ಎಲ್ಲೆಲ್ಲಿ ನೋಡಿದರೂ ಅಲ್ಲಿ ಶ್ರೀರಾಮಚಂದ್ರ

22.01.2024 ಈ ದಿನ ಮುಂದಿನ ಪೀಳಿಗೆಯವರಿಗೆ ಚರಿತ್ರೆಯಲ್ಲಿ ಇರಬಹುದಾದಂತ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ. ನಾವು ಈ ದಿನದ ಕಾರ್ಯಕ್ರಮದಲ್ಲಿ ಪರೋಕ್ಷವಾಗಿಯಾದರೂ ಭಾಗವಹಿಸಿದ್ದೇವೆಂಬ ಹೆಮ್ಮೆ ಪಡ ಬಹುದಾದಂತಹ ಜನ. ಎಲ್ಲೆಲ್ಲೂ ಜೈ ಶ್ರೀ ರಾಮ್ ಎಂಬ ಘೋಷಣೆ... ಭಜನೆಗಳು ಅಲ್ಲಲ್ಲಿ... ಹೆಣ್ಣು ಗಂಡು ಎಂಬ ಭೇದವಿಲ್ಲದೆ...ಖುಷಿಯಿಂದ ಕುಣಿಯುತ್ತಿರುವ...ಜನತೆ.... ಕಾರ್ಯಕರ್ತರ ಓಡಾಟ, ಮಾಧ್ಯಮದವರ ಉತ್ಸಾಹ.. ಎಲ್ಲದರ ನೋಟ ದೂರದರ್ಶನದಲ್ಲಿ ನೋಡಿ ಪುಳಕಗೊಂಡ ನಾವು.... ಇನ್ನು ಅಲ್ಲಿಗೇ ಹೋಗಿ ಸಂಭ್ರಮದಲ್ಲಿ ಪಾಲ್ಗೊಂಡವರ ಮನಸ್ಸಿನ ಸ್ಥಿತಿ ಹೇಗಿರಬಹುದು ಎಂದು ಊಹಿಸಿದರೆ ಮೈ ನವಿರೇಳುತ್ತದೆ. 90 ವರ್ಷ ಮೀರಿದ ಕೆ.ಪರಾಶನ್ ಅವರನ್ನು ಕಂಡಾಗ ಭಕ್ತಿ ಭಾವ ಉಕ್ಕಿ ಬಂತು... ನ್ಯಾಯಾಲಯದಲ್ಲಿ ರಾಮನ ಪರವಾಗಿ ವಾದ ಮಂಡಿಸುವಾಗ ಬರಿಗಾಲಲ್ಲಿ ನಿಂತು ವಾದ ಮಾಡಿದ್ದನ್ನು ಕೇಳಿ ತಿಳಿದಿದ್ದೆ...ಎಂಥಾ ನಿಷ್ಟೆ.. ಮತ್ತೊಂದು ಮನಕರಗುವ ದೃಶ್ಯ... ರಾಮಮಂದಿರಕ್ಕಾಗಿ ಗುಂಡೇಟು ತಿಂದು ಬಲಿದಾನ ಮಾಡಿದ ರಾಮ್ ಕೊಠಾರಿ ಹಾಗೂ ಶರತ್ ಕೊಠಾರಿ ( ಇಬ್ಬರು 18... 20 ವರ್ಷದ ಅಣ್ಣ ತಮ್ಮಂದಿರು) ಇವರ ಅಕ್ಕ ಮಾತನಾಡಿದ ಪರಿ. ಇನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಶ್ರದ್ಧೆ ಭಕ್ತಿ ಎಷ್ಟು ಹೇಳಿದರೂ ಕಮ್ಮಿಯೇ ...ತುಂಬಾ ಮೆಚ್ಚುಗೆ ಆಯ್ತು... ಎಲ್ಲವನ್ನೂ ಹೇಳಲು ನೆನಪಿಗೆ ಬಾರದು... ಸ್ಥಳವೂ ಸಾಲದು... ಆದರೆ ಸುಮಾರು ಐದು ಗಂಟೆಗಳ ಕಾಲ ...