Posts

Showing posts from November, 2023

ಉಪವಾಸ. .. NETಉಪವಾಸ

Image
  ಹೋದ ವರ್ಷ ಉತ್ಥಾನ ದ್ವಾದಶಿ ದಿನ ನಮ್ಮ ಕುಟುಂಬದ ಮುವ್ವತ್ತಕ್ಕೂ ಮೀರಿ ಜನ ಒಂದು ಪ್ರವಾಸದಲ್ಲಿದ್ದೆವು.. ಅದರ ಹೆಸರು ಉತ್ವಾನ್ ದ್ವಾದಶಿ ಟ್ರಿಪ್... ವರ್ಷ ಉರುಳಿದೆ.... ಈ ವರ್ಷ ಈ ಏಕಾದಶಿ ಸ್ವಲ್ಪ ವಿಶೇಷ.... ನಮ್ಮ ವೈಶಾಖ್ ಹಾಗೂ ಸೌಮ್ಯ ದಂಪತಿಗೆ ಮಗ ಹುಟ್ಟಿದ ಸಂಭ್ರಮ.... ಆ ಸಂಭ್ರಮದಲ್ಲಿ ಸೌಮ್ಯನಿಗೆ ಊಟ ಇಲ್ಲ... ಅದು ಸಹಜ... ಸಂತೋಷದಲ್ಲಿ ವೈಶಿಯೂ ಊಟ ಮಾಡಿರಲಿಕ್ಕಿಲ್ಲ.... ಅವನಿಗೂ ಉಪವಾಸ.... ನನಗೂ ನನ್ನ ಹೆಂಡತಿಗೂ ಈ ಏಕಾದಶಿ / ದ್ವಾದಶಿಯೆಲ್ಲಾ ಹೊರಗುಳಿದ ಸಂದರ್ಭ.... ಉಪವಾಸವೂ ಸಹ... ಆದರೆ ಇದ್ದಿದ್ದು ಆಸ್ಪತ್ರೆಯಲ್ಲಿ.... ವಿಜಯಳ ಆರೋಗ್ಯ ಸ್ವಲ್ಪ ತಾಳ ತಪ್ಪಿದ್ದರಿಂದ... ಈ ಲೇಖನ ರೂಪುಗೊಂಡದ್ದು.. ಕರಡನ್ನು ಬರೆದದ್ದು ಆಸ್ಪತ್ರೆಯಲ್ಲೇ....  ಮನೆಗೆ ಹೋಗಲು ಅನುಮತಿಗಾಗಿ ಡಾಕ್ಟರನ್ನು ಕಾಯುತ್ತಾ..... ಕೃಷ್ಣ ಹುಟ್ಟಿದಾಗ ತುಂಬಾ ಜನಕ್ಕೆ ಸಂತೋಷ... ಸಂತೋಷದ ಭರದಲ್ಲಿ ಹಸಿವೆ ಕಾಡಿಲ್ಲ... ಹಾಗಾಗಿ ಉಪವಾಸ... ಇನ್ನು ಕೆಲವರು ಸಿಹಿ ತಿಂದು ಸಂಭ್ರಮಿಸಿದರು... ಅವರವರ ಭಾವಕ್ಕೆ ತಕ್ಕಂತೆ. ಉಪವಾಸಕ್ಕೂ ಏಕಾದಶಿಗೂ ವಿಶೇಷ ನಂಟು... ಚಾಂದ್ರಮಾನ ಪಂಚಾಂಗದ ಪ್ರಕಾರ ಏಕಾದಶಿ 11ನೇ ದಿನ.. ಅಂದು .....ವೈಜ್ಞಾನಿಕವಾಗಿ ಸಹ ತಿಳಿದಂತೆ .....ವಾತಾವರಣದಲ್ಲಿ ವಾಯು ಭಾರ(atmospheric prssure) ಕಡಿಮೆ ಇರುತ್ತದೆ... ಹಾಗಾಗಿ ಉಪವಾಸ ಮಾಡಿದಾಗ ಹಾಗೂ ಬರಬಹುದಾದ ನಿಃಶಕ್ತಿ ಕಡಿಮೆ ಸ್ತರದಲ್ಲಿ ಇರುತ್ತದೆ.  ...

