆದ ಲೇಖನಕ್ಕೆ ಬಂದದ್ದು ವಿಶೇಷ ಪ್ರತಿಕ್ರಿಯೆ, ನನ್ನ ಸ್ನೇಹಿತ ಶಿವನಿಂದ (ಕೆ. ಎನ್. ಶಿವಶಂಕರ). ನನಗೆ ಮಾವನಾಗುವುದಕ್ಕೂ ಮುಂಚೆ... ನಾನು ಹಾಗೂ ಶಿವ, ಅವರ ಮನೆಯ ಮುಂದೆ ತಾಳ ಹಾಕಿಕೊಂಡು ಜೋರಾಗಿ ಹಾಡಿದ " ಸರ್ವ ಮಂಗಳನಾಮ ಸೀತಾರಾಮ" ಹಾಡಿಗೆ ಅವರ ಸಿಡುಕು ಎಂದು ಹೇಳಬಹುದಾದ ಪ್ರತಿಕ್ರಿಯೆ  "ಏನದು ಮನೆ ಮುಂದೆ ಇದೆಲ್ಲ.. ನಿಲ್ಸಿ". ನಾವು ಬೈಸಿಕೊಂಡೆವೇನೋ ಎಂಬಂತೆ ಸಪ್ಪಗಾಗಿದ್ದು ಸತ್ಯ. ಈ ವಿಷಯ ಯಾಕೆ ಬರೀಲಿಲ್ಲ ಅಂತ ಶಿವನ ಪ್ರಶ್ನೆ... ಯಾಕೆ ಬರೀಲಿಲ್ಲ ಅಂತ ನನಗೆ ನಾನೇ ಪ್ರಶ್ನೆ ಮಾಡಿಕೊಂಡಾಗ ಅನ್ನಿಸಿದ್ದು... ಪ್ರಾಯಶಃ ನಾನು ಮಾವ ಕೃಷ್ಣಮೂರ್ತಿಯವರ ಬಗ್ಗೆ ಮಾತ್ರ ಯೋಚಿಸಿದ್ದಿರಬಹುದಾ? ಅಥವಾ ಸತ್ತವರ ಬಗ್ಗೆ ಯಾಕೆ ಈ ಕಹಿ ಘಟನೆಯ ನೆನಪು ಎಂದಿರಬಹುದಾ? ನಾ ಹೇಳಲಾರೆ... ಯಾಕೆಂದರೆ ಇದು ಘಟನೆಯ ನಂತರದ ವಿಶ್ಲೇಷಣೆ.(postmortem). ಖಾಸಗಿ ಮಾತು ಕಥೆಗಳಲ್ಲಿ, ಏನೇ ವಿಷಯ ಮಂಥನಗಳು ನಡೆಯಲಿ, ಸಾರ್ವಜನಿಕ ವಾಗಿ, ಸತ್ತವರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುವುದು ಲೋಕ  ನಿಯಮವೇ ಎಂದು ಹೇಳಬಹುದು. ಹಾಗಾಗಿ ಎಲ್ಲರೂ ಸತ್ತವರ ಒಡನಾಟದ ಕೆಲ ಸುಂದರ ಕ್ಷಣಗಳನ್ನು ನೆನೆದು ಅದನ್ನು ಹಂಚಿಕೊಳ್ಳು...

ಸೋಲು - ಸವಾಲು

Image
“ದೇವರೇ ನನ್ನ ಮಗನ ಕಷ್ಟ ಪರಿಹಾರ ಮಾಡಪ್ಪ”  ಅನ್ನುವ ಒಂದು ಪ್ರಾರ್ಥನೆಯೇ ಲಕ್ಷಮ್ಮನ ದೈನಂದಿನ ಕೆಲಸದ ದೊಡ್ಡ ಭಾಗವಾಗಿತ್ತು. ಈಚಿನ ದಿನಗಳಲ್ಲಿ ಮಗನ ಚಿಂತೆಯಲ್ಲೇ ದಿನ ಕಳೆಯುವುದಾಗಿತ್ತು. ಏನು ಮಾಡಲೂ ದಿಕ್ಕು ತೋಚದು... ಸುಮ್ಮನಿರಲೂ ಆಗದು. ಚಿಕ್ಕವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡ ಮೂರು ಮಕ್ಕಳ ತಾಯಿ ಲಕ್ಷಮ್ಮ, ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ, ಹೇಗೋ ಜೀವನವನ್ನು ಸಾಗಿಸುತ್ತಾ ಮಕ್ಕಳನ್ನು ದೊಡ್ಡದು ಮಾಡಿದವರು. ಎಲ್ಲರನ್ನೂ ಒಂದು ಹಂತಕ್ಕೆ ತಂದು, ಎಲ್ಲ ಮಕ್ಕಳಿಗೂ ಮದುವೆ ಮಾಡಿ, ಜವಾಬ್ದಾರಿಗಳನ್ನು ಮುಗಿಸಿದವರು.  ಮಕ್ಕಳ ಸಲಹೆಯಂತೆ, ಸಂಪಾದನೆ ಮಾಡುವ ಎಲ್ಲ ಕೆಲಸಗಳನ್ನು ಬಿಟ್ಟು, ನಿರಾಳವಾಗಿ ಕಾಲ ಕಳೆಯಬೇಕು ಎಂಬ ನಿರ್ಧಾರ ಮಾಡಿ, ಚಿಕ್ಕ ಮಗ ಮಾಧವನ ಹೊಸ ಸಂಸಾರದೊಂದಿಗೆ ಜೀವನ ಶೈಲಿಯನ್ನು ಹೊಂದಿಸಿಕೊಂಡು, ಕೆಲಸಕ್ಕೆ ಹೋಗುವ ಸೊಸೆಗೂ ಬೇಕಾದ  ಊಟ ತಿಂಡಿಗಳನ್ನು ಮಾಡಿಕೊಡುತ್ತಾ ಹೆಜ್ಜೆ ಹಾಕುತ್ತಿದ್ದರು.   ಹೊಸ ದಂಪತಿಗಳು ಜೊತೆ ಜೊತೆಯಲ್ಲಿ ಓಡಾಡುವುದನ್ನು ನೋಡಿ ಸಂತೋಷಕ್ಕೆ ಪಾರವೇ ಇಲ್ಲದಂತೆ ಸಂಭ್ರಮಿಸುತ್ತಿದ್ದರು. ಕಾಲ ಸರಿದಂತೆ ಮಗ ಸೊಸೆ ಮಧ್ಯೆ ಎಲ್ಲವೂ ಚೆನ್ನಾಗಿಲ್ಲವೇನೋ ಅನ್ನಿಸತೊಡಗಿತು. ಮುಂದುವರಿದಂತೆ ಅದು ಪ್ರಕಟಗೊಳ್ಳಲು ಶುರುವಾಯಿತು... ಅದರ ಪರಿಣಾಮ ಲಕ್ಷಮ್ಮನ ಮನಸ್ಸಿನಲ್ಲಿ ಆತಂಕ ಮೂಡಿತು. ಸೊಸೆ ತನ್ನ ಬಗ್ಗೆ ಗೌರವದಿಂದ ನಡೆದುಕೊಂಡರೂ.... ಮಗನ ಜೊತೆ ಎಲ್ಲವೂ ಸರಿ ಇಲ್ಲದಿದ...

