ವಾಸ್ತುಶಾಸ್ತ್ರ- ವಸ್ತುಸ್ಥಿತಿ

Walking ಸಮಯದ talking ನನಗೆ ಬಲು ಇಷ್ಟ ... ಅದು ನಮ್ಮದಾದರೂ ಸರಿ.. ಬೇರೆಯವರ ಮಾತಾದರೂ ಸರಿ. ಹೀಗೆ ಕೇಳಿಸಿಕೊಂಡ ಮಾತು ವಾಸ್ತು ಶಾಸ್ತ್ರದ ಬಗೆಗಿತ್ತು.." ಎಂಥಾ ಸಂದಿಗ್ಧ ಅಂತೀರಾ... ನಮ್ ಪಕ್ಕದ ಸೈಟ್ ನಲ್ಲಿ ದೇವಮೂಲೆಯಲ್ಲಿ ಬೋರ್ ವೆಲ್ ಹಾಕಿಸಿದ್ದಾರೆ ...ಒಳ್ಳೆ ನೀರು ಬಂದಿದೆ. ನಮ್ ಸೈಟ್ ನಲ್ಲೂ ಬೋರ್ ವೆಲ್ ಹಾಕಿಸ ಬೇಕು... ಅದು ದೇವಮೂಲೆಯಲ್ಲಿ ಇದ್ರೆ ಒಳ್ಳೇದು ಅಂತ ವಾಸ್ತು ತಿಳಿದವರು ಹೇಳ್ತಾರೆ... ಆದರೆ ನೀರಿನ ಸೆಲೆ ಹುಡುಕಿಕೊಟ್ಟವರು ಅದನ್ನ ಅಗ್ನಿಮೂಲೆ ತೋರಿಸಿದ್ದಾರೆ... ಏನ್ ಮಾಡಬೇಕು ತೋಚುತ್ತಾ ಇಲ್ಲ" . ಕಣ್ಮುಚ್ಚಿ ಅಕ್ಕ ಪಕ್ಕ ಸೈಟ್ ಅನ್ನ ಕಲ್ಪಿಸ್ಕೊಂಡೆ ಆಗ ಕಾಣಿಸಿದ್ದೇ ...ಒಬ್ಬರ ಮನೆಯ ಅಗ್ನಿ ಮೂಲೆಯ ಬಲಗಡೆ ಪಕ್ಕದ ಮನೆಯವರ ದೇವ ಮೂಲೆ. ನೀರಿನ ಹರಿವು ಅದೃಷ್ಟವಶಾತ್ ಒಬ್ಬರಿಗೆ ದೇವಮೂಲೆಯಲ್ಲಿ ಸಿಕ್ಕಿದೆ, ಪಕ್ಕದಲ್ಲಿ ಬೋರ್ ಹಾಕಿದರೆ ನೀರಿನ ಸಾಧ್ಯತೆ ಹೆಚ್ಚು ಅಲ್ಲವೇ( ಕಾನೂನುಗಳ ವಿಧಿಯನ್ನು ಗಮನಿಸದೆ)... ವಾಸ್ತು ಶಾಸ್ತ್ರಕ್ಕೂ ವಸ್ತು ಸ್ಥಿತಿಗೂ ಇರುವ ಅಂತರ... ಅದರಿಂದಾಗುವ ಗೊಂದಲ ನನ್ನಲ್ಲಿ ಮೂಡಿತು.... ನನಗಿದು ಸಂಬಂಧವೇ ಇಲ್ಲದಿರುವ ವಿಷಯವಾದರೂ. ಇನ್ನು ಅದನ್ನು ನಿಭಾಯಿಸಬೇಕಾದ ವ್ಯಕ್ತಿಗೆ ಆಗುವ ಗೊಂದಲ.... ಹಣದ ಪ್ರಶ್ನೆಯ ಜೊತೆಗೆ... ಅರ್ಥ ಮಾಡಿಕೊಳ್ಳಲು ಅಷ್ಟು ಸುಲಭವಲ್ಲ, ಅನುಭವಿಸಿ ಅರ್ಥಮಾಡಿಕೊಳ್ಳಬೇಕು. ವಾಸ್ತು ಶಾಸ್ತ್ರದ ಜೊತೆ ನನ್ನ ಮೊದಲ ಮುಖಾಮುಖಿ 1975ರ ಸುಮಾರ...