ಅಳಿಯತನ, ಮಾವನ ಮನೆ, ದೀಪಾವಳಿ

Image
ಈ ವರ್ಷ ದೀಪಾವಳಿ ಹಬ್ಬದ ಆಚರಣೆ ನಮಗಿಲ್ಲ... ಅಣ್ಣ ಮತ್ತು ಅತ್ತಿಗೆ ತೀರಿಕೊಂಡ ಕಾರಣದಿಂದ. ಆದರೂ ಈ ದೀಪಾವಳಿ ನಮಗೆ ವಿಶೇಷವಾಗಿತ್ತು. ಮೊದಲನೆಯ ಕಾರಣ ನನ್ನ ಮಾವ ಶ್ರೀ ಎಚ್ ಪಿ ಕೃಷ್ಣಮೂರ್ತಿಯವರು, ಹಬ್ಬಕ್ಕೆ ಉಡುಗೊರೆಯಾಗಿ ಹಣವನ್ನು ನನ್ನ ಕೈಗೆ ಕೊಟ್ಟಿದ್ದು... ಮುಂಚಿನ ದಿನಗಳಲ್ಲಿ ಅವರ ಮಗಳ ಕೈಗೆ ಕೊಟ್ಟು ನನಗೆ ತಲುಪಿಸುತ್ತಿದ್ದರು. 96 ವರ್ಷದ ಹಿರಿಯರು ಬೆಳಿಗ್ಗೆಯೇ ಆಟೋ ಮಾಡಿಕೊಂಡು ಬಂದು... ಎಲ್ಲರಿಗೂ ಕೊಟ್ಟಾಯ್ತು ನಿನಗೆ ಮಾತ್ರ ಇನ್ನು ಕೊಟ್ಟಿಲ್ಲ... ಹಬ್ಬಕ್ಕೆ ಮುಂಚೆ ಕೊಡಬೇಡವೇ ಎಂದು ಹೇಳಿ...76 ವರ್ಷದ ನನಗೆ ಕೊಟ್ಟು ಹೋದದ್ದು ಅವರ ಪ್ರೀತಿಯ ದ್ಯೋತಕ. ಕೊಡುವ  ಹಿಂದಿನ ಭಾವ ಬಹು ಮುಖ್ಯ. ನಾನೂ ಒಬ್ಬ ಮಾವನಾಗಿ ಹೀಗೆ ಮಾಡಿಲ್ಲ. ಎರಡನೆಯದು, ಸೋಮವಾರ ಸಂಜೆ ನನ್ನ ಭಾವ ಮೈದುನ, ಕುಮಾರನ ( ಎಚ್ ಕೆ ಹರೀಶ್)  ಮನೆಯಲ್ಲಿ ಕಳೆದ ಕೆಲ ಗಂಟೆಗಳು. ನಮ್ಮ ಮಾವನವರ  ಜೊತೆಯಲ್ಲಿ..  ಅವರ ನಾಲ್ಕನೇ ತಲೆಮಾರಿನ...  ಅಭಿನವ ಶಂಕರ...(   ಸ್ನೇಹ ಳ ಮಗ)  ಪಟಾಕಿ ಹಚ್ಚಿದ್ದನ್ನು ನೋಡುವ ಸಂಭ್ರಮ.... ಅಭಿನವ ಶಂಕರನ ಮುದ್ದು ಮುದ್ದು ..ಜೊತೆಗೆ ತರಲೆಯ ಆಟ ಕಣ್ಣಿಗೊಂದು ಹಬ್ಬ....  ಇದಕ್ಕೆ ಕಾರಣ ಲಕ್ಷ್ಮಿ... ಆಗ್ರಹಪೂರ್ವಕವಾಗಿ ನಮ್ಮನ್ನು ಹಬ್ಬಕ್ಕೆ ಕರೆದು... ಸಂಭ್ರಮಿಸುವಂತೆ ಮಾಡಿ... ಪ್ರೀತಿಯಿಂದ ಉಡುಗೊರೆ ಕೊಟ್ಟು ಕಳಿಸಿದ್ದು. ಯಾವ ಪ್ರೇರಣೆಯೋ ಕಾಣೆ... ನನ್ನ ಮದುವೆಯಾದ 44...