ಅಂತ್ಯ- ನಿರಂತರ - ಯುಗಾದಿ

Image
  ಹೆಣ್ಣು ಕೊಟ್ಟ ಮಾವ ಕಣ್ಣು ಕೊಟ್ಟ ದೈವ  ಎರಡು ಸಮಸಮ ಎನ್ನುವುದೊಂದು ಭಾವ . ಇಹಲೋಕದ ವ್ಯಾಪಾರ ಮುಗಿಸಿ ಹೊರಟಿತು ಆ ಜೀವ.. ಆ ಆತ್ಮಕ್ಕೆ ಸದ್ಗತಿಯನ್ನು ತಕ್ಷಣವೇ ಕರುಣಿಸೋ ಓ ದೇವ. ಮಾರ್ಚ್ 27ರಂದು,  ನಮ್ಮನ್ನು ಅಗಲಿದ ನನ್ನ ಮಾವ 97 ವರ್ಷದ ಹಿರಿಯ ಚೇತನ H P ಕೃಷ್ಣಮೂರ್ತಿಯವರ ಸಾವಿನ ಕ್ಷಣದಲ್ಲಿ ನನ್ನೊಳಗೆ ಮೂಡಿದ್ದು, ಮೇಲಿನ  ಸಾಲುಗಳು.  ಮೂರು ಘಂಟೆಯ ಅವಧಿಯಲ್ಲಿ ಅವರ ಆರೋಗ್ಯದಲ್ಲಿ  ತುಂಬಾ ವೇಗದಿಂದ ಆದ ಬದಲಾವಣೆಗಳು, ನಮ್ಮನ್ನೆಲ್ಲ ಸ್ವಲ್ಪ ಆತಂಕಕ್ಕೆ ದೂಡಿದ್ದು ಸಹಜ ಸತ್ಯ.    ಸುಮಾರು 1967 ರಿಂದ,  ನನಗೆ ಅವರ ಪರಿಚಯ. ಮಾವನಾದದ್ದು 1979ರಲ್ಲಿ.  ಅವರ ಅಣ್ಣನ  (ದೊಡ್ಡಪ್ಪ ಎಂದು ಕರೆಯುತ್ತಿದ್ದ ಎಚ್ ಪಿ ನರಸಿಂಹಮೂರ್ತಿಯವರು.. ) ಜೊತೆಯಲ್ಲಿದ್ದ ಬಾಂಧವ್ಯ, ಒಟ್ಟಾಗಿ ಸಂಸಾರದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದ ರೀತಿ, ತಂಗಿಯರು, ತಮ್ಮ ಹಾಗೂ ಮಕ್ಕಳ ಓದು, ಮದುವೆ, ಬಾಣಂತನ.. ಹೀಗೆ ಎಲ್ಲವನ್ನು ತಮಗಿದ್ದ ಸಂಪಾದನೆಯಲ್ಲಿ ನಿಭಾಯಿಸಿದ ರೀತಿ, ನಾನು ತುಂಬಾ ಅಭಿಮಾನದಿಂದ ಹಾಗೂ ಮೆಚ್ಚುಗೆಯಿಂದ ನೆನೆಯುತ್ತೇನೆ. ಅದರಲ್ಲೂ ಇಬ್ಬರು ಅಣ್ಣ ತಮ್ಮಂದಿರಲ್ಲಿದ್ದ ಪರಸ್ಪರ ಗೌರವ ನಂಬಿಕೆ ಹಾಗೂ ಒಮ್ಮ ಸಮ್ಮತ ಈಗಿನ ಕಾಲಕ್ಕೆ ಒಂದು ಉದಾಹರಣೆಯೇ ಸರಿ.   ತಮ್ಮ 48ನೆಯ ವಯಸ್ಸಿನಲ್ಲೇ ಮಡದಿಯನ್ನು ಕಳೆದುಕೊಂಡ ಅವರು ನಂತರದ ಇಡೀ ಜೀವನವನ್ನು ಮಕ್ಕಳ ಹಾಗೂ ಸಂ...