ಕಾರ್ತಿಕ ಮಾಸ - ಕೈ ತುತ್ತು - ವನಭೋಜನ

Image
  ಕೆಲ ದಿನಗಳ ಹಿಂದೆ ಒಂದು ಕಾರ್ಯಕ್ರಮ... ಸಂಜೆ ಸ್ನೇಹಿತನ ಮನೆಯಲ್ಲಿ ಎಲ್ಲ ಸೇರಿದ್ದೆವು ಹರಟೆ ,ಆಟ, ನಂತರ ಇದ್ದದ್ದೇ ಊಟ...   ಊಟ ಮನೆಯಲ್ಲಿನ ಸಣ್ಣ ಕೈದೋಟದಲ್ಲಿ ಮಾಡಲು ತಯಾರಾದೆವು... ಇದ್ದ ಒಂದು ಮರ ಎನ್ನಬಹುದಾದ ದೊಡ್ಡಗಿಡ ಹಾಗೂ ಹೂ ಗಿಡಗಳು ಇವುಗಳ ಮಧ್ಯೆ ತಿಳಿ ಬೆಳಕಿನಲ್ಲಿ, ಕೈಯಲ್ಲಿ ತಟ್ಟೆ ಹಿಡಿದು ಹರಟೆ ಹೊಡೆಯುತ್ತಾ ಊಟ ಮಾಡಿದ್ದು ....ಒಂದು ಕೈ ಹೆಚ್ಚೇ..ತಿಂದದ್ದು. . ಮಾತಿನ ಮಧ್ಯೆ ಬೆಳದಿಂಗಳು ಇದ್ದರೆ ಚೆನ್ನಾಗಿರುತ್ತೆ ಅಂತ ಒಂದು ಚಿಂತನೆ... ಬೆಂಗಳೂರು ಬೆಳಕಲ್ಲಿ ಬೆಳದಿಂಗಳ ಸವಿ ಕಷ್ಟ .....ಎಲ್ಲ ದೀಪಗಳು ಆರಿ ಬೆಳದಿಂಗಳಿದ್ದರೆ ಚನ್ನಲ್ಲವೇ.. ಬೆಳದಿಂಗಳ ಊಟ ನೆನಪುಗಳನ್ನ ಮುಂದೆ ತಂತು. ದೊಡ್ಡಜಾಲದಲ್ಲಿ ನಾನಿದ್ದ ಸಮಯದಲ್ಲಿ ವಿದ್ಯುತ್  ಇಲ್ಲದ ಕಾಲ... ಬೆಳಕಿಗೆ ಒಂದು ಸೀಮೆಎಣ್ಣೆ ದೀಪ... ಸಂಜೆ ನನ್ನಪ್ಪ ದೀಪದ ಗಾಜನ್ನು ಬೂದಿ ಹಾಕಿ ಚೆನ್ನಾಗಿ ಒರೆಸಿ ಪಳ ಪಳ ಮಾಡಿ ದೀಪಕ್ಕೆ ಇಡುತ್ತಿದ್ದದ್ದು.... ಅದೇ ಬೆಳಕಿಗೆ ನಮ್ಮ ಜೀವನ ಹೊಂದಿಕೊಂಡಿತ್ತು...  ಹಾಗಾಗಿ ಬೆಳದಿಂಗಳು ಇರುವ ದಿನಗಳು ನಮಗೆ ಹೆಚ್ಚಿನ ಉತ್ಸಾಹ ಕೊಡುತ್ತಿದ್ದವು... ಆಗೆಲ್ಲ ತುಳಸಿ ಕಟ್ಟೆಯ ಹತ್ತಿರ ಕೈತುತ್ತು ಊಟ ನಮಗೆಲ್ಲಾ ಖುಷಿಯ ಸಂಗತಿ..... ಮೊದಲ ಕಾರಣ ಉಂಡತಟ್ಟೆಯನ್ನು ತೊಳೆಯುವ ಕೆಲಸದಿಂದ ತಪ್ಪಿಸಿಕೊಳ್ಳಬಹುದಲ್ಲ..... ಜೊತೆಗೆ ಅಜ್ಜಿ/ ಅಮ್ಮ ಏನೆಲ್ಲ ಸೇರಿಸಿ ಹದ ಮಾಡಿ ಕಲಸಿ ಹಾಕುತ್ತಿದ್ದ ಕೈತುತ್ತಿನ ರು...

ಪ್ರೇಮ..ಜ್ವರ..ಹಾಗೂ ನವಂಬರ್

Image
ಪ್ರೇಮದಲ್ಲಿ ಬಿದ್ದವರಿಗೆ, ಜ್ವರ ಬೇಗ ಕಾಣಿಸಿಕೊಳ್ಳುತ್ತಂತೆ.... ಇದು ಒಂದು ಅಭಿಪ್ರಾಯ.... ಇಲ್ಲೊಂದು ವಿಶಿಷ್ಟ ಜ್ವರ....ಸಾಮಾನ್ಯವಾಗಿ ಈ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವುದು ಅಕ್ಟೋಬರ್ ಕೊನೆಯ ವಾರದಲ್ಲಿ.... ನವಂಬರ್ ಒಂದಕ್ಕೆ ತುತ್ತ ತುದಿಯನ್ನು ಮುಟ್ಟಿ... ನಂತರ ನಿಧಾನವಾಗಿ.... ಕ್ಷೀಣಿಸಿ ನವೆಂಬರ್ ಕೊನೆಗೆ ಇಳಿದು ಹೋಗುತ್ತೆ.  ಕರೋನಾದಂತೆ ಭಯಂಕರವಲ್ಲದಿದ್ದರೂ...  ಅದರಷ್ಟೇ ಬೇಗ ಹರಡುವ ಖ್ಯಾತಿಯನ್ನು ಹೊಂದಿದೆ. ಈ ಪ್ರೇಮ ಜ್ವರ ಕಾಣಿಸಿಕೊಂಡಿದ್ದು 1956 ರಲ್ಲಿ.. ಹಾಗೂ ಇದು ಪ್ರತಿ ವರ್ಷವೂ ತಪ್ಪದೇ , ಇದೇ ಸಮಯದಲ್ಲೇ ಕಾಣಿಸಿಕೊಳ್ಳುತ್ತಿದೆ.... ಇದುವೇ ಈ ಪ್ರೇಮ ಜ್ವರದ ವಿಶೇಷತೆ. ನಿಮಗೆ ಅರ್ಥವಾಗಿದೆ ಅನ್ಕೋತೀನಿ..... ಹೌದೂರಿ.... ಅದೇ ...ಅದೇ.... ಕನ್ನಡದ ಮೇಲಿನ ಪ್ರೀತಿಯ, ಅಭಿಮಾನದ "ಪ್ರೇಮ ಜ್ವರ".  ಇದು ಜಗದಲ್ಲೆಡೆ ನೆಲೆಸಿರುವ  ಕನ್ನಡಿಗರಿಗೆ/ ಕನ್ನಡದ ಅಭಿಮಾನಿಗಳಿಗೆ ಮಾತ್ರ ಬರುವ ಜ್ವರ.....ಅದೇ ಕನ್ನಡ ರಾಜ್ಯೋತ್ಸವದ ಜ್ವರ. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದು ಬರೆದ ಹುಯಿಲಗೋಳ ನಾರಾಯಣರಾಯರ ಮನದಾಳದ ಆಸೆಯಂತೆ 1956 ರಲ್ಲಿ ಕನ್ನಡ ಮೂಲ ಭಾಷೆಯಾದ ಪ್ರದೇಶಗಳು ಒಂದುಗೂಡಿ ಕನ್ನಡ ನಾಡಿನ ಉದಯವಾಯಿತು..... ಹೆಸರಾಯಿತು ಕರ್ನಾಟಕ... ಉಸಿರಾಗಲಿ ಕನ್ನಡ ಎನ್ನುವ ಆಸೆ ಮಾತ್ರ ಇನ್ನೂ ಪೂರ್ಣವಾಗಿಲ್ಲ...ಸರ್ಕಾರದ ದೊಡ್ಡ ಅಧಿಕಾರಿಗಳೂ ಸಹ ಈ ವಿಚಾರದಲ್ಲಿ ನಿಷ್ಕ್ರಿಯರು...  